For Quick Alerts
ALLOW NOTIFICATIONS  
For Daily Alerts

ಗರ್ಭಕೋಶದ ಸಮಸ್ಯೆ: ಇಲ್ಲಿದೆ ನೋಡಿ ಫಲಪ್ರದ ಮನೆಮದ್ದು

By Arshad
|

ಸಾಮಾನ್ಯವಾಗಿ ಪ್ರಥಮ ಹೆರಿಗೆಯ ಬಳಿಕ ಮಹಿಳೆಯರ ಶರೀರ ಹೆಚ್ಚು ಸ್ಥೂಲವಾಗುತ್ತಾ ಹೋಗುತ್ತದೆ. ಅಲ್ಲೊಂದು ಇಲ್ಲೊಂದು ಅಪವಾದವಿದ್ದರೂ ಬಹುತೇಕ ಮಹಿಳೆಯರ ಶರೀರದ ನಡುಭಾಗ ಹಿಂದಿನ ಮೈಕಟ್ಟಿಗೆ ಹಿಂದಿರುಗುವುದೇ ಇಲ್ಲ. ಇದಕ್ಕೆ ಪ್ರಮುಖ ಕಾರಣ ಗರ್ಭದ ಅವಧಿಯಲ್ಲಿ ಶರೀರ ಪಡೆದ ಬದಲಾವಣೆಗಳು. ಅದರಲ್ಲಿಯೂ ಮುಖ್ಯವಾಗಿ ಗರ್ಭಕೋಶದ ಬೆಳವಣಿಗೆ.

ಹೆರಿಗೆಯ ಬಳಿಕ ಗರ್ಭಾಶಯ ನಿಧಾನವಾಗಿ ತನ್ನ ಪೂರ್ವ ಸ್ಥಿತಿಗೆ ತಲುಪಬೇಕು. ಆದರೆ ಕೆಲವು ಕಾರಣಗಳಿಂದ ಗರ್ಭಾಶಯದೊಳಗೆ ಪ್ರೈಬ್ರಾಯ್ಡ್ ಅಥವಾ ಪಾಲಿಪ್ ಗಳೆಂಬ ನಾರುರೂಪದ ಜೀವಕೋಶಗಳು ಬೆಳೆದು ಗರ್ಭಕೋಶವನ್ನು ತುಂಬಿಸಿರುತ್ತವೆ. ಪಿಜ್ಜಾ ಸೇವನೆಯು ಆರೋಗ್ಯಕ್ಕೆ ಪೂರಕವೇ ಇಲ್ಲಾ ಮಾರಕವೇ?

ಇದು ಹೊಟ್ಟೆಯನ್ನು ದೊಡ್ಡದಾಗಿ ಕಾಣುವಂತೆ ಮಾಡುತ್ತದೆ. ಗರ್ಭಕೋಶದಲ್ಲಿ ನೀರು ತುಂಬಿಕೊಂಡಿದ್ದಾಗ ಕೆಳಹೊಟ್ಟೆಯಲ್ಲಿ ನೋವು, ಹೊಟ್ಟೆಯೊಳಗೆ ನೋವು, ವಾಕರಿಕೆ, ಹೊಟ್ಟೆ ಉಬ್ಬರಿಕೆ, ಕೆಳಹೊಟ್ಟೆ ಭಾರವಾದಂತೆ ಅನ್ನಿಸುವುದು, ಬೆಳಿಸೆರಗು (leucorrhea), ಉಸಿರಾಟದಲ್ಲಿ ತೀವ್ರತೆಯಾಗುವುದು, ಹಸಿವು ಕಡಿಮೆಯಾಗುವುದು, ಋತುಚಕ್ರದಲ್ಲಿ ಏರುಪೇರು, ಸತತ ಮೂತ್ರಕ್ಕೆ ಅವಸರವಾಗುವುದು, ತಿಂಗಳ ದಿನಗಳಲ್ಲಿ ಹೆಚ್ಚಿನ ಸ್ರಾವವಾಗುವುದು ಮೊದಲಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಸುಗಂಧವನ್ನು ಬೀರುವ 'ಅಗರಬತ್ತಿ' ಹಿಂದೆ ಅಡಗಿರುವ ಕರಾಳ ಸತ್ಯ

ಈ ಸ್ಥಿತಿಗೆ ಒಂದಕ್ಕಿಂತ ಹೆಚ್ಚು ಕಾರಣಗಳಿರಬಹುದು. ಪ್ರಮುಖವಾಗಿ ರಜೋನಿವೃತ್ತಿ ಎಂಬ ವಿದ್ಯಮಾನ. ಪ್ರತಿತಿಂಗಳೂ ಬಿಡುಗಡೆಯಾಗುತ್ತಿದ್ದ ಅಂಡಾಣು ಈಗ ಬಿಡುಗಡೆಯಾಗುವುದನ್ನು ನಿಲ್ಲಿಸಿರುವುದರಿಂದ ಗರ್ಭಾಶಯ ಬದಲಾವಣೆಗೆ ಒಳಪಡಬಹುದು. ಗರ್ಭಾಶಯದೊಳಗಣ ಚಿಕ್ಕ ಪ್ರಮಾಣದ ಗಡ್ಡೆ, ಗರ್ಭ ಧರಿಸುವುದನ್ನು ನಿಲ್ಲಿಸಲು ಉಪಯೋಗಿಸಲಾದ ಉಪಕರಣಗಳು, ಗರ್ಭಕೋಶ, ಅಂಡಾಶಯ ಮತ್ತು ಇತರ ಸಂಬಂಧಿ ಅಂಗಗಳಲ್ಲಿ ಸೋಂಕು ಮೊದಲಾದ ಕಾರಣಗಳಿಂದ ಗರ್ಭಾಶಯದಲ್ಲಿ ನೀರು ತುಂಬಿಕೊಂಡಿರಬಹುದು. ಈ ತೊಂದರೆಗೆ ಫಲಪ್ರದವಾದ ಹತ್ತು ಮನೆಮದ್ದುಗಳನ್ನು ಬೋಲ್ಡ್ ಸ್ಕೈ ತಂಡ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ.

ಕೊಬ್ಬಿನ ಆಮ್ಲ (Essential Fatty Acids)

ಕೊಬ್ಬಿನ ಆಮ್ಲ (Essential Fatty Acids)

ನಮ್ಮ ಶರೀರದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ನಿಯಂತ್ರಿಸುವ ಮೂಲಕ ಗರ್ಭಕೋಶದ ಅಕ್ಕಪಕ್ಕ ಸಂಗ್ರಹವಾಗಿದ್ದ ಕೊಬ್ಬು ಕರಗಿ ಗರ್ಭಕೋಶಕ್ಕೆ ಹೆಚ್ಚಿನ ಸ್ಥಳಾವಕಾಶ ದೊರಕುತ್ತದೆ. ಇದಕ್ಕಾಗಿ ಬೆಣ್ಣೆಹಣ್ಣು ಮತ್ತು ಆಲಿವ್ ಎಣ್ಣೆಗಳನ್ನು ಹೆಚ್ಚು ಸೇವಿಸಿದರೆ ಉತ್ತಮ ಪರಿಹಾರ ದೊರಕುತ್ತದೆ. ಈ ಆಹಾರಗಳು ಗರ್ಭಕೋಶದಲ್ಲಿರುವ ಫೈಬ್ರಾಯ್ಡ್ ಗಳನ್ನೂ ನಿವಾರಿಸಲು ನೆರವಾಗುತ್ತವೆ.

ನಾರಿನ ಬೀಜ (Flax Seeds )

ನಾರಿನ ಬೀಜ (Flax Seeds )

ಪ್ರತಿದಿನ ನಾರಿನ ಬೀಜಗಳನ್ನು ಕೊಂಚ ಪ್ರಮಾಣದಲ್ಲಿ ನೀರಿನೊಂದಿಗೆ ಸೇವಿಸುವ ಮೂಲಕ ದೇಹದಲ್ಲಿ ಈಸ್ಟ್ರೋಜೆನ್ ಎಂಬ ಹಾರ್ಮೋನಿನ ಸ್ರವಿಕೆಯನ್ನು ಕಡಿಮೆ ಮಾಡಬಹುದು. ಇದರಿಂದ ದೇಹದ ಗರ್ಭಕೋಶದ ತೊಂದರೆಗಳು ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತದೆ.

ಲ್ಯಾವೆಂಡರ್ ಎಣ್ಣೆಯ ಮಸಾಜ್

ಲ್ಯಾವೆಂಡರ್ ಎಣ್ಣೆಯ ಮಸಾಜ್

ಗರ್ಭಕೋಶದಲ್ಲಿ ಫೈಬ್ರಾಯ್ಡ್ ಗಳ ಬೆಳವಣಿಗೆಯಿಂದ ಕೆಳಹೊಟ್ಟೆಯಲ್ಲಿ ನೋವಾಗುತ್ತಿದ್ದರೆ ಲ್ಯಾವೆಂಡರ್ ಎಣ್ಣೆಯನ್ನು ನಯವಾಗಿ ಕೆಳಹೊಟ್ಟೆಯ ಭಾಗದಲ್ಲಿ (ಕೆಳಗಿನಿಂದ ಮೇಲಕ್ಕೆ ಆವರಿಸುವಂತೆ) ಮಸಾಜ್ ಮಾಡಿ. ಇದರಿಂದ ಗರ್ಭಕೋಶಕ್ಕೆ ರಕ್ತಸಂಚಾರ ಹೆಚ್ಚುತ್ತದೆ ಹಾಗೂ ನೋವು ನಿಧಾನವಾಗಿ ಕಡಿಮೆಯಾಗುತ್ತದೆ. ಜೊತೆಗೇ ಗರ್ಭಕೋಶದ ನೋವಿನಿಂದ ಆರಾಮವನ್ನೂ ನೀಡುತ್ತದೆ.

ಹರಳೆಣ್ಣೆ

ಹರಳೆಣ್ಣೆ

ಗರ್ಭಕೋಶದಲ್ಲಿ ಫೈಬ್ರಾಯ್ಡ್ ಗಳ ಬೆಳವಣಿಗೆಯಿಂದ ಕೆಳಹೊಟ್ಟೆಯಲ್ಲಿ ನೋವಾಗುತ್ತಿದ್ದರೆ ಹರಳೆಣ್ಣೆ ಸಹಾ ಉತ್ತಮ ನೋವು ನಿವಾರಕವಾಗಿದೆ. ಇದಕ್ಕಾಗಿ ಕೆಳಹೊಟ್ಟೆಯ ಭಾಗದಲ್ಲಿ (ಕೆಳಗಿನಿಂದ ಮೇಲಕ್ಕೆ ಆವರಿಸುವಂತೆ) ಮಸಾಜ್ ಮಾಡಿ. ಇದರಿಂದ ಗರ್ಭಕೋಶದ ಅಕ್ಕಪಕ್ಕದ ಸ್ನಾಯುಗಳು ಸಡಿಲಗೊಳ್ಳುತ್ತವೆ ಹಾಗೂ ರಕ್ತಸಂಚಾರ ಹೆಚ್ಚುತ್ತದೆ. ಪರಿಣಾಮವಾಗಿ ನೋವು ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತದೆ. ಕೆಳಹೊಟ್ಟೆನೋವಿಗೆ ಹರಳೆಣ್ಣೆ ಸುಲಭವಾದ ಪರಿಹಾರವಾಗಿದೆ.

ವಿವಿಧ ಕೋಸುಗಳು

ವಿವಿಧ ಕೋಸುಗಳು

ನಿಮ್ಮ ಆಹಾರದಲ್ಲಿ ಎಲೆಕೋಸು, ಹೂಕೋಸು, ಬ್ರೋಕೋಲಿ ಮತ್ತು ಕೇಲ್ ಎಲೆಗಳು ಹೆಚ್ಚಿನ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳುವುದರಿಂದ ದೇಹದಲ್ಲಿ ಸೂಕ್ತ ಪ್ರಮಾಣದಲ್ಲಿ ಈಸ್ಟ್ತೋಜೆನ್ ಎಂಬ ಹಾರ್ಮೋನು ಸ್ರವಿಸಲು ಸಾಧ್ಯವಾಗುತ್ತದೆ. ಈ ಹಾರ್ಮೋನು ಗರ್ಭಕೋಶದ ನೀರನ್ನು ಕಡಿಮೆಗೊಳಿಸಲು ನೆರವಾಗುತ್ತದೆ.

ಕೆಫೀನ್ ಕಡಿಮೆ ಮಾಡಿ

ಕೆಫೀನ್ ಕಡಿಮೆ ಮಾಡಿ

ಒಂದು ವೇಳೆ ನೀವು ದಿನದಲ್ಲಿ ಹಲವು ಕಪ್ ಕಾಫಿ ಕುಡಿಯುವವರಾದರೆ ತಕ್ಷ್ಣಣ ಕಡಿಮೆ ಮಾಡಿ. ಏಕೆಂದರೆ ಕಾಫಿಯ ಮೂಲಕ ದೇಹಕ್ಕೆ ಲಭ್ಯವಾಗುವ ಕೆಫೀನ್ ಈಸ್ಟ್ರೋಜೆನ್ ಹಾರ್ಮೋನನ್ನು ಹೆಚ್ಚಿಸಿ ಫ್ರೈಬ್ರಾಯ್ಡ್ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದರಿಂದ ಗರ್ಭಾಶಯದೊಳಕ್ಕೆ ನೀರು ತುಂಬಿಕೊಳ್ಳಲು ಸಾಧ್ಯವಗುತ್ತದೆ. ಇದಕ್ಕಾಗಿ ಕಾಫಿ ಸೇವನೆಯನ್ನು ದಿನಕ್ಕೆ ಒಂದು ಕಪ್ ಗೆ ಇಳಿಸಿ.

ಕೆಂಪು ಮಾಂಸವನ್ನು ಸೇವಿಸಬೇಡಿ

ಕೆಂಪು ಮಾಂಸವನ್ನು ಸೇವಿಸಬೇಡಿ

ಕೆಂಪು ಮಾಂಸ, ಅದರಲ್ಲೂ ಗೋಮಾಂಸವನ್ನು ಮುಟ್ಟಲಿಕ್ಕೇ ಹೋಗಬೇಡಿ. ಏಕೆಂದರೆ ಇದರಲ್ಲಿರುವ ಕೆಲವು ಪೋಷಕಾಂಶಗಳು ಗರ್ಭಕೋಶದ ನೀರನ್ನು ಹೆಚ್ಚಿಸಲು ಕಾರಣವಾಗುತ್ತವೆ. ಆದರಲ್ಲೂ ಅಗ್ಗ ಎಂಬ ಕಾರಣಕ್ಕೆ ನೋಡಲಿಕ್ಕೆ ತುಂಬಿಕೊಂಡಂತಿರುವ ಯಾವುದೇ ಮಾಂಸವನ್ನು ಖರೀಸಿದಿಸಬೇಡಿ. ಏಕೆಂದರೆ ಇದರಲ್ಲಿ ಕೆಲವು ಹಾರ್ಮೋನುಗಳನ್ನು ಇಂಜೆಕ್ಷನ್ ಮೂಲಕ ಸೇರಿಸಿರಬಹುದು.

ಸಸ್ಯಾಹಾರಿಗಳಾಗಿ

ಸಸ್ಯಾಹಾರಿಗಳಾಗಿ

ಸಾಧ್ಯವಾದಷ್ಟು ಮಟ್ಟಿಗೆ ಮಾಂಸಾಹಾರವನ್ನು ತ್ಯಜಿಸುವುದೇ ಉತ್ತಮ. ಏಕೆಂದರೆ ಎಲ್ಲಾ ಮಾಂಸಗಳಲ್ಲಿ ಇರುವ ಕೆಲವು ಪೋಷಕಾಂಶಗಳು ಮತ್ತು ಮುಖ್ಯವಾಗಿ ಕೊಬ್ಬು ಗರ್ಭಕೋಶದಲ್ಲಿ ನೀರು ತುಂಬಿಕೊಂಡಿರಲು ಕಾರಣವಾಗುತ್ತವೆ. ಸಾಧ್ಯವಾದಷ್ಟು ಮನೆಯಲ್ಲಿ ಮಾಡಿದ ಅಡುಗೆಯನ್ನೇ ಸೇವಿಸಿ.

ಹಾಲು ಮೊಸರುಗಳನ್ನು ಕಡಿಮೆ ಮಾಡಿ

ಹಾಲು ಮೊಸರುಗಳನ್ನು ಕಡಿಮೆ ಮಾಡಿ

ಹಾಲಿನ ಉತ್ಪನ್ನಗಳಾದ ಮೊಸರು, ಮಜ್ಜಿಗೆ, ತುಪ್ಪ, ಚೀಸ್, ಕ್ರೀಂ ಮೊದಲಾದ ಆಹಾರಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡಿಮೆ ಮಾಡಿ ಅಥವಾ ಸಾಧ್ಯವಿದ್ದರೆ ತ್ಯಜಿಸಿ. ಸಾಧ್ಯವಿಲ್ಲದಿದ್ದರೆ ಕೆನೆರಹಿತವಗಿ ಸಿಗುವ ಉತ್ಪನ್ನಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿ.

ಚಾಕಲೇಟು ಮತ್ತು ಕೋಲಾಗಳು

ಚಾಕಲೇಟು ಮತ್ತು ಕೋಲಾಗಳು

ಇವುಗಳಲ್ಲಿ ಸಹಾ ಕೆಫೀನ್ ಇದ್ದು ಗರ್ಭಕೋಶದೊಳಗಣ ಫೈಬ್ರಾಯ್ಡುಗಳನ್ನು ಬೆಳೆಸಲು ನೆರವಾಗುತ್ತದೆ. ಇದಕ್ಕಾಗಿ ಚಾಕಲೇಟುಗಳ ಬದಲು ಕಾಫಿ ಮತ್ತು ಹಸಿರು ಚಹಾವನ್ನು ಸೇವಿಸಿ.

English summary

10 Home Remedies For Fluid In Uterus

uterus does not retain any fluids except from pregnancy. It is not normal if you have accumulation of fluid in your uterus in the form of fibroids or polyps. Fortunately, there are effective home remedies for fluid in uterus that we will share with you today.
X
Desktop Bottom Promotion