For Quick Alerts
ALLOW NOTIFICATIONS  
For Daily Alerts

ಏಕೆ ಗೋಮಾಂಸ, ಪುರುಷರಿಗೆ ಉತ್ತಮವಲ್ಲ ?

By Poornima Heggade
|

ಗೋಮಾಂಸದಂತಹ, ಕೆಂಪು ಮಾಂಸ (ರೆಡ್ ಮೀಟ್ ) ಗಳನ್ನು ಸೇವಿಸುವ ಪ್ರಯೋಜನಗಳು ಇರುವಂತೆ, ಅವುಗಳನ್ನು ಸೇವಿಸಬಾರದು ಎನ್ನುವುದಕ್ಕೂ ದೊಡ್ಡ ಪ್ರಮಾಣದಲ್ಲಿ ಹಲವು ಕಾರಣಗಳಿವೆ. ಗೋಮಾಂಸದ ಅತಿಯಾದ ಬಳಕೆಯ ಕೆಟ್ಟ ಪರಿಣಾಮಗಳೂ ಹಲವು. ಹಸುಗಳು ಸತ್ತಿರುವುದಕ್ಕಿಂತ ಅದು ಜೀವಂತವಾಗಿರುವಾಗ ಅದರ ಪ್ರಯೋಜನಗಳು ಹೆಚ್ಚು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬೆಳ್ಳುಳ್ಳಿ ವಾಸನೆ ತೊಡೆದುಹಾಕುವುದು ಹೇಗೆ?

ಬೀಫ್ ಕೊಲೆಸ್ಟ್ರಾಲ್‌ನ್ನು ಹೆಚ್ಚು ಹೊಂದಿದ್ದು, ಪ್ರತಿದಿನವು ಗೋಮಾಂಸವನ್ನು ಸೇವಿಸುವ ವ್ಯಕ್ತಿಗಳ ನಡುವೆ ಅಸ್ವಸ್ಥತೆಗಳು ಮತ್ತು ಅಧಿಕ ತೂಕ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಇದು ಸಾಕಷ್ಟು ಅಪಾಯಕಾರಿಯಾಗಿದ್ದರೂ ಕೂಡ ಒಂದು ಸಂಪೂರ್ಣವಾಗಿ ತಪ್ಪಿಸಲು ಸಾಧ್ಯವಾಗದೇ ಇರಬಹುದು. ಆದದ್ರಿಂದ ಇದನ್ನು ಸೇವಿಸುವುದನ್ನು ಕನಿಷ್ಠ ಮಟ್ಟಕ್ಕೆ ಕಡಿವಾಣ ಹಾಕಲು ಸಾನು ಸೂಚಿಸುತ್ತೇವೆ.

ಕೆಂಪು ಮಾಂಸ ಮತ್ತು ಹೆಚ್ಚು ಸಂಸ್ಕರಿಸಿದ ಮಾಂಸಗಳು ಅಧಿಕ ರಕ್ತದೊತ್ತಡ ಮತ್ತು ಹೆಚ್ಚು ಕೊಲೆಸ್ಟ್ರಾಲ್ ನಂತಹ ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣಗಳಾಗುತ್ತವೆ. ಹಲವಾರು ಅಧ್ಯಯನಗಳು ಪ್ರಕಾರ ಕ್ಯಾನ್ಸರ್, ಗೋಮಾಂಸ ಸೇವನೆಯಿಂದ ಅಧಿಕವಾಗಬಹುದು ಎಂದು ಹೇಳುತ್ತದೆ. ಸುಟ್ಟ ದನದ ಮಾಂಸ ಪ್ರಾಸ್ಟೇಟ್ ಕ್ಯಾನ್ಸರ್ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂದೂ ಹೇಳಲಾಗಿದೆ.

ಸಾಮಾನ್ಯವಾಗಿ ಪುರುಷರು ಅವರ ದೈಹಿಕ ಸಕ್ರಿಯಗೊಳಿಸಲು ಅಥವಾ ಸಕ್ರಿಯವಾಗಿ ಭೌತಿಕ ಕ್ರೀಡೆಗಳಲ್ಲಿ ಭಾಗಿಯಾಗಿದ್ದರೆ ಸರಿದೂಗಿಸಲು ತಮ್ಮ ದೈನಂದಿನ ಆಹಾರದಲ್ಲಿ ಪ್ರೊಟೀನ್ ಹೆಚ್ಚಿನ ಪ್ರಮಾಣ ಅಗತ್ಯವಿರುತ್ತದೆ. ಆದರೆ ಇದಕ್ಕೆ ಕೆಂಪು ಮಾಂಸವನ್ನೇ ಸೇವಿಸುವ ಅವಶ್ಯಕತೆ ಇಲ್ಲ. ಬದಲಿಗೆ ಮೀನು, ಸೋಯಾ , ಮೊಗ್ಗುಗಳು ಇತರ ಆಯ್ಕೆಗಳನ್ನು ಮಾಡಬಹುದು.

ಕೆಂಪು ಮಾಂಸ ಗಳ ನಡುವೆ, ಗೋಮಾಂಸ ಅತ್ಯಂತ ಪೌಷ್ಟಿಕ ಮತ್ತು ಹೆಚ್ಚು ಕೊಲೆಸ್ಟ್ರಾಲ್ ಹೊಂದಿರುವ ಆಹಾರವಾಗಿದೆ. ಕೆಲವು ಅಧ್ಯಯನಗಳು ಗೋಮಾಂಸ ಸೇವನೆಯಿಂದ ಬೊಜ್ಜು ಮತ್ತು ಹೃದಯ ಸಮಸ್ಯೆಯ ಅಪಾಯಗಳು ಉಂಟಾಗುತ್ತವೆ ಎಂದು ಸಾಬೀತು ಪಡಿಸಿದೆ. ಕೊಲೆಸ್ಟ್ರಾಲ್‌ನ ಹೊರತಾಗಿ, ಇದು ರುಚಿಕರವಾಗಿದ್ದರೂ ಪುರುಷರಲ್ಲಿ ಅನಿಯಮಿತ ಕೊಲೆಸ್ಟ್ರಾಲ್ ಮಟ್ಟವನ್ನು ದಿನದಿಂದ ದಿನಕ್ಕ್ ಹೆಚ್ಚಿಸುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಚಿಕನ್‌ಗುನ್ಯಾಕ್ಕೆ ಪರಿಣಾಮಕಾರಿ ಮನೆಮದ್ದು

1.ಆಲ್ಜೀಮರ್ ಖಾಯಿಲೆಯ ಅಪಾಯ

1.ಆಲ್ಜೀಮರ್ ಖಾಯಿಲೆಯ ಅಪಾಯ

ಗೋಮಾಂಸದಂತಹ ಕೆಂಪು ಮಾಂಸ ಕಬ್ಬಿಣವನ್ನು ಹೆಚ್ಚಾಗಿ ಹೊಂದಿರುತ್ತದೆ ಮತ್ತು ಒಂದು ಉನ್ನತ ಕೆಂಪು ಮಾಂಸದ ಆಹಾರ ಕಬ್ಬಿಣದ ಮಟ್ಟವನ್ನು ದೇಹದಲ್ಲಿ ಹೆಚ್ಚಾಗಿಸಲು ಕಾರಣವಾಗಬಹುದು. ಟಾ ಮತ್ತು ಬೀಟ ಅಮಿಲಾಯ್ಡ್ ಎಂಬ ಪ್ರೋಟೀನ್ ಮೆದುಳಿನ ನರ ಕೋಶಗಳ ಕಾರ್ಯಕ್ಕೆ ಅಡ್ಡಿ ಪಡಿಸಬಹುದು ಅಥವಾ ನರವನ್ನು ಸಾಯಿಸಬಹುದು. ಇದು ಆಲ್ಜೀಮರ್ ಕಾಯಿಲೆಗೆ ಕಾರಣವಾಗುತ್ತದೆ ಎಂದು ವಿಜ್ಞಾನಿಗಳು ನಂಬುತ್ತಾರೆ.

2.ಹೃದಯ ರೋಗ

2.ಹೃದಯ ರೋಗ

ದೀರ್ಘಕಾಲದ ಸಂಶೋಧನೆಯ ನಂತರ ವಿಜ್ಞಾನಿಗಳು ಯಶಸ್ವಿಯಾಗಿ ಕೆಂಪು ಮಾಂಸ ಸೇವನೆ ಮತ್ತು ಹೃದ್ರೋಗಕ್ಕೆ ಸಂಪರ್ಕ ಇರುವುದನ್ನು ಸಾವೀತುಪಡಿಸಿದ್ದಾರೆ. ಇತ್ತೀಚಿಗಿನ ಅಧ್ಯಯನದ ಪ್ರಕಾರ ಸ್ಯಾಚುರೇಟೆಡ್ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಗೋಮಾಂಸ ಮತ್ತು ರೋಗದ ನಡುವೆ ಸಂಬಂಧವನ್ನು ಸೂಚಿಸುತ್ತದೆ, ಆದರೆ ವಾಸ್ತವವಾಗಿ, ನಿಮ್ಮ ಕರುಳಿನ ಸೂಕ್ಷ್ಮಜೀವಿಗಳನ್ನು ವಿಭಜಿಸುವ ಕಾರ್ನಿಟೈನ್ ಎಂಬ ಸಂಯುಕ್ತ ಮಾಂಸದಲ್ಲಿ ಕಂಡುಬರುತ್ತಿದ್ದು ಇದು ಟ್ರಿಮ್ -ಎಥಲಮೈನ್ - ಎನ್- ಆಕ್ಸಿಡ್ ಉತ್ಪಾದನೆ ಮಾಡುವುದರ ಜೊತೆಗೆ ಎಥೆರೋಜೆನಿಕ್ (ಅಪಧಮನಿಯ ಕಾಠಿಣ್ಯ) ದೊಂದಿಗೆ ಸಂಬಂಧ ಹೊಂದಿದೆ.

3.ದೊಡ್ಡ ಕರುಳಿನ ಕ್ಯಾನ್ಸರ್ ನ ಅಪಾಯ

3.ದೊಡ್ಡ ಕರುಳಿನ ಕ್ಯಾನ್ಸರ್ ನ ಅಪಾಯ

ಅನೇಕ ಅಧ್ಯಯನಗಳು ಗೋಮಾಂಸದಂತಹ ಕೆಂಪು ಮಾಂಸಗಳು ಕರುಳಿನ ಕ್ಯಾನ್ಸರ್ ಉಂಟುಮಾಡುವ ಸಾಮರ್ಥ್ಯ ಹೊಂದಿರುತ್ತವೆ ಎನ್ನುವುದಕ್ಕೆ ಸಾಕ್ಷ್ಯಾಧಾರಗಳನ್ನು ಒದಗಿಸಿವೆ. ಮತ್ತು 50 ಮತ್ತು 74 ವಯಸ್ಸಿನ 148.610 ಸಹಭಾಗಿಗಳನ್ನಿಟ್ಟು ಅಮೇರಿಕಾದ ಅಧ್ಯಯನ ಸಾಬೀತುಪಡಿಸಿರುವುದು ಏನೆಂದರೆ ರೆಡ್ ಮತ್ತು ಸಂಸ್ಕರಿಸಿದ ಮಾಂಸದ ಹೆಚ್ಚಿನ ಬಳಕೆಯು ಗಣನೀಯವಾಗಿ ಕೊಲೆಸ್ಟ್ರಾಲ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.

4.ಮಧುಮೇಹ

4.ಮಧುಮೇಹ

ಇತ್ತೀಚಿನ ಸಂಶೋಧನೆಯ ಪ್ರಕಾರ , ಗೋಮಾಂಸ ಮತ್ತು ಹಂದಿಯಂತಹ ಕೆಂಪು ಮಾಂಸ ಸೇವನೆ ಎರಡನೆ ವಿಧದ ಮಧುಮೇಹದ ಅಪಾಯವನ್ನು ಉಂಟುಮಾಡುತ್ತದೆ. ಅಧ್ಯಯನದ ಪ್ರಕಾರ ಪ್ರತಿ ವಾರ 50 ರಷ್ಟು ಮಧುಮೇಹ ಪ್ರಮಾಣ ಹೆಚ್ಚಾಗುತ್ತದೆ. ನಿಯಮಿತವಾಗಿ ಅಥವಾ ಹವ್ಯಾಸವಾಗಿ ಕೆಂಪು ಮಾಂಸ ಸೇವಿಸುವರಿಗೆ ಇದು ಖಂಡಿತವಾಗಿಯೂ ಅಪಾಯಕಾರಿ.

5.ಸಂಸ್ಕರಣ

5.ಸಂಸ್ಕರಣ

ಮಾಂಸದ ಉದ್ಯಮ ಬೆಳೆಯಲು ಗೋಮಾಂಸ ಅಥವಾ ಹಂದಿ ಮಾಂಸ ಸಂಸ್ಕರಣ ಕಾರಣವಾಗಿದೆ. ಪ್ರಾಣಿಗಳು ವೇಗವಾಗಿ ಬೆಳೆಯಲು ಹಾರ್ಮೋನಿನ ಚುಚ್ಚುಮದ್ದುಗಳನ್ನು ನೀಡಲಾಗುತ್ತದೆ. ಅವರು ನಂತರ ವಿವಿಧ ಅಗತ್ಯಗಳಿಗೆ ತಕ್ಕಂತೆಕೆಲವು ಉತ್ತಮ ಮಾಂಸ ಅಂತೆಯೇ ಕೆಟ್ಟ ಮಾಂಸಗಳ ಮಿಶ್ರಣವನ್ನು ಸಂಸ್ಕರಿಸಲಾಗುತ್ತದೆ.

6.ಬೊಜ್ಜು

6.ಬೊಜ್ಜು

ಗೋಮಾಂಸದಂತಹ ಕೆಂಪು ಮಾಂಸವನ್ನು ಸೇವಿಸುವ ಗ್ರಾಹಕರಲ್ಲಿ ಸ್ಥೂಲಕಾಯ ಸಾಮಾನ್ಯವಾಗಿರುತ್ತದೆ. ಹೊಟ್ಟೆ ಪದರಗಳು ಇನ್ನಷ್ಟು ಕೊಬ್ಬಿ ಉಬ್ಬಿಕೊಳ್ಳುತ್ತವೆ. ಗೋಮಾಂಸ ಸೇವನೆಯಿಂದ ಮಕ್ಕಳಲ್ಲಿಯೂ ಕೂಡ ಕಾಣಿಸಿಕೊಳ್ಳುವ ಬೊಜ್ಜು ಸಮಸ್ಯೆಯಿಂದಾಗಿ ಅವರ ಕಡಿಮೆ ದೈಹಿಕ ಚಟುವಟಿಕೆಗಳು ಕಡಿಮೆಯಾಗಿವೆ.

English summary

Why beef is not good for men?

Even though there are lots of benefits to consuming red meat such as beef, there are even more reasons to avoid them to a large extent. The ill effects of consuming too much of beef are staggering.
X
Desktop Bottom Promotion