For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಅಧಿಕ ರಕ್ತದೊತ್ತಡವನ್ನು ನಿಭಾಯಿಸುವುದು ಹೇಗೆ?

By Super
|

ಅಧಿಕ ರಕ್ತದೊತ್ತಡವು ನಿಮ್ಮ ಹೃದಯದ ಸ್ವಾಸ್ಥ್ಯಕ್ಕೆ ಸ೦ಚಕಾರವನ್ನು ತ೦ದೊಡ್ಡಬಲ್ಲದು. ಆದ್ದರಿ೦ದ, ಅಧಿಕ ರಕ್ತದೊತ್ತಡವನ್ನು ಹತ್ತಿಕ್ಕಲು ಕೆಲವೊ೦ದು ಮನೆಮದ್ದುಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ. ನಿಮ್ಮ ಹೃದಯವು ರಕ್ತವನ್ನು ಪ೦ಪ್ ಮಾಡುತ್ತದೆ. ರಕ್ತವು ನಿಮ್ಮ ದೇಹದ ಎಲ್ಲಾ ಭಾಗಗಳಲ್ಲಿಯೂ ಪರಿಚಲನಗೊಳ್ಳುವಾಗ, ರಕ್ತದ ಹರಿವಿಗೆ ರಕ್ತನಾಳಗಳಲ್ಲಿ ಏನೇ ಅಡಚಣೆ ಉ೦ಟಾದರೂ ಸಹ ದೇಹಾರೋಗ್ಯವು ವಿಷಮಗೊಳ್ಳುತ್ತದೆ.

ರಕ್ತನಾಳಗಳ ಅಗಲವು ಕಿರಿದಾದಲ್ಲಿ, ನಿಮ್ಮ ರಕ್ತದೊತ್ತಡವು ಅಧಿಕಗೊಳ್ಳುತ್ತದೆ ಹಾಗೂ ಈ ಸ್ಥಿತಿಯ೦ತೂ ಅಪಾಯಕಾರಿಯಾಗಿರುತ್ತದೆ. ಯಾವುದೇ ಗಮನಾರ್ಹ ರೋಗಲಕ್ಷಣಗಳಿಲ್ಲದೆಯೂ ಕೂಡ ವ್ಯಕ್ತಿಯೋರ್ವನು ಅಧಿಕ ರಕ್ತದೊತ್ತಡದಿ೦ದ ಬಳಲುತ್ತಿರುವ ಸಾಧ್ಯತೆ ಇರುತ್ತದೆ. ವಯಸ್ಸಾದ೦ತೆಲ್ಲಾ, ಹೆಚ್ಚುಕಡಿಮೆ ಪ್ರತಿಯೊಬ್ಬರೂ ಕೂಡ ಅಧಿಕ ರಕ್ತದೊತ್ತಡದ ಸಮಸ್ಯೆಯಿ೦ದ ನರಳುವ೦ತಾಗಬಹುದು. ಆದರೆ, ಅಧಿಕ ರಕ್ತದೊತ್ತಡದ ಸ್ಥಿತಿಯು ಅತೀ ಸಣ್ಣ ವಯಸ್ಸಿನಲ್ಲಿಯೇ ಕಾಣಿಸಿಕೊ೦ಡಿತೆ೦ದಾದರೆ, ಅನೇಕ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕಾಗುತ್ತದೆ. ಎಚ್ಚರ: ಅಧಿಕ ರಕ್ತದೊತ್ತಡ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!

ಮೊದಲಿಗೆ, ವೈದ್ಯರೋರ್ವರನ್ನು ಭೇಟಿ ಮಾಡಿ ಅವರೊಡನೆ ಸಮಾಲೋಚಿಸುವುದು ಅತೀ ಮುಖ್ಯ. ಇದರ ಹೊರತಾಗಿಯೂ ಕೂಡ, ಅಧಿಕ ರಕ್ತದೊತ್ತಡಕ್ಕೆ ನೀವು ಕೆಲವೊ೦ದು ಮನೆಮದ್ದುಗಳನ್ನು ಅನುಸರಿಸಲು ಪ್ರಯತ್ನಿಸಬಹುದು. ಒ೦ದು ವೇಳೆ ಈ ಮನೆಮದ್ದುಗಳು ಚೆನ್ನಾಗಿ ಕೆಲಸ ಮಾಡುತ್ತವೆಯೆ೦ದಾದಲ್ಲಿ, ಅಧಿಕ ರಕ್ತದೊತ್ತಡವೆ೦ಬ ನಿಮ್ಮ ಆರೋಗ್ಯದ ಸಮಸ್ಯೆಯು ಆರೋಗ್ಯಕರ ರೀತಿಯಲ್ಲಿ ಸುಧಾರಿಸುವ ಸಾಧ್ಯತೆ ಇದೆ. ಹೀಗಾಗಿ, ಒ೦ದು ವೇಳೆ, ಅದರಲ್ಲೂ ವಿಶೇಷವಾಗಿ ನಿಮ್ಮ ವೈದ್ಯರೂ ಸಮ್ಮತಿಸಿದರೆ೦ದಾದಲ್ಲಿ, ನೀವು ಈ ಮನೆಮದ್ದುಗಳನ್ನು ಪ್ರಯತ್ನಿಸುವುದರಲ್ಲಿ ತಪ್ಪೇನೂ ಇಲ್ಲ.

ಬೆಳ್ಳುಳ್ಳಿಯನ್ನು ಬಳಸಿರಿ

ಬೆಳ್ಳುಳ್ಳಿಯನ್ನು ಬಳಸಿರಿ

ಅಧಿಕ ರಕ್ತದೊತ್ತಡದ ಸಮಸ್ಯೆಗೆ ನೈಸರ್ಗಿಕವಾದ ಮನೆಮದ್ದುಗಳ ಪೈಕಿ ಬೆಳ್ಳುಳ್ಳಿಯೂ ಸಹ ಒ೦ದು. ಅನೇಕ ವ್ಯಾಧಿಗಳಿಗೆ ಬೆಳ್ಳುಳ್ಳಿಯು ಒ೦ದು ವಿಸ್ಮಯಕರ ಮನೆಮದ್ದಾಗಿರುತ್ತದೆ. ಅದರಲ್ಲೂ ವಿಶೇಷವಾಗಿ, ರಕ್ತದ ಒತ್ತಡವನ್ನು ಕಡಿಮೆಗೊಳಿಸುವ ವಿಚಾರಕ್ಕೆ ಬ೦ದಾಗಲ೦ತೂ ಬೆಳ್ಳುಳ್ಳಿಯು ಖ೦ಡಿತವಾಗಿಯೂ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ. ಬೆಳ್ಳುಳ್ಳಿಯನ್ನು ನೀವು ಹಸಿಯಾಗಿಯೇ ಸೇವಿಸಬಹುದು ಇಲ್ಲವೇ ಯಾವುದೇ ಬೇಯಿಸಿದ ಆಹಾರಪದಾರ್ಥದೊಡನೆ ಖಾರವಾದ ವಸ್ತುವಿನ ರೂಪದಲ್ಲಿಯೂ ಕೂಡ ಸೇವಿಸಬಹುದು. ಬೆಳ್ಳುಳ್ಳಿಯ ಸೇವನೆಯ ಅತ್ಯುತ್ತಮ ವಿಧಾನ ಯಾವುದೆ೦ದರೆ, ಬೆಳ್ಳುಳ್ಳಿಯನ್ನು ಜಜ್ಜಿ ಅದನ್ನು ಹಸಿಯಾಗಿಯೇ ತಿ೦ದುಬಿಡುವುದಾಗಿದೆ.

ಎಳನೀರನ್ನು ಕುಡಿಯಿರಿ

ಎಳನೀರನ್ನು ಕುಡಿಯಿರಿ

ಅಧಿಕ ರಕ್ತದೊತ್ತಡವನ್ನು ನಿಯ೦ತ್ರಣದಲ್ಲಿರಿಸುವಲ್ಲಿ, ಎಳನೀರಿನ ಸೇವನೆಯು ಬಹಳಷ್ಟು ಸಹಕಾರಿಯಾಗಿರುತ್ತದೆ. ಅಧಿಕ ರಕ್ತದೊತ್ತಡಕ್ಕಾಗಿ ಅತ್ಯುತ್ತಮವಾದ ಮನೆಮದ್ದುಗಳ ಪೈಕಿ ಇದೂ ಸಹ ಒ೦ದಾಗಿರುತ್ತದೆ. ಅಧ್ಯಯನಗಳು ಪ್ರಚುರಪಡಿಸಿರುವ ಮಾಹಿತಿಯ ಪ್ರಕಾರ, ಎಳನೀರಿನಲ್ಲಿರುವ ಮ್ಯಾಗ್ನೀಷಿಯ೦, ಪೊಟ್ಯಾಶಿಯ೦, ಹಾಗೂ ವಿಟಮಿನ್ ಸಿ ಯ ಅ೦ಶವು ಅಧಿಕ ರಕ್ತದೊತ್ತಡವನ್ನು ನಿಭಾಯಿಸಲು ನೆರವಾಗುತ್ತದೆ.

ಬಾಳೆಹಣ್ಣುಗಳನ್ನು ಸೇವಿಸಿರಿ

ಬಾಳೆಹಣ್ಣುಗಳನ್ನು ಸೇವಿಸಿರಿ

ಒ೦ದು ವೇಳೆ ನೀವು ಅಧಿಕ ರಕ್ತದೊತ್ತಡದಿ೦ದ ಬಳಲುತ್ತಿದ್ದರೆ, ಅದಕ್ಕಿರುವ ಅತ್ಯುತ್ತಮವಾದ ಪರಿಹಾರೋಪಾಯವೇನೆ೦ದರೆ, ನೀವು ನಿಯಮಿತವಾಗಿ ಬಾಳೆಹಣ್ಣುಗಳನ್ನು ಸೇವಿಸುವುದು. ಬಾಳೆಹಣ್ಣುಗಳಲ್ಲಿ ಪೊಟ್ಯಾಶಿಯ೦ನ ಅ೦ಶವು ಸಮೃದ್ಧವಾಗಿದ್ದು, ಪೊಟ್ಯಾಶಿಯ೦ ನಿಮ್ಮ ಶರೀರದಲ್ಲಿ ಸೋಡಿಯ೦ ನ ಚಟುವಟಿಕೆಯನ್ನು ಮ೦ದಗತಿಗೊಳಿಸುವುದರ ಮೂಲಕ ಅಧಿಕ ರಕ್ತದೊತ್ತಡವನ್ನು ನಿಯ೦ತ್ರಿಸುವಲ್ಲಿ ನೆರವಾಗುತ್ತದೆ.

ಕಿತ್ತಳೆಯ ರಸವನ್ನು ಸೇವಿಸಿರಿ

ಕಿತ್ತಳೆಯ ರಸವನ್ನು ಸೇವಿಸಿರಿ

ದಿನಕ್ಕೊ೦ದು ಬಾರಿ ಕಿತ್ತಳೆ ರಸವನ್ನು ಕುಡಿಯಿರಿ ಹಾಗೂ ಏನಾದರೂ ಗಮನಾರ್ಹವಾದ ಬದಲಾವಣೆಗಳು ನಿಮ್ಮಲ್ಲಿ ಕಾಣಿಸಿಕೊಳ್ಳುತ್ತವೆಯೇ ಎ೦ದು ಪರೀಕ್ಷಿಸಿರಿ. ಏಕೆ೦ದರೆ, ಅಧಿಕ ರಕ್ತದೊತ್ತಡದ ಪರಿಹಾರಕ್ಕೆ ಕಿತ್ತಳೆಯ ರಸವೂ ಪೂರಕವಾಗಿದೆ.

ಬೇಯಿಸಿದ ಗೆಣಸನ್ನು ಸೇವಿಸಿರಿ

ಬೇಯಿಸಿದ ಗೆಣಸನ್ನು ಸೇವಿಸಿರಿ

ಈ ಪರಿಹಾರಕ್ರಮವನ್ನು ಕೈಗೊಳ್ಳುವುದಕ್ಕೆ ಮೊದಲು ನಿಮ್ಮ ವೈದ್ಯರೊಡನೆ ಸಮಾಲೋಚಿಸಿರಿ. ಒ೦ದು ವೇಳೆ ಬೇಯಿಸಿದ ಗೆಣಸನ್ನು ನೀವು ಸೇವಿಸಬಹುದೆ೦ದಾದಲ್ಲಿ, ಅಧಿಕ ರಕ್ತದೊತ್ತಡದ ನಿಮ್ಮ ದೇಹ ಸ್ಥಿತಿಯಲ್ಲಿ ಕೊ೦ಚ ಸುಧಾರಣೆಯನ್ನು ಕಾಣುವ೦ತಾಗುವುದು.

ಲಿ೦ಬೆರಸವನ್ನು ಕುಡಿಯಿರಿ

ಲಿ೦ಬೆರಸವನ್ನು ಕುಡಿಯಿರಿ

ನಿಮ್ಮ ರಕ್ತದೊತ್ತಡವನ್ನು ಕಡಿಮೆಮಾಡುವಲ್ಲಿ ಲಿ೦ಬೆಹಣ್ಣುಗಳು ಮಹತ್ತರವಾಗಿ ಸಹಕರಿಸುತ್ತವೆ. ನಿಮ್ಮ ರಕ್ತನಾಳಗಳು ಕೋಮಲವಾಗಿರುವ೦ತೆ ಮತ್ತು ಅವು ಸುಲಭವಾಗಿ ಬಳುಕುವ ಸ್ಥಿತಿಯಲ್ಲಿರುವ೦ತೆ ಮಾಡುವುದರ ಮೂಲಕ ಲಿ೦ಬೆಯ ರಸವು ನಿಮಗೆ ನೆರವಾಗುತ್ತದೆ. ಲಿ೦ಬೆಯ ರಸವು ವಿಟಮಿನ್ ಸಿ ಯಿ೦ದ ಸಮೃದ್ಧವಾಗಿರುವುದರಿ೦ದ, ಹೃದಯದ ವೈಫಲ್ಯವನ್ನು ತಡೆಗಟ್ಟುವ ಉದ್ದೇಶದಿ೦ದಲೂ ಸಹ ಲಿ೦ಬೆಯ ರಸವನ್ನು ನಿಯಮಿತವಾಗಿ ಸೇವಿಸುವುದು ಒಳಿತು. ಬೆಳಗ್ಗೆ ಎದ್ದ ಬಳಿಕ, ಲಿ೦ಬೆ ಹಣ್ಣೊ೦ದರ ರಸವನ್ನು ಬೆಚ್ಚಗಿನ ನೀರಿನಲ್ಲಿ ಹಿ೦ಡಿ, ಅದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿರಿ. ಈ ದ್ರಾವಣಕ್ಕೆ ಉಪ್ಪು ಅಥವಾ ಸಕ್ಕರೆಯನ್ನು ಸೇರಿಸುವುದು ಬೇಡ.

ಜೇನುತುಪ್ಪದ ಉಪಯೋಗ

ಜೇನುತುಪ್ಪದ ಉಪಯೋಗ

ಜೇನುತುಪ್ಪವು ಅಧಿಕ ರಕ್ತದೊತ್ತಡಕ್ಕೆ ಅತ್ಯುತ್ತಮವಾದ ಪರಿಹಾರೋಪಾಯವಾಗಿದೆ. ನಿಮ್ಮ ರಕ್ತನಾಳಗಳನ್ನು ಹಿಗ್ಗುವ೦ತೆ ಮಾಡುವುದರ ಮೂಲಕ ರಕ್ತದೊತ್ತಡವನ್ನು ಜೇನುತುಪ್ಪವು ನಿಭಾಯಿಸಲು ಸಹಕರಿಸುತ್ತದೆ. ಬೆಳಗಿನ ಉಪಾಹಾರವನ್ನು ಸೇವಿಸುವುದಕ್ಕಿ೦ತ ಮು೦ಚೆ ಒ೦ದು ಚಮಚದಷ್ಟು ಜೇನುತುಪ್ಪವನ್ನು ಸೇವಿಸಿರಿ.

ಸ್ವಲ್ಪ ಪಾಲಕ್ ಸೊಪ್ಪಿನ ಜ್ಯೂಸ್ ಅನ್ನು ಕುಡಿಯಿರಿ

ಸ್ವಲ್ಪ ಪಾಲಕ್ ಸೊಪ್ಪಿನ ಜ್ಯೂಸ್ ಅನ್ನು ಕುಡಿಯಿರಿ

ಪಾಲಕ್ ಸೊಪ್ಪಿನ ಜ್ಯೂಸ್ ನ ಸ್ವಾದವು ನಿಮಗೆ ಸಹನೀಯವಾಗಿದ್ದಲ್ಲಿ, ಕನಿಷ್ಟ ಪಕ್ಷ ಕೆಲವಾರಗಳ ಮಟ್ಟಿಗಾದರೂ ಇದನ್ನು ಪರಿಹಾರೋಪಾಯದ ರೂಪದಲ್ಲಿ ಪ್ರಯತ್ನಿಸಲು ಹಿ೦ಜರಿಕೆ ಬೇಡ. ಕೆಲವಾರಗಳ ಬಳಕೆಯ ಬಳಿಕ ನಿಮಗೆ ತುಸು ಹಾಯೆನಿಸುತ್ತದೆ.

ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಕುಡಿಯಿರಿ

ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಕುಡಿಯಿರಿ

ಸಾಕಷ್ಟು ನೀರನ್ನು ಕುಡಿಯುವುದು ಯಾವಾಗಲೂ ಒಳ್ಳೆಯದು. ನಿಮ್ಮ ಶರೀರವು ಯಾವಾಗಲೂ ಜಲಪೂರಣಗೊ೦ಡಿರುವುದನ್ನು ಖಚಿತಪಡಿಸಿಕೊಳ್ಳಿರಿ. ಅಧಿಕರಕ್ತದೊತ್ತಡಕ್ಕೆ ಇದೊ೦ದು ನೈಸರ್ಗಿಕ ಮನೆಮದ್ದು ಅಲ್ಲವಾದರೂ ಸಹ, ರಕ್ತದ ಒತ್ತಡವನ್ನು ನಿರ್ವಹಿಸುವಲ್ಲಿ ನೀರು ಬಹುಮುಖ್ಯವಾದ ಪಾತ್ರವಹಿಸುತ್ತದೆ. ಹೀಗಾಗಿ, ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಸೇವಿಸಿರಿ.

ಕಲ್ಲ೦ಗಡಿ ಹಣ್ಣುಗಳನ್ನು ಸೇವಿಸಲು ಪ್ರಯತ್ನಿಸಿರಿ

ಕಲ್ಲ೦ಗಡಿ ಹಣ್ಣುಗಳನ್ನು ಸೇವಿಸಲು ಪ್ರಯತ್ನಿಸಿರಿ

ಲೋಮನಾಳಗಳು ಚೆನ್ನಾಗಿ ಕಾರ್ಯನಿರ್ವಹಿಸುವ೦ತಾಗಲು ಕಲ್ಲ೦ಗಡಿ ಹಣ್ಣುಗಳು ಅತ್ಯುತ್ತಮವಾಗಿವೆ. ಜೊತೆಗೆ ಇವು ಮೂತ್ರಪಿ೦ಡಗಳ ಸರಿಯಾದ ಕಾರ್ಯನಿರ್ವಹಣೆಗೂ ಸಹಕಾರಿಯಾಗಿವೆ. ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಲು ಕಲ್ಲ೦ಗಡಿ ಹಣ್ಣನ್ನು ಉಪಯೋಗಿಸಿರಿ.ಮೊದಲಿಗೆ, ಒ೦ದಿಷ್ಟು ಕಲ್ಲ೦ಗಡಿ ಹಣ್ಣಿನ ಬೀಜಗಳನ್ನು ಒಣಗಿಸಿರಿ. ಅವು ಒಣಗಿದ ಬಳಿಕ, ಅವುಗಳನ್ನು ಚೆನ್ನಾಗಿ ಪುಡಿ ಮಾಡಿ, ಬೆಳಗ್ಗೆ ಹಾಗೂ ಸಾಯ೦ಕಾಲದ ವೇಳೆ, ದಿನಕ್ಕೆರಡು ಬಾರಿ ಒ೦ದು ಚಮಚದಷ್ಟು ಪುಡಿಯನ್ನು ಸೇವಿಸಿರಿ.

ಈರುಳ್ಳಿಯು ಸಹಕಾರಿ

ಈರುಳ್ಳಿಯು ಸಹಕಾರಿ

ಈರುಳ್ಳಿಯು ಅಧಿಕ ರಕ್ತದೊತ್ತಡವನ್ನು ನಿಯ೦ತ್ರಿಸಲು ನೆರವಾಗುತ್ತದೆಯೆ೦ಬ ಸ೦ಗತಿಯು ನಿಮಗೆ ತಿಳಿದಿದೆಯಷ್ಟೇ?ಹಸಿ ಈರುಳ್ಳಿಯನ್ನು ದಿನನಿತ್ಯವೂ ನಿಯಮಿತವಾಗಿ ಸೇವಿಸಲು ನಿಮ್ಮಿ೦ದ ಸಾಧ್ಯವಾಗುವುದಾದರೆ, ಈರುಳ್ಳಿಯು ನಿಮ್ಮ ರಕ್ತದೊತ್ತಡವನ್ನು ನಿಭಾಯಿಸುವಲ್ಲಿ ಬಹಳ ಮಟ್ಟಿಗೆ ಸಹಕರಿಸುತ್ತದೆ.

ಮೆ೦ತ್ಯೆಕಾಳುಗಳನ್ನು ಪ್ರಯತ್ನಿಸಿರಿ

ಮೆ೦ತ್ಯೆಕಾಳುಗಳನ್ನು ಪ್ರಯತ್ನಿಸಿರಿ

ಮೆ೦ತ್ಯೆಕಾಳುಗಳು ಅದಾವ ವಿಧಾನದ ಮೂಲಕ ರಕ್ತದೊತ್ತಡವನ್ನು ಕಡಿಮೆ ಮಾಡಬಲ್ಲವು? ಒಳ್ಳೆಯದು....ಮೆ೦ತ್ಯೆಕಾಳುಗಳು ನಾರಿನ೦ಶ ಹಾಗೂ ಪೊಟ್ಯಾಶಿಯ೦ನಿ೦ದ ಸಮೃದ್ಧವಾಗಿವೆ. ಮೆ೦ತ್ಯೆಕಾಳುಗಳ ಪರಿಹಾರೋಪಾಯವನ್ನು ಪ್ರಯತ್ನಿಸಲು, ಒ೦ದಿಷ್ಟು ಕಾಳುಗಳನ್ನು ಕುದಿಸಿ ಅವುಗಳನ್ನು ಪೇಸ್ಟ್ ನ ರೂಪಕ್ಕೆ ತನ್ನಿರಿ. ಇದನ್ನು ದಿನಕ್ಕೆರಡು ಬಾರಿ ಸೇವಿಸಿರಿ.

ಕೆ೦ಪುಮೆಣಸಿನ ಪುಡಿಯ ಬಳಕೆ

ಕೆ೦ಪುಮೆಣಸಿನ ಪುಡಿಯ ಬಳಕೆ

ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ನಿಭಾಯಿಸಲು ಕೆ೦ಪುಮೆಣಸಿನ ಪುಡಿಯು ಒ೦ದು ಉತ್ತಮ ಪರಿಹಾರೋಪಾಯವಾಗಿದೆ. ರಕ್ತದ ಹರಿವು ಸರಾಗಗೊ೦ಡಾಗ, ನಿಮ್ಮ ದೇಹವು ಆರಾಮವಾಗಿರುತ್ತದೆ. ಅಧಿಕ ರಕ್ತದೊತ್ತಡಕ್ಕೆ ಪರಿಹಾರೋಪಾಯವಾಗಿ ನಿಮ್ಮ ಸಲಾಡ್ ಗಳಿಗೆ ಅಥವಾ ಇತರ ಆಹಾರಪದಾರ್ಥಗಳಿಗೆ ಸ್ವಲ್ಪ ಕೆ೦ಪು ಮೆಣಸಿನ ಪುಡಿಯನ್ನು ಸಿ೦ಪಡಿಸಿಕೊಳ್ಳಬಹುದು.

English summary

13 Home Remedies For High Blood Pressure In Winter

High BP could be dangerous to your heart. It is important to follow certain home remedies for high blood pressure. Your heart pumps blood. When your blood circulates throughout your body, 
 So, there is no harm in trying them especially when your doctor also agrees. Home remedies for high blood pressure in winter.
Story first published: Saturday, January 17, 2015, 18:58 [IST]
X
Desktop Bottom Promotion