For Quick Alerts
ALLOW NOTIFICATIONS  
For Daily Alerts

ದೇಹದ ಕೊಬ್ಬನ್ನು ಸುಲಭವಾಗಿ ಕರಗಿಸುವ ಸೂಪರ್ ಆಹಾರಗಳು

|

ತೂಕ ಇಳಿಸಿಕೊಳ್ಳಲು ಯಾವುದೋ ವಿಧಾನವನ್ನು ಅನುಸರಿಸುವವರಿಗೆ ತೂಕ ಇಳಿಯುವುದಕ್ಕಿಂತಲೂ ಇಳಿದ ತೂಕ ಮತ್ತೆ ಏರದಂತೆ ನೋಡಿಕೊಳ್ಳುವುದೇ ದೊಡ್ಡ ಸವಾಲು. ಏಕೆಂದರೆ ಕಷ್ಟಪಟ್ಟು ಕರಗಿಸಿದ ಕೊಬ್ಬನ್ನು ಶರೀರ ಯಾವುದೋ ಮಾಯದಲ್ಲಿ ನಂತರ ಸೇವಿಸಿದ ಇನ್ನೊಂದು ಆಹಾರದ ಮೂಲಕ ಮತ್ತೆ ಉತ್ಪಾದಿಸಿಕೊಂಡು ಬಿಡುತ್ತದೆ. ಇಳಿದ ತೂಕ ಮತ್ತೆ ಏರುತ್ತದೆ. ಇದಕ್ಕೆ ಮುಖ್ಯ ಕಾರಣ ನಾವು ಸೇವಿಸುವ ಆಹಾರದಲ್ಲಿ ಸೂಕ್ತ ಆಯ್ಕೆಯಿಲ್ಲದೇ ಇರುವುದು.

ವಾಸ್ತವವಾಗಿ ನಮ್ಮ ದೇಹಕ್ಕೆ ಸತತವಾಗಿ ಪೋಷಕಾಂಶಗಳ ಪೂರೈಕೆಯಾಗುತ್ತಲೇ ಇರಬೇಕು. ಆದರೆ ಈ ಪೂರೈಕೆ ಒಮ್ಮೆಲೇ ಆದರೆ ಹೆಚ್ಚುವರಿ ಭಾಗವನ್ನು ದೇಹ ಕೂಡಲೇ ಕೊಬ್ಬನ್ನಾಗಿ ಪರಿವರ್ತಿಸಿ ನಾಳೆಗಾಗಿ ಕಾದಿಡುವುದೇ ತೂಕ ಏರುವ ಗುಟ್ಟು. ಇದಕ್ಕೆ ಪ್ರತಿಯಾಗಿ ನಾವು ಸೇವಿಸುವ ಆಹಾರದಲ್ಲಿ ಕೊಂಚ ಬದಲಾವಣೆ ಮಾಡುವುದರಿಂದ ಇದಕ್ಕೆ ತಡೆಯೊಡ್ಡಬಹುದು.

ಹೇಗೆಂದರೆ ನಿಧಾನವಾಗಿ ಕರಗಿ ಪೋಷಕಾಂಶಗಳನ್ನು ನಿಧಾನವಾಗಿ ಬಿಡುಗಡೆಮಾಡುತ್ತಾ ಹೋದಂತೆ ವ್ಯಾಯಾಮದ ಮೂಲಕ ಈ ಪೋಷಕಾಂಶಗಳನ್ನು ಬಳಸಿ ಕೊಬ್ಬು ಉಂಟಾಗದಂತೆ ನೋಡಿಕೊಳ್ಳುವುದು. ಆಗ ದೇಹಕ್ಕೆ ಗತ್ಯಂತರವಿಲ್ಲದೇ ಇತರ ಕಾರ್ಯಗಳಿಗೆ ದೇಹದಲ್ಲಿ ಈಗಾಗಲೇ ಸಂಗ್ರಹವಾಗಿದ್ದ ಕೊಬ್ಬನ್ನು ಬಳಸಿಕೊಳ್ಳಬೇಕಾಗಿ ಬರುತ್ತದೆ. ಪರಿಣಾಮ, ತೂಕದಲ್ಲಿ ಇಳಿತ! ದೇಹದ ಕೊಬ್ಬು ಕರಗಿಸಲು ಅತ್ಯುತ್ತಮ ವ್ಯಾಯಾಮಗಳು

ಇದೇ ಕಾರಣಕ್ಕೆ ಇಂತಹ ಆಹಾರಗಳನ್ನು ಸುಪರ್ ಆಹಾರಗಳು ಎಂದು ಕರೆಯಲಾಗುತ್ತದೆ. ಮುಖ್ಯ ಅಂಶವೆಂದರೆ ಈ ಸೂಪರ್ ಆಹಾರಗಳನ್ನು ಸೇವಿಸಿ ವಿಶ್ರಮಿಸಿದರೆ ಮೂಲ ಉದ್ದೇಶವೇ ಬದಲಾಗಿ ತೂಕ ತಕ್ಷಣ ಏರುತ್ತದೆ! ಹಾಗಾಗಿ ಈ ಆಹಾರಗಳನ್ನು ನಿಮ್ಮ ನಿತ್ಯದ ವ್ಯಾಯಾಮದ ಹೊತ್ತಿಗೂ ಮುಂಚಿನ ಊಟದಲ್ಲಿ ಸೇವಿಸುವುದು ಅಗತ್ಯ. ಇಂತಹ ಹನ್ನೆರಡು ಆಹಾರಗಳ ಬಗ್ಗೆ ಕೆಲವು ವಿವರಗಳನ್ನು ಇಲ್ಲಿ ನೀಡಲಾಗಿದೆ.

ವಿವಿಧ ಸಾಂಬಾರು ಪದಾರ್ಥಗಳು

ವಿವಿಧ ಸಾಂಬಾರು ಪದಾರ್ಥಗಳು

ಕಾಳುಮೆಣಸಿನ ಪುಡಿ, ದಾಲ್ಚಿನ್ನಿ ಪುಡಿ ಮತ್ತು ಅರಿಸಿನಪುಡಿಗಳನ್ನು ನಿಮ್ಮ ನಿತ್ಯದ ಆಹಾರಗಳಲ್ಲಿ ಬಳಸುವ ಮೂಲಕವೂ ಉತ್ತಮ ಪರಿಣಾಮಗಳನ್ನು ಪಡೆಯಬಹುದು. ಹೆಚ್ಚಿನ ಪರಿಣಾಮಕ್ಕಾಗಿ ಒಂದು ಚಮಚ ಜೇನುತುಪ್ಪದಲ್ಲಿ ಈ ಮೂರೂ ಪುಡಿಗಳನ್ನು ಸಮಪ್ರಮಾಣದಲ್ಲಿ ಬೆರೆಸಿ ಸೇವಿಸುವುದು ಉತ್ತಮ.

ಕಿತ್ತಳೆ ಹಣ್ಣು

ಕಿತ್ತಳೆ ಹಣ್ಣು

ಕಿತ್ತಳೆಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ದೇಹಕ್ಕೆ ಅಗತ್ಯವಾದ ಶಕ್ತಿ ದೊರಕುತ್ತದೆ. ಜೊತೆಗೇ ಹಣ್ಣಿನಲ್ಲಿರುವ ನಾರು ಜೀರ್ಣಶಕ್ತಿ ಹೆಚ್ಚಿಸಲು ಮತ್ತು ಮಲಬದ್ದತೆಯಾಗುವುದರಿಂದ ತಡೆಯುತ್ತದೆ. ಜೊತೆಗೇ ಕ್ಯಾಲೋರಿಗಳ ಪ್ರಮಾಣ ಕಡಿಮೆ ಇರುವುದರಿಂದ ತೂಕ ಇಳಿಯಲು ನೆರವಾಗುತ್ತದೆ.

ಟೊಮೇಟೊ ಹಣ್ಣು

ಟೊಮೇಟೊ ಹಣ್ಣು

ಟೊಮೇಟೊ ಹಣ್ಣಿನಲ್ಲಿಯೂ ವಿಟಮಿನ್ ಸಿ ಇದ್ದು ತೂಕ ಕಳೆದುಕೊಳ್ಳಲು ನೆರವಾಗುತ್ತದೆ. ಟೊಮೇಟೊಗಳನ್ನು ಸಾಮಾನ್ಯವಾಗಿ ಅಡುಗೆಯಲ್ಲಿ ಬಳಸುತ್ತೇವಾದರೂ ಸುಪರ್ ಆಹಾರವಾಗಿ ಬಳಸಬೇಕಾದರೆ ಸಿಪ್ಪೆ ಮತ್ತು ಬೀಜಗಳನ್ನು ನಿವಾರಿಸಿ ಕೇವಲ ತಿರುಳನ್ನು ಮಿಕ್ಸಿಯಲ್ಲಿ ಕಡೆದು ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಉತ್ತಮ ಪರಿಣಾಮ ಪಡೆಯಬಹುದು.

ಕಾಬೂಲ್ ಕಡಲೆ

ಕಾಬೂಲ್ ಕಡಲೆ

ಬಿಳಿಬಣ್ಣದ ಕಾಬೂಲ್ ಕಡಲೆ ಸಹಾ ವಿವಿಧ ಪೋಷಕಾಂಶಗಳ ಆಗರವಾಗಿದೆ. ಪ್ರೋಟೀನ್, ವಿಟಮಿನ್ B6, ಫೋಲಿಯೇಟ್ ಮೊದಲಾದ ಪೋಷಕಾಂಶಗಳೂ, ಉತ್ತಮ ಪ್ರಮಾಣದ ಕರಗುವ ನಾರು ಜೀರ್ಣಕ್ರಿಯೆಗೆ ನೆರವಾಗುವು ಜೊತೆಗೇ ನಿಧಾನವಾಗಿ ಪೋಷಕಾಂಶಗಳನ್ನು ಬಿಡುಗಡೆ ಮಾಡುವ ಮೂಲಕ ವ್ಯಾಯಾಮಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ. ಜೊತೆಗೇ ಹಸಿವನ್ನೂ ಹೆಚ್ಚಿಸುತ್ತದೆ. ಈ ಕಡಲೆಯನ್ನು ಹಾಗೇ ಬೇಯಿಸುವುದಕ್ಕಿಂತ ಒಂದು ದಿನದ ಮೊಳಕೆ ಬಂದಿದ್ದಾಗ ಬಳಸಿದರೆ ಉತ್ತಮ.

ಸಿಹಿಗುಂಬಳ ಕಾಯಿ

ಸಿಹಿಗುಂಬಳ ಕಾಯಿ

ಸಿಹಿಗುಂಬಳದಲ್ಲಿ ವಿಟಮಿನ್ A, C, E, ಪೊಟ್ಯಾಶಿಯಂ ಮತ್ತು ಕರಗುವ ನಾರು ಇರುವ ಕಾರಣ ಸುಪರ್ ಆಹಾರವಾಗಲು ಅರ್ಹತೆ ಪಡೆದುಕೊಂಡಿದೆ. ಇದನ್ನು ಬೇಯಿಸಿ ಖಾದ್ಯರೂಪದಲ್ಲಿಯೂ, ಹಸಿಯಾಗಿ ಸಾಲಾಡ್ ನಂತೆಯೂ ಬಳಸಬಹುದು.

ದ್ರಾಕ್ಷಿಹಣ್ಣು

ದ್ರಾಕ್ಷಿಹಣ್ಣು

ಬಿಳಿ ಮತ್ತು ಕಪ್ಪು ದ್ರಾಕ್ಷಿ ಎರಡರಲ್ಲಿಯೂ ಉತ್ತಮ ಪ್ರಮಾಣದಲ್ಲಿ ಪೋಷಕಾಂಶಗಳು ಮತ್ತು ಕರಗುವ ನಾರು ಇದೆ. ಆದರೆ ಇದರಲ್ಲಿ ಕ್ಯಾಲೋರಿಗಳು ಕಡಿಮೆ ಇರುವುದರಿಂದ ಕಡಿಮೆ ವ್ಯಾಯಾಮ ಮಾಡುವಾಗ ಸೇವಿಸುವುದು ಉತ್ತಮ. ಹಸಿವಾದಾಗಲೂ ದ್ರಾಕ್ಷಿಹಣ್ಣನ್ನು ಸೇವಿಸುವುದರಿಂದ ಕರಗಿದ್ದ ಕೊಬ್ಬನ್ನು ಶೀಘ್ರವಾಗಿ ಕರಗಿಸಲು ಸಾಧ್ಯ.

ಚಾಕಲೇಟು

ಚಾಕಲೇಟು

ಸಾಂಪ್ರಾದಾಯಿಕ ವಿಧಾನದಲ್ಲಿ ತಯಾರಿಸಿದ ಕಪ್ಪು ಚಾಕಲೇಟಿನಲ್ಲಿ monounsaturated fatty acids ಎಂಬ ಆಮ್ಲಗಳಿದ್ದು ಕೊಬ್ಬು ಕರಗಿಸಲು ಉತ್ತಮವಾಗಿದೆ. ಅಲ್ಲದೇ ಇದರಲ್ಲಿರುವ ಪೋಷಕಾಂಶಗಳು ಹೃದಯಕ್ಕೂ ಉತ್ತಮವಾಗಿವೆ.

ಪಾಪ್ ಕಾರ್ನ್

ಪಾಪ್ ಕಾರ್ನ್

ಪಾಪ್ ಕಾರ್ನ್ ಅಥವಾ ಮೆಕ್ಕೆಜೋಳವನ್ನು ಹುರಿದು ಸಿಡಿಸಿದ ಅರಳು ಸಿನೇಮಾಗೃಹಗಳಲ್ಲಿ ಮಾತ್ರ ತಿನ್ನುವ ತಿಂಡಿ ಎಂದು ಹೆಚ್ಚಿನವರು ತಿಳಿದಿದ್ದಾರೆ. ಆದರೆ ವಾಸ್ತವವಾಗಿ ಮೆಕ್ಕೆಜೋಳದ ಅರಳು ಸಹಾ ಒಂದು ಸೂಪರ್ ಆಹಾರವಾಗಿದೆ. ಇದರಲ್ಲಿರುವ ಪ್ರೋಟೀನ್ ಮತ್ತು ವಿಟಮಿನ್ ಬಿ ಶರೀರಕ್ಕೆ ಉತ್ತಮ ಪೋಷಣೆ ನೀಡುತ್ತವೆ. ಇದರ ಉತ್ತಮ ಉಪಯೋಗಕ್ಕಾಗಿ ಬೆಣ್ಣೆ ಸೇರಿಸದೇ ತಿನ್ನಿರಿ.

ಮೊಸರು

ಮೊಸರು

ಮೊಸರು ಈಗಾಗಲೇ ಅರ್ಧ ಜೀರ್ಣಗೊಂಡಿರುವ ಸುಲಭ ಆಹಾರವಾಗಿದ್ದು ದೇಹಕ್ಕೆ ಶಕ್ತಿ ನೀಡುವ ಜೊತೆಗೇ ನೀರು ಮತ್ತು ಇತರ ಪೋಷಕಾಂಶಗಳನ್ನೂ ನೀಡುತ್ತದೆ. ಆದರೆ ಇದಕ್ಕೆ ಉಪ್ಪು ಅಥವಾ ಸಕ್ಕರೆ ಸೇರಿಸದೇ ಸೇವಿಸುವ ಮೂಲಕ ಇದರ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಎಳನೀರು

ಎಳನೀರು

ಬಳಲಿದ ದೇಹಕ್ಕೆ ಮರುಚೈತನ್ಯ ನೀಡಲು ಎಳನೀರಿಗಿಂತ ಇನ್ನೊಂದು ಆಹಾರವಿಲ್ಲ. ಜ್ವರ ಅಥವಾ ಬೇಧಿಯ ಮೂಲಕ ಕಳೆದುಕೊಂಡ ಎಲೆಕ್ಟ್ರೋಲೈಟು ಮತ್ತು ನೀರನ್ನು ಎಳನೀರು ಕುಡಿಯುವ ಮೂಲಕ ಶೀಘ್ರವೇ ಮತ್ತೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಎಳನೀರಿನಲ್ಲಿ ಕೊಂಚ ಲಿಂಬೆ ರಸ ಸೇರಿಸಿ ಕುಡಿಯುವ ಮೂಲಕ ಭಿನ್ನವಾದ ರುಚಿಯ ಜೊತೆಗೇ ಹೆಚ್ಚಿನ ಪೋಷಕಾಂಶಗಳನ್ನೂ ಪಡೆಯಬಹುದು.

ಹಸಿಶುಂಠಿ

ಹಸಿಶುಂಠಿ

ಕರಗಿರುವ ಕೊಬ್ಬನ್ನು ಕರಗಿಸಲು ಶುಂಠಿ ಉತ್ತಮವಾದ ಆಹಾರವಾಅಗಿದೆ. ಇದನ್ನು ನಿಮ್ಮ ನಿತ್ಯದ ಅಡುಗೆಗಳಲ್ಲಿ ಬಳಸಿ ಸೇವಿಸಿ. ನಿತ್ಯದ ಚಹಾದಲ್ಲಿಯೂ ಹಸಿಶುಂಠಿಯನ್ನು ಬೇಯಿಸಿ ಸೇವಿಸುವ ಮೂಲಕ ಉತ್ತಮ ಪರಿಣಾಮ ಪಡೆಯಬಹುದು.

ಹಸಿರು ಚಹಾ (ಗ್ರೀನ್ ಟೀ)

ಹಸಿರು ಚಹಾ (ಗ್ರೀನ್ ಟೀ)

ಸ್ವಾದದಲ್ಲಿ ಅಷ್ಟೇನೂ ಚೆನ್ನಾಗಿಲ್ಲದ ಹಸಿರು ಚಹಾ ಪೋಷಕಾಂಶಗಳ ವಿಷಯದಲ್ಲಿ ಮಾತ್ರ ಅದ್ವಿತೀಯವಾಗಿದೆ. ಇದರಲ್ಲಿರುವ ಕ್ಯಾಟೆಶಿನ್ (catechin), ಫೈಟೋ ನ್ಯೂಟ್ರಿಯೆಂಟ್ ಮತ್ತು ಆಂಟಿ ಆಕ್ಸಿಡೆಂಟುಗಳು ಜೀರ್ಣಕ್ರಿಯೆಯನ್ನು ಉದ್ದೀಪನಗೊಳಿಸಿ ಸಂಗ್ರಹವಾಗಿದ್ದ ಕೊಬ್ಬನ್ನು ಶೀಘ್ರವಾಗಿ ಕಳೆದುಕೊಳ್ಳಲು ನೆರವಾಗುತ್ತದೆ.

English summary

12 Superfoods That Burn Fat

Want to lose weight? Then take a look at some of the best superfoods that burn fat. These foods should be added to your daily diet since it helps to slowly break down the fats in your body. So, to get started here are some of the best superfoods that burn fat, take a look at the list of healthy foods.
Story first published: Friday, June 26, 2015, 10:23 [IST]
X
Desktop Bottom Promotion