For Quick Alerts
ALLOW NOTIFICATIONS  
For Daily Alerts

ಕಚೇರಿ ಅವಧಿಯಲ್ಲಿ ತಿನ್ನುವ ಆಹಾರದ ಮೇಲೆ ಕಣ್ಣಿಡಿ!

|

ನೀವು ಪ್ರತಿದಿನ 6 ರಿಂದ 8 ಗಂಟೆಗಳ ಕಾಲ ಕಚೇರಿಯಲ್ಲಿಯೇ, ಕಾಲ ಕಳೆಯುತ್ತೀರಿ. ಆದರೆ ನಮ್ಮಲ್ಲಿ ಬಹುತೇಕ ಮಂದಿಗೆ ಕಚೇರಿಯಲ್ಲಿ ಕೆಟ್ಟ ತಿಂಡಿಗಳನ್ನು ತಿನ್ನುವ ಅಭ್ಯಾಸವನ್ನು ಇರಿಸಿಕೊಂಡಿರುತ್ತಾರೆ. ಕಚೇರಿಯಲ್ಲಿ ಕೆಟ್ಟ ತಿಂಡಿ ತಿನ್ನುವ ನಿಮ್ಮ ಅಭ್ಯಾಕ್ಕೆ ವಿದಾಯ ಹೇಳಿ ಎಂದು ಶ್ರೀಮತಿ. ದಿವ್ಯಾ ಚೌಧರಿ, ಹಿರಿಯ ನ್ಯೂಟ್ರಿಷಿಯನಿಸ್ಟ್ -ಫೊರ್ಟಿಸ್ ಆಸ್ಪತ್ರೆ, ನವದೆಹಲಿ ತಮ್ಮ ಈ ಲೇಖನದಲ್ಲಿ ಕೋರಿಕೊಳ್ಳುತ್ತಿದ್ದರೆ.

ಕಚೇರಿಯಲ್ಲಿ ಅಂತಿಂಥಹ ತಿಂಡಿಗಳನ್ನು ತಿನ್ನುವುದನ್ನು ಬಿಡಬೇಕು ಎಂದರೆ, ಮೊದಲು ಉಪಾಹಾರವನ್ನು ಸರಿಯಾಗಿ ಸೇವಿಸಿ. ಆಗ ನಿಮಗೆ ಸುಮ್ಮನೆ ಹಸಿವಾಗುವುದಿಲ್ಲ. ಹಸಿವಾಗದೆ ನೀವು ತಿನ್ನಲು ಹೋಗುವುದಿಲ್ಲ. ಒಂದು ವೇಳೆ ದಿನದ ಈ ಪ್ರಮುಖ ತಿಂಡಿಯನ್ನು ತಿನ್ನುವುದನ್ನು ನೀವು ಮರೆತರೆ, ಮಧ್ಯಾಹ್ನ ನಿಮ್ಮ ಕಣ್ಣಿಗೆ ತಿನ್ನುವಂತಹದು ಯಾವುದೇ ಸಿಕ್ಕರು, ಅದನ್ನು ನೀವು ತಿನ್ನುತ್ತೀರಿ. ಆದ್ದರಿಂದ ಉಪಾಹಾರವನ್ನು ಯಾವುದೇ ಕಾರಣಕ್ಕು ಮಿಸ್ ಮಾಡಬೇಡಿ. ಬನ್ನಿ ಇನ್ನುಳಿದ ಉಪಾಹಾರದ ಸಲಹೆಗಳನ್ನು ಮುಂದೆ ನೀಡಿದ್ದೀವಿ ಓದಿ ತಿಳಿದುಕೊಳ್ಳಿ. ಆಹಾ! ಬಿಸಿ ಬಿಸಿ ಶುಂಠಿ ಚಹಾದ ಅತ್ಯುನ್ನತ ಪ್ರಯೋಜನಗಳೇನು?

ನಿಮ್ಮ ಕಾಫಿ ಮಷಿನ್‍ನೊಂದಿಗೆ ಉತ್ತಮ ಭಾಂದವ್ಯವನ್ನು ಇರಿಸಿಕೊಳ್ಳಿ. ಕೆಫಿನ್ ನಿಮ್ಮ ಹೃದಯಕ್ಕೆ ಮತ್ತು ಶ್ವಾಸಕೋಶಕ್ಕೆ ಪೂರಕವಾಗಿರುತ್ತದೆ. ಆದರೆ ಇದರ ಜೊತೆಗೆ ಅಧಿಕ ಭಾಂದವ್ಯವನ್ನು ಇರಿಸಿಕೊಳ್ಳುವುದು ಒಳ್ಳೆಯದಲ್ಲ. ದಿನಕ್ಕೆ ಎರಡು ಕಪ್ ಕಾಫಿಗೆ ನಿಮ್ಮ ಸೇವನೆಯ ಮಿತಿಯನ್ನು ಇರಿಸಿಕೊಳ್ಳಿ. ಕಾಫಿ ಕುಡಿದ ಮೇಲೆ ಎರಡು ಲೋಟ ನೀರು ಕುಡಿಯುವುದನ್ನು ಮರೆಯಬೇಡಿ. ಇದರಿಂದ ಕೆಫಿನ್‍ನ ದುಷ್ಪರಿಣಾಮವು ನಿಮ್ಮ ದೇಹದ ಮೇಲೆ ಅಷ್ಟಾಗಿ ಆಗುವುದಿಲ್ಲ.

Adopt these healthy office habits

ತಣ್ಣೀರು ಕುಡಿಯುವ ಬದಲು ಉಗುರು ಬೆಚ್ಚಗಿನ ನೀರನ್ನು ಸೇವಿಸಿ. ಬೆಚ್ಚಗಿನ ನೀರಿನಲ್ಲಿ ಈ ಕೆಳಕಂಡ ಆರೋಗ್ಯಕಾರಿ ಪ್ರಯೋಜನಗಳು ಲಭಿಸುತ್ತವೆ. ಅವುಗಳೆಂದರೆ,
*ಇದು ನಿಮ್ಮ ದೇಹದಲ್ಲಿರುವ ಟಾಕ್ಸಿನ್‍ಗಳನ್ನು ಹೊರಹಾಕುತ್ತದೆ. ಇವುಗಳು ಹೆಚ್ಚಾದಷ್ಟು ಮೈಕೈ, ತಲೆನೋವು ಕಾಣಿಸಿಕೊಳ್ಳುತ್ತದೆ.
*ಬೆಚ್ಚಗಿನ ನೀರು ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ. ಗ್ಯಾಸ್ಟ್ರಿಕ್ ಮತ್ತು ಕೋಲನ್ ಸಂಬಂಧಿತ ಸಮಸ್ಯೆಗಳನ್ನು ಇದು ದೂರ ಮಾಡುತ್ತದೆ.
*ಬೆಚ್ಚಗಿನ ನೀರು ನಿಮ್ಮ ತ್ವಚೆಗೆ ನೀರಿನಂಶವನ್ನು ಸದಾ ಒದಗಿಸುತ್ತದೆ. ಕಜ್ಜಿ, ಸೋರಿಯಾಸಿಸ್, ಒಣ ತ್ವಚೆ, ಸುಕ್ಕು ಇತ್ಯಾದಿ ಸಮಸ್ಯೆಗಳನ್ನು ಇದರಿಂದ ನಿವಾರಿಸಬಹುದು. ಮನೆಯಿಂದಲೆ ಆರೋಗ್ಯಕರವಾದ ಆಹಾರವನ್ನು ಸಾಧ್ಯವಾದರೆ ಕೊಂಡು ಹೋಗುವುದು ಉತ್ತಮ. ಮನೆಯಿಂದಲೆ ಆಹಾರವನ್ನು ತೆಗೆದುಕೊಂಡು ಹೋಗುವುದರಿಂದ, ಅದು ಇನ್‍ಫೆಕ್ಷನ್ ರಹಿತ, ರುಚಿಕರ ಮತ್ತು ಶುಚಿಕರವಾಗಿರುತ್ತದೆ. ಕ್ಯಾಂಟೀನ್ ಅಥವಾ ರೆಸ್ಟೋರೆಂಟ್ ಆಹಾರಗಳನ್ನು ಅಧಿಕವಾಗಿ ಸೇವಿಸುವುದರಿಂದ ನಿಮಗೆ ಪೋಷಕಾಂಶವು ದೊರೆಯುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ನಿಮ್ಮ ಆರೋಗ್ಯವು ಸಹ ಕೆಡುತ್ತದೆ. ಆಗಾಗಿ ಮನೆಯ ಆರೋಗ್ಯಕರ ಆಹಾರವನ್ನೆ ಸೇವಿಸಿ. ಎಚ್ಚರ: ಮೂತ್ರದ ಬಣ್ಣದಲ್ಲಿ ಏರುಪೇರಾದರೆ ಅಪಾಯ ಕಟ್ಟಿಟ್ಟ ಬುತ್ತಿ..!

ಒಂದು ವೇಳೆ ನೀವು ಕ್ಯೂಬಿಕಲ್‍ನಲ್ಲಿಯೇ ಉಳಿದುಕೊಳ್ಳಬೇಕು ಎಂದಾದಲ್ಲಿ ಆದಷ್ಟು ಆಹಾರವನ್ನು ಆರೋಗ್ಯಕರ ವಾತಾವರಣದಲ್ಲಿ, ಸಾವಧಾನವಾಗಿ ಸೇವಿಸಿ. ಚೆನ್ನಾಗಿ ನೀರು ಕುಡಿಯಿರಿ. ಯಾವಾಗಲು ಹಣ್ಣುಗಳನ್ನು ತೆಗೆದುಕೊಂಡು ಹೋಗಿ. ಇದರಿಂದ ನಿಮ್ಮ ತೂಕವು ಸಹ ಹೆಚ್ಚುಗುವುದಿಲ್ಲ. ಕಡಲೆ, ವೋಲ್ ಗ್ರೇನ್ ಕ್ರ್ಯಾಕರ್ ಮುಂತಾದವುಗಳನ್ನು ಸೇವಿಸಿ. ಬಿಸ್ಕೆಟ್ ಮುಂತಾದ ತಿನಿಸುಗಳನ್ನು ಸೇವಿಸುವುದನ್ನು ಕಡಿಮೆ ಮಾಡಿ. ಇದರ ಜೊತೆಗೆ ಉಪ್ಪು ಹಾಕದ ಬಾದಾಮಿ, ವಾಲ್‍ನಟ್ ಅಥವಾ ಸಿಹಿರಹಿತ ಫಿಗ್ಸ್ ಸೇವಿಸಿ. ಬಹುಗುಣಿ ಗೋಡಂಬಿಯ ವಿಸ್ಮಯಕರ ಆರೋಗ್ಯಕಾರಿ ಪ್ರಯೋಜನಗಳೇನು?

ಕಚೇರಿಯಲ್ಲಿ ಆರೋಗ್ಯಕರವಾಗಿ ಊಟ ಮಾಡುವುದು ಹೇಗೆ: ಕಚೇರಿಯಲ್ಲಿ ಯಾವಾಗಲು ಆರೋಗ್ಯಕಾರವಾದ ಯೋಗರ್ಟ್, ಕಾಟೇಜ್ ಚೀಸ್, ಕಡಿಮೆ ಕೊಬ್ಬಿರುವ ಚೀಸ್, ನಿಮ್ಮ ಮೆಚ್ಚಿನ ಹಣ್ಣುಗಳು, ಹಮ್ಮಸ್, ಕಚ್ಛಾ ತರಕಾರಿಗಳು ಮುಂತಾದವುಗಳ ಬುಟ್ಟಿಯನ್ನು ನಿಮ್ಮ ಕಚೇರಿಯ ರೆಫ್ರಿಜಿರೇಟರಿನಲ್ಲಿಡಿ. ಅವುಗಳನ್ನು ನಿಮ್ಮ ಹೆಸರಿನಲ್ಲಿ ಬರೆದು, ಮುಚ್ಚಿಡುವುದನ್ನು ಮರೆಯಬೇಡಿ. ಇದು ನಿಮ್ಮ ಕಚೇರಿಯ ಬಿಡುವಿನಲ್ಲಿ ನಿಮ್ಮನ್ನು ಸಾಮಾನ್ಯ ಫ್ಲೂ ಜ್ವರಕ್ಕೂ ಹಂದಿ ಜ್ವರಕ್ಕೂ ಇರುವ ವ್ಯತ್ಯಾಸವೇನು?

ಕೈಬೀಸಿ ಕರೆಯುತ್ತದೆ. ಇದನ್ನು ಸೇವಿಸುವುದರಿಂದ ನಿಮಗೆ ಆರೋಗ್ಯವು ಸಹ ಬರುತ್ತದೆ. ನಿಮ್ಮ ಮನಸ್ಸಿಗೆ ಮುದ ಸಹ ಬರುತ್ತದೆ. ಆದರೆ ಯಾವುದೇ ಕಾರಣಕ್ಕು ತಿಂಡಿಪೋತರಾಗಬೇಡಿ. ಅದು ಸಹೋದ್ಯೋಗಿಯ ಹುಟ್ಟಿದ ಹಬ್ಬ, ಕ್ಲೈಂಟ್ ನೀಡುವ ಪಾರ್ಟಿ ಹೀಗೆ ಯಾವುದಾದರು ನಿಮ್ಮ ಮಿತಿಯಲ್ಲಿ ನೀವು ಇರಿ.

English summary

Adopt these healthy office habits

You spend approximately 6 to 8 waking hours in your office. But are you aware of the fact that for most of us, the office is a hub of bad diet decisions accompanied with a sedentary lifestyle.
Story first published: Saturday, February 21, 2015, 17:05 [IST]
X
Desktop Bottom Promotion