For Quick Alerts
ALLOW NOTIFICATIONS  
For Daily Alerts

ನಿಮ್ಮಲ್ಲಿ ಕಂಡುಬರುವ ಒತ್ತಡಕ್ಕೆ ಕಾರಣಗಳೇನು?

By Arpitha Rao
|

ನಿಮ್ಮ ದೇಹಕ್ಕೆ ಎಷ್ಟೇ ಒತ್ತಡವನ್ನು ಸಹಿಸಿಕೊಳ್ಳುವ ಶಕ್ತಿ ಇದ್ದರೂ ಕೂಡ ನಮ್ಮ ಬ್ಯುಸಿ ಜೀವನ ಶೈಲಿಯಲ್ಲಿ ಒತ್ತಡ ಅನುಭವಿಸುವುದು ಸರ್ವೇ ಸಾಮಾನ್ಯ.ಆದರೂ ಕೂಡ ನಮ್ಮಲ್ಲಿ ಕೆಲವೇ ಕೆಲವು ಜನರು ಇದನ್ನು ಒಪ್ಪಿಕೊಳ್ಳುತ್ತಾರೆ. ಕೆಲವು ಜನರಿಗೆ ತನ್ನ ಜೀವನದಲ್ಲಿ ಏನೇ ಬಂದರೂ ಸುಲಭವಾಗಿ ಪರಿಹರಿಸಿಕೊಳ್ಳುವ ಗುಣವಿರುತ್ತದೆ. ಆದರೆ ಹೆಚ್ಚಿನ ಜನರು ತಮ್ಮ ಒತ್ತಡವನ್ನು ಬೇರೆಯವರಿಗೆ ತೋರಿಸಿಕೊಳ್ಳುವುದಿಲ್ಲ.

ಕೆಲವೊಮ್ಮೆ ವಿನಾಕಾರಣ ಒತ್ತಡ ಆವರಿಸಿಕೊಂಡುಬಿಡುತ್ತದೆ. ದಿನನಿತ್ಯ ಒತ್ತಡವನ್ನು ಅನುಭವಿಸುವುದರಿಂದ ಆರೋಗ್ಯ ಹದಗೆಡುವುದು ಸಾಮಾನ್ಯ. ಆದರೆ ಕೆಲವೊಮ್ಮೆ ನಮಗೆ ಕಂಡು ಬರುತ್ತಿರುವ ಸಮಸ್ಯೆಗಳು ಒತ್ತಡದ ಕಾರಣದಿಂದಾಗಿ ಎಂಬುದೇ ನಮ್ಮ ಗಮನಕ್ಕೆ ಬಂದಿರುವುದಿಲ್ಲ. ನಿಮಗೆ ಈ ಕೆಳಗೆ ನೀಡಿರುವ ಯಾವುದಾದರೂ ಸಮಸ್ಯೆಗಳು ಕಂಡು ಬಂದಲ್ಲಿ ಒತ್ತಡವೂ ಕೂಡ ಇದಕ್ಕೆ ಕಾರಣವಾಗಿರಬಹುದು ಎಂಬುದನ್ನು ತಿಳಿದುಕೊಳ್ಳಿ ಮತ್ತು ಮೊದಲು ಒತ್ತಡವನ್ನು ಹೋಗಲಾಡಿಸಿಕೊಳ್ಳಿ.

ನೀವು ನಿಮ್ಮ ಒತ್ತಡವನ್ನು ಮರೆಮಾಚಿ ಬೇರೆಯವರಲ್ಲಿ ನಾನು ಫೈನ್ ಎಂದರೂ ಕೂಡ ನಿಮಗೆ ಒತ್ತಡ ಇದೆ ಎನ್ನುವುದನ್ನು ಖಂಡಿತ ಗಮನಿಸಿ ಪರಿಹರಿಸಿಕೊಳ್ಳುವುದು ಒಳಿತು.

ತೂಕ ಹೆಚ್ಚುವಿಕೆ:

ತೂಕ ಹೆಚ್ಚುವಿಕೆ:

ನೀವು ತೂಕ ಹೆಚ್ಚಬಾರದು ಎಂದರೆ ಒತ್ತಡ ರಹಿತವಾದ ಜೀವನ ನಡೆಸಲೇಬೇಕು.ನಿಮಗೆ ಅತಿ ಹೆಚ್ಚು ಒತ್ತಡ ಇದ್ದಲ್ಲಿ ನೀವು ತೂಕ ಹೆಚ್ಚುವ ಸಾಧ್ಯತೆ ಹೆಚ್ಚು.ಕೆಲವು ಜನರು ಒತ್ತಡದಲ್ಲಿದ್ದಾಗ ಹೆಚ್ಚು ತಿನ್ನುತ್ತಾರೆ ಇದರಿಂದ ಕ್ಯಾಲೋರಿ ಕಡಿಮೆ ಆಗುವ ಬದಲು ದಿನದಿಂದ ದಿನಕ್ಕೆ ಏರುತ್ತಾ ಹೋಗುತ್ತದೆ.ತೂಕ ಕಡಿಮೆ ಮಾಡಿಕೊಳ್ಳಲು ನಮ್ಮ ಮೆಗಾ ಮಾರ್ಗದರ್ಶಿಯನ್ನು ಅನುಸರಿಸಿ.

ಸ್ನಾಯು ಸೆಳೆತ:

ಸ್ನಾಯು ಸೆಳೆತ:

ಒತ್ತಡದಿಂದ ನಿಮ್ಮಲ್ಲಿ ಬಿಡುಗಡೆಯಾಗುವ ಹಾರ್ಮೋನ್ ನಿಂದ ಕೇವಲ ಹೃದಯ ಬಡಿತ ಮತ್ತು ರಕ್ತದೊತ್ತಡ ಹೆಚ್ಚುವುದು ಮಾತ್ರವಲ್ಲ, ಸ್ನಾಯುಗಳ ಹಿಡಿತ ಕೂಡ ಹೆಚ್ಚುತ್ತದೆ.ಕೆಲಸದ ಸಮಯದಲ್ಲಿ ಕುಳಿತುಕೊಳ್ಳುವ ಆಸನದ ವ್ಯತ್ಯಾಸದಿಂದ ಕಂಡು ಬರುವ ಸ್ನಾಯು ನೋವುಗಳು ಒತ್ತಡದಿಂದಾಗಿ ಇನ್ನಷ್ಟು ಹೆಚ್ಚುತ್ತದೆ.

ಹೊಟ್ಟೆ ನೋವು:

ಹೊಟ್ಟೆ ನೋವು:

ನಿಮ್ಮ ಹೊಟ್ಟೆಯೊಳಗೆ ಚಿಟ್ಟೆ ಬಿಟ್ಟಂತೆ ಆಗುವುದು ಕೇವಲ ಆತಂಕದಿಂದ ಮಾತ್ರವಲ್ಲ,ಅದು ಒತ್ತಡದ ಲಕ್ಷಣವೂ ಕೂಡ ಹೌದು.ಹೊಟ್ಟೆ ಮತ್ತು ಮೆದುಳಿಗೆ ತುಂಬಾ ಹತ್ತಿರದ ಸಂಬಂಧವಿದೆ ಎಂದು ಅಧ್ಯಯನವು ತಿಳಿಸಿಕೊಟ್ಟಿದೆ.ಹಾರ್ವರ್ಡ್ ವೈದ್ಯಕೀಯ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ ನಿಮಗೆ ಮಲಬದ್ಧತೆ,ಹೊಟ್ಟೆಯಲ್ಲಿ ವಾಯು ಇನ್ನಿತರ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಇದ್ದಲ್ಲಿ ಒತ್ತಡದಿಂದ ಅದು ಇನ್ನಷ್ಟು ಹೆಚ್ಚಬಹುದು.

ಕೂದಲು ಉದುರುವಿಕೆ:

ಕೂದಲು ಉದುರುವಿಕೆ:

ತೀವ್ರವಾದ ಒತ್ತಡ ಕೂಡ ಸೆಕ್ಸ್ ಹಾರ್ಮೋನ್‌ಗಳ ಬಿಡುಗಡೆಗೆ ಕಾರಣವಾಗುತ್ತದೆ.ಇದು ನಿಮ್ಮ ಕೂದಲಿನ ಮೇಲೆ ಪರಿಣಾಮ ಬೀರಿ ಕೂದಲು ಉದುರುವಿಕೆಗೂ ಕೂಡ ಕಾರಣವಾಗುತ್ತದೆ.ಒತ್ತಡಯುಕ್ತ ಘಟನೆ ನಡೆದರೆ ಅಥವಾ ನೀವು ಒತ್ತಡವನ್ನು ಅನುಭವಿಸುತ್ತಿದ್ದರೆ ಈ ಕೂದಲು ಉದುರುವುದು 3-6 ತಿಂಗಳುಗಳವರೆಗೆ ಮುಂದುವರೆಯಬಹುದು.

ಮರೆಯುವುದು/ಜ್ಞಾಪಕ ಶಕ್ತಿ ಕೊರತೆ:

ಮರೆಯುವುದು/ಜ್ಞಾಪಕ ಶಕ್ತಿ ಕೊರತೆ:

ನಿಮಗೆ ದಿನನಿತ್ಯದ ಕೆಲವು ವಿಷಯಗಳು ಮರೆತು ಹೋಗುತ್ತದೆ ಎಂದರೆ ನೀವು ಖಂಡಿತವಾಗಿ ಯಾವುದೋ ಒತ್ತಡವನ್ನು ಅನುಭವಿಸುತ್ತಿದ್ದೀರ ಎಂದೇ ಅರ್ಥ.ತೀವ್ರ ಒತ್ತಡ ಸಮಯದಲ್ಲಿ ಬಿಡುಗಡೆಯಾಗುವ ಕಾರ್ಟಿಸಾಲ್ ಎಂಬ ಹಾರ್ಮೋನ್ ಮೆದುಳಿಗೆ ಮರೆಯುವಂತೆ ಮಾಡುವ ಹಿಪೋಕ್ಯಾಂಪಸ್ ಉಂಟು ಮಾಡಬಹುದು.ನಿಮ್ಮ ಒತ್ತಡಕ್ಕೆ ಕಾರಣ ಏನು ಎಂಬುದನ್ನು ತಿಳಿದುಕೊಳ್ಳಿ ಮತ್ತು ಅದಕ್ಕೆ ಪರಿಹಾರ ಕಂಡು ಕೊಳ್ಳಿ.

ಮುಟ್ಟಿನ ತೊಂದರೆಗಳು:

ಮುಟ್ಟಿನ ತೊಂದರೆಗಳು:

ಮಹಿಳೆಯರಲ್ಲಿ ಒತ್ತಡ ಹೆಚ್ಚಿನ ಪ್ರಭಾವ ಬೀರಿ ಪಿಟ್ಯುಟರಿ ಗ್ರಂಥಿ ಮೇಲೆ ಹೆಚ್ಚು ಒತ್ತಡ ನೀಡುತ್ತದೆ.ಇದು ಮಹಿಳೆಯರಲ್ಲಿ ಮುಟ್ಟು,ಓವ್ಯುಲೆಶನ್ ಮುಂತಾದವುಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ತರುತ್ತದೆ.

ಕಣ್ಣು ಹೆಚ್ಚು ಮುಚ್ಚುವುದು/ಕುಣಿಯುವುದು :

ಕಣ್ಣು ಹೆಚ್ಚು ಮುಚ್ಚುವುದು/ಕುಣಿಯುವುದು :

ಒತ್ತಡಕ್ಕೂ ಮತ್ತು ಕಣ್ಣು ಕುಣಿಯುವುದಕ್ಕೂ ತುಂಬಾ ಹತ್ತಿರದ ಸಂಬಂಧವಿದೆ ಎನ್ನಲಾಗುತ್ತದೆ.ನಿಮಗೆ ಈ ರೀತಿ ಆದಲ್ಲಿ ಒಂದು ೫ ನಿಮಿಷ ಕಣ್ಣನ್ನು ಮುಚ್ಚಿಕೊಂಡು ಮನಸ್ಸಿನಲ್ಲಿರುವುದನ್ನು ಹೊರಹಾಕುವ ಪ್ರಯತ್ನ ಮಾಡಿ.ಇದೇ ರೀತಿ ಮಾಡುವುದರಿಂದ ಕಣ್ಣು ಕುಣಿಯುವುದನ್ನು ನಿಲ್ಲಿಸಬಹುದು.

ಮೊಡವೆಗಳು:

ಮೊಡವೆಗಳು:

ಅತಿಯಾದ ಒತ್ತಡ ದೇಹದ ಎಲ್ಲಾ ಭಾಗಗಳಿಗೆ ಪರಿಣಾಮ ಬೀರುತ್ತದೆ.ನಿಮ್ಮ ತ್ವಚೆ ಕೂಡ ಇದಕ್ಕೆ ಹೊರತಾಗಿಲ್ಲ.ಅಧಿಕ ಪ್ರಮಾಣದ ಅನ್ದ್ರೋಜನ್ ಇಂದಾಗಿ ಚರ್ಮ ಒಡೆಯಲು ಪ್ರಾರಂಭಿಸುತ್ತದೆ.ನೀವು ಹೆಚ್ಚು ಒತ್ತಡ ಅನುಭವಿಸಿದಾಗ ಅದು ತ್ವಚೆಯಲ್ಲಿ ಮೊಡವೆಯನ್ನು ತರುತ್ತದೆ ಮತ್ತು ನೀವು ಸಂಪೂರ್ಣವಾಗಿ ಒತ್ತಡ ನಿವಾರಿಸಿಕೊಳ್ಳುವವರೆಗೆ ಮೊಡವೆಗಳು ಹೋಗುವುದಿಲ್ಲ.

English summary

Which of these 10 symptoms of stress do you have?

Although your body has a strong ‘fight -or-flight’ response to tackle acute stress, it cannot help you much in chronic stress. We all get stressed due to our busy lifestyle. Yet only few of us realize it or to be specific, accept it.
Story first published: Friday, March 7, 2014, 15:11 [IST]
X
Desktop Bottom Promotion