For Quick Alerts
ALLOW NOTIFICATIONS  
For Daily Alerts

ಸ್ವರ್ಗಲೋಕದ ಹಣ್ಣು ದಾಳಿಂಬೆ ಸಿಪ್ಪೆಯ ಔಷಧೀಯ ಗುಣಗಳೇನು?

By Super
|

ನಮ್ಮ ಕವಿಗಳು ಸುಂದರವಾದ ಹಲ್ಲುಗಳನ್ನು ದಾಳಿಂಬೆ ಹಣ್ಣಿನ ಕಾಳುಗಳಿಗೆ ಹೋಲಿಸಿ ಕಾವ್ಯದ ಸೊಗಸನ್ನು ಹೆಚ್ಚಿಸುತ್ತಾರೆ. ಇಲ್ಲಿ ಕಾಳುಗಳ ಹೊಳಪು ಹಲ್ಲುಗಳಿಗೆ ಉಪಮೇಯವಾಗಿದೆಯೇ ಹೊರತು ಕಾಳಿನ ಇತರ ಆರೋಗ್ಯಕರ ಗುಣಗಳಲ್ಲ. ದಾಳಿಂಬೆಯನ್ನು ಸ್ವರ್ಗಲೋಕದ ಹಣ್ಣು ಎಂದು ಕುರಾನ್ ನಲ್ಲಿಯೂ ಪ್ರಸ್ತಾಪಿಸಲಾಗಿದೆ. ದಾಳಿಂಬೆ ಆರೋಗ್ಯಕ್ಕೆ ಹತ್ತು ಹಲವು ರೀತಿಯಲ್ಲಿಯೂ ಉಪಕಾರಿಯಾಗಿದೆ. ದಾಳಿಂಬೆ ಹಣ್ಣಿನಲ್ಲಿರುವ 10 ಅದ್ಭುತ ಪ್ರಯೋಜನಗಳು

ಸಾಮಾನ್ಯವಾಗಿ ದಾಳಿಂಬೆಯ ಸಿಪ್ಪಿ ಮತ್ತು ಕಾಳುಗಳು ಕುಳಿತಿರುವ ತಿರುಳು ಕಹಿಯಾಗಿರುವುದರಿಂದ ನಾವು ಅದನ್ನು ಬಳಸದೇ ತ್ಯಾಜ್ಯದಲ್ಲಿ ಎಸೆಯುತ್ತೇವೆ. ಆದರೆ ಹಣ್ಣಿನಂತೆಯೇ ಈ ಸಿಪ್ಪೆ ಮತ್ತು ತಿರುಳಿನಲ್ಲಿಯೂ ಹಲವು ಔಷಧೀಯ ಗುಣಗಳಿರುವುದು ನಿಮಗೆ ಗೊತ್ತಿತ್ತೇ? ಹೌದು, ಈ ಸಿಪ್ಪೆ ನಮ್ಮ ನಾಲಿಗೆಗೆ ರುಚಿಯಾಗಿಲ್ಲದಿದ್ದರೂ, ಚರ್ಮ, ಕೂದಲುಗಳಿಗೆ ಅತ್ಯುತ್ತಮವಾಗಿದೆ. ಮುಂದಿನ ದಾಳಿಂಬೆಯ ಸಿಪ್ಪೆಯನ್ನು ಎಸೆಯುವ ಮುನ್ನ ಕೊಂಚ ಯೋಚಿಸಲು ಈ ಕೆಳಗಿನ ಏಳು ಮಾಹಿತಿಗಳು ನಿಮ್ಮ ನೆರವಿಗೆ ಬರುತ್ತವೆ.

ಮುಖದ ಮೊಡವೆ, ಮತ್ತು ಚರ್ಮದ ಒರಟುತನದ ವಿರುದ್ಧ ಹೋರಾಡುತ್ತದೆ

ಮುಖದ ಮೊಡವೆ, ಮತ್ತು ಚರ್ಮದ ಒರಟುತನದ ವಿರುದ್ಧ ಹೋರಾಡುತ್ತದೆ

ಹದಿಹರೆಯದಲ್ಲಿ ಕಾಡುವ ಮುಖದ ಮೊಡವೆ ಮತ್ತು ದದ್ದುಗಳನ್ನು ಸಮರ್ಪಕವಾಗಿ ಹತೋಟಿಯಲ್ಲಿಡದೇ ಇದ್ದರೆ ಅವು ಒಣಗಿದ ಬಳಿಕ ಶಾಶ್ವತವಾದ ಕಲೆಗಳನ್ನು ಉಳಿಸುತ್ತವೆ. ಈ ತೊಂದರೆಯಿಂದ ಪಾರಾಗಲು ದಾಳಿಂಬೆಸಿಪ್ಪೆಯಲ್ಲಿನ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಹೊಡೆದೋಡಿಸುವ ಶಕ್ತಿ ನೆರವಿಗೆ ಬರುತ್ತದೆ. ಚರ್ಮಕ್ಕೆ ಅಗತ್ಯವಾದ ಆರ್ದ್ರತೆ ಲಭ್ಯವಾಗುವ ಪರಿಣಾಮವಾಗಿ ಸುಂದರವಾದ ಮತ್ತು ಕಾಂತಿಯುಕ್ತ ಚರ್ಮ ನಿಮ್ಮದಾಗುತ್ತದೆ. ಆರ್ದತೆಯಿಲ್ಲದೇ ಒಣಗಿ ಒರಟಾಗಿದ್ದ ಚರ್ಮ ಸೆಳೆತಗೊಂಡು ಮೃದುವಾಗುತ್ತದೆ.

ಉಪಯೋಗಿಸುವ ವಿಧಾನ

ಉಪಯೋಗಿಸುವ ವಿಧಾನ

ದಾಳಿಂಬೆಯ ಸಿಪ್ಪೆಯ ಭಾಗಗಳನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ. ಒಂದು ಹಿಡಿಯಷ್ಟು ಒಣ ಸಿಪ್ಪೆಗಳನ್ನು ಚಿಕ್ಕದಾಗಿ ಪುಡಿ ಮಾಡಿಕೊಂಡು ದಪ್ಪತಳದ ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಹುರಿಯಿರಿ. ಸ್ವಲ್ಪ ಕಂದುಬಣ್ಣ ಬಂದ ಬಳಿಕ ಪಾತ್ರೆಯ ಮುಚ್ಚಳದ ಮೇಲೆ ಹರಡಿ ತಣಿಯಲು ಬಿಡಿ. ತಣಿದ ಪುಡಿಯನ್ನು ನೀರಿಲ್ಲದೇ ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿ. ಈ ಪುಡಿಯನ್ನು ಗಾಳಿಯಾಡದ ಬಾಟಲಿಯಲ್ಲಿ ಹಾಕಿಡಿ. ಪ್ರತಿದಿನ ರಾತ್ರಿ ಮಲಗುವ ಮುನ್ನ ಸಮಪ್ರಮಾಣದ ಲಿಂಬೆರಸ ಅಥವಾ ಗುಲಾಬಿನೀರಿನಲ್ಲಿ ಮಿಶ್ರಣಮಾಡಿ ಲೇಪನ ತಯಾರಿಸಿಕೊಳ್ಳಿ. ಈ ಲೇಪನವನ್ನು ಮೊಡವೆಗಳ ಮೇಲೆ ದಪ್ಪನಾಗಿಯೂ, ಇತರೆಡೆ ತೆಳುವಾಗಿಯೂ ಲೇಪಿಸಿ. ಸುಮಾರು ಅರ್ಧಘಂಟೆಯಿಂದ ಒಂದು ಘಂಟೆಯವರೆಗೆ ಹಾಗೇ ಒಣಗಲು ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ (ಸೋಪು ಉಪಯೋಗಿಸದಿರಿ). ಒಂದು ವೇಳೆ ಮೊಡವೆಗಳು ತುಂಬಾ ಹೆಚ್ಚಿದ್ದರೆ ಲಿಂಬೆರಸದ ಪ್ರಮಾಣ ಕಡಿಮೆ ಮಾಡಿ, ಅಗತ್ಯವಿದ್ದಷ್ಟು ನೀರು ಸೇರಿಸಿ ಲೇಪನವನ್ನು ತೆಳುವಾಗಿ ಹಚ್ಚಿ ಇಡಿಯ ರಾತ್ರಿ ಬಿಡಿ, ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ.

ಚರ್ಮ ನೆರಿಗೆಯಾಗುವುದನ್ನು ತಪ್ಪಿಸುತ್ತದೆ

ಚರ್ಮ ನೆರಿಗೆಯಾಗುವುದನ್ನು ತಪ್ಪಿಸುತ್ತದೆ

ವೃದ್ದಾಪ್ಯ ಸಮೀಪಿಸಿದೆ ಎಂಬುದನ್ನು ಚರ್ಮದ ನೆರಿಗೆಗಳು ಸಾದರಪಡಿಸುತ್ತವೆ. ಇದಕ್ಕೆ ಕಾರಣ ನಮ್ಮ ಚರ್ಮದ ಕೊಲಾಜೆನ್ ಎಂಬ ಅಂಶ ತನ್ನ ಸೆಳೆತವನ್ನು ಕಳೆದುಕೊಳ್ಳುವುದು. ಇದರಿಂದ ಚರ್ಮ ಅಗಲಗೊಂಡು ಮಡಿಕೆ ಮೂಡುತ್ತದೆ. ಈ ಮಡಿಕೆಯಾದಲ್ಲೆಲ್ಲಾ ನೆರಿಗೆಗಳು ಸ್ಪಷ್ಟವಾಗುತ್ತಾ ಹೋಗುತ್ತವೆ. ದಾಳಿಂಬೆ ಸಿಪ್ಪೆಯಲ್ಲಿ ಈ ಸ್ಥಿತಿಯನ್ನು ಮುಂದೂಡುವ ಅಂಶಗಳಿವೆ.

ಉಪಯೋಗಿಸುವ ವಿಧಾನ

ಉಪಯೋಗಿಸುವ ವಿಧಾನ

ಮೇಲಿನ ವಿಧಾನದಲ್ಲಿ ತಯಾರಾದ ಪುಡಿಯಲ್ಲಿ ಎರಡು ದೊಡ್ಡ ಚಮಚದಷ್ಟು ಒಣಪುಡಿಯನ್ನು ಹಸಿಹಾಲಿನಲ್ಲಿ ಬೆರೆಸಿ. ನಿಮ್ಮ ಚರ್ಮದ ಮಾದರಿಯನ್ನನುಸರಿಸಿ ಹಾಲಿನ ಪ್ರಮಾಣವನ್ನು ಹೆಚ್ಚು ಕಡಿಮೆ ಮಾಡಿಕೊಳ್ಳಿ. ಎಣ್ಣೆ ಚರ್ಮಕ್ಕೆ ಹಾಲಿನ ಬದಲು ಗುಲಾಬಿನೀರನ್ನು ಉಪಯೋಗಿಸಿ. ಒಣಚರ್ಮಕ್ಕೆ ಹೆಚ್ಚು ಹಾಲು ಬಳಸಿ. ಈ ಲೇಪನವನ್ನು ಚರ್ಮಕ್ಕೆ ಹಚ್ಚಿ ಒಣಗಲು ಬಿಡಿ. ಸುಮಾರು ಅರ್ಧಘಂಟೆ ಅಥವ ಮುಕ್ಕಾಲು ಘಂಟೆಯ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ (ಸೋಪು ಉಪಯೋಗಿಸಬೇಡಿ)

ಚರ್ಮಕ್ಕೆ ನೈಸರ್ಗಿಕ ಆರ್ದ್ರತೆಯನ್ನು ನೀಡುತ್ತದೆ

ಚರ್ಮಕ್ಕೆ ನೈಸರ್ಗಿಕ ಆರ್ದ್ರತೆಯನ್ನು ನೀಡುತ್ತದೆ

ನಮ್ಮ ಚರ್ಮಕ್ಕೆ ನೀರು ಅಗತ್ಯವಾಗಿ ಬೇಕು. ಆದರೆ ಈ ನೀರನ್ನು ಚರ್ಮ ನೇರವಾಗಿ ಹೀರಲಾರದು. ಗಾಳಿಯಲ್ಲಿರುವ ನೀರಿನ ಪಸೆಯನ್ನು ಚರ್ಮದ ಸೂಕ್ಷ್ಮರಂಧ್ರಗಳ ಮೂಲಕ ಹೀರಲ್ಪಡುತ್ತದೆ. ಆದರೆ ಇಂದಿನ ದಿನಗಳಲ್ಲಿ ಪ್ರದೂಶಿತಗೊಂಡ ಗಾಳಿಯಲ್ಲಿ ನೀರಿನ ಪಸೆಯೊಡನೆ ಹಲವು ಅತಿಸೂಕ್ಷ್ಮ ಕಣಗಳೂ, ಹೂವಿನ ಪರಾಗ ಮೊದಲಾದವೂ ಚರ್ಮದ ರಂಧ್ರಗಳಲ್ಲಿ ಹೀರಲ್ಪಟ್ಟು ನಮ್ಮ ಚರ್ಮದ ಪಿ.ಎಚ್ ಅಂಶವನ್ನು ( pH-ಆಮ್ಲ ಮತ್ತು ಕ್ಷಾರದ ಪ್ರಮಾಣವನ್ನು ಸೂಚಿಸುವ ಗಣಾಂಕ) ಏರುಪೇರುಗೊಳಿಸುತ್ತದೆ. ಅಕೇಶಿಯಾ ಹೂವಿನ ಪರಾಗರೇಣು ಚರ್ಮದ ರಂಧ್ರಗಳಲ್ಲಿ ಸೇರಿ ಅಲರ್ಜಿಯುಂಟುಮಾಡುತ್ತದೆ. ಇದೇ ಕಾರಣಕ್ಕೆ ನೋಡಲು ಸುಂದರವಾಗಿದ್ದರೂ ಜನಸಾಂದ್ರತೆಯಿದ್ದಲ್ಲಿ ಈ ಮರಗಳನ್ನು ಕಡಿದು ಬೇರೆ ಮರಗಳನ್ನು ನೆಡಲಾಗಿದೆ. ಆರ್ದ್ರತೆಯನ್ನು ಸ್ವಾಭಾವಿಕರೂಪದಲ್ಲಿ ಚರ್ಮ ಪಡೆಯಲು ದಾಳಿಂಬೆಸಿಪ್ಪೆ ನೆರವಿಗೆ ಬರುತ್ತದೆ.

ಉಪಯೋಗಿಸುವ ವಿಧಾನ

ಉಪಯೋಗಿಸುವ ವಿಧಾನ

ಮೊದಲಿನ ವಿಧಾನದಲ್ಲಿ ತಿಳಿಸಿದಂತೆ ಒಣಸಿಪ್ಪೆಯ ಪುಡಿಯಲ್ಲಿ ಎರಡು ದೊಡ್ಡ ಚಮಚದಷ್ಟು ಪುಡಿಯನ್ನು ಲೇಪನಕ್ಕೆ ಅಗತ್ಯವಿರುವಷ್ಟು ಮೊಸರಿನೊಂದಿಗೆ ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಈ ಲೇಪನವನ್ನು ಮುಖ, ಕೈ, ಕುತ್ತಿಗೆ ಮೊದಲಾದ ಬಿಸಿಲಿಗೆ ಒಡ್ಡುವ ಭಾಗಗಳಿಗೆ ಲೇಪಿಸಿ ಹತ್ತು ನಿಮಿಷ ಒಣಗಳು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ಉಪಯೋಗಿಸದಿರುವುದು ವಾಸಿ.

ಬ್ಲಾಕ್ ಹೆಡ್ ತೊಲಗಿಸಲು ನೆರವಾಗುತ್ತದೆ

ಬ್ಲಾಕ್ ಹೆಡ್ ತೊಲಗಿಸಲು ನೆರವಾಗುತ್ತದೆ

ನಮ್ಮ ದೇಹದ ಪ್ರತಿ ಜೀವಕೋಶವೂ ಮರುಹುಟ್ಟನ್ನು ಪಡೆಯುತ್ತಿರುತ್ತದೆ. ಸತ್ತ ಜೀವಕೋಶಗಲು ವಿಸರ್ಜಿಸಲ್ಪಟ್ಟು ಆ ಸ್ಥಳದಲ್ಲಿ ಹೊಸ ಜೀವಕೋಶಗಳು ನೆಲೆನಿಲ್ಲುತ್ತವೆ. ಆದರೆ ಚರ್ಮದ ಹೊರಭಾಗದ ಜೀವಕೋಶಗಳು ಒಣಗಿ ಹಾಗೇ ಉದುರಿ ಹೋಗುತ್ತವೆ. ಕೆಲವೊಮ್ಮೆ ಈ ಒಣಪದರ ಹಾಗೇ ಉಳಿದು ಕೆಳಗಿನ ಚರ್ಮ ಒಣಗುವಂತೆ ಮಾಡುತ್ತದೆ. ಪರಿಣಾಮವಾಗಿ ಸೂಕ್ಷ್ಮರಂಧ್ರ ಮುಚ್ಚಿಕೊಂಡು ಅದರಿಂದ ಒಸರುವ ಬೆವರು ಮತ್ತು ತ್ಯಾಜ್ಯ ಹಾಗೇ ಉಳಿದು ಬ್ಲಾಕ್ ಹೆಡ್ ಮತ್ತು ಬಿಳಿಯ ಚುಕ್ಕೆಗಳಿಗೆ ಕಾರಣವಾಗುತ್ತದೆ. ದಾಳಿಂಬೆಸಿಪ್ಪೆಯಲ್ಲಿ ಇದಕ್ಕೆ ಉತ್ತಮ ಪರಿಹಾರವಿದೆ.

ಉಪಯೋಗಿಸುವ ವಿಧಾನ

ಉಪಯೋಗಿಸುವ ವಿಧಾನ

ಒಂದು ಚಿಕ್ಕ ಚಮಚ ದಾಳಿಂಬೆಸಿಪ್ಪೆಯ ಪುಡಿಗೆ ಒಂದು ಚಮಚ ಕಂದು ಸಕ್ಕರೆ, ಒಂದು ಚಮಚ ಜೇನು, ಒಂದು ಚಮಚ ಬೆಣ್ಣೆಹಣ್ಣಿನ ಎಣ್ಣೆ ಅಥವಾ ಬೇರೆ ಯಾವುದಾದರೂ ಅತ್ಯಾವಶ್ಯಕ ತೈಲ(essential oil)ವನ್ನು ಸೇರಿಸಿ (ಗಂಧದೆಣ್ಣೆ ಲಭ್ಯವಿದ್ದರೆ ಉತ್ತಮ) ದಪ್ಪನೆಯ ಲೇಪನ ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹೆಚ್ಚಿ ಕೆಲನಿಮಿಷಗಳನ್ನು ಬಿಟ್ಟು ಮೈ ಉಜ್ಜುವ ನುಣುಪಾದ ಬ್ರಶ್ ಅಥವಾ ಟವೆಲ್ ಉಪಯೋಗಿಸಿ ಉಜ್ಜಿ ತೆಗೆಯಿರಿ. ಸಾಕಷ್ಟು ತಣ್ಣನೆಯ ನೀರನ್ನು ಉಪಯೋಗಿಸಿ ಮುಖವನ್ನು ಮಸಾಜ್ ಮಾಡಿಕೊಳ್ಳಿ. ಈ ನೀರಿನೊಂದಿಗೆ ಬ್ಲಾಕ್ ಹೆಡ್ ಗಳೂ ತೊಲಗುತ್ತವೆ.

ಸೂರ್ಯನ ಅತಿನೇರಳೆ ಕಿರಣಗಳಿಂದ ರಕ್ಷಣೆ ನೀಡುತ್ತದೆ

ಸೂರ್ಯನ ಅತಿನೇರಳೆ ಕಿರಣಗಳಿಂದ ರಕ್ಷಣೆ ನೀಡುತ್ತದೆ

ಬಿಸಿಲಿಗೆ ಒಡ್ಡುವ ಚರ್ಮದ ಭಾಗ ಉಳಿದ ಭಾಗಕ್ಕಿಂತ ದಟ್ಟನಾಗುವುದಕ್ಕೆ ಸೂರ್ಯನ ಕಿರಣಗಳಲ್ಲಿರುವ ಅತಿನೇರಳೆ ಕಿರಣಗಳ ಪ್ರಭಾವ ಕಾರಣವಾಗಿದೆ. ಈ ಅತಿನೇರಳೆ ಕಿರಣಗಳಲ್ಲಿ ಎರಡು ಪ್ರಕಾರಗಳಿವೆ-UVA ಮತ್ತು UVB. ಇದರಲ್ಲಿ UVA ಕಿರಣಗಳು ಶೇ ೯೫ ರಷ್ಟಿದ್ದು ಚರ್ಮದ ಮೇಲ್ಪದರ ಮತ್ತು ಒಳಪದರಕ್ಕೂ ಇಳಿದು ಕಪ್ಪಗಾಗಲು ಕಾರಣವಾಗುತ್ತದೆ. ಆದರೆ ಇನ್ನುಳಿದ ಐದು ಶೇಕಡಾ ಇರುವ UVB ನಮ್ಮ ಚರ್ಮದ ಮೇಲ್ಪದರಕ್ಕೆ ಮಾತ್ರ ತನ್ನ ಪ್ರಭಾವ ತೋರಿದರೂ ಚರ್ಮದ ಕ್ಯಾನ್ಸರ್ ಬರುವಂತೆ ಮಾಡುತ್ತದೆ. ಇಂದು ಕರಗುತ್ತಿರುವ ಓಜೋನ್ ಪದರದಿಂದ ಈ ಕಿರಣ ಭೂಮಿಗೆ ಬರುತ್ತಿರುವ ಪ್ರಮಾಣ ಹೆಚ್ಚುತ್ತಿದೆ. ಅದರಲ್ಲೂ ಹಿಮಚ್ಛಾದಿತ ಪ್ರದೇಶಗಳಲ್ಲಿ ಬಿಸಿಲು ಪ್ರತಿಫಲನಗೊಳ್ಳುವುದರಿಂದ ಹಿಮಪ್ರದೇಶದ ಜನರಲ್ಲಿ ಕ್ಯಾನ್ಸರ್ ಬರುವ ಹೆಚ್ಚು. ಈ ತೊಂದರೆಯಿಂದ ರಕ್ಷಿಸಿಕೊಳ್ಳಲು ದಾಳಿಂಬೆ ಸಿಪ್ಪೆ ನೆರವಿಗೆ ಬರುತ್ತದೆ.

ಉಪಯೋಗಿಸುವ ವಿಧಾನ

ಉಪಯೋಗಿಸುವ ವಿಧಾನ

ಮೇಲಿನ ವಿಧಾನದಲ್ಲಿ ತಿಳಿಸಿದ ದಾಳಿಂಬೆ ಸಿಪ್ಪೆಯ ಪುಡಿಯನ್ನು ನೀವು ನಿತ್ಯ ಉಪಯೋಗಿಸುವ ಚರ್ಮದ ಲೋಷನ್ ಅಥವಾ ಕ್ರೀಮ್ ನೊಂದಿಗೆ ಬೆರೆಸಿ ಬಿಸಿಲಿಗೆ ಹೊರಡುವ ಸುಮಾರು ಇಪ್ಪತ್ತು ನಿಮಿಷದ ಮೊದಲು ಹಚ್ಚಿಕೊಳ್ಳಿ.

ಕೂದಲುದುರುವುದರಿಂದ ಮತ್ತು ತಲೆಹೊಟ್ಟಿನಿಂದ ರಕ್ಷಣ ನೀಡುತ್ತದೆ

ಕೂದಲುದುರುವುದರಿಂದ ಮತ್ತು ತಲೆಹೊಟ್ಟಿನಿಂದ ರಕ್ಷಣ ನೀಡುತ್ತದೆ

ತಲೆಯ ಚರ್ಮದ ಒಣಗಿದ ಬಳಿಕ ಪಕಳೆಗಳು ಉದುರದೇ ತಲೆಹೊಟ್ಟು ಉಂಟಾಗುತ್ತದೆ. ಇದು ತುರಿಕೆ ಮತ್ತು ಕೂದಲುದುರುವಿಕೆಗೂ ಕಾರಣವಾಗುತ್ತದೆ. ಇದಕ್ಕೆ ದಾಳಿಂಬೆಸಿಪ್ಪೆಯನ್ನು ಬಳಸಿ ಉತ್ತಮ ಪರಿಣಾಮ ಪಡೆಯಬಹುದು.

ಉಪಯೋಗಿಸುವ ವಿಧಾನ

ಉಪಯೋಗಿಸುವ ವಿಧಾನ

ನೀವು ನಿತ್ಯ ಬಳಸುವ ತೆಲೆಗೆ ಹಾಕುವ ಎಣ್ಣೆ ಅಥವಾ ಅಪ್ಪಟ ಕೊಬ್ಬರಿ ಎಣ್ಣೆಗೆ ದಾಳಿಂಬೆ ಸಿಪ್ಪೆಯ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ. ಈ ಲೇಪನವನ್ನು ಕೂದಲ ಬುಡಕ್ಕೆ ನಯವಾಗಿ ಮಸಾಜ್ ಮಾಡಿ. ಸುಮಾರು ಎರಡು ಘಂಟೆಗಳ ಬಳಿಕ ಸೌಮ್ಯ ಶಾಂಪೂ ಉಪಯೋಗಿಸಿ ತಲೆ ತೊಳೆದುಕೊಳ್ಳಿ. ತಣ್ಣನೆಯ ಅಥವಾ ಉಗುರುಬೆಚ್ಚನೆಯ ನೀರನ್ನೇ ಉಪಯೋಗಿಸಿ. ಒಂದು ವೇಳೆ ತಲೆಹೊಟ್ಟು ತುಂಬಾ ಹೆಚ್ಚಿದ್ದರೆ ರಾತ್ರಿಯಿಡೀ ಒಣಗಲು ಬಿಟ್ಟು ಬೆಳಿಗ್ಗೆ ಸ್ನಾನ ಮಾಡಿ.

ಗಂಟಲ ಕೆರೆತವನ್ನು ನಿವಾರಿಸುತ್ತದೆ

ಗಂಟಲ ಕೆರೆತವನ್ನು ನಿವಾರಿಸುತ್ತದೆ

ಕೆಲವೊಮ್ಮೆ ಗಂಟಲಲ್ಲಿ ಗಂಟು ಮೂಡಿ ಸತತ ಕೆರೆತ ಉಂಟಾಗುತ್ತದೆ. ಗಂಟಲಗ್ರಂಥಿ (tonsil)ಯ ಊತದ ಕಾರಣ ಈ ಕೆರೆತ ಉಂಟಾಗುತ್ತದೆ. ಇದಕ್ಕೆ ನೈಸರ್ಗಿಕವಾದ ಶಮನವನ್ನು ದಾಳಿಂಬೆ ಸಿಪ್ಪೆ ನೀಡುತ್ತದೆ.

ಉಪಯೋಗಿಸುವ ವಿಧಾನ

ಉಪಯೋಗಿಸುವ ವಿಧಾನ

ಮೇಲಿನ ವಿಧಾನದಲ್ಲಿ ತಯಾರಿಸಿದ ದಾಳಿಂಬೆಪುಡಿಯನ್ನು ಒಂದು ಲೋಟಕ್ಕೆ ಒಂದು ಚಿಕ್ಕ ಪ್ರಮಾಣದಷ್ಟು ಬೆರೆಸಿ ಕುದಿಸಿ. ಕುದಿಯಲು ಪ್ರಾರಂಭವಾದ ಬಳಿಕ ಒಲೆಯಿಂದ ಕೆಳಗಿಳಿಸಿ ತಣಿಯಲು ಬಿಡಿ. ತಣಿದ ಬಳಿಕ ಈ ನೀರನ್ನು ನೋಸಿ ಈ ನೀರಿನಿಂದ ಆಗಾಗ್ಯೆ ಬಾಯಿಮುಕ್ಕಳಿಸಿ. ತಲೆಯನ್ನು ಸಾಧ್ಯವಾದಷ್ಟು ಹಿಂದೆ ಬಾಗಿಸಿ ಗಳಗಳ ಮಾಡುವುದು ಹೆಚ್ಚು ಪರಿಣಾಮಕಾರಿ. ಇದರಿಂದ ನಿಧಾನವಾಗಿ ಗಂಟಲ ಕೆರೆತ ಮತ್ತು ನೋವು ಕಡಿಮೆಯಾಗುತ್ತದೆ.


English summary

Amazing Health Benefits of Pomegranate Peels

Pomegranates are known for their taste and amazing health benefits. While most of us chomp on the red tangy tiny seeds or the fruit to reap its benefits, it’s tough red skin is often discarded. Here is how the fruit peel helps take your beauty and hair care regimen to a new level altogether:
X
Desktop Bottom Promotion