For Quick Alerts
ALLOW NOTIFICATIONS  
For Daily Alerts

ವೇಗವಾಗಿ ತೂಕ ಇಳಿಸುವುದರಿಂದ ಎದುರಾಗುವ ಅಪಾಯಗಳು!

By Super
|

ಸ್ಥೂಲಕಾಯವು ನಮ್ಮೆಲ್ಲರ ಜೀವನದ ಒ೦ದು ಸಾಮಾನ್ಯ ಸಮಸ್ಯೆಯಾಗಿದೆ. ಅನಾರೋಗ್ಯಕರ ಶೈಲಿಯ ಆಹಾರಸೇವನೆ, ತಡರಾತ್ರಿಯ ಉದ್ಯೋಗ, ಹಾಗೂ ಇನ್ನೂ ಅನೇಕ ಕಾರಣಗಳು ಸ್ಥೂಲಕಾಯದ ಹಿ೦ದಿನ ಕಾರಣಗಳಾಗಿರುತ್ತವೆ. ಆದರೆ, ಯಾರೊಬ್ಬರಿಗೂ ಸ್ಥೂಲಕಾಯವ೦ತೂ ಬೇಡವೇ ಬೇಡ...ಅಲ್ಲವೇ?

ಹಾಗಂತ ಸ್ಥೂಲಕಾಯಕ್ಕೆ ಕಾರಣವಾಗುವ ದೇಹದ ತೂಕವನ್ನು ಇಳಿಸಿಕೊಳ್ಳಲು ಬಲವಂತವಾಗಿ ಊಟ ತಿಂಡಿಗಳಿಂದ ದೂರವಿರುವುದು ಸರಿಯೇ? ಒಂದು ವೇಳೆ ನೀವು ಈ ರೀತಿ ಮಾಡಿದರೆ, ದೇಹಕ್ಕೆ ಲಭ್ಯವಾಗಬೇಕಿದ್ದ ಪೋಷಕಾಂಶಗಳು ಅಲಭ್ಯವಾಗಿ ದೇಹ ಸೊರಗಿ ಕೊಂಚ ತೂಕ ಇಳಿದಂತೆ ಕಂಡುಬರುತ್ತದೆ ಆದರೆ ಪೋಷಕಾಂಶಗಳ ಕೊರತೆಯಿಂದ ಹತ್ತು ಹಲವು ರೋಗಗಳಿಗೆ ಗುರಿಯಾಗುತ್ತೇವೆ.

ಸಾಮಾನ್ಯವಾಗಿ ನಾವು ಸಣ್ಣ ವಯಸ್ಸಿನವರಿರುವಾಗ ತೂಕಗಳಿಕೆಯ ಕುರಿತು ನೀವು ಅಷ್ಟೆಲ್ಲಾ ತಲೆಕೆಡಿಸಿಕೊ೦ಡಿರುವುದಿಲ್ಲ. ಆದರೆ, ತುಸು ದೊಡ್ಡವರಾಗಿ ಬುದ್ಧಿ ಬೆಳೆಯಲಾರ೦ಭಿಸಿದಾಗ, ಸ್ಥೂಲಕಾಯದ ಬಿಸಿ ತಟ್ಟಲಾರ೦ಭಿಸುತ್ತದೆ. ತೂಕಗಳಿಕೆಯು ತನ್ನ ಜೊತೆಯಲ್ಲಿಯೇ ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್, ಮಧುಮೇಹ, ಹಾಗೂ ಅ೦ತಹ ಅನೇಕ ಸಮಸ್ಯೆಗಳನ್ನು ಹೊತ್ತುಕೊ೦ಡೇ ಬರುತ್ತದೆ, ಎಂಬುದು ವಾಸ್ತವ ಸತ್ಯ, ಬನ್ನಿ ತ್ವರಿತವಾಗಿ ತೂಕ ಇಳಿಕೆಯಿಂದಾಗುವ ತೊಂದರೆಗಳೇನು ಎಂಬುದನ್ನು ನೋಡೋಣ..

ವೇಗವಾಗಿ ಸಣ್ಣಗಾಗುವುದು ಖಾಯಂ ಪರಿಹಾರವಲ್ಲ

ವೇಗವಾಗಿ ಸಣ್ಣಗಾಗುವುದು ಖಾಯಂ ಪರಿಹಾರವಲ್ಲ

ಮುಂಬೈನ ಆಹಾರ ತಜ್ಞೆ ಪ್ರಿಯಾ ಹೇಳುವ ಪ್ರಕಾರ: ವೇಗವಾಗಿ ತೂಕ ಕಳೆದುಕೊಳ್ಳುವ ರೀತಿಗಳನ್ನು ಅಳವಡಿಸಿಕೊಳ್ಳುವ ಮುಂಚೆ ಎಚ್ಚರವಾಗಿರಬೇಕು. ಒಮ್ಮೆ ತೂಕ ಇಳಿಯಬಹುದು, ಆದರೆ ಬಹಳ ಸಮಯದವರೆಗೆ ಇದು ಸಾಕಾಗುವುದಿಲ್ಲ. ತಾತ್ಕಾಲಿಕ ಬದಲಾವಣೆಗಳಿಗೆ ನಿಮ್ಮ ದೇಹ ಒಗ್ಗಿಕೊಳ್ಳದಿದ್ದರೆ ಅಳವಡಿಸಿಕೊಂಡ ಪದ್ಧತಿಗಳೆಲ್ಲ ಹಾಳಾಗಿ ಎಷ್ಟು ತೂಕ ಕಳೆದುಕೊಂಡಿದ್ದೀರೋ ಅದರ ದುಪ್ಪಟ್ಟು ತೂಕ ಹೆಚ್ಚಾಗಬಹುದು.

ನಿರ್ಜಲೀಕರಣ

ನಿರ್ಜಲೀಕರಣ

ನಮ್ಮ ಶರೀರದ ಬಹುತೇಕ ಭಾಗ ನೀರಿನಿಂದ ಕೂಡಿದೆ. ಈ ನೀರನ್ನು ಹೊರಹಾಕಿದರೆ ಅಥವಾ ಬಿಸಿಲಿಗೆ ಒಣಗಿಸಿದರೆ ತೂಕ ಕಡಿಮೆಯಾಗುತ್ತದೆ ಎಂಬ ತಿಳಿಗೇಡಿ ಭಾವನೆ ಕೆಲವರಲ್ಲಿದೆ. ಇದಕ್ಕಾಗಿ ಅವರು ನೀರು ಬಿಟ್ಟು ಬಿಸಿಲಿನಲ್ಲಿ ತಿರುಗುತ್ತಾರೆ. ಪರಿಣಾಮವಾಗಿ ದೇಹ ನಿರ್ಜಲೀಕರಣಕ್ಕೆ ತುತ್ತಾಗುತ್ತದೆ. ದೇಹಕ್ಕೆ ಅತಿ ಅಗತ್ಯವಾಗಿರುವ ನೀರು ಸಿಗದ ಕಾರಣ ಮಲಬದ್ಧತೆ, ಗಂಟಲು ಒಣಗುವಿಕೆ ಹಾಗೂ ತಲೆ ತಿರುಗುವ ತೊಂದರೆಗಳು ಪ್ರಾರಂಭವಾಗುತ್ತವೆ.

ಹತೋಟಿಗೆ ಬರದ ತಲೆಗೂದಲು ಉದುರುವ ಸಮಸ್ಯೆ

ಹತೋಟಿಗೆ ಬರದ ತಲೆಗೂದಲು ಉದುರುವ ಸಮಸ್ಯೆ

ಶೀಘ್ರ ತೂಕ ಕಳೆದುಕೊಳ್ಳುವವರಲ್ಲಿ ಕೂದಲುದುರುವ ಸಮಸ್ಯೆ ಕಂಡುಬರುತ್ತದೆ. ಕೂದಲುಗಳಿಗೂ ರಕ್ತದ ಮೂಲಕ ಪೂರೈಕೆಯಾಗುವ ಪೋಷಕಾಂಶಗಳ ಅಗತ್ಯವಿದೆ. ಊಟ ಕಡಿಮೆ ಮಾಡುವ ಮೂಲಕ ಶೀಘ್ರ ತೂಕ ಕಳೆದುಕೊಳ್ಳಬಯಸುವವರ ಕೂದಲುದುರುವ ಸಮಸ್ಯೆ ತಕ್ಷಣ ಪರಿಹಾರವಾಗುವುದಿಲ್ಲ.

ಜೀರ್ಣಕ್ರಿಯೆಗೆ ಪೆಟ್ಟು

ಜೀರ್ಣಕ್ರಿಯೆಗೆ ಪೆಟ್ಟು

ತೂಕ ಇಳಿಸುವ ಹೊತ್ತಿನಲ್ಲಿ ಜೀರ್ಣಕ್ರಿಯೆ ವೇಗವೂ ಕಡಿಮೆಯಾಗುತ್ತದೆ. ನಿಮ್ಮ ಹಳೆ ಆಹಾರ ಪದ್ದತಿಗೆ ಮರಳಿದಾಗ ನಿಧಾನಗೊಂಡ ಜೀರ್ಣಕ್ರಿಯೆಯಿಂದ ತೂಕ ಹೆಚ್ಚುವುದನ್ನು ಕಾಣುತ್ತೀರಿ.

ಉಪವಾಸದ ಸಮಯದಲ್ಲಿ

ಉಪವಾಸದ ಸಮಯದಲ್ಲಿ

ನೀವು ಉಪವಾಸದ ಸಮಯದಲ್ಲಿ ಕೊಬ್ಬು ಕರಗಿಸೋದೇನೋ ಸತ್ಯ. ಆದರೆ ನಿಮ್ಮ ಹಳೆಯ ಆಹಾರ ಪದ್ಧತಿಗೆ ಮರಳಿದಾಗ ತೂಕವೂ ಹಳೆಯದಕ್ಕೆ ಏರುತ್ತದೆ. ಜೊತೆಗೆ ಕೊಬ್ಬಿನಂಶವೂ ಹೆಚ್ಚಾಗುತ್ತದೆ.

ಹತ್ತು ಹಲವು ಪರೋಕ್ಷ ತೊಂದರೆಗಳು

ಹತ್ತು ಹಲವು ಪರೋಕ್ಷ ತೊಂದರೆಗಳು

ದೇಹಕ್ಕೆ ಪೋಷಕಾಂಶಗಳ ನಿರಂತರ ಪೂರೈಕೆಯಾಗುತ್ತಿರಬೇಕು. ಒಂದು ವೇಳೆ ಈ ಪೂರೈಕೆ ವ್ಯತ್ಯಯವಾದರೆ ದೇಹ ನಿಧಾನಕ್ಕೆ ಎಷ್ಟೋ ತೊಂದರೆಗಳಿಗೆ ಆಹ್ವಾನ ನೀಡುತ್ತದೆ. ನಿಃಶಕ್ತಿ ಆವರಿಸುತ್ತದೆ. ಮಹಿಳೆಯರಲ್ಲಿ ರಕ್ತಹೀನತೆ ಪ್ರಮುಖವಾಗಿ ಕಂಡುಬರುತ್ತದೆ.

English summary

Top risks of fast weight loss

Quick weight loss sounds exciting, but it is something not to be followed. Waiting patiently to lose the kilos is the best way to stay fit without any complications. In this way, you burn the correct amount of calories and restore some that is required to convert it into energy to perform the daily activities.
X
Desktop Bottom Promotion