For Quick Alerts
ALLOW NOTIFICATIONS  
For Daily Alerts

ವೈದ್ಯಲೋಕವನ್ನೇ ತಲ್ಲಣಗೊಳಿಸಿದ ಆಲಿವ್ ಎಲೆಗಳ ವೈಶಿಷ್ಟ್ಯವೇನು?

By Super
|

ಆಲಿವ್ ಎಣ್ಣೆ ಹೃದಯಕ್ಕೆ ಮತ್ತು ಆರೋಗ್ಯಕ್ಕೆ ಅತ್ಯುತ್ತಮ ಎಣ್ಣೆ ಎಂದು ಈಗಾಗಲೇ ಈ ಅಂಕಣದ ಇನ್ನೂಂದು ಲೇಖನದಲ್ಲಿ ತಿಳಿದಿದ್ದೀರಿ. ಆಲಿವ್ ಗಿಡದ ಎಲೆಗಳು ಸಹಾ ಆರೋಗ್ಯಕ್ಕೆ ಉತ್ತಮ ಎಂದು ನಿಮಗೆ ಗೊತ್ತಿತ್ತೇ? ಹಿಂದಿನಿಂದಲೂ ಆಲಿವ್ ಬೆಳಗಾರರು ಒಂದು ವಿಷಯವನ್ನು ಗಮನಿಸಿದ್ದರು. ಈ ಎಲೆಗಳಿಗೆ ಹುಳಗಳು ಸುಲಭವಾಗಿ ಪೀಡೆ ಕೊಡುತ್ತಿರಲಿಲ್ಲ. ಇದು ದೇವಲೋಕದ ಗಿಡವಾಗಿರಬೇಕು ಎಂದೆಣಿಸಿ ಭಕ್ತಿಯಿಂದ ಸೇವಿಸುತ್ತಿದ್ದರು.

ಈ ಬಗ್ಗೆ ನಡೆದ ಸಂಶೋಧನೆಗಳಿಂದ ಆಲಿವ್ ಎಲೆಗಳಲ್ಲಿ ಒಲಿಯೂರೋಪಿನ್ (oleuropein) ಎಂಬ ಫೈಟೋಕೆಮಿಕಲ್ (phytochemical)-ವಿಶೇಷ ಪೋಷಕಾಂಶವಿರುವುದನ್ನು ಪತ್ತೆಮಾಡಲಾಗಿದೆ. ಈ ಫೈಟೋಕೆಮಿಕಲ್ ಕೀಟಗಳಿಂದ ಎಲೆ ಬಾಧೆಗೊಳಗಾಗುವುದನ್ನು ತಪ್ಪಿಸಿ ರಕ್ಷಣೆ ನೀಡುತ್ತದೆ.

ಈ ಎಲೆಯನ್ನು ಸೇವಿಸುವುದರಿಂದ ನಮ್ಮ ಶರೀರವೂ ಹಲವು ರೋಗಗಳಿಂದ ರಕ್ಷಣೆ ಪಡೆಯಲು ಸಾಧ್ಯವಾಗುತ್ತದೆ. ಈ ಬಗ್ಗೆ ನಡೆದ ಸಂಶೋಧನೆಗಳಿಂದ ಹಲವು ಮಹತ್ವದ ಮಾಹಿತಿಗಳು ಹೊರಬಂದಿವೆ. ಈ ಮಾಹಿತಿಗಳಲ್ಲಿ ಪ್ರಮುಖವಾದ ಹತ್ತು ವಿವರಗಳನ್ನು ಇಲ್ಲಿ ನೀಡಲಾಗಿದೆ. ದೇಹಕ್ಕೆ ವರದಾನವಾಗಿರುವ ಆಲಿವ್ಎಣ್ಣೆಯ ವಿಶೇಷತೆ ಏನು?

ಕ್ಯಾನ್ಸರ್ ಬರುವುದನ್ನು ತಪ್ಪಿಸಿ ರಕ್ಷಣೆ ನೀಡುತ್ತದೆ

ಕ್ಯಾನ್ಸರ್ ಬರುವುದನ್ನು ತಪ್ಪಿಸಿ ರಕ್ಷಣೆ ನೀಡುತ್ತದೆ

ಆಲಿವ್ ಎಲೆಗಳ ಸೇವನೆಯ ಅತ್ಯಂತ ಮುಖ್ಯವಾದ ಪ್ರಯೋಜನವೆಂದರೆ ನಮ್ಮ ದೇಹದಲ್ಲಿ ವಿವಿಧ ಕಾರಣಗಳಿಂದ ಬರಬಹುದಾಗಿದ್ದ ಕ್ಯಾನ್ಸರ್ ಬರುವುದನ್ನು ತಡೆಯುತ್ತದೆ. ಕ್ಯಾನ್ಸರ್ ಎಂದಿಗೂ ಒಮ್ಮೆಲೇ ಧಾಳಿಯಿಡುವುದಿಲ್ಲ. ಯಾವುದೋ ಒಂದು ಭಾಗದ ಜೀವಕೋಶಗಳು ಕ್ಯಾನ್ಸರ್ ಬಾಧೆಗೊಳಗಾಗಿ ನಿಧಾನವಾಗಿ ಉಲ್ಬಣಗೊಳ್ಳುತ್ತಾ ಹೋಗುತ್ತದೆ. ಇದಕ್ಕೆ ಕ್ಯಾನ್ಸರ್ ಕಾರಕ ಕಣಗಳು ಮುಖ್ಯ ಕಾರಣವಾಗಿವೆ. ಆಲಿವ್ ಎಲೆಗಳ ಸೇವನೆಯಿಂದ ಈ ಕಣಗಳು ಹಿಮ್ಮೆಟ್ಟುತ್ತಾ ಕ್ಯಾನ್ಸರ್ ಬರುವುದನ್ನು ತಪ್ಪಿಸುತ್ತದೆ. ಒಂದು ವೇಳೆ ಕ್ಯಾನ್ಸರ್ ಈಗಾಗಲೇ ಆವರಿಸಿದ್ದರೆ, ಕ್ಯಾನ್ಸರ್ ಕಾರಕ ಕಣಗಳಿಲ್ಲದ ಕಾರಣ ದೇಹ ನೈಸರ್ಗಿಕವಾಗಿ ಕ್ಯಾನ್ಸರ್ ಗಡ್ಡೆಯ ವಿರುದ್ಧ ಹೋರಾಡಲು ಶಕ್ತಿ ಪಡೆದುಕೊಂಡು ವಿಜಯ ಸಾಧಿಸುವತ್ತ ಧಾವಿಸುತ್ತದೆ. ದೇಹದ ಹಲವು ಕ್ಯಾನ್ಸರ್ ಗಳಿಗೆ ಆಲಿವ್ ಎಲೆಗಳು ಉತ್ತಮ ಫಲಿತಾಂಶ ನೀಡಿವೆ. ಅದರಲ್ಲೂ ಸ್ತನಕ್ಯಾನ್ಸರ್ ಗೆ ಈ ಎಲೆಗಳು ಹೇಳಿ ಮಾಡಿಸಿದಂತಹ ಪರಿಣಾಮವನ್ನು ಪ್ರಕಟಿಸಿವೆ.

ಎಲುಬುಗಳನ್ನು ದೃಢಗೊಳಿಸುತ್ತದೆ

ಎಲುಬುಗಳನ್ನು ದೃಢಗೊಳಿಸುತ್ತದೆ

ಸಾಮಾನ್ಯವಾಗಿ ಎಲುಬುಗಳು ದೃಢಗೊಳ್ಳಲು ಕ್ಯಾಲ್ಸಿಯಂ ಅಗತ್ಯವಿದೆ. ಆದರೆ ಕೇವಲ ಕ್ಯಾಲ್ಸಿಯಂ ಇದ್ದರೆ ಸಾಲದು. ಇದಕ್ಕೆ ಹಲವು ಇತರ ವಸ್ತುಗಳ ಸಹಕಾರವೂ ಬೇಕು. ಆಲಿವ್ ಎಲೆಗಳಲ್ಲಿರುವ osteoblast ಎಂಬ ಪೋಷಕಾಂಶ ಮೂಳೆಗಳ ಒಂದೊಂದೂ ಕಣ ಇನ್ನೊಂದಕ್ಕೆ ಪರಸ್ಪರ ಅಂಟಿಕೊಂಡಿರಲು ನೆರವಾಗುತ್ತದೆ. ಪರಿಣಾಮವಾಗಿ ಮೂಳೆಗಳು ದೃಢಗೊಳ್ಳುತ್ತವೆ. ಮೂಳೆಗಳ ನಡುವೆ ಗಾಳಿಗುಳ್ಳೆಗಳು ಮೂಡಿ ಟೊಳ್ಳಾಗಿ ಮೆದುವಾಗುವ ಸ್ಥಿತಿಯಾದ osteoporosis ಎಂಬ ಖಾಯಿಲೆಯಿಂದ ಈ ಎಲೆಗಳು ರಕ್ಷಣೆ ನೀಡುತ್ತವೆ. ಸಮಾನ್ಯವಾಗಿ ಮಧ್ಯವಯಸ್ಸು ದಾಟಿದ ಬಳಿಕ ಕಾಡುವ ಈ ರೋಗವನ್ನು ಹಿಮ್ಮೆಟ್ಟಿಸಲು ಆಲಿವ್ ಎಲೆಗಳಿಂದ ಮಾಡಿದ ಟೀ ಸೇವನೆ ಉತ್ತಮವಾಗಿದೆ.

ವೈರಸ್ ವಿರೋಧಿ (anti-viral) ಮತ್ತು ಜೀವಿರೋಧಿ (anti-bacterial )ಗುಣಗಳು

ವೈರಸ್ ವಿರೋಧಿ (anti-viral) ಮತ್ತು ಜೀವಿರೋಧಿ (anti-bacterial )ಗುಣಗಳು

ಸಾಮಾನ್ಯವಾಗಿ ನಮ್ಮ ದೇಹ ನಿರಂತರವಾಗಿ ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳ ಧಾಳಿಗೆ ತುತ್ತಾಗುತ್ತಲೇ ಇರುತ್ತದೆ. ಇವನ್ನು ತಡೆಯಲು ನಮ್ಮ ಜೀವನಿರೋಧಕ ವ್ಯವಸ್ಥೆ ಹೋರಾಡುತ್ತಾ ಇರುತ್ತದೆ. ಆಲಿವ್ ಎಲೆಗಳಲ್ಲಿ ಈ ಶಕ್ತಿಯನ್ನು ಹೆಚ್ಚಿಸಲು ಪೂರಕವಾಗಿರುವ ಹಲವು ಪೋಷಕಾಂಶಗಳಿವೆ. ಪ್ರಮುಖವಾಗಿ oleuropein ನಮ್ಮ ದೇಹದ ಅತಿಸೂಕ್ಷ್ಮ ಕೀಟಾಣುಗಳ ವಿರುದ್ಧ ಹೋರಾಡಲು ಸಮರ್ಥವಾಗಿದೆ. ಇವು ಈ ಬ್ಯಾಕ್ಟೀರಿಯಾಗಳನ್ನು ಹಿಮ್ಮೆಟ್ಟಿಸುವುದು ಮಾತ್ರವಲ್ಲ, ಇವುಗಳನ್ನು ನಿರ್ನಾಮವಾಗಿಸಿ ಮತ್ತೆ ಬರದಂತೆ ಹಿಮ್ಮೆಟ್ಟಿಸುತ್ತವೆ. ಒಂದರ್ಥದಲ್ಲಿ ನೈಸರ್ಗಿಕವಾದ ಪ್ರತಿಜೀವಕ (ಆಂಟಿ ಬಯೋಟಿಕ್)ನಂತೆಯೂ ಕಾರ್ಯನಿರ್ವಹಿಸುತ್ತದೆ.

ಆಂಟಿ ಆಕ್ಸಿಡೆಂಟುಗಳ ಆಗರ

ಆಂಟಿ ಆಕ್ಸಿಡೆಂಟುಗಳ ಆಗರ

ಆಲಿವ್ ಎಲೆಗಳಲ್ಲಿ ವಿವಿಧ ಆಂಟಿ ಆಕ್ಸಿಡೆಂಟು ಮತ್ತು ಫಿನಾಲ್ ಗಳೆಂಬ ಪೋಷಕಾಂಶಗಳಿವೆ. ಇವು ನಮ್ಮ ದೇಹದಲ್ಲಿ ರಕ್ತದೊಡನೆ ಸಂಚರಿಸುವ ಫ್ರೀ ರ್‍ಯಾಡಿಕಲ್ (Free radical) ಎಂಬ ವಿಷಕಾರಕ ವಸ್ತುಗಳನ್ನು ಹಿಮ್ಮೆಟ್ಟಿಸುತ್ತವೆ. ಈ ಫ್ರೀ ರ್‍ಯಾಡಿಕಲ್ ಗಳು ಜೀವಕೋಶದ ಮರುಹುಟ್ಟಿಗೆ ತಡೆಯೊಡ್ಡಿ ವೃದ್ದಾಪ್ಯ ಬೇಗನೇ ಆವರಿಸಲು ಕಾರಣವಾಗುತ್ತವೆ. ಅಲ್ಲದೇ ಹಲವು ಬಗೆಯ ಕ್ಯಾನ್ಸರ್ ಬರಲೂ ಕಾರಣವಾಗುತ್ತವೆ.

ಉರಿಯೂತ ವಿರೋಧಿ (Anti-inflammatory) ಗುಣಗಳು

ಉರಿಯೂತ ವಿರೋಧಿ (Anti-inflammatory) ಗುಣಗಳು

ನಮ್ಮ ದೇಹವನ್ನು ಹೇಗೋ ಪ್ರವೇಶಿಸಿದ ಹಲವು ಕ್ರಿಮಿಗಳು ಸೋಂಕನ್ನು ಉಂಟುಮಾಡುತ್ತವೆ. oleuropein ಒಂದು ಉತ್ತಮವಾದ ಉರಿಯೂತ ವಿರೋಧಿಯೂ ಆಗಿರುವುದರಿಂದ ಈ ಕ್ರಿಮಿಗಳ ಆಟ ನಡೆಯಲು ಬಿಡುವುದಿಲ್ಲ. ಪರಿಣಾಮವಾಗಿ ಸೋಂಕಾಗುವುದರಿಂದ ರಕ್ಷಣೆ ಪಡೆದಂತಾಗುತ್ತದೆ. ಆಲಿವ್ ಎಲೆಗಳ ಪ್ರಯೋಜನಗಳಲ್ಲಿ ಇದೊಂದು ಅತಿಮುಖ್ಯವಾದುದಾಗಿದೆ.

ಹೃದಯದ ಒತ್ತಡವನ್ನು ಕಡಿಮೆಗೊಳಿಸುತ್ತದೆ

ಹೃದಯದ ಒತ್ತಡವನ್ನು ಕಡಿಮೆಗೊಳಿಸುತ್ತದೆ

oleuropein ಪೋಷಕಾಂಶವು ನರಗಳನ್ನು ಸಡಿಲಗೊಳಿಸಿ ರಕ್ತಪರಿಚಲನೆಯನ್ನುಸುಗಮಗೊಳಿಸಲು ನೆರವಾಗುವುದರಿಂದ ಹೃದಯಕ್ಕೆ ಕಡಿಮೆ ಒತ್ತಡದಲ್ಲಿ ರಕ್ತವನ್ನು ದೂಡಿದರೆ ಸಾಕಾಗುತ್ತದೆ. ಪರಿಣಾಮವಾಗಿ ಹೆಚ್ಚಾಗಿದ್ದ ರಕ್ತದ ಒತ್ತಡ ಕಡಿಮೆಯಾಗುತ್ತದೆ. ಜೊತೆಗೇ ದೇಹದೊಳಗಣ ಗಾಯಗಳಿಂದ ರಕ್ತ ಹೆಪ್ಪುಗಟ್ಟುವುದು ನಿಧಾನವಾಗಿದ್ದರೆ ಅದನ್ನು ತ್ವರಿತಗೊಳಿಸಿ ಶೀಘ್ರವಾಗಿ ಮಾಗಲು ನೆರವಾಗುತ್ತದೆ. ರಕ್ತದಲ್ಲಿ ಸಕ್ಕರೆಯ ಅಂಶವನ್ನು ಏಕರೂಪದಲ್ಲಿಡಲು ನೆರವಾಗುವ ಆಲಿವ್ ಎಲೆಗಳು ತನ್ಮೂಲಕ ದೇಹದೆಲ್ಲೆಡೆ ರಕ್ತಪರಿಚಲನೆ ಸುಗಮಗೊಳ್ಳಲು, ಹೃದಯದ ಪ್ರಮುಖ ನಾಳಗಳಲ್ಲಿ ರಕ್ತ ಸರಾಗವಾಗಿ ಸಂಚರಿಸಲು ನೆರವಾಗಿ ಆರೋಗ್ಯವನ್ನು ವೃದ್ಧಿಸುತ್ತವೆ.

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ

ನಾವು ಹಿಂದೆಂದೋ ತಿಂದಿದ್ದ ಕೊಲೆಸ್ಟ್ರಾಲ್ ಸಹಿತ ತಿಂಡಿ, ಎಣ್ಣೆಗಳ ಮೂಲಕ ದೇಹ ಪ್ರವೇಶಿಸಿ ರಕ್ತನಾಳಗಳೊಳಗೆ ಕವಲೊಡೆದಿರುವಲ್ಲಿ, ತಿರುವಿರುವ ಮೂಲೆಗಳಲ್ಲೆಲ್ಲಾ ಅಂಟಿಕೊಂಡು ರಕ್ತದ ಸುಗಮ ಪರಿಚಲನೆಗೆ ಅಡ್ಡಿಯುಂಟುವಾಡುತ್ತಿದ್ದ ಜಿಡ್ಡಾದ ಕೆಟ್ಟ ಕೊಲೆಸ್ಟ್ರಾಲ್ (LDL-Low density lipoprotein) ಅನ್ನು ತೊಲಗಿಸಲು ಆಲಿವ್ ಎಲೆಗಳು ಅತ್ಯುತ್ತಮವಾಗಿವೆ. ಇದರಿಂದ ಕ್ರಮೇಣವಾಗಿ ಎಲ್ಲಾ ಜಿಡ್ಡು ದೇಹದಿಂದ ಹೊರತೊಲಗುತ್ತವೆ. ಪರಿಣಾಮವಾಗಿ ಹೃದಯಸ್ಥಂಬನ ಮತ್ತು ಇತರ ತೊಂದರೆಗಳಿಂದ ರಕ್ಷಣೆ ಪಡೆದಂತಾಗುತ್ತದೆ.

ಜೀವನಿರೋಧಕ ವ್ಯವಸ್ಥೆಯನ್ನು ಸುಭದ್ರಗೊಳಿಸುತ್ತದೆ

ಜೀವನಿರೋಧಕ ವ್ಯವಸ್ಥೆಯನ್ನು ಸುಭದ್ರಗೊಳಿಸುತ್ತದೆ

ನಮ್ಮ ಆರೋಗ್ಯ ಸಂಪೂರ್ಣವಾಗಿ ಜೀವನಿರೋಧಕ ವ್ಯವಸ್ಥೆಯನ್ನು ಅವಲಂಬಿಸಿದೆ. ಈ ವ್ಯವಸ್ಥೆಯ ಕುಸಿತ ಏಡ್ಸ್ ನಂತಹ ಮಾರಕ ರೋಗಕ್ಕೂ ಕಾರಣವಾಗಬಲ್ಲದು. ದೇಹಕ್ಕೆ ದಾಳಿಯಿಡುವ ಹತ್ತು ಹಲವು ಕ್ರಿಮಿ, ಬ್ಯಾಕ್ಟೀರಿಯಾ, ವೈರಸ್ಸುಗಳಿಗೆ ಈ ವ್ಯವಸ್ಥೆ ತಕ್ಕ ಬುದ್ದಿ ಕಲಿಸುತ್ತದೆ. ತಾಜಾ ಆಲಿವ್ ಎಲೆಗಳಿಂದ ಹಿಂಡಿ ತೆಗೆದಿರುವ ರಸದಲ್ಲಿ ಹಸಿರು ಟೀಯಲ್ಲಿ ಸಿಗುವುದಕ್ಕಿಂದ ಎರಡು ಪಟ್ಟು ಹೆಚ್ಚು ಮತ್ತು ವಿಟಮಿ ಸಿ ಯಲ್ಲಿರುವುದಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ಆಂಟಿ ಆಕ್ಸಿಡೆಂಟುಗಳು ಸಿಗುತ್ತವೆ. ಪರಿಣಾಮವಾಗಿ ರೋಗ ನಿರೋಧಕ ಶಕ್ತಿಗೆ ಅತಿ ಹೆಚ್ಚಿನ ಬೆಂಬಲ ದೊರಕುತ್ತದೆ. ಜೊತೆಗೇ ದೇಹ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿರುತ್ತದೆ.

ಶೀತದ ವಿರುದ್ಧ ಹೋರಾಡುತ್ತದೆ

ಶೀತದ ವಿರುದ್ಧ ಹೋರಾಡುತ್ತದೆ

ನಿಜವಾಗಿ ಹೇಳಬೇಕೆಂದರೆ ಶೀತ ಒಂದು ರೋಗವೇ ಅಲ್ಲ, ನಮ್ಮ ಮೂಗಿನ ಮೂಲಕ ತೇವವಾಗಿರುವ ಕೊಳವೆಗಳ ಮೂಲಕ ಸಾಗಿ ಬಂದ ವೈರಸ್ಸುಗಳ ವಿರುದ್ಧ ನಮ್ಮ ರೋಗ ನಿರೋಧಕ ವ್ಯವಸ್ಥೆ ಸಾರಿರುವ ಸಮರ. ಈ ಮೂಲಕ ತೇವವನ್ನು ಅತ್ಯಂತ ಹೆಚ್ಚಾಗಿಸಿ ಹೊರದೂಡುವ ಮೂಲಕ ವೈರಸ್ಸುಗಳನ್ನೂ ಆ ಪ್ರವಾಹದಲ್ಲಿ ಹೊರ ಹಾಕುವ ಪ್ರಯತ್ನವಾಗಿದೆ. ಆದರೆ ಪ್ರತಿಬಾರಿಯೂ ಹೊಸ ವೈರಸ್ಸಿನಿಂದ ಶೀತ ಬರುವುದರಿಂದ ನಮಗೆ ಒಂದು ವಾರ ಶೀತ ಕಾಡುತ್ತದೆ. ಆದರೆ ಆಲಿವ್ ಎಲೆಗಳ ಸೇವನೆಯಿಂದ ಜೀವನಿರೋಧಕ ಶಕ್ತಿಗೆ ಭೀಮಬಲ ದೊರಕಿರುವುದರಿಂದ ಶೀತಕ್ಕೆ ಕಾರಣವಾದ ಅಷ್ಟೂ ವೈರಸ್ಸುಗಳನ್ನು ಬೇಗನೇ ಹೊರಹಾಕಲು ಸಾಧ್ಯವಾಗುತ್ತದೆ. ಅಲ್ಲದೇ ಹೆಚ್ಚಿನ ವಿಧದ ವೈರಸ್ಸುಗಳ ವಿರುದ್ಧ ಹೋರಾಡಲೂ ಇದರ ಪೋಷಕಾಂಶಗಳು ಸಮರ್ಥವಾಗಿವೆ. ಈ ಮೂಲಕ ಶೀತ, ನೆಗಡಿ, ಫ್ಲೂ ಮತ್ತು ಹರ್ಪಿಸ್ ಜ್ವರದಿಂದಲೂ ರಕ್ಷಣೆ ಪಡೆದಂತಾಗುತ್ತದೆ.

ಇತರ ರೋಗಗಳಿಂದಲೂ ರಕ್ಷಣೆ

ಇತರ ರೋಗಗಳಿಂದಲೂ ರಕ್ಷಣೆ

ಆಲಿವ್ ಎಲೆಗಳು ಬ್ಯಾಕ್ಟೀರಿಯಾ, ವೈರಸ್ಸುಗಳ ವಿರುದ್ಧ ಹೋರಾಡಿದಂತೆಯೇ ಬೂಸು (fungus) ಗಳ ಮೂಲಕ ಉದ್ಭವವಾಗುವ ತೊಂದರೆಗಳ ವಿರುದ್ಧವೂ ಹೋರಾಡುತ್ತದೆ. ಉದಾಹರಣೆಗೆ candida (ನಾಲಿಗೆಯ ಮೇಲೆ ದಪ್ಪನಾದ ಪದರದಂತೆ ಕುಳಿತುಕೊಳ್ಳುವ ರೋಗ). ಅಲ್ಲದೇ ಇತರ ಮಾರಕ ರೋಗಗಳಾದ ಮಲೇರಿಯಾ, ಪೋಲಿಯೋ, ಚರ್ಮರೋಗವಾದ ಸೋರಿಯಾಸಿಸ್ (psoriasis), ವಿವಿಧ ಅಲರ್ಜಿಗಳು, ಕ್ಷಯಗಳ ವಿರುದ್ಧ ರಕ್ಷಣೆ ನೀಡುತ್ತದೆ. ನಮ್ಮ ದೇಹದ ಇತರ ಭಾಗಗಳಾದ ಶ್ವಾಸಕೋಶ, ಯಕೃತ್, ಹಲ್ಲು, ಕಿವಿ ಮೊದಲಾದ ಅಂಗಗಳಿಗೆ ತಗಲಬಹುದಾದ ಸೋಂಕುರೋಗಗಳಿಂದಲೂ ಆಲಿವ್ ಎಲೆಗಳು ರಕ್ಷಣೆ ನೀಡುತ್ತವೆ.

English summary

10 Health Benefits Of Olive Leaves

The wonderful qualities of olive oil are well known to us all. But did you know there are many health benefits of olive leaves? Many studies reveal that there are many health benefits of olive leaves. Here are some health benefits of olive leaves.Take a look.
X
Desktop Bottom Promotion