For Quick Alerts
ALLOW NOTIFICATIONS  
For Daily Alerts

'ಥೈರಾಯಿಡ್ ಗ್ರಂಥಿ ಸಮಸ್ಯೆ'-ಅಪಾಯ ಬೆನ್ನ ಹಿಂದೆಯೇ ಇದೆ!

By CM. Prasad
|

ನಮ್ಮ ಶರೀರದಲ್ಲಿರುವ ಎಲ್ಲಾ ಗ್ರಂಥಿಗಳಲ್ಲಿ ಥೈರಾಯಿಡ್ ಗ್ರಂಥಿಯು ಅತೀ ದೊಡ್ಡ ಗ್ರಂಥಿಯಾಗಿದೆ. ಸಾಮಾನ್ಯವಾಗಿ ಎಲ್ಲಾ ಜೀವಿಗಳಲ್ಲೂ ಕಂಡುಬಂದರೂ, ಮೀನಿನಲ್ಲಿ ಮಾತ್ರ ಚರ್ಮದ ಭಾಗದಲ್ಲಿ ಇರುತ್ತದೆ. ಥೈರಾಯಿಡ್ ಗ್ರಂಥಿಯು ನಮ್ಮ ಗಂಟಲಿನ ಮಧ್ಯ ಭಾಗದಲ್ಲಿ ಹಾಗೂ ಮುಂಭಾಗದಲ್ಲಿ ಇರುವುದರಿಂದ, ಇದು ನಮ್ಮ ಶರೀರಕ್ಕೆ ಅವಶ್ಯವಿರುವ ವಿವಿಧ ಹಾರ್ಮೋನ್ ಗಳನ್ನು ಉತ್ಪತ್ತಿಮಾಡಲು ನೆರವಾಗುತ್ತದೆ. ಅಷ್ಟೇ ಅಲ್ಲದೆ ಈ ಹಾರ್ಮೋನ್ ಗಳು ನಮ್ಮ ಶರೀರದ ಸಂಚಲನ ವ್ಯವಸ್ಥೆಯನ್ನು ಸುಗಮಗೊಳಿಸಲು ನೆರವಾಗುವುದರ ಜೊತೆಗೆ ದೇಹದ ಸೂಕ್ಷ್ಮತೆಯನ್ನು ಕಾಪಾಡುವಲ್ಲಿ ಮಹತ್ವದ ಪಾತ್ರವಹಿಸುತ್ತವೆ.

ಇತ್ತೀಚಿನ ದಿನಗಳಲ್ಲಿ ಥೈರಾಯಿಡ್ ಸಮಸ್ಯೆಯು ಮಹಿಳೆಯರನ್ನು ಹೆಚ್ಚು ಕಾಡುತ್ತಿದೆ. ಹಾರ್ಮೋನ್ ಉತ್ಪತ್ತಿಯು ಕಡಿಮೆಯಾದಲ್ಲಿ ಅದನ್ನು ಹೈಪೊಥೈರಾಯಿಡಿಸಮ್ ಅಥವಾ ಥೈರಾಯಿಡ್ ವಿಫಲವಾಗಿದೆಯೆಂದು ಹೇಳಲಾಗುತ್ತದೆ. ಅಲ್ಲದೆ ವಯಸ್ಸಾದಂತೆ ಥೈರಾಯಿಡ್ ಗ್ರಂಥಿಯ ಸಮಸ್ಯೆ ಬರುವುದು ಸರ್ವೇ ಸಾಮಾನ್ಯ. ಬದುಕಿನ ಒತ್ತಡಗಳೂ ಸಹ ಈ ವ್ಯಾಧಿಗೆ ಕಾರಣವಾಗಲಿದ್ದು, ಅಯೋಡಿನ್ ಕೊರತೆಯಿಂದಲೂ ಸಹ ಈ ಸಮಸ್ಯೆ ಉಂಟಾಗುತ್ತದೆ.

ಈ ವ್ಯಾಧಿಯಿಂದ ದೇಹದ ತೂಕವು ಹೆಚ್ಚಾಗುವುದಲ್ಲದೇ ಗರ್ಭಪಾತ, ಗರ್ಭಕೋಶ ತೊಂದರೆಗಳು, ಒಣ ಚರ್ಮ, ಒಣ ಕೇಶ, ಏಕಾಗ್ರತೆಯ ಕೊರತೆ, ಆಯಾಸ, ಮಾನಸಿಕ ದೌರ್ಬಲ್ಯ, ಕೆರಳಿಕೆ, ಬಂಜೆತನ ಹೀಗೆ ಹಲವಾರು ಶಾರೀರಿಕ ಸಮಸ್ಯೆಗಳು ಉಂಟಾಗುವುದರ ಜೊತೆಗೆ, ಹಾರ್ಮೋನ್ ಕೊರತೆಯಿಂದಾಗಿ ಕೂಡ ದೇಹದ ಸಾಮರ್ಥ್ಯ ಕೂಡ ಕುಂದುತ್ತದೆ. ಇದಕ್ಕೆ ಗರ್ಭಿಣಿಯರೂ ಹೊರತಾಗಿಲ್ಲ. ಈ ವ್ಯಾಧಿಯಿಂದ ಗರ್ಭಿಣಿಯರಿಗೆ ಗರ್ಭಪಾತವಾಗುವ ಸಾಧ್ಯತೆಯಿರುತ್ತದೆ. ಇದರಿಂದ ಬಂಜೆತನವೂ ಸಹ ಪ್ರಾಪ್ತಿಯಾಗಿ ಪುರುಷ ಹಾಗೂ ಮಹಿಳೆಯರನ್ನು ಕಾಡುತ್ತದೆ. ಆದ್ದರಿಂದ ಥೈರಾಯಿಡ್ ಸಂಬಂಧಿತ ಸಮಸ್ಯೆಗಳು ಉದ್ಭವಿಸಲು ಕಾರಣವಾದಂತಹ ಅಂಶಗಳನ್ನು ಒಮ್ಮೆ ಅರಿಯಬೇಕು. ನೀವು ದಿನನಿತ್ಯ ಉಪಯೋಗಿಸುವ ವಸ್ತುಗಳಿಂದ ಉಂಟಾಗಬಹುದಾದ ಥೈರಾಯಿಡ್ ತೊಂದರೆಗಳ ಬಗ್ಗೆ ಈ ಲೇಖನದಲ್ಲಿ ನಿಮಗಾಗಿ ನೀಡಲಾಗಿದೆ. ಸದರಿ ವಸ್ತುಗಳ ಮುನ್ನೋಟವನ್ನು ನಿಮಗಾಗಿ ನೀಡಿದ್ದು, ಒಮ್ಮೆ ಒದಿ...

ಪ್ಲಾಸ್ಟಿಕ್ ಬಳಕೆ

ಪ್ಲಾಸ್ಟಿಕ್ ಬಳಕೆ

ಪ್ಲಾಸ್ಟಿಕ್ ಬಟ್ಟಲು ಅಥವಾ ಪ್ಲಾಸ್ಟಿಕ್ ಪಾತ್ರೆಯಲ್ಲಿ ಸೇವಿಸುವುದು, ಕುಡಿಯುವುದು ಅಥವಾ ಬಿಸಿ ಆಹಾರ ಪದಾರ್ಥವನ್ನು ಸೇವಿಸುವುದರಿಂದ ಥೈರಾಯಿಡ್ ಗ್ರಂಥಿಯು ಬೇಗ ಹಾಳಾಗಲು ನೇರ ಕಾರಣವಾಗುತ್ತದೆ. ಪ್ಲಾಸ್ಟಿಕ್ ನಲ್ಲಿ ಕೆಲವು ವಿಷಕಾರಿ ಹಾಗೂ ಹಾನಿಕಾರಕ ಅಂಶಗಳಿದ್ದು, ಅದು ಸೇವಿಸುವ ಆಹಾರದ ಮೂಲಕ ಶರೀರವನ್ನು ಪ್ರವೇಶಿಸುತ್ತದೆ. ಇದರಿಂದ ಥೈರಾಯಿಡ್ ಗ್ರಂಥಿ ಮಾತ್ರವಲ್ಲದೇ ಇನ್ನೂ ಅನೇಕ ಆರೋಗ್ಯ ಸಮಸ್ಯೆಗಳಿಗೆ ಹಾಗೂ ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಗಳಿಗೆ ನೇರ ಕಾರಣವಾಗುತ್ತದೆ.

ಹಳಸಂದೆ ಜಾತಿಯ ಕಾಳುಗಳ ಬಳಕೆ

ಹಳಸಂದೆ ಜಾತಿಯ ಕಾಳುಗಳ ಬಳಕೆ

ಸೋಯ್ ಅಥವಾ ಹಳಸಂದೆ ಜಾತಿಯ ಕಾಳುಗಳನ್ನು ಆಹಾರದಲ್ಲಿ ಬಳಸುವುದರಿಂದ, ಅದರಲ್ಲಿರುವ ಫೈಟೋಎಸ್ಟ್ರೋಜೆನ್ಸ್ ಎಂಬ ಸತ್ವವು ಉತ್ಪತ್ತಿಯಾಗುವ ಥೈರಾಯಿಡ್ ಹಾರ್ಮೋನ್ ಅನ್ನು ಸೆಳೆದುಕೊಳ್ಳುತ್ತದೆ. ಇದರಿಂದ ಶರೀರಕ್ಕೆ ಅವಶ್ಯವಿರುವ ಹಾರ್ಮೋನ್ ಗಳ ಕೊರತೆಯುಂಟಾಗುತ್ತದೆ. ಇದನ್ನು ಹೆಚ್ಚು ಸೇವಿಸುವುದರಿಂದ ಥೈರಾಯಿಡ್ ಗ್ರಂಥಿಯ ಉತ್ಪಾದನಾ ಸಾಮರ್ಥವು ಕಡಿಮೆಯಾಗಿ, ಸಂಬಂಧಿತಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.

ಕ್ರಿಮಿನಾಶಕ ಸಿಂಪಡಿಸಿದ ಹಣ್ಣು ಮತ್ತು ತರಕಾರಿಗಳ ಬಳಕೆ

ಕ್ರಿಮಿನಾಶಕ ಸಿಂಪಡಿಸಿದ ಹಣ್ಣು ಮತ್ತು ತರಕಾರಿಗಳ ಬಳಕೆ

ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವ ಮುನ್ನ ಚೆನ್ನಾಗಿ ಸ್ವಚ್ಛಗೊಳಿಸಿ. ಇಲ್ಲವಾದಲ್ಲಿ ಅವುಗಳಿಗೆ ಸಿಂಪಡಿಸಿರುವ ಕೀಟನಾಶಕಗಳು ನೇರವಾಗಿ ಥೈರಾಯಿಡ್ ಗ್ರಂಥಿಯನ್ನು ನಾಶ ಮಾಡುವುದಲ್ಲದೇ ಮೆದುಳನ್ನು ಸಹ ನಾಶಮಾಡಲು ಕಾರಣವಾಗುತ್ತದೆ ಹಾಗೂ ಇನ್ನಿತರೆ ಆರೋಗ್ಯ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ.

ಫ್ಲೋರೈಡ್ ಮಿಶ್ರಿತ ನೀರಿನ ಸೇವನೆ

ಫ್ಲೋರೈಡ್ ಮಿಶ್ರಿತ ನೀರಿನ ಸೇವನೆ

ನೀರಿನಲ್ಲಿ ಸಹಜವಾಗಿ ಫ್ಲೋರೈಡ್ ರಾಸಾಯನಿಕವು ಇದ್ದೇ ಇರುತ್ತದೆ. ಆದರೆ ಹೆಚ್ಚು ಫ್ಲೋರೈಡ್ ಇದ್ದಲ್ಲಿ ನೇರವಾಗಿ ಥೈರಾಯಿಡ್ ಗ್ರಂಥಿಯನ್ನು ನಾಶಮಾಡಲು ಕಾರಣವಾಗುತ್ತದೆ. ಇದನ್ನು ಹೊರತುಪಡಿಸಿ ನೀರಿನಲ್ಲಿರುವ ಕ್ಲೋರಿನ್ ಅಂಶ ಮತ್ತು ಇತರೆ ವಸ್ತುಗಳು ಸಹ ಥೈರಾಯಿಡ್ ಗ್ರಂಥಿಯು ನಾಶವಾಗಲು ಕಾರಣವಾಗುತ್ತವೆ.

English summary

Be Aware: These Daily Products Harm The Thyroid Gland

Thyroid glands are present in the middle and front side of our throat. It produces thyroid hormones that are important for various body processes, and the main function of these hormones is to regulate the body metabolism. Nowadays, thyroid issues have become common and are mostly found among the women folks. When there is less secretion of the thyroid hormones from the thyroid glands, the condition is known as hypothyroidism or an underactive thyroid.
Story first published: Thursday, December 17, 2015, 19:01 [IST]
X
Desktop Bottom Promotion