For Quick Alerts
ALLOW NOTIFICATIONS  
For Daily Alerts

ಕುರ್ಚಿಗೆ ಅಂಟಿಕೊಂಡಿರುವುದು ಆನಾರೋಗ್ಯಕ್ಕೆ ದಾರಿ

|

ಕಚೇರಿಯ ಕೆಲಸದ ಒತ್ತಡದ ಸಮಯದಲ್ಲಿ ನಾವು ಕುರ್ಚಿಯನ್ನು ಅಂಟಿಕೊಂಡಿರಬೇಕಾದ ಅನಿವಾರ್ಯತೆಯೇ ಹೆಚ್ಚು. ರಾಶಿ ಫೈಲ್‌ಗಳು, ಬಿಡದೇ ಬರುವ ಫೋನ್ ಕಾಲ್‌ಗಳು, ಮೇಲಿಂದ ಮೇಲೆ ಬರುವ ಪ್ರಾಜೆಕ್ಟ್‌ಗಳು ಇಮೇಲೆ‌ಗಳು ಹೀಗೆ ಒಂದಾ ಎರಡಾ ಇವೆಲ್ಲವನ್ನೂ ನಿಭಾಯಿಸಲು ನಮಗೆ ಕುರ್ಚಿ ಅನಿವಾರ್ಯ. ಹೀಗೆ ಕುರ್ಚಿಗೆ ಅಂಟಿಕೊಂಡೇ ಮಾಡುವ ಕೆಲಸಗಳು ನಮಗೆ ಅನಾರೋಗ್ಯದ ದಾರಿಯನ್ನು ತೋರಿಸುತ್ತದೆ ಎಂಬುದು ನಿಮಗೆ ತಿಳಿದಿದೆಯೇ?

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸ್ಟ್ರೆಚ್ ಮಾರ್ಕ್ಸ್ ಬೀಳಲು ಕಾರಣ ಮತ್ತು ಪರಿಹಾರ

ಸಂಶೋಧನೆಗಳ ಪ್ರಕಾರ ನೀವು ಹೆಚ್ಚು ಸಮಯ ಕುರ್ಚಿಯಲ್ಲಿ ಕುಳಿತು ವ್ಯಯಿಸುವುದು ಅನಾರೋಗ್ಯಗಳಾದ ಅಧಿಕ ಬೊಜ್ಜು, ರಕ್ತದೊತ್ತಡ ಮತ್ತು ಅಸಾಮಾನ್ಯ ಕೊಲೆಸ್ಟ್ರಾಲ್‌ಗೆ ಕಾರಣವಾಗುತ್ತದೆ ಎಂದಾಗಿದೆ. ಇವು ಮೂರು ಅನಾರೋಗ್ಯ ಅಂಶಗಳಲ್ಲದೆ ಕುರ್ಚಿಯನ್ನು ಬಿಡದೇ ಅಂಟಿಕೊಂಡು ಕೆಲಸ ಮಾಡುವ ನಮ್ಮ ಪರಿಸ್ಥಿತಿ ಹೆಚ್ಚಿನ ಕಾಯಿಲೆಗಳನ್ನು ನಮಗೆ ದಯಪಾಲಿಸುತ್ತದೆ.

ಇಂದಿನ ಯುವಜನಾಂಗ ಕೆಲಸಕ್ಕೆ ಕೊಡುವ ಶ್ರದ್ಧೆ ಮತ್ತು ಬಿಡುವಿಲ್ಲದ ದುಡಿತದಿಂದಾಗಿ ವ್ಯಾಯಾಮದ ಕೊರತೆಯನ್ನು ಎದುರಿಸುತ್ತಿದ್ದಾರೆ ಇದರಿಂದಾಗಿ ಈ ಮೇಲೆ ತಿಳಿಸಿದ ಅನಾರೋಗ್ಯ ಅವರನ್ನು ತೀವ್ರವಾಗಿ ಕಾಡುತ್ತಿದೆ. ನಿಮ್ಮ ಸ್ಪ್ರಿಂಗ್ ಚೇರ್ ಮೇಲೆ ಕುಳಿತುಕೊಳ್ಳುವುದು ಹೃದಯ ಸಂಬಂಧಿ ರೋಗಗಳನ್ನು ಉಂಟುಮಾಡುತ್ತದೆ ಎಂಬುದು ವೈದ್ಯರು ಹೇಳುವ ಮಾತಾಗಿದೆ.

ನೀವು ಬಿಡುವಿಲ್ಲದೆ ಅವಿರತವಾಗಿ ದುಡಿಯುತ್ತಾ ನಿಮ್ಮ ಕುರ್ಚಿಗೆ ಅಂಟಿಕೊಂಡಿರುವಿರಾಗಿದ್ದಲ್ಲಿ ನಾವು ಇಲ್ಲಿ ನೀಡುತ್ತಿರುವ ಕೆಲವು ಸಮಸ್ಯೆಗಳಿಗೆ ನೀವು ಬೇಗನೇ ಆಹಾರವಾಗಬಲ್ಲಿರಿ. ನಿಮ್ಮ ಎಂಟು ಗಂಟೆಗಳ ದುಡಿಮೆಯಲ್ಲಿ ಅರ್ಧ ಗಂಟೆಯಷ್ಟಾದರೂ ವ್ಯಾಯಾಮ ಮಾಡುವುದು ಈ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸರಳ ದಾರಿಯಾಗಿದೆ. ದೀರ್ಘ ಸಮಯದವರೆಗೆ ನಿಮ್ಮ ಕುರ್ಚಿಗಂಟಿಕೊಂಡು ಕೆಲಸ ಮಾಡುವ ನಿಮ್ಮ ಜೀವನ ಶೈಲಿ ಎದುರಿಸಬಹುದಾದ ಕೆಲವು ಸಮಸ್ಯೆಗಳು ಕಾಯಿಲೆಗಳು ಹೀಗಿವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮುಂಜಾವಿನ ನಡಿಗೆಯಿಂದ ನಿಮಗುಂಟಾಗುವ ಪ್ರಯೋಜನಗಳು

ಮಧುಮೇಹ:

ಮಧುಮೇಹ:

ನೀವು ನಿಮ್ಮ ಟೇಬಲ್‌ಗಂಟಿಕೊಂಡೇ ಕೆಲಸ ಮಾಡುವವರಾಗಿದ್ದರೆ ನಿಮ್ಮಲ್ಲಿ ಮಧುಮೇಹ 2 ಶೀಘ್ರವಾಗಿ ಬೆಳವಣಿಗೆಯಾಗಬಹುದು. ದಿನಪೂರ್ತಿ ನಿಮ್ಮ ದೇಹವನ್ನು ಚಟುವಟಿಕೆಯಿಂದ ಇರಿಸುವುದು ಅಗತ್ಯ ಹಾಗೂ ಪ್ರತೀ ಅರ್ಧ ಗಂಟೆಗೊಮ್ಮೆ 5 ನಿಮಿಷದ ವಿರಾಮವನ್ನು ತೆಗೆದುಕೊಳ್ಳುವುದು ಒಳಿತು.

ಹೃದಯ ಸಂಬಂಧಿ ರೋಗಗಳು:

ಹೃದಯ ಸಂಬಂಧಿ ರೋಗಗಳು:

ದೀರ್ಘ ಸಮಯದ ಕುಳಿತುಕೊಳ್ಳುವಿಕೆ ಸ್ನಾಯುಗಳ ಕೊಬ್ಬನ್ನು ಕಡಿಮೆ ಪ್ರಮಾಣದಲ್ಲಿ ಕರಗಿಸಿ ರಕ್ತದ ಹರಿವನ್ನು ತೀವ್ರಗೊಳಿಸುತ್ತದೆ. ಈ ಸಮಯದಲ್ಲಿ ಕೊಬ್ಬುಳ್ಳ ಏಸಿಡಿಟಿ ಅಂಶಗಳು ನಿಮ್ಮ ಹೃದಯವನ್ನು ಶೀಘ್ರವಾಗಿ ತಲುಪುತ್ತದೆ. ಇದರಿಂದ ಹಾರ್ಟ್ ಅಟ್ಯಾಕ್‌ನಂತಹ ಹೃದಯ ಸಂಬಂಧಿ ಕಾಯಿಲೆಗಳು ಬೇಗನೇ ಕಂಡುಬರಬಹುದು. ನೀವು 5 ನಿಮಿಷದ ವಿರಾಮವನ್ನು ಅರ್ಧ ಗಂಟೆಗೊಮ್ಮೆ ತೆಗೆದುಕೊಳ್ಳುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

ತೂಕ ಏರಿಕೆ:

ತೂಕ ಏರಿಕೆ:

ಕೆಲಸದ ನಡುವೆ ದೀರ್ಘ ಕಾಲವಾಗಿ ಕುಳಿತುಕೊಳ್ಳುವವರನ್ನು ಹೆಚ್ಚು ಕಾಡಿಸುವ ಒಂದು ಸಮಸ್ಯೆಯಾಗಿದೆ ತೂಕ ಏರಿಕೆ. ಊಟದ ನಂತರ 20 ನಿಮಿಷದ ವಿರಾಮವನ್ನು ತೆಗೆದುಕೊಳ್ಳುವುದು ನಿಮ್ಮ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸುಧಾರಿಸುತ್ತದೆ. ನಿಮಗೆ ಹಸಿವಾದಾಗಲೆಲ್ಲಾ, ಬಬಲ್ ಗಮ್ ಅನ್ನು ಅಗಿಯುವುದು ಅಥವಾ ನೀರು ಕುಡಿಯುವುದು ನಿಮಗೆ ಹಸಿವಾಗುವಿಕೆಯ ಭಾವನೆಯನ್ನು ದೂರಾಗಿಸುತ್ತದೆ.

ಉಬ್ಬಿರುವ ನಾಳಗಳು:

ಉಬ್ಬಿರುವ ನಾಳಗಳು:

ಹೆಚ್ಚು ಸಮಯದವರೆಗೆ ಕುರ್ಚಿಗಂಟಿಕೊಂಡು ಕುಳಿತುಕೊಂಡಿರುವುದರಿಂದ ಬರುವ ಸಾಮಾನ್ಯ ಸಮಸ್ಯೆಯಾಗಿದೆ ಉಬ್ಬಿರುವ ನಾಳಗಳು. ನೀವು ಕುಳಿತಿರುವಾಗ ಕಾಲುಗಳಿಗೆ ಹೆಚ್ಚಿನ ಒತ್ತಡ ಬೀಳುತ್ತದೆ ಮತ್ತು ನೀವು ತಪ್ಪಾದ ಭಂಗಿಯಲ್ಲಿ ಕುಳಿತುಕೊಂಡಾಗ ಈ ಸಮಸ್ಯೆ ತೀವ್ರವಾಗಿರುತ್ತದೆ.

ಸೊಂಟದ ಸಮಸ್ಯೆಗಳು:

ಸೊಂಟದ ಸಮಸ್ಯೆಗಳು:

ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ ಇದಾಗಿದೆ. ಸೊಂಟದ ಸಾಕೆಟ್‌ಗಳು ಮಂಡಿಗಳು ಮತ್ತು ಬೆನ್ನುಮೂಳೆಯ ಮೇಲೆ ಒತ್ತಡವನ್ನು ಹೆಚ್ಚಿಸುತ್ತವೆ ಇದು ಮಹಿಳೆಯರಲ್ಲಿ ಉರಿಯೂತಕ್ಕೆ ಕಾರಣವಾಗುತ್ತವೆ. ಅಗಲ ಸೊಂಟವನ್ನು ಹೊಂದಿರುವ ಮಹಿಳೆಯರು ದೀರ್ಘ ಸಮಯದವರೆಗೆ ಕುಳಿತುಕೊಂಡು ಕೆಲಸ ಮಾಡುವುದರಿಂದ ಈ ವಿಧದ ಸಮಸ್ಯೆಗಳಿಗೆ ಹೆಚ್ಚು ಬಲಿಯಾಗುತ್ತಾರೆ.

ಅಂಗಗಳಿಗೆ ಹಾನಿ:

ಅಂಗಗಳಿಗೆ ಹಾನಿ:

ನಿಮ್ಮ ಡೆಸ್ಕ್‌ನಲ್ಲಿ ಅಧಿಕ ಅವಧಿಯವರೆಗೆ ಕುಳಿತಿರುವುದು ನಿಮ್ಮ ಅಂಗಗಳನ್ನು ಅಪಾಯಕ್ಕೆ ಒಳಪಡಿಸುತ್ತದೆ. ಇನ್ಸುಲಿನ್ ಉತ್ಪಾದಿಸುವ, ನಿಮಗೆ ಶಕ್ತಿಯನ್ನು ಒದಗಿಸುವಂತೆ ಕೋಶಗಳಿಗೆ ಗ್ಲುಕೋಸ್ ಅನ್ನು ಕೊಂಡೊಯ್ಯುವ ಅಂಗ ಮೇದೋಜ್ಜೀರಕ ಗ್ರಂಥಿಯಾಗಿದೆ. ನಾವು ಸುಮ್ಮನೇ ಕುಳಿತಿರುವುದು ಸ್ನಾಯುಗಳ ಪ್ರತಿಕ್ರಿಯೆಗೆ ಅಡ್ಡಿಯನ್ನುಂಟು ಮಾಡುತ್ತದೆ ಇದರಿಂದ ಮೇದೋಜ್ಜೀರಕ ಗ್ರಂಥಿಯು ಹೆಚ್ಚು ಹೆಚ್ಚು ಇನ್ಸುಲಿನ್ ಉತ್ಪಾದಿಸುವುದಕ್ಕೆ ಕಾರಣವಾಗುತ್ತದೆ. ಇದು ಅಂಗವನ್ನು ಹಾನಿ ಮಾಡುವ ಅಂಶವಾಗುತ್ತದೆ.

ಕುತ್ತಿಗೆ ನೋವು:

ಕುತ್ತಿಗೆ ನೋವು:

ಹೌದು, ದೀರ್ಘಕಾಲ ಕುಳಿತೇ ಕೆಲಸ ಮಾಡುವವರನ್ನು ಕಾಡುವ ಅತ್ಯಂತ ಗಂಭೀರ ಸಮಸ್ಯೆಯೆಂದರೆ ಕುತ್ತಿಗೆ ನೋವಾಗಿದೆ. ದೀರ್ಘ ಕಾಲ ಕುಳಿತುಕೊಂಡು ಕೆಲಸ ಮಾಡುವುದು ಕುತ್ತಿಗೆಯ ಗರ್ಭಕಂಠದ ಕಶೇರುಖಂಡಗಳ ಮತ್ತು ಕುತ್ತಿಗೆಯ ಶಾಶ್ವತ ಅಸಮತೋಲನಕ್ಕೆ ಕಾರಣವಾಗುತ್ತದೆ.

ಬೆನ್ನು ನೋವು:

ಬೆನ್ನು ನೋವು:

ಡಿಸ್ಕ್ ಹಾನಿ ಮತ್ತು ಬೆನ್ನುಮೂಳೆಯ ಅನಮ್ಯತೆ ಎಂಬ ಎರಡು ರೀತಿಯ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಇದು ದೀರ್ಘ ಸಮಯ ಕುರ್ಚಿಗಂಟಿಕೊಂಡು ಕೆಲಸ ಮಾಡುವುದರಿಂದ ಉಂಟಾಗುವುದಾಗಿದೆ.

ರಕ್ತ ಸಂಚಾರಕ್ಕೆ ಹಾನಿ:

ರಕ್ತ ಸಂಚಾರಕ್ಕೆ ಹಾನಿ:

4 ಗಂಟೆಗಳಿಗಿಂತಲೂ ಹೆಚ್ಚು ಕಾಲ ನೇರವಾಗಿ ಕುಳಿತುಕೊಂಡೇ ಕೆಲಸ ಮಾಡುವುದು ನಿಮ್ಮ ರಕ್ತ ಸಂಚಲನೆಯ ಮೇಲೆ ಪರಿಣಾಮವನ್ನು ಬೀರುತ್ತದೆ. ನೀವು ಕುಳಿತ ಭಂಗಿಯ ಕಾರಣದಿಂದಾಗಿ ನಿಮ್ಮ ಪೆಲ್ವಿಕ್ ಮತ್ತು ಲೋವರ್ ಲಿಂಬ್ ಏರಿಯಾಗಳು ಹೆಚ್ಚು ಹಾನಿಗೆ ಒಳಗಾಗುತ್ತವೆ.

English summary

Why Sitting All Day Is Bad For You?

Is it unhealthy to sit for long hours at a stretch? Yes, prolonged hours of sitting on your office chair will lead to a lot of chronic problems that you might not be aware of. But do you know what exactly goes wrong inside our bodies when we park ourselves for nearly eight hours everyday?
X
Desktop Bottom Promotion