For Quick Alerts
ALLOW NOTIFICATIONS  
For Daily Alerts

ತೂಕ ಕಳೆದುಕೊಳ್ಳಲು ನೆರವಾಗುವ 7 ಬಗೆಯ ಅಡುಗೆ ಎಣ್ಣೆಗಳು

By Super
|

ಸ್ಥೂಲಕಾಯ ಇಂದು ಬಡವ-ಬಲ್ಲಿದ, ಚಿಕ್ಕವ-ದೊಡ್ಡವ, ಪುರುಷ-ಮಹಿಳೆ ಎಂಬ ಬೇಧಭಾವವಿಲ್ಲದೇ ಎಲ್ಲರನ್ನೂ ಆವರಿಸುತ್ತಿದೆ. ಸವಲತ್ತುಗಳು ಹೆಚ್ಚಾಗಿರುವ ಮೂಲಕ ಕಡಿಮೆಯಾಗಿರುವ ವ್ಯಾಯಾಮ ಒಂದು ಕಾರಣವಾದರೆ ಅರಿವಿಲ್ಲದೇ ನಮ್ಮ ಆಹಾರದ ಮೂಲಕ ದೇಹ ಪ್ರವೇಶಿಸುವ ಅನಾರೋಗ್ಯಕರ ಪೋಷಕಾಂಶಗಳ ಮಹಾಪೂರ ಇನ್ನೊಂದೆಡೆ. ಒಟ್ಟಾರೆ ಒಮ್ಮೆ ಸ್ಥೂಲಕಾಯ ಆವರಿಸಿಬಿಟ್ಟರೆ ಸಾಕು, ಹಿಂದಿರುಗಿ ಬರುವುದು ಬಹಳ ಕಷ್ಟ! ಆದರೆ ಅಸಾಧ್ಯವೇನಲ್ಲ. ಇದಕ್ಕೆ ಬೇಕಾಗಿರುವುದು ಕೊಂಚ ವ್ಯಾಯಾಮ ಹಾಗೂ ಆಹಾರ ಸೇವನೆಯಲ್ಲಿ ಮಿತಿ ಮತ್ತು ಸೇವಿಸುವ ಆಹಾರದಲ್ಲಿ ಬದಲಾವಣೆ ಇಷ್ಟೇ.

ಮೊದಲೆರಡು ವಿಧಾನಗಳು ನಮ್ಮ ಮಾನಸಿಕ ಸ್ಥೈರ್ಯವನ್ನು ಅವಲಂಬಿಸಿದ್ದರೆ ಮೂರನೆಯದು ನಮ್ಮ ಆಯ್ಕೆಯನ್ನು ಅವಲಂಬಿಸಿದೆ. ಮುಖ್ಯವಾಗಿ ನಾವು ಸೇವಿಸುವ ಆಹಾರದಲ್ಲಿ ಅಗತ್ಯವಿರಬೇಕಾದ ಪೋಷಕಾಂಷಗಳು ತಕ್ಕಷ್ಟು ಪ್ರಮಾಣದಲ್ಲಿರಬೇಕೇ ವಿನಃ ಅತಿ ಹೆಚ್ಚಾಗಿ ಇರಬಾರದು. ಅಡುಗೆ ಎಣ್ಣೆ ಸಹಾ ಇದರಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ತೂಕ ಕಳೆದುಕೊಳ್ಳಲು ಅತ್ಯಂತ ಪ್ರಶಸ್ತವಾದ ಎಣ್ಣೆ ಎಂದರೆ ಆಲಿವ್ ಎಣ್ಣೆ. ಆದರೆ ಇದರ ರುಚಿ ನಮ್ಮ ಸಾಂಪ್ರಾದಾಯಿಕ ರುಚಿಯಂತಿಲ್ಲದಿರುವುದರಿಂದ, ಮತ್ತು ಇದಕ್ಕಿಂತಲೂ ದುಬಾರಿಯಾದುದರಿಂದ ಬಳಕೆ ಕಡಿಮೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇಲ್ಲಿದೆ ಅದ್ಭುತ ಜ್ಯೂಸ್!

ಆದರೆ ತೂಕ ಕಳೆದುಕೊಳ್ಳಲೇಬೇಕು ಎಂಬ ಛಲವಿದ್ದರೆ ಆಲಿವ್ ಎಣ್ಣೆಯನ್ನು ನಿಮ್ಮ ಅಡುಗೆಗೆ ಬಳಸಿ ನೋಡಿ, ಕೆಲವು ದಿನಗಳಲ್ಲಿಯೇ ಇದರ ಪರಿಣಾಮ ತಿಳಿದುಬರುತ್ತದೆ. ಅಂತೆಯೇ ನಮ್ಮ ಅವಗಣನೆಗೆ ಒಳಗಾಗಿರುವ ಎಣ್ಣೆ ಎಂದರೆ ತೌಡಿನ (ಅಕ್ಕಿ ಪಾಲಿಶ್ ಮಾಡಿದ ಬಳಿಕ ದೊರಕುವ ಹೊಟ್ಟು) ಎಣ್ಣೆ. ಇದು ತೂಕ ಕಡಿಮೆಗೊಳಿಸುವ ಜೊತೆಗೇ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

ಕ್ಯಾನೋಲಾ ಹೂವಿನ ಎಣ್ಣೆ ಹೃದಯಕ್ಕೆ ಅತ್ಯುತ್ತಮವಾಗಿದೆ. ಈ ಎಣ್ಣೆಗಳನ್ನು ಊಟ ಮಾಡುವಾಗ ತುಪ್ಪದಂತೆ ಅನ್ನ ಸಾರಿಗೆ ಕಲಿಸಿಕೊಂಡು ಸಹಾ ಸೇವಿಸಬಹುದು. ಹುರಿಯುವುದು, ಕರಿಯುವುದರ ಮೂಲಕ ತಯಾರಿಸಿದ ಅಡುಗೆಳನ್ನೂ ಸೇವಿಸಬಹುದು. ಇವು ದೇಹಕ್ಕೆ ಅನಗತ್ಯ ಕ್ಯಾಲೋರಿಗಳನ್ನು ನೀಡದೇ ತೂಕ ಇಳಿಸಿಕೊಳ್ಳುವ ಇತರ ಪ್ರಯತ್ನಗಳಿಗೆ ನೆರವಾಗುತ್ತಾ ಸಹಕರಿಸುತ್ತವೆ. ಈ ನಿಟ್ಟಿನಲ್ಲಿ ಪ್ರಮುಖವಾದ ಏಳು ಎಣ್ಣೆಗಳ ಬಗ್ಗೆ ವಿವರಗಳನ್ನು ನೀಡಲಾಗಿದೆ...

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ

ಸಾಮಾನ್ಯ ತಾಪಮಾನದಲ್ಲಿ ಗಟ್ಟಿಯಾಗುವ ಎಣ್ಣೆಗಳೆಲ್ಲಾ ಕೆಟ್ಟವು, ಅಂತೆಯೇ ಕೊಬ್ಬರಿ ಎಣ್ಣೆ ಸಹಾ ಆರೋಗ್ಯಕ್ಕೆ ಮಾರಕ ಎಂದು ಕೆಲವರ್ಷಗಳ ಹಿಂದೆ ಕೆಲವು ಸಂಸ್ಥೆಗಳು ಕೊಬ್ಬರಿ ಎಣ್ಣೆಯ ನಿಷೇಧಕ್ಕೆ ಭಾರತ ಸರ್ಕಾರವನ್ನು ಆಗ್ರಹಿಸಿದ್ದವು. ವಾಸ್ತವವಾಗಿ ಜಗತ್ತಿನಲ್ಲಿ ಯಾರಿಗೂ ಬೇಡದ ಪಾಮೋಲಿನ್ ಎಣ್ಣೆಯನ್ನು ಭಾರತಕ್ಕೆ ದುಬಾರಿ ಬೆಲೆಗೆ ಮಾರಿ ಹಣ ಮಾಡಿಕೊಳ್ಳುವುದೇ ಇದರ ಗುಟ್ಟು. ಒಂದು ವೇಳೆ ಈ ಮಾತು ನಿಜವಾಗಿದ್ದಿದ್ದರೆ ನಮ್ಮ ಕರಾವಳಿಯ ಜನತೆಯ ಆಯಸ್ಸು ಮೂವತ್ತು ವರ್ಷಕ್ಕಿಂತ ಹೆಚ್ಚಿರಬಾರದಿತ್ತು. ಆದರೇನು? ಕರಾವಳಿಯ ನಮ್ಮ ಹಿರಿಯರು ದಿನಕ್ಕೆ ಮೂರು ಹೊತ್ತೂ ಕೊಬ್ಬರಿ ಎಣ್ಣೆ ಸೇವಿಸಿ ಶತಾಯುಶಿಗಳಾಗಿಲ್ಲವೇ, ಕಯ್ಯಾರ ಕಿಞಣ್ಣ ರೈಯವರ ವಯಸ್ಸೆಷ್ಟು ಗೊತ್ತೇ? ಕೊಬ್ಬರಿ ಎಣ್ಣೆಯಲ್ಲಿಯೂ ಉತ್ತಮವಾದ ಪೋಷಕಾಂಶಗಳಿದ್ದು ರಕ್ತದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ಸಹಕರಿಸುತ್ತದೆ. ದೇಹದಲ್ಲಿ ಹೆಚ್ಚಿನ ಶಕ್ತಿ ಉತ್ಪತ್ತಿಯಾಗಲು ಸಹಕರಿಸಿ ಚಟುವಟಿಕೆಯಿಂದಿರಲು ನೆರವಾಗುತ್ತದೆ. ಆರೋಗ್ಯವಂತ ಶರೀರ ಪಡೆದು ರೋಗಗಳಿಂದ ದೂರವಿರಲು ನೆರವಾಗುತ್ತದೆ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ತೂಕ ಇಳಿಸಲು ನೆರವಾಗುವ ಅತ್ಯುತ್ತಮ ಎಣ್ಣೆ ಎಂದರೆ ಆಲಿವ್ ಎಣ್ಣೆ. extra virgin ಅಥವಾ refined ರೂಪದಲ್ಲಿ (ಅಂದರೆ ಬಿಸಿಮಾಡದೇ ಸಂಸ್ಕರಿಸಿದ ಅಥವಾ ಬಿಸಿಮಾಡಿ ಸಂಸ್ಕರಿಸಿದ) ಸಿಗುವ ಎಣ್ಣೆಯಲ್ಲಿ ಶೇಖಡಾ 73ರಷ್ಟು ಅಸಂಪೂರ್ಣ (monounsaturated) ಮತ್ತು 14ಶೇಖಡಾ ಸಂಪೂರ್ಣ (saturated) ಕೊಬ್ಬು ಇದೆ. ಈ ಪ್ರಮಾಣ ಮಧುಮೇಹಿಗಳಿಗೂ ಅತ್ಯುತ್ತಮವಾಗಿದ್ದು ಹೃದಯರೋಗವನ್ನು ಕಡಿಮೆಗೊಳಿಸಲು ನೆರವಾಗಿದೆ.

(ಪ್ರತಿ ನೂರು ಗ್ರಾಂನಲ್ಲಿ - Saturated fat 14 g , Polyunsaturated fat 11g, Monounsaturated fat 73 g). ಆಲಿವ್ ಎಣ್ಣೆಯ ನಿಯಮಿತ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತಾ ಹೃದಯದ ಒತ್ತಡವನ್ನು ಕಡಿಮೆಗೊಳಿಸುತ್ತಾ ಹೋಗುತ್ತದೆ.

ಕ್ಯಾನೋಲಾ ಎಣ್ಣೆ

ಕ್ಯಾನೋಲಾ ಎಣ್ಣೆ

ಒಂದು ಬಗೆಯ ಹಳದಿ ಬಣ್ಣದ ಹೂವುಗಳ ಬೀಜದಿಂದ ಸಂಸ್ಕರಿಸಿ ತೆಗೆಯಲಾದ ಈ ಎಣ್ಣೆಯಲ್ಲಿ ಉಪಯುಕ್ತ ಕೊಬ್ಬಿನ ಆಮ್ಲಗಳು (essential fatty acids) ಹೇರಳವಾಗಿವೆ. ಲಿನೋಲಿಕ್ ಆಮ್ಲ, (ಒಮೆಗಾ - 6), ಆಲ್ಫಾ ಲಿನೋಲಿಕ್ ಆಮ್ಲ (ಒಮೆಗಾ-3) ಇವುಗಳಲ್ಲಿ ಪ್ರಮುಖವಾಗಿವೆ. ಈ ಪೋಷಕಾಂಶಗಳು ಹೃದಯಕ್ಕೆ ಅತ್ಯುತ್ತಮವಾಗಿದ್ದು ಸ್ಥೂಲಕಾಯದಿಂದ ಹೃದಯದ ಒತ್ತಡ ಹೆಚ್ಚಿರುವವರಿಗೆ ಹೇಳಿ ಮಾಡಿಸಿದ ಎಣ್ಣೆಯಾಗಿದೆ.

ಸೂರ್ಯಕಾಂತಿ ಎಣ್ಣೆ (ತಣ್ಣನೆಯ ವಿಧಾನದಲ್ಲಿ ಹಿಂಡಾಲಾದ) ಮತ್ತು ಬಾದಾಮಿ ಎಣ್ಣೆ

ಸೂರ್ಯಕಾಂತಿ ಎಣ್ಣೆ (ತಣ್ಣನೆಯ ವಿಧಾನದಲ್ಲಿ ಹಿಂಡಾಲಾದ) ಮತ್ತು ಬಾದಾಮಿ ಎಣ್ಣೆ

ಸೂರ್ಯಕಾಂತಿ ಹೂವಿನ ಬೀಜಗಳಿಂದ ಬಿಸಿಮಾಡದೇ ತೆಗೆಯಲಾದ ಈ ಎಣ್ಣೆಯಲ್ಲಿ (sunflower seed oil) 79 ಶೇಖಡಾ ಅಸಂಪೂರ್ಣ ಕೊಬ್ಬು ಹಾಗೂ 14 ಶೇಖಡಾ ಸಂಪೂರ್ಣ ಕೊಬ್ಬು ಇದೆ. ಬಾದಾಮಿ ಎಣ್ಣೆಯಲ್ಲಿ 65 ಶೇಖಡಾ ಅಸಂಪೂರ್ಣ ಕೊಬ್ಬು ಹಾಗೂ 7 ಶೇಖಡಾ ಸಂಪೂರ್ಣ ಕೊಬ್ಬು ಇದೆ. ಈ ಅಂಕಿಅಂಶಗಳು ತೂಕ ಇಳಿಸಲು ಪೂರಕವಾಗಿವೆ. ಬಾದಾಮಿ ಎಣ್ಣೆ ದುಬಾರಿಯಾದುದರಿಂದ ಸಿಹಿತಿಂಡಿಗಳನ್ನು ಅನಿವಾರ್ಯವಾಗಿ ತಿನ್ನಬೇಕಾದಾಗ ಮಾತ್ರ ಬಳಸಬಹುದು. ಇನ್ನುಳಿದಂತೆ ಸೂರ್ಯಕಾಂತಿ ಎಣ್ಣೆ ಕೊಂಚ ಅಗ್ಗವಾಗಿದ್ದು ದಿನಬಳಕೆಗೆ ಉತ್ತಮವಾಗಿದೆ.

ತೌಡಿನ ಎಣ್ಣೆ

ತೌಡಿನ ಎಣ್ಣೆ

ಅಕ್ಕಿಯನ್ನು ಪಾಲಿಷ್ ಮಾಡುವಾಗ ದೊರಕುವ ಹೊಟ್ಟೇ ತೌಡು. ಇದನ್ನು ಹಿಂಡಿ ತೆಗೆದ ಎಣ್ಣೆಯಲ್ಲಿ ಅಲ್ಪ ಪ್ರಮಾಣದಲ್ಲಿ ಪಿಷ್ಟವಿದ್ದು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ. ಈ ಪಿಷ್ಟವನ್ನು ಕರಗಿಸಲು ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬು ಹೆಚ್ಚಿನ ಪ್ರಮಾಣದಲ್ಲಿ ನೆರವಾಗುವುದರಿಂದ ತೂಕ ಕಳೆದುಕೊಳ್ಳಲು ಈ ಎಣ್ಣೆ ಉತ್ತಮವಾಗಿದೆ. ಆದರೆ ಈ ಎಣ್ಣೆಯ ಕಂಪು ಹೆಚ್ಚಿನವರಿಗೆ ಇಷ್ಟವಾಗದೇ ಇರುವುದರಿಂದ ಹೆಚ್ಚಿನ ನೀರು ಉಪಯೋಗಿಸುವ ಅಡುಗೆಗಳಲ್ಲಿ (ಉದಾಹರಣೆಗೆ ಸಾಂಬಾರ್) ಬಳಸಿ. ಹುರಿಯಲು ಬೇರೆ ಎಣ್ಣೆ ಬಳಸಿ.

ಶೇಂಗಾ ಎಣ್ಣೆ

ಶೇಂಗಾ ಎಣ್ಣೆ

ಸಾಮಾನ್ಯವಾಗಿ ಒಳ್ಳೆಣ್ಣೆ ಎಂದು ಕರೆಯಲಾಗುವ ನೆಲಗಡಲೆ ಅಥವಾ ಶೇಂಗಾ (ಬಡವರ ಬಾದಾಮಿ ಎಂದೂ ಕರೆಯುತ್ತಾರೆ) ಎಣ್ಣೆಯಲ್ಲಿ ವಿವಿಧ ಪೋಷಕಾಂಶಗಳಿದ್ದು ತೂಕ ಇಳಿಸಲು ನೆರವಾಗುತ್ತದೆ. ಹುರಿಯಲು, ಒಗ್ಗರಣೆ ನೀಡಲು, ಕರಿಯಲು ಈ ಎಣ್ಣೆ ಅತ್ಯುತ್ತಮವಾಗಿದೆ. ಏಕೆಂದರೆ ಹುರಿದ ಬಳಿಕ ಹುರಿದ ತಿಂಡಿಗಳಿಗೆ ಈ ಎಣ್ಣೆ ಅತಿ ಕಡಿಮೆ ಪ್ರಮಾಣದಲ್ಲಿ ಅಂಟಿಕೊಂಡಿರುವುದರಿಂದ ಮತ್ತು ಶೇಂಗಾ ಹುರಿದ ಸುವಾಸನೆಯನ್ನು ಹೊಂದಿರುವುದರಿಂದ ಎಲ್ಲರಿಗೂ ಇಷ್ಟವಾಗುತ್ತದೆ.

ಸೂರ್ಯಕಾಂತಿ ಎಣ್ಣೆ

ಸೂರ್ಯಕಾಂತಿ ಎಣ್ಣೆ

ಸೂರ್ಯಕಾಂತಿ ಹೂವಿನ ಬೀಜಗಳನ್ನು ಬಿಸಿಮಾಡಿ ಹಿಂಡಿ ತೆಗೆದಿರುವ ಈ ಎಣ್ಣೆ ಹುರಿಯಲು, ಕರಿಯಲು ಮತ್ತಿತರ ಅಡುಗೆಗಳಿಗೆ ಸೂಕ್ತವಾಗಿದೆ. ಇದರಲ್ಲಿ ವಿಟಮಿನ್ ಇ ಪ್ರಮಾಣ ಅತಿಹೆಚ್ಚಾಗಿದ್ದು ಅಸಂಪೂರ್ಣ ಕೊಬ್ಬು ಸಹಾ ಉತ್ತಮ ಪ್ರಮಾಣದಲ್ಲಿದೆ. ನಿತ್ಯದ ಅಡುಗೆಗೆ ಈ ಎಣ್ಣೆ ಉತ್ತಮವಾಗಿದ್ದು ತೂಕ ಕಳೆದುಕೊಳ್ಳಲು ನಿರ್ವಹಿಸುವ ಚಟುವಟಿಕೆಗಳನ್ನು ಚುರುಕುಗೊಳಿಸಿ ತೂಕ ಕಳೆದುಕೊಳ್ಳಲು ನೆರವಾಗುತ್ತದೆ.

ಈ ಎಣ್ಣೆಗಳಿಂದ ದೂರವಿರಿ

ಈ ಎಣ್ಣೆಗಳಿಂದ ದೂರವಿರಿ

ಅಗ್ಗ ಎಂಬ ಕಾರಣಕ್ಕೆ ಈ ಎಣ್ಣೆಗಳನ್ನು ಸರ್ವಥಾ ಬಳಸಬೇಡಿ: ಪಾಮೋಲಿನ್ ಎಣ್ಣೆ, ವನಸ್ಪತಿ, ಡಾಲ್ಡಾ, ಊಮ್ಡಾ, ಹತ್ತಿಬೀಜದ ಎಣ್ಣೆ, ವೆಜಿಟೇಬಲ್ ಘೀ,ಪ್ರಾಣಿಜನ್ಯ ಎಣ್ಣೆ (ಚರ್ಬಿ) ಒಟ್ಟಾರೆ ಯಾವುದೇ ಎಣ್ಣೆಯ ವಿವರಗಳಿರುವಲ್ಲಿ Hydrogenated ಅಥವಾ Partially Hydrogenated ಎಂದು ಬರೆದಿದ್ದರೆ ಈ ಎಣ್ಣೆಯ ತಂಟೆಗೇ ಹೋಗಬೇಡಿ. ಬೆಣ್ಣೆಯಂತೆಯೇ ಕಾಣುವ ಮಾರ್ಜರಿನ್ ಸಹಾ ಇದೇ ಪಟ್ಟಿಗೆ ಸೇರುತ್ತದೆ.ಏನಾಗುತ್ತದೆ, ವರ್ಷಗಳಿಂದ ಉಪಯೋಗಿಸುತ್ತಾ ಇದ್ದೇವಲ್ಲಾ ಎಂಬ ಉಢಾಫೆಯ ಉತ್ತರ ಬರಬಹುದು. ಆದರೆ ಯಾವುದೇ ಎಣ್ಣೆಯ ಕೆಟ್ಟ ಪ್ರಭಾವ ಒಮ್ಮೆಲೇ ಗೊತ್ತಾಗುವುದಿಲ್ಲ. ಸ್ವಲ್ಪ ಸ್ವಲ್ಪವಾಗಿ ದೇಹದಲ್ಲಿ ಶೇಖರವಾಗುತ್ತಾ ಎಷ್ಟೋ ವರ್ಷಗಳ ಬಳಿಕ ಒಮ್ಮೆಲೇ ಹೃದಯದ ಮೇಲೆ ಭಾರಿಯಾಗಿ ಜೀವಕ್ಕೇ ಅಪಾಯವಾಗಬಹುದು.

English summary

7 Best Cooking Oils For Weight Loss

You probably would have heard a lot of people saying fats are bad for health and especially if you are on a weight loss diet. Most cooking oils contain fat which adds to weight gain therefore many people avoid adding those oils to their diet.
X
Desktop Bottom Promotion