For Quick Alerts
ALLOW NOTIFICATIONS  
For Daily Alerts

ಬಾದಾಮಿ ಎಣ್ಣೆಯಲ್ಲಿ ಅಡಗಿದೆ ಸರ್ವರೋಗ ನಿವಾರಕ ಶಕ್ತಿ!

By Super
|

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಯಾರಾದರೂ ಕೊಲ್ಲಿ ರಾಷ್ಟ್ರಗಳಿಂದ ಅಥವಾ ಅಮೇರಿಕಾದಿಂದ ಬರುವವರಿದ್ದರೆ ಅವರ ಹತ್ತಿರ ತರಿಸಲು ಹೇಳುತ್ತಿದ್ದ ವಸ್ತುಗಳಲ್ಲಿ ಪ್ರಮುಖವಾದುದು ಬಾದಾಮಿ ಎಣ್ಣೆ. ಏಕೆಂದರೆ ಆಗ ಭಾರತದಲ್ಲಿ ಬಾದಾಮಿ ಎಣ್ಣೆ ಸಿಗುತ್ತಲೇ ಇರಲಿಲ್ಲ. ಆದರೆ ಇಂದು ಪ್ರಮುಖ ಮಳಿಗೆಗಳಲ್ಲಿ ಲಭ್ಯವಿದೆ. ಅಂದ ಹಾಗೇ ಅಮೇರಿಕಾದಿಂದ ತರಿಸಿ ಹಚ್ಚಿಕೊಳ್ಳಬೇಕಾದರೆ ಈ ಎಣ್ಣೆಯ ಮಹತ್ವವೇನು?

ಈ ಬಗ್ಗೆ ನಮ್ಮ ತಾಯಂದಿರು ಚೆನ್ನಾಗಿ ಅರಿತಿದ್ದರು. ಚಳಿಗಾಲದಲ್ಲಿ ಮಕ್ಕಳು ಹೊರಹೋಗಬೇಕಾದರೆ ಕೈ, ತುಟಿ, ಕುತ್ತಿಗೆ, ಕಾಲುಗಳಿಗೆ ಹಚ್ಚಿ ಕಳುಹಿಸುತ್ತಿದ್ದರು. ಏಕೆಂದರೆ ಚಳಿಯಿಂದ ಚರ್ಮ ಒಡೆಯುವುದನ್ನು ಬಾದಾಮಿ ಎಣ್ಣೆ ತಡೆಯುತ್ತದೆ. ಬಾದಾಮಿ ಫಲಗಳಂತೆಯೇ ಬಾದಾಮಿ ಎಣ್ಣೆ ಸಹಾ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಉತ್ತಮವಾಗಿದೆ. ನಿಸರ್ಗ ನೀಡಿದ ಈ ಅದ್ಭುತ ಆಹಾರದ ಬಗ್ಗೆ ಇತರ ವಿವರಗಳನ್ನು ನೋಡೋಣ.

 /beauty/body-care/2012/almond-oil-as-a-beauty-product-004015.html

ಬಾದಾಮಿ ಎಣ್ಣೆ ವಿಟಮನ್ ಮತ್ತು ಖನಿಜಗಳ ಆಗರವಾಗಿದೆ
ಬಾದಾಮಿ ಎಣ್ಣೆ ಬೆಲೆಯಲ್ಲಿ ಕೊಂಚ ದುಬಾರಿಯಾದರೂ ಇದರಲ್ಲಿರುವ ಪೋಷಕಾಂಶಗಳನ್ನು ಗಣನೆಗೆ ತೆಗೆದುಕೊಂಡರೆ ಅತ್ಯಂತ ಶ್ರೀಮಂತವಾದ ಆಹಾರವಾಗಿದೆ. ಇದರಲ್ಲಿ ವಿಟಮಿನ್ ಇ, ಡಿ ಮತ್ತು ಪೊಟ್ಯಾಶಿಯಂ, ಮೆಗ್ನೀಶಿಯಂ ಮತ್ತು ಕ್ಯಾಲ್ಸಿಯಂ ನಂತಹ ಖನಿಜಗಳು ಹೇರಳವಾಗಿವೆ. ನಿಮ್ಮ ಅಡುಗೆಗಳಲ್ಲಿ ಕಡೆಯದಾಗಿ ಒಂದೆರಡು ತೊಟ್ಟು ಬಾದಾಮಿ ಎಣ್ಣೆ ಸೇರಿಸಿದರೆ ಅಡುಗೆಯ ಸ್ವಾದದ ಜೊತೆಗೆ ಪೌಷ್ಟಿಕತೆಯೂ ಹೆಚ್ಚುತ್ತದೆ. ಬಾದಾಮಿ ಎಣ್ಣೆ ನವಿರಾದ ಸಿಹಿ ಸ್ವಾದವನ್ನು ಹೊಂದಿರುವುದರಿಂದ ಅಡುಗೆಯ ರುಚಿಯೂ ಹೆಚ್ಚುತ್ತದೆ.

ಹೇರಳವಾಗಿರುವ ಫ್ಲೇವನಾಯ್ಡುಗಳು
ನಮ್ಮ ದೇಹದ ರೋಗ ನಿರೋಧಕ ಶಕ್ತಿಗೆ ಅಗತ್ಯವಿರುವ ಇಂಧನ ಆಂಟಿ ಆಕ್ಸಿಡೆಂಟುಗಳ ಮೂಲಕ ದೊರಕುತ್ತದೆ. ಫ್ಲೇವನಾಯ್ಡ್ ಎಂಬ ಆಂಟಿ ಆಕ್ಸಿಡೆಂಟುಗಳು ಬಾದಾಮಿಯಲ್ಲಿ, ಅದರಲ್ಲೂ ವಿಶೇಷವಾಗಿ ಬಾದಾಮಿಯ ಸಿಪ್ಪೆಯಲ್ಲಿ ಹೇರಳವಾಗಿವೆ. ಬಾದಾಮಿ ಎಣ್ಣೆಯನ್ನು ಸಿಪ್ಪೆ ಸಹಿತವಾಗಿದ್ದಾಗಲೇ ಹಿಂಡಿ ತೆಗೆದಿರುವ ಕಾರಣ ಈ ಫ್ಲೇವನಾಯ್ಡುಗಳು ಎಣ್ಣೆಯಲ್ಲಿಯೂ ಲಭ್ಯವಿದೆ. ಎಣ್ಣೆಗಿಂತಲೂ ಬಾದಾಮಿಯನ್ನು ಸಿಪ್ಪೆ ಸಹಿತವಾಗಿ ಒಣಫಲವಾಗಿ ತಿನ್ನುವುದರಿಂದ ಈ ಫ್ಲೇವನಾಯ್ಡುಗಳು ಗರಿಷ್ಟ ಪ್ರಮಾಣದಲ್ಲಿ ಲಭ್ಯವಾಗುತ್ತದೆ.

ಆರೋಗ್ಯಕರ ಮತ್ತು ಹೊಳಪುಳ್ಳ ಕೂದಲಿಗೆ ನೆರವಾಗುತ್ತದೆ
ಬಾದಾಮಿ ಎಣ್ಣೆಯನ್ನು ನೇರವಾಗಿ ಕೂದಲಿಗೆ ಹಚ್ಚಿಕೊಳ್ಳಬಹುದು. ಈ ಎಣ್ಣೆಯಲ್ಲಿ ಒಮೆಗಾ-6 ಕೊಬ್ಬಿನ ಆಮ್ಲವಿದೆ. ಈ ಆಮ್ಲ ತಲೆಯ ಚರ್ಮವನ್ನು ಪ್ರಚೋದಿಸಿ ರಕ್ತ ಪರಿಚಲನೆ ಹೆಚ್ಚಿಸುವ ಮೂಲಕ ಕೂದಲ ಬುಡದಿಂದ ಆರೋಗ್ಯಕರ ಕೂದಲು ಬೆಳೆಯಲು ನೆರವಾಗುತ್ತದೆ. ಜೊತೆಗೇ ಕೂದಲನ್ನು ಬುಡದಿಂದ ಬಲಪಡಿಸುವ ಕಾರಣ ತುದಿಯವರೆಗೂ ಕೂದಲು ಉತ್ತಮ ಪೋಷಣೆ ಪಡೆದು ಹೊಳಪು ಮತ್ತು ಬೆಳವಣಿಗೆ ಪಡೆಯುತ್ತದೆ. ಕೂದಲ ಬುಡಕ್ಕೆ ಹೆಚ್ಚಿನ ಪೋಷಕಾಂಶಗಳು ದೊರಕುವುದರಿಂದ ಉದುರುವುದು ಕಡಿಮೆಯಾಗಿ ಕೂದಲು ದಟ್ಟವಾಗಿ ಬೆಳೆಯಲು ನೆರವಾಗುತ್ತದೆ. ಬಾದಾಮಿ ಎಣ್ಣೆಯಲ್ಲಿದೆ 6 ಸೌಂದರ್ಯವರ್ಧಕ ಗುಣಗಳು

ಕೆಟ್ಟ ಕೊಲೆಸ್ಟ್ರಾಲ್ ತೊಲಗಿಸುತ್ತದೆ
ಬಾದಾಮಿ ಎಣ್ಣೆಯಲ್ಲಿ ಒಮೆಗಾ-3 ಕೊಬ್ಬಿನ ತೈಲವೂ ಇದೆ. ಈ ತೈಲ ರಕ್ತದಲ್ಲಿ ಸೇರಿದ ಬಳಿಕ ರಕ್ತನಾಳಗಳ ಒಳಗೆ ಅಂಟಿಕೊಂಡಿದ್ದ ಕೆಟ್ಟ ಕೊಲೆಸ್ಟ್ರಾಲ್ ಅಥವಾ (LDL-low density lipoprotein) ಗಳನ್ನು ಸಡಿಲಗೊಳಿಸಿ ಹೊರ ಅಟ್ಟಲು ನೆರವಾಗುತ್ತದೆ. ನಿಮ್ಮ ಅಡುಗೆಯಲ್ಲಿ ಸಾಧ್ಯವಾದಷ್ಟು ಪ್ರಮಾಣದಲ್ಲಿ ಬಾದಾಮಿ ಎಣ್ಣೆಯನ್ನು ಸೇರಿಸುವ ಮೂಲಕ ಮನೆಯವರೆಲ್ಲರ ಆರೋಗ್ಯವನ್ನು ಕಾಪಾಡಲು ಸಾಧ್ಯವಾಗುತ್ತದೆ.

English summary

Amazing Health Benefits of Almond Oil

We all remember the times when our mothers used to slip in a handful of almonds into our coat pockets on winter mornings when we were rushing to school. Almonds have long been the epitome of healthy eating. They are known for their nourishing goodness and their amazing properties.
X
Desktop Bottom Promotion