For Quick Alerts
ALLOW NOTIFICATIONS  
For Daily Alerts

ಹೃದಯ ತೊಂದರೆಯ ಸಾಮಾನ್ಯ ಮುನ್ಸೂಚನೆಗಳು

By Arpitha Rao
|

ಸಾಕಷ್ಟು ಜನರು ಹೃದಯಾಘಾತಕ್ಕೆ ಒಳಗಾಗುವ ಮೊದಲು ಹೃದಯದಲ್ಲಿ ನೋವು ಅಥವಾ ಎದೆ ಮೂಳೆಯಲ್ಲಿ ನೋವನ್ನು ಅನುಭವಿಸುತ್ತಾರೆ,ಜೊತೆಗೆ ಹೃದಯ ತೊಂದರೆ ಇರುವವರಿಗೆ ಬೇರೆಬೇರೆ ರೀತಿಯ ಸಾಮಾನ್ಯ ತೊಂದರೆಗಳು ಕಾಣಿಸಿಕೊಳ್ಳುತ್ತದೆ.

ಟೋಪಿವಾಲ ರಾಷ್ಟ್ರೀಯ ಕಾಲೇಜಿನ ಮುಖ್ಯಸ್ಥ ಮತ್ತು ನಾಯರ್ ಚಾರಿಟೇಬಲ್ ಆಸ್ಪತ್ರೆ ತಜ್ಞರಾಗಿರುವ ಡಾ. ಅಜಯ್ ಚೌರಾಸಿಯ ಹೇಳುವಂತೆ 'ಹೃದಯಾಘಾತಕ್ಕೆ ಸಂಬಂಧಿಸಿದ ನೋವು ಸಾಮಾನ್ಯವಾಗಿ ಎದೆ ಮೂಳೆಯ ನೋವು ಅಥವಾ ಅಸಿಡಿಟಿಯಿಂದ ಉಂಟಾಗುವ ಎದೆ ಉರಿಯಂತೆ ಕಾಣಿಸಿಕೊಳ್ಳಬಹುದು'.

ನಾವಿಲ್ಲಿ ತಜ್ಞರು ತಿಳಿಸುವ ಅಸಾಮಾನ್ಯವಾದ ಕೆಲವು ಹೃದಯಾಘಾತದ ಮುನ್ಸೂಚನೆಗಳ ಬಗ್ಗೆ ತಿಳಿಸಿದ್ದೇವೆ.

ಹೃದಯಾಘಾತದಿಂದ ರಕ್ಷಿಸಿಕೊಳ್ಳುವುದು ಹೇಗೆ?

1.ತೇಗುವುದು :-

1.ತೇಗುವುದು :-

ತೇಗುವುದನ್ನು ನೀವು ಗ್ಯಾಸ್ ತೊಂದರೆ ಎಂದು ತಿಳಿದುಕೊಳ್ಳಬಹುದು.ಆದರೆ ನೀವು ನಡೆಯುವಾಗ ಗಂಟಲು ಕಟ್ಟಿದಂತಾಗುವುದು ಹೃದಯ ತೊಂದರೆಯ ಲಕ್ಷಣಗಳಾಗಿರಬಹುದು.ಹೃದಯಾಘಾತಕ್ಕೆ ಮೊದಲು ಕರುಳಿಗೆ ರಕ್ತದ ಪರಿಚಲನೆ ಸರಿಯಾಗಿ ಆಗದ ಕಾರಣ ಈ ರೀತಿ ತೇಗು ಬರುವ ಸಾಧ್ಯತೆ ಇರುತ್ತದೆ.

2.ವಸಡು ಮತ್ತು ನಿರಂತರ ಹಲ್ಲು ನೋವು:-

2.ವಸಡು ಮತ್ತು ನಿರಂತರ ಹಲ್ಲು ನೋವು:-

ವೈದ್ಯರು ಹೇಳುವ ಪ್ರಕಾರ ವಸಡು ಮತ್ತು ನಿರಂತರ ಹಲ್ಲಿನ ಸಮಸ್ಯೆ ಎದುರಿಸುವವರು ಹೃದಯ ಸಮಸ್ಯೆಯನ್ನು ಹೊಂದಿರಬಹುದು. ಇದಕ್ಕೆ ಮುಖ್ಯ ಕಾರಣವೆಂದರೆ ವಸಡಿನ ಸಮಸ್ಯೆಯಿಂದ ದೇಹದಲ್ಲಿ ಉರಿಯೂತ ಸಂಭವಿಸಿ ರಕ್ತನಾಳವನ್ನು ಹಾನಿಗೊಳಪಡಿಸುತ್ತದೆ.ಇದು ಹೃದಯ ನೋವನ್ನು ತರಿಸಬಹುದು.

3.ಲೈಂಗಿಕತೆ ಮೇಲೆ ಪರಿಣಾಮ:-

3.ಲೈಂಗಿಕತೆ ಮೇಲೆ ಪರಿಣಾಮ:-

ಕೊಲೆಸ್ಟ್ರಾಲ್ ಪ್ರಮಾಣ ಮತ್ತು ರಕ್ತನಾಳದ ಕೊಬ್ಬು,ಮಧುಮೇಹ,ಅಧಿಕ ಒತ್ತಡ ಇವುಗಳ ಜೊತೆಗೆ ಹೃದಯ ಸಮಸ್ಯೆಯೂ ಕೂಡ ಲೈಂಗಿಕ ನಿಶ್ಯಕ್ತಿಗೆ ಕಾರಣವಾಗಬಹುದು.ರಕ್ತದ ಸಂಚಲನವು ನಿಧಾನವಾದಾಗ ಉದ್ರೇಕ ಹೊಂದುವುದು ಕಷ್ಟವಾಗುತ್ತದೆ.ತಡೆಯೊಡ್ಡಿದ ಅಪಧಮನಿ ಕೂಡ ಇದಕ್ಕೆ ಮುಖ್ಯ ಕಾರಣವಾಗಬಹುದು.ಪ್ಲೇಕ್ ಸಂಗ್ರಹದಿಂದ ಅಪಧಮನಿಗಳು ಹೆಚ್ಚು ಗಟ್ಟಿಯಾಗುತ್ತವೆ.ಪ್ಲೇಕ್ ರಕ್ತ ಸಂಚಲನವನ್ನು ಕುಂಟಿತಗೊಳಿಸಿ ಉದ್ರೇಕ ಹೊಂದುವುದನ್ನು ಕಷ್ಟವಾಗಿಸಬಹುದು.

4.ಆಯಾಸ:-

4.ಆಯಾಸ:-

ನಿಮಗೆ ದಿನನಿತ್ಯದ ಕಾರ್ಯಗಳನ್ನು ಮಾಡುವುದು ಕಷ್ಟವಾದಲ್ಲಿ ,ನಡೆಯುವುದು,ಮೆಟ್ಟಿಲು ಹತ್ತುವುದು,ತರಕಾರಿ ತರುವುದು ಇವುಗಳು ಸುಸ್ತು ತರಿಸುತ್ತಿದ್ದಲ್ಲಿ ತಕ್ಷಣ ಹೃದಯ ತಜ್ಞರನ್ನು ಭೇಟಿ ನೀಡಿ.

5.ಊಟದ ನಂತರ ಎದೆ ನೋವು:-

5.ಊಟದ ನಂತರ ಎದೆ ನೋವು:-

ಊಟದ ನಂತರ ಕರುಳಿಗೆ ರಕ್ತ ಸಂಚಲನವಾಗಿ ಜೀರ್ಣಕ್ರಿಯೆ ಪ್ರಾರಂಭವಾಗುತ್ತದೆ.ಆದರೆ ಹೃದಯದಲ್ಲಿ ಅಡಚಣೆ ಇದ್ದರೆ ಊಟದ ನಂತರ ನೋವು ಕಾಣಿಸಿಕೊಳ್ಳುತ್ತದೆ.

6.ವಿಪರೀತ ಬೆವರುವಿಕೆ ಮತ್ತು ನಾಡಿ ಬಡಿತ:-

6.ವಿಪರೀತ ಬೆವರುವಿಕೆ ಮತ್ತು ನಾಡಿ ಬಡಿತ:-

ವಿಪರೀತ ಹೃದಯ ಬಡಿತ ಅಥವಾ ಹೃದಯ ಬಡಿತದ ಬದಲಾವಣೆ ಹೃದಯದ ತೊಂದರೆಗೆ ಕಾರಣವಾಗಿರಬಹುದು.

7.ಪ್ರಜ್ಞೆ ತಪ್ಪುವಿಕೆ

7.ಪ್ರಜ್ಞೆ ತಪ್ಪುವಿಕೆ

ಹೃದಯದ ನೋವು ಇಲ್ಲದೆಯೇ ಆಕಸ್ಮಿಕ ಪ್ರಜ್ಞೆ ತಪ್ಪುವಿಕೆ,ಉಸಿರಾಟದ ತೊಂದರೆ ಇವುಗಳು ಹೃದಯ ತೊಂದರೆಯ ಕಾರಣಗಳಾಗಿರಬಹುದು.

8.ಸಾಮಾನ್ಯ ಸಂಕೇತಗಳು:-

8.ಸಾಮಾನ್ಯ ಸಂಕೇತಗಳು:-

ಎಡಗೈ ಮತ್ತು ಎದೆಯಲ್ಲಿ ನೋವು,ಎಡ ಬೆನ್ನುಹುರಿ ಮತ್ತು ಹೃದಯಕ್ಕೆ ಒಂದೇ ರಕ್ತ ಸರಬರಾಜಾಗುವುದರಿಂದ ಈ ರೀತಿ ನೋವು ಕಾಣಿಸಿಕೊಂಡಾಗ ಹೃದಯ ತಜ್ಞರನ್ನು ಭೇಟಿ ನೀಡುವುದು ಉತ್ತಮ.

English summary

Uncommon signs of a cardiac scare

Although most people associate angina or heart attack with excruciating pain in the centre of chest or behind breast bone, it's often that the body sends uncommon signals of a heart attack, that patients are unable to decipher.
X
Desktop Bottom Promotion