For Quick Alerts
ALLOW NOTIFICATIONS  
For Daily Alerts

ಗೋಡಂಬಿ-ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು...!

By Manu
|

ಮೂತ್ರಪಿ೦ಡಗಳ ಆಕಾರದಲ್ಲಿರುವ ಗೋಡ೦ಬಿ ಬೀಜಗಳು ಸರ್ವೇಸಾಧಾರಣವಾಗಿ ಬಾಯಿ ಚಪ್ಪರಿಸುವ೦ತೆ ಮಾಡಬಲ್ಲ ತಿನಿಸುಗಳಾದ ಕಾಜು ಕಟ್ಲಿಗಳು, ಖೀರು, ಹಾಗೂ ಇತರ ಕ೦ದುಬಣ್ಣದ ಸಿಹಿತಿನಿಸುಗಳಲ್ಲಿ ಬಳಸಲ್ಪಡುತ್ತವೆ. ಜೊತೆಗೆ, ಆರೋಗ್ಯಕರವಾದ ತಿನಿಸುಗಳ ವಿಚಾರಕ್ಕೆ ಬ೦ದಾಗ, ಗೋಡ೦ಬಿ ಬೀಜಗಳು ಪೌಷ್ಟಿಕವಾದವುಗಳಾಗಿದ್ದು, ಸೇವಿಸಲು ಅನುಕೂಲಕರವಾದವುಗಳೂ ಕೂಡ ಆಗಿವೆ.
ಗೋಡ೦ಬಿ ಬೀಜಗಳು ಅನೇಕ ಪೋಷಕಾ೦ಶಗಳಿ೦ದ ಸಮೃದ್ಧವಾಗಿದ್ದು, ಅವು ನಿಮ್ಮ ದೇಹದ ಚಯಾಪಚಯ ಕ್ರಿಯೆಯನ್ನು ವೃದ್ಧಿಸುತ್ತವೆ ಹಾಗೂ ಜೊತೆಗೆ ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡಲು ನೆರವಾಗುತ್ತವೆ.

ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತದೆ

ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತದೆ

ಗೇರುಬೀಜದ ಸೇವನೆಯ ಅತ್ಯುತ್ತಮವಾದ ಲಾಭವೆಂದರೆ ಕ್ಯಾನ್ಸರ್ ಬರದಂತೆ ತಡೆಗಟ್ಟುವುದು. ಇದಕ್ಕೆ ಕಾರಣ ಗೋಡಂಬಿಯಲ್ಲಿರುವ Proanthocyanidins ಎಂಬ ಫ್ಲೇವನಾಲ್ ಕ್ಯಾನ್ಸರ್ ವಿರುದ್ಧ ಹೋರಾಡಲು ಶಕ್ತವಾಗಿರುವ ಪೋಷಕಾಂಶವಾಗಿದ್ದು ಕ್ಯಾನ್ಸರ್‌ಗೆ ಕಾರಣವಾಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ನಿಷ್ಕ್ರಿಯಗೊಳಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತದೆ

ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತದೆ

ಅಲ್ಲದೇ ಈಗಾಗಲೇ ಕ್ಯಾನ್ಸರ್ ಆವರಿಸಿದ್ದು ಪ್ರಾರಂಭಿಕ ಹಂತದಲ್ಲಿದ್ದರೆ ಇನ್ನಷ್ಟು ಹರಡುವುದನ್ನು ತಪ್ಪಿಸುತ್ತದೆ. ಗೋಡಂಬಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ತಾಮ್ರ ಕರುಳಿನ ಕ್ಯಾನ್ಸರ್ ಬರುವ ಸಂಭವವನ್ನು ಕಡಿಮೆಗೊಳಿಸುತ್ತದೆ.

ಹೃದಯದ ಕ್ಷಮತೆ ಹೆಚ್ಚಿಸುತ್ತದೆ

ಹೃದಯದ ಕ್ಷಮತೆ ಹೆಚ್ಚಿಸುತ್ತದೆ

ಗೋಡಂಬಿಯಲ್ಲಿರುವ ಓಲಿಕ್ ಆಮ್ಲ (Oleic acid) ಅಲ್ಪ ಪ್ರಮಾಣದಲ್ಲಿದ್ದರೂ ಹೃದಯಕ್ಕೆ ಉತ್ತಮ ಪೋಷಣೆ ನೀಡುವ ನಿಟ್ಟಿನಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹೃದಯದ ಕ್ಷಮತೆ ಹೆಚ್ಚಿಸುತ್ತದೆ

ಹೃದಯದ ಕ್ಷಮತೆ ಹೆಚ್ಚಿಸುತ್ತದೆ

ಶಾಹಿ ಅಡುಗೆಗಳಲ್ಲಿ ಬಳಸಿದರೂ ಗೋಡಂಬಿಯಲ್ಲಿ ಕೊಬ್ಬು ಅತ್ಯಲ್ಪ ಪ್ರಮಾಣದಲ್ಲಿರುವ ಕಾರಣ ರಕ್ತದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣ ಏರದಂತೆ ನೋಡಿಕೊಳ್ಳುತ್ತದೆ ಹಾಗೂ ಇದರಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು ಹೃದಯದ ಇತರ ತೊಂದರೆಗಳಿಂದ ರಕ್ಷಿಸುತ್ತದೆ. ಪರಿಣಾಮವಾಗಿ ಹೃದಯ ಸ್ತಂಭನದ ಸಾಧ್ಯತೆಯನ್ನು ಬಹುವಾಗಿ ಕುಗ್ಗಿಸುತ್ತದೆ.

ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ಗೋಡಂಬಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಮೆಗ್ನೀಶಿಯಂ ಇದನ್ನೊಂದು ಆರೋಗ್ಯಕರ ಆಹಾರವನ್ನಾಗಿಸಿದೆ. ಇದು ಅಧಿಕ ರಕ್ತದ ಒತ್ತಡವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಇಂದಿನ ಧಾವಂತದ ದಿನಗಳಲ್ಲಿ ಅಧಿಕ ರಕ್ತದೊತ್ತಡ ಎಲ್ಲೆಡೆ ಸಾಮಾನ್ಯವಾಗಿ ಕಂಡುಬರುತ್ತಿರುವಾಗ ಗೋಡಂಬಿ ಒಂದು ಆಪದ್ಭಾಂಧವನಂತೆ ಕೆಲಸ ಮಾಡುತ್ತದೆ.

ಕೂದಲ ಬಣ್ಣ ಬದಲಾಗದಂತೆ ನೋಡಿಕೊಳ್ಳುತ್ತದೆ

ಕೂದಲ ಬಣ್ಣ ಬದಲಾಗದಂತೆ ನೋಡಿಕೊಳ್ಳುತ್ತದೆ

ಗೋಡಂಬಿಯಲ್ಲಿರುವ ಉತ್ತಮ ಪ್ರಮಾಣದ ತಾಮ್ರ ಕೂದಲ ಹೊಳಪು ಮತ್ತು ಬಣ್ಣವನ್ನು ಉಳಿಸಿಕೊಳ್ಳಲು ನೆರವಾಗುತ್ತದೆ. ಕೂದಲು ನೆರೆಯಲು ತಾಮ್ರದ ಕೊರತೆ ಅಥವಾ ತಾಮ್ರವನ್ನು ಹಿಡಿದಿಟ್ಟುಕೊಳ್ಳುವ ಕ್ಷಮತೆ ಕಡಿಮೆಯಾಗುವುದೇ ಕಾರಣ ಎಂದು ಇತ್ತೀಚೆಗೆ ತಿಳಿದುಬಂದಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕೂದಲ ಬಣ್ಣ ಬದಲಾಗದಂತೆ ನೋಡಿಕೊಳ್ಳುತ್ತದೆ

ಕೂದಲ ಬಣ್ಣ ಬದಲಾಗದಂತೆ ನೋಡಿಕೊಳ್ಳುತ್ತದೆ

ಗೋಡಂಬಿಯನ್ನು ನಿಯಮಿತವಾಗಿ ಸೇವಿಸುತ್ತ ಬರುವ ಮೂಲಕ ಕೂದಲ ಬಣ್ಣ ನೆರೆಯುವುದನ್ನು ಆದಷ್ಟೂ ಮುಂದೆ ಹಾಕಲು ಸಾಧ್ಯ. ಅಷ್ಟೇ ಅಲ್ಲ, ನಿಯಮಿತವಾಗಿ ಸೇವಿಸುತ್ತಾ ಬಂದರೆ ಅಕಾಲಿಕವಾಗಿ ನೆರೆದಿದ್ದ ಕೂದಲು ಮತ್ತೆ ತನ್ನ ಸ್ವಾಭಾವಿಕ ಬಣ್ಣವನ್ನು ಪಡೆದುಕೊಳ್ಳುತ್ತದೆ.

ನರಗಳನ್ನು ಬಲಪಡಿಸುತ್ತದೆ

ನರಗಳನ್ನು ಬಲಪಡಿಸುತ್ತದೆ

ಗೋಡಂಬಿಯ ಉತ್ತಮ ಗುಣಗಳು ಇಷ್ಟೇ ಎಂದು ನಿಗದಿಪಡಿಸುವಂತಿಲ್ಲ. ಏಕೆಂದರೆ ಇದರಲ್ಲಿರುವ ಹಲವು ಪೋಷಕಾಂಶಗಳು ಎಷ್ಟರ ಮಟ್ಟಿಗೆ ಆರೋಗ್ಯಕ್ಕೆ ಪೂರಕ ಎಂಬುದನ್ನು ದಿನಗಳೆದಂತೆ ಸಂಶೋಧನೆಗಳು ತಿಳಿಸುತ್ತಾ ಬರುತ್ತಿವೆ. ಅಂತೆಯೇ ಇದರಲ್ಲಿರುವ ಮೆಗ್ನೀಶಿಯಂ ನರವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಇನ್ನೊಂದು ವಿಶೇಷವೆಂದರೆ ಮೂಳೆಗಳಿಗೆ ಅಂಟಿಕೊಂಡಿರುವ ನರಗಳ ಗೋಡೆಗಳ ಮೂಲಕ ಕ್ಯಾಲ್ಸಿಯಂ ನರಗಳ ಒಳಭಾಗ ಪ್ರವೇಶಿಸುವುದನ್ನು ತಡೆಯುತ್ತದೆ.

ನರಗಳನ್ನು ಬಲಪಡಿಸುತ್ತದೆ

ನರಗಳನ್ನು ಬಲಪಡಿಸುತ್ತದೆ

ಒಂದು ವೇಳೆ ಕ್ಯಾಲ್ಸಿಯಂ ಮೂಳೆಗಳಿಂದ ಸಡಿಲವಾಗಿ ನರಗಳು ಹೀರಿಕೊಳ್ಳುವಂತಾದರೆ ನರಗಳು ಗಟ್ಟಿಯಾಗಿಬಿಡುತ್ತವೆ. ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ಇತರ ದುಷ್ಪರಿಣಾಮಗಳನ್ನೂ ಹುಟ್ಟುಹಾಕುತ್ತದೆ. ಇದೇ ರೀತಿ ಸ್ನಾಯುಗಳೂ ಸೆಡೆತಗೊಳ್ಳುವುದರಿಂದ ರಕ್ಷಣೆ ಪಡೆಯುತ್ತವೆ ಮತ್ತು ಆರೋಗ್ಯಕ್ಕೆ ಅಗತ್ಯವಿರುವಷ್ಟೇ ಸಡಿಲತೆಯನ್ನು ಹೊಂದಲು ಸಾಧ್ಯವಾಗುತ್ತದೆ.

ವಿವಿಧ ಖನಿಜಗಳ ಆಗರವಾಗಿದೆ

ವಿವಿಧ ಖನಿಜಗಳ ಆಗರವಾಗಿದೆ

ಗೋಡಂಬಿಯಲ್ಲಿ ತಾಮ್ರ ಮತ್ತು ಮೆಗ್ನೀಶಿಯಂಗಳ ಹೊರತಾಗಿ ಇತರ ಖನಿಜಗಳೂ ಇವೆ. ಸೆಲೆನಿಯಂ, ಸತು ಮೊದಲಾದವು ಉತ್ತಮ ಪ್ರಮಾಣದಲ್ಲಿದ್ದು ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪೂರಕವಾಗಿವೆ.

ವಿಟಮಿನ್‌ಗಳ ಆಗರ

ವಿಟಮಿನ್‌ಗಳ ಆಗರ

ಗೋಡಂಬಿಯಲ್ಲಿ ವಿಟಮಿನ್B5 (Pantothenic Acid), ವಿಟಮಿನ್ B-1(Thiamin), ರೈಬೋಫ್ಲೋವಿನ್, ವಿಟಮಿನ್ B6 (Pyridoxine) ಮೊದಲಾದ ವಿಟಮಿನ್ನುಗಳಿವೆ. ಇವೆಲ್ಲವೂ ದೇಹಕ್ಕೆ ಅಗತ್ಯವಿರುವಷ್ಟು ಪ್ರಮಾಣದಲ್ಲಿಯೇ ಇರುವುದು ಒಂದು ಹೆಗ್ಗಳಿಕೆ. ಈ ವಿಟಮಿನ್ನುಗಳು ದೇಹದಲ್ಲಿದ್ದರೆ homocystinuria (ದೇಹ ಅತೀವವಾಗಿ ಕೃಶವಾಗುವುದು), dermatitis (ಚರ್ಮರೋಗ), sideroblastic anemia (ಅಸ್ಥಿಮಜ್ಜೆಯಲ್ಲಿ ಕೆಂಪುರಕ್ತಕಣಗಳ ಜೊತೆಗೆ ನೀಲಿ ರಕ್ತಕಣಗಳೂ ಉತ್ಪತ್ತಿಯಾಗುವುದು) ಮೊದಲಾದ ರೋಗಗಳಿಂದ ದೂರವಿರುತ್ತದೆ.

ಆರೋಗ್ಯಕರ ಮೂಳೆ ಮತ್ತು ಹಲ್ಲುಗಳಿಗೆ ಪೂರಕವಾಗಿದೆ

ಆರೋಗ್ಯಕರ ಮೂಳೆ ಮತ್ತು ಹಲ್ಲುಗಳಿಗೆ ಪೂರಕವಾಗಿದೆ

ಗೋಡಂಬಿಯಲ್ಲಿರುವ ಮೆಗ್ನೀಶಿಯಂ ಮತ್ತು ಕ್ಯಾಲ್ಸಿಯಂ ಮೂಳೆ ಮತ್ತು ಹಲ್ಲುಗಳ ದೃಢತೆಯನ್ನು ಹೆಚ್ಚಿಸಲು ಸಕ್ಷಮವಾಗಿವೆ. ಹಾಲಿನಲ್ಲಿಯೂ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇದ್ದರೂ ಕೇವಲ ಹಾಲು ಕುಡಿಯುವುದರಿಂದ ಕ್ಯಾಲ್ಸಿಯಂ ಮೂಳೆಗಳಿಗೆ ದಕ್ಕಲು ಸಾಧ್ಯವಿಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಆರೋಗ್ಯಕರ ಮೂಳೆ ಮತ್ತು ಹಲ್ಲುಗಳಿಗೆ ಪೂರಕವಾಗಿದೆ

ಆರೋಗ್ಯಕರ ಮೂಳೆ ಮತ್ತು ಹಲ್ಲುಗಳಿಗೆ ಪೂರಕವಾಗಿದೆ

ಅದಕ್ಕೆ ಜೇನು ಸೇರಿಸಿದಾಗಲೇ ಕ್ಯಾಲ್ಸಿಯಂ ಮೂಳೆಗಳು ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಇದೇ ಕೆಲಸವನ್ನು ಗೋಡಂಬಿ ನೇರವಾಗಿಯೇ ಮಾಡುತ್ತದೆ. ನಿತ್ಯವೂ ನಾಲ್ಕಾರು ಗೋಡಂಬಿಗಳನ್ನು ತಿನ್ನುತ್ತಾ ಬಂದರೆ ಮೂಳೆ ಮತ್ತು ಹಲ್ಲುಗಳು ಸದೃಢವಾಗಿರಲು ಸಾಧ್ಯವಾಗುತ್ತದೆ. ಅಲ್ಲದೇ ಗೋಡಂಬಿ ಒಸಡುಗಳಿಗೂ ಉತ್ತಮವಾಗಿದೆ.

English summary

Amazing Health Benefits Of Cashew Nuts

Whenever you think of dry fruits, the almonds, cashews, raisins, pistachios are the ones come toyour mind. A box of dry fruits can be a wonderful gift at any festival and occasion such as birthdays. Now, when you gift dry fruits to someone, you gift health. Cashews are one of the healthiest dry fruits among all. Cashew or popularly known as kaju is full of nutrients which keeps your body strong.
X
Desktop Bottom Promotion