For Quick Alerts
ALLOW NOTIFICATIONS  
For Daily Alerts

ನಿದ್ರಾದೇವಿಯ ಕಬಂಧ ಬಾಹುವಿಗೆ ಸೆಳೆದೊಯ್ಯುವ ಯೋಗಾಸನಗಳು

|

ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಸಮಸ್ಯೆಗಳಿಗೆ ಒಳ್ಳೆಯ ಪರಿಹಾರವೆಂದರೆ ಅದು ಯೋಗ. ಯೋಗದಿಂದ ನಿಮ್ಮ ಒತ್ತಡದ ಮಟ್ಟ ಕಡಿಮೆಯಾಗಿ ಮನಸ್ಸಿಗೆ ಶಾಂತಿ ನೀಡುತ್ತದೆ ಮತ್ತು ದೇಹದಿಂದ ಒತ್ತಡವನ್ನು ಹೊಡೆದೋಡಿಸುತ್ತದೆ. ಯೋಗವನ್ನು ಅಭ್ಯಾಸ ಮಾಡುವುದರಿಂದ ನೀವು ರಾತ್ರಿಯಿಡಿ ಶಾಂತಿಯಿಂದ ನಿದ್ರೆ ಮಾಡಲು ಸಾಧ್ಯವಾಗುತ್ತದೆ.

ಸಂಜೆ ವೇಳೆ ಅಥವಾ ರಾತ್ರಿ ಮಲಗುವ ಮೊದಲು ಕೆಲವೊಂದು ಯೋಗಾಸನಗಳನ್ನು ಮಾಡಿದರೆ ನಿಮಗೆ ಶಾಂತಿಯುತ ನಿದ್ರೆ ಮತ್ತು ಮರುದಿನ ಉಲ್ಲಾಸಿತರಾಗಿ ಎದ್ದೇಳಲು ನೆರವಾಗುತ್ತದೆ. ತೂಕ ಇಳಿಸಿಕೊಳ್ಳಲು ಹಾಗೂ ಉಸಿರಾಟದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಮಾತ್ರವೇ ನಾವು ಯೋಗವನ್ನು ಅವಲಂಬಿಸುತ್ತಿದ್ದೇವೆ.

ಆದರೆ ಯೋಗವು ನಿಮಗೆ ಸಪೂರ ಸುಂದರ ಕಾಯವನ್ನು ನೀಡುವುದಲ್ಲದೆ ನಿಮ್ಮ ಮೇಲೆ ಮಾಡುವ ಜಾದೂ ಒಂದೆರಡಲ್ಲ. ನೀವು ರಾತ್ರಿಯಲ್ಲಿ ಮಾತ್ರ ಮಾಡುವ ಕೆಲವೊಂದು ಯೋಗ ಭಂಗಿಗಳಿದ್ದು ಇವು ನಿಮಗೆ ಒಳ್ಳೆಯ ನಿದ್ರೆಯನ್ನೂ ದಯಪಾಲಿಸುತ್ತದೆ ಎಂದರೆ ನೀವು ನಂಬುತ್ತೀರಾ? ಹೌದು ನಿಮ್ಮ ಒತ್ತಡವನ್ನು ನಿವಾರಿಸಿ ಸುಂದರವಾದ ನಿದ್ರೆಯನ್ನು ದಯಪಾಲಿಸುವ ಕಲೆ ಕೂಡ ಯೋಗದಲ್ಲಿದೆ.

ಹೊಳೆಯುವ ತ್ವಚೆಗಾಗಿ 9 ಯೋಗಾಸನಗಳು

ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿರುವವರು ಮತ್ತು ಒತ್ತಡದಿಂದಾಗಿ ನಿದ್ರೆಯನ್ನು ಹತ್ತಿರಕ್ಕೆ ತಂದುಕೊಳ್ಳಲು ವಿಫಲರಾಗಿರುವವರು ಈ ಯೋಗದ ಸದುಪಯೋಗವನ್ನು ಪಡೆದುಕೊಳ್ಳಬಹುದು. ಹೆಚ್ಚು ವೃತ್ತಿಪರರು ಈ ದಿನಗಳಲ್ಲಿ ಎಲ್ಲಾ ಸಮಯವು ಹೆಚ್ಚು ದಣಿದಿರುತ್ತಾರೆ ಇದಕ್ಕೆ ಕಾರಣ ಅವರು ಸಾಕಷ್ಟು ನಿದ್ದೆ ಮಾಡದಿರುವುದಾಗಿದೆ. ನಿದ್ರಾಹೀನತೆ ಅಥವಾ ತೊಂದರೆಯನ್ನುನಭವಿಸುವ ನಿದ್ದೆಯಿಂದ ಬಳಲುತ್ತಿರುತ್ತಾರೆ.

ಸರಿಯಾದ ನಿದ್ದೆಯು ನಿಮ್ಮನ್ನು ಸಕ್ರಿಯ ಮತ್ತು ಚುರುಕಾಗಿಸುತ್ತದೆ. ಆದ್ದರಿಂದ ಸಾಕಷ್ಟು ನಿದ್ದೆ ನಿಮಗೆ ವಿಶ್ರಾಂತಿಯನ್ನು ನೀಡುತ್ತದೆ. ನಿದ್ರೆಗಿಂತ ಮೊದಲು ಮಾಡುವ ಕೆಲವೊಂದು ಆಸನಗಳು ನಿಮಗೆ ಸಾಕಷ್ಟು ನಿದ್ದೆಯನ್ನು ನೀಡಿ ದೀರ್ಘ ಸಮಯ ನಿಮ್ಮನ್ನು ಚೇತೋಹಾರಿಯನ್ನಾಗಿಸುತ್ತದೆ.

ನೀವು ಹಾಸಿಗೆಗೆ ಹೋಗುವುದಕ್ಕಿಂತ ಮುಂಚೆ ಮಾಡಬಹುದಾದ ಕೆಲವು ಯೋಗ ಭಂಗಿಗಳು ಇದ್ದು ಉತ್ತಮವಾದ ನಿದ್ರೆಯನ್ನು ಇದು ಒದಗಿಸುತ್ತದೆ. ನೀವು ನಿಯಮಿತವಾಗಿ ಈ ವ್ಯಾಯಾಮಗಳನ್ನು ಮಾಡುತ್ತಿದ್ದರೆ ನಿಮ್ಮ ನಿದ್ದೆಯ ಗುಣಮಟ್ಟ ಉತ್ತಮವಾಗುತ್ತದೆ. ನೀವು ಹಿಂದಿಗಿಂತಲೂ ಹೆಚ್ಚು ಕ್ರಿಯಾತ್ಮಕವಾಗುತ್ತೀರಿ.

ಹೊಳೆಯುವ ತ್ವಚೆಗಾಗಿ 9 ಯೋಗಾಸನಗಳು

 ಜಾನು ಶಿರ್ಸಾಸನ

ಜಾನು ಶಿರ್ಸಾಸನ

ಕಾಲುಗಳನ್ನು ಮುಂದಕ್ಕೆ ಚಾಚಿಕೊಂಡು ನೇರವಾಗಿ ಕುಳಿತುಕೊಳ್ಳಿ. ಬಲ ಮೊಣಕಾಲನ್ನು ಬಗ್ಗಿಸಿ ಮತ್ತು ಅದನ್ನು ಎಡ ತೊಡೆಯ ತನಕ ತನ್ನಿ. ಬಲ ಮೊಣಕಾಲು ನೆಲವನ್ನು ಸ್ಪರ್ಶಿಸಲಿ. ಉಸಿರನ್ನು ಎಳೆದುಕೊಳ್ಳಿ ಮತ್ತು ಎರಡು ಕೈಗಳನ್ನು ವಿಸ್ತಾರಗೊಳಿಸಿ. ಈಗ ಉಸಿರನ್ನು ಹೊರಗೆ ಬಿಡಿ ಮತ್ತು ಎಡ ಪಾದಗಳನ್ನು ಮುಟ್ಟಿ. ಎಡಪಾದದ ಎರಡು ಕಡೆಗೆ ನಿಮ್ಮ ಕೈಗಳನ್ನಿಡಿ. ಹೆಬ್ಬೆರಳನ್ನು ಒಂದು ನಿಮಿಷ ಹಿಡಿಯಿರಿ ಮತ್ತು ಇನ್ನೊಂದು ಕಾಲಿನಲ್ಲಿಯೂ ಇದೇ ರೀತಿ ಮಾಡಿ. ಇದು ಒತ್ತಡವನ್ನು ನಿವಾರಿಸಿ ನಿಮಗೆ ಸುಖ ನಿದ್ದೆಯನ್ನು ದಯಪಾಲಿಸುತ್ತದೆ.

ನೇರವಾಗಿ ನಿಂತು ಬಾಗುವುದು

ನೇರವಾಗಿ ನಿಂತು ಬಾಗುವುದು

ನಿಮ್ಮ ಎರಡು ಕಾಲುಗಳ ಮಧ್ಯೆ ಆರು ಇಂಚು ಸ್ಥಳಾವಕಾಶ ಇರುವಂತೆ ನಿಂತುಕೊಳ್ಳಿ. ದೇಹವನ್ನು ಬಾಗಿಸಿ ಎರಡು ಕೈಗಳಿಂದ ನಿಮ್ಮ ಕಾಲುಗಳನ್ನು ಮುಟ್ಟಿ. ಈ ಆಸನದಿಂದ ಒಳ್ಳೆಯ ನಿದ್ರೆ ಮಾತ್ರವಲ್ಲದೆ, ತಲೆನೋವು ಶಮನವಾಗುತ್ತದೆ.

ಬದ್ದ ಕೋನಾಸನ

ಬದ್ದ ಕೋನಾಸನ

ನೇರವಾಗಿ ಕುಳಿತುಕೊಂಡು ನಿಮ್ಮ ಕಾಲುಗಳನ್ನು ನಿಮ್ಮ ಮುಂದಕ್ಕೆ ಮಡಚಿ ಕುಳಿತುಕೊಳ್ಳಬೇಕು. ನಿಮ್ಮ ಹಿಮ್ಮಡಿಯು ಒಂದಕ್ಕೊಂದು ತಾಗುವಂತಿದ್ದು ಮುಚ್ಚಿದ ತ್ರಿಕೋನವನ್ನು ಉಂಟುಮಾಡುವಂತಿರಬೇಕು.

ತಿರುಚು ಭಂಗಿ

ತಿರುಚು ಭಂಗಿ

ನೀವು ಕುಳಿತಿರುವಾಗ ಅಥವಾ ನಿಮ್ಮ ಹಿಂಭಾಗದಲ್ಲಿ ಮಲಗಿರುವಾಗ ನೀವು ಈ ತಿರುಚು ಭಂಗಿಯನ್ನು ಅಭ್ಯಸಿಸಬಹುದು. ಇದು ನಿಮ್ಮ ಬೆನ್ನಿನ ಗಂಟುಗಳನ್ನು ಮೆತ್ತಗಾಗಿಸಿ ನಿಮ್ಮ ಸುಖ ನಿದ್ರೆಗೆ ನಿಮ್ಮನ್ನು ತಯಾರುಗೊಳಿಸುತ್ತದೆ.

ಬಾಲಾಸನ

ಬಾಲಾಸನ

ನಮ್ಮ ತಾಯ ಗರ್ಭದಲ್ಲಿ ನಾವಿರುವಾಗ ಇದ್ದಂತಹ ಭಂಗಿಯಾಗಿದೆ ಬಾಲಾಸನ. ಕೈಗಳನ್ನು ಮತ್ತು ಭುಜವನ್ನು ಮುಂದಕ್ಕೆ ಬಾಗಿಸಿ ಮಗುವಿನಂತೆ ಭಂಗಿ ನೀಡಿ. ಸಾಮಾನ್ಯವಾಗಿ ಉಸಿರಾಡಿ. ಇದೇ ರೀತಿ ಸ್ವಲ್ಪ ಸಮಯ ಮಾಡಿ. ಉಸಿರು ಮೇಲಕ್ಕೆಳೆದುಕೊಳ್ಳಿ ಮತ್ತು ಆರಂಭದ ಸ್ಥಿತಿಗೆ ಬನ್ನಿ. ಇದು ನಿಮ್ಮನ್ನು ಶಾಂತಗೊಳಿಸಿ ನಿಮಗೆ ವಿಶ್ರಾಂತಿಯನ್ನು ಉಂಟುಮಾಡುವ ನೈಸರ್ಗಿಕ ಸ್ಥಿತಿ ಇದಾಗಿದೆ.

ಹಾಲಾಸನ

ಹಾಲಾಸನ

ಬೆನ್ನನ್ನು ನೆಲಕ್ಕೊರಗಿಸಿ ಮಲಗಿ, ಎರಡು ಕಾಲುಗಳನ್ನು ನಿಮ್ಮ ತಲೆಯ ಮೇಲೆ ಎತ್ತಿ ಮತ್ತು ನೆಲವನ್ನು ಕಾಲಿನಿಂದ ಮುಟ್ಟಲು ಪ್ರಯತ್ನಿಸಿ. ಕೈಗಳು ನಿಮ್ಮ ಬೆನ್ನಿನ ನೆರವಿಗಿರಲಿ ಅಥವಾ ನೆಲದ ಮೇಲಿರಲಿ.

ವಿಪಾರಿತ್ ಕರಣಿ

ವಿಪಾರಿತ್ ಕರಣಿ

ಈ ಯೋಗ ಭಂಗಿಯಲ್ಲಿ ನೀವು ನಿಮ್ಮ ಕಾಲುಗಳನ್ನು ಗೋಡೆಗೆ ಆಧಾರವಾಗಿಸಿ ನೇರವಾಗಿ ಇರಿಸಬೇಕು. ನಿಮ್ಮ ಸೊಂಟದಿಂದ ಮೇಲ್ಭಾಗಕ್ಕೆ ಕಾಲುಗಳನ್ನು ಎತ್ತಬೇಕು ಇದರಿಂದ ನಿಮ್ಮ ಕಾಲುಗಳಿಂದ ಹಿಮ್ಮುಖವಾಗಿ ರಕ್ತವು ಮೆದುಳನ್ನು ತಲುಪುತ್ತದೆ.

ಸುಖಾಸನ

ಸುಖಾಸನ

ಈ ಯೋಗದ ಹೆಸರೇ ಹೇಳುವಂತೆ ಇದು ಸುಖವನ್ನು ವಿಶ್ರಾಂತಿಯನ್ನು ನೀಡುವ ಆಸನವಾಗಿದೆ. ಮುಂದಕ್ಕೆ ಬಾಗುವ ಈ ಆಸನವು ಒತ್ತಡವನ್ನು ದೂರಾಗಿಸಿ ನಿಮ್ಮ ನಿದ್ರೆಯ ಸಮಸ್ಯೆಗಳನ್ನು ದೂರಮಾಡುತ್ತದೆ.

ಶವಾಸನ

ಶವಾಸನ

ಈ ಶಾವಾಸನ ಭಂಗಿಯು ಯೋಗ ಭಂಗಿಗಳನ್ನು ಮಾಡಿದ ನಂತರ ಮಾಡುವಂತಹ ಸರಳ ಪ್ರಕ್ರಿಯೆಯಾಗಿದೆ. ದೇಹವನ್ನು ನಿಶ್ಚಲ ಸ್ಥಿತಿಯಲ್ಲಿರಿಸಿ ಬೆನ್ನನ್ನು ಆಧಾರವಾಗಿರಿಸಿ ಕಾಲು ಮತ್ತು ಕೈಗಳನ್ನು ಹಗುರವಾಗಿರಿಸಿ ಮಾಡುವ ಯೋಗ ಭಂಗಿಯಾಗಿದೆ ಶವಾಸನ. ಇದು ನಿಮ್ಮ ದೇಹಕ್ಕೆ ಮತ್ತು ಮನಸ್ಸಿಗೆ ವಿಶ್ರಾಂತಿಯನ್ನು ಆರಾಮವನ್ನು ನೀಡಿ ನಿಮಗೆ ಉತ್ತಮ ನಿದ್ರೆಯನ್ನು ನೀಡುತ್ತದೆ.

English summary

Yoga Poses To Help You Sleep At Night

Most of us turn to yoga only for weight loss or respiratory problems. But yoga is a spiritual exercise that can do much more than giving you a slimmer waistline. If you do this on a regular basis, the quality of your sleep will improve and you will feel much more active than before. Here are the yoga poses you should try at night time.
X
Desktop Bottom Promotion