For Quick Alerts
ALLOW NOTIFICATIONS  
For Daily Alerts

ಚಯಾಪಚಯ ಕ್ರಿಯೆ ಹೆಚ್ಚಿಸಲು ಪರಿಣಾಮಕಾರಿ ಸಲಹೆಗಳು

By Super
|

ನೀವು ಎಷ್ಟು ಕ್ಯಾಲೋರಿ ತಿನ್ನುತ್ತೀರಿ ಮತ್ತು ವ್ಯಾಯಾಮದ ಮೂಲಕ ಎಷ್ಟು ಕ್ಯಾಲೋರಿ ಕಡಿಮೆ ಮಾಡಿಕೊಳ್ಳುತ್ತೀರಿ ಎಂಬುದನ್ನು ಈ ಕ್ರಿಯೆಯಿಂದ ತಿಳಿಯಬಹುದು. ಚಯಾಪಚಯ ಕ್ರಿಯೆ ದೇಹದ ಕಾರ್ಬೋಹೈಡ್ರೇಟ್, ಪ್ರೋಟಿನ್ ಮತ್ತು ಕೊಬ್ಬನ್ನು ಕರಗಿಸಿ ನಿಮ್ಮ ದೇಹಕ್ಕೆ ಶಕ್ತಿ ಒದಗಿಸುತ್ತದೆ.

ನೀವು ತಾರುಣ್ಯದಲ್ಲಿದ್ದಾಗ ಸ್ನಾಯುಗಳು ಶಕ್ತಿಯನ್ನು ಕೂಡಿ ತೂಕವನ್ನು ಹೆಚ್ಚಿಸುವುದನ್ನು ತಡೆಯುತ್ತದೆ. ಆದರೆ ನೀವು ಮೂವತ್ತು - ನಲವತ್ತರ ಬಳಿ ಇದ್ದಾಗ ಚಯಾಪಚಯ ಕ್ರಿಯೆ ತಾನಾಗಿಯೇ ಕಡಿಮೆಯಾಗುತ್ತದೆ. ಆದ್ದರಿಂದ ಕೊಬ್ಬು ಸೇರಿಕೊಂಡು ನಿಮ್ಮ ದೇಹ ತೂಕ ಹೆಚ್ಚುತ್ತಾ ಹೋಗುತ್ತದೆ. ಸಿಂಪ್ಲಿ ಹೆಲ್ತ್ ನ ಆಹಾರ ತಜ್ಞೆ ದೀಪಾಲಿ ಚಯಾಪಚಯ ಕ್ರಿಯೆ ಹೆಚ್ಚಿಸಿಕೊಂಡು ನಿಮ್ಮ ತೂಕ ಕಡಿಮೆ ಮಾಡಿಕೊಳ್ಳಿ ಎಂಬುದರ ಬಗ್ಗೆ ಸರಳ ಸಲಹೆ ನೀಡಿದ್ದಾರೆ.

ಕ್ಯಾನ್ಸರನ್ನು ನಿಯಂತ್ರಿಸುವ 10 ಅದ್ಭುತವಾದ ತರಕಾರಿಗಳು

ಚಯಾಪಚಯ ಕ್ರಿಯೆಯನ್ನು ಹೇಗೆ ಹೆಚ್ಚಿಸಬೇಕು?

ಚಯಾಪಚಯ ಕ್ರಿಯೆಯನ್ನು ಹೇಗೆ ಹೆಚ್ಚಿಸಬೇಕು?

ನೀವು ದಿನನಿತ್ಯ ಸೇವಿಸುವ ಕ್ಯಾಲೋರಿಯನ್ನು ತಕ್ಷಣ ಕಡಿಮೆ ಮಾಡಬೇಡಿ ಇದರಿಂದ ಚಯಾಪಚಯ ಕ್ರಿಯೆ ಕುಂಠಿತವಾಗುತ್ತದೆ. ಚಯಾಪಚಯ ಕ್ರಿಯೆ ಹೆಚ್ಚಿಸುವ ಉತ್ತಮ ವಿಧಾನವೆಂದರೆ ಸ್ವಲ್ಪ ಸ್ವಲ್ಪ ಕ್ಯಾಲೋರಿ ಕಡಿಮೆ ಮಾಡುತ್ತಾ ಬರುವುದು.

ಪ್ರೋಟೀನ್ ಅಧಿಕ ಇರುವ ಆಹಾರ ಸೇವಿಸಿ

ಪ್ರೋಟೀನ್ ಅಧಿಕ ಇರುವ ಆಹಾರ ಸೇವಿಸಿ

ನಿಮ್ಮ ಆಹಾರದಲ್ಲಿ ಹೆಚ್ಚು ಪ್ರೋಟೀನ್ ಅನ್ನು ಬಳಸಿ (ನಿಮಗೆ ಕಿಡ್ನಿ ತೊಂದರೆ ಇರದಿದ್ದಲ್ಲಿ). ಪ್ರೋಟೀನ್ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಪ್ರೋಟೀನ್‌ ನಿಮ್ಮ ದೇಹದಲ್ಲಿರುವ ಕ್ಯಾಲೋರಿಯನ್ನು ನಿಯಂತ್ರಿಸಲು ಸಹಕಾರಿಯಾಗಿದೆ.

ಬೆಳಗಿ ಜಾವ ಉಪವಾಸ ಮಾಡಬೇಡಿ

ಬೆಳಗಿ ಜಾವ ಉಪವಾಸ ಮಾಡಬೇಡಿ

ಅತಿಯಾದ ಹಸಿವಾಗುವಿಕೆಯನ್ನು ತಡೆಯಲು ಬೆಳಗೆ ಎದ್ದ ಒಂದು ಗಂಟೆಯೊಳಗೆ ತಿನ್ನಬೇಕು. ಏನನ್ನಾದರೂ ತಿನ್ನುವುದರಿಂದ ನಿಮ್ಮ ಮೂಡ್ ಮತ್ತು ಏಕಾಗ್ರತೆ ಚೆನ್ನಾಗಿರುತ್ತದೆ.

ಆರೋಗ್ಯಯುತವಾದ ಆಹಾರ ಸೇವಿಸಿ

ಆರೋಗ್ಯಯುತವಾದ ಆಹಾರ ಸೇವಿಸಿ

ದಿನದಲ್ಲಿ ಮೂರು ಬಾರಿ ಆಹಾರ ತೆಗೆದುಕೊಳ್ಳಿ ಮತ್ತು ಎರಡು ಬಾರಿ ಆರೋಗ್ಯಯುತವಾದ ಸ್ನ್ಯಾಕ್ಸ್ ಸೇವಿಸಿ. ಈ ರೀತಿ ಮಾಡುವುದರಿಂದ ಸದಾ ಹೊಟ್ಟೆ ತುಂಬಿರುತ್ತದೆ ಮತ್ತು ಹೆಚ್ಚು ತಿನ್ನುವುದನ್ನು ತಡೆಯಬಹುದು.

ಹಾಲು ಮತ್ತು ಸಕ್ಕರೆ ಬಳಸುವಾಗ ಎಚ್ಚರಿಕೆಯಿಂದಿರಿ

ಹಾಲು ಮತ್ತು ಸಕ್ಕರೆ ಬಳಸುವಾಗ ಎಚ್ಚರಿಕೆಯಿಂದಿರಿ

ನೀವು ಕಾಫಿ ಅಥವಾ ಬ್ಲಾಕ್ ಟೀಯನ್ನು ತೂಕ ಕಡಿಮೆ ಮಾಡಿಕೊಳ್ಳಲು ಬಳಸಬಹುದು. ಇದರಲ್ಲಿರುವ ಕೆಫಿನ್ ಅಂಶ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಆದರೆ ಹಾಲು ಮತ್ತು ಸಕ್ಕರೆ ಬಳಸುವಾಗ ಎಚ್ಚರಿಕೆಯಿಂದಿರಿ ಏಕೆಂದರೆ ಇದರಿಂದ ಕ್ಯಾಲೋರಿ ಅಧಿಕವಾಗುತ್ತದೆ.

ಗ್ರೀನ್ ಟೀ ಕುಡಿಯಿರಿ

ಗ್ರೀನ್ ಟೀ ಕುಡಿಯಿರಿ

ಗ್ರೀನ್ ಟೀಯಲ್ಲಿ ಕೆಫಿನ್ ಅಂಶ ಕಡಿಮೆ ಇದೆ ಮತ್ತು ಇದನ್ನು ಸೇವಿಸುವುದರಿಂದ ಶೇಖಡಾ 5 ರಷ್ಟು ಚಯಪಚಯ ಕ್ರಿಯೆ ಹೆಚ್ಚಿಸಬಹುದು.ಇದರಲ್ಲಿ ಉತ್ಕರ್ಷಣ ನಿರೋಧಕವಾದ ಕೆಟ್ಚಿನ್ ಅಂಶವಿರುತ್ತದೆ ಇದು ಸಮತೂಕ ಕಾಪಾಡಿಕೊಳ್ಳಲು ಸಹಾಯಕ.

ಡಾರ್ಕ್ ಚಾಕೊಲೇಟ್

ಡಾರ್ಕ್ ಚಾಕೊಲೇಟ್

ಡಾರ್ಕ್ ಚಾಕೊಲೇಟ್ ಕೂಡ ಕೆಟ್ಚಿನ್ ಮತ್ತು ಕೆಫೈನ್ ಒಳಗೊಂಡಿರುತ್ತದೆ ಇದು ನಿಮಗೆ ತೂಕ ಕಡಿಮೆ ಮಾಡಿಕೊಳ್ಳಲು ಸಹಕರಿಸುತ್ತದೆ.ಆದರೆ ಇದನ್ನೂ ಕೂಡ ಅಧಿಕವಾಗಿ ಸೇವಿಸುವುದು ಆರೋಗ್ಯಕರವಲ್ಲ.ದಿನದಲ್ಲಿ ಕೇವಲ 28 ಗ್ರಾಂ ನಷ್ಟು ಸೇವಿಸುವಂತೆ ನೋಡಿಕೊಳ್ಳಿ.

ಸತುವಿನ ಅಂಶ ಅಧಿಕವಿರುವ ಆಹಾರ ಸೇವಿಸಿ

ಸತುವಿನ ಅಂಶ ಅಧಿಕವಿರುವ ಆಹಾರ ಸೇವಿಸಿ

ನಿಮಗೆ ತೃಪ್ತಿಯ ಭಾವನೆಯನ್ನು ಕೊಡುವ ಲೆಪ್ತಿನ್ ಎಂಬ ಹಾರ್ಮೋನ್ ಅನ್ನು ಸತುವಿನ ಅಂಶ ನೀಡುತ್ತದೆ. ಸತುವಿನ ಅಂಶ ಅಧಿಕವಿರುವ ಆಹಾರಗಳೆಂದರೆ ಗೋಧಿ, ಗೋಡಂಬಿ, ಪಾಲಕ್, ಮೀನು, ಮಶ್ರೂಮ್, ಚಾಕೊಲೇಟ್, ದಾಳಿಂಬೆ, ಕೋಸುಗಡ್ಡೆ, ಖರ್ಜೂರ, ಬ್ರೋಕೊಲಿ ಮತ್ತು ಆಲೂಗಡ್ಡೆ.

ಕ್ಯಾಪ್ಸಿಕಂ ಸೇವಿಸಿ

ಕ್ಯಾಪ್ಸಿಕಂ ಸೇವಿಸಿ

ಕ್ಯಾಪ್ಸಿಕಂ ನಲ್ಲಿ ಮೆಣಸಿನ ಅಂಶವಿರುವ Cpsaicin ಎಂಬ ರಾಸಾಯನಿಕ ಅಂಶವಿದೆ. ಈ ರಾಸಾಯನಿಕ ಅಂಶ ಸಾಕಷ್ಟು ಗಂಟೆಗಳ ಕಾಲ ಉಳಿಯುವುದರಿಂದ ಅಧಿಕ ಕೊಬ್ಬನ್ನು ತೆಗೆದುಹಾಕುತ್ತದೆ.

ವ್ಯಾಯಾಮ ಮಾಡಿ

ವ್ಯಾಯಾಮ ಮಾಡಿ

ಯಾವುದೇ ರೀತಿಯ ವ್ಯಾಯಾಮ ಮಾಡುವುದರಿಂದ ಸ್ನಾಯುಗಳು ಸಡಿಲಗೊಂಡು ದೇಹದಲ್ಲಿರುವ ಕ್ಯಾಲೋರಿಯನ್ನು ಕಡಿಮೆ ಮಾಡಿಕೊಳ್ಳಬಹುದು

ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ

ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ

ಒಳ್ಳೆಯ ಮೂಡನ್ನು ಕಾಪಾಡಿಕೊಳ್ಳುವುದು ಆರೋಗ್ಯಯುತವಾದ ಆಹಾರವನ್ನು ಸೇವಿಸುವಂತೆ ಮಾಡುತ್ತದೆ. ಇದು ನಿಮ್ಮ ಆತ್ಮವಿಶ್ವಾಸವನ್ನು ಕೂಡ ಹೆಚ್ಚಿಸುತ್ತದೆ.

ಹಣ್ಣನ್ನು ಸೇವಿಸಿ

ಹಣ್ಣನ್ನು ಸೇವಿಸಿ

ಬೆಳಿಗ್ಗೆ ಎದ್ದ ಒಂದು ಗಂಟೆಯೊಳಗೆ ಯಾವುದೇ ರೀತಿಯ ಹಣ್ಣನ್ನು ಸೇವಿಸಿ. ಹಣ್ಣುಗಳು ಪೌಷ್ಟಿಕ ಮತ್ತು ಆರೋಗ್ಯಯುತ. ಅವುಗಳನ್ನು ತಿನ್ನುವುದರಿಂದ ಹೆಚ್ಚು ಸಮಯ ಹೊಟ್ಟೆ ತುಂಬಿದಂತೆ ಇರುತ್ತದೆ.

ಹಸಿವಾದಾಗ ನಟ್ಸ್ ಸೇವಿಸಿ

ಹಸಿವಾದಾಗ ನಟ್ಸ್ ಸೇವಿಸಿ

ಸಣ್ಣ ಆಹಾರ ತೆಗೆದುಕೊಳ್ಳಿ. ಪ್ರತಿ ಬಾರಿ ಹಸಿವಾದಾಗ ನಟ್ಸ್ ಅಥವಾ ಇನ್ನೇನನ್ನಾದರೂ ಸಣ್ಣ ಪ್ರಮಾಣದಲ್ಲಿ ತಿನ್ನಿ.

ಪ್ರೋಟೀನ್‌ಯುಕ್ತ ಆಹಾರ ಸೇವಿಸಿ

ಪ್ರೋಟೀನ್‌ಯುಕ್ತ ಆಹಾರ ಸೇವಿಸಿ

ಪ್ರೋಟೀನ್ ಅನ್ನು ಒಳ್ಳೆಯ ಮಟ್ಟದಲ್ಲಿ ಸೇವಿಸಿ. ಮೊಟ್ಟೆ ಮತ್ತು ಮಾಂಸ, ಅಥವಾ ನೀವು ಸಸ್ಯಾಹಾರಿಗಳಾಗಿದ್ದಲ್ಲಿ ಬೇಳೆ ಕಾಳುಗಳನ್ನು ಸೇರಿಸಿ ಕಿಚಡಿ ರೀತಿ ಮಾಡಿ ಸೇವಿಸಬಹುದು. ಇವುಗಳಲ್ಲದೆ ಪ್ರೋಟೀನ್ ಅಂಶಗಳಿರುವ ಸೋಯಾ, ನಟ್ಸ್, ಮೊಳಕೆ ಕಾಳುಗಳನ್ನು ಕೂಡ ಸೇವಿಸಬಹುದು.

ಸರಿಯಾದ ನೀರನ್ನು ಕುಡಿಯಿರಿ

ಸರಿಯಾದ ನೀರನ್ನು ಕುಡಿಯಿರಿ

ಪ್ರತಿದಿನ ಆಗಾಗ ನೀರನ್ನು ಕುಡಿಯಿರಿ. ಹಸಿವು ಮತ್ತು ಬಾಯಾರಿಕೆಯ ಮಧ್ಯೆ ಗೊಂದಲಗೊಳ್ಳಬೇಡಿ.

ವ್ಯಾಯಾಮ ಮಾಡುವ ಮೊದಲು ಆಹಾರ ಸೇವಿಸಿ

ವ್ಯಾಯಾಮ ಮಾಡುವ ಮೊದಲು ಆಹಾರ ಸೇವಿಸಿ

ವ್ಯಾಯಾಮ ಮಾಡಿದಾಗ ನಿಮ್ಮ ದೇಹ ಕೆಲವು ಕ್ಯಾಲೋರಿ ಬಳಸುತ್ತದೆ ಆದ್ದರಿಂದ ವ್ಯಾಯಾಮ ಮಾಡುವ ಮೊದಲು ಏನನ್ನಾದರೂ ತಿನ್ನುವುದು ಸೂಕ್ತ. ಇಲ್ಲದಿದ್ದರೆ ಇದು ನಿಮಗೆ ಇನ್ನಷ್ಟು ಹಸಿವನ್ನು ನೀಡಿ ಅಧಿಕವಾಗಿ ತಿನ್ನುವಂತೆ ಮಾಡುತ್ತದೆ.

ಆಹಾರ ಸೇವನೆಯಲ್ಲಿ ಮಿತಿಯಿರಲಿ

ಆಹಾರ ಸೇವನೆಯಲ್ಲಿ ಮಿತಿಯಿರಲಿ

ಕಡಿಮೆ ತಿನ್ನಿ ಆದರೆ ಹಸಿದುಕೊಂಡಿರಬೇಡಿ. ಹಸಿವು ನಿಮ್ಮನ್ನು ಹೆಚ್ಚು ತಿನ್ನುವಂತೆ ಮಾಡುತ್ತದೆ ಮತ್ತು ತೂಕ ಹೆಚ್ಚುತ್ತದೆ.

ವ್ಯಾಯಾಮ

ವ್ಯಾಯಾಮ

ವ್ಯಾಯಾಮ ಮಾಡುವಾಗ ಆಗಾಗ ಬದಲಾಯಿಸುತ್ತಿರಿ. ಉದಾಹರಣೆಗೆ ನೀವು ವಾಕ್ ಮಾಡುತ್ತಿದ್ದರೆ ಐದು ನಿಮಿಷಗಳಿಗೊಮ್ಮೆ ಜಾಗಿಂಗ್ ಮಾಡಲು ಪ್ರಯತ್ನಿಸಿ.

ವಿಶ್ರಾಂತಿ

ವಿಶ್ರಾಂತಿ

ಆರೋಗ್ಯಯುತವಾಗಿ ತಿನ್ನುವುದು ಮತ್ತು ವ್ಯಾಯಾಮ ಮಾಡುವುದರಿಂದ ಮಾತ್ರ ಚಯಾಪಚಯ ಕ್ರಿಯೆ ಅಧಿಕಗೊಳ್ಳಲು ಸಾಧ್ಯವಿಲ್ಲ ಸರಿಯಾದ ನಿದ್ರೆ ಕೂಡ ಅಷ್ಟೇ ಅಗತ್ಯ. ಆದ್ದರಿಂದ ಸರಿಯಾದ ವಿಶ್ರಾಂತಿ ತೆಗೆದುಕೊಳ್ಳಿ.

ಮಿತಿ ಎಂಬುದು ಕೀಲಿ ಕೈ ಇದ್ದಂತೆ

ಮಿತಿ ಎಂಬುದು ಕೀಲಿ ಕೈ ಇದ್ದಂತೆ

ಹೌದು ಯಾವುದನ್ನೇ ಆದರೂ ಅಧಿಕವಾಗಿ ಮಾಡಬೇಡಿ. ಇದು ನಿಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ. ಮಿತಿಯಲ್ಲಿದ್ದರೆ ಅದು ಆರೋಗ್ಯವನ್ನು ಸಮತೋಲನದಲ್ಲಿಡಲು ಸಾಧ್ಯ.

English summary

Weight loss: Top 20 ways to boost metabolism

This will help to determine how many calories your body can consume and the number of calories you burn while eating and exercising. Metabolism is the process of breaking down carbohydrates, protein and fats to give your body energy.
X
Desktop Bottom Promotion