For Quick Alerts
ALLOW NOTIFICATIONS  
For Daily Alerts

ತಣ್ಣಗಿರುವ ಹಾಲಿಗಿಂತ ಬಿಸಿಬಿಸಿ ಹಾಲೇ ಆರೋಗ್ಯಕಾರಿ ಕಣ್ರೀ

By Super
|

ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಹಾಲಿನ ಪಾತ್ರ ಮಹತ್ವದ್ದಾಗಿದೆ. ಮಕ್ಕಳಿಗಂತೂ ಹಾಲು ಅತ್ಯಂತ ಅಗತ್ಯವಾದ ಆಹಾರವಾಗಿದೆ. ವಿಶೇಷವಾಗಿ ಮೂಳೆಗಳ ಬೆಳವಣಿಗೆ ಮತ್ತು ದೃಢತೆಗಾಗಿ ಹಾಲು ಅಗತ್ಯವಾಗಿದೆ. ಆದರೆ ಹಸಿ ಹಾಲನ್ನು ಕುಡಿಯುವುದರಿಂದ ಕೆಲವು ಬ್ಯಾಕ್ಟೀರಿಯಗಳೂ ಇದರ ಜೊತೆ ನಮ್ಮ ದೇಹಕ್ಕೆ ಸೇರಬಹುದು ಹಾಗಾಗಿ ಬಿಸಿಬಿಸಿಯಾದ ಹಾಲನ್ನು ಕುಡಿಯುವುದು ಉತ್ತಮ.

ಹಾಲಿನಲ್ಲಿರುವ ವಿವಿಧ ವಿಟಮಿನ್‌ಗಳು ಕೆನೆ, ಕ್ಯಾಲ್ಸಿಯಂ, ಪ್ರೋಟೀನು, ನಿಯಾಸಿನ್, ಗಂಧಕ ಮತ್ತು ಪೊಟ್ಯಾಷಿಯಂ ಅಂಶಗಳು ಹಾಲು ಬಿಸಿಯಾಗಿದ್ದಾಗ ಸೇವಿಸಿದಾಗ ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ಲಭ್ಯವಾಗುತ್ತದೆ. ಒಂದು ಸಂಶೋಧನೆಯ ಪ್ರಕಾರ ಪ್ರತಿದಿನ ಒಂದು ಲೋಟ ಬಿಸಿಹಾಲನ್ನು ಕುಡಿಯುವುದರಿಂದ ಆರೋಗ್ಯ ವೃದ್ಧಿಗೊಂಡಿರುವುದು ಸಾಬೀತಾಗಿದೆ.

ಆದರೆ ಕೆಲವರಿಗೆ ಹಾಲಿನಲ್ಲಿರುವ ಲ್ಯಾಕ್ಟೋಸ್ ಎಂಬ ಸಕ್ಕರೆ ಅಲರ್ಜಿಯಾಗಿರುತ್ತದೆ. ಇವರು ತಮ್ಮ ವೈದ್ಯರ ಸಲಹೆಯ ಮೇರೆಗೆ ಹಾಲಿನ ಬದಲು ಇತರ ಪೇಯಗಳನ್ನು ಕುಡಿಯುವುದು ಉತ್ತಮ. ಸೋಯಾ ಅವರೆಯ ಹಾಲು ಸಹಾ ಹಾಲಿನ ರುಚಿಯನ್ನೇ ನೀಡುವುದರಿಂದ ವೈದ್ಯರ ಸಲಹೆ ಮೇರೆಗೆ ಸೇವಿಸಬಹುದು. ಹಾಲು-ಜೇನಿನ ಜೋಡಿ ಮಾಡಲಿದೆ ಕಮಾಲಿನ ಮೋಡಿ

ಹಾಲನ್ನು ಹಾಗೇ ಸೇವಿಸುವುದಕ್ಕಿಂತ ಕೊಂಚ ಜೇನುತುಪ್ಪವನ್ನು ಸೇರಿಸಿ ಕುಡಿಯುವುದರಿಂದ ಇದರ ಒಳ್ಳೆಯ ಗುಣಗಳು ಹೆಚ್ಚುತ್ತವೆ. ಪ್ರತಿದಿನ ಸೇವಿಸುವ ಟೀ ಕಾಫಿ ಮೊದಲಾದ ಪೇಯಗಳಲ್ಲಿ ಹಾಲನ್ನು ಹೆಚ್ಚಿಸುವ ಮೂಲಕ ಹಾಗೂ ಆರೋಗ್ಯಕ್ಕೆ ಮಾರಕವಾದ ಮದ್ಯಪಾನವನ್ನು ಬಿಟ್ಟು ಹಾಲನ್ನು ಕುಡಿಯುವುದು ಉತ್ತಮ ಆಯ್ಕೆಯಾಗಿದೆ. ತಣ್ಣಗಿರುವ ಹಾಲಿಗಿಂತ ಬಿಸಿಹಾಲೇ ಮೇಲು ಎಂಬುದನ್ನು ವಿವರಿಸುವ ಕೆಲವು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

ಕ್ಯಾಲ್ಸಿಯಂ ಹೇರಳವಾಗಿದೆ

ಕ್ಯಾಲ್ಸಿಯಂ ಹೇರಳವಾಗಿದೆ

ಹಾಲಿನಲ್ಲಿರುವ ಕ್ಯಾಲ್ಸಿಯಂ ಮೂಳೆ ಮತ್ತು ಹಲ್ಲುಗಳ ಮೂಲ ಖನಿಜವಾಗಿದೆ. ಹಲ್ಲುಗಳ ಮತ್ತು ಮೂಳೆಗಳ ಬೆಳವಣಿಗೆ ಮತ್ತು ದೃಢತೆಗಾಗಿ ಪ್ರತಿದಿನ ಒಂದು ಲೋಟ ಬಿಸಿಹಾಲನ್ನು ಕುಡಿಯುವುದು ಉತ್ತಮ. ಈ ಹಾಲಿಗೆ ಕೊಂಚ ಜೇನನ್ನು ಸೇರಿಸಿದರೆ ಇನ್ನೂ ಉತ್ತಮ.

ವಿವಿಧ ಪ್ರೋಟೀನುಗಳ ಆಗರವಾಗಿದೆ

ವಿವಿಧ ಪ್ರೋಟೀನುಗಳ ಆಗರವಾಗಿದೆ

ಹಾಲಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿವಿಧ ಪ್ರೋಟೀನುಗಳಿವೆ. ಇದೇ ಕಾರಣದಿಂದ ಹಾಲು ನಿಮ್ಮ ದೈನಂದಿನ ಆಹಾರದ ಒಂದು ಭಾಗವಾಗುವುದು ಆರೋಗ್ಯವನ್ನು ವೃದ್ಧಿಸುತ್ತದೆ. ಅದರಲ್ಲೂ ದಿನದ ಪ್ರಥಮ ಆಹಾರವಾಗಿ ಹಾಲನ್ನು ಸೇವಿಸುವುದು ಅತ್ಯುತ್ತಮವಾಗಿದೆ. ಇದರಿಂದ ದೊರಕುವ ದೈಹಿಕ ಸಾಮರ್ಥ್ಯ ಮತ್ತು ಕ್ಷಮತೆ ಇಡಿಯ ದಿನದ ಚಟುವಟಿಕೆಗಳನ್ನು ಸುಲಭವಾಗಿ ನಿರ್ವಹಿಸಲು ನೆರವಾಗುತ್ತದೆ. ಸ್ನಾಯುಗಳ ಬೆಳವಣಿಗೆಗೆ ಹಾಲು ಅತ್ಯಂತ ಪೂರಕವಾದ ಆಹಾರವಾಗಿದೆ. ದಿನಂಪ್ರತಿ ವ್ಯಾಯಾಮ ಮಾಡುವವರಿಗೂ ಬಿಸಿಹಾಲು ಹೇಳಿ ಮಾಡಿಸಿದ ಆಹಾರವಾಗಿದೆ.

ಮಲಬದ್ಧತೆಯನ್ನು ತಡೆಯುತ್ತದೆ

ಮಲಬದ್ಧತೆಯನ್ನು ತಡೆಯುತ್ತದೆ

ಆಹಾರವನ್ನು ಪಚನಗೊಳಿಸಲು ಮತ್ತು ಸುಲಭವಿಸರ್ಜನೆಗೆ ಹಾಲು ಸಹಕಾರಿಯಾಗಿದೆ. ಮಲಬದ್ಧತೆಯ ತೊಂದರೆ ಇರುವವರು ಹಾಲನ್ನು ತಮ್ಮ ದಿನದ ಕಟ್ಟಕಡೆಯ ಆಹಾರವಾಗಿ ಸೇವಿಸುವುದರಿಂದ ಬೆಳಗ್ಗಿನ ವಿಧಿಗಳು ಸುಲಭವಾಗಿ ನೆರವೇರುತ್ತವೆ.

ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ

ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ

ದಿನವಿಡೀ ಸುಸ್ತು ಅನುಭವಿಸುವವರು ಹಾಲನ್ನು ಕುಡಿಯುವುದರಿಂದ ದೇಹದಲ್ಲಿ ಹೆಚ್ಚಿನ ತ್ರಾಣವನ್ನು ಪಡೆಯಬಹುದು. ಇದೇ ಕಾರಣದಿಂದ ಮಕ್ಕಳಿಗೆ ಬಿಸಿಹಾಲು ಅತಿ ಅಗತ್ಯವಾದ ಆಹಾರವಾಗಿದೆ.

ದೇಹದಲ್ಲಿ ನೀರಿನ ಪ್ರಮಾಣವನ್ನು ಹೆಚ್ಚಿಸುತ್ತದೆ

ದೇಹದಲ್ಲಿ ನೀರಿನ ಪ್ರಮಾಣವನ್ನು ಹೆಚ್ಚಿಸುತ್ತದೆ

ವ್ಯಾಯಾಮ ಹಾಗೂ ಸೆಖೆಯಿಂದಾಗಿ ದೇಹ ಕಳೆದುಕೊಳ್ಳುವ ನೀರನ್ನು ಮರುತುಂಬಿಸಲು ಹಾಲು ಉತ್ತಮ ದ್ರವವಾಗಿದೆ. ನೀರು ಕುಡಿಯುವುದರಿಂದಲೂ ಈ ಕೊರತೆಯನ್ನು ತುಂಬಬಹುದು ಆದರೆ ಕಳೆದುಕೊಂಡ ಶಕ್ತಿಯನ್ನು ನೀರು ನೀಡುವುದಿಲ್ಲ, ಆದರೆ ಹಾಲು ಕುಡಿಯುವುದರಿಂದ ಕಳೆದುಕೊಂಡಿದ್ದ ಶಕ್ತಿ ಮತ್ತು ತ್ರಾಣ ಮತ್ತೆ ಹಿಂದಿರುಗುತ್ತದೆ.

ಗಂಟಲ ನೋವನ್ನು ಕಡಿಮೆಗೊಳಿಸುತ್ತದೆ

ಗಂಟಲ ನೋವನ್ನು ಕಡಿಮೆಗೊಳಿಸುತ್ತದೆ

ಬಿಸಿಹಾಲಿನಲ್ಲಿ ಕೊಂಚ ಕಾಳುಮೆಣಸಿನ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ಗಂಟಲ ಬೇನೆ, ಕಫ, ಮೂಗು ಕಟ್ಟಿರುವುದು ಮೊದಲಾದ ತೊಂದರೆಗಳು ನಿವಾರಣೆಯಾಗುತ್ತದೆ.

ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ

ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ

ನಿತ್ಯದ ಕೆಲಸದಿಂದ ಹಿಂದಿರುಗಿದ ಬಳಿಕ ಶರೀರ ಮತ್ತು ಮನಸ್ಸು ಎರಡೂ ಆರಾಮ ಬಯಸುತ್ತವೆ. ಕೆಲಸದ ಒತ್ತಡದಿಂದ ಮನ ಒತ್ತಡವನ್ನು ಅನುಭವಿಸುತ್ತದೆ. ಈ ಒತ್ತಡದಿಂದ ನಿರಾಳರಾಗಲು ಒಂದು ಲೋಟ ಬಿಸಿ ಹಾಲನ್ನು ಕುಡಿದರೆ ಹೊಸ ಚೈತನ್ಯ ಮೂಡುತ್ತದೆ.

ನಿದ್ರಾಹೀನತೆಯನ್ನು ಕಡಿಮೆಗೊಳಿಸುತ್ತದೆ

ನಿದ್ರಾಹೀನತೆಯನ್ನು ಕಡಿಮೆಗೊಳಿಸುತ್ತದೆ

ನಿದ್ರೆಯ ಕೊರತೆಯ ತೊಂದರೆ ಇರುವವರು ಬಿಸಿಹಾಲನ್ನು ರಾತ್ರಿ ಮಲಗುವ ಮುನ್ನ ಸೇವಿಸಿದರೆ ಉತ್ತಮ ಪರಿಣಾಮ ಪಡೆಯಬಹುದು. ಒಂದು ಲೋಟ ಬಿಸಿ ಹಾಲನ್ನು ಕುಡಿದು ಕೊಂಚ ದೂರ ನಡೆದು ಬಳಿಕ ಪವಡಿಸಿದಾಗ ಶೀಘ್ರವೇ ನಿದ್ದೆ ಆವರಿಸಿ ಗಾಢನಿದ್ದೆಗೆ ಶರಣಾಗುವುದು ಸಂಶೋಧನೆಗಳಿಂದ ಕಂಡುಬಂದಿದೆ.

English summary

Benefits of drinking hot milk

Milk can refresh you and help you feel relaxed. Let us discuss about certain other benefits of hot milk in this post. Apart from energising you, a cup of hot milk can do a lot more to your health. Milk is packed with vitamins, Calcium, Protein, Niacin, Phosphorous and also Potassium.
X
Desktop Bottom Promotion