For Quick Alerts
ALLOW NOTIFICATIONS  
For Daily Alerts

ಆರೋಗ್ಯದ ವಿಷಯದಲ್ಲಿ ಗ್ರೀನ್ ಟೀ ಎಂದಿಗೂ ಎವರ್ ಗ್ರೀನ್!

|

ಕೆಲ ವರ್ಷಗಳ ಹಿಂದೆ ಟೀ ಎಂದರೆ ಅತಿ ನುಣ್ಣಗಿನ ಡಸ್ಟ್ ಟೀ ಒಂದೇ ಆಗಿತ್ತು. ದಿನಗಳೆದಂತೆ ವಿವಿಧ ಬಗೆಯ ಟೀಪುಡಿಗಳು ನಮ್ಮ ಅಡುಗೆಮನೆಯಲ್ಲಿ ಕೂಡ ಕಾರುಬಾರು ಶುರುಮಾಡಿಬಿಟ್ಟಿದೆ. ಇದನ್ನೆಲ್ಲಾ ಬಂಡವಾಳ ಮಾಡಿಕೊಂಡ ಕಂಪೆನಿಗಳು ಹಲವು ಬಗೆಯ ಟೀ ಪುಡಿಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿ ಜನರನ್ನು ಆಕರ್ಷಿಸುತ್ತಿವೆ..

ಹಾಗಾಗಿ ಬ್ಲ್ಯಾಕ್ ಟೀ ಮತ್ತು ಹಾಲಿನ ಚಹಾ ಕೂಡ ಇಂತಹ ಚಹಾಗಳಿಂದಾಗಿ ಮೂಲೆಗುಂಪಾಗಿದೆ ಎಂಬುದು ನಂಬುವ ವಿಷಯವಾಗಿದೆ. ಅದರಲ್ಲೂ ಚಹಾ ಆಯ್ಕೆಯಲ್ಲಿ ಪೈಪೋಟಿ ನೀಡುವ ಹಸಿರು ಚಹಾ (ಗ್ರೀನ್ ಟೀ) ಶೀಘ್ರ ಸಮಯದಲ್ಲಿಯೇ ಮನೆಮಾತಾಗಿದೆ. ಇದರ ಸ್ವಾದಭರಿತ ಸುವಾಸನೆ ಕೇವಲ ಕುಡಿಯಲು ಮಾತ್ರವಲ್ಲ, ಆರೋಗ್ಯದ ಸಮಸ್ಯೆಗೆ, ಸೌಂದರ್ಯ ವೃದ್ಧಿಗೆ, ಹೀಗೆ ನಾನಾ ಸಮಸ್ಯೆಗಳಿಗೆ ತ್ವರಿತವಾಗಿ ಕಾರ್ಯನಿರ್ವಹಿಸುವುದರಿಂದ ಹಸಿರು ಟೀ ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಬೆಳೆಯತೊಡಗಿದೆ. ಏಕಾಗಿ ಈ ಹಸಿರು ಟೀ (ಗ್ರೀನ್ ಟೀ) ಇಷ್ಟೊಂದು ಜನಪ್ರಿಯತೆ ಪಡೆದುಕೊಳ್ಳಲು ಸಾಧ್ಯವಾಯಿತು? ಇದಕ್ಕೆ ಉತ್ತರ ಹಸಿರು ಟೀಯಲ್ಲಿನ ಪೋಷಕಾಂಶಗಳಲ್ಲಿ ಅಡಗಿದೆ. ಗ್ರೀನ್ ಟೀ ಅಡ್ಡ ಪರಿಣಾಮ ಬೀರುವುದೇ?

Benefits Of A Green Tea that will surprise you

ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿ ಸ್ವತಂತ್ರವಾಗಿ ಓಡಾಡುತ್ತಾ ಕ್ಯಾನ್ಸರ್‌ಗೆ ಕಾರಣವಾಗಬಲ್ಲ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ನಿಯಂತ್ರಿಸಿ ಕ್ಯಾನ್ಸರ್‌ನಿಂದ ದೇಹವನ್ನು ಮುಕ್ತಿಗೊಳಿಸುತ್ತದೆ. ಜೊತೆಗೇ ಮುಪ್ಪಿಗೆ ಕಾರಣವಾಗುವ ಸಡಿಲವಾದ ಚರ್ಮ, ನೆರಿಗೆ ಮೊದಲಾದವುಗಳು ಮೂಡುವುದನ್ನು ನಿಧಾನಗೊಳಿಸಿ ಮುಪ್ಪನ್ನು ಮುಂದೂಡುತ್ತದೆ.

ಅಷ್ಟೇ ಏಕೆ ಹಸಿರು ಚಹಾ ಸೇವನೆಯು ಚಯಾಪಚಯ ಕ್ರಿಯೆಯನ್ನು ಚುರುಕಾಗಿಸುವುದರ ಜೊತೆಗೆ, ನಿಮ್ಮ ತೂಕ ಇಳಿಸುವಿಕೆಯಲ್ಲಿ ಕೂಡ ಪ್ರಧಾನ ಪಾನೀಯವಾಗಿ ಆಯ್ಕೆಮಾಡಿಕೊಂಡಿದ್ದರೆ. ಅಲ್ಲದೆ ಹೆಚ್ಚಿನ ಕೊಬ್ಬನ್ನು ಕರಗಿಸುವಲ್ಲಿ ಕೂಡ ಇದು ಪರಿಣಾಮಕಾರಿ ಕಾರ್ಯನಿರ್ವಹಿಸುತ್ತದೆ. ಬನ್ನಿ ಹಸಿರು ಚಹಾದ ಪ್ರಯೋಜನಗಳೇನು ಎಂಬುದನ್ನು ನೋಡೋಣ...

ದೇಹದ ಕೊಬ್ಬನ್ನು ಕರಗಿಸಲು
ದೇಹದ ಕೊಬ್ಬನ್ನು ಕರಗಿಸಲು ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿರಿಸುತ್ತಾ ದೇಹದಲ್ಲಿನ ಕಾರ್ಬೋಹೈಡ್ರೇಟ್ ಅನ್ನು ನಿಧಾನವಾಗಿ ಇದು ಹೊರಬಿಡುತ್ತದೆ. ನಿಮ್ಮ ದೇಹದ ಕೊಬ್ಬನ್ನು ಇದು ಸುಲಭವಾಗಿ ಕರಗಿಸುತ್ತದೆ. ಒಂದು ಕಪ್‌ನಷ್ಟು ನೀರಿಗೆ ಎರಡು ಹಸಿರು ಚಹಾ ಬ್ಯಾಗ್ ಸಾಕು. ಇದು ನಿಮ್ಮ ತೂಕವನ್ನು ಕರಗಿಸುತ್ತದೆ.

ಚರ್ಮದ ಆರ್ದ್ರತೆಯನ್ನು ಕಾಪಾಡುತ್ತದೆ
ವಯಸ್ಸಾಗುತ್ತಿದ್ದಂತೆಯೇ ನೆರೆತ ಕೂದಲು, ಮುಖದ ಚರ್ಮದಲ್ಲಿ ನೆರಿಗೆ, ಜೋಲುಬಿದ್ದ ಚರ್ಮ, ಕಪ್ಪು ಕಲೆಗಳು ಮೊದಲಾದ ತೊಂದರೆಗಳಿಗೆ ಹಸಿರು ಟೀ ಅದ್ಭುತವಾದ ಫಲವನ್ನು ನೀಡುತ್ತದೆ. ಚರ್ಮಕ್ಕೆ ಅಗತ್ಯವಾದ ಪೋಷಕಾಂಶಗಳ ಜೊತೆಗೇ ಆರ್ದ್ರತೆಯ ಅಗತ್ಯವನ್ನೂ ಪೂರೈಸುತ್ತದೆ. ದೇಹಕ್ಕೆ ಚೈತನ್ಯ ತುಂಬುತ್ತೆ ಗ್ರೀನ್ ಟೀ

ಹೊಟ್ಟೆ ನೋವಿನ ಶಮನಕ್ಕಾಗಿ
ಹೊಟ್ಟೆ ನೋವಿಗಾಗಿ ಹಾಲಿನ ಚಹಾದ ಬದಲಿಗೆ ಗ್ರೀನ್ ಟೀಯನ್ನು ಸೇವಿಸುವುದು ಹೊಟ್ಟೆ ನೋವನ್ನು ಹೋಗಲಾಡಿಸುತ್ತದೆ. ಅಷ್ಟೇ ಅಲ್ಲದೆ ಗ್ರೀನ್ ಟೀಯೊಂದಿಗೆ ಸಣ್ಣ ತುಂಡು ಶುಂಠಿಯನ್ನು ಬೆರೆಸಿ ಸೇವಿಸುವುದು ಆರೋಗ್ಯಕ್ಕೆ ಉತ್ತಮ.

ಹೊಟ್ಟೆಯಲ್ಲಿ ಕಂಡುಬರುವ ಬ್ಯಾಕ್ಟೀರಿಯವನ್ನು ನಿವಾರಿಸಲು
ಇತರ ಚಹಾಗಳಿಗಿಂತ ಹೆಚ್ಚಾಗಿ ಜೈವಿಕ ಆಹಾರಗಳು ಗ್ರೀನ್ ಟೀಯಲ್ಲಿ ಇರುವುದರಿಂದ ಗ್ರೀನ್ ಟೀ ಉದರದ ಯಾವುದೇ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಹೊಟ್ಟೆಯಲ್ಲಿ ಕಂಡುಬರುವ ಬ್ಯಾಕ್ಟಿರೀಯಾ ನಿಮ್ಮನ್ನು ಕಂಗೆಡಿಸಿದ್ದರೆ, ಬಿಸಿಯಾದ ಗ್ರೀನ್ ಟೀಯನ್ನು ಹೀರುವುದರಿಂದ ಕೆಟ್ಟ ಬ್ಯಾಕ್ಟಿರೀಯಾದಿಂದ ಮುಕ್ತಿಯನ್ನು ಹೊಂದಬಹುದು

ಹಸಿವನ್ನು ನಿಯಂತ್ರಿಸುತ್ತದೆ
ನಿಮ್ಮ ಹಸಿವಿನ ತುಡಿತವನ್ನು ಆದಷ್ಟು ಕಡಿಮೆ ಮಾಡಬೇಕೆಂಬ ಬಯಕೆ ನಿಮ್ಮದಾಗಿದ್ದಲ್ಲಿ ದಿನಪೂರ್ತಿ ಇದನ್ನು ಹೆಚ್ಚು ಸೇವಿಸಿ. ಊಟದ ಮುಂಚೆ ಒಂದು ಕಪ್‌ನಷ್ಟು ಹಸಿರು ಚಹಾವನ್ನು ನೀವು ಸೇವಿಸಿದಲ್ಲಿ ಹೆಚ್ಚು ಊಟ ಮಾಡಬೇಕೆನ್ನುವ ನಿಮ್ಮ ತುಡಿತ ನಿಯಂತ್ರಣದಲ್ಲಿರುತ್ತದೆ. ಊಟದ ನಂತರ ಕೂಡ ಒಂದು ಕಪ್‌ನಷ್ಟು ಹಸಿರು ಚಹಾವನ್ನು ಸೇವಿಸಿ ಇದು ನಿಮ್ಮ ಕ್ಯಾಲೋರಿಯನ್ನು ಕರಗಿಸುತ್ತದೆ.

ಚರ್ಮದ ಕಾಂತಿ ಹೆಚ್ಚಿಸಲು
ಮೊಸರಿನಲ್ಲಿರುವ ವಿಟಮಿನ್ ಡಿ, ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಚರ್ಮದ ಆರೈಕೆಗೂ ಉತ್ತಮವಾಗಿದೆ. ಜೊತೆಗೇ ಚರ್ಮಕ್ಕೆ ಅಗತ್ಯವಾದ ಆರ್ದ್ರತೆಯನ್ನೂ ನೀಡುತ್ತದೆ. ಕಾಂತಿರಹಿತವಾದ ಚರ್ಮ, ಬಿಸಿಲಿಗೆ ಒಣಗಿದ ಗುರುತುಗಳು ಮತ್ತು ಗಾಢಗೊಂಡಿರುವ ಚರ್ಮದ ಬಣ್ಣವನ್ನು ತಿಳಿಗೊಳಿಸಲು ನೆರವಾಗುತ್ತದೆ.
ಒಂದು ಚಿಕ್ಕಚಮಚ ಮೊಸರಿಗೆ ಒಂದು ಚಿಕ್ಕಚಮಚ ಲಿಂಬೆಹಣ್ಣಿನ ರಸ ಸೇರಿಸಿ. (ಈಗ ತಾನೇ ಹಿಂಡಿದ ಲಿಂಬೆರಸ). ಇದಕ್ಕೆ ಒಂದರಿಂದ ಎರಡು ಚಿಕ್ಕ ಚಮಚ ಹಸಿರು ಟೀ ಕುದಿಸಿ ಸೋಸಿದ ನೀರನ್ನು ಬೆರೆಸಿ. ಈ ಲೇಪನವನ್ನು ಮುಖದ ಮೇಲೆ ನಯವಾಗಿ ಒಮ್ಮುಖವಾಗಿ ಹಚ್ಚಿರಿ. ಸುಮಾರು ಹದಿನೈದು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಬೇಡಿ.

English summary

Benefits Of A Green Tea that will surprise you

Green tea diet has become very famous across the globe as it has many wonderful qualities which benefit our body. Green tea contains high amount of antioxidants which help our body in many ways. If you are trying to lose your weight, it is a great drink for you.
Story first published: Wednesday, August 5, 2015, 18:04 [IST]
X
Desktop Bottom Promotion