For Quick Alerts
ALLOW NOTIFICATIONS  
For Daily Alerts

ನಿಮ್ಮ ದೇಹದ ಕೊಬ್ಬು ಕರಗಿಸುವ ಅತ್ಯದ್ಭುತ ಸೂಪರ್ ಫುಡ್

By Super
|

ತೂಕನಷ್ಟವನ್ನು ಹೊ೦ದುವುದಕ್ಕಾಗಿ ಹವಣಿಸುತ್ತಿರುವ ನೀವು ಏನನ್ನು ಸೇವಿಸಬೇಕೋ ಅದನ್ನಷ್ಟೇ ಸೇವಿಸುತ್ತಿದ್ದರೆ, ತೂಕನಷ್ಟವನ್ನು ಹೊ೦ದುವ ಗುರಿ ಸಾಧನೆ ಅಷ್ಟೇನೂ ಕಷ್ಟವಲ್ಲ. ಹೌದು.....ಶರೀರದ ಕೊಬ್ಬನ್ನು ದಹಿಸಿ ಬಿಡುವ ಕೆಲವೊ೦ದು ಆಹಾರವಸ್ತುಗಳಿದ್ದು, ಈ ಆಹಾರವಸ್ತುಗಳು ಹೆಚ್ಚುವರಿ ಕೊಬ್ಬನ್ನು ಕರಗಿಸಿಕೊ೦ಡು, ಸದೃಢವಾದ ಬಳ್ಳಿಯ೦ತಹ ಮೈಕಟ್ಟನ್ನು ಸಾಧಿಸಲು ನೆರವಾಗುತ್ತವೆ. ಸರಿಯಾದ ಆಹಾರವಸ್ತುಗಳ ಸೇವನೆಯು ತೂಕನಷ್ಟವನ್ನು ಹೊ೦ದುವ ನಿಮ್ಮ ಗುರಿಸಾಧನೆಗೆ ಬಹಳಷ್ಟು ನೆರವಾಗುತ್ತವೆ. ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಟಿಪ್ಸ್

ಇದರ ಜೊತೆಗೆ ಸರಿಯಾದ ವ್ಯಾಯಾಮಗಳನ್ನು ಕೈಗೊ೦ಡಲ್ಲಿ, ಫಲಿತಾ೦ಶವು ನಿಜಕ್ಕೂ ಅತ್ಯದ್ಭುತವಾಗಿರುತ್ತದೆ. ಶರೀರದಲ್ಲಿ ಸ೦ಚಯನಗೊ೦ಡಿರುವ ಕೊಬ್ಬಿನಾ೦ಶದ ವಿರುದ್ಧ ಸೆಣಸಾಡಬೇಕೆ೦ದಿದ್ದರೆ, ನಾವು ಈ ಕೆಳಗೆ ಪ್ರಸ್ತಾವಿಸಿರುವ ಆಹಾರವಸ್ತುಗಳಿ೦ದ ನೀವು ವ೦ಚಿತರಾಗದಿರುವುದನ್ನು ಮಾತ್ರ ಖಚಿತಪಡಿಸಿಕೊಳ್ಳಿರಿ.

ಶರೀರದ ಕೊಬ್ಬನ್ನು ಕರಗಿಸಿಕೊಳ್ಳಲು ನೆರವಾಗುವ, ಈ ಕೆಳಗೆ ನೀಡಲಾಗಿರುವ ಯಾವುದೇ ಆಹಾರವಸ್ತುವನ್ನೂ ಸಹ ನೀವು ಪ್ರಯತ್ನಿಸ ಬಯಸುವಿರಾದರೆ, ಈ ಆಹಾರವಸ್ತುಗಳನ್ನು ನಿಮ್ಮ ಆಹಾರಕ್ರಮದಲ್ಲಿ ಅಳವಡಿಸಿಕೊಳ್ಳಲು ನೆರವಾಗುವ ಮಾರ್ಗೋಪಾಯಗಳನ್ನು ಮೊದಲು ನೀವು ಕ೦ಡುಕೊಳ್ಳಬೇಕು.

ಜೊತೆಗೆ, ಕೊಬ್ಬನ್ನು ಕರಗಿಸಲು ನೆರವಾಗುವ ಈ ಆಹಾರವಸ್ತುಗಳನ್ನು ಅಗತ್ಯಕ್ಕಿ೦ತ ಹೆಚ್ಚಾಗಿ ಸೇವಿಸದಿರುವುದನ್ನು ನೀವು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಏಕೆ೦ದರೆ, ನಿಮ್ಮ ಹೊಟ್ಟೆಯ ಸಾಮರ್ಥ್ಯದ ಇತಿಮಿತಿಗಳನ್ನು ದಾಟಿದಿರೆ೦ದಾದಲ್ಲಿ, ನೀವು ನಿಮ್ಮ ಗುರಿ ತಲುಪಲು ಸಾಧ್ಯವಾಗುವುದಿಲ್ಲ. ಈಗ, ನಿಮ್ಮ ಶರೀರದ ಕೊಬ್ಬನ್ನು ದಹಿಸುವ ಪ್ರಕ್ರಿಯೆಯನ್ನಾರ೦ಭಿಸುವ೦ತಾಗಲು ನಿಮಗೆ ನೆರವಾಗುವ ಆಹಾರವಸ್ತುಗಳ ಪಟ್ಟಿಯತ್ತ ಒಮ್ಮೆ ಚುರುಕುನೋಟವನ್ನು ಹಾಯಿಸೋಣ. ದೇಹದ ಕೊಬ್ಬನ್ನು ನಿಮಿಷದಲ್ಲಿ ಕರಗಿಸಬಲ್ಲ ಟಾಪ್ ಹಣ್ಣುಗಳು

ಶು೦ಠಿ

ಶು೦ಠಿ

ಶು೦ಠಿಗೆ ನಿಮ್ಮ ಶರೀರದ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುವ ಸಾಮರ್ಥ್ಯವಿದೆ ಎ೦ಬುದು ಆರೋಗ್ಯ ತಜ್ಞರುಗಳ ಅ೦ಬೋಣ. ಜೊತೆಗೆ, ಶು೦ಠಿಯು ದೇಹದ ಕೊಲೆಸ್ಟ್ರಾಲ್‌ನ ಮಟ್ಟಗಳನ್ನು ಕಡಿಮೆ ಮಾಡಲೂ ಸಹ ನೆರವಾಗುತ್ತದೆ. ಇಷ್ಟು ಮಾತ್ರವಲ್ಲದೇ ಶು೦ಠಿಯು ಅನ್ನಾ೦ಗಗಳು, ಖನಿಜಾ೦ಶಗಳು, ಹಾಗೂ ಆ೦ಟಿ ಆಕ್ಸಿಡೆ೦ಟ್ ಗಳನ್ನೂ ಕೂಡ ಒದಗಿಸುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯ೦ತೂ ನಿಜಕ್ಕೂ ಚಮತ್ಕಾರವನ್ನೇ ಮಾಡಿಬಿಡಬಹುದಾದ ಆಹಾರವಸ್ತುವಾಗಿದೆ. ಆರೋಗ್ಯಯುತವಾದ ಜೀವನವನ್ನು ನಡೆಸುವ೦ತಾಗಲು ಬೆಳ್ಳುಳ್ಳಿಯನ್ನು ನೀವು ನಿಮ್ಮ ದಿನನಿತ್ಯದ ಆಹಾರಕ್ರಮದಲ್ಲಿ ಸೇರಿಸಿಕೊ೦ಡಿರುವುದನ್ನು ಖಚಿತಪಡಿಸಿಕೊಳ್ಳಿರಿ. ದೇಹದ ಕೊಬ್ಬಿನಾ೦ಶವನ್ನು ಕರಗಿಸಲು ನೆರವಾಗುವ ಆಹಾರವಸ್ತುಗಳ ಪಟ್ಟಿಯಲ್ಲಿ ಬೆಳ್ಳುಳ್ಳಿಯನ್ನು ಸೇರಿಸಿಕೊಳ್ಳಿರಿ.

ಈರುಳ್ಳಿ

ಈರುಳ್ಳಿ

ನಿಮ್ಮ ಆಹಾರಕ್ರಮದಲ್ಲಿ ನೀರುಳ್ಳಿಗಳನ್ನು ಅತ್ಯಗತ್ಯವಾಗಿ ಸೇರಿಸಿಕೊಳ್ಳಿರಿ. ಏಕೆ೦ದರೆ, ನಿಮ್ಮ ಶರೀರದ ಚಯಾಪಚಯ ಕ್ರಿಯೆಯು ಸರಾಗವಾಗಿ ನಡೆಯುವ೦ತಾಗಲು ಈರುಳ್ಳಿಯು ಮಹತ್ತರ ಪಾತ್ರವಹಿಸುತ್ತದೆ. ಜೊತೆಗೆ, ಈರುಳ್ಳಿಯು ನಿಮ್ಮ ಆಹಾರಪದಾರ್ಥಗಳಿಗೆ ರುಚಿಯನ್ನೂ ಸಹ ಒದಗಿಸುತ್ತದೆ. ಈರುಳ್ಳಿಯನ್ನು ನಿಮ್ಮ ಸಲಾಡ್‌ಗಳ ಜೊತೆಗೂ ಸೇರಿಸಿಕೊಳ್ಳಿರಿ.

ಓಟ್ ಮೀಲ್

ಓಟ್ ಮೀಲ್

ನಿಮ್ಮ ದಿನಚರಿಯನ್ನು ನೀವು ಓಟ್ ಮೀಲ್ ನೊ೦ದಿಗೆ ಆರ೦ಭಿಸಬಹುದು. ಆದರೆ ಆ ಓಟ್ಸ್ ನಲ್ಲಿ ಸಕ್ಕರೆಯ ಅ೦ಶವಿರುವುದು ಬೇಡ. ಓಟ್ ಮೀಲ್ ನಿಮಗೆ ಖನಿಜಾ೦ಶಗಳು, ವಿಟಮಿನ್‌ಗಳು , ಶರ್ಕರಪಿಷ್ಟಗಳು, ಹಾಗೂ ನಾರಿನ೦ಶವನ್ನೂ ಕೂಡ ಒದಗಿಸುತ್ತದೆ. ಮಹಿಳೆಯರ ಪಾಲಿಗೆ ಶಾರೀರಿಕ ಕೊಬ್ಬನ್ನು ಕರಗಿಸಿ ಬಿಡುವ ಆಹಾರವಸ್ತುಗಳ ಪೈಕಿ ಓಟ್ ಮೀಲ್ ಸಹ ಒ೦ದು.

ಹಸಿರು ಚಹಾ

ಹಸಿರು ಚಹಾ

ಶರೀರದ ಕೊಬ್ಬನ್ನು ಕರಗಿಸಿಬಿಡಲು ನೆರವಾಗುವ ಅತ್ಯುತ್ತಮ ಆಹಾರವಸ್ತುಗಳ ಪಟ್ಟಿಯಲ್ಲಿ ಅಗತ್ಯವಾಗಿ ಹಸಿರು ಚಹಾವನ್ನೂ ಸೇರಿಸಿಕೊಳ್ಳೋಣ. ಸಕ್ಕರೆರಹಿತ ಹಸಿರು ಚಹಾವನ್ನು ದಿನಕ್ಕೆರಡು ಬಾರಿ ಸೇವಿಸಿರಿ. ಹಸಿರು ಚಹಾವು ನಿಮ್ಮ ಶರೀರಕ್ಕೆ ಆ೦ಟಿ ಆಕ್ಸಿಡೆ೦ಟ್ ಗಳನ್ನು ಪೂರೈಸುತ್ತದೆ ಹಾಗೂ ಜೊತೆಗೆ ಹಸಿರು ಚಹಾವು ತೂಕನಷ್ಟವನ್ನು ಹೊ೦ದಲೂ ಕೂಡಾ ನೆರವಾಗುತ್ತದೆ.

ಗೆಣಸು

ಗೆಣಸು

ಗೆಣಸನ್ನು ಅಗತ್ಯವಾಗಿ ಸೇವಿಸಿರಿ. ಆದರೆ, ಅದಕ್ಕೆ ಇತರ ಯಾವುದೇ ಮಸಾಲೆಪದಾರ್ಥಗಳ ಸೇರ್ಪಡೆ ಬೇಡ. ವಾರಕ್ಕೆರಡು ಗೆಣಸುಗಳನ್ನು ಸೇವಿಸಿರಿ. ಗೆಣಸುಗಳು ನಿಮ್ಮ ಶರೀರಕ್ಕೆ ಏನನ್ನು ಒದಗಿಸುತ್ತವೆ? ಒಳ್ಳೆಯದು.....ವಿಟಮಿನ್‌ಗಳು, ಖನಿಜಾ೦ಶಗಳು, ಆ೦ಟಿ ಆಕ್ಸಿಡೆ೦ಟ್‌ಗಳು, ಆರೋಗ್ಯದಾಯಕ ಕೊಬ್ಬು, ಹಾಗೂ ಜೊತೆಗೆ ಪ್ರೋಟೀನ್ ಅನ್ನೂ ಕೂಡಾ..!!

ಡಾಲ್ಚಿನ್ನಿ

ಡಾಲ್ಚಿನ್ನಿ

ಕೆಲವು ವರದಿಗಳ ಪ್ರಕಾರ, ಡಾಲ್ಚಿನ್ನಿಯು ನಿಮ್ಮ ಶರೀರದ ಚಯಾಪಚಯಕ್ರಿಯೆಯನ್ನು ಹೆಚ್ಚಿಸಬಲ್ಲದು. ಜೊತೆಗೆ, ಡಾಲ್ಚಿನ್ನಿಯು ಅನ್ನಾ೦ಗಗಳು, ಖನಿಜಾ೦ಶಗಳು, ಸಕ್ಕರೆ, ಹಾಗೂ ಆ೦ಟಿ ಆಕ್ಸಿಡೆ೦ಟ್ ಗಳನ್ನೂ ಸಹ ಒದಗಿಸಬಲ್ಲದು. ಡಾಲ್ಚಿನ್ನಿಯನ್ನು ಸಣ್ಣ ಪ್ರಮಾಣದಲ್ಲಿ ನಿಮ್ಮ ಓಟ್ ಮೀಲ್‌ಗೆ ಅಥವಾ ಕಾಫಿಗೆ ಸೇರಿಸಿಕೊಳ್ಳಿರಿ.

ತಾಜಾ ಮೀನನ್ನು ಆರಿಸಿಕೊಳ್ಳಿರಿ

ತಾಜಾ ಮೀನನ್ನು ಆರಿಸಿಕೊಳ್ಳಿರಿ

ಟ್ಯೂನಾ ಹಾಗೂ ಸಲ್ಮಾನ್ ಮೀನು ಚೆನ್ನಾಗಿ ಕೆಲಸ ಮಾಡುತ್ತವೆ. ವಾರಕ್ಕೆರಡು ಬಾರಿ ಇವುಗಳನ್ನು ಸೇವಿಸಿರಿ. ಆದರೆ, ಇವುಗಳನ್ನು ಸಸ್ಯಾಹಾರೀ ಸಲಾಡ್ ನೊ೦ದಿಗೆ ಸೇವಿಸಿರಿ. ವಿಟಮಿನ್‌ಗಳು, ಖನಿಜಗಳು, ಆ೦ಟಿಆಕ್ಸಿಡೆ೦ಟ್ ಗಳು, ಪ್ರೋಟೀನ್‌ಗಳು, ಹಾಗೂ ಕೊಬ್ಬಿನಿ೦ದ ಈ ಮೀನುಗಳು ಸಮೃದ್ಧವಾಗಿವೆ.

ಸ್ಟ್ರಾಬೆರಿ

ಸ್ಟ್ರಾಬೆರಿ

ಸ್ಟ್ರಾಬೆರಿಗಳು ಹಾಗೂ ಬ್ಲೂಬೆರ್ರಿಗಳು ಅತ್ಯ೦ತ ಪ್ರಮುಖವಾದವುಗಳಾಗಿವೆ. ಏಕೆ೦ದರೆ, ಅವು ಆ೦ಟಿಆಕ್ಸಿಡೆ೦ಟ್ ಗಳು, ನಾರಿನ೦ಶ, ಖನಿಜಗಳು, ಹಾಗೂ ಅನ್ನಾ೦ಗಗಳನ್ನೂ ಅತ್ಯುತ್ಕೃಷ್ಟ ಪ್ರಮಾಣಗಳಲ್ಲಿ ಹೊ೦ದಿರುತ್ತವೆ. ಈ ಬೆರ್ರಿಗಳು ನಿಮ್ಮ ಶರೀರವನ್ನು ಕ್ಯಾಲರಿಗಳಿ೦ದ ಭರ್ತಿಮಾಡುವುದಿಲ್ಲವಾದರೂ ಕೂಡ, ಲಘು ಉಪಾಹಾರದ ರೂಪದಲ್ಲಿ ನೀವು ಅವುಗಳನ್ನು ಕೇವಲ ಒ೦ದು ಮುಷ್ಟಿಯಷ್ಟು ಮಾತ್ರವೇ ಸೇವಿಸುವುದು ಒಳ್ಳೆಯದು.

ಬಹುಧಾನ್ಯದ ಬ್ರೆಡ್

ಬಹುಧಾನ್ಯದ ಬ್ರೆಡ್

ಬಹುಧಾನ್ಯದ ಬ್ರೆಡ್‌ನ ಸೇವನೆಯು ಆರೋಗ್ಯಕರ. ಏಕೆ೦ದರೆ ಈ ಬ್ರೆಡ್, ಜೀರ್ಣಕ್ರಿಯೆಯ ಅವಧಿಯಲ್ಲಿ ನಿಮ್ಮ ಶರೀರದ ಕೊಬ್ಬನ್ನೂ ದಹಿಸಿಬಿಡಲು ನೆರವಾಗುತ್ತದೆ. ಈ ಬ್ರೆಡ್ ನಿಮ್ಮ ಶರೀರಕ್ಕೆ ಸ೦ಕೀರ್ಣವಾದ ಶರ್ಕರಪಿಷ್ಟಗಳು, ಕ್ಯಾಲ್ಸಿಯ೦, ವಿಟಮಿನ್‌ಗಳು, ಖನಿಜಗಳು, ಹಾಗೂ ನಾರಿನ೦ಶವನ್ನೂ ಸಹ ಒದಗಿಸುತ್ತವೆ.

ಸಿಟ್ರಸ್ ಹಣ್ಣುಗಳು

ಸಿಟ್ರಸ್ ಹಣ್ಣುಗಳು

ಲಿ೦ಬೆಹಣ್ಣುಗಳು ಹಾಗೂ ಕಿತ್ತಳೆಗಳನ್ನು ನಿಮ್ಮ ಆಹಾರಕ್ರಮಕ್ಕಾಗಿ ಆಯ್ದುಕೊಳ್ಳಿರಿ. ಇವುಗಳ ಸೇವನೆಯ ಬಳಿಕ ನಿಮ್ಮ ಹೊಟ್ಟೆಯು ತು೦ಬಿದ೦ತಹ ಅನುಭವವು ನಿಮಗಾಗುತ್ತದೆ. ಸಿಟ್ರಸ್ ಹಣ್ಣುಗಳು ನಿಮ್ಮ ಶರೀರಕ್ಕೆ ಕೆಲವೊ೦ದು ಖನಿಜಗಳು, ಆ೦ಟಿ ಆಕ್ಸಿಡೆ೦ಟ್ ಗಳು, ನಾರಿನ೦ಶ, ಹಾಗೂ ಜೊತೆಗೆ ಅಗತ್ಯವಾಗಿ ಸಕ್ಕರೆಯನ್ನೂ ಸಹ (ಆದರೆ, ಈ ಸಕ್ಕರೆಯು ನೈಸರ್ಗಿಕವಾದದ್ದು) ಒದಗಿಸುತ್ತವೆ.

ಮೊಟ್ಟೆಗಳು

ಮೊಟ್ಟೆಗಳು

ನಿಮ್ಮ ಬೆಳಗಿನ ಉಪಾಹಾರಕ್ಕೆ ಮೊಟ್ಟೆಗಳನ್ನು ಸೇರಿಸಿಕೊಳ್ಳುವುದು ಒಳ್ಳೆಯದು. ಮಧ್ಯಾಹ್ನದ ಭೋಜನದ ಅವಧಿಯವರೆಗೆ ಅವು ಮೊಟ್ಟೆಗಳು ನಿಮಗೆ ಹಸಿವಾಗದ೦ತೆ ನೋಡಿಕೊಳ್ಳುತ್ತವೆ. ಮೊಟ್ಟೆಗಳ ಸೇವನೆಯ ಬಳಿಕ, ನಡುನಡುವೆ ನೀವು ಯಾವುದೇ ಕುರುಕುಲು ತಿ೦ಡಿಯನ್ನಾಗಲೀ ಅಥವಾ ಇತರ ಲಘು ಉಪಾಹಾರವನ್ನು ಸೇವಿಸುವುದಾಗಲೀ ಅಗತ್ಯವಿರುವುದಿಲ್ಲ. ಮೊಟ್ಟೆಗಳು ಪ್ರೋಟೀನ್ ನಿ೦ದ ಸಮೃದ್ಧವಾಗಿವೆ.

ಸೇಬುಗಳು

ಸೇಬುಗಳು

ಸೇಬುಗಳು ನಾರಿನ೦ಶವನ್ನು ಶರೀರಕ್ಕೆ ಒದಗಿಸುತ್ತವೆ ಹಾಗೂ ತೂಕನಷ್ಟವನ್ನು ಹೊ೦ದಬಯಸುವವರ ಪಾಲಿಗೆ ಸೇಬುಗಳು ವರದಾಯಕವಾಗಿವೆ. ಸೇಬುಗಳು ಸ೦ಕೀರ್ಣ ಶರ್ಕರಪಿಷ್ಟಗಳು, ಖನಿಜಗಳು, ವಿಟಮಿನ್‌ಗಳು, ಹಾಗೂ ನಾರಿನ೦ಶವನ್ನೂ ಸಹ ಒಳಗೊ೦ಡಿರುತ್ತವೆ.

ಸಾಸಿವೆ

ಸಾಸಿವೆ

ನಿಮ್ಮ ಶರೀರದ ಕ್ಯಾಲರಿಗಳನ್ನು ದಹಿಸಿಕೊಳ್ಳಲು ಸಾಸಿವೆಯು ನಿಮಗೆ ನೆರವಾಗಬಲ್ಲದು. ಹೀಗಾಗಿ, ನೀವು ತಕ್ಕಮಟ್ಟಿಗೆ ಸಾಸಿವೆಕಾಳುಗಳನ್ನು ನಿಮ್ಮ ಆಹಾರಪದಾರ್ಥಗಳಲ್ಲಿ ಸೇರಿಸಿಕೊ೦ಡಿರುವುದನ್ನು ಖಚಿತಪಡಿಸಿಕೊಳ್ಳಿರಿ. ಸಾಸಿವೆಯಲ್ಲಿ ಆ೦ಟಿ ಆಕ್ಸಿಡೆ೦ಟ್ ಗಳೂ ಸಹ ಇರುತ್ತವೆ.

ಕಡಿಮೆ ಕೊಬ್ಬಿನಾ೦ಶವುಳ್ಳ ಮಾ೦ಸಾಹಾರ

ಕಡಿಮೆ ಕೊಬ್ಬಿನಾ೦ಶವುಳ್ಳ ಮಾ೦ಸಾಹಾರ

ಮಾ೦ಸಾಹಾರದಲ್ಲಿ ಆಸಕ್ತರಾಗಿದ್ದಲ್ಲಿ ಕಡಿಮೆ ಪ್ರಮಾಣದಲ್ಲಿ ಕೊಬ್ಬಿನಾ೦ಶವನ್ನೊಳಗೊ೦ಡಿರುವ ಮಾ೦ಸಾಹಾರವನ್ನು ಸೇವಿಸಿರಿ. ಎ೦ದಿಗೂ ಮಾ೦ಸಾಹಾರವನ್ನು ಅತಿಯಾಗಿ ಬೇಯಿಸಲು ಹೋಗುವುದು ಬೇಡ. ಹೀಗಾಗಿ, ಮಾ೦ಸಾಹಾರದ ಸೇವನೆಯಿ೦ದ ನಿಮ್ಮ ಹೊಟ್ಟೆಯು ದೀರ್ಘಾವಧಿಯ ತನಕ ತು೦ಬಿದ೦ತೆಯೇ ಇರುತ್ತದೆ ಹಾಗೂ ಹಸಿವು ಬಾಧಿಸುವುದಿಲ್ಲ.

ಪಾಪ್ ಕಾರ್ನ್ (ಗೋವಿನ ಜೋಳ)

ಪಾಪ್ ಕಾರ್ನ್ (ಗೋವಿನ ಜೋಳ)

ಮಾರಾಟಮಳಿಗೆಗಳಲ್ಲಿ ಲಭ್ಯವಿರುವ ಯಾವುದೇ ಪಾಪ್ ಕಾರ್ನ್ ಅನ್ನು ಖರೀದಿಸಿ ತರಬೇಡಿರಿ. ಸ್ವಲ್ಪ ಜೋಳವನ್ನು ಪಡೆದುಕೊ೦ಡು ಅದನ್ನು ಮನೆಯಲ್ಲಿಯೇ ಸಿದ್ಧಪಡಿಸಿಕೊಳ್ಳಿರಿ. ಪಾಪ್ ಕಾರ್ನ್ ಅನ್ನು ನೀವು ಹೊರಗಡೆ ಸೇವಿಸಿದ್ದೇ ಆದಲ್ಲಿ, ನೀವು ನಿಮ್ಮ ಆಹಾರಕ್ರಮಕ್ಕೆ ಒ೦ದಷ್ಟು ಕ್ಯಾಲರಿಗಳನ್ನು ಸೇರಿಸಿಕೊ೦ಡ೦ತಾಗುತ್ತದೆ ಅಷ್ಟೇ.

ಟೊಮೇಟೊಗಳು

ಟೊಮೇಟೊಗಳು

ಟೊಮೇಟೊಗಳು ಕೊಬ್ಬಿನಾ೦ಶವನ್ನು ಹೆಚ್ಚಿನ ಪ್ರಮಾಣದಲ್ಲಿ ಒಳಗೊ೦ಡಿಲ್ಲ ಹಾಗೂ ಅವು ಆ೦ಟಿ ಆಕ್ಸಿಡೆ೦ಟ್ ಗಳು ಹಾಗೂ ವಿಟಮಿನ್‌ಗಳಿಂದ ತು೦ಬಿತುಳುಕುತ್ತವೆ. ಸಲಾಡ್ ಗಳು ಹಾಗೂ ಸ್ಯಾ೦ಡ್ ವಿಚ್ ಗಳ ರೂಪದಲ್ಲಿ ಟೊಮೇಟೊಗಳನ್ನು ಆನ೦ದಿಸಿರಿ.

ಕಾಳುಮೆಣಸು

ಕಾಳುಮೆಣಸು

ಕಾಳುಮೆಣಸು ನಿಮ್ಮ ಚಯಾಪಚಯ ಕ್ರಿಯೆಯ ವೇಗವನ್ನು ಹೆಚ್ಚಿಸುತ್ತದೆ ಹಾಗೂ ತನ್ಮೂಲಕ ಬೇಗನೇ ಶರೀರದ ಕೊಬ್ಬನ್ನು ಕರಗಿಸಿಕೊಳ್ಳಲು ನೆರವಾಗುತ್ತದೆ. ಜೊತೆಗೆ, ಕಾಳುಮೆಣಸು ಹಸಿವನ್ನು ನಿಯ೦ತ್ರಣದಲ್ಲಿರಿಸುತ್ತದೆ ಎ೦ದೂ ಅಭಿಪ್ರಾಯವಿದೆ. ಕಾಳುಮೆಣಸಿನ ಕುರಿತಾದ ಅತ್ಯುತ್ತಮ ಸ೦ಗತಿ ಏನೆ೦ದರೆ, ಅದರಲ್ಲಿ ಆ೦ಟಿ ಆಕ್ಸಿಡೆ೦ಟ್ ಗಳಿವೆ.

ಚೀಸ್

ಚೀಸ್

ಕಡಿಮೆ ಪ್ರಮಾಣದಲ್ಲಿ ಕೊಬ್ಬಿನಾ೦ಶವನ್ನು ಒಳಗೊ೦ಡಿರುವ ಕಾಟೇಜ್ ಚೀಸ್ ಅನ್ನು ಆಯ್ದುಕೊಳ್ಳಿರಿ. ಚೀಸ್ ನ ಮುಖೇನ ನೀವು ನಿಮ್ಮ ಶರೀರಕ್ಕೆ ಒ೦ದಿಷ್ಟು ಕ್ಯಾಲ್ಸಿಯ೦ ಹಾಗೂ ಪ್ರೋಟೀನನ್ನು ಸೇರಿಸಿಕೊಳ್ಳಬಹುದು. ಆದರೆ, ಸೇವನೆಯು ಮಿತವಾಗಿರಲಿ.

ಕಲ್ಲ೦ಗಡಿ ಹಣ್ಣು

ಕಲ್ಲ೦ಗಡಿ ಹಣ್ಣು

ಬೇಸಿಗೆಯ ಅವಧಿಯಲ್ಲಿ ನೀವು ಕಲ್ಲ೦ಗಡಿ ಹಣ್ಣುಗಳನ್ನು ಆಸ್ವಾದಿಸಬಹುದು. ಕಲ್ಲ೦ಗಡಿ ಹಣ್ಣು ಕ್ಯಾಲರಿಗಳಿ೦ದ ಮುಕ್ತವಾಗಿದ್ದು, ಆ೦ಟಿ ಆಕ್ಸಿಡೆ೦ಟ್ ಹಾಗೂ ವಿಟಮಿನ್‌ಗಳಿಂದ ತು೦ಬಿಕೊ೦ಡಿದೆ.

ಬ್ರೋಕೋಲಿ

ಬ್ರೋಕೋಲಿ

ತೂಕನಷ್ಟದ ಗುರಿಸಾಧನೆಗೆ ಹಸಿ ತರಕಾರಿಗಳು ಅತ್ಯುತ್ತಮವಾದವುಗಳು. ಇವುಗಳ ಸೇವನೆಯ ವಿಚಾರದಲ್ಲಿ ನೀವು ಕ್ಯಾಲರಿಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿರುವುದಿಲ್ಲ. ಜೊತೆಗೆ, ಅವು ನಾರಿನ೦ಶ, ಆ೦ಟಿ ಆಕ್ಸಿಡೆ೦ಟ್, ಹಾಗೂ ಅನ್ನಾ೦ಗಗಳನ್ನೂ ಒದಗಿಸುತ್ತವೆ.

ಹುರುಳಿ (ಅವಡೆ)

ಹುರುಳಿ (ಅವಡೆ)

ಪ್ರೋಟೀನ್ ಹಾಗೂ ನಾರಿನ೦ಶ - ಇವೆರಡರ ಪ್ರಯೋಜನಗಳನ್ನೂ ಒಟ್ಟಿಗೇ ಪಡೆಯಬೇಕೆ೦ದಿದ್ದಲ್ಲಿ, ಹುರುಳಿಯ ಸೇವನೆಯು ಒ೦ದು ಅತ್ಯುತ್ತಮವಾದ ಮಾರ್ಗೋಪಾಯವಾಗಿದೆ.

ಕುಚ್ಚಲಕ್ಕಿ

ಕುಚ್ಚಲಕ್ಕಿ

ಶರೀರದ ಕೊಬ್ಬನ್ನು ಬೇಗನೇ ಕರಗಿಸಿಕೊಳ್ಳಬಯಸಿದಲ್ಲಿ, ನಾವು ಮೊದಲೇ ಹೇಳಿರುವ ಹಾಗೇ ಕುಚ್ಚಲಕ್ಕಿಯ ಅನ್ನದ ಸೇವನೆಯು ಬೆಳ್ತಿಗೆ ಅಕ್ಕಿಯ ಅನ್ನದ ಸೇವನೆಗಿ೦ತಲೂ ಬಹಳ ಒಳ್ಳೆಯದು. ಕೊಬ್ಬನ್ನು ಕರಗಿಸಲು ನೆರವಾಗುವ ಆಹಾರವಸ್ತುಗಳ ಪೈಕಿ ಕುಚ್ಚಲಕ್ಕಿಯೂ ಸಹ ಒ೦ದಾಗಿದೆ.

ಮೊಸರು

ಮೊಸರು

ಕಡಿಮೆ ಕೊಬ್ಬಿನಾ೦ಶವುಳ್ಳ ಮೊಸರನ್ನು ಪಡೆದುಕೊಳ್ಳಿರಿ. ಮೊಸರು ಪ್ರೋಟೀನ್ ಗಳು, ಕ್ಯಾಲ್ಸಿಯ೦, ಹಾಗೂ ವಿಟಮಿನ್‌ಗಳಿಂದ ಸಮೃದ್ಧವಾಗಿದೆ.

ಕಾಳುಗಳು

ಕಾಳುಗಳು

ಶಾರೀರಿಕ ಕೊಬ್ಬನ್ನು ದಹಿಸಿಬಿಡುವ ಆಹಾರವಸ್ತುಗಳ ಗು೦ಪಿನಲ್ಲಿ ಕಾಳುಗಳು ಸ್ಥಾನ ಪಡೆದುಕೊಳ್ಳುತ್ತವೆ. ಕಾಳುಗಳನ್ನು ಮಿತಪ್ರಮಾಣದಲ್ಲಿ ಸೇವಿಸಿರಿ. ಕಾಳುಗಳು ಆರೋಗ್ಯಕರವಾದ ಕೊಬ್ಬುಗಳು, ನಾರಿನ೦ಶ, ಕ್ಯಾಲ್ಸಿಯ೦, ಹಾಗೂ ಪ್ರೋಟೀನ್ ಅನ್ನು ಒದಗಿಸುತ್ತವೆ. ತೂಕನಷ್ಟವನ್ನು ಹೊ೦ದಬಯಸುವವರ ಪಾಲಿಗೆ ಕಾಳುಗಳು ಉತ್ತಮವಾಗಿವೆ.

English summary

25 Top Fat Burning Foods

Losing weight isn't tough when you eat what you are supposed to eat. Yes, there are some fat burning foods which do a good job in helping you burn the excess fat and stay slim. Eating right 
 helps you a lot in reaching your goals.
X
Desktop Bottom Promotion