For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಸರಳ ಆಯುರ್ವೇದ ಸೂತ್ರ ಅನುಸರಿಸಿ

By Super
|

ಮಳೆಗಾಲದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದ ಗುರುತರವಾದ ಜವಾಬ್ದಾರಿ ನಮ್ಮ ಮೇಲೆ ಇರುತ್ತದೆ. ಏಕೆಂದರೆ ಈ ಕಾಲದಲ್ಲಿ ಆಹಾರ ಪದಾರ್ಥಗಳಲ್ಲಿ ಕೆಲವೊಂದನ್ನು ನಾವು ಸೇವಿಸದೆ ಇದ್ದರೆ ಒಳ್ಳೆಯದು.

ಮಳೆಗಾಲ ಎಂದರೇನೆ ಕಾಯಿಲೆಗಳ ಕಾಲ, ಈ ಮಳೆಗಾಲದಲ್ಲಿ ನಾವು ಆರೋಗ್ಯವಾಗಿ ಇರಬೇಕು ಎಂದರೆ, ಕೆಲವೊಂದು ಆರೋಗ್ಯಕಾರಿ ಆಹಾರ ಪದಾರ್ಥಗಳನ್ನು ನಾವು ಸೇವಿಸಬೇಕಾಗುತ್ತದೆ. ಬನ್ನಿ ಆ ಆಹಾರ ಪದಾರ್ಥಗಳು ಯಾವುವು ಎಂದು ನಾವು ಇಂದು ತಿಳಿದುಕೊಳ್ಳೋಣ...

Ayurveda health tips for the rainy season

ಅತಿ ಎನಿಸುವಂತಹ ಆಹಾರ ಬೇಡ
ತಜ್ಞರ ಪ್ರಕಾರ ಮಳೆಗಾಲದಲ್ಲಿ ಅತಿ ಎನಿಸುವಂತಹ ಆಹಾರಗಳನ್ನು ಸೇವಿಸ ಬಾರದಂತೆ ( ಅಂದರೆ ಕರಿದ ಆಹಾರ, ಎಣ್ಣೆಯಂಶವಿರುವ ಆಹಾರ ಮತ್ತು ಜಂಕ್ ಫುಡ್ ಬೇಡ) ಇದರ ಜೊತೆಗೆ ಮಸಾಲೆ ಹೆಚ್ಚಿರುವ, ಆಸಿಡ್ ಹೆಚ್ಚಿರುವ, ಹುಳಿ ಹುಳಿಯಾಗಿರುವ ಆಹಾರಗಳು (ಮೊಸರು, ಚಟ್ನಿ, ಕರಿಗಳು) ಬೇಡ. ಏಕೆಂದರೆ ಇದರಿಂದ ದೇಹದಲ್ಲಿರುವ ನೀರಿನಂಶವು ಹೀರಿಹೋಗುತ್ತದೆ ಮತ್ತು ಅಜೀರ್ಣ, ಹೈಪರ್ ಆಸಿಡಿಟಿ ಮತ್ತು ಹೊಟ್ಟೆ ಉಬ್ಬುವಿಕೆ ಬರುತ್ತದೆ.

ಲಘುವಾದ ಮತ್ತು ಜೀರ್ಣವಾಗುವಂತಹ ಆಹಾರವನ್ನು ಸೇವಿಸಿ
ಈ ಕಾಲದಲ್ಲಿ ಜೀರ್ಣ ಕ್ರಿಯೆ ನಿಧಾನವಗುತ್ತದೆ ಅದಕ್ಕಾಗಿ ಲಘುವಾದ ಮತ್ತು ಜೀರ್ಣವಾಗುವಂತಹ ಆಹಾರವನ್ನು ಸೇವಿಸಿ. ಬೇಯಿಸಿದ ಅಥವಾ ಉಗಿಯಲ್ಲಿ ಬೇಯಿಸಿದ ಆಹಾರಗಳಾದ ಕುಂಬಳಕಾಯಿ, ಸ್ಟೀಮ್ ಮಾಡಲಾದ ಸಲಾಡ್‌ಗಳು, ತಾಜಾ ಹಣ್ಣುಗಳು, ಹೆಸರು ಬೇಳೆ, ಕಿಚಡಿ ಮತ್ತು ಕಾರ್ನ್ ಎಲ್ಲವೂ ಈ ಅವಧಿಯಲ್ಲಿ ನೀವು ಸೇವಿಸಲು ಒಳ್ಳೆಯದು ಎಂದು ಹೇಳಬಹುದು.

ನಿಮ್ಮ ಪಾದಗಳನ್ನು ರಕ್ಷಿಸಿಕೊಳ್ಳಿ

ನಿಮ್ಮ ಕಾಲುಗಳು ಮಳೆಗಾಲದಲ್ಲಿ ಹೆಚ್ಚಿಗೆ ನೆನೆಯತ್ತದೆ ಎಂಬುದು ನಿಮಗೂ ಸಹ ಗೊತ್ತು. ವಿಶೇಷವಾಗಿ ನೀವು ಮಧುಮೇಹಿಗಳಾಗಿದ್ದಲ್ಲಿ, ನಿಮ್ಮ ಪಾದಗಳ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಿ. ಮನೆಯ ಒಳಗೆ ಸಹ ಪಾದರಕ್ಷೆಗಳನ್ನು ಧರಿಸಿ. ಒಳ್ಳೆಯ ಗ್ರಿಪ್ ಇರುವ ಪಾದರಕ್ಷೆಗಳನ್ನು ಧರಿಸಿ, ಇದರಿಂದ ಜಾರುವಿಕೆ ಕಡಿಮೆಯಾಗುತ್ತದೆ. ನಿಮ್ಮ ಉಗುರುಗಳನ್ನು ಕಾಲ ಕಾಲಕ್ಕೆ ಕತ್ತರಿಸುತ್ತಾ ಇರಿ.

ಜೀರ್ಣ ಕ್ರಿಯೆಯನ್ನು ಹೆಚ್ಚಿಸಿಕೊಳ್ಳಲು ಆಯುರ್ವೇದಿಕ್ ಪಾನೀಯ ಕುಡಿಯಿರಿ
ಇಲ್ಲಿ ನಾವು ನಿಮಗಾಗಿ ಒಂದು ಆಯುರ್ವೇದಿಕ್ ಪಾನೀಯವನ್ನು ಸಲಹೆ ಮಾಡುತ್ತಿದ್ದೇವೆ. ಅದನ್ನು ತಯಾರಿಸುವ ಬಗೆಯನ್ನು ತಿಳಿದುಕೊಳ್ಳಿ. ಇದಕ್ಕೆ ಒಂದು ಚಿಟಿಕೆ ಉಪ್ಪು, ಮೆಣಸು, ದೊಡ್ಡ ಮೆಣಸು ಮತ್ತು ಶುಂಠಿ ಬೇಕು. ಇವುಗಳನ್ನು ಬಿಸಿ ನೀರಿಗೆ ಹಾಕಿಕೊಂಡು ದಿನಕ್ಕೆ ಒಂದು ಬಾರಿ ಸೇವಿಸಿ.

ಹಸಿರು ಸೊಪ್ಪುಗಳನ್ನು ಸೇವಿಸಬೇಡಿ
ಹಸಿರು ಸೊಪ್ಪುಗಳು ನೆಲಕ್ಕೆ ಸಮೀಪದಲ್ಲಿ ಬೆಳೆಯುತ್ತವೆ ಮತ್ತು ಆರ್ದ್ರತೆಯನ್ನು ಹೀರಿಕೊಳ್ಳುತ್ತವೆ. ಹೀಗಾಗಿ ಇವು ಮಣ್ಣು ಮತ್ತು ಕೆಸರನ್ನು ಹೊತ್ತು ತರುವುದರಲ್ಲಿ ಅನುಮಾನವೇ ಇಲ್ಲ. ಈ ಮಳೆಗಾಲದಲ್ಲಿ ಇವನ್ನು ಸ್ವಚ್ಛ ಮಾಡಲು ಕಷ್ಟವಾಗುತ್ತದೆ, ಜೊತೆಗೆ ಇವು ಈ ಕಾಲದಲ್ಲಿ ಜೀರ್ಣವಾಗುವುದು ಸಹ ಕಷ್ಟ.

ನಿಮ್ಮ ಅಡುಗೆ ಎಣ್ಣೆಯನ್ನು ಜಾಣತನದಿಂದ ಬಳಸಿ
ಮೆದುವಾದ ಎಣ್ಣೆಯು ಈ ಕಾಲದಲ್ಲಿ ಒಳ್ಳೆಯದು. ಇದು ಜೀರ್ಣಕ್ರಿಯೆಗೂ ಸಹ ಸಹಕಾರಿ. ತುಪ್ಪ, ಆಲೀವ್ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಗಳು ಸಾಸಿವೆ ಎಣ್ಣೆ, ಕಡಲೆ ಕಾಳಿನ ಎಣ್ಣೆ, ಬೆಣ್ಣೆ ಇತ್ಯಾದಿಗಳಿಗಿಂತ ಒಳ್ಳೆಯದು. ಏಕೆಂದರೆ ಇವುಗಳು ನಿಮ್ಮ ದೇಹದಲ್ಲಿ ಜೀರ್ಣಕ್ರಿಯೆಗೆ ಅಡ್ಡಿ ಮಾಡುತ್ತವೆ. ತೂಕ ಇಳಿಸಿಕೊಳ್ಳಲು ಆಯುರ್ವೇದ ಸೂಚಿಸುವ ಸುಲಭ ವಿಧಾನಗಳು

ಹರ್ಬಲ್ ಟೀಯನ್ನು ಹೆಚ್ಚಾಗಿ ಸೇವಿಸಿ
ಹಲವಾರು ಹರ್ಬಲ್ ಟೀಗಳು ಆಂಟಿ-ಬ್ಯಾಕ್ಟೀರಿಯಲ್ ಅಂಶಗಳನ್ನು ಒಳಗೊಂಡಿರುತ್ತವೆ. ಶುಂಠಿ ಟೀ ಮತ್ತು ಗ್ರೀನ್ ಟೀಗಳಲ್ಲಿ ಸಹ ಈ ಅಂಶಗಳು ಇರುತ್ತವೆ. ಇವು ನಿಮ್ಮ ಕಟ್ಟಿಕೊಂಡ ಗಂಟಲಿಗೆ ವಿಮುಕ್ತಿ ನೀಡುವ ಅಂಶಗಳನ್ನು ಹೊಂದಿರುತ್ತವೆ. ಮತ್ತು ಈ ಅವಧಿಯಲ್ಲಿ ಬರುವ ಶೀತದ ಸಮಸ್ಯೆಯಿಂದ ನಿಮ್ಮನ್ನು ಪಾರು ಮಾಡುತ್ತವೆ.

ವ್ಯಾಯಾಮವನ್ನು ತಪ್ಪಿಸಬೇಡಿ
ಮಳೆಗಾಲ ಎಂದರೆ ವ್ಯಾಯಾಮವನ್ನು ತಪ್ಪಿಸಬೇಕು ಎಂಬ ನಿಯಮ ಎಲ್ಲೂ ಇಲ್ಲ. ಈ ಅವಧಿಯಲ್ಲಿ ಪಿತ್ತ ಸಮಸ್ಯೆಯು ಅಧಿಕವಾಗುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಕುಂಠಿತಗೊಳುತ್ತದೆ. ಹಾಗಾಗಿ ಈ ಅವಧಿಯಲ್ಲಿ ವ್ಯಾಯಾಮವನ್ನು ಹೆಚ್ಚಾಗಿ ಮಾಡಿ. ಈಜು, ಯೋಗ, ಸ್ಟ್ರೆಚ್ಚಿಂಗ್ ಮತ್ತು ನಡಿಗೆಯಂತಹ ವ್ಯಾಯಾಮಗಳನ್ನು ಮಾಡಿ.

English summary

Ayurveda health tips for the rainy season

The rainy season is an important time to take special care of your health. While certain types of foods are good to have during this season, we also need to restrict certain foods and habits during this weather. To help you stay healthy this monsoon, here are some tips from experts…
Story first published: Tuesday, July 21, 2015, 19:09 [IST]
X
Desktop Bottom Promotion