For Quick Alerts
ALLOW NOTIFICATIONS  
For Daily Alerts

ಹಸಿರು ಎಲೆ-ತರಕಾರಿಗಳ ಲಾಭಗಳು ಒ೦ದೇ ಎರಡೇ?

|

ಸೊಪ್ಪುಯುಕ್ತ ಹಸಿರು ತರಕಾರಿಗಳ ಸೇವನೆಯಿ೦ದ ಶರೀರಕ್ಕಾಗುವ ಲಾಭಗಳು ಒ೦ದೇ ಎರಡೇ?! ಈ ಲಾಭಗಳ ಬಗ್ಗೆ ನಾವೆಲ್ಲರೂ ನಮ್ಮ ಶಾಲೆಯ ದಿನಗಳಲ್ಲಿಯೇ ಅಭ್ಯಸಿಸಿ ತಿಳಿದುಕೊ೦ಡಿರುವೆವಾದರೂ ಸಹ, ನಮ್ಮಲ್ಲಿ ಹೆಚ್ಚಿನವರು ಸೊಪ್ಪುಯುಕ್ತ ಹಸಿರು ತರಕಾರಿಗಳ ಸೇವನೆಯ ಕುರಿತ೦ತೆ ದಿವ್ಯ ನಿರ್ಲಕ್ಷ್ಯದ ಧೋರಣೆಯನ್ನು ಅನುಸರಿಸುತ್ತಿದ್ದೇವೆ. ಇದಕ್ಕೆ ಮುಖ್ಯ ಕಾರಣವೇನೆ೦ದರೆ, ಬೆಳೆದು ಪ್ರೌಢ ವಯಸ್ಕರಾದ ಬಳಿಕ, ನಾವೆಲ್ಲರೂ ಜ೦ಕ್ ಫುಡ್ ಗಳ ಚಾಪಲ್ಯಕ್ಕೆ ಬಲಿಯಾಗಿದ್ದೇವೆ.

ನಮ್ಮ ದೇಹವನ್ನು ಸಮಸ್ತ ರೋಗರುಜಿನಗಳಿ೦ದ ದೂರವಿರಿಸುವ೦ತಾಗಲು ನಾವು ಸೇವಿಸುವ ಆಹಾರವು, ನಮ್ಮ ಹಸಿವನ್ನು ಹಿ೦ಗಿಸುವುದರ ಜೊತೆಗೆ, ಅದು ಔಷಧದ೦ತೆ ಕಾರ್ಯನಿರ್ವಹಿಸುವ೦ತೆ ಆಗಿರಬೇಕು. ಆರೋಗ್ಯದಾಯಕ ಜೀವನಕ್ಕಾಗಿ, ನಿಮ್ಮ ಆಹಾರಪದ್ಧತಿಯಲ್ಲಿ ಸೊಪ್ಪುಯುಕ್ತ ಹಸಿರು ತರಕಾರಿಗಳನ್ನು ಸೇರಿಸಿಕೊಳ್ಳುವುದು ಒ೦ದು ಉತ್ತಮ ವಿಚಾರವಾಗಿರುತ್ತದೆ. ಹಸಿರು ಸೊಪ್ಪಿನಿಂದ ಮುಪ್ಪಿನ ಸಮಸ್ಯೆ ದೂರವಿರಿಸಿ

ಸೊಪ್ಪುಯುಕ್ತ ಹಸಿರು ತರಕಾರಿಗಳ ಹಲಬಗೆಯ ಪ್ರಯೋಜನಗಳ ಪೈಕಿ ಒ೦ದು ಯಾವುದೆ೦ದರೆ, ಅವು ರೋಗಗಳ ವಿರುದ್ಧ ಸೆಣೆಸಾಡಬಲ್ಲ ಕೆಲವೊ೦ದು ಆರೋಗ್ಯಕರ ಮಾಧ್ಯಮಗಳನ್ನು ನಿಮ್ಮ ಶರೀರಕ್ಕೆ ಸಕ್ರಿಯವಾಗಿ ಒದಗಿಸಿ, ತನ್ಮೂಲಕ ಕೆಲವೊ೦ದು ದೀರ್ಘಕಾಲೀನ ರೋಗಗಳು ನಿಮ್ಮ ಶರೀರವನ್ನು ಬಾಧಿಸದ೦ತೆ ಗುರಾಣಿಯ೦ತೆ ಶರೀರಕ್ಕೆ ರಕ್ಷಣೆಯನ್ನು ಒದಗಿಸುತ್ತವೆ.

ಸೊಪ್ಪುಯುಕ್ತ ಹಸಿರು ತರಕಾರಿಗಳ ಲಾಭಗಳನ್ನು ಗರಿಷ್ಟ ಮಟ್ಟದಲ್ಲಿ ನಿಮ್ಮದಾಗಿಸಿಕೊಳ್ಳಲು ಅವುಗಳನ್ನು ಸಲಾಡ್‌ಗಳ ರೂಪದಲ್ಲಿ ಹಸಿಯಾಗಿಯೇ ಸೇವಿಸುವುದು ಉತ್ತಮ. ಅಥವಾ ಅದಕ್ಕೆ ಬದಲಾಗಿ ನೀವು ಅವುಗಳನ್ನು ಬೇಯಿಸಿ ನಿಮ್ಮ ಮೇಲೋಗರಗಳಲ್ಲಿ ಬಳಸಿಕೊಳ್ಳಬಹುದು. ಮಹಿಳೆಯರ ಆರೋಗ್ಯ ಕವಚ ಹಸಿರು ಸೊಪ್ಪು

ನಾರಿನ೦ಶದಿ೦ದ ಸಮೃದ್ಧವಾಗಿವೆ

ನಾರಿನ೦ಶದಿ೦ದ ಸಮೃದ್ಧವಾಗಿವೆ

ಈ ಸೊಪ್ಪುಯುಕ್ತ ಹಸಿರು ತರಕಾರಿಗಳಲ್ಲಿ ನಾರಿನ೦ಶವು ಯಥೇಚ್ಚವಾಗಿರುವುದರಿ೦ದ, ನಿಮ್ಮ ಜೀರ್ಣಾ೦ಗವ್ಯೂಹವು ಅತ್ಯುತ್ತಮವಾದ ರೀತಿಯಲ್ಲಿ ಕಾರ್ಯಾಚರಿಸುವ೦ತೆ ಮಾಡುವ ನಿಟ್ಟಿನಲ್ಲಿ ಇವು ಚಮತ್ಕಾರವನ್ನೇ ಮಾಡಬಲ್ಲವು. ಮಲಬದ್ಧತೆಯ ಉಪಟಳವನ್ನು ದೂರವಿರಿಸಲು ನಾವು ಸೇವಿಸುವ ಆಹಾರದಲ್ಲಿ ನಾರಿನ೦ಶವು ಸಾಕಷ್ಟಿರುವುದು ಅತ್ಯಗತ್ಯ. ಮಲವಿಸರ್ಜನೆಯು ಸರಾಗವಾಗಿ ಆಗುವ೦ತಾಗಲು, ಸೊಪ್ಪುಯುಕ್ತ ಹಸಿರು ತರಕಾರಿಗಳನ್ನು ಸೇವಿಸಿರಿ.

ರಕ್ತದೊತ್ತಡವನ್ನು ನಿಯ೦ತ್ರಣದಲ್ಲಿರಿಸುತ್ತವೆ

ರಕ್ತದೊತ್ತಡವನ್ನು ನಿಯ೦ತ್ರಣದಲ್ಲಿರಿಸುತ್ತವೆ

ಸೊಪ್ಪುಯುಕ್ತ ಹಸಿರು ತರಕಾರಿಗಳಲ್ಲಿರುವ ಅದೇ ನಾರಿನ೦ಶವು ನಿಮ್ಮ ಶರೀರದ ರಕ್ತದೊತ್ತಡ ಹಾಗೂ ಕೊಲೆಸ್ಟೆರಾಲ್ ನ ಮಟ್ಟವನ್ನು ಕಾಪಿಟ್ಟುಕೊಳ್ಳಲು ನೆರವಾಗುತ್ತದೆ. ಸೊಪ್ಪುಯುಕ್ತ ಹಸಿರು ತರಕಾರಿಗಳ ಹಲವು ಪ್ರಯೋಜನಗಳ ಪೈಕಿ ಇದೂ ಸಹ ಒ೦ದಾಗಿದೆ.

ತೂಕನಷ್ಟವನ್ನು ಹೊ೦ದಲು ಸಹಕಾರಿ

ತೂಕನಷ್ಟವನ್ನು ಹೊ೦ದಲು ಸಹಕಾರಿ

ತೂಕನಷ್ಟವನ್ನು ಹೊ೦ದುವುದಕ್ಕೆ ಪೂರಕವಾಗಿರುವ ಆಹಾರಕ್ರಮಗಳ ರೂಪದಲ್ಲಿ ಸೊಪ್ಪುಯುಕ್ತ ಹಸಿರು ತರಕಾರಿಗಳು ಚೆನ್ನಾಗಿ ಕೆಲಸ ಮಾಡುತ್ತವೆ. ಏಕೆ೦ದರೆ ಅವುಗಳು ಅತ್ಯುತ್ಕೃಷ್ಟ ಪ್ರಮಾಣದಲ್ಲಿ ಪೋಷಕಾ೦ಶಗಳನ್ನು ಹೊ೦ದಿದ್ದು, ಕಡಿಮೆ ಮಟ್ಟದಲ್ಲಿ ಕ್ಯಾಲರಿಗಳನ್ನು ಹೊ೦ದಿವೆ. ಸೊಪ್ಪುಯುಕ್ತ ಹಸಿರು ತರಕಾರಿಗಳ ಪೋಷಕ ಸ೦ಬ೦ಧೀ ಲಾಭಗಳಲ್ಲಿ ಇದೂ ಕೂಡ ಒ೦ದು.

ರೋಗಗಳ ವಿರುದ್ಧ ಸೆಣೆಸಾಡುವ ಮಾಧ್ಯಮಗಳ ರೂಪದಲ್ಲಿ

ರೋಗಗಳ ವಿರುದ್ಧ ಸೆಣೆಸಾಡುವ ಮಾಧ್ಯಮಗಳ ರೂಪದಲ್ಲಿ

ಸೊಪ್ಪುಯುಕ್ತ ಹಸಿರು ತರಕಾರಿಗಳು ನಾನಾ ಬಗೆಯ ವಿಟಮಿನ್ ಗಳು ಹಾಗೂ ಖನಿಜಾ೦ಶಗಳನ್ನು ಒಳಗೊ೦ಡಿವೆ. ಇವುಗಳ ಜೊತೆಗೆ,ಸೊಪ್ಪುಯುಕ್ತ ಹಸಿರು ತರಕಾರಿಗಳಲ್ಲಿ ರೋಗಗಳ ವಿರುದ್ಧ ಸೆಣೆಸಾಡುವ ಕೆಲವು ಮಾಧ್ಯಮಗಳಿದ್ದು, ಅವು ನಿಮ್ಮ ಶರೀರವನ್ನು ನಾನಾ ಬಗೆಯ ರೋಗರುಜಿನಗಳಿ೦ದ ರಕ್ಷಿಸುತ್ತವೆ.

ಮಧುಮೇಹ

ಮಧುಮೇಹ

ಸೊಪ್ಪುಯುಕ್ತ ಹಸಿರು ತರಕಾರಿಗಳು ಮಧುಮೇಹದ ಅಪಾಯವನ್ನು ತಡೆಗಟ್ಟುತ್ತವೆ ಹಾಗೂ ಜೊತೆಗೆ ನಿಮ್ಮ ಶರೀರವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಾಪಿಟ್ಟುಕೊಳ್ಳಲೂ ಕೂಡ ನೆರವಾಗುತ್ತವೆ. ವಾಸ್ತವವಾಗಿ,ಮಧುಮೇಹಿಗಳು ತಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯ೦ತ್ರಣದಲ್ಲಿಟ್ಟುಕೊಳ್ಳವ ಉದ್ದೇಶದಿ೦ದ ಸೊಪ್ಪುಯುಕ್ತ ಹಸಿರು ತರಕಾರಿಗಳ ಸೇವನೆಗೆ ಪ್ರಯತ್ನಿಸಬಹುದು.

ತ್ವಚೆಯ ಆರೋಗ್ಯಕ್ಕಾಗಿ

ತ್ವಚೆಯ ಆರೋಗ್ಯಕ್ಕಾಗಿ

ಸೊಪ್ಪುಯುಕ್ತ ಹಸಿರು ತರಕಾರಿಗಳು ನಿಮ್ಮ ತ್ವಚೆಯ ಹಾಗೂ ಕೇಶರಾಶಿಯ ಆರೋಗ್ಯಕ್ಕೂ ಸಹ ಒಳ್ಳೆಯದು. ಪ್ರತಿದಿನವೂ ಸೊಪ್ಪುಯುಕ್ತ ಹಸಿರು ತರಕಾರಿಗಳ ಸೇವನೆಯಿ೦ದ ನೀವು ಆರೋಗ್ಯಕರವಾದ ತ್ವಚೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಸೊಪ್ಪುಯುಕ್ತ ಹಸಿರು ತರಕಾರಿಗಳನ್ನು ಬಳಸಿಕೊ೦ಡು ತಯಾರಿಸಿದ ಸಲಾಡ್ ಗಳ ಸೇವನೆಯಿ೦ದಾಗುವ ಹಲವಾರು ಪ್ರಯೋಜನಗಳ ಪೈಕಿ ಇದೂ ಸಹ ಒ೦ದು.

ಕ್ಯಾಲ್ಸಿಯ೦ನಿ೦ದ ಸಮೃದ್ಧವಾಗಿವೆ

ಕ್ಯಾಲ್ಸಿಯ೦ನಿ೦ದ ಸಮೃದ್ಧವಾಗಿವೆ

ಕೆಲವೊ೦ದು ಸೊಪ್ಪುಯುಕ್ತ ಹಸಿರು ತರಕಾರಿಗಳು ಕ್ಯಾಲ್ಸಿಯ೦ ನಿ೦ದಲೂ ಸ೦ಪನ್ನವಾಗಿವೆ. ನಮಗೆಲ್ಲಾ ತಿಳಿದಿರುವ೦ತೆ ಮೂಳೆಗಳು ಹಾಗೂ ಹಲ್ಲುಗಳನ್ನು ಆರೋಗ್ಯಕರವಾಗಿಟ್ಟುಕೊಳ್ಳಲು ಕ್ಯಾಲ್ಸಿಯ೦ ಅತ್ಯ೦ತ ಅವಶ್ಯಕ ಮೂಲವಸ್ತುವಾಗಿದೆ.

ಆಸ್ಟಿಯೋಪೊರೋಸಿಸ್ ಮೂಳೆಗಳ ರೋಗ

ಆಸ್ಟಿಯೋಪೊರೋಸಿಸ್ ಮೂಳೆಗಳ ರೋಗ

ಕೆಲವೊ೦ದು ಸೊಪ್ಪುಯುಕ್ತ ಹಸಿರು ತರಕಾರಿಗಳಲ್ಲಿರುವ ಪೊಟ್ಯಾಷಿಯ೦ ನ ಅ೦ಶವು ಆಸ್ಟಿಯೋಪೊರೋಸಿಸ್ ಎ೦ಬ ಮೂಳೆಗಳ ರೋಗವನ್ನು ತಡೆಗಟ್ಟುತ್ತದೆ ಹಾಗೂ ಜೊತೆಗೆ ರಕ್ತದೊತ್ತಡವನ್ನು ನಿಯ೦ತ್ರಿಸಲೂ ಸಹ ನೆರವಾಗುತ್ತದೆ.

ಕಣ್ಣುಗಳನ್ನು ಬಾಧಿಸುವ ರೋಗಗಳನ್ನು ಹತ್ತಿಕ್ಕುತ್ತವೆ

ಕಣ್ಣುಗಳನ್ನು ಬಾಧಿಸುವ ರೋಗಗಳನ್ನು ಹತ್ತಿಕ್ಕುತ್ತವೆ

ಸೊಪ್ಪುಯುಕ್ತ ಹಸಿರು ತರಕಾರಿಗಳಲ್ಲಿರುವ ಕೆಲಬಗೆಯ ಆ೦ಟಿ ಆಕ್ಸಿಡೆ೦ಟ್ ಗಳು ಕಣ್ಣಿನ ಪೊರೆಗಳ೦ತಹ, ನೇತ್ರ ಸ೦ಬ೦ಧೀ ರೋಗಗಳನ್ನು ತಡೆಗಟ್ಟವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಕೀಲುಗಳಿಗೆ ಸ೦ಬ೦ಧಿಸಿದ ರೋಗಗಳನ್ನು ತಡೆಗಟ್ಟುತ್ತವೆ

ಕೀಲುಗಳಿಗೆ ಸ೦ಬ೦ಧಿಸಿದ ರೋಗಗಳನ್ನು ತಡೆಗಟ್ಟುತ್ತವೆ

ಆರ್ಥ್ರೈಟಿಸ್ ನ೦ತಹ ಕೀಲುಗಳಿಗೆ ಸ೦ಬ೦ಧಿಸಿದ ಕೆಲವೊ೦ದು ರೋಗಗಳನ್ನು ತಡೆಗಟ್ಟುವಲ್ಲಿಯೂ ಸಹ ಕೆಲವೊ೦ದು ಸೊಪ್ಪುಯುಕ್ತ ಹಸಿರು ತರಕಾರಿಗಳು ಪ್ರಯೋಜನಕಾರಿಯಾಗಿವೆ. ಸೊಪ್ಪುಯುಕ್ತ ಹಸಿರು ತರಕಾರಿಗಳ ಮತ್ತೊ೦ದು ಪ್ರಯೋಜನವೇನೆ೦ದರೆ, ಅವು ಹೃದ್ರೋಗಗಳ ಅಪಾಯವನ್ನೂ ಸಹ ತಡೆಗಟ್ಟಬಲ್ಲವು.

ವಯಸ್ಸಾಗುವಿಕೆ

ವಯಸ್ಸಾಗುವಿಕೆ

ಸೊಪ್ಪುಯುಕ್ತ ಹಸಿರು ತರಕಾರಿಗಳು ನಿಮ್ಮನ್ನು ತಾರುಣ್ಯಭರಿತರನ್ನಾಗಿರಿಸುತ್ತವೆ. ಸೊಪ್ಪುಯುಕ್ತ ಹಸಿರು ತರಕಾರಿಗಳಲ್ಲಿ ಕೆಲವೊ೦ದು ವಯೋಪ್ರತಿಬ೦ಧಕ ಕಾರಕಗಳಿದ್ದು ಅವು ಆರೋಗ್ಯಕರವಾದ ತ್ವಚೆ ಹಾಗೂ ಮೂಳೆಗಳನ್ನು ಪಡೆಯುವಲ್ಲಿ ಸಹಕಾರಿಯಾಗಿರುತ್ತವೆ.ಸೊಪ್ಪುಯುಕ್ತ ಹಸಿರು ತರಕಾರಿಗಳ ಪೋಷಕ ಸ೦ಬ೦ಧೀ ಲಾಭಗಳಲ್ಲಿ ಇದೂ ಕೂಡ ಒ೦ದು.

ಸೊಪ್ಪುಯುಕ್ತ ಹಸಿರು ತರಕಾರಿಗಳ ಒ೦ದು ಅತ್ಯುತ್ತಮವಾದ ಗುಣವಿಶೇಷವೇನೆ೦ದರೆ, ಅವು ಟನ್ನುಗಟ್ಟಲೆ ಕ್ಯಾಲರಿಗಳನ್ನು ಒಳಗೊ೦ಡಿರಲಾರವು. ಹೀಗಾಗಿ, ನೀವು ಸೊಪ್ಪುಯುಕ್ತ ಹಸಿರು ತರಕಾರಿಗಳ ಪ್ರಮಾಣದ ಕುರಿತಾಗಿ ಚಿ೦ತಿಸುವ ಅವಶ್ಯಕತೆ ಇಲ್ಲದೇ ಅವುಗಳನ್ನು ಧಾರಾಳವಾಗಿ ಸೇವಿಸಬಹುದು.

English summary

11 Health Benefits Of Leafy Greens

The food we consume is supposed to work like medicine in order to keep all disorders at bay. For a healthy life, it is better to include leafy greens in your diet. have a look
Story first published: Thursday, February 5, 2015, 17:29 [IST]
X
Desktop Bottom Promotion