For Quick Alerts
ALLOW NOTIFICATIONS  
For Daily Alerts

ರಾತ್ರಿಯ ಊಟವನ್ನು ಕ್ರಮಬದ್ಧವಾಗಿಸುವ 8 ಅಂಶಗಳು

|

ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟಕ್ಕೆ ತನ್ನದೇ ಆದ ಪ್ರಾಮುಖ್ಯತೆಯಿದೆ. ಪ್ರತಿಯೊಬ್ಬ ವ್ಯಕ್ತಿಯು ಇದನ್ನು ತನ್ನ ಆಹಾರ ಕ್ರಮದಲ್ಲಿ ಕಟ್ಟುನಿಟ್ಟಾಗಿ ಪಾಲಿಸುತ್ತಿರುತ್ತಾನೆ. ಇದರಲ್ಲಿ ಒಂದನ್ನು ತ್ಯಜಿಸಿದರೂ ಅದರಿಂದ ದೇಹದ ಮೇಲೆ ಕೆಲವೊಂದು ಅಡ್ಡ ಪರಿಣಾಮಗಳಾಗಬಹುದು. ಸಂಜೆ ಅಥವಾ ರಾತ್ರಿಯ ಊಟವನ್ನು ನಾವು ಡಿನ್ನರ್ ಎನ್ನುತ್ತೇವೆ. ಇದು ದಿನವನ್ನು ಅಂತ್ಯಗೊಳಿಸುವಂತಹ ಊಟ.

ಕೆಲವೊಂದು ಸಂಪ್ರದಾಯಗಳು ಡಿನ್ನರ್‌ಗೆ ಹೆಚ್ಚಿನ ಮಹತ್ವ ನೀಡಿದರೆ, ಮತ್ತೆ ಕೆಲವು ಬೆಳಗ್ಗಿನ ಉಪಹಾರಕ್ಕೆ ಪ್ರಾಮುಖ್ಯತೆ ನೀಡುತ್ತವೆ. ಈ ವಾದಗಳನ್ನು ಬದಿಗಿರಿಸಿದರೆ ರಾತ್ರಿ ಊಟಕ್ಕೂ ಮೊದಲು ಮಾಡಬೇಕಾದ ಕೆಲವೊಂದು ಆರೋಗ್ಯಕರ ವಿಷಯಗಳ ಬಗ್ಗೆ ನಾವು ಗಮನಹರಿಸಬೇಕಾಗುತ್ತದೆ.ಇಂದಿನ ದಿನಗಳನ್ನು ಆಹಾರವನ್ನು ತಿನ್ನುವುದು ಎಂದರೆ ಅದೊಂದು ದೊಡ್ಡ ಸವಾಲಿದ್ದಂತೆ.

ಆದರೆ ನಾವು ಜಂಕ್ ಫುಡ್‌ನ್ನು ತಿನ್ನದೆ ಬಿಡುವುದಿಲ್ಲ ಮತ್ತು ಡಿನ್ನರ್ ಪಾರ್ಟಿಗಳಲ್ಲಿ ನಮಗೆ ರುಚಿರುಚಿಯಾದ ಆಹಾರಗಳು ಸಿಗುತ್ತಿರುವ ಕಾರಣ ನಾವು ಅದನ್ನು ತಪ್ಪಿಸುವುದೇ ಇಲ್ಲ. ನೀವು ಏನು ತಿನ್ನುತ್ತೀರಿ ಎನ್ನುವುದು ಎಷ್ಟು ಮುಖ್ಯವೋ? ಹೇಗೆ ತಿನ್ನುತ್ತೀರಿ ಮತ್ತು ಡಿನ್ನರ್‌ಗೆ ಮೊದಲು ಏನು ಮಾಡುತ್ತೀರಿ ಎನ್ನುವುದು ಕೂಡ ಆರೋಗ್ಯದ ದೃಷ್ಟಿಯಿಂದ ತುಂಬಾ ಮುಖ್ಯ. ರಾತ್ರಿ ಊಟ ಮಾಡಿದ ತಕ್ಷಣ ಮಾಡಬಾರದ 10 ಕಾರ್ಯಗಳು!

ಡಿನ್ನರ್ (ರಾತ್ರಿ ಊಟದ) ಬಳಿಕ ಮಾಡಬೇಕಾದಂತಹ ಕೆಲವೊಂದು ವಿಷಯಗಳಿವೆ. ನೀವು ಮನೆಗೆ ಬಂದು ಡಿನ್ನರ್‌ಗೆ ತಯಾರಾಗುತ್ತಿದ್ದರೆ ಆಗ ಊಟಕ್ಕೆ ಮೊದಲು ಎಲ್ಲಾ ರೀತಿಯ ತೊಡಕುಗಳನ್ನು ದೂರಗೊಳಿಸಿ. ನಿಮ್ಮ ಟಿವಿ ಆಫ್ ಮಾಡಿ, ಮೊಬೈಲ್ ಮತ್ತು ಲ್ಯಾಪ್ ಟಾಪ್ ಅನ್ನು ಕೂಡ ದೂರವಿಡಿ. ನೀವು ಶಾಂತವಾಗಿ ಆಹಾರ ತಿಂದರೆ ಆಗ ಅದು ಚೆನ್ನಾಗಿ ಜೀರ್ಣವಾಗುತ್ತದೆ.

ನೀವು ಆರೋಗ್ಯಕರ ಹಾಗೂ ನೈಸರ್ಗಿಕ ಆಹಾರವನ್ನು ತಿನ್ನಲು ಆಯ್ಕೆ ಮಾಡಿದ್ದರೆ ಆಗ ಹೆಚ್ಚಿನ ರೋಗಗಳನ್ನು ದೂರವಿಡಬಹುದು. ಊಟ ಮಾಡಿದ ತಕ್ಷಣ ಮಲಗಲು ಹೋಗಬೇಡಿ. ಡಿನ್ನರ್ ಬಳಿಕ ಏನು ಮಾಡಬೇಕು? ಮುಂದೆ ಓದಿ...

ಬಿಸಿ ನೀರು

ಬಿಸಿ ನೀರು

ರಾತ್ರಿಯ ಊಟಕ್ಕಿಂತ ಸುಮಾರು 30-40 ನಿಮಿಷ ಮೊದಲು ಒಂದು ಗ್ಲಾಸ್ ಬಿಸಿ ನೀರು ಕುಡಿದರೆ ಆಗ ಅದು ನಿಮ್ಮ ಜೀರ್ಣಕ್ರಿಯೆಗೆ ನೆರವಾಗುತ್ತದೆ. ಇದರಿಂದ ನೀವು ರಾತ್ರಿ ಹೊತ್ತು ಅತಿಯಾಗಿ ತಿನ್ನುವುದು ಕಡಿಮೆಯಾಗುತ್ತದೆ. ತದನಂತರ ರಾತ್ರಿಯ ಊಟಕ್ಕಿಂತ ಬಳಿಕ ಸುಮಾರು 30-40 ನಿಮಿಷ ಬಿಟ್ಟು ಮತ್ತೊಂದು ಗ್ಲಾಸ್ ಬಿಸಿ ನೀರು ಕುಡಿಯಿರಿ, ಇದು ಕೂಡ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು

ಅಂತರ ಕಾಯ್ದುಕೊಳ್ಳಿ

ಅಂತರ ಕಾಯ್ದುಕೊಳ್ಳಿ

ನಿಮ್ಮ ನಿದ್ರೆ ಮತ್ತು ರಾತ್ರಿಯ ಊಟದ ಮಧ್ಯೆ ಸುಮಾರು ಎರಡು ಗಂಟೆಗಳ ಅಂತರವನ್ನು ಕಾಯ್ದುಕೊಂಡರೆ ಇದು ಜೀರ್ಣ ಕ್ರಿಯೆಗೆ ನೆರವಾಗುತ್ತದೆ. ತದನಂತರ ಊಟದ ಬಳಿಕ ಏನಾದರೂ ಮನೆಕೆಲಸ ಮಾಡಿ ಸಮಯ ಕಳೆಯಿರಿ.

ನಿದ್ರೆ

ನಿದ್ರೆ

ರಾತ್ರಿ ಊಟ ಮುಗಿಸಿದ ಕೂಡಲೇ ನಿದ್ರೆ ಮಾಡಲು ಹೋಗಬೇಡಿ. ಇದರಿಂದ ಆ್ಯಸಿಡ್ ಹಿಮ್ಮುಖವಾಗಿ ಹರಿಯಲು ಆರಂಭವಾಗುತ್ತದೆ. ಇದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಉಂಟು ಮಾಡುವುದು.

ಹಲ್ಲುಜ್ಜಿ

ಹಲ್ಲುಜ್ಜಿ

ನಿದ್ರಿಸುವ ಮೊದಲು ದಿನಾಲೂ ಹಲ್ಲುಜ್ಜುವುದನ್ನು ನೀವು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ನಿಮ್ಮ ಸಂಪೂರ್ಣ ಆರೋಗ್ಯ ಕಾಪಾಡಲು ನೆರವಾಗುತ್ತದೆ.

ಹಣ್ಣುಗಳು

ಹಣ್ಣುಗಳು

ಕೆಲವೊಂದು ಮೂಲಗಳ ಪ್ರಕಾರ ರಾತ್ರಿ ಊಟದ ಬಳಿಕ ಹಣ್ಣುಗಳನ್ನು ತಿನ್ನುವುದು ಎರಡು ಕಾರಣಗಳಿಂದ ಒಳ್ಳೆಯದಲ್ಲವಂತೆ. ಮೊದಲನೇಯದಾಗಿ ಇದರಲ್ಲಿನ ಸಕ್ಕರೆ ಅಂಶ ನಿದ್ರೆಯ ಮೇಲೆ ಪರಿಣಾಮ ಉಂಟುಮಾಡಬಹುದು. ಎರಡನೇಯದಾಗಿ ನಿಮ್ಮ ದೈನಂದಿನ ಆಹಾರದೊಂದಿಗೆ ಹಣ್ಣುಗಳನ್ನು ಜೀರ್ಣಗೊಳಿಸುವ ಕ್ರಿಯೆ ದೇಹಕ್ಕೆ ಕಷ್ಟವಾಗಬಹುದು.

ನಡಿಗೆ

ನಡಿಗೆ

ರಾತ್ರಿ ಊಟದ ಬಳಿಕ ನಾವು ಇದನ್ನು ಮಾಡಬೇಕಾಗಿದೆ. ರಾತ್ರಿ ಊಟದ ಬಳಿಕ ಟೇರೆಸ್ ಮೇಲೆ ಸ್ವಲ್ಪ ನಡೆದಾಡುವುದು ನಿಮಗೆ ನೆರವಾಗಲಿದೆ. ನಡಿಗೆಯಿಂದ ಜೀರ್ಣಕ್ರಿಯೆಗೆ ನೆರವಾಗುತ್ತದೆ ಮತ್ತು ಈ ಚಟುವಟಿಕೆಯಿಂದ ಕೊಬ್ಬು ಶೇಖರಣೆಗೊಳ್ಳುವುದು ತಪ್ಪುತ್ತದೆ.

ಸ್ನಾನ

ಸ್ನಾನ

ರಾತ್ರಿ ಊಟ ಮುಗಿಸಿದ ತಕ್ಷಣ ಸ್ನಾನ ಮಾಡುವುದು ಜೀರ್ಣಕ್ರಿಯೆಗೆ ಒಳ್ಳಯದಲ್ಲ. ಸ್ನಾನ ಮಾಡಲೇಬೇಕಿದ್ದರೆ ಆಗ ರಾತ್ರಿ ಊಟದ ಮತ್ತು ಸ್ನಾನದ ಮಧ್ಯೆ ಅರ್ಧ ಗಂಟೆ ಅಂತರವಿರಲಿ.

ಧೂಮಪಾನ

ಧೂಮಪಾನ

ರಾತ್ರಿ ಊಟ ಮುಗಿಸಿದ ತಕ್ಷಣ ಹೆಚ್ಚಿನವರು ಧೂಮಪಾನ ಮಾಡಲು ಬಯಸುತ್ತಾರೆ. ಈ ಅಭ್ಯಾಸವು ನಿಮ್ಮ ಜೀರ್ಣಕ್ರಿಯೆಗೆ ತುಂಬಾ ಅಪಾಯಕಾರಿ ಮತ್ತು ಎದೆಯುರಿಗೂ ಕಾರಣವಾಗಬಹುದು.

English summary

8 Things To Do Before & After Dinner

Dinner is your evening meal or the night meal. It is the last meal of the day. Some cultures give more importance to the dinner whereas some culture say that the breakfast is the most important. Putting aside that aspect, there are some healthy things to do before dinner.
X
Desktop Bottom Promotion