For Quick Alerts
ALLOW NOTIFICATIONS  
For Daily Alerts

ಉರಿಮೂತ್ರ ಕಡೆಗಣಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ

By Manu
|

ಮಾನವ ಮೂಳೆ ಮಾಂಸದ ತಡಿಕೆ ಎಂಬ ದಾಸರ ವಾಣಿಯನ್ನು ನೀವು ಕೇಳಿರುತ್ತೀರಿ. ನಿತ್ಯವೂ ನಮ್ಮ ದೇಹವೆಂಬ ತಡಿಕೆ ಹಲವಾರು ರೋಗಗಳಿಗೆ ಆಹಾರವಾಗುತ್ತಿದೆ. ಒಂದಿಲ್ಲೊಂದು ರೋಗದಿಂದ ಬಳಲದ ಮಾನವ ಜೀವಿ ಭೂಮಿಯ ಮೇಲೆ ಯಾರೂ ಇಲ್ಲ. ಆರೋಗ್ಯದ ಕುರಿತಾಗಿ ನಾವು ಎಷ್ಟೇ ಮುತುವರ್ಜಿಯನ್ನು ವಹಿಸಿದರೂ ಸಣ್ಣ ಪುಟ್ಟ ತಲೆನೋವು, ನೆಗಡಿಗೆ ಕೂಡ ನಲುಗುವ ದೇಹ ನಮ್ಮದಾಗಿದೆ. ಇನ್ನು ದೊಡ್ಡ ದೊಡ್ಡ ರೋಗರುಜಿನಗಳಿಗೆ ಬೆಂದು ಬಾಡುವ ಶರೀರ ಕೂಡ ನಮ್ಮದಾಗಿದೆ. ಪದೇ-ಪದೇ ಮೂತ್ರ ವಿಸರ್ಜನೆ ಅಪಾಯದ ಸೂಚನೆ

ನಮ್ಮ ದೇಹವನ್ನು ದೈಹಿಕವಾಗಿ ಬಳಲಿಸಲು ದೊಡ್ಡ ಕಾಯಿಲೆ ನಮಗಂಟಿಕೊಳ್ಳಬೇಕು ಎಂದೇನಿಲ್ಲ. ನಿಯಮಿತವಾಗಿ ನಮಗೆ ಸಹಿಸಲು ಸಾಧ್ಯವಾಗದೇ ಇರುವ ರೋಗ ಕೂಡ ನಮ್ಮನ್ನು ನಜ್ಜುಗುಜ್ಜು ಮಾಡಿಬಿಡುತ್ತದೆ. ಅಂತಹ ಕಾಯಿಲೆಗಳಲ್ಲೊಂದಾಗಿದೆ ಉರಿಮೂತ್ರ. ಮೂತ್ರನಾಳದಲ್ಲಿ ಉಂಟಾಗುವ ಸೋಂಕು ಉರಿಮೂತ್ರಕ್ಕೆ ಮುಖ್ಯ ಕಾರಣ. ಆಗಾಗ್ಗೆ ಮೂತ್ರ ಬರುವುದು, ಮೂತ್ರ ಮಾಡುವಾಗ ನೋವುಂಟಾಗುವುದು, ಒತ್ತಡ ಹೇರಬೇಕಾಗುವುದು ಇವೇ ಮೊದಲಾದವು ಉರಿಮೂತ್ರದ ಸಮಸ್ಯೆಗಳಾಗಿವೆ. ಮೂತ್ರದ ಮೂಲಕ ಹೊರದೂಡಲ್ಪಟ್ಟ ಬ್ಯಾಕ್ಟೀರಿಯಾಗಳು ಮೂತ್ರಕೋಶದಲ್ಲಿ ಸಾಯದೇ ಮೂತ್ರನಾಳದ ಒಳಭಾಗದಲ್ಲಿ ಅಂಟಿಕೊಂಡು ಸೋಂಕು ಉಂಟುಮಾಡುತ್ತವೆ ಇದರಿಂದ ಉರಿಮೂತ್ರ ಉಂಟಾಗುತ್ತದೆ. ಮೂತ್ರ ಉರಿಯೇ? ಇಲ್ಲಿದೆ ಮನೆಮದ್ದು

ಅಲ್ಲದೆ ಹಾರ್ಮೋನುಗಳ ಏರುಪೇರು ಕೂಡ ಈ ರೋಗಕ್ಕೆ ಕಾರಣವಾಗಿದೆ. ಮೂತ್ರ ಮಾಡದೇ ಸಂಕೋಚದಿಂದ ಅದನ್ನು ದೀರ್ಘಸಮಯದವರೆಗೆ ಹಿಡಿದಿಟ್ಟುಕೊಳ್ಳುವುದು ಕೂಡ ಉರಿಮೂತ್ರಕ್ಕೆ ಪ್ರಮುಖ ಕಾರಣವಾಗಿದ್ದು ಇದನ್ನು ಹಾಗೆಯೇ ಬಿಟ್ಟಲ್ಲಿ ಈ ಸೋಂಕು ನಿಮ್ಮ ಮೂತ್ರಪಿಂಡಗಳನ್ನು ವ್ಯಾಪಿಸಬಹುದು.

ಆದ್ದರಿಂದ ಅದಕ್ಕೆ ತಕ್ಕುದಾದ ಮನೆಮದ್ದುಗಳನ್ನು ನಡೆಸಿ ಇಲ್ಲವೇ ವೈದ್ಯರ ಸಲಹೆಗಳನ್ನು ಪಾಲಿಸಿಕೊಂಡು ಉರಿಮೂತ್ರ ವ್ಯಾಧಿಯಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಮುಖ್ಯವಾಗಿದೆ. ಹಾಗಿದ್ದರೆ ಉರಿಮೂತ್ರದ ಸಮಸ್ಯೆ ಉಲ್ಬಣಿಸುವ ಮುನ್ನವೇ ಅದನ್ನು ಚಿವುಟಿ ಹಾಕುವ ಕೆಲವೊಂದು ಮನೆಮದ್ದುಗಳ ವಿಸ್ತಾರ ಮಾಹಿತಿಯೊಂದಿಗೆ ನಾವು ಬಂದಿರುವೆವು. ಆ ಮಾಹಿತಿಗಳು ಕೆಳಗಿನ ಸ್ಲೈಡರ್‌ಗಳಲ್ಲಿವೆ.

ಶುಂಠಿ ಬೆರೆಸಿದ ಚಹಾ

ಶುಂಠಿ ಬೆರೆಸಿದ ಚಹಾ

ಉರಿಮೂತ್ರಕ್ಕೆ ಹಸಿಶುಂಠಿ ಸಹಾ ಉತ್ತಮ ಪರಿಹಾರ ನೀಡುತ್ತದೆ. ಆದರೆ ಇದು ಈಗತಾನೇ ಪ್ರಾರಂಭವಾದ ಉರಿಮೂತ್ರಕ್ಕೆ ಉತ್ತಮವಾಗಿದೆ. ಉಲ್ಬಣವಾದ ತೊಂದರೆಗೆ ತಕ್ಕುದಲ್ಲ. ಶುಂಠಿ ನೈಸರ್ಗಿಕವಾದ ನಂಜುನಿವಾರಕವಾಗಿದ್ದು (antibacterial) ಉರಿಮೂತ್ರಕ್ಕೆ ಕಾರಣವಾದ ಬ್ಯಾಕ್ಟೀರಿಯಾಗಳನ್ನು ನಿಗ್ರಹಿಸುವ ಶಕ್ತಿ ಹೊಂದಿದೆ. ಜೊತೆಗೇ ಮೂತ್ರಕೋಶದಲ್ಲಿ ಸೋಂಕು ಉಂಟಾಗಿದ್ದರೆ ನಿವಾರಿಸಲೂ ನೆರವಾಗುತ್ತದೆ.ಇದಕ್ಕಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮತ್ತು ರಾತ್ರಿ ಮಲಗುವ ಮುನ್ನ ಒಂದು ದೊಡ್ಡ ಲೋಟ ಹಾಲಿಲ್ಲದ ಚಹಾದಲ್ಲಿ ಶುಂಠಿ ಸೇರಿಸಿ (ಒಂದು ಲೋಟಕ್ಕೆ ಸುಮಾರು ಅರ್ಧ ಇಂಚಿನ ಪ್ರಮಾಣದಲ್ಲಿ) ಕುದಿಸಿ ಸೋಸಿ ಬಿಸಿಯಿರುವಾಗಲೇ ಕುಡಿಯಿರಿ.

ಶುಂಠಿ ಚಹಾ ತಯಾರಿಸುವ ವಿಧಾನ

ಶುಂಠಿ ಚಹಾ ತಯಾರಿಸುವ ವಿಧಾನ

ಸುಮಾರು ಮಧ್ಯಮಗಾತ್ರದ ಶುಂಠಿಯನ್ನು ತೊಳೆದು ಸಿಪ್ಪೆ ಸುಲಿಯಿರಿ. ಇದನ್ನು ತೆಂಗಿನಕಾಯಿ ತುರಿದಂತೆ ಚಿಕ್ಕ ಚಿಕ್ಕ ಎಳೆಗಳಾಗಿ ತುರಿಯಿರಿ ಅಥವಾ ಸಾಧ್ಯವಾದಷ್ಟು ಚಿಕ್ಕ ಚಿಕ್ಕ ತುಂಡುಗಳನ್ನು ಮಾಡಿ. ಇದನ್ನು ಒಂದು ಲೋಟದಷ್ಟು ಕುದಿಸಿದ ನೀರಿಗೆ ಹಾಕಿ ಮುಚ್ಚಳ ಮುಚ್ಚಿ ಹತ್ತರಿಂದ ಹದಿನೈದು ನಿಮಿಷ ಹಾಗೇ ಬಿಡಿ (ಮತ್ತೆ ಕುದಿಸಬಾರದು) ಈ ನೀರು ನಿಧಾನವಾಗಿ ತಣ್ಣಗಾಗಲು ಬಿಡಿ. ಬಳಿಕ ಈ ನೀರನ್ನು ನೋಸಿ ಕುಡಿಯಿರಿ. ರುಚಿಗೆ ಸ್ವಲ್ಪ ಜೇನು, ತುಳಸಿ ಎಲೆಗಳು ಅಥವಾ ಲಿಂಬೆರಸವನ್ನೂ ಸೇರಿಸಿ ಸವಿಯಬಹುದು. ಸ್ವಲ್ಪ ಒಗರು ಅನಿಸಿದರೆ ಸ್ವಲ್ಪ ಬೆಲ್ಲವನ್ನೂ ಸೇರಿಸಬಹುದು.

ವಿಟಮಿನ್ ಸಿ ಇರುವ ಆಹಾರ ಸೇವಿಸಿ

ವಿಟಮಿನ್ ಸಿ ಇರುವ ಆಹಾರ ಸೇವಿಸಿ

ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ನೈಸರ್ಗಿಕವಾಗಿ ದೇಹ ಬ್ಯಾಕ್ಟೀರಿಯಾಗಳನ್ನು ಹೊಡೆದೋಡಿಸಲು ವಿಟಮಿನ್ ಸಿ ನೆರವಾಗುತ್ತದೆ. ವಿಟಮಿನ್ ಸಿ ಸೇವನೆಯಿಂದ ಮೂತ್ರ ಇನ್ನಷ್ಟು ಆಮ್ಲೀಯವಾಗುವುದರಿಂದ ಬ್ಯಾಕ್ಟೀರಿಯಾಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುವುದಿಲ್ಲ ಹಾಗೂ ತನ್ಮೂಲಕ ಉರಿಮೂತ್ರ ನಿವಾರಣೆಯಾಗುತ್ತದೆ. ಇದಕ್ಕಾಗಿ ವಿಟಮಿನ್ ಸಿ ಹೆಚ್ಚಿರುವ ಚೀಪುವ ಚಾಕಲೇಟುಗಳನ್ನು ಸೇವಿಸಬಹುದು. ಇಲ್ಲದಿದ್ದರೆ ವಿಟಮಿನ್ ಸಿ ಹೆಚ್ಚಿರುವ (ಕಿತ್ತಳೆ, ಮೂಸಂಬಿ, ಲಿಂಬೆ, ಅನಾನಾಸು, ಸ್ಟ್ರಾಬೆರಿ, ಟೊಮೇಟೊ ಮೊದಲಾದ ಹಣ್ಣುಗಳು) ಆಹಾರಗಳನ್ನು ಸೇವಿಸಿ.

ಸೌತೆಕಾಯಿ

ಸೌತೆಕಾಯಿ

ಸೌತೆಕಾಯಿಯಲ್ಲಿ ನೀರಿನ ಪ್ರಮಾಣ ಅಧಿಕವಾದುದರಿಂದ ಮೂತ್ರದ ಪ್ರಮಾಣ ಹೆಚ್ಚಿಸಲು ನೆರವಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ದ್ರವ ಹೊರಹರಿಯುವುದರಿಂದ ಬ್ಯಾಕ್ಟೀರಿಯಾಗಳಿಗೆ ಧಾಳಿ ಮಾಡಲು ಸಾಕಷ್ಟು ಸಮಯ ಸಿಗದೇ ಮೂತ್ರದೊಂದಿಗೆ ಹೊರಹೋಗುತ್ತವೆ. ಬಳಿಕ ಜೀವನಿರೋಧಕ ಶಕ್ತಿ ಬ್ಯಾಕ್ಟೀರಿಯಾಗಳಿಂದಾದ ಹಾನಿಯನ್ನು ಸರಿಪಡಿಸುತ್ತದೆ.

ಅಡುಗೆ ಸೋಡಾ (baking soda)

ಅಡುಗೆ ಸೋಡಾ (baking soda)

ಉರಿಮೂತ್ರಕ್ಕೆ ಅಡುಗೆ ಸೋಡಾ ಸಹಾ ಉತ್ತಮ ಫಲ ನೀಡುತ್ತದೆ. ಇದೊಂದು ಪ್ರತ್ಯಾಮ್ಲವಾದುದರಿಂದ ಮೂತ್ರದಲ್ಲಿ ಆಮ್ಲೀಯತೆಯನ್ನು ಕಡಿಮೆಗೊಳಿಸುತ್ತದೆ. ಆಮ್ಲದ ಪರಿಣಾಮ ಕಡಿಮೆಯಾಗುವ ಕಾರಣ ಬ್ಯಾಕ್ಟೀರಿಯಾಗಳ ಕಾರ್ಯಕ್ಕೆ ಅಡ್ಡಿಯಾಗಿ ಮೂತ್ರದೊಂದಿಗೇ ಹೊರಹೋಗುತ್ತವೆ. ಮೂತ್ರದಲ್ಲಿ ಉರಿ ಕಡಿಮೆಯಾಗಿ ವಿಸರ್ಜನೆ ಸುಲಭವಾಗುತ್ತದೆ. ಇದಕ್ಕಾಗಿ ಊಟವಾದ ಬಳಿಕ ಒಂದು ಲೋಟಕ್ಕೆ ಸುಮಾರು ಕಾಲು ಚಮಚ ಅಡುಗೆ ಸೋಡಾ ಸೇರಿಸಿ ಕುಡಿಯಿರಿ. ಉರಿ ಹೆಚ್ಚಿದ್ದರೆ ಮಾತ್ರ ಅರ್ಧ ಚಮಚದವರೆಗೂ ಸೇವಿಸಬಹುದು. ಆದರೆ ಈ ಚಿಕಿತ್ಸೆ ಒಂದೆರಡು ದಿನ ಮಾತ್ರ ನಡೆಸಬೇಕು. ಹೆಚ್ಚು ದಿನಗಳಿಗೆ ವಿಸ್ತರಿಸಿದರೆ ಬೇರೆ ಅಡ್ಡಪರಿಣಾಮಗಳು ಎದುರಾಗಬಹುದು. (ಕ್ಷಾರೀಯತೆ ಹೆಚ್ಚುವುದು)

English summary

Amazing Remedies to Prevent Urinary Tract Infection

When the bacteria, virus, germs etc. have already caught hold of your urinary tract and are thriving there, you cannot, in fact, rely purely on home remedies. Home remedies are effective only when you catch the symptoms early, just when infection is about to happen.
Story first published: Monday, December 7, 2015, 17:46 [IST]
X
Desktop Bottom Promotion