For Quick Alerts
ALLOW NOTIFICATIONS  
For Daily Alerts

ಅಲ್ಯುಮಿನಿಯಂ: ಪ್ರಾಣಕ್ಕೆ ಸಂಚಕಾರ ತರುವ ಸಂಚುಕೋರ

By Manu
|

ಹಿಂದಿನ ಕಾಲದಲ್ಲಿ ತಾಮ್ರದ, ಕಂಚಿನ ಮತ್ತು ಹಿತ್ತಾಳೆಯ ಪಾತ್ರೆಗಳನ್ನು ಅಡುಗೆಗಾಗಿ ಬಳಸಲಾಗುತ್ತಿತ್ತು. ಆದರೆ ತಾಮ್ರದ ಪಾತ್ರೆಯಲ್ಲಿ ನೇರವಾಗಿ ಆಹಾರ ಕಾಯಿಸುವುದರಿಂದ (ವಿಶೇಷವಾಗಿ ಹಾಲು) ಇದರಲ್ಲಿ ಅಗಾಧ ಪ್ರಮಾಣದಲ್ಲಿ ತಾಮ್ರ ದೇಹಕ್ಕೆ ಲಭ್ಯವಾಗಿ ಹಲವು ತೊಂದರೆಗಳಿಗೆ ಕಾರಣವಾಗಿತ್ತು, ಹಾಗಾಗಿ ಇದರ ಬೇಡಿಕೆ ಕೂಡ ಕಡಿಮೆಯಾಯಿತು

ಆದರೆ ತೊಂಬತ್ತರ ದಶಕದಿಂದ ಪ್ರಾರಂಭವಾದ ಅಲ್ಯೂಮಿನಿಯಂ ಪಾತ್ರೆಗಳು ಅಡುಗೆಮನೆಯ ಹಿತ್ತಾಳೆ, ಕಂಚು, ತಾಮ್ರದ ಪಾತ್ರೆಗಳನ್ನೆಲ್ಲಾ ಅಟ್ಟಕ್ಕೇರಿಸಿ ವಿವಿಧ ರೂಪದಲ್ಲಿ ವಿರಾಜಿಸಿದವು. ಕುಕ್ಕರ್, ಕೈಪಾತ್ರೆ, ದೊಡ್ಡ ಪಾತ್ರೆ, ಇಡ್ಲಿ ಪಾತ್ರೆ, ಕಾವಲಿ, ಅಷ್ಟೇ ಏಕೆ ಒಳಗೆ ಕಪ್ಪಗಿನ ಪದರವನ್ನು ಹಚ್ಚಿಸಿಕೊಂಡು ನಾನ್ ಸ್ಟಿಕ್ ರೂಪದಲ್ಲಿಯೂ ಲಭ್ಯವಾಗತೊಡಗಿದವು.

ಇತ್ತೀಚಿನ ಸಂಶೋಧನೆಗಳ ಪ್ರಕಾರ ಅಲ್ಯೂಮಿನಿಯಂ ಸಹಾ ಅಡುಗೆಗೆ ಸುರಕ್ಷಿತವಾದ ಲೋಹವಲ್ಲ! ಪ್ರತಿ ಬಾರಿ ಅಲ್ಯೂಮಿನಿಯಂ ಪಾತ್ರೆಯಲ್ಲಿ ಅಡುಗೆ ಮಾಡಿದಾಗ ಅತ್ಯಲ್ಪ ಪ್ರಮಾಣದಲ್ಲಿ ಅಲ್ಯೂಮಿನಿಯಂ ಕರಗಿ ಜೀರ್ಣಾಂಗಗಳ ಮೂಲಕ ನಮ್ಮ ದೇಹ ಸೇರುತ್ತದೆ. ಅಷ್ಟೇ ಏಕೆ ಪಟಾಕಿಗಳು ಸಿಡಿಯಲು ಅಗತ್ಯವಾದ ಅಲ್ಯೂಮಿನಿಯಂ ಪಟಾಕಿ ಸಿಡಿದ ಬಳಿದ ಗಾಳಿಯಲ್ಲಿ ಸೂಕ್ಷ್ಮ ಕಣದ ರೂಪದಲ್ಲಿ ಉಸಿರಾಟದ ಮೂಲಕ ಮತ್ತು ಮುಟ್ಟುವುದರಿಂದಲೂ ಅತಿ ಕಡಿಮೆ ಪ್ರಮಾಣದಲ್ಲಿ ಚರ್ಮದ ಮೂಲಕವೂ ಒಳಬರಬಹುದು. ಮೈಕ್ರೋವೇವ್ ಅಡುಗೆಗೆ ಕೆಲ ಸಲಹೆಗಳು

ಯಾವುದೇ ರೂಪದಲ್ಲಿ ಅಲ್ಯೂಮಿನಿಯಂ ದೇಹ ಸೇರಿದರೂ ತೊಂದರೆಯಂತೂ ಖಚಿತ. ಜೀರ್ಣವಾದ ಬಳಿಕ ಯಾವುದೇ ಪರಿಣಾಮಕ್ಕೆ ಒಳಗಾಗದೇ ನೇರವಾಗಿ ರಕ್ತವನ್ನು ಸೇರುವ ಅಲ್ಯೂಮಿನಿಯಂ ಕಣಗಳು ಲೀಲಾಜಾಲವಾಗಿ ಮೂತ್ರಪಿಂಡಗಳು ಮೊದಲಾದ ಸೂಕ್ಷ್ಮ ಅಂಗಗಳ ಒಳಗೆ ಸೇರಿಕೊಳ್ಳುತ್ತವೆ. ಇಲ್ಲಿ ರಕ್ತವನ್ನು ಶೋಧಿಸುವಾಗ ಅಲ್ಯೂಮಿನಿಯಂ ಕಣಗಳು ಅಲ್ಲೇ ಉಳಿದು ನಿಧಾನವಾಗಿ ಪ್ರಮಾಣ ಏರುತ್ತಾ ಹೋಗುತ್ತದೆ. ಸಾಮಾನ್ಯರಲ್ಲಿ ಇದು ಅಷ್ಟು ತೊಂದರೆ ಕೊಡದೇ ಹೋದರೂ ಮೂತ್ರಪಿಂಡಗಳು ವಿಫಲರಾಗಿ ಡಯಾಲಿಸಿಸ್ ನಲ್ಲಿರುವವರಿಗೆ ಅತಿ ಅಪಾಯಕಾರಿಯಾಗಿದೆ.

ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ

ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ

ಅಯಾನ್‌ಗಳ ರೂಪ ಪಡೆದ ಅಲ್ಯೂಮಿನಿಯಂ ಮೆದುಳನ್ನು ಸೇರಿದರೆ ನರಮಂಡಲದ ಮೇಲೆ ಪ್ರಭಾವ ಬೀರಿ ಅಲ್ಝೀಮರ್ಸ್ ಕಾಯಿಲೆ ಬರುವ ಸಾಧ್ಯತೆ ಬಹಳಷ್ಟು ಹೆಚ್ಚುತ್ತದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಆದ್ದರಿಂದ ಅಲ್ಯೂಮಿನಿಯಂ ಪಾತ್ರೆಗಳ ಬದಲಾಗಿ ಸ್ಟೇನ್ ಲೆಸ್ ಸ್ಟೀಲ್ ಪಾತ್ರೆಗಳನ್ನು ಬಳಸುವುದು ಹಿತಕರ.

ಬುದ್ಧಿಮಾಂದ್ಯತೆ ಎದುರಾಗಬಹುದು

ಬುದ್ಧಿಮಾಂದ್ಯತೆ ಎದುರಾಗಬಹುದು

ಅಲ್ಯೂಮಿನಿಯಂ ನ ಪಾತ್ರೆಯ ಸತತ ಬಳಕೆಯಿಂದ ಮೆದುಳಿನ ಕ್ಷಮತೆಯನ್ನು ಕಡಿಮೆಗೊಳಿಸುತ್ತಾ ಬರುತ್ತದೆ. ನಿಧಾನವಾಗಿ ಮೆದುಳಿನ ಕಾರ್ಯಗಳು ಕುಂಠಿತಗೊಳ್ಳುತ್ತಾ ಬುದ್ಧಿಮಾಂದ್ಯತೆಯೂ ಆವರಿಸಬಹುದು. ಮರೆವು, ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲಾಗದಿರುವುದು, ಕ್ಷಿಪ್ರವಾದ ಪ್ರತಿಕ್ರಿಯೆ ನೀಡಲಾಗದಿರುವುದು ಮೊದಲಾದ ತೊಂದರೆಗಳು ಎದುರಾಗಬಹುದು.

ಮರೆವು ಹೆಚ್ಚಾಗಬಹುದು

ಮರೆವು ಹೆಚ್ಚಾಗಬಹುದು

ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಅಡುಗೆ ಮಾಡುವಾಗ ಬಿಸಿಯಾಗಿರುವ ಅಲ್ಯೂಮಿನಿಯಂ ಲೋಹದ ಮೇಲೆ ಕಲಕುವಾದ ಆಗುವ ಘರ್ಷಣೆಯಿಂದ ಅಲ್ಯೂಮಿನಿಯಂ ಅಯಾನ್ ಗಳು ಉತ್ಪತ್ತಿಯಾಗುತ್ತವೆ. ಇವು ಆಹಾರದ ಮೂಲಕ ದೇಹವನ್ನು ಸೇರಿ ಮೆದುಳಿನ ಮೇಲೆ ಪ್ರಭಾವ ಬೀರುತ್ತವೆ. ಮರೆಗುಳಿತನ ಈ ಅಯಾನ್‌ಗಳ ಕಾಟದ ಪ್ರಮುಖ ತೊಂದರೆಯಾಗಿದೆ.

ಜಡತ್ವವನ್ನು ಹೆಚ್ಚಿಸುತ್ತದೆ

ಜಡತ್ವವನ್ನು ಹೆಚ್ಚಿಸುತ್ತದೆ

ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಮಾಡಿದ ಅಡುಗೆಯನ್ನೇ ಬಳಸುತ್ತಿದ್ದೀರಾ? ಹಾಗಾದರೆ ದಿನದ ಹೆಚ್ಚು ಹೊತ್ತು ಜಡತ್ವ ನಿಮ್ಮನ್ನು ಕಾಡುತ್ತಿರಬಹುದು. ದೇಹದ ಚೈತನ್ಯ ಸತತವಾಗಿರಲು ಅಡ್ಡಿಪಡಿಸುವ ಅಲ್ಯೂಮಿನಿಯಂ ಜಡತನವನ್ನು ಪ್ರಚೋದಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಜಡತ್ವಕ್ಕೆ ಕಾರಣವಾಗಬಹುದು

ಜಡತ್ವಕ್ಕೆ ಕಾರಣವಾಗಬಹುದು

ಒಂದು ವೇಳೆ ಇಡಿಯ ದಿನ ಸುಸ್ತು, ಜಡತನ, ಎದ್ದು ನಿಲ್ಲಲೂ ನಿರಾಸಕ್ತಿಯಾಗಿದ್ದರೆ ನಿಮ್ಮ ದೇಹದಲ್ಲಿರುವ ಅಲ್ಯೂಮಿನಿಯಂ ಪ್ರಮಾಣವನ್ನು ತಿಳಿಯುವ ಪರೀಕ್ಷೆ ಮಾಡಿಸಿಕೊಳ್ಳಿ. ಒಂದು ವೇಳೆ ಅಲ್ಯೂಮಿನಿಯಂ ಗರಿಷ್ಟ ಪ್ರಮಾಣಕ್ಕಿಂತಲೂ ಹೆಚ್ಚಿದ್ದರೆ ಕೂಡಲೇ ಅಲ್ಯೂಮಿನಿಯಂ ಪಾತ್ರೆಗಳನ್ನು ತ್ಯಜಿಸಿ.

ಮೂಳೆಗಳಲ್ಲಿ ಗಾಳಿಗುಳ್ಳೆಗಳನ್ನು ತುಂಬಿಸಿ ಶಿಥಿಲವಾಗಿಸುತ್ತದೆ (Osteoporosis)

ಮೂಳೆಗಳಲ್ಲಿ ಗಾಳಿಗುಳ್ಳೆಗಳನ್ನು ತುಂಬಿಸಿ ಶಿಥಿಲವಾಗಿಸುತ್ತದೆ (Osteoporosis)

ಮೂಳೆಗಳಿಗೆ ದೃಢತೆ ನೀಡುವ ಕ್ಯಾಲ್ಸಿಯಂ ಸತತವಾಗಿ ಪೂರೈಕೆಯಾಗುತ್ತಲೇ ಇರಬೇಕು. ಒಂದು ವೇಳೆ ಅಲ್ಯೂಮಿನಿಯಂ ಪ್ರಮಾಣ ದೇಹದಲ್ಲಿ ಹೆಚ್ಚಿದ್ದರೆ ಕ್ಯಾಲ್ಸಿಯಂ ಅನ್ನು ಮೂಳೆಗಳು ಹೀರಿಕೊಳ್ಳಲು ಅಸಾಧ್ಯವಾಗುತ್ತದೆ.

ಮೂಳೆಗಳಲ್ಲಿ ಗಾಳಿಗುಳ್ಳೆಗಳನ್ನು ತುಂಬಿಸಿ ಶಿಥಿಲವಾಗಿಸುತ್ತದೆ

ಮೂಳೆಗಳಲ್ಲಿ ಗಾಳಿಗುಳ್ಳೆಗಳನ್ನು ತುಂಬಿಸಿ ಶಿಥಿಲವಾಗಿಸುತ್ತದೆ

ಪರಿಣಾಮವಾಗಿ ಮೂಳೆಗಳಲ್ಲಿ ನಿಧಾನವಾಗಿ ಗಾಳಿಗುಳ್ಳೆಗಳಂತೆ ಟೊಳ್ಳಾಗಲು ಪ್ರಾರಂಭವಾಗುತ್ತವೆ. ಇವು ಸುಲಭವಾಗಿ ಮುರಿಯುವ ಸಾಧ್ಯತೆ ಇದೆ. ಅದರಲ್ಲೂ ಮಹಿಳೆಯರಿಗೆ ಈ ತೊಂದರೆ ಕಡಿಮೆ ವಯಸ್ಸಿನಲ್ಲಿಯೇ ಆವರಿಸಿಕೊಳ್ಳಬಹುದು. ಚಿಕ್ಕದಾಗಿ ಜಾರಿದರೂ ಮೂಳೆ ಮುರಿತದ ಸಾಧ್ಯತೆ ಹೆಚ್ಚಾಗುತ್ತದೆ.

ಮೂತ್ರಪಿಂಡಗಳ ಕ್ಷಮತೆ ಕುಗ್ಗುತ್ತದೆ

ಮೂತ್ರಪಿಂಡಗಳ ಕ್ಷಮತೆ ಕುಗ್ಗುತ್ತದೆ

ರಕ್ತದಲ್ಲಿರುವ ಅಲ್ಯೂಮಿನಿಯಂ ಶೋಧಿಸುತ್ತಾ ಮೂತ್ರಪಿಂಡಗಳ ಒಳಗೆ ಇದರ ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ. ಪರಿಣಾಮವಾಗಿ ಮೂತ್ರಪಿಂಡಗಳು ವಿಫಲಗೊಳ್ಳುವ ಸಾಧ್ಯತೆ ಹೆಚ್ಚುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮೂತ್ರಪಿಂಡಗಳ ಕ್ಷಮತೆ ಕುಗ್ಗುತ್ತದೆ

ಮೂತ್ರಪಿಂಡಗಳ ಕ್ಷಮತೆ ಕುಗ್ಗುತ್ತದೆ

ಈಗಾಗಲೇ ಡಯಾಲಿಸಿಸ್ ನಲ್ಲಿರುವ ರೋಗಿಗಳಿಗೆ ಈ ಪ್ರಮಾಣ ಮಾರಕವಾಗಿದೆ. ಮೂತ್ರಪಿಂಡಗಳ ಜೊತೆಗೇ ದೊಡ್ಡ ಕರುಳು ಮತ್ತು ರಕ್ತ ಸಹಾ ಸೋಂಕಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚುತ್ತವೆ.

ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚುತ್ತದೆ

ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚುತ್ತದೆ

ಅಲ್ಯೂಮಿನಿಯಂ ನಿಂದ ಕ್ಯಾನ್ಸರ್ ಬರುತ್ತದೆ ಎಂದು ಇದುವರೆಗೆ ಯಾವುದೇ ಸಂಶೋಧನೆಯಿಂದ ದೃಢಪಡದೇ ಇದ್ದರೂ ದೊಡ್ಡಕರುಳಿನ ಕಾರ್ಯವೈಖರಿಯಲ್ಲಿ ಬಾಧತೆ ಉಂಟಾಗುವ ಪ್ರಮಾಣ ಮತ್ತು ಇದರಿಂದ ಏರುಪೇರಾಗುವ ಸಮತೋಲನವನ್ನು ಗಮನಿಸಿದರೆ ದೊಡ್ಡ ಕರುಳಿನ ಕ್ಯಾನ್ಸರ್ ಎರಗುವ ಸಾಧ್ಯತೆಗಳು ದಟ್ಟವಾಗುತ್ತಾ ಹೋಗುತ್ತದೆ.

ಹಾಗಾದರೆ ಸುರಕ್ಷಿತವಾದ ಪಾತ್ರೆಗಳು ಯಾವುವು?

ಹಾಗಾದರೆ ಸುರಕ್ಷಿತವಾದ ಪಾತ್ರೆಗಳು ಯಾವುವು?

ತಜ್ಞರ ಪ್ರಕಾರ ಆಹಾರ ತಯಾರಿಸಲು ಅತ್ಯುತ್ತಮ ಲೋಹವೆಂದರೆ ಬೀಡುಕಬ್ಬಿಣ (cast iron). ಆದರೆ ಇದನ್ನು ಕೇವಲ ಎರಕ ಹೊಯಿದು ತಯಾರಿಸಬಹುದಾದುದರಿಂದ ಕಾವಲಿ, ಬಾಣಲೆಗಳ ರೂಪದಲ್ಲಿ ಮಾತ್ರ ಲಭ್ಯ. ಇದನ್ನು ಬಿಟ್ಟರೆ ಸ್ಟೇನ್ ಲೆಸ್ ಸ್ಟೀಲ್ ಪಾತ್ರೆ ಉತ್ತಮವಾಗಿದೆ.

ಹಾಗಾದರೆ ಸುರಕ್ಷಿತವಾದ ಪಾತ್ರೆಗಳು ಯಾವುವು?

ಹಾಗಾದರೆ ಸುರಕ್ಷಿತವಾದ ಪಾತ್ರೆಗಳು ಯಾವುವು?

ಇತ್ತೀಚೆಗೆ ಅಲ್ಯೂಮಿನಿಯಂನ ಸುಧಾರಿತ ರೂಪವಾದ Hard Anodised Aluminium ಎಂಬ ಕಪ್ಪಗಿನ ಪಾತ್ರೆಗಳು ಜನಪ್ರಿಯವಾಗುತ್ತಿವೆ. ಯಾವುದೇ ನಾನ್‌ಸ್ಟಿಕ್ ಪಾತ್ರೆಗಳಿಗೂ ಕಡಿಮೆಯಿಲ್ಲದ ಫಲಿತಾಂಶ ನೀಡುವ ಇವುಗಳನ್ನು ಬಳಸುವುದು ಉತ್ತಮ. ಇನ್ನುಳಿದಂತೆ ಗಾಜಿನ, ಸಿರಾಮಿಕ್ ಪಾತ್ರೆಗಳು ಸಹಾ ಉತ್ತಮವಾಗಿವೆ. ಅಲ್ಯೂಮಿನಿಯಂ ಗೆ ಕೆಲವು ಇತರ ಲೋಹಗಳನ್ನು ಸೇರಿಸಿ ಮಾಡಿದ ಹಿಂಡಾಲಿಯಂ ಪಾತ್ರೆಗಳನ್ನು ಬಳಸಬಹುದು. ಅಚ್ಚರಿ ಎಂದರೆ ಮಣ್ಣಿನ ಮಡಕೆಯಲ್ಲಿ ತಯಾರಿಸಿದ ಆಹಾರದಲ್ಲಿ ಯಾವುದೇ ಅಪಾಯವಿಲ್ಲ ಎಂದು ತಿಳಿದುಬಂದಿದೆ. ಅಂದರೆ ಮಡಕೆಗೆ ಶುಕ್ರದೆಸೆ ಕಾದಿದೆಯೇ?

English summary

Aluminum Vessels: A Silent Killer

Aluminum utensils are a common object that is used in many Indian homes and cooking food in these aluminum vessels is very dangerous to health. When the food is cooked in these vessels, it absorbs aluminum and dissolves into the food and water during the cooking process. This absorbed aluminum goes into the bloodstream and gets accumulated in the organs thus, causing adverse effects on one's health.
X
Desktop Bottom Promotion