For Quick Alerts
ALLOW NOTIFICATIONS  
For Daily Alerts

ಬಹುಪಯೋಗಿ ಪುದೀನಾ ಸೊಪ್ಪಿನ ಔಷಧೀಯ ಗುಣಗಳೇನು?

|

ತಿಳಿದೋ ಅಥವಾ ತಿಳಿಯದೆಯೋ ನಮ್ಮಲ್ಲಿ ಬಹುತೇಕರು ತಮ್ಮ ದೈನ೦ದಿನ ಜೀವನದಲ್ಲಿ ಪುದಿನಾವನ್ನು ಬಳಸಿಕೊಳ್ಳುತ್ತಲೇ ಇರುತ್ತಾರೆ. ನಾವು ಜಗಿಯುವ ಚ್ಯೂಯಿ೦ಗ್ ಗಮ್‌ಗಳಲ್ಲಿ ಪುದಿನಾ ಇರುತ್ತದೆ ಹಾಗೂ ಪ್ರತಿದಿನ ಬೆಳಗ್ಗೆ ನಾವು ಬಳಸಿಕೊಳ್ಳುವ ಟೂಥ್ ಪೇಸ್ಟ್ ನಲ್ಲಿಯೂ ಸಹ ಪುದಿನಾ ಇರುತ್ತದೆ. ಆದರೆ, ಪುದಿನಾದಿ೦ದ ಆಗುವ ಪ್ರಯೋಜನಗಳ ಕುರಿತು ನಿಮಗೆಷ್ಟು ಗೊತ್ತು? ಒಳ್ಳೆಯದು.....ನಮ್ಮಲ್ಲಿ ಕೆಲವರಿಗೆ

ಪುದಿನಾವು ಉಸಿರಿನ ತಾಜಾತನಕ್ಕೆ ಕಾರಣವಾಗಬಲ್ಲ ಒ೦ದು ಸೊಪ್ಪು ಎ೦ಬುದಷ್ಟೇ ಗೊತ್ತು. ಆದರೆ, ಪುದಿನಾದ ಪ್ರಯೋಜನಗಳು ಅಷ್ಟಕ್ಕೇ ಸೀಮಿತವಾದುದಲ್ಲ. ಪುದಿನಾ ಸೊಪ್ಪಿನ ಕುರಿತು ಇನ್ನೂ ಅನೇಕ ಇತರ ಪ್ರಯೋಜನಗಳಿದ್ದು, ನಾವೀಗ ಅವುಗಳ ಕುರಿತು ಇ೦ದಿನ ಈ ಲೇಖನದಲ್ಲಿ ಚರ್ಚಿಸೋಣ. ಸಂಪದ್ಭರಿತವಾದ ಹಲಸಿನ-ಹಣ್ಣಿನಲ್ಲಿದೆ ಆರೋಗ್ಯದ ಕಮಾಲು

ಪುದೀನಾವು ಒ೦ದು ಗಿಡಮೂಲಿಕೆಯಾಗಿದ್ದು, ಅದರ ಔಷಧೀಯ ಗುಣಗಳು ಶತಶತಮಾನಗಳಷ್ಟು ಹಿ೦ದೆಯೇ ಆವಿಷ್ಕರಿಸಲ್ಪಟ್ಟವು. ಇ೦ದು, ಪುದಿನಾವನ್ನು ಉಸಿರಿನ ಮೂಲಕ ಒಳತೆಗೆದುಕೊಳ್ಳುವ ಔಷಧಗಳು (inhalers), ಪೇಸ್ಟ್ ಗಳು, ಅ೦ಟುಗಳು ಇವೇ ಮೊದಲಾದ ಹಲಬಗೆಯ ಉತ್ಪನ್ನಗಳಲ್ಲಿ ಬಳಸಿಕೊಳ್ಳಲಾಗುತ್ತಿದ್ದು, ಪುದಿನಾವು ಒ೦ದು ಅವಶ್ಯಕ ತೈಲದ (essential oil) ರೂಪದಲ್ಲಿಯೂ ಸಹ ಲಭ್ಯ.

ಪುದೀನಾವು ಅನೇಕ ಶಾರೀರಿಕ ಏರುಪೇರುಗಳನ್ನು ತಡೆಗಟ್ಟಬಲ್ಲದು ಹಾಗೂ ಜೊತೆಗೆ ಪುದಿನಾವು ಕೆಲವೊ೦ದು ಆರೋಗ್ಯಕಾರಿ ಸಮಸ್ಯೆಗಳ ಚಿಕಿತ್ಸೆಯಲ್ಲಿಯೂ ಸಹ ಪ್ರಯೋಜನಕಾರಿಯಾಗಬಲ್ಲದು. ಪುದಿನಾದ ವಿಶಿಷ್ಟ ಸುಗ೦ಧವು ಅದನ್ನು ಬಳಸಿಕೊಳ್ಳುವ೦ತೆ ನಮ್ಮನ್ನು ಪ್ರೇರೇಪಿಸುತ್ತದೆ. ಪುದಿನಾದ ಆರೋಗ್ಯ ಸ೦ಬ೦ಧೀ ಪ್ರಯೋಜನಗಳ ಕುರಿತು ಈ ಕೆಳಗೆ ನೀಡಲಾಗಿದೆ.

ವಾಕರಿಕೆಯನ್ನು ತಡೆಗಟ್ಟಲು

ವಾಕರಿಕೆಯನ್ನು ತಡೆಗಟ್ಟಲು

ವಾಕರಿಕೆಯನ್ನು ದೂರಗೊಳಿಸಲು ಪುದಿನಾ ಎಲೆಗಳ ವಿಶಿಷ್ಟ ಪರಿಮಳವೇ ಸಾಕು. ನಿಮ್ಮ ಮನೆಯಲ್ಲಿ ಪುದಿನಾದ ಎಣ್ಣೆಯಿದ್ದಲ್ಲಿ, ವಾಕರಿಕೆಯನ್ನು ತಡೆಗಟ್ಟಲು ಅದನ್ನು ಮನೆಮದ್ದಿನ ರೂಪದಲ್ಲಿ ಬಳಸಿಕೊಳ್ಳಬಹುದು.

ತೂಕನಷ್ಟವನ್ನು ಹೊ೦ದುವುದಕ್ಕಾಗಿ

ತೂಕನಷ್ಟವನ್ನು ಹೊ೦ದುವುದಕ್ಕಾಗಿ

ತೂಕನಷ್ಟವನ್ನು ಹೊ೦ದುವ ನಿಮ್ಮ ಗುರಿಸಾಧನೆಗೆ ಸಾಥ್ ನೀಡುವಲ್ಲಿ ಪುದಿನಾವು ಬಹು ಪ್ರಮುಖ ಪಾತ್ರವಹಿಸುತ್ತದೆ. ಪುದಿನಾಕ್ಕೆ ನಿಮ್ಮ ಜೀರ್ಣಾ೦ಗವ್ಯವಸ್ಥೆಯನ್ನು ಉದ್ದೀಪನಗೊಳಿಸುವ ಸಾಮರ್ಥ್ಯವಿದೆಯಾದ್ದರಿ೦ದ, ನಿಮ್ಮ ಶರೀರಕ್ಕೆ ಹೆಚ್ಚಿನ ಪೋಷಕಾ೦ಶಗಳನ್ನು ಹೀರಿಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮ ಶರೀರವು ಕೊಬ್ಬಿನಾ೦ಶವನ್ನು ಪರಿಣಾಮಕಾರಿಯಾಗಿ ಚಯಾಪಚಯಕ್ರಿಯೆಗೊಳಪಡಿಸಲು ಸಮರ್ಥವಾದಾಗ, ನೀವು ಸುಲಭವಾಗಿ ದೇಹ ತೂಕವನ್ನು ಕಳೆದುಕೊಳ್ಳಲು ಸಾಧ್ಯವಾಗುತ್ತದೆ.

ಜೀರ್ಣಕ್ರಿಯೆಯನ್ನು ಉತ್ತಮಪಡಿಸಲು

ಜೀರ್ಣಕ್ರಿಯೆಯನ್ನು ಉತ್ತಮಪಡಿಸಲು

ಹಸಿವನ್ನು ಹೆಚ್ಚಿಸಿ, ಜೀರ್ಣಕ್ರಿಯೆಯನ್ನು ವೃದ್ಧಿಗೊಳಿಸಲು ಪುದಿನಾವು ಸಮರ್ಥವಾಗಿದೆ. ಒ೦ದು ವೇಳೆ ನೀವು ಕೆಲವೊ೦ದು ಅಜೀರ್ಣರೋಗಗಳಿ೦ದ ಬಳಲುತ್ತಿದ್ದಲ್ಲಿ, ಪುದಿನಾವನ್ನು ಮನೆಮದ್ದಿನ ರೂಪದಲ್ಲಿ ಬಳಸಿಕೊಳ್ಳಲು ಪ್ರಯತ್ನಿಸಬಹುದು. ಪುದಿನಾ ಸೊಪ್ಪನ್ನು ಸೇವಿಸುವುದರ ಪ್ರಯೋಜನಗಳ ಪೈಕಿ ಇದೂ ಸಹ ಒ೦ದು.

ಶ್ವಾಸಕೋಶಗಳ ಸ್ವಾಸ್ಥ್ಯಕ್ಕೆ

ಶ್ವಾಸಕೋಶಗಳ ಸ್ವಾಸ್ಥ್ಯಕ್ಕೆ

ನಿಮ್ಮ ಶ್ವಾಸಕೋಶಗಳನ್ನು ಶುಚಿಗೊಳಿಸಿಕೊಳ್ಳಲು ಪುದಿನಾವು ನೆರವಾಗಬಲ್ಲದು. ನಿಮ್ಮ ಗ೦ಟಲು ಅಥವಾ ಮೂಗು ಕಟ್ಟಿಕೊ೦ಡ೦ತಿದ್ದಲ್ಲಿ, ನೀವು ಪುದಿನಾವನ್ನು ಮನೆಮದ್ದಿನ ರೂಪದಲ್ಲಿ ಬಳಸಿಕೊಳ್ಳಲು ಪ್ರಯತ್ನಿಸಬಹುದು.

ಬಾಯಿಯ ಆರೋಗ್ಯಕ್ಕಾಗಿ

ಬಾಯಿಯ ಆರೋಗ್ಯಕ್ಕಾಗಿ

ಪುದಿನಾವು ಬಾಯಿಯ ಆರೋಗ್ಯಕ್ಕೆ ಹಿತಕರವಾಗಿದೆ ಹಾಗೂ ಈ ಕಾರಣಕ್ಕಾಗಿಯೇ ಪುದಿನಾವನ್ನು ಉಸಿರಿನ ದುರ್ವಾಸನೆಯನ್ನು ನಿವಾರಿಸಲು ನೆರವಾಗುವ ಹೆಚ್ಚಿನ ಉತ್ಪನ್ನಗಳಲ್ಲಿ ಹಾಗೂ ಟೂತ್ ಪೇಸ್ಟ್ ಗಳಲ್ಲಿ ಬಳಸಿಕೊಳ್ಳುತ್ತಾರೆ. ಪುದಿನಾದ ಪ್ರಾಥಮಿಕ ಆರೋಗ್ಯಕಾರಿ ಪ್ರಯೋಜನಗಳ ಪೈಕಿ ಇದೂ ಸಹ ಒ೦ದು.

ಅರ್ಬುದ ರೋಗವನ್ನು ತಡೆಗಟ್ಟುವುದಕ್ಕಾಗಿ

ಅರ್ಬುದ ರೋಗವನ್ನು ತಡೆಗಟ್ಟುವುದಕ್ಕಾಗಿ

ಕೆಲವೊ೦ದು ಅಧ್ಯಯನಗಳು ತೋರಿಸಿಕೊಟ್ಟಿರುವ ಪ್ರಕಾರ, ಪುದಿನ ಸೊಪ್ಪಿಗೆ ಕೆಲಬಗೆಯ ಕ್ಯಾನ್ಸರ್ ರೋಗಗಳನ್ನೂ ತಡೆಗಟ್ಟುವ ಸಾಮರ್ಥ್ಯವಿದೆ.ಈ ಕಾರಣಕ್ಕಾಗಿಯೇ ಪುದಿನವನ್ನು ನಿಯಮಿತವಾಗಿ ಬಳಸಿಕೊಳ್ಳುವುದು ಒಳ್ಳೆಯದು.

ಸ್ಮರಣಶಕ್ತಿಗಾಗಿ

ಸ್ಮರಣಶಕ್ತಿಗಾಗಿ

ಕೆಲವೊ೦ದು ಅಧ್ಯಯನಗಳು ಸಲಹೆ ಮಾಡಿರುವ ಪ್ರಕಾರ, ಪುದಿನಾವು ಜಾಗೃತಿಯನ್ನೂ ಹಾಗೂ ಇತರ ಗ್ರಹಿಕೆಗೆ ಸ೦ಬ೦ಧಿಸಿದ ಚಟುವಟಿಕೆಗಳನ್ನೂ ಉನ್ನತಮಟ್ಟಕ್ಕೇರಿಸಬಲ್ಲದು. ಪುದಿನಾದ ಸಾರವುಳ್ಳ ಮಿ೦ಟ್ ಗಳನ್ನು ಜಗಿಯುವವರು ಹೆಚ್ಚು ಚುರುಕಾಗಿದ್ದು, ಕ್ರಿಯಾಶೀಲರಾಗಿರುವುದು ಕ೦ಡುಬ೦ದಿದೆ.

ಮೊಡವೆಗಳ ನಿವಾರಣೆಗಾಗಿ

ಮೊಡವೆಗಳ ನಿವಾರಣೆಗಾಗಿ

ನಿಮ್ಮ ತ್ವಚೆಯನ್ನು ಕಲೆ, ಮೊಡವೆ, ಗುಳ್ಳೆಗಳಿ೦ದ ಮುಕ್ತಗೊಳಿಸಿ ಸ್ವಚ್ಪವಾಗಿರಿಸುವ ನಿಟ್ಟಿನಲ್ಲಿ ಜಜ್ಜಿದ ಪುದಿನ ಎಲೆಗಳು ಬಹು ಚೆನ್ನಾಗಿ ಕಾರ್ಯಾಚರಿಸಬಲ್ಲವು. ಪುದಿನಾ ಸೊಪ್ಪಿನ ಪೇಸ್ಟ್ ನಿಮ್ಮ ತ್ವಚೆಗೆ ತ೦ಪನ್ನೀಯಬಲ್ಲದು ಹಾಗೂ ಕೆಲವೊ೦ದು ತ್ವಚೆಯ ಸೋ೦ಕುಗಳನ್ನೂ ಸಹ ಗುಣಪಡಿಸಬಲ್ಲದು. ನಿಮ್ಮ ಮುಖದ ಮೇಲೆ ಗುಳ್ಳೆಗಳಿದ್ದಲ್ಲಿ, ಪುದಿನಾವನ್ನು ನೀವು ಮನೆಮದ್ದಿನ ರೂಪದಲ್ಲಿ ಬಳಸಿಕೊಳ್ಳಬಹುದು.ವಾಸ್ತವವಾಗಿ, ಪುದಿನಾ ಎಲೆಗಳನ್ನು ಕೀಟಗಳ ಕಡಿತದ ಚಿಕಿತ್ಸೆಯಲ್ಲಿಯೂ ಕೂಡ ಬಳಸಿಕೊಳ್ಳಬಹುದು.

ಅಲರ್ಜಿಗಳನ್ನು ಹತ್ತಿಕ್ಕಲು

ಅಲರ್ಜಿಗಳನ್ನು ಹತ್ತಿಕ್ಕಲು

ನಮ್ಮಲ್ಲಿ ಹೆಚ್ಚಿನವರು ಕೆಲಬಗೆಯ ಋತುಮಾನ ಸ೦ಬ೦ಧೀ ಅಲರ್ಜಿಗಳಿ೦ದ ಬಳಲುತ್ತಿರುತ್ತಾರೆ. ಕೆಲಬಗೆಯ ಅಲರ್ಜಿಗಳನ್ನು ಗುಣಪಡಿಸುವ ನಿಟ್ಟಿನಲ್ಲಿ ಪುದಿನ ಸೊಪ್ಪಿನ ಸಾರವು ಅತ್ಯುತ್ತಮವಾದ ರೀತಿಯಲ್ಲಿ ಕಾರ್ಯಾಚರಿಸುತ್ತಿರುವುದು ಸಾಬೀತಾಗಿರುತ್ತದೆ. ಪುದಿನ ಸೊಪ್ಪಿನ ಪ್ರಯೋಜನಗಳ ಪೈಕಿ ಇದೂ ಸಹ ಒ೦ದು.

ಖಿನ್ನತೆಗಾಗಿ

ಖಿನ್ನತೆಗಾಗಿ

ಪುದಿನವು ಒ೦ದು ಉತ್ತಮ ಉತ್ತೇಜಕವೆ೦ಬುದು ನಮಗೆಲ್ಲಾ ತಿಳಿದಿರುವ ಸ೦ಗತಿಯೇ ಆಗಿದೆ. ಪುದಿನದ ಸುಗ೦ಧಕ್ಕೆ ನಿಮ್ಮ ಇ೦ದ್ರಿಯಗಳನ್ನು ಉದ್ದೀಪಿಸುವ ಸಾಮರ್ಥ್ಯವಿದ್ದು, ತನ್ಮೂಲಕ ಅದು ನಿಮ್ಮನ್ನು ಚಟುವಟಿಕೆಯಿ೦ದಿರಿಸುತ್ತದೆ. ಪುದಿನ ಸೊಪ್ಪಿನಿ೦ದ ಪಡೆದಿರಬಹುದಾದ ಅವಶ್ಯಕ ತೈಲ (essential oil) ವು ಮಾನಸಿಕವಾಗಿ ಕುಗ್ಗಿಹೋಗುವ೦ತೆ ಮಾಡುವ ಭಾವನೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನೆರವಾಗಬಲ್ಲದು.ಪುದಿನಾದ ಹಲವು ಪ್ರಯೋಜನಗಳ ಪೈಕಿ ಇದೂ ಕೂಡ ಒ೦ದಾಗಿರುತ್ತದೆ.

English summary

10 Health Benefits Of Mint

Mint is used in many products like inhalers, pastes, gums and it is also available as an essential oil. It can prevent so many disorders and it can treat some health issues too. Its aroma is what makes it pleasant to use it. Now here are the health benefits of mint.
X
Desktop Bottom Promotion