For Quick Alerts
ALLOW NOTIFICATIONS  
For Daily Alerts

ರಾತ್ರಿಯ ಹೊತ್ತು ಕೆಮ್ಮು ಬರಲು ಕಾರಣಗಳೇನು?

By Super
|

ಕೆಮ್ಮುವುದಕ್ಕೆ ಬಹಳಷ್ಟು ಕಾರಣಗಳಿವೆ. "ಕೆಮ್ಮು ಒಂದು ಸಾಮಾನ್ಯ ಲಕ್ಷಣ" ಎಂದು ಹಿರಿಯರು ಹೇಳುತ್ತಾರೆ. ನೀವು ಶೀತ ಹೊಂದಿದ್ದರೆ ಅದಕ್ಕೆ ಕಾರಣ ಪೋಸ್ಟ್ ನೇಸಲ್ (ಮೂಗಿನ ಒಳಗೆ ಸಾಧಾರಣವಾಗಿ ಉತ್ಪನ್ನವಾಗುವ ಲೋಳೆಯಂತಿರುವ ಸಿಂಬಳವು ಮೂಗು ಮತ್ತು ಗಂಟಲಿನ ಮೂಲಕ ನಮ್ಮ ದೇಹದೊಳಕ್ಕೆ ಹೋಗುತ್ತಿರುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆರೋಗ್ಯಭರಿತ ಸಿಹಿ ಆಲೂಗಡ್ಡೆ ಸೇವನೆಯ ಪ್ರಯೋಜನ

ಇದರಲ್ಲಿ ಒಳ್ಳೆಯ ಬ್ಯಾಕ್ಟೀರಿಯ ಇದ್ದು ಹೊರಗಡೆಯಿಂದ ಬರುವ ಕೆಟ್ಟ ಬ್ಯಾಕ್ಟೀರಿಯಾ‍ದಿಂದ ನಮ್ಮನ್ನು ರಕ್ಷಿಸುತ್ತಿರುತ್ತದೆ. ಈ ಸಿಂಬಳವು ಹೆಚ್ಚಾಗಿ ಉತ್ಪನ್ನವಾಗಿ ಮೂಗಿನ ಮೂಲಕ ಹೊರಗಡೆ ಬರುತ್ತದೆ. ಇದಕ್ಕೆ ಪೋಸ್ಟ್ ನೇಸಲ್ - (Postnasal) ಎನ್ನುತ್ತಾರೆ. ಇಂತಹ ಪರಿಸ್ಥಿತಿಗೆ ಕಟ್ಟಿರುವ ಮೂಗನ್ನು ಸುಧಾರಿಸಲು ಔಷಧಿಯು ನೆರವಾಗಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಜೀರ್ಣಕ್ರಿಯೆ ಸುಧಾರಿಸುವ ಉತ್ತಮ ಆಹಾರಗಳು

ನಿಮ್ಮ ಕೆಮ್ಮಿನ ಮೂಲಕ ಸಿಂಬಳ ಹೊರಗೆ ಬರುತ್ತಿದ್ದರೆ ನಿಮಗೆ ಬ್ರಾಂಕೈಟಿಸ್, ನಾಯಿ ಕೆಮ್ಮು , ಅಥವಾ ನ್ಯುಮೋನಿಯಾ ಮುಂತಾದ ಸೋಂಕು ಹೊಂದಿರಬಹುದು. ಇದು ಒಂದು ವಾರದಲ್ಲಿ ಗುಣಮುಖವಾಗದಿದ್ದಲ್ಲಿ ನೀವು ವೈದ್ಯರನ್ನು ಭೇಟಿ ಮಾಡಬೇಕು. ಜೊತೆಗೆ ಅಧಿಕ ಜ್ವರ ಮತ್ತು ಇತರ ಲಕ್ಷಣಗಳಿದ್ದಲ್ಲಿ ತಕ್ಷಣವೇ ವೈದ್ಯರನ್ನು ಕಾಣಿರಿ.

ನಿಮ್ಮ ರಾತ್ರಿಯ ಹೊತ್ತಿನ ಕೆಮ್ಮು ಹೊರತುಪಡಿಸಿ ನೀವು ಆರೋಗ್ಯದಿಂದ್ದರೆ ನಿಮ್ಮ ಮನೆಯಲ್ಲಿಯೇ ಕೆಮ್ಮಿನ ಲಕ್ಷಣಗಳಮೇಲೆ ಸುಧಾರಣೆತರಲು ಪ್ರಯತ್ನಿಸಿ ನಂತರ ನಿಮ್ಮ ವೈದ್ಯರ ಸೂಚನೆಗಳನ್ನು ಪಾಲಿಸಿ.
ರಾತ್ರಿಯಹೊತ್ತು ಬರುವ ಕೆಮ್ಮಿನ ಹೆಚ್ಚು ಸಾಮಾನ್ಯವಾದ ಕೆಲವು ಕಾರಣಗಳು ಹೀಗಿವೆ:

ಎದೆಯುರಿ

ಎದೆಯುರಿ

ನಿಮಗೆ ಎದೆಯುರಿ ಇದ್ದು ಮಲಗಿರುವಾಗ ಹೊಟ್ಟೆಯಿಂದ ನಿಮ್ಮ ಅನ್ನನಾಳಕ್ಕೆ ತಲುಪಿ ಕೆಮ್ಮು ಬರುವ ಸಾಧ್ಯತೆಯಿದೆ. "ಒಂದು ಸಣ್ಣ ಪ್ರಮ್ಮಣದಲ್ಲಿ ಹೊಟ್ಟೆಯ ಆಮ್ಲವು ಗಂಟಲಿನ ತಳಭಾಗಕ್ಕೆ ಸೋರಿಕೆಯಾದಲ್ಲಿ ಸಾಕಷ್ಟು ಕಿರಿಕಿರಿ ಉಂಟುಮಾಡಿ ಕೆಮ್ಮಲು ಕಾರಣವಾಗುತ್ತದೆ," ಎಂದು ಅನುಭವಿಗಳ ಅಭಿಪ್ರಾಯ. ಇಂತಹ ಸಮಯದಲ್ಲಿ ಸಾಧರಣವಾಗಿ ವೈದ್ಯಕೀಯ ಅಂಗಡಿಯಲ್ಲಿ ಎದೆಯುರಿಗೆ ದೊರೆಯುವ ಔಷಧಿಯನ್ನು ತೆಗೆದುಕೊಂಡ ನಂತರ ಔಷಧಿಯಿಂದ ಉಪಯೋಗವಾಗದಿದ್ದಲ್ಲಿ ವೈದ್ಯರನ್ನು ಭೇಟಿ ಮಾಡಿ.

ಅಲರ್ಜಿಗಳಿಗೆ

ಅಲರ್ಜಿಗಳಿಗೆ

ನಿಮಗೆ ರಾತ್ರಿಯವೇಳೆ ಮಾತ್ರ ಕೆಮ್ಮು ಬರುತ್ತಿದ್ದರೆ ನಿಮ್ಮ ಮನೆಯಲ್ಲೇ ಇರುವ ಯಾವುದೋ ವಸ್ತುವಿನ ಅಲರ್ಜಿ ಇರಬಹುದು ಉದಾಹರಣೆಗೆ ಧೂಳು ಕ್ರಿಮಿಗಳು. "ನೀವು ಉಪಯೋಗಿಸುವ ದಿಂಬು, ಬೆಡ್ ಶೀಟ್ ಮತ್ತು ಕಂಬಳಿಗಳಲ್ಲಿ ಧೂಳು ಕ್ರಿಮಿಗಳು ಸಾಧಾರಣವಾಗಿರುತ್ತವೆ" ಎಂದು ಅನುಭವಿ ವ್ಯಕ್ತಿಗಳ ಅಭಿಪ್ರಾಯ. ಆದ್ದರಿಂದ ಹಾಸಿಗೆಬಟ್ಟೆಗಳನ್ನು ವಾರಕೊಮ್ಮೆಯಾದರೂ ಬಿಸಿನೀರಿನಲ್ಲಿ ತೊಳೆದು ನೋಡಿ, ಹಾಗೂ ನಿಮಗೆ ಇನ್ನೂ ಅಲರ್ಜಿಯಿದ್ದರೆ ಅಂಗಡಿಯಲ್ಲಿ ಅಲರ್ಜಿಗೆ ದೊರೆಯುವ ಔಷಧಿಯನ್ನು ತೆಗೆದುಕೊಳ್ಳಿ. ನೀವು ಬೇಕಿದ್ದಲ್ಲಿ ವೈದ್ಯರ ಬಳಿಗೆ ಹೋಗಿ ಅಲರ್ಜಿ ಪರೀಕ್ಷೆಯನ್ನು ಮಾಡಿಸಿಕೊಳ್ಳಿ.

ಉಬ್ಬಸ ಕೆಮ್ಮು (ಆಸ್ತಮಾ)

ಉಬ್ಬಸ ಕೆಮ್ಮು (ಆಸ್ತಮಾ)

ನಿಮ್ಮ ಕೆಮ್ಮು ಇನ್ನೂ ಉಲ್ಬಣಗೊಂಡಿದ್ದರೆ ನಿಮ್ಮ ಸುತ್ತಲಿರುವ ಪ್ರಚೋದಕಗಳ ಮೇಲೆ ಪರಿಶೀಲಿಸಿ. "ಇದು ನಿಮ್ಮ ಹಾಸಿಗೆ ಧೂಳು ಇರಬಹುದು ಅಥವಾ ನಿಮ್ಮ ಮನೆಯ ಬೆಕ್ಕು ನಿಮ್ಮ ತಲೆ ದಿಂಬಿನಮೇಲೆ ದಿನವೆಲ್ಲಾ ಮಲಿಗಿ ಹೋಗಿರಬಹುದು," ಎಂದು ಡಾಕ್ಟರ್ ಕೂಕ್ ಹೇಳುತ್ತಾರೆ.

ಕೆಲವು ರಕ್ತದ ಒತ್ತಡ ತಡೆಯುವ ಔಷಧಿಗಳು.

ಕೆಲವು ರಕ್ತದ ಒತ್ತಡ ತಡೆಯುವ ಔಷಧಿಗಳು.

ಏಸ್ (ACE) ಪ್ರತಿರೋಧಕಗಳು ನೀವು ಉಪಯೋಗಿಸುತ್ತದ್ದಲ್ಲಿ ಕೆಲವರಿಗೆ ಕೆಮ್ಮಿಗೆ ಕಾರಣವಾಗಿರಬಹುದು. ಹಾಗಿದ್ದಲ್ಲಿ ವೈದ್ಯರ ಸಲಹೆ ಪಡೆದು ನಿಮ್ಮ ರಕ್ತದೊತ್ತಡದ ಔಷಧಿಯನ್ನು ಬದಲಿಸುವ ಪ್ರಯತ್ನ ಮಾಡಬೇಕು. ನಿಮ್ಮ ವೈದ್ಯರ ಸಲಹೆ ಪಡೆಯದೇ ಯಾವ ಔಷಧಿಯನ್ನು ನಿಲ್ಲಿಸುವ ಪ್ರಯತ್ನ ಮಾಡಬೇಡಿ.

ಧೂಮಪಾನ

ಧೂಮಪಾನ

ಧೂಮಪಾನದಿಂದಲೂ ನಿಮಗೆ ಕೆಮ್ಮು ಬರುವ ಸಾಧ್ಯತೆಯಿದೆ. ಧೂಮಪಾನಮಾಡುವುದನ್ನು ನಿಲ್ಲಿಸಲು ಪ್ರಯತ್ನಮಾಡಿ, ಇಲ್ಲವೇ ನಿಮ್ಮ ವೈದ್ಯರ ಸಹಾಯ ಕೋರಿ. ಹಾಗೆಯೇ ಇತರರ ಧೂಮಪಾನದ ಹೊಗೆಯಿಂದ ದೂರವಿರಿ ಮತ್ತು ಆ ಹೊಗೆಯಿಂದ ತಪ್ಪಿಸಿಕೊಳ್ಳಿ.

English summary

What Could Cause a Nighttime Cough?

There are many reasons you could be coughing. "Cough is a really common symptom," Senior says. If you have a cold, it could be postnasal drip. A decongestant may help.
X
Desktop Bottom Promotion