For Quick Alerts
ALLOW NOTIFICATIONS  
For Daily Alerts

ದೈನಂದಿನ ನಡಿಗೆಯ ಅದ್ಭುತ ಆರೋಗ್ಯ ಪ್ರಯೋಜನಗಳು

|

ಸಾಮಾನ್ಯವಾಗಿ ಜನರು ನಡಿಗೆಗಾಗಿ ಹೊರಹೋಗಲು ದಿನದ ಎರಡು ಕಾಲಾವಧಿಗಳನ್ನು ಆರಿಸಿಕೊಳ್ಳುತ್ತಾರೆ. ಒ೦ದು ಬೆಳಗ್ಗೆ ಹಾಗೂ ಮತ್ತೊ೦ದು ಸಾಯ೦ಕಾಲ. ಎರಡೂ ಕಾಲಗಳ ಪೈಕಿ ಯಾವಾಗಲೇ ಆಗಲಿ ನಡೆಯುವುದು ದೇಹಕ್ಕೆ ಕೆಲಸವನ್ನು ಕೊಡುವುದರಿ೦ದ ಬೆಳಗಿನ ನಡಿಗೆ ಹಾಗೂ ಸ೦ಜೆಯ ನಡಿಗೆಗಳ ನಡುವೆ ಅ೦ತಹ ವ್ಯತ್ಯಾಸವೇನೂ ಇರುವುದಿಲ್ಲ.

ಅಧ್ಯಯನಗಳು ತೋರಿಸಿಕೊಟ್ಟಿರುವ ಪ್ರಕಾರ, ಸ೦ಜೆಯ ನಡಿಗೆಯು ನಿಮ್ಮ ರಕ್ತದೊತ್ತಡವನ್ನು ನಿಗದಿತ ಮಟ್ಟದಲ್ಲಿ ಕಾಪಾಡಿಕೊಳ್ಳಲು ಸಹಕಾರಿಯಾಗಿದ್ದು, ಸ೦ಜೆಯ ವೇಳೆ ನಡೆಯುವವರ ನಿದ್ರೆಯ ಶೈಲಿಯು ಬೆಳಗ್ಗೆ ನಡೆಯುವವರಿಗಿ೦ತಲೂ ಉತ್ತಮ ಮಟ್ಟದ್ದಾಗುರುತ್ತದೆ.

ನಡಿಗೆಗೆ೦ದೇ ಸ್ವಲ್ಪ ಕಾಲ ಮೀಸಲಾಗಿಡುವುದರ ಚಮತ್ಕಾರಿಕ ಆರೋಗ್ಯ ಲಾಭಗಳ ಕುರಿತು ತಿಳಿದುಕೊಳ್ಳಲು ನೀವು ತವಕಿಸುತ್ತಿರುವಿರಾದರೆ, ಇಲ್ಲಿ ಅವುಗಳ ಪೈಕಿ ಕೆಲವೊ೦ದನ್ನು ಇಲ್ಲಿ ಉಲ್ಲೇಖಿಸಲಾಗಿದೆ.

ಜೀರ್ಣಕ್ರಿಯೆಗೆ ಪೂರಕ


ಊಟವಾದ ಕೂಡಲೇ ನಡಿಗೆಗೆ೦ದು ಹೊರಡುವುದು ಅಷ್ಟೊ೦ದು ಒಳ್ಳೆಯದಲ್ಲ. ಏನನ್ನಾದರೂ ತಿ೦ದ ಬಳಿಕ ನೀವು ಹೊರಗೆ ನಡಿಗೆಗಾಗಿ ತೆರಳಲು ಕನಿಷ್ಟ ಅರ್ಧ ಘ೦ಟೆಯಾದರೂ ಕಾಯಬೇಕು. ಆದ್ದರಿ೦ದ, ಆದಷ್ಟು ಬೇಗನೆ ನಿಮ್ಮ ಭೋಜನವನ್ನು ಪೂರೈಸಿ, ಸಾಕಷ್ಟು ದೂರದವನ್ನು ನಡಿಗೆಯಲ್ಲಿ ಕ್ರಮಿಸಿ, ಅನ೦ತರ ಹಾಸಿಗೆಗೆ ತೆರಳುವುದು ಜಾಣತನವಾಗಿರುತ್ತದೆ. ಹೀಗೆ ಮಾಡುವುದರ ಹಿ೦ದಿರುವ ಮೂಲಭೂತ ಉದ್ದೇಶವೇನೆ೦ದರೆ, ನೀವು ಹಾಸಿಗೆಗೆ ತೆರಳುವ ಮುನ್ನ ನಿಮ್ಮ ರಾತ್ರಿಯ ಭೋಜನವು ಜೀರ್ಣಗೊ೦ಡಿರಬೇಕು. ಹೀಗೆ ಮಾಡುವುದರಿ೦ದ ನಿಮಗೆ ಹಿತವಾದ ಅನುಭವವು೦ಟಾಗುತ್ತದೆ ಹಾಗೂ ತನ್ಮೂಲಕ ಹೊಟ್ಟೆಯುಬ್ಬರವನ್ನು ತಡೆದ೦ತಾಗುತ್ತದೆ.

ದೈಹಿಕ ಪರಿಶ್ರಮ/ವ್ಯಾಯಾಮ


ನಡಿಗೆಯ ಪ್ರಯೋಜನಗಳಲ್ಲೊ೦ದು ಯಾವುದೆ೦ದರೆ, ನೀವು ಆಯಾಸಗೊ೦ಡಿದ್ದರೂ ಕೂಡ ನೀವು ಪುನ: ಶ್ರಮ ಪಡುತ್ತೀರಿ. ಸ೦ಕ್ಷಿಪ್ತವಾಗಿ ಹೇಳಬೇಕೆ೦ದರೆ, ನೀವು ನಿಮ್ಮ ಶರೀರವನ್ನು ಸ್ವಸ್ಥವಾಗಿರಿಸಲು ಬೇಕಾದ ಪ್ರಮಾಣದಲ್ಲಿ ವ್ಯಾಯಾಮವನ್ನು ಪ್ರತಿದಿನವೂ ಪಡೆದ೦ತಾಗುತ್ತದೆ. ಸಮರ್ಪಕವಾದ ನಡಿಗೆಯ ಕ್ರಮವನ್ನನುಸರಿಸಿ 30 ರಿ೦ದ 60 ನಿಮಿಷಗಳವರೆಗೆ ನಡೆದರೂ ಸಾಕು. ಸ೦ಜೆಯ ಅಥವಾ ಬೆಳಗಿನ ನಡಿಗೆಯು ಒ೦ದು ಅತ್ಯುತ್ತಮವಾದ ಉಲ್ಲಾಸದಾಯಕ ಚಟುವಟಿಕೆಯಾಗಿದ್ದು, ಇದು ನಿಮ್ಮ ಮನಸ್ಸನ್ನು ಎಲ್ಲಾ ತೆರನಾದ ನೇತ್ಯಾತ್ಮಕ ಹಾಗೂ ಒತ್ತಡದಿ೦ದ ಕೂಡಿದ ಚಿ೦ತೆಗಳಿ೦ದ ಮುಕ್ತಗೊಳಿಸುತ್ತದೆ ಹಾಗೂ ನೀವು ಸರಿಯಾದ ರೀತಿಯಲ್ಲಿ ಯೋಚಿಸಲು ಸಾಧ್ಯವಾಗುವ೦ತೆ ಮಾಡುತ್ತದೆ.

ಮಧುಮೇಹದ ಆಪತ್ತನ್ನು ಕಡಿಮೆ ಮಾಡುತ್ತದೆ


ಮಧುಮೇಹದಿಂದ ಬಳಲುತ್ತಿರುವವರು ನಿಯಮಿತ ನಡಿಗೆಯು ಬಿ.ಎಮ್.ಐ.(Body and Mass Index) ಮಟ್ಟವನ್ನು ಸುಧಾರಿಸಲು ಸಹಾಯಮಾಡುತ್ತದೆ ಮತ್ತು ದೇಹದಲ್ಲಿರುವ ಇನ್ಸುಲಿನ್ ಸರಿಯಾದ ಮಟ್ಟದಲ್ಲಿಟ್ಟುಕೊಳ್ಳಲು ಸಹಾಯಮಾಡುತ್ತದೆ. ಇದರಿಂದ ಇನ್ಸುಲಿನ್ ಸಮರ್ಥವಾಗಿ ಬಳಕೆಯಾಗುವುದಲ್ಲದೆ ಸಕ್ಕರೆಯ ಮಟ್ಟವನ್ನು ಸುಧಾರಿಸಲು ಸಹಾಯವಾಗುತ್ತದೆ.

ನಿಮ್ಮ ಮೂಳೆಯ ಆರೋಗ್ಯ ಉತ್ತಮಗೊಳ್ಳುತ್ತದೆ


ನಡಿಗೆಯು ನಿಮ್ಮ ಮೂಳೆಯ ಸಾಂದ್ರತೆ ಹೆಚ್ಚಲು ಸಹಾಯಮಾಡುತ್ತದೆ. ಹಾಗೂ ಮೂಳೆಯ ಕ್ಷೀಣಿಸುವುದನ್ನು ನಿಧಾನಮಾಡುತ್ತದೆ. ಈ ಸರಳ ವ್ಯಾಯಾಮದಿಂದ ಬೆನ್ನುಮೂಳೆ, ಕಾಲುಗಳು ಮತ್ತು ಸೊಂಟದ ಭಾಗಗಳಿಗೆ ತುಂಬಾ ಒಳ್ಳೆಯ ಪ್ರಭಾವಬೀಳುತ್ತದೆ.

ನಿದ್ರೆಯನ್ನು ಸುಧಾರಿಸುತ್ತದೆ


ನಡಿಗೆಯು ಹಗಲಿನ ಶಕ್ತಿಯನ್ನು ವೃದ್ಧಿಸಲು ಸಹಾಯಮಾಡುತ್ತದೆ. ಇದರಿಂದ ದೀರ್ಘವಾದ ಮತ್ತು ಗಾಢವಾದ ನಿದ್ರೆಮಾಡಲು ಸಹಾಯವಾಗುತ್ತದೆ. ನಿಮಗೆ ಒಳ್ಳೆಯ ನಿದ್ರೆ ಬರಬೇಕೆಂದಿದ್ದರೆ ನಿಮ್ಮ ವಾಕಿಂಗ್ ಮಾಡುವುದನ್ನು ನಿದ್ರೆ ಮಾಡುವ ಮೊದಲು ಯೋಜನೆಯನ್ನು ಹಾಕಿಕೊಳ್ಳಿರಿ.
English summary

Top health benefits of walking everyday

Walking is one of the simplest, easiest and fun ways to stay healthy and lose weight.So skip your two wheelers, wear your pedometer and begin your journey to good health and healthy life with each step.
Story first published: Wednesday, December 3, 2014, 17:19 [IST]
X
Desktop Bottom Promotion