For Quick Alerts
ALLOW NOTIFICATIONS  
For Daily Alerts

ಸಿಗರೇಟ್ ಚಟ ಬಿಡುವ ವಿಧಾನಗಳು

By Hemanth P
|

ಸಿಗರೇಟ್ ಪ್ಯಾಕೆಟ್ ಮೇಲೆ ಇರುವ ಎಚ್ಚರಿಕೆಯನ್ನು ಎಷ್ಟೇ ಸಲ ಓದಿದರೂ ಈ ಕೆಟ್ಟ ಚಟದಿಂದ ಮುಕ್ತಿ ಪಡೆಯುವುದು ತುಂಬಾ ಕಠಿಣ. ಸಿಗರೇಟ್ ನಲ್ಲಿರುವ ನಿಕೋಟಿನ್ ಅಂಶ ಇದಕ್ಕೆ ಕಾರಣವಾಗಿದೆ.
ನಿಜವಾಗಿಯೂ ನೀವು ಸಿಗರೇಟ್ ಸೇದುವುದನ್ನು ಬಿಡಲು ಬಯಸಿದರೆ ಆಗ ಅದು ಅಸಾಧ್ಯವೇನಲ್ಲ.

ಧೂಮಪಾನ ತ್ಯಜಿಸಲು ಹಲವಾರು ಮಾರ್ಗಗಳಿದ್ದು, ಇದನ್ನು ನಿಮ್ಮ ಸಿಗರೇಟ್ ಸೇದುವ ಚಟ ಬಿಡಿಸಲು ಪರಿಣಾಮಕಾರಿ ಮಾರ್ಗಗಳೆಂದು ಪರಿಗಣಿಸಲಾಗಿದೆ. ಆದರೆ ಧೂಮಪಾನ ಬಿಡಲು ಪ್ರಬಲ ಇಚ್ಛೆ ಹೊಂದಿರುವ ಜನರು ಕೂಡ ಇದರಲ್ಲಿ ವಿಫಲರಾಗುತ್ತಾರೆ. ಯಾಕೆಂದರೆ ಅವರಿಗೆ ತ್ಯಜಿಸುವ ಲಕ್ಷಣಗಳನ್ನು ನಿರ್ವಹಿಸಲು ಅಸಾಧ್ಯವಾಗುವುದು.

ನೀವು ಆಯ್ಕೆಯ ಬಗ್ಗೆ ಹೆಚ್ಚು ತಿಳಿಸಿಕೊಂಡಷ್ಟು ಧೂಮಪಾನ ತ್ಯಜಿಸುವ ನೆರವಾಗಲಿದೆ ಮತ್ತು ನಿಮ್ಮ ಕೆಲಸ ಕೂಡ ಸುಲಭವಾಗಲಿದೆ. ನಿಮ್ಮ ಚಟ ಬಿಡಿಸಲು ಇಲ್ಲಿ ಕೆಲವೊಂದು ಸರಳ ಹಾಗೂ ಪರಿಣಾಮಕಾರಿ ಟಿಪ್ಸ್ ಗಳಿವೆ. ನೀವು ಇದನ್ನು ಪ್ರಯತ್ನಿಸಿ ಸಿಗರೇಟ್ ಸೇದುವ ಚಟದಿಂದ ಮುಕ್ತರಾಗಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಧೂಮಪಾನದಿಂದ ಉಂಟಾಗುವ ದುಷ್ಟರಿಣಾಮಗಳೇನು?

ಸಂಕಲ್ಪ

ಸಂಕಲ್ಪ

ಪ್ರತೀ ಸಲ ಒಂದು ಧಮ್ ಎಳೆದ ಬಳಿಕ ಧೂಮಪಾನ ಮಾಡುವುದನ್ನು ಬಿಡಬೇಕೆನ್ನುವ ನಿರ್ಣಯ ಮಾಡಿದರೆ ಅದು ನಿಮಗೆ ನೆರವಾಗಲಾರದು. ಧೂಮಪಾನ ತ್ಯಜಿಸುವ ವಿಧಾನಗಳನ್ನು ತಿಳಿಯುವ ಮೊದಲು ನೀವು ದೃಢ ಸಂಕಲ್ಪ ಮಾಡಿಕೊಳ್ಳಬೇಕು. ನೀವು ದೃಢ ಸಂಕಲ್ಪ ಮಾಡಿದರೆ ಆಗ ಅದು ಧೂಮಪಾನ ತ್ಯಜಿಸಲು ಅತ್ಯಂತ ಪರಿಣಾಮಕಾರಿ ಟಿಪ್ಸ್ ಆಗಲಿದೆ.

ವಿಚಲನ

ವಿಚಲನ

ನಿಮಗೆ ಸಿಗರೇಟ್ ಸೇದಲೇ ಬೇಕೆಂಬ ಕಡುಬಯಕೆಯಾದರೆ ಆಗ ನಿಮ್ಮ ಮನಸ್ಸನ್ನು ಬೇರೆ ಕಡೆಗೆ ವರ್ಗಾಯಿಸಬೇಕು. ಎಲ್ಲರೊಂದಿಗೆ ಬೆರೆಯಿರಿ, ಸ್ವಲ್ಪ ದೂರ ವಾಕ್ ಮಾಡಿ ಅಥವಾ ಹೊರಾಂಗಣ ಆಟದಲ್ಲಿ ತೊಡಗಿಸಿಕೊಳ್ಳಿ.

ಕೌನ್ಸಿಲಿಂಗ್ ಪಡೆಯಿರಿ

ಕೌನ್ಸಿಲಿಂಗ್ ಪಡೆಯಿರಿ

ಧೂಮಪಾನ ತ್ಯಜಿಸಲು ಅತ್ಯಂತ ಒಳ್ಳೆಯ ವಿಧಾನ ಅನುಸರಿಸಲು ನೀವು ತಜ್ಞರ ಸಲಹೆ ಪಡೆಯಲು ಹಿಂಜರಿಯಬೇಡಿ. ಇದರಿಂದ ನೀವು ಧೂಮಪಾನ ತ್ಯಜಿಸಲು ಅತ್ಯುತ್ತಮ ಟಿಪ್ಸ್ ಪಡೆಯಬಹುದು. ಕೌನ್ಸಿಲರ್ ನ ನೆರವಿನಿಂದ ನಿಮಗೆ ಭಾವನಾತ್ಮಕ ಬದಲಾವಣೆಗೆ ಹೊಂದಿಕೊಳ್ಳಲು ನೆರವಾಗಲಿದೆ.

ನಿಕೋಟಿನ್ ಬದಲಿ ಥೆರಪಿ

ನಿಕೋಟಿನ್ ಬದಲಿ ಥೆರಪಿ

ನಿಕೋಟಿನ್ ಬದಲಿ ಥೆರಪಿ ಧೂಮಪಾನ ತ್ಯಜಿಸಲು ಅತ್ಯುತ್ತಮ ಮಾರ್ಗ. ಸಣ್ಣ ಪ್ರಮಾಣದ ನಿಕೋಟಿನ್ ನ್ನು ದೇಹಕ್ಕೆ ಒದಗಿಸುವ ಮೂಲಕ ನೀವು ಧೂಮಪಾನ ತ್ಯಜಿಸುವಾಗ ಉಂಟಾಗುವ ಕೆಲವೊಂದು ಲಕ್ಷಣಗಳನ್ನು ನಿಭಾಯಿಸಲು ಇದು ನೆರವಾಗುತ್ತದೆ.

ಕಡುಬಯಕೆ ಬಿಟ್ಟುಬಿಡಿ

ಕಡುಬಯಕೆ ಬಿಟ್ಟುಬಿಡಿ

ಧೂಮಪಾನ ತ್ಯಜಿಸಲು ಇದು ಅತೀ ಮುಖ್ಯ ಮಾರ್ಗ. ನಿಮ್ಮ ಮನೆ, ಕಾರು ಮತ್ತು ಕಚೇರಿಯನ್ನು ಧೂಮಪಾನವಿಲ್ಲದ ಪ್ರದೇಶವನ್ನಾಗಿ ಮಾಡಿ. ಸಿಗರೇಟ್, ಇತರ ತಂಬಾಕು ಉತ್ಪನ್ನ, ಲೈಟರ್ ಗಳನ್ನು ಹೊರಗೆಸೆದು ಬಿಡಿ.

ಕುಟುಂಬದ ಬೆಂಬಲ ಪಡೆಯಿರಿ

ಕುಟುಂಬದ ಬೆಂಬಲ ಪಡೆಯಿರಿ

ನೀವು ಧೂಮಪಾನ ಯಾವಾಗ ಬಿಡುತ್ತೀರಿ ಎಂದು ಕುಟುಂಬದ ಪ್ರತಿಯೊಬ್ಬರು ಆ ಶ್ರೇಷ್ಠ ದಿನಕ್ಕಾಗಿ ಕಾಯುತ್ತಿರುತ್ತಾರೆ. ಈ ಪ್ರಕ್ರಿಯೆಯಲ್ಲಿ ನಿಮ್ಮ ಕುಟುಂಬ ಸದಸ್ಯರನ್ನು ಕೂಡ ಸೇರಿಸಿಕೊಳ್ಳಿ. ಕುಟುಂಬದವರು ನೀಡುವ ಪ್ರೋತ್ಸಾಹ ಮತ್ತು ಕಾಳಜಿ ಧೂಮಪಾನ ತ್ಯಜಿಸುವ ವಿಧಾನವನ್ನು ಮೌಲ್ಯಯುತವಾಗಿಸಲಿದೆ.

ಚಟುವಟಿಕೆಯಿಂದ ಇರಿ

ಚಟುವಟಿಕೆಯಿಂದ ಇರಿ

ಖಾಲಿ ಮನಸ್ಸು ಪಿಶಾಚಿಗಳ ಆವಾಸಸ್ಥಾನ. ಇಷ್ಟು ಮಾತ್ರವಲ್ಲದೆ ಇದು ಧೂಮಪಾನದ ಕುಡುಬಯಕೆಗೆ ರತ್ನಗಂಬಳಿ ಹಾಸಿದಂತೆ. ನಿಮ್ಮ ಧೂಮಪಾನದ ಚಟ ಬಿಡಲು ಅತ್ಯುತ್ತಮ ವಿಧಾನವೆಂದರೆ ನೀವು ಕ್ರಿಯಾತ್ಮಕವಾಗಿರುವುದು. ಸಮಯ ಮತ್ತು ಶ್ರಮ ಬಯಸುವ ಯಾವುದಾದರೂ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ.

ಕಡುಬಯಕೆಯಿಂದ ಹೊರಬನ್ನಿ

ಕಡುಬಯಕೆಯಿಂದ ಹೊರಬನ್ನಿ

ಧೂಮಪಾನಕ್ಕೆ ಸೆಳೆಯುವ ಪ್ರತಿಯೊಂದು ವಿಷಯದಿಂದಲೂ ನೀವು ದೂರವಿರಿ. ನಿಮಗೆ ಬಯಕೆ ಹುಟ್ಟಿಸುವವರಿಗೆ ನೇರವಾಗಿ ಇಲ್ಲವೆನ್ನಿ. ಸಿಗರೇಟ್ ಸೇದುವ ಕಡುಬಯಕೆಯಾದಾಗ ದೀರ್ಘವಾಗಿ ಶ್ವಾಸ ತೆಗೆದುಕೊಳ್ಳಿ. ಒಮ್ಮೆ ನೀವು ಹಿಡಿತಕ್ಕೆ ಬಂದರೆ ಧೂಮಪಾನ ತ್ಯಜಿಸುವಷ್ಟು ಸುಲಭ ಬೇರೊಂದಿಲ್ಲ.

ಬದಲಿಗಳನ್ನು ಆಯ್ಕೆ ಮಾಡಿ

ಬದಲಿಗಳನ್ನು ಆಯ್ಕೆ ಮಾಡಿ

ಧಮ್ ಎಳೆಯುವುದನ್ನು ಯೋಚಿಸುವ ಬದಲು ನೀವು ಬೇರೆ ಏನಾದರೂ ಬದಲಿ ಆಯ್ಕೆ ಮಾಡುವುದು ಒಳ್ಳೆಯದು. ಇದು ಮಿಂಟ್, ಲವಂಗ, ಚಾಕಲೇಟ್, ಚೂಯಿಂಗ್ ಗಮ್ ಅಥವಾ ಬೇರೆ ಏನಾದರೂ ಆರೋಗ್ಯಕರ ತಿನಿಸುಗಳಾಗಿರಬಹುದು. ಸಿಗರೇಟ್ ಹಿಡಿಯುವ ನಿಮ್ಮ ದೈಹಿಕ ಚಟುವಟಿಕೆಗೆ ನೀವು ಬೇರೆ ಏನಾದರೂ ಸುರಕ್ಷಿತ ಬದಲಿ ಆಯ್ಕೆ ಮಾಡಿ.

English summary

Ways To Quit Smoking

Quitting smoking is not an impossible task if you really want it. There are many ways to quit smoking that are considered as effective in breaking your smoking habit.
Story first published: Tuesday, January 28, 2014, 13:12 [IST]
X
Desktop Bottom Promotion