For Quick Alerts
ALLOW NOTIFICATIONS  
For Daily Alerts

ಜೀವಕ್ಕೆ ಮಾರಕವಾಗಿರುವ ಹರ್ನಿಯಾ ಕಾಯಿಲೆಯ ಲಕ್ಷಣಗಳೇನು?

By Arpitha Rao
|

ಹರ್ನಿಯಾ ಎನ್ನುವ ಕಾಯಿಲೆ ದೇಹದಲ್ಲಿ ರಕ್ತ ಸಂಚಾರಕ್ಕೆ ಅಡಚಣೆ ತರುವಂತಹ ಕಾಯಿಲೆ. ಇದು ದೇಹದ ಉದರ ಭಾಗದಲ್ಲಿ ಕಂಡು ಬರುವಂತಹ ಕಾಯಿಲೆ. ಸಾಕಷ್ಟು ಜನರಿಗೆ ಈ ಕಾಯಿಲೆ ಬಗ್ಗೆ ಹೆಚ್ಚಿನ ತಿಳುವಳಿಕೆ ಇರುವುದಿಲ್ಲ, ಕಿಬ್ಬೊಟ್ಟೆಯಲ್ಲಿ ನೋವು ಕಂಡು ಬಂದಾಗ ಸಾಧಾರಣ ನೋವೆಂದು ನಿರ್ಲಕ್ಷ್ಯ ಮಾಡಿ, ನಂತರ ಸಹಿಸಲು ಅಸಾಧ್ಯವಾದ ಕಾಯಿಲೆ ನೋವು ಬಂದಾಗ ವೈದ್ಯರ ಬಳಿ ಹೋಗುತ್ತಾರೆ. ಈ ಹರ್ನಿಯಾ ಕಾಯಿಲೆಯನ್ನು ಆರಂಭದಲ್ಲಿಯೇ ಗುಣ ಪಡಿಸದಿದ್ದರೆ ಅಪಾಯ.

ನಮ್ಮಲ್ಲಿ ಸಾಕಷ್ಟು ಜನರಿಗೆ ಹರ್ನಿಯಾ ಎಂದರೆ ಏನು ಎಂಬುದು ತಿಳಿದಿಲ್ಲ ಮತ್ತು ಹರ್ನಿಯಾ ಎಂದರೆ ಅಂಗಾಂಶದಲ್ಲಿ ಕಾಣಿಸಿಕೊಳ್ಳುವ ಅಧಿಕ ಬೆಳವಣಿಗೆ ಅಥವಾ ಕೊಬ್ಬು ಎಂದು ತಿಳಿಯುತ್ತಾರೆ. ವೈದ್ಯರ ಪ್ರಕಾರ ಹರ್ನಿಯಾ ಆಂತರಿಕ ಅಂಗಗಳ ಬೆಳವಣಿಗೆ ದೇಹದ ಹೊರಗೆ ಮುಂಚಾಚುವಿಕೆಯಿಂದ ಕಾಣಿಸಿಕೊಳ್ಳುತ್ತದೆ ಎನ್ನಲಾಗುತ್ತದೆ. ಈ ಸಮಸ್ಯೆಯು ಸ್ನಾಯುಗಳ ನಿಶಕ್ತಿಯಿಂದ ಕಾಣಿಸಿಕೊಳ್ಳುತ್ತದೆ. ಎದೆಯುರಿ ಸಮಸ್ಯೆಗೆ ಆರೋಗ್ಯಕರ ಜೀವನಶೈಲಿಯೇ ಮದ್ದು ಕಣ್ರಿ!

ಆದಾಗ್ಯೂ ಸಾಕಷ್ಟು ಬಾರಿ ಹರ್ನಿಯಾ ಯಾವುದೇ ಲಕ್ಷಣವನ್ನು ತೋರಿಸದೆ ತೊಂದರೆ ರಹಿತವಾಗಿರುತ್ತದೆ, ಮತ್ತು ಕೆಲವೊಮ್ಮೆ ಇದು ಅಪಾಯಕಾರಿಯಾಗಿ ಕೂಡ ಪರಿವರ್ತಿತವಾಗಬಹುದು.ಸಾಕಷ್ಟು ಸಮಯದಲ್ಲಿ ಹರ್ನಿಯಾ ಚಿಕಿತ್ಸೆ ಮೂಲಕವೇ ಗುಣಪಡಿಸಬೇಕಾಗಬಹುದು. ಆದರೆ ತಜ್ಞರು ಹರ್ನಿಯಾಕ್ಕೆ ಇತರ ಕಾರಣಗಳನ್ನು ಕೂಡ ನೀಡಿದ್ದಾರೆ.

ವಯಸ್ಸಾದವರಲ್ಲಿ

ವಯಸ್ಸಾದವರಲ್ಲಿ

ತಾರುಣ್ಯದಲ್ಲಿ ಇರುವವರಿಗಿಂತ ವಯಸ್ಸಾದವರಲ್ಲಿ ಹೆಚ್ಚು ಹರ್ನಿಯಾ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣ ವಯಸ್ಸು ಹೆಚ್ಚಾದಂತೆ ಸ್ನಾಯುಗಳು ದುರ್ಬಲವಾಗುತ್ತಾ ಹೋಗುತ್ತದೆ.

ಪುರುಷರಲ್ಲಿ

ಪುರುಷರಲ್ಲಿ

ಹರ್ನಿಯಾ ಸಮಸ್ಯೆಯನ್ನು ಮಹಿಳೆಯರಿಗಿಂತ ಹೆಚ್ಚು ಪುರುಷರಲ್ಲಿ ಕಂಡುಬರುತ್ತದೆ. ಹೆಚ್ಚಿನ ಪುರುಷರಿಗೆ ತೊಡೆ ಸಂದಿಯಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಪುರುಷರ ತೊಡೆ ಸಂದಿಯ ಭಾಗ ದುರ್ಬಲವಾಗಿರುವುದರಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಶಸ್ತ್ರ ಚಿಕಿತ್ಸಾ ವಿಧಾನ

ಶಸ್ತ್ರ ಚಿಕಿತ್ಸಾ ವಿಧಾನ

ಆಪರೇಶನ್ ಆದ ನಂತರ ಸಾಮಾನ್ಯವಾಗಿ ಹರ್ನಿಯಾ ಕಾಣಿಸಿಕೊಳ್ಳಬಹುದು. ಹೊಟ್ಟೆಯ ಶಸ್ತ್ರ ಚಿಕಿತ್ಸೆ ಪಡೆದ ಮಹಿಳೆಯರಲ್ಲಿ ಸಾಮಾನ್ಯವಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದನ್ನು ಸೀಳುಕೊಯ್ತದ ಅಂಡವಾಯು ಎಂದು ಕರೆಯಲಾಗುತ್ತದೆ. ಸ್ಥೂಲಕಾಯದ ಹೆಂಗಸರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಜನನ ದೋಷಗಳು

ಜನನ ದೋಷಗಳು

ಪ್ರಸವದ ನಂತರ ಕಾಣಿಸಿಕೊಳ್ಳುವ ಉಬ್ಬು ಕೂಡ ಹರ್ನಿಯಾ ಸಮಸ್ಯೆಗೆ ಕಾರಣವಾಗಬಹುದು. ಹುಟ್ಟಿನಿಂದ ಕಾಣಿಸಿಕೊಳ್ಳುವ ಕಿಬ್ಬೊಟ್ಟೆಯ ಭಾಗದ ಬೆಳವಣಿಗೆಯು ಹರ್ನಿಯಾಕ್ಕೆ ಕಾರಣವಾಗುತ್ತದೆ.

ಮಲಬದ್ಧತೆ

ಮಲಬದ್ಧತೆ

ನೀವು ಅತಿಯಾದ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದರೆ ಆಗ ತ್ಯಾಜ್ಯವನ್ನು ದೇಹದಿಂದ ಹೊರಹಾಕಲು ಹೆಚ್ಚು ಪ್ರಯತ್ನಪಡಬೇಕಾಗುತ್ತದೆ. ಈ ಅಧಿಕ ಒತ್ತಡ ಮೃದುವಾದ ಅಂಗಾಂಶದ ಮೇಲೆ ಪರಿಣಾಮ ಬೀರುತ್ತದೆ. ಇದು ಹರ್ನಿಯಾ ಕಾಣಿಸಿಕೊಳ್ಳಲು ಕಾರಣವಾಗುತ್ತದೆ.

ಅನುವಂಶಿಕವಾಗಿ

ಅನುವಂಶಿಕವಾಗಿ

ಸಂಶೋಧನೆಗಳು ಅನುವಂಶಿಕವಾಗಿ ಸ್ನಾಯು ದುರ್ಬಲತೆ ಕಾಣಿಸಿಕೊಳ್ಳುತ್ತದೆ ಎನ್ನುತ್ತವೆ. ಆದ್ದರಿಂದ ಕುಟುಂಬದಲ್ಲಿ ಯಾರಾದರೂ ಹರ್ನಿಯಾ ಸಮಸ್ಯೆ ಅನುಭವಿಸಿದ್ದರೆ ಅದು ಅನುವಂಶಿಕವಾಗಿ ಇತರರಿಗೆ ಬರುವ ಸಾಧ್ಯತೆ ಇರುತ್ತದೆ.

ಬೊಜ್ಜು

ಬೊಜ್ಜು

ಅತಿಯಾದ ಬೊಜ್ಜು ಹೊಟ್ಟೆಯ ಭಾಗಕ್ಕೆ ಹೆಚ್ಚು ಒತ್ತಡ ನೀಡುತ್ತದೆ ಮತ್ತು ಇದು ಸ್ನಾಯುಗಳನ್ನು ದುರ್ಬಲಗೊಳಿಸುತ್ತಾ ಬರುತ್ತದೆ. ದುರ್ಬಲವಾದ ಸ್ನಾಯುಗಳು ಹರಿಣೀಯ ಸಂಭವಿಸಲು ಮೂಲ ಕಾರಣ ಎನ್ನಬಹುದು.

English summary

7 leading causes of hernia you should always know

Most of us do not know what a hernia actually is and most people tend seem to regard it as an overgrowth of tissue mass or fat. According to physicians however, hernia develops due to the protrusion of internal body organs towards the outer walls of the body. This abnormality generally occurs due to weakness in the muscles.
Story first published: Saturday, January 10, 2015, 19:31 [IST]
X
Desktop Bottom Promotion