For Quick Alerts
ALLOW NOTIFICATIONS  
For Daily Alerts

ದೇಹದ ಫಿಟ್‌ನೆಸ್ ಅನ್ನು ಕಾಯ್ದುಕೊಳ್ಳುವುದು ಹೇಗೆ?

|

ದೈನಂದಿನ ಜೀವನದಲ್ಲಿ ತಮ್ಮ ದೇಹವನ್ನು ಸ್ಲಿಮ್ ಆಗಿ ಇಟ್ಟುಕೊಳ್ಳಲು ಹಲವಾರು ದಾರಿಗಳನ್ನು ನಾವು ಹುಡುಕುತ್ತೇವೆ ಆದರೆ ದೇಹದ ಫಿಟ್‌ನೆಸ್ ಅನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾಗುತ್ತೇವೆ. ಹಾಗಾಗಿ ನೀವು ತೂಕವನ್ನು ಇಳಿಸಿಕೊಳ್ಳುವ ಮೊದಲು ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳುವುದು ಅವಶ್ಯಕ.

ಬೋಲ್ಡ್ ಸ್ಕೈ ನಿಮಗಾಗಿ ಕೆಲವೊಂದು ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದು, ಇದು ನಿಮ್ಮನ್ನು ಇನ್ನಷ್ಟು ಫಿಟ್ ಹಾಗೂ ಆರೋಗ್ಯಕರವಾಗಿ ಇರಿಸುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ನಿಮ್ಮನ್ನು ಆರೋಗ್ಯವಾಗಿಡಬಲ್ಲ 17 ಸೂಪರ್ ಫುಡ್

ತಮ್ಮ ತೂಕದ ಕುರಿತು ಸ್ವಚಿಂತನೆಯುಳ್ಳವರು ಹಾಗೂ ಸ್ಮಾರ್ಟ್ ಆಗಿ ಕಾಣಲು ಬಯಸುವವರಿಗಾಗಿ, ನಾವು ಕೆಲವೊಂದು ಮಾಹಿತಿಯನ್ನು ನೀಡುತ್ತಿದ್ದೇವೆ, ಇದರಿಂದ ನಿಮ್ಮ ದೇಹದಲ್ಲಿರುವ ಬೊಜ್ಜು ಕಡಿಮೆ ಆಗುವುದರ ಜೊತೆಗೆ, ನೀವು ಇನ್ನೂ ಸ್ಮಾರ್ಟ್ ಆಗಿ ಕಾಣುವಂತೆ ಸಹಾಯವಾಗಲಿದೆ...!

ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಕೆಲವೊಂದು ಸಲಹೆಗಳ ವಿಧಾನಗಳಿಂದ ಫಿಟ್ ನೆಸ್‌ನ್ನು ಕಾಯ್ದುಕೊಳ್ಳಬಹುದು. ನಿಮ್ಮ ಸ್ನಾಯು, ಗಂಟು ಮತ್ತು ಮನಸ್ಸಿಗೆ ಸಣ್ಣ ಮಟ್ಟದ ವ್ಯಾಯಾಮ ನೀಡುವುದರಿಂದ ನೀವು ಫಿಟ್ ಮತ್ತು ಆರೋಗ್ಯವಾರಿಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ನೀವು ಪ್ರತೀ ದಿನ ಸೇವಿಸಬಹುದಾದ 10 ಆಹಾರಗಳು

 ವೇಗವಾಗಿ ನಡೆಯುವುದು:

ವೇಗವಾಗಿ ನಡೆಯುವುದು:

30 ನಿಮಿಷಗಳ ಕಾಲ ನೀವು ವೇಗವಾಗಿ ಕಾಲ್ನಡಿಗೆ ಮಾಡಿದರೆ ಆಗ ಹೃದಯಬಡಿತ ಹೆಚ್ಚಾಗಿ ಕ್ಯಾಲರಿ ದಹಿಸುತ್ತದೆ ಮತ್ತು ಚಯಾಪಚಯಾ ಕ್ರಿಯೆ ಹೆಚ್ಚುತ್ತದೆ. ಇದು ನಿಮ್ಮ ಶಕ್ತಿಯನ್ನು ಕೂಡ ವೃದ್ದಿಸುತ್ತದೆ.

ಮೆಟ್ಟಿಲುಗಳನ್ನು ಹತ್ತುವುದಕ್ಕೆ ಪ್ರಾಶಸ್ತ್ಯ ನೀಡಿ:

ಮೆಟ್ಟಿಲುಗಳನ್ನು ಹತ್ತುವುದಕ್ಕೆ ಪ್ರಾಶಸ್ತ್ಯ ನೀಡಿ:

ಮೆಟ್ಟಿಲುಗಳನ್ನು ಹತ್ತುವುದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಏಕೆಂದರೆ, ನಿಮ್ಮ ದೇಹದ ತೂಕವನ್ನು ನಿಯಂತ್ರಿಸುವಲ್ಲಿ ಇದು ಕೂಡ ಪ್ರಮುಖ ಪಾತ್ರ ವಹಿಸುತ್ತದೆ.

ಸೊಂಟದ ಹಿಂಬದಿಯ ಸ್ನಾಯುಗಳನ್ನು ಹಿಸುಕಿ

ಸೊಂಟದ ಹಿಂಬದಿಯ ಸ್ನಾಯುಗಳನ್ನು ಹಿಸುಕಿ

ನಿಮ್ಮ ಸೊಂಟದ ಹಿಂಬದಿಯ ಸ್ನಾಯುಗಳನ್ನು ಹಿಸುಕಿ. ಇದರಿಂದ ಕ್ಯಾಲರಿ ನಷ್ಟವಾಗುತ್ತದೆ. ಮೂರು ದಿನಗಳಿಗೆ ಒಮ್ಮೆ 10-15 ನಿಮಿಷಗಳ ಕಾಲ ನಿಮ್ಮ ಕುಂಡಿಯ ಸ್ನಾಯುಗಳನ್ನು ಹಿಸುಕುವುದರಿಂದ ನಿಮ್ಮ ಸೊಂಟದ ಹಿಂಭಾದ ಪರಿಪೂರ್ಣತೆಯನ್ನು ಪಡೆಯುತ್ತದೆ. ನಿಂತಿರುವಾಗ ಅಥವಾ ಕುಳಿತಿರುವಾಗ ಇದನ್ನು ಮಾಡಬಹುದು.

 ಸರಿಯಾದ ಭಂಗಿಯಲ್ಲಿ ನಿಂತುಕೊಳ್ಳಿ:

ಸರಿಯಾದ ಭಂಗಿಯಲ್ಲಿ ನಿಂತುಕೊಳ್ಳಿ:

ಸರಿಯಾಗಿ ನಿಂತುಕೊಳ್ಳಿ ಅಥವಾ ನೇರವಾಗಿ ಕುಳಿತುಕೊಳ್ಳಿ. ಇದರಿಂದ ಕುತ್ತಿಗೆಯಿಂದ ಕಾಲಿನ ತನಕ ಹಲವಾರು ಸ್ನಾಯುಗಳು ಬಾಗಲು ನೆರವಾಗುತ್ತದೆ. ಸರಿಯಾದ ಭಂಗಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ.

ಬೆನ್ನಿನ ವ್ಯಾಯಾಮ:

ಬೆನ್ನಿನ ವ್ಯಾಯಾಮ:

ಆರೋಗ್ಯಕರವಲ್ಲದ ಜೀವನ ಶೈಲಿ, ತುಂಬಾ ಹೊತ್ತು ಕಂಪ್ಯೂಟರ್ ನಲ್ಲಿ ಕೆಲಸ ಮಾಡುವುದು, ವ್ಯಾಯಾಮ ಮಾಡದಿರುವುದು , ಮಾನಸಿಕ ಒತ್ತಡ ಈ ಎಲ್ಲಾ ಕಾರಣಗಳಿದ ಬೆನ್ನು ನೋವು ಅಧಿಕವಾಗುತ್ತದೆ. ಪ್ರಾಣಾಯಾಮ ಮಾಡುವುದರಿಂದ ಕೂಡ ಬೆನ್ನುನೋವಿಗೆ ಪರಿಹಾರವನ್ನು ಕಂಡು ಹಿಡಿಯಬಹುದು. ಪ್ರಾಣಾಯಾಮವನ್ನು ಮನೆಯಲ್ಲಿಯೇ ಮಾಡಬಹುದಾಗಿದ್ದು ಕೇವಲ ಬೆನ್ನು ನೋವು ಮಾತ್ರ ಕಡಿಮೆ ಮಾಡುವುದಲ್ಲದೆ, ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ, ಇದನ್ನು ಮಾಡಿದ್ದೇ ಆದರೆ ಹತ್ತು ಹಲವು ಪ್ರಯೋಜನಗಳನ್ನು ಪಡೆಯಬಹುದು.

ಮಣಿಕಟ್ಟನ್ನು ತಿರುಗಿಸುವುದು:

ಮಣಿಕಟ್ಟನ್ನು ತಿರುಗಿಸುವುದು:

ಶಾಪಿಂಗ್ ಬ್ಯಾಗ್‌ನ್ನು ಹಿಡಿದುಕೊಂಡು ಮಣಿಕಟ್ಟನ್ನು ತಿರುಗಿಸಿ. ಮನೆ ಸಾಮಾನಿನ ಬ್ಯಾಗ್‌ನ್ನು ಬಳಸಬಹುದು. ಬ್ಯಾಗ್‌ನ್ನು ಹಿಡಿಯಿರಿ ಮತ್ತು ನಿಮ್ಮ ಕೈಗಳನ್ನು ಮೊಣಕೈ ತನಕ ತನ್ನಿ ಬಳಿಕ ಭುಜದ ಮೇಲೆ ತನ್ನಿ.

ಪಾತ್ರೆಗಳನ್ನು ತೊಳೆಯಿರಿ:

ಪಾತ್ರೆಗಳನ್ನು ತೊಳೆಯಿರಿ:

ಪಾತ್ರೆಗಳನ್ನು ಉಜ್ಜುವುದು ಮತ್ತು ತೊಳೆಯುವುದರಿಂದ ನಿಮ್ಮ ಸ್ನಾಯುಗಳು ಬಲಗೊಳ್ಳುವುದು. ಸ್ನಾಯುಗಳು ಬಲಗೊಳ್ಳಬೇಕಾದರೆ ನೀವು ಪಾತ್ರೆ ತೊಳೆಯುವಾಗ ಹೆಚ್ಚಿನ ಶಕ್ತಿ ವ್ಯಯಿಸಬೇಕು.

ಫೋನ್‌ನಲ್ಲಿ ಮಾತನಾಡಿ:

ಫೋನ್‌ನಲ್ಲಿ ಮಾತನಾಡಿ:

ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಫೋನ್‌ನಲ್ಲಿ ಹೆಚ್ಚು ಮಾತನಾಡಬೇಕಾಗುತ್ತದೆ. ಇದರಿಂದ ಮಾತನಾಡುವಾಗ ನಡೆದಾಡಿ. ಇದರಿಂದ ರಕ್ತ ಪರಿಚಲನೆಯಾಗುತ್ತದೆ.

ಮನೆ ಸ್ವಚ್ಛಗೊಳಿಸುವುದು:

ಮನೆ ಸ್ವಚ್ಛಗೊಳಿಸುವುದು:

ದೇಹಕ್ಕೆ ಸಂಪೂರ್ಣವಾಗಿ ವ್ಯಾಯಾಮ ನೀಡಲು ಮನೆಯನ್ನು ಸ್ವಚ್ಛಗೊಳಿಸುವುದು ಒಳ್ಳೆಯ ವಿಧಾನ. ಧೂಳು ತೆಗೆಯುವುದು ಅಥವಾ ಗುಡಿಸುವುದು ಅಥವಾ ಒರೆಸುವುದರಿಂದ ನೀವು ಕ್ಯಾಲರಿ ದಹಿಸಬಹುದು.

ಸೆಕ್ಸ್:

ಸೆಕ್ಸ್:

ನೈಸರ್ಗಿಕವಾಗಿ ತೂಕ ಇಳಿಸಿಕೊಳ್ಳಲು ಸೆಕ್ಸ್ ಒಳ್ಳೆಯ ವಿಧಾನ ಮತ್ತು ಇದರಿಂದ ನಿಮ್ಮ ಎಂಡೋರ್ಫಿನ್ ಕೂಡ ಹೆಚ್ಚಾಗಬಹುದು. ಮಾನಸಿಕ ಹಾಗೂ ದೈಹಿಕವಾಗಿ ಸೆಕ್ಸ್ ತುಂಬಾ ಲಾಭಕಾರಿ.

ಸರಿಯಾಗಿ ನಿದ್ರೆ ಮಾಡಿ:

ಸರಿಯಾಗಿ ನಿದ್ರೆ ಮಾಡಿ:

ಕೆಲಸಕ್ಕೆ ಹೋಗುವ ಜನರು ವಾರದ ಇತರ ದಿನಗಳಲ್ಲಿ ಕಡಿಮೆ ನಿದ್ರೆ ಮಾಡುತ್ತಾರೆ ಮತ್ತು ವಾರಾಂತ್ಯದಲ್ಲಿ ಹೆಚ್ಚು ನಿದ್ರಿಸುತ್ತಾರೆ. ಇತರ ದಿನಗಳಲ್ಲಿ ಕಡಿಮೆ ನಿದ್ರೆ ಮಾಡಿ ವಾರಾಂತ್ಯದಲ್ಲಿ ಹೆಚ್ಚು ನಿದ್ರೆ ಮಾಡುವುದರಿಂದ ನಿದ್ರೆಯ ಆವರ್ತನಕ್ಕೆ ತೊಂದರೆಯಾಗುತ್ತದೆ. ಇದರ ಪರಿಣಾಮ ಬೊಜ್ಜು, ಮೈಕೈ ನೋವು ಮತ್ತು ತಲೆನೋವು ಕಾಣಿಸಿಕೊಳ್ಳುತ್ತದೆ.

ಒಳ್ಳೆಯ ಆರೋಗ್ಯದ ಅರ್ಥ ಸಂಪೂರ್ಣ ವಿಶ್ರಾಂತಿ. ನಿಮ್ಮ ದೇಹ ಮತ್ತು ಮನಸ್ಸನ್ನು ಪುನರ್ಯೌವನಗೊಳಿಸಲು ನಿದ್ರೆ ಒಳ್ಳೆಯ ವಿಧಾನ. ಇದು ನಿಮ್ಮನ್ನು ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಾಗಿಡಲಿದೆ.

English summary

Ways to include fitness in your routine

Here are 14 ways you can include fitness in your daily routine. Working on your muscles, joints and mind daily even in small way is the way to stay fit and healthy.
Story first published: Wednesday, April 9, 2014, 11:44 [IST]
X
Desktop Bottom Promotion