For Quick Alerts
ALLOW NOTIFICATIONS  
For Daily Alerts

ಬೇಯಿಸಿದ ತರಕಾರಿಗಳ ಸ್ಪೆಷಾಲಿಟಿ ಒಂದೇ ಎರಡೇ

By Super
|

ಮನುಷ್ಯರು ಮಿಶ್ರಾಹಾರಿಗಳು, ಅಂದರೆ ಅತ್ತ ಅಪ್ಪಟ ಸಸ್ಯಾಹಾರಿಯೂ ಅಲ್ಲದ, ಅಪ್ಪಟ ಮಾಂಸಾಹಾರಿಯೂ ಅಲ್ಲದ ಜೀವಿಗಳು. ಅಂತೆಯೇ ನಾವು ಪಶುಗಳಂತೆ ಹುಲ್ಲು, ಎಲೆಗಳನ್ನು ಜೀರ್ಣಿಸಿಕೊಳ್ಳಲಾರೆವು ಹಾಗೂ ಮಾಂಸಾಹಾರಿಳಂತೆ ಹಸಿಮಾಂಸವನ್ನೂ ಸೇವಿಸಲಾರೆವು. ನಮ್ಮ ಶರೀರದ ಜೀರ್ಣವ್ಯವಸ್ಥೆ ಇವೆರಡರ ನಡುವೆ ಇರುವುದರಿಂದ ನಮಗೆ ಕೊಂಚ ಸುಲಭವಾಗಿ ಜೀರ್ಣವಾಗುವ ಆಹಾರಗಳ ಅಗತ್ಯವಿದೆ. ಅಂತೆಯೇ ತರಕಾರಿ, ಮಾಂಸಗಳನ್ನು ಬೇಯಿಸಿದ ಬಳಿಕವೇ ನಾವು ಜೀರ್ಣಿಸಿಕೊಳ್ಳಬಲ್ಲೆವು.

ಹಣ್ಣುಗಳು ಹಾಗೂ ಕೆಲವು ತರಕಾರಿಗಳನ್ನು ಮಾತ್ರ ನಾವು ಬೇಯಿಸದೇ ಜೀರ್ಣಿಸಿಕೊಳ್ಳಬಲ್ಲೆವು (ಉದಾಹರಣೆಗೆ ಸೌತೆಕಾಯಿ) ಆದರೆ ಇತರ ತರಕಾರಿಗಳನ್ನು ಬೇಯಿಸದೇ ತಿಂದರೆ ಅದರಲ್ಲಿರುವ ನಾರು ಮತ್ತು ಮುಖ್ಯವಾಗಿ ಸಸ್ಯದ ಜೀವಕಣ(cellulose) ನಾವು ಜೀರ್ಣಿಸಿಕೊಳ್ಳಲು ಸಾಧ್ಯವಾಗದೇ ಅಗತ್ಯವಾದ ಪೋಷಕಾಂಶಗಳು ಸಿಗದೇ ಹೋಗಬಹುದು. ಆದ ಕಾರಣ ತರಕಾರಿ, ಸೊಪ್ಪು, ಎಲೆಗಳನ್ನು ಬೇಯಿಸಿ ಸೇವಿಸುವುದರಿಂದ ಅವಶ್ಯವಾದ ಪೋಷಕಾಂಶಗಳು, ಕರಗದ ನಾರು (ಬೇಯಿಸುವುದರಿಂದ ನಾರು ಕರಗುವುದಿಲ್ಲ), ವಿಟಮಿನ್ ಗಳು ಲಭ್ಯವಾಗುತ್ತವೆ. ಆದ್ದರಿಂದ ಹಸಿಯಾಗಿ ತಿನ್ನಬಹುದಾದುದನ್ನು ಬಿಟ್ಟು ಬೇರೆಲ್ಲಾ ತರಕಾರಿಗಳನ್ನು ಬೇಯಿಸಿ ಸೇವಿಸುವುದು ಅಗತ್ಯವಾಗಿದೆ. ಇದರಿಂದ ದೇಹದ ರೋಗ ನಿರೋಧಕ ಶಕ್ತಿಗೆ ಬೆಂಬಲ ದೊರೆತು ದೇಹ ಕ್ಯಾನ್ಸರ್, ಮಧುಮೇಹ, ಹೃದಯರೋಗ ಮೊದಲಾದ ತೊಂದರೆಗಳನ್ನು ಸಮರ್ಥವಾಗಿ ಎದುರಿಸಲು ಸಮರ್ಥವಾಗುತ್ತದೆ. ರೋಗ ರುಜಿನಗಳ ಹೆಡೆಮುರಿ ಕಟ್ಟಿಹಾಕುವ ಅಜ್ಜಿ ಮಾಡಿದ ಮನೆಮದ್ದು!

ಬೇಯಿಸುವುದರಲ್ಲಿ ಎರಡು ವಿಧವಿದೆ. ಮೊದಲನೆಯದು ನೀರಿನೊಂದಿಗೆ ಕುದಿಸಿ ಬಳಿಕ ಸೋಸಿ ನೀರನ್ನು ಚೆಲ್ಲಿಬಿಡುವುದು, ಎರಡನೆಯದು ಈ ನೀರನ್ನು ಚೆಲ್ಲದೇ ಇದೇ ನೀರಿಗೆ ಬೇರೆ ಸಾಮಾಗ್ರಿಗಳನ್ನು ಸೇರಿಸಿ ಅಡುಗೆ ತಯಾರಿಸುವುದು. ಇದರಲ್ಲಿ ನೀರನ್ನು ಸೋಸುವುದರಿಂದ ತರಕಾರಿಯ ಪೋಷಕಾಂಶಗಳೂ ಆ ನೀರಿನೊಡನೆ ಸೋರಿ ಹೋಗುತ್ತದೆ. ಆದ್ದರಿಂದ ಎರಡನೆಯ ವಿಧಾನವೇ ಹೆಚ್ಚು ಪ್ರಯೋಜನಕಾರಿಯಾಗಿದೆ. ಅದರಲ್ಲೂ ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿದ ತರಕಾರಿಗಳು ಅತ್ಯಂತ ಹೆಚ್ಚಿನ ಪೋಷಕಾಂಶಗಳನ್ನು ಉಳಿಸಿಕೊಳ್ಳುತ್ತವೆ. ಅದಲ್ಲೂ ಕೆಲವು ತರಕಾರಿಗಳಲ್ಲಿ (ವಿಶೇಷವಾಗಿ ಗಡ್ಡೆಗಳಲ್ಲಿ) ಕೆಲವೊಂದು ಬ್ಯಾಕ್ಟೀರಿಯಾ ಮತ್ತು ವಿಷಕಾರಿ ವಸ್ತುಗಳಿದ್ದು ಬೇಯಿಸುವ ಮೂಲಕ ಮಾತ್ರ ನಿವಾರಣೆಯಾಗುತ್ತವೆ.

ಉದಾಹರಣೆಗೆ ಆಲುಗಡ್ಡೆಯಲ್ಲಿ solanine ಎಂಬ ರಾಸಾಯನಿಕ ಹಾಗೂ Listeria ಎಂಬ ಬ್ಯಾಕ್ಟೀರಿಯಾಗಳಿವೆ. ಇವು ಆಲುಗಡ್ಡೆಯನ್ನು ಹುಳಗಳು ಧಾಳಿ ಮಾಡದಂತೆ ರಕ್ಷಿಸುತ್ತದೆ. ಆಲುಗಡ್ಡೆಯನ್ನು ಬೇಯಿಸದೇ ತಿಂದರೆ ಈ ರಾಸಾಯನಿಕ ನಮಗೆ ವಿಷವಾಗಿ ಪರಿಣಮಿಸಬಲ್ಲದು. ಬದಲಿಗೆ ಆಲುಗಡ್ಡೆಯನ್ನು ಬೇಯಿಸಿದ ಬಳಿಕ ಈ ರಾಸಾಯನಿಕ ತನ್ನ ಶಕ್ತಿಯನ್ನು ಕಳೆದುಕೊಂಡು ನಿಷ್ಪ್ರಯೋಜಕವಾಗುತ್ತದೆ. ಆಲುಗಡ್ಡೆಯೊಳಗಿನ ಜೀವಕೋಶಗಳ ನಡುವಣ ಬಂಧನ ಕಳಚಿ ಬಿಡಿಬಿಡಿಯಾಗುತ್ತವೆ. (ಆದ್ದರಿಂದಲೇ ಬೇಯಿಸಿದ ಆಲುಗಡ್ಡೆ ಪುಡಿಪುಡಿಯಾಗಿರುತ್ತದೆ) ಈಗ ನಮ್ಮ ಜೀರ್ಣಾಂಗಳು ಈ ಪುಡಿಯನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಲ್ಲವು.
ಇದೇ ರೀತಿ ಉಳಿದ ತರಕಾರಿ, ಮಾಂಸಗಳನ್ನು ಬೇಯಿಸಿ ತಿನ್ನುವ ಪ್ರಯೋಜನಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ದೇಹಕ್ಕೆ ತಂಪುಣಿಸುವ ಸೌತೆಕಾಯಿ ಜ್ಯೂಸ್‌ನ ಕರಾಮತ್ತೇನು?

ನಮ್ಮ ಆರೋಗ್ಯಕ್ಕೆ ಸುರಕ್ಷಿತವಾಗಿದೆ.

ನಮ್ಮ ಆರೋಗ್ಯಕ್ಕೆ ಸುರಕ್ಷಿತವಾಗಿದೆ.

ಬೇಯಿಸುವ ಮೂಲಕ ದೇಹಕ್ಕೆ ಹಾನಿಕಾರಕವಾದ ಎಲ್ಲಾ ಬ್ಯಾಕ್ಟೀರಿಯಾಗಳು ಸತ್ತು ಹೋಗುವುದರಿಂದ ಬೇಯಿಸಿದ ತರಕಾರಿಗಳು ಆರೋಗ್ಯಕ್ಕೆ ಸುರಕ್ಷಿತವಾಗಿವೆ.

ಪೋಷಕಾಂಶಗಳನ್ನು ಉಳಿಸಿಕೊಳ್ಳಲಾಗುತ್ತದೆ.

ಪೋಷಕಾಂಶಗಳನ್ನು ಉಳಿಸಿಕೊಳ್ಳಲಾಗುತ್ತದೆ.

ಬೇಯಿಸಿ ಸೋಸಿದ ಹೊರತು ಇತರ ವಿಧಾನಗಳಲ್ಲಿ ಬೇಯಿಸಿದ ತರಕಾರಿಗಳಲ್ಲಿ ಹೆಚ್ಚಿನ ಪೋಷಕಾಂಶಗಳು ಆಹಾರದಲ್ಲಿ ಉಳಿದು ಶರೀರಕ್ಕೆ ಲಭ್ಯವಾಗುತ್ತದೆ. ಅದರಲ್ಲೂ ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿದ ತರಕಾರಿಗಳು ಅತ್ಯುತ್ತಮವಾಗಿವೆ. ಕ್ಯಾರೆಟ್, ಚೀನಿಕಾಯಿ, ಹೂಕೋಸು, ಬ್ರೋಕೋಲಿ ಮೊದಲಾದ ತರಕಾರಿಗಳನ್ನು ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿದ ಬಳಿಕ ಸೇವಿಸಿದಾದ ಆ ತರಕಾರಿಯ ಅತ್ಯುತ್ತಮ ಪೋಷಕಾಂಶಗಳು ಲಭಿಸಿರುವುದು ಸಂಶೋಧನೆಗಳಿಂದ ದೃಢಪಟ್ಟಿದೆ.

ಕಾಯಿಲೆಗಳಿಗೆ ತುತ್ತಾಗುವ ಸಂಭವ ಅತಿ ಕಡಿಮೆಯಾಗುತ್ತದೆ.

ಕಾಯಿಲೆಗಳಿಗೆ ತುತ್ತಾಗುವ ಸಂಭವ ಅತಿ ಕಡಿಮೆಯಾಗುತ್ತದೆ.

ಬೇಯಿಸುವ ಮೂಲಕ ಎಲ್ಲಾ ಸೂಕ್ಷ್ಮ ಕ್ರಿಮಿ ಹಾಗೂ ಹಾನಿಕಾರಕ ರಾಸಾಯನಿಕಗಳು ನಿಪ್ಷ್ಪ್ರಯೋಜಕವಾಗುವುದರಿಂದ ಆ ಮೂಲಕ ಬರಬಹುದಾಗಿದ್ದ ಎಲ್ಲಾ ತೊಂದರೆಗಳಿಂದ ರಕ್ಷಣೆ ಪಡೆದಂತಾಗುತ್ತದೆ. ಹೃದಯ ರೋಗ, ಕ್ಯಾನ್ಸರ್, ಸ್ಥೂಲಕಾಯ ಮೊದಲಾದ ರೋಗಗಳಿಗೆ ತುತ್ತಾಗುವ ಸಂಭವನ್ನೂ ಕಡಿಮೆಗೊಳಿಸುತ್ತದೆ. ಪರಿಣಾಮವಾಗಿ ಆರೋಗ್ಯ ವೃದ್ಧಿಗೊಳ್ಳುತ್ತದೆ.

ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟುಗಳು ಲಭ್ಯವಾಗುತ್ತವೆ.

ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟುಗಳು ಲಭ್ಯವಾಗುತ್ತವೆ.

ನಮ್ಮ ದೇಹದಲ್ಲಿ ಕ್ಯಾನ್ಸರ್ ಗೆ ಕಾರಣವಾಗುವ ಫ್ರೀ ರ್‍ಯಾಡಿಕಲ್ (free radicals) ಗಳನ್ನು ನಿಷ್ಕ್ರಿಯಗೊಳಿಸಲು ಆಂಟಿ ಆಕ್ಸಿಡೆಂಟುಗಳು ನೆರವಿಗೆ ಬರುತ್ತವೆ. ವಿವಿಧ ತರಕಾರಿಗಳಲ್ಲಿರುವ ಆಂಟಿ ಆಕ್ಸಿಡೆಂಟುಗಳು ಬೇಯಿಸಿದ ಬಳಿಕವೂ ನಾಶವಾಗದೇ ದೇಹಕ್ಕೆ ಲಭ್ಯವಾಗುವ ಮೂಲಕ ಹಲವು ಕಾಯಿಲೆಗಳಿಂದ ದೇಹವನ್ನು ರಕ್ಷಿಸಿಕೊಳ್ಳಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಬೆಂಬಲ ನೀಡುತ್ತವೆ.

ಹಸಿರು ತರಕಾರಿಗಳ ಪೋಷಕಾಂಶಗಳ ಸಿಂಹಪಾಲು ಬೇಯಿಸಿದ ಬಳಿಕವೇ ಸಿಗುತ್ತದೆ.

ಹಸಿರು ತರಕಾರಿಗಳ ಪೋಷಕಾಂಶಗಳ ಸಿಂಹಪಾಲು ಬೇಯಿಸಿದ ಬಳಿಕವೇ ಸಿಗುತ್ತದೆ.

ಹಸಿರು ತರಕಾರಿಗಳು ಪೋಷಕಾಂಶಗಳ ಆಗರವಾಗಿದೆ. ಆದರೆ ಬೇಯಿಸದೇ ತಿನ್ನುವುದರಿಂದ ದೇಹ ಅವುಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದೇ ಇರುವುದರಿಂದ ಬೇಯಿಸುವ ಮೂಲಕ ಅತ್ಯಂತ ಹೆಚ್ಚಿನ ಪ್ರಮಾಣವನ್ನು ಪಡೆಯಬಹುದು. ಅದರಲ್ಲೂ ವಿಶೇಷವಾಗಿ ಹಸಿರು ಎಲೆಗಳಾದ ಪಾಲಕ್, ಬಸಲೆ, ಮೆಂತೆಸೊಪ್ಪು ಮೊದಲಾದವುಗಳನ್ನು ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸುವ ಮೂಲಕ ದೇಹಕ್ಕೆ ಎಲ್ಲಾ ಪೋಷಕಾಂಶಗಳು ಸಿದ್ಧರೂಪದಲ್ಲಿ ಲಭ್ಯವಾಗುತ್ತವೆ.

ತೂಕ ಕಳೆದುಕೊಳ್ಳಲು ನೆರವಾಗುತ್ತವೆ.

ತೂಕ ಕಳೆದುಕೊಳ್ಳಲು ನೆರವಾಗುತ್ತವೆ.

ಸಾಮಾನ್ಯವಾಗಿ ಸಸ್ಯಾಹಾರಿಗಳು ಸ್ಥೂಲಕಾಯದಿಂದ ದೂರವಿರುತ್ತಾರೆ. ಏಕೆಂದರೆ ಸಸ್ಯಾಹಾರವನ್ನು ಅರಗಿಸಿಕೊಳ್ಳಲು ಜೀರ್ಣಾಂಗಗಳಿಗೆ ಹೆಚ್ಚಿನ ಪ್ರಮಾಣದ ಕೊಬ್ಬಿನ ಅಗತ್ಯವಿದೆ. ಬೇಯಿಸಿದ ತರಕಾರಿಗಳು ಕೊಬ್ಬನ್ನು ಕರಗಿಸಿ ತೂಕ ಇಳಿಸಿಕೊಳ್ಳಲು ನೆರವಾಗುತ್ತವೆ. ಜೊತೆಗೇ ಹೊಟ್ಟೆಯಲ್ಲಿ ಆಮ್ಲೀಯತೆ, ಹುಳಿತೇಗು, ಅಜೀರ್ಣತೆಯಾಗುವುದರಿಂದಲೂ ತಡೆದಂತಾಗುತ್ತದೆ.

ಸುಲಭವಾಗಿ ಅಗಿಯಲು ಸಾಧ್ಯವಾಗುತ್ತದೆ.

ಸುಲಭವಾಗಿ ಅಗಿಯಲು ಸಾಧ್ಯವಾಗುತ್ತದೆ.

ಯಾವುದೇ ತರಕಾರಿಯನ್ನಾದರೂ (ಹಸಿಯಾಗಿ ತಿನ್ನಬಹುದಾದವುಗಳನ್ನೂ ಸೇರಿಸಿ) ಹಸಿಯಾಗಿ ತಿನ್ನುವುದಕ್ಕಿಂತ ಸುಲಭವಾಗಿ ಬೇಯಿಸಿದ ಬಳಿಕ ತಿನ್ನಬಹುದು. ಅಂದರೆ ಬಾಯಿಯಲ್ಲಿನ ಲಾಲಾರಸ ಬೇಯಿಸಿದ ತರಕಾರಿಗಳಲ್ಲಿ ಸುಲಭವಾಗಿ ಮಿಳಿತಗೊಂಡು ಜೀರ್ಣಕ್ರಿಯೆಗೆ ನೆರವಾಗುತ್ತದೆ. ವಿಶೇಷವಾಗಿ ಹಲ್ಲಿಲ್ಲದ ವೃದ್ದರಿಗೆ ಅಥವಾ ರೋಗ/ಅಪಘಾತದಲ್ಲಿ ಹಲ್ಲು ಕಳೆದುಕೊಂಡವರಿಗೆ ಸುಲಭವಾಗಿ ಜಗಿಯಲು ಸಾಧ್ಯವಾಗುತ್ತದೆ.

ಬೇಯಿಸಿದ ಬಳಿಕ ಹೆಚ್ಚುವ ವೈವಿಧ್ಯತೆ

ಬೇಯಿಸಿದ ಬಳಿಕ ಹೆಚ್ಚುವ ವೈವಿಧ್ಯತೆ

ವಿವಿಧ ತರಕಾರಿ ಮತ್ತು ಇತರ ಸಾಮಾಗ್ರಿಗಳನ್ನು ಜೊತೆಗೇ ಬೇಯಿಸಿದ ಬಳಿಕ ತಯಾರಾಗುವ ರುಚಿಯಾದ ಅಡುಗೆಗಳ ವೈವಿಧ್ಯತೆ ಹೆಚ್ಚುವುದರಿಂದ ನಾಲಿಗೆಗೆ ಪ್ರತಿದಿನವೂ ಬೇರೆಬೇರೆ ರುಚಿಯನ್ನು ಸವಿಯಲು ಸಾಧ್ಯವಾಗುತ್ತದೆ. ಹಸಿತರಕಾರಿಯಲ್ಲಿ ಇದು ಸಾಧ್ಯವಿಲ್ಲ. ನಮ್ಮ ಭಾರತೀಯ ಅಡುಗೆಗಳಲ್ಲಿ ಬೇಯಿಸಿದ ತರಕಾರಿಗಳದ್ದೇ ಸಿಂಹಪಾಲು. ಬೇಯಿಸದ ಆಲುಗಡ್ಡೆಯಿರದ (ಅಥವಾ ಹಸಿ ಆಲುಗಡ್ಡೆ ಇರುವ) ಮಸಾಲೆ ದೋಸೆ ಅಥವಾ ಸಮೋಸಾ ಹೇಗಿರಬಹುದು ಎಂದು ಊಹಿಸಿಕೊಳ್ಳಬಲ್ಲಿರಾ?

ಅಡುಗೆ ಸಮಯವನ್ನು ಉಳಿಸುತ್ತದೆ.

ಅಡುಗೆ ಸಮಯವನ್ನು ಉಳಿಸುತ್ತದೆ.

ತರಕಾರಿಗಳ ಅಡುಗೆಯಲ್ಲಿ ತರಕಾರಿಗಳನ್ನು ಸ್ವಚ್ಛಗೊಳಿಸುವುದೇ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಅದು ಬಿಟ್ಟರೆ ನೀರಿನಲ್ಲಿ ಕೆಲವೇ ನಿಮಿಷಗಳಲ್ಲಿ ಬೇಯುವುದರಿಂದ (ಪ್ರೆಶರ್ ಕುಕ್ಕರ್ ಉಪಯೋಗಿಸಿದರೆ ಇನ್ನೂ ಬೇಗನೇ) ಅಡುಗೆಗಳನ್ನು ಬೇಗನೇ ಮಾಡಿ ಬಡಿಸಲು ಸಾಧ್ಯವಾಗುತ್ತದೆ. ಮೇಜಿನ ಮೇಲೆ ಕುಳಿತು ತಟ್ಟೆಗೆ ಚಮಚದಿಂದ ಬಡಿಯುತ್ತಾ ಬೇಗ ಊಟ ಬಡಿಸು ಎಂದು ಪೀಡಿಸುವ ಮಕ್ಕಳನ್ನು ಶೀಘ್ರವಾಗಿ ಸುಮ್ಮನಿರಿಸಬಹುದು.

ಆರೋಗ್ಯಕ್ಕೆ ಉತ್ತಮವಾಗಿದೆ.

ಆರೋಗ್ಯಕ್ಕೆ ಉತ್ತಮವಾಗಿದೆ.

ಯಾವುದೇ ಹಸಿ ತರಕಾರಿಯನ್ನು ಬೇಯಿಸದೇ ತಿಂದರೆ ಹಲವು ತೊಂದರೆಗಳು ಎದುರಾಗಬಹುದು. ಆದರೆ ಬೇಯಿಸಿದ ತರಕಾರಿಗಳನ್ನು ಸೇವಿಸಿದಾಗ ಯಾವುದೇ ಅಡ್ಡಪರಿಣಾಮ ಇಲ್ಲದಿರುವ ಕಾರಣ ಅಡುಗೆ ಇಷ್ಟವಾಗಿ ಇನ್ನೂ ಸ್ವಲ್ಪ ಹೆಚ್ಚಿನ ಪ್ರಮಾಣ ಬೇಕು ಎಂದೆನ್ನಿಸಿದರೆ ಧಾರಾಳವಾಗಿ ಬಡಿಸಿಕೊಳ್ಳಬಹುದು. ಬೇಯಿಸಿದ ತರಕಾರಿಗಳು ಮಕ್ಕಳು, ವೃದ್ಧರು (ವೈದ್ಯರ ಸಲಹೆ ಮೇರೆಗೆ ರೋಗಿಗಳನ್ನೂ) ಸೇರಿಸಿ ಎಲ್ಲರಿಗೂ ಸೂಕ್ತವಾಗಿದೆ.

English summary

10 Benefits of Eating Boiled Vegetables

Veggies are an all time basic participants of our foods. In fact, our imaginations of foods without vegetables can go unbearable. As this has become an integral and inseparable ingredient now. Talking about benefits of boiled vegetables & green leafy vegetables. have a look
X
Desktop Bottom Promotion