For Quick Alerts
ALLOW NOTIFICATIONS  
For Daily Alerts

ಬಹುಪಯೋಗಿ ಔಷಧಗಳ ಸಂಜೀವಿನಿ 'ಗಿಡಮೂಲಿಕೆಗಳ' ವೈಶಿಷ್ಟ್ಯವೇನು?

By Super
|

ಆರೋಗ್ಯದಲ್ಲಿ ಏರುಪೇರಾದರೆ ವೈದ್ಯರು ನಮ್ಮ ಶರೀರವನ್ನು ತಪಾಸಿಸಿ ಅಗತ್ಯವಾದ ಔಷಧಿಗಳನ್ನು ನೀಡುತ್ತಾರೆ. ಸಾಧಾರಣವಾಗಿ ಈ ಕಾಯಿಲೆಗೆ ಕಾರಣವಾಗಲು ಕೆಲವು ಪೋಷಕಾಂಶಗಳ ಕೊರತೆಯಾಗಿದ್ದು ಸೂಕ್ತ ಔಷಧಿಗಳ ಮೂಲಕ ಈ ಕೊರತೆಯನ್ನು ನೀಗಿಸುವುದು ಚಿಕಿತ್ಸೆಯ ವಿಧಾನವಾಗಿದೆ.

ಒಂದು ವೇಳೆ ಈ ಅಗತ್ಯ ಪೋಷಕಾಂಶಗಳೆಲ್ಲಾ ನಮ್ಮ ದೇಹದಲ್ಲಿ ಲಭ್ಯವಾಗುವಂತಿದ್ದರೆ? ಆಗ ದೇಹ ಸುಸ್ಥಿತಿಯಲ್ಲಿದ್ದು ಕಾಯಿಲೆ ಬೀಳುವ ಪ್ರಮೇಯವೇ ಕಡಿಮೆಯಾಗುತ್ತದೆ. ಇದೇ ಕಾರಣಕ್ಕಾಗಿ 'ಊಟ ಬಲ್ಲವನಿಗೆ ರೋಗವಿಲ್ಲ' ಎಂಬ ಗಾದೆಯನ್ನು ನಮ್ಮ ಹಿರಿಯರು ಬರೆದಿಟ್ಟಿದ್ದಾರೆ. ಅಡುಗೆ ಮನೆಯಲ್ಲಿರುವ ಬೆಸ್ಟ್ ಔಷಧಿ ಯಾವುದು?

ನಾವು ಆಹಾರದ ರುಚಿ ಹೆಚ್ಚಿಸಲು ಬಳಸುವ ಸಾಂಬಾರ ಪದಾರ್ಥಗಳು, ಸೊಪ್ಪು, ಬೀಜಗಳೇ ನಮ್ಮ ಆರೋಗ್ಯವೃದ್ಧಿಗೂ ಕಾರಣವಾಗಬಲ್ಲವು. ಇವುಗಳಲ್ಲಿರುವ ದೇಹಕ್ಕೆ ಅಗತ್ಯವಾದ ಆಂಟಿ ಆಕ್ಸಿಡೆಂಟುಗಳು ಆರೋಗ್ಯವನ್ನು ಉತ್ತಮಗೊಳಿಸುತ್ತವೆ. ಜೊತೆಗೇ ಇವುಗಳ ನಂಜುನಿರೋಧಕ (antiseptic), ಜೀವಿರೋಧಿ (antibacterial) ಗುಣಗಳು ದೇಹಕ್ಕೆ ಧಾಳಿಯಿಡುವ ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳ ವಿರುದ್ಧ ಸೆಣೆಸಲು ನೆರವಾಗುತ್ತವೆ. ಈ ಆಹಾರವಸ್ತುಗಳನ್ನು ನಿಮ್ಮ ದೈನಂದಿನ ಆಹಾರದ ಮೂಲಕ ಸೇವಿಸುವುದರಿಂದ ನಿಮ್ಮ ಆರೋಗ್ಯ ಉತ್ತಮಗೊಳ್ಳುತ್ತದೆ. ಇಂತಹ ಹತ್ತು ಪ್ರಮುಖ ಆಹಾರಸಾಮಾಗ್ರಿಗಳನ್ನು ಇಲ್ಲಿ ವಿವರಿಸಲಾಗಿದೆ.

ಪಾರ್ಸ್ಲೆ ಎಲೆಗಳು

ಪಾರ್ಸ್ಲೆ ಎಲೆಗಳು

ನೋಡಲು ಸರಿಸುಮಾರು ಕೊತ್ತಂಬರಿ ಸೊಪ್ಪನ್ನು ಹೋಲುವ ಪಾರ್ಸ್ಲೆ ಎಲೆಗಳು ರುಚಿಯಲ್ಲಿ ಮಾತ್ರ ಭಿನ್ನವಾಗಿದೆ. ಇದರಲ್ಲಿ ಹಲವಾರು ಆಂಟಿ ಆಕ್ಸೆಡೆಂಟುಗಳಿದ್ದು ಮೂತ್ರಕೋಶದ ಊತವನ್ನು ಶೀಘ್ರವಾಗಿ ನಿವಾರಿಸಲು ನೆರವಾಗುತ್ತದೆ. ಜೊತೆಗೆ ಮೂತ್ರವನ್ನು ಹೆಚ್ಚಿಸುವ ಗುಣಗಳಿದ್ದು (diuretic effect) ಉರಿಮೂತ್ರವನ್ನು ಕಡಿಮೆಗೊಳಿಸುತ್ತದೆ. ಅಲ್ಲದೇ ಇದರಲ್ಲಿ ಉತ್ತಮ ಪ್ರಮಾಣದಲ್ಲಿ ಕರಗದ ನಾರು ಇದ್ದು ಮಲಬದ್ಧತೆಯನ್ನು ತಡೆಯುತ್ತದೆ.

ಕಾಡು ಮಾರ್ಜರಂ ಸೊಪ್ಪು ಅಥವಾ ಒರೆಗಾನೋ (Oregano)

ಕಾಡು ಮಾರ್ಜರಂ ಸೊಪ್ಪು ಅಥವಾ ಒರೆಗಾನೋ (Oregano)

ಒರೆಗಾನೋ ಹಸಿಸೊಪ್ಪು, ಒಣಎಲೆಗಳು, ಎಣ್ಣೆ ಅಥವಾ ಒಣ ಬೀಜಗಳ ರೂಪದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರಲ್ಲಿರುವ ಬೂಸುನಿವಾರಕ (antifungal) ಮತ್ತು ಜೀವಿರೋಧಿ (antibacterial) ಗುಣಗಳು ವಿಶೇಷವಾಗಿ ಮಹಿಳೆಯರ ತಿಂಗಳ ದಿನಗಳ ಅವಧಿಯಲ್ಲಿ ಹೊಟ್ಟೆನೋವು ಮತ್ತು ಸ್ರಾವವನ್ನು ಕಡಿಮೆಗೊಳಿಸಲು ನೆರವಾಗುತ್ತವೆ. ಇದರಲ್ಲಿ ಮೂತ್ರವನ್ನು ಹೆಚ್ಚಿಸುವ ಗುಣಗಳಿದ್ದು (diuretic effect) ಉರಿಮೂತ್ರವನ್ನೂ ಕಡಿಮೆಗೊಳಿಸುತ್ತದೆ. ಶೀತ, ನೆಗಡಿ, ತಲೆನೋವು ಮತ್ತು ಶ್ವಾಸಸಂಬಂಧಿ ರೋಗಗಳಿಂದಲೂ ರಕ್ಷಣೆ ನೀಡುತ್ತದೆ. ಒರೆಗಾನೋ ಒಣಎಲೆಗಳ ಪುಡಿಯನ್ನು ನಿಮ್ಮ ನೆಚ್ಚಿನ ಪಾಸ್ತಾ, ಸಾಲಾಡ್, ಮೀನು, ಮಾಂಸ, ಮೊಟ್ಟೆ,ಚೀಸ್ ಮೊದಲಾದ ಆಹಾರಗಳ ಜೊತೆ ಸೇರಿಸಿ ಸೇವಿಸುವುದರಿಂದ ಆರೋಗ್ಯ ಉತ್ತಮಗೊಳ್ಳುತ್ತದೆ. ಇದನ್ನು ಅಡುಗೆಯ ಕಟ್ಟಕಡೆಯ ಭಾಗದಲ್ಲಿ ಉಪಯೋಗಿಸುವುದರ ಮೂಲಕ ಇದರ ಔಷಧೀಯ ಗುಣಗಳು ನಷ್ಟವಾಗುವುದಿಲ್ಲ. ಒರೆಗಾನೋದಲ್ಲಿರುವ ಸೂಕ್ಷ್ಮಜೀವಿ ಪ್ರತಿರೋಧಕ (anti-microbial) ಮತ್ತು ಬೂಸುನಿವಾರಕ (antifungal)ಗುಣಗಳು ದೇಹದಲ್ಲಿರುವ ವಿಷಕಾರಕ ವಸ್ತುಗಳನ್ನು ಹೊರಹಾಕಲು ನೆರವಾಗುತ್ತವೆ. ಇದರಲ್ಲಿ ಪ್ರಮುಖವಾಗಿ ಸೀಸ ಮತ್ತು ಪಾದರಸ ಸೇರಿವೆ. ಇದರ ಇನ್ನಿತರ ಗುಣಗಳೆಂದರೆ ಮಧುಮೇಹಿಗಳಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸಲು, ಕೆಟ್ಟ ಕೊಲೆಸ್ಟ್ರಾಲ್ ತೊಲಗಿಸಲು ಮತ್ತು ತಲೆಶೂಲೆಯಿಂದ ಹೊರಬರಲು ನೆರವು ನೀಡುತ್ತದೆ.

ಕೊತ್ತಂಬರಿ ಬೀಜ

ಕೊತ್ತಂಬರಿ ಬೀಜ

ನಿದ್ದೆ ಬರದಿರುವಿಕೆಗೆ ಕೊತ್ತಂಬರಿ ಬೀಜಗಳು ಅತ್ಯುತ್ತಮವಾಗಿವೆ. ಜೊತೆಗೆ ಮನೋವೇದನೆ ಮತ್ತು ಮಾನಸಿಕ ಒತ್ತಡಗಳನ್ನು ಕಳೆಯಲೂ ನೆರವು ನೀಡುತ್ತದೆ. ನೆನಪಿನ ಶಕ್ತಿ ಹೆಚ್ಚಿಸಲು, ಮೂತ್ರದ ಪ್ರಮಾಣವನ್ನು ಹೆಚ್ಚಿಸಲು ಮತ್ತು ಅಲರ್ಜಿಯಿಂದ ಉಂಟಾಗುವ ಜ್ವರ (hay fever) ದಿಂದ ಮುಕ್ತಿಪಡೆಯಲೂ ಕೊತ್ತಂಬರಿ ಬೀಜ ನೆರವಾಗುತ್ತದೆ.

ದೊಡ್ಡಪತ್ರೆ ಸೊಪ್ಪು (Thyme)

ದೊಡ್ಡಪತ್ರೆ ಸೊಪ್ಪು (Thyme)

ನೀರುತುಂಬಿಕೊಂಡಂತಿರುವ ದೊಡ್ಡಪತ್ರೆ ಸೊಪ್ಪು ಶ್ವಾಸಸಂಬಂಧಿ ರೋಗಗಳಿಗೆ ಅತ್ಯುತ್ತಮವಾಗಿದೆ. ಇದರ ಸೇವನೆಯಿಂದ ಗಂಟಲಲ್ಲಿ ಕಟ್ಟಿಕೊಂಡಿದ್ದ ಕಫ ಕರಗಿ ಉಸಿರಾಟ ಸುಲಭವಾಗುತ್ತದೆ. ಇದೇ ಕಾರಣದಿಂದ ಅಸ್ತಮಾ, ಬ್ರಾಂಖೈಟಿಸ್, ಶೀತ ನೆಗಡಿ, ಪ್ಲೂ ಜ್ವರ ಮತ್ತು ಸೈನಸ್ ಸೋಂಕಿನಿಂದ ಬಳಲುವರರಿಗೆ ಉತ್ತಮವಾಗಿದೆ. ಜೊತೆಗೆ ಇದರಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು ಮತ್ತು ಸಾಮಾನ್ಯವಾದ ಟಾನಿಕ್ ಗುಣಗಳು ಜೀರ್ಣಕ್ರಿಯೆಯನ್ನು ಸುಲಭಗೊಳಿಸಿ ಆಹಾರ ಸುಲಭವಾಗಿ ಪಚನಗೊಳ್ಳಲು ಸಹಕಾರ ನೀಡುತ್ತದೆ. ಒಸಡುಗಳಲ್ಲಿ ರಕ್ತ ಒಸರುವುದು ಮತ್ತು ಗಂಟಲಲ್ಲಿ ಕೆರೆತದ ತೊಂದರೆಯಿದ್ದರೆ ಈ ಎಲೆಗಳನ್ನು ಕುದಿಸಿ ತಯಾರಿಸಿದ ಟೀ ಕುಡಿಯುವ ಮೂಲಕ ಉತ್ತಮ ಪರಿಣಾಮ ಪಡೆಯಬಹುದು.

ಬಜೆಗಿಡ (Tarragon)

ಬಜೆಗಿಡ (Tarragon)

ನೋಡಲು ಶುಂಠಿಎಲೆಗಳಂತಿರುವ ಬಜೆಗಿಡದ ಎಲೆಗಳು ಹಲ್ಲುನೋವು ಮತ್ತು ಒಸಡುಗಳಲ್ಲಿ ಬಾವು ಕಡಿಮೆಗೊಳಿಸಲು ರಾಮಬಾಣವಾಗಿದೆ. ಜೊತೆಗೆ ಒತ್ತಡದ ಕಾರಣ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡರೆ ಅತ್ತು ಅಜೀರ್ಣತೆ ಉಂಟಾದರೆ ಬಜೆಗಿಡದ ಎಲೆಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವ ಮೂಲಕ ಪರಿಹಾರ ಪಡೆಯಬಹುದು. ಇದರಲ್ಲಿರುವ ಬೂಸುನಿವಾರಕ (antifungal) ಮತ್ತು ಜೀವಿರೋಧಿ (antibacterial) ಗುಣಗಳು ಮತ್ತು ಆಂಟಿ ಆಕ್ಸಿಡೆಂಟುಗಳು ಆರೋಗ್ಯವನ್ನು ವೃದ್ಧಿಸುತ್ತವೆ.

ಸಬ್ಬಸಿಗೆ ಸೊಪ್ಪು (Dill leaves)

ಸಬ್ಬಸಿಗೆ ಸೊಪ್ಪು (Dill leaves)

ನೋಡಲು ಸೂಜಿಸೂಜಿಯಾಗಿರುವ ಈ ಸೊಪ್ಪು ಉರಿಮೂತ್ರ ಮತ್ತು ಮೂತ್ರಕೋಶದ ಸೋಂಕು ನಿವಾರಿಸಲು ಅತ್ಯುತ್ತಮವಾಗಿದೆ. ಇದರ ಉರಿಯೂತನಿವಾರಕ (anti-inflammatory) ಗುಣಗಳು ವಿಶೇಷವಾಗಿ ಜೀರ್ಣಾಂಗಳ ಮೇಲೆ ಪರಿಣಾಮ ಬೀರಿ ಹೊಟ್ಟೆ, ಸಣ್ಣಕರುಳು ಮತ್ತು ದೊಡ್ಡಕರುಳುಗಳ ತೊಂದರೆಯನ್ನು ನಿವಾರಿಸುತ್ತದೆ. ಅಲ್ಲದೇ ರಕ್ತದಲ್ಲಿರುವ ಸಕ್ಕರೆಯ ಅಂಶ ಮತ್ತು ಕೊಲೆಸ್ಟ್ರಾಲ್ ಗಳನ್ನು ನಿಯಂತ್ರಣದಲ್ಲಿರಿಸಲೂ ಸಹಾಯ ಮಾಡುತ್ತದೆ. ಇದು ಸೊಪ್ಪಿನ ಮತ್ತು ಬೀಜದ ರೂಪದಲ್ಲಿ ದೊರಕುತ್ತದೆ. ಸೊಪ್ಪನ್ನು ಅತಿಹೆಚ್ಚು ಬೇಯಿಸದೇ ಅರ್ಧ ಹಸಿಯಿರುವಾಗಲೇ ಸೇವಿಸುವುದು ಉತ್ತಮ.

ಗಸಗಸೆ (Rosemary)

ಗಸಗಸೆ (Rosemary)

ಗಸಗಸೆ ಎಲೆಗಳ ಮತ್ತು ಬೀಜದ ರೂಪದಲ್ಲಿ ಲಭ್ಯವಿದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮತ್ತು ನಂಜುನಿರೋಧಕ (antiseptic) ಉರಿಯೂತನಿವಾರಕ (anti-inflammatory) ಗುಣಗಳು ವಿವಿಧ ಊತಗಳನ್ನು ನಿವಾರಿಸಲು ನೆರವಾಗುತ್ತದೆ. ಜೊತೆಗೆ ಅಸ್ತಮಾ, ಯಕೃತ್ ಮತ್ತು ಹೃದಯದ ತೊಂದರೆಗಳನ್ನು ನಿವಾರಿಸಲೂ ಸಹಕರಿಸುತ್ತದೆ. ಒಂದು ವೇಳೆ ಒಸಡುಗಳಿಂದ ರಕ್ತ ಬರುತ್ತಿದ್ದರೆ ಅಥವಾ ಗಂಟಲಲ್ಲಿ ಕೆರೆತ ಇದ್ದರೆ ಗಸಗಸೆ ಎಲೆಗಳನ್ನು ಅರೆದ ನೀರಿನಿಂದ ಮುಕ್ಕಳಿಸಿ ಉಗಿಯುವುದರಿಂದ ಉತ್ತಮ ಫಲ ಕಂಡುಬರುತ್ತದೆ.

ತುಳಸಿ ಎಲೆಗಳು (Basil)

ತುಳಸಿ ಎಲೆಗಳು (Basil)

ತಲೆನೋವು ಮತ್ತು ನಿದ್ದೆಯಿಲ್ಲದಿರುವಿಕೆಗೆ ತುಳಸಿ ಎಲೆಗಳು ಉತ್ತಮ ಪರಿಹಾರವಾಗಿದೆ. ತುಳಸಿ ಬೀಜದ ಎಣ್ಣೆಯಲ್ಲಿ ಉರಿಯೂತ ನಿವಾರಕ (anti-inflammatory) ಗುಣಗಳು ವಿಶೇಷವಾಗಿ ಜೀರ್ಣಾಂಗ ವ್ಯವಸ್ಥೆ ಮತ್ತು ಮೂಳೆಗಂಟುಗಳ ನಡುವಣ ಸೋಂಕುಗಳನ್ನು ನಿವಾರಿಸಲು ನೆರವಾಗುತ್ತದೆ. ಇದರಲ್ಲಿರುವ ಅಂಟಿ ಆಕ್ಸೆಡೆಂಟುಗಳು ಮತ್ತು ಮೂತ್ರ ಹೆಚ್ಚಿಸುವ ಗುಣಗಳು ಮೂತ್ರಕೋಶದ ಸೋಂಕು ನಿವಾರಿಸಲು ನೆರವಾಗುತ್ತದೆ.

ಪುದಿನಾ ಎಲೆಗಳು (Mint)

ಪುದಿನಾ ಎಲೆಗಳು (Mint)

ಪುದಿನಾ ಎಲೆಗಳಲ್ಲಿ ನಂಜುನಿರೋಧಕ (antiseptic) ಮತ್ತು ಜೀವಿರೋಧಿ (antibacterial) ಗುಣಗಳಿದ್ದು ಅಜೀರ್ಣ, ಹೊಟ್ಟೆಯಲ್ಲಿ ಉಬ್ಬರ ಮತ್ತು ಉರಿ ಶಮನವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಜನಪ್ರಿಯ ಮಾತ್ರೆ ಪುದಿನ್ ಹರಾ ಇದೇ ಎಲೆಗಳಿಂದ ತಯಾರಿಸಲಾಗುತ್ತದೆ.

ದೊಡ್ಡ ಪತ್ರಿ (Sage leaves)

ದೊಡ್ಡ ಪತ್ರಿ (Sage leaves)

ವಿಶೇಷವಾಗಿ ಮಹಿಳೆಯರ ಮಾಸಿಕ ದಿನಗಳ ನೋವನ್ನು ಕಡಿಮೆಗೊಳಿಸಲು ದೊಡ್ಡಪತ್ರಿ ಎಲೆಗಳು ಉಪಯುಕ್ತವಾಗಿವೆ. ಜೊತೆಗೇ ಅನಿಯಮಿತ ಮತ್ತು ಹೆಚ್ಚಿನ ಸ್ರಾವದ ದಿನಗಳನ್ನು ಹತೋಟಿಗೆ ತರಲು ನೆರವಾಗುತ್ತದೆ. ಋತುಬಂಧದ ಸಮಯದಲ್ಲಿ ಎದುರಾಗುವ ತೊಂದರೆಗಳನ್ನು ನಿವಾರಿಸಲೂ ಈ ಎಲೆಗಳು ಉಪಯುಕ್ತವಾಗಿವೆ.

English summary

10 Best Healing Herbs You Can Eat Everyday

What herbs are good for health? Today Boldsky will share with you some culinary herbs that are good for you and how to use them in your daily diet. Have a look at some healthy herbs.
X
Desktop Bottom Promotion