For Quick Alerts
ALLOW NOTIFICATIONS  
For Daily Alerts

ಒಣ ಗಂಟಲಿನ ಕಿರಿಕಿರಿಗೆ, ಮನೆಮದ್ದೇ ದಿವ್ಯ ಔಷಧ

By Super
|

ಒಣ ಗಂಟಲು ಸಮಸ್ಯೆಯು ಚಳಿಗಾಲದಲ್ಲಿ ಮತ್ತು ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆಗಳಲ್ಲಿ ಒಂದಾಗಿರುತ್ತದೆ. ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್ ಮೆಡಿಕಲ್ ಸೆಂಟರ್ (UMMC) ಪ್ರಕಾರ ಒಣ ಗಂಟಲು ಸಮಸ್ಯೆಯು ನಾಲಿಗೆಯ ಹಿಂಬದಿಯಲ್ಲಿರುವ ಫ್ಯಾರಿಂಕ್ಸ್ ಎಂಬ ಭಾಗದಲ್ಲಿ ಕಿರಿಕಿರಿ, ಗಂಟಲಿನ ಕೆರೆತ ಅಥವಾ ತುರಿಕೆಯನ್ನು ತರುತ್ತದೆ. ಈ ಸಮಸ್ಯೆಯು ಕೆಲವೊಮ್ಮೆ ಇನ್‍ಫೆಕ್ಷನ್ ಸಮಸ್ಯೆಯಿಂದ ಕಾಣಿಸಿಕೊಂಡರೆ, ಕೆಲವೊಮ್ಮೆ ಒಣ ಹವೆಯಿಂದ ಕೂಡ ಕಾಣಿಸಿಕೊಳ್ಳುತ್ತದೆ, ಅಲ್ಲದೆ ಧೂಮಪಾನ ಮಾಡುವುದು ಸಹ ಇದಕ್ಕೆ ಕಾರಣವಾಗಿರುತ್ತದೆ.

ಅದೃಷ್ಟವಶಾತ್ ಒಣ ಗಂಟಲು ಸಮಸ್ಯೆಯು ಅಂತಹ ಗಂಭೀರ ಸಮಸ್ಯೆಯೇನು ಅಲ್ಲ ಅಲ್ಲದೇ ಮನೆಯಲ್ಲಿಯೇ ಇಂತಹ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಈ ಮನೆಮದ್ದುಗಳು ಒಣ ಗಂಟಲಿನ ಸಮಸ್ಯೆಯ ತೀವ್ರತೆಯನ್ನು ಕಡಿಮೆ ಮಾಡುವುದರ ಜೊತೆಗೆ, ಇದನ್ನು ತೆಗೆದುಕೊಳ್ಳಲು ಯಾವುದೇ ವೈದ್ಯಕೀಯ ಸಲಹೆಗಳ ಅಗತ್ಯವಿಲ್ಲ. ಆದರೆ ಒಂದು ವೇಳೆ ಈ ಮನೆಮದ್ದುಗಳನ್ನು ತೆಗೆದುಕೊಂಡರೂ ಗುಣಮುಖರಾಗದೇ, ಇದ್ದರೆ ತಪ್ಪದೇ ವೈದ್ಯರ ಸಲಹೆಯನ್ನು ತೆಗೆದುಕೊಳ್ಳಲ್ಲು ಮರೆಯದಿರಿ. ಬನ್ನಿ ಒಣ ಗಂಟಲಿಗೆ ಮನೆಯಲ್ಲಿ ಯಾವ ಯಾವ ಔಷಧಿಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ನೋಡೋಣ....

ಜೇನುತುಪ್ಪ ಸೇವಿಸಿ

ಜೇನುತುಪ್ಪ ಸೇವಿಸಿ

ಒಣ ಗಂಟಲು ಸಮಸ್ಯೆಗೆ ಜೇನುತುಪ್ಪವು ಒಂದು ಅದ್ಭುತವಾದ ಮನೆ ಮದ್ದಾಗಿದೆ. ಆರೋಗ್ಯ ತಜ್ಞರ ಪ್ರಕಾರ ಜೇನು ತುಪ್ಪವು ಸ್ವಾಭಾವಿಕವಾಗಿ ಆಂಟಿ-ಬ್ಯಾಕ್ಟೀರಿಯಲ್ ಮತ್ತು ಗಂಟಲು ನೋವು ನಿವಾರಕ ಅಂಶಗಳನ್ನು ಒಳಗೊಂಡಿರುತ್ತದೆಯಂತೆ.ಇದು ಕೆಮ್ಮು ಬಂದಾಗ ಅದಕ್ಕೆ ಉಪಶಮನವನ್ನು ಒದಗಿಸುವಷ್ಟು ಸಮರ್ಥವಾಗಿರುತ್ತದೆಯಂತೆ. ಉತ್ತಮ ಫಲಿತಾಂಶಕ್ಕಾಗಿ ಜೇನು ತುಪ್ಪವನ್ನು ನೇರವಾಗಿ ಸೇವಿಸಿ. ಬೇಕಾದರೆ ಇದಕ್ಕೆ ಸ್ವಲ್ಪ ಲಿಂಬೆರಸವನ್ನು ಬೆರೆಸಿ, ಬೇಕೆನಿಸಿದಾಗ ಒಂದು ಚಮಚವನ್ನು ಸೇವಿಸಿ.

ಹರ್ಬಲ್ ಟೀಯನ್ನು ಸೇವಿಸಿ

ಹರ್ಬಲ್ ಟೀಯನ್ನು ಸೇವಿಸಿ

ಒಣ ಗಂಟಲ ಸಮಸ್ಯೆಗೆ ಹರ್ಬಲ್ ಟೀ ಒಳ್ಳೆಯ ಮದ್ದು. ಈ ಟೀ ಗಂಟಲಿನಲ್ಲಿರುವ ಗ್ರಂಥಿಗಳಿಗೆ ಆರಾಮವನ್ನು ಒದಗಿಸುತ್ತದೆ. ಅದರಲ್ಲಿಯೂ ಬಿಸಿ ಟೀಯನ್ನು ನೀವು ಸೇವಿಸಿದಾಗ, ಆ ಬಿಸಿಯು ಗಂಟಲಿನಲ್ಲಿರುವ ಕಿಣ್ವಗಳಿಗೆ ಆರಾಮವನ್ನು ನೀಡುತ್ತದೆ. ಈ ಟೀಯನ್ನು ತಯಾರಿಸಲು ಶಾಖ ನಿರೋಧಕ ಮಗ್ ತೆಗೆದುಕೊಂಡು ಅದರಲ್ಲಿ ಬಿಸಿ ನೀರು ಹಾಕಿ, ಇದಕ್ಕೆ ಹರ್ಬಲ್ ಟೀಯನ್ನು ಬೆರೆಸಿ, ಕನಿಷ್ಠ ಒಂದು ನಿಮಿಷ ಅದು ಬಿಸಿಯಾಗಲು ಬಿಡಿ. ಈಗ ಅದಕ್ಕೆ ಸ್ವಲ್ಪ ಜೇನು ತುಪ್ಪವನ್ನು ಮತ್ತು ನಿಂಬೆರಸವನ್ನು ಬೆರೆಸಿ. ಜೇನು ತುಪ್ಪದಲ್ಲಿ ಒಳ್ಳೆಯ ಆಂಟಿಸೆಪ್ಟಿಕ್ ಗುಣಗಳು ಇರುವುದರಿಂದಾಗಿ, ಅದು ಗಂಟಲಿನಲ್ಲಿ ಉಂಟಾಗುವ ಕಿರಿಕಿರಿಯನ್ನು ತಪ್ಪಿಸುತ್ತದೆ. ಹೀಗೆ ಹರ್ಬಲ್ ಟೀಯನ್ನು ತಯಾರಿಸಿಕೊಂಡು ಸೇವಿಸಿ.

ಸಕ್ಕರೆಯ ಎಲಿಕ್ಸಿರ್

ಸಕ್ಕರೆಯ ಎಲಿಕ್ಸಿರ್

ಇದೊಂದು ಪಾನೀಯವಾಗಿದ್ದು ಇದು ನಮ್ಮ ದೇಹದಲ್ಲಿ ಕಳೆದುಹೋಗಿರುವ ಎಲೆಕ್ಟ್ರೋಲೈಟ್‌ಗಳನ್ನು ಮರು ಸಂಗ್ರಹ ಮಾಡಲು ಅವಕಾಶ ಮಾಡಿಕೊಡುತ್ತದೆ. ಜೊತೆಗೆ ಒಣಗಿದ ಬಾಯಿಯಲ್ಲಿ ಅಗತ್ಯ ತೇವಾಂಶವನ್ನು ಸಹ ತಂದುಕೊಡುತ್ತದೆ. ಒಂದು ಚಮಚ ಉಪ್ಪು, ಒಂದು ಚಮಚ ಸಕ್ಕರೆ, ಅರ್ಧ ಚಮಚ ಬೇಕಿಂಗ್ ಸೋಡಾ ಮತ್ತು ಲಿಂಬೆರಸ ಅಥವಾ ಕಿತ್ತಳೆ ರಸವನ್ನು ಒಂದು ಲೋಟ ನೀರಿನಲ್ಲಿ ಬೆರೆಸಿಕೊಂಡು ದಿನಾ ಸೇವಿಸಿ. ಡಿಸ್ಕವರಿ ಹೆಲ್ತ್ ಪ್ರಕಾರ ಈ ಪಾನೀಯವು ಮಾರುಕಟ್ಟೆಯಲ್ಲಿ ದೊರೆಯುವ ಇತರೆ ಪಾನೀಯಗಳಿಗಿಂತ ಪರಿಣಾಮಕಾರಿಯಾಗಿ ನಿಮ್ಮ ಗಂಟಲಿನ ಸಮಸ್ಯೆಯನ್ನು ಬಗೆಹರಿಸುತ್ತದೆಯಂತೆ.

ಸೂಪ್‌ಗಳನ್ನು ನಿಯಮಿತವಾಗಿ ಸೇವಿಸಿ

ಸೂಪ್‌ಗಳನ್ನು ನಿಯಮಿತವಾಗಿ ಸೇವಿಸಿ

ಸುಗರು ಎಲಿಕ್ಸಿರ್‌ನಂತೆ ಸೂಪ್ ಸಹ ನಿಮ್ಮ ಬಾಯಿಯಲ್ಲಿ ತೇವಾಂಶವನ್ನು ತಂದು ಕೊಡುವ ಪಾನೀಯವಾಗಿರುತ್ತದೆ.ಜೊತೆಗೆ ಇದು ಎಲೆಕ್ಟ್ರೋಲೈಟ್‌ಗಳನ್ನು ಸಮತೋಲನದಲ್ಲಿಡುತ್ತದೆ. ಒಣ ಗಂಟಲು ತೇವಾಂಶ ಹೀನತೆಯ ಸಂಕೇತ. ಇದು ದೇಹಕ್ಕೆ ನೀರಿನಂಶದ ಅಗತ್ಯವಿದೆ ಎಂಬ ಸಂದೇಶವನ್ನು ನೀಡುತ್ತದೆ. ತರಕಾರಿ ಸೂಪ್‌ಗಳಲ್ಲಿ ವಿಟಮಿನ್‌ಗಳು ಅಧಿಕ ಪ್ರಮಾಣದಲ್ಲಿರುತ್ತವೆ ಮತ್ತು ಖನಿಜಾಂಶಗಳು ಸಹ ಇದರಿಂದ ದೇಹಕ್ಕೆ ಸಿಗುತ್ತವೆ.

ಹ್ಯುಮಿಡಿಫೈರ್‌ಗಳು

ಹ್ಯುಮಿಡಿಫೈರ್‌ಗಳು

ಒಣಗಂಟಲು ಒಣ ಹವೆಯಲ್ಲಿ ಇರುವುದರಿಂದ ಬರುತ್ತದೆ. ಏರ್ ಕಂಡೀಷನರ್ ಅಥವಾ ಹೀಟರ್ ಮುಂತಾದವು ಇರುವ ಕಡೆ ಈ ಒಣ ಹವೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಇಂತಹ ಸಮಸ್ಯೆಗೆ ಹ್ಯುಮಿಡಿಫೈರ್‌ಗಳು ಪರಿಹಾರವನ್ನು ಒದಗಿಸುತ್ತವೆ. ಇವು ಗಾಳಿಯಲ್ಲಿ ತೇವಾಂಶವನ್ನು ನೀಡುತ್ತವೆ. ಜೊತೆಗೆ ಗಂಟಲು ಒಣಗುವಿಕೆಯನ್ನು ಕಡಿಮೆ ಮಾಡುತ್ತದೆ. ಬದಲಿಯಾಗಿ ಬಿಸಿ ನೀರಿನ ಹಬೆಯನ್ನು ಮನೆಯಲ್ಲಿ ಪಸರಿಸುವ ಮೂಲಕ ಸಹ ಈ ಸಮಸ್ಯೆಗೆ ಪರಿಹಾರವನ್ನು ನೀಡಬಹುದು.

ಗುಳಿಗೆಗಳನ್ನು ಸೇವಿಸುವುದು

ಗುಳಿಗೆಗಳನ್ನು ಸೇವಿಸುವುದು

ಗಂಟಲ ಕಿರಿಕಿರಿಯನ್ನು ತಪ್ಪಿಸುವ ಗುಳಿಗೆಗಳನ್ನು ಸೇವಿಸುವ ಮೂಲಕ ನಿಮ್ಮ ಗಂಟಲಿಗೆ ಉಪಶಮನವನ್ನು ನೀಡಬಹುದು. ಇದನ್ನು ಸೇವಿಸುವಾಗ ಸಲೈವರಿ ಗ್ರಂಥಿಗಳಲ್ಲಿ, ಲಾಲಾರಸವು ಹೆಚ್ಚು ಉತ್ಪಾದನೆಯಾಗುತ್ತದೆ. ಇದು ಗಂಟಲಿನಲ್ಲಿ ಒಣಗುವಿಕೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ಗಂಟಲಿನಲ್ಲಿರುವ ಕೀಟಾಣುಗಳನ್ನು ನಾಶ ಮಾಡುತ್ತದೆ.

English summary

6 Home Remedies for Dry Throat

Dry throat is very common during the winter or spring season. According to the University of Maryland Medical Center (UMMC), dry throat is a condition marked by irritation, dryness, and/or itchiness felt at the back of the tongue, which is the area of pharynx. Here are some home remedies for dry throat that you can try.
X
Desktop Bottom Promotion