For Quick Alerts
ALLOW NOTIFICATIONS  
For Daily Alerts

ಸರ್ವತೋಮುಖ ಆರೋಗ್ಯಕ್ಕಾಗಿ ದಾಳಿಂಬೆ ಸೇವಿಸಿ ನೋಡಿ!

|

ಸುಂದರವಾದ ಹಲ್ಲುಗಳನ್ನು ದಾಳಿಂಬೆಯ ಕಾಳುಗಳಿಗೆ ಹೋಲಿಸುವುದುಂಟು. ಪರ್ಷಿಯಾದಿಂದ ಬಂದ ಈ ಹಣ್ಣು ಹಣ್ಣಾದ ಬಳಿಕ ಹೊರಗಿನಿಂದ ಕಡುಗೆಂಪು ಅಥವಾ ಕಂದು ಬಣ್ಣಕ್ಕೆ ತಿರುಗಿದರೆ ಒಳಗಡೆ ನಸು ಗುಲಾಬಿಯಿಂದ ಗಾಢ ಕೆಂಪುವರ್ಣದ ಕಾಳುಗಳು ರತ್ನದಂತೆ ಹೊಳೆಯುತ್ತಿರುತ್ತವೆ.

ದಾಳಿಂಬೆ ಹಣ್ಣಿನ ಬೀಜಗಳನ್ನು ಒಂದೊಂದಾಗಿ ಜಾಗರೂಕತೆಯಿಂದ ಬಿಡಿಸಿ ತಿನ್ನುವುದೂ ಕೆಲವರಿಗೆ ಇಷ್ಟವಾಗುವುದಿಲ್ಲ. ಆದರೆ ಈ ಹಣ್ಣಿನ ಗುಣಗಳನ್ನು ಮನಗಂಡ ಬಳಿಕ ದಾಳಿಂಬೆ ತಿನ್ನುವ ಬಯಕೆಯಿಂದ ದೂರವಿರುವುದು ಮಾತ್ರ ಅತಿಕಷ್ಟ. ಬನ್ನಿ ದಾಳಿಂಬೆ ಹಣ್ಣು ಸೇವನೆಯಿಂದ ನಮ್ಮ ದೇಹ ಪಡೆಯುವ ಪ್ರಯೋಜನಗಳ ಬಗ್ಗೆ ನೋಡೋಣ. ಕಿಡ್ನಿ ಸಮಸ್ಯೆಯಿದ್ದರೆ ದಾಳಿಂಬೆ ಜ್ಯೂಸ್ ಕುಡಿಯಿರಿ

ಕ್ಯಾನ್ಸರ್ ರೋಗ ಬರುವ ಸಂಭವದಿಂದ ತಡೆಯುತ್ತದೆ

ಕ್ಯಾನ್ಸರ್ ರೋಗ ಬರುವ ಸಂಭವದಿಂದ ತಡೆಯುತ್ತದೆ

ದಾಳಿಂಬೆಯಲ್ಲಿ ಉತ್ತಮ ಪ್ರಮಾಣದಲ್ಲಿ ವಿಟಮಿನ್ ಎ, ವಿಟಮಿನ್ ಸಿ ಹಾಗೂ ಹಲವು ಆಂಟಿ ಆಕ್ಸಿಡೆಂಟುಗಳಿವೆ. ನಮ್ಮ ಜೀವಕೋಶಗಳಿಗೆ ಹಾನಿ ಎಸಗುವ ಫ್ರೀ ರ್‍ಯಾಡಿಕಲ್ ಎಂಬ ವಿಷಕಣಗಳನ್ನು ನಿಗ್ರಹಿಸಲು ವಿಟಮಿನ್ ಸಿ ಅಗತ್ಯವಾಗಿದೆ. ಉತ್ತಮ ಪ್ರಮಾಣದ ವಿಟಮಿನ್ ಸಿ ಮೂಲಕ ಈ ವಿಷಕಣಗಳನ್ನು ಸದೆಬಡಿಯಲು ಸಾಧ್ಯ. ಉತ್ತಮಗೊಳ್ಳುವ ಆರೋಗ್ಯದಿಂದ ಕಾನ್ಸರ್, ಅದರಲ್ಲೂ ವಿಶೇಷವಾಗಿ ಸ್ತನ, ಶ್ವಾಸಕೋಶ ಮತ್ತು ಮೂತ್ರಕೋಶದ ಕಂಠವನ್ನು ಬಳಸಿರುವ ಪ್ರಾಸ್ಟೇಟ್ ಕ್ಯಾನ್ಸರ್ ಬರುವುದನ್ನು ತಡೆಗಟ್ಟಿದಂತಾಗುತ್ತದೆ.

ಹೃದಯರೋಗವನ್ನು ದೂರವಿಡುತ್ತದೆ

ಹೃದಯರೋಗವನ್ನು ದೂರವಿಡುತ್ತದೆ

ನಮ್ಮ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಆದ low-density lipoprotein (LDL) ಜೊತೆಗೆ ಹೊಡೆದಾಡಲು ದಾಳಿಂಬೆಯಲ್ಲಿ ಉತ್ತಮ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟುಗಳಿವೆ. ಜೊತೆಗೇ ಉತ್ತಮ ಕೊಲೆಸ್ಟರಾಲ್ high-density lipoprotein (HDL) ಗಳನ್ನು ಹೆಚ್ಚಿಸುವುದರಿಂದ ಹೃದಯಕ್ಕೆ ಹೆಚ್ಚು ಒತ್ತಡದಿಂದ ರಕ್ತವನ್ನು ನೂಕುವ ಅಗತ್ಯ ಬೀಳದೇ ಉತ್ತಮ ಆರೋಗ್ಯ ಪಡೆಯುತ್ತದೆ. ದಾಳಿಂಬೆಯ ನಿಯಮಿತ ಸೇವನೆಯಿಂದ ರಕ್ತ ಸಂಚಾರ ಸುಲಲಿತವಾಗಿ ಆರೋಗ್ಯ ವೃದ್ಧಿಸುತ್ತದೆ.

ಅಸ್ಥಿಸಂಧಿವಾತ (Osteoarthritis) ವನ್ನು ದೂರವಿರಿಸುತ್ತದೆ

ಅಸ್ಥಿಸಂಧಿವಾತ (Osteoarthritis) ವನ್ನು ದೂರವಿರಿಸುತ್ತದೆ

ಮೂಳೆಗಳ ಸಂಧಿಗಳಲ್ಲಿ ಸವೆತ ಹೆಚ್ಚಾಗಿ ನೋವುಂಟಾಗುವ ಸಂಧಿವಾತ ಹೆಚ್ಚಾದಾಗ ಅಸ್ಥಿಸಂಧಿವಾತ ಎದುರಾಗುತ್ತದೆ. ದಾಳಿಂಬೆಯಲ್ಲಿರುವ ಹಲವು ಪೋಷಕಾಂಶಗಳು ಮೂಳೆಗಳನ್ನು ಹಾಗೂ ಮೂಳೆಗಳ ಸಂಧಿಗಳಲ್ಲಿ ಗ್ರೀಸ್ ನಂತೆ ಕಾರ್ಯ ಎಸಗುವ synovial fluid ಎಂಬ ದ್ರವವನ್ನು ಹೆಚ್ಚಿಸುವುದರಿಂದ ಮೂಳೆಸವೆತ ಕಡಿಮೆಯಾಗುತ್ತದೆ. ಪರಿಣಾಮವಾಗಿ ಅಸ್ಥಿಸಂಧಿವಾತದಿಂದ ದೂರವಾದಂತಾಗುತ್ತದೆ.

ರಕ್ತನಾಳಗಳ ಆರೋಗ್ಯವನ್ನು ಹೆಚ್ಚಿಸುವುದು

ರಕ್ತನಾಳಗಳ ಆರೋಗ್ಯವನ್ನು ಹೆಚ್ಚಿಸುವುದು

ನಮ್ಮ ಮನೆಯ ನೀರಿನ ಪೈಪನ್ನು ಕೆಲವರ್ಷಗಳ ಕಾಲ ತೆರೆದು ನೋಡಿದರೆ ಅದರ ಒಳಭಾಗದಲ್ಲಿ ದಪ್ಪನೆಯ ಕೆಸರಿನ ಪದರವೊಂದು ಕುಳಿತಿರುವುವನ್ನು ನೋಡಬಹುದು. ಆದರೆ ಇಷ್ಟು ದಿನ ಅದರ ಮೂಲಕ ಬರುತ್ತಿದ್ದ ನೀರು ಸ್ವಚ್ಛವಾಗಿಯೇ ಇತ್ತಲ್ಲಾ! ನಮ್ಮ ರಕ್ತನಾಳಗಳ ಒಳಗೂ ಹೀಗೆಯೇ ಹಲವು ಕಣಗಳು (endothelial cells) ಅಂಟಿಕೊಂಡಿರುತ್ತವೆ. ದಾಳಿಂಬೆಯಲ್ಲಿರುವ ಪೋಷಕಾಂಶಗಳು ರಕ್ತದಲ್ಲಿರುವ nitric oxide ಎಂಬ ರಸಾಯನಿಕವು ಈ ಕಣಗಳನ್ನು ರಕ್ತನಾಳಗಳ ಒಳಭಾಗದಿಂದ ಕಳಸಿ ವಿಸರ್ಜಿಸಲು ನೆರವಾಗುತ್ತವೆ. ಪರಿಣಾಮವಾಗಿ ರಕ್ತದೊತ್ತಡ ಕಡಿಮೆಯಾಗಿ ಆರೋಗ್ಯ ವೃದ್ಧಿಸುತ್ತದೆ.

ಹೃದಯದೊತ್ತಡವನ್ನು ಕಡಿಮೆಗೊಳಿಸುವುದು

ಹೃದಯದೊತ್ತಡವನ್ನು ಕಡಿಮೆಗೊಳಿಸುವುದು

ಹೃದಯದೊತ್ತಡವಿರುವವರು ದಾಳಿಂಬೆಯನ್ನು ನಿಯಮಿತವಾಗಿ ಸೇವಿಸಿದಾಗ ಕೆಲವೇ ದಿನಗಳಲ್ಲಿ ಒತ್ತಡ ೫% ಕಡಿಮೆಯಾಗಿರುವುದು ಸಂಶೋಧನೆಗಳಿಂದ ಕಂಡುಬಂದಿದೆ. ಅಲ್ಲದೇ ರಕ್ತದೊತ್ತಡ ಮೇಲೆ ಕೆಳಗೆ ಏರುಪೇರಾಗುವುದನ್ನೂ ಕಡಿಮೆಗೊಳಿಸಿದೆ.

ಹಲ್ಲುಗಳ ರಕ್ಷಣೆಗೆ

ಹಲ್ಲುಗಳ ರಕ್ಷಣೆಗೆ

ಪ್ರತಿದಿನ ದಾಳಿಂಬೆಯನ್ನು ಸೇವಿಸುವುದರಿಂದ ಹಲ್ಲಿನ ಸಂಧಿಗಳ ನಡುವೆ ಉತ್ಪತ್ತಿಯಾಗುವ ಪಿಟ್ಟು (dental plaque) ನಿವಾರಣೆಯಾಗುತ್ತದೆ.

ಅತಿಸಾರವನ್ನು ನಿಯಂತ್ರಿಸುವುದು

ಅತಿಸಾರವನ್ನು ನಿಯಂತ್ರಿಸುವುದು

ಯಾವುದೋ ಕಾರಣದಿಂದ ಅತಿಸಾರ ಬೇಧಿಯಾಗುತ್ತಿದ್ದರೆ ದಾಳಿಂಬೆಯ ಹಣ್ಣನ್ನು ಹಸಿಯಾಗಿ ತಿನ್ನುವುದರಿಂದ ಅಥವಾ ಹಣ್ಣಿನ ರಸವನ್ನು ಕುಡಿಯುವುದರಿಂದ ಕೂಡಲೇ ನಿಯಂತ್ರಣಕ್ಕೆ ಬರುತ್ತದೆ.

ತೂಕ ಕಳೆದುಕೊಳ್ಳಲು ನೆರವಾಗುವುದು

ತೂಕ ಕಳೆದುಕೊಳ್ಳಲು ನೆರವಾಗುವುದು

ದಾಳಿಂಬೆಯಲ್ಲಿ ಉತ್ತಮ ಪ್ರಮಾಣದ ಕರಗುವ ನಾರು ಇದೆ ಹಾಗೂ ಕೊಬ್ಬನ್ನು ಕರಗಿಸಲು ಅಗತ್ಯವಾದ ಹಲವು ಪೋಷಕಾಂಶಗಳಿವೆ. ಅಂದರೆ ದಾಳಿಂಬೆ ಹೊಟ್ಟೆ ಸೇರಿದಾಗ ಈ ಪೋಷಕಾಂಶಗಳನ್ನು ಜೀರ್ಣಿಸಲು ಹೊಟ್ಟೆಗೆ ಹೆಚ್ಚಿನ ಕೊಬ್ಬಿನ ಅಗತ್ಯ ಬೀಳುತ್ತದೆ. ಪರಿಣಾಮವಾಗಿ ಪ್ರತಿದಿನ ದಾಳಿಂಬೆ ಸೇವಿಸುವುದರಿಂದ ನಿಧಾನವಾಗಿ ಕೊಬ್ಬು ಕರಗುತ್ತಾ ಹೋಗುತ್ತದೆ.

ಜೀವಕೋಶಗಳಿಗೆ ನವ ಚೈತನ್ಯ ನೀಡುತ್ತದೆ

ಜೀವಕೋಶಗಳಿಗೆ ನವ ಚೈತನ್ಯ ನೀಡುತ್ತದೆ

ದಾಳಿಂಬೆಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ನಮ್ಮ ಜೀವಕೋಶಗಳಿಗೆ ಹಾನಿ ಎಸಗುವ ಫ್ರೀ ರ್‍ಯಾಡಿಕಲ್ ಎಂಬ ವಿಷಕಣಗಳ ವಿರುದ್ಧ ಹೋರಾಡಿ ಜೀವಕೋಶಗಳು ಸಾಯುವುದನ್ನು ತಡೆಯುತ್ತದೆ. ಪರಿಣಾಮವಾಗಿ ಮೈಕಾಂತಿ ಹೆಚ್ಚುತ್ತದೆ ಹಾಗೂ ಅರೋಗ್ಯ ಉತ್ತಮಗೊಳ್ಳುತ್ತದೆ.

ಮೆದುಳಿಗೆ Alzheimer ಕಾಯಿಲೆ ಬರುವುದನ್ನು ತಪ್ಪಿಸುತ್ತದೆ

ಮೆದುಳಿಗೆ Alzheimer ಕಾಯಿಲೆ ಬರುವುದನ್ನು ತಪ್ಪಿಸುತ್ತದೆ

ಮೆದುಳು ಕ್ರಮೇಣವಾಗಿ ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುವ ಈ ಖಾಯಿಲೆಗೆ ಯಾವುದೇ ಖಚಿತ ಔಷಧವಿಲ್ಲ. ಅತಿ ಹೆಚ್ಚೆಂದರೆ ಈ ಕಾಯಿಲೆ ಆವರಿಸುವ ಸಮಯವನ್ನು ಕೊಂಚ ಮುಂದೂಡಬಹುದಷ್ಟೇ. ಆದರೆ ದಾಳಿಂಬೆಯ ನಿಯಮಿತ ಸೇವನೆಯಿಂದ ಈ ಕಾಯಿಲೆಯನ್ನು ಬರದಂತೆ ತಡೆಯಬಹುದು. ಅಲ್ಲದೇ ಕಾಯಿಲೆ ಬಂದವರಲ್ಲಿ ದಾಳಿಂಬೆಯ ಸೇವನೆಯ ಬಳಿಕ ಕೊಂಚ ಸುಧಾರಣೆಯಾಗಿರುವುದು ಆಶಾದಾಯಕವಾಗಿ ಕಂಡುಬಂದಿದೆ.

ಹಸಿವನ್ನು ಹೆಚ್ಚಿಸುತ್ತದೆ

ಹಸಿವನ್ನು ಹೆಚ್ಚಿಸುತ್ತದೆ

ಊಟಮಾಡಲು ಹಟಮಾಡುವ ಮಕ್ಕಳಿಗೆ ಊಟಕ್ಕೂ ಮೊದಲು ಕೆಲವು ದಾಳಿಂಬೆ ಕಾಳುಗಳನ್ನು ತಿನ್ನಿಸುವುದರಿಂದ ಅಥವ ಒಂದು ಲೋಟ ದಾಳಿಂಬೆ ರಸವನ್ನು ಕುಡಿಯಲು ನೀಡುವ ಮೂಲಕ ಊಟದ ಸಮಯದಲ್ಲಿ ತಕರಾರು ಮಾಡದೇ ಇರುವುದು ಸಂಶೋಧನೆಗಳಿಂದ ತಿಳಿದುಬಂದಿದೆ. ಹಿರಿಯರಲ್ಲೂ ಹಸಿವನ್ನು ಹೆಚ್ಚಿಸಿ ಆರೋಗ್ಯವನ್ನು ವೃದ್ಧಿಸುತ್ತದೆ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ದಾಳಿಂಬೆಯ ಕಾಳುಗಳ ಹೊರಭಾಗದಲ್ಲಿರುವ ರಸದಲ್ಲೂ ಕರಗುವ ನಾರು ಇದ್ದರೆ ಒಳಗಿನ ಬೀಜದಲ್ಲಿ ಕರಗದ ನಾರು ಇದೆ. ಈ ಎರಡೂ ನಾರುಗಳು ಜೀರ್ಣಕ್ರಿಯೆಯನ್ನು ಸುಲಲಿತಗೊಳಿಸಿ ಮಲಬದ್ಧತೆಯಿಂದ ಕಾಪಾಡುತ್ತವೆ. ಜೀರ್ಣಕ್ರಿಯೆಯಲ್ಲಿ ಸಹಕರಿಸಿ ಅಜೀರ್ಣ, ವಾಕರಿಕೆ, ಕರುಳಿನ ಒಳಭಾಗದಲ್ಲಿ ಗಂಟುಗಳಾಗುವುದು, ಬೇಧಿ ಮತ್ತು ಮೂಲವ್ಯಾಧಿಯಿಂದ ರಕ್ಷಿಸುತ್ತದೆ. ಅಲ್ಲದೇ ನಮ್ಮ ಕರುಳುಗಳ ಒಳಗೆ ಮನೆ ಮಾಡಿಕೊಂಡು ಕಾಲ ಮೇಲೆ ಕಾಲು ಹಾಕಿ ಹಾಯಾಗಿ ವಾಸವಾಗಿದ್ದ ಪರಾವಲಂಬಿ ಕ್ರಿಮಿಗಳನ್ನು ಒದ್ದೋಡಿಸುತ್ತದೆ.

ರಕ್ತಹೀನತೆಯನ್ನು ತಡೆಯುತ್ತದೆ

ರಕ್ತಹೀನತೆಯನ್ನು ತಡೆಯುತ್ತದೆ

ದಾಳಿಂಬೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣ ಇರುವುದರಿಂದ ಅಸ್ಥಿಮಜ್ಜೆಯಲ್ಲಿ ರಕ್ತಕಣಗಳು ಹೆಚ್ಚು ಉತ್ಪತ್ತಿಯಾಗಲು ಸಹಕರಿಸುತ್ತದೆ. ರಕ್ತದಲ್ಲಿ ಕೆಂಪುರಕ್ತಗಣಗಳನ್ನು ಹೆಚ್ಚಿಸಿ ರಕ್ತಹೀನತೆಯನ್ನು ತಡೆಯುತ್ತದೆ.

ಉರಿಯೂತವನ್ನು ಕಡಿಮೆಗೊಳಿಸುತ್ತದೆ

ಉರಿಯೂತವನ್ನು ಕಡಿಮೆಗೊಳಿಸುತ್ತದೆ

ದಾಳಿಂಬೆಯಲ್ಲಿರುವ ಉತ್ತಮ ಪ್ರಮಾಣದ ವಿಟಮಿನ್ ಸಿ ಹಾಗೂ ಹಲವು ಆಂಟಿ ಆಕ್ಸಿಡೆಂಟುಗಳು ಗಂಟಲ, ಅನ್ನನಾಳ ಹಾಗೂ ಜಠರದಲ್ಲಿ ಉರಿಯೂತ ಬರಿಸುವ ಧಾತುಗಳಿಂದ ರಕ್ಷಣೆ ನೀಡುತ್ತದೆ. ಪರಿಣಾಮವಾಗಿ ಗಂಟಲ ಕೆರೆತ, ಅಸ್ತಮಾ, ಕಷ್ಟಕರವಾದ ಉಸಿರಾಟ, ಕೆಮ್ಮು ಮೊದಲಾದ ತೊಂದರೆಗಳಿಂದ ಮುಕ್ತಿ ದೊರಕುತ್ತದೆ.

ಉತ್ತಮಗೊಳ್ಳುವ ದಾಂಪತ್ಯ ಸಂಗ

ಉತ್ತಮಗೊಳ್ಳುವ ದಾಂಪತ್ಯ ಸಂಗ

ದಾಳಿಂಬೆ ಒಂದು ಉತ್ತಮ ಕಾಮೋತ್ತೇಜಕವಾಗಿದೆ. ದಾಳಿಂಬೆಯ ನಿಯಮಿತ ಸೇವನೆಯಿಂದ ದೇಹದಲ್ಲಿ ಹೆಚ್ಚುವ ಟೆಸ್ಟೋಸ್ಟಿರೋನ್ ಎಂಬ ಹಾರ್ಮೋನು ಪುರುಷರ ಆಂತರಿಕ ಶಕ್ತಿಯನ್ನು ಹೆಚ್ಚಿಸಿ ಮಿಲನದಲ್ಲಿ ಹೆಚ್ಚು ಉತ್ಸಾಹದಿಂದ ಭಾಗವಹಿಸಲು ನೆರವಾಗುತ್ತದೆ. ದಾಳಿಂಬೆ ಹಣ್ಣನ್ನು ಹಾಗೇ ತಿನ್ನುವುದಕ್ಕಿಂತ ಹಣ್ಣಿನ ರಸವನ್ನು ಸೇವಿಸಿದಾಗ ಉತ್ತಮ ಪರಿಣಾಮ ಕಂಡುಬಂದಿದೆ.

ಅಲರ್ಜಿಗೆ ನೈಸರ್ಗಿಕ ಪ್ರತಿರೋಧಿಯಾಗಿದೆ

ಅಲರ್ಜಿಗೆ ನೈಸರ್ಗಿಕ ಪ್ರತಿರೋಧಿಯಾಗಿದೆ

ಹಲವರಿಗೆ ಕೆಲವು ವಸ್ತುಗಳಿಂದ ಅಲರ್ಜಿಯುಂಟಾಗುತ್ತದೆ. ಹೂವಿನ ಪರಾಗ, ಕೀಟಗಳ ಕಚ್ಚುವಿಕೆ, ಕೆಲವು ಗಿಡಗ ಮುಳ್ಳುಗಳು, ಎಲೆ ತುಂಡಾದರೆ ಒಸರುವ ಹಾಲಿನಂತಹ ದ್ರವ ಮೊದಲಾದವು ಅಲರ್ಜಿ ಉಂಟುಮಾಡುತ್ತವೆ. ಈ ಅಲರ್ಜಿಗಳನ್ನು ಎದುರಿಸಲು ದೇಹ ಅದಕ್ಕೆ ಕಾರಣವಾದ ಅಲರ್ಜಿಕಾರಕ ವಸ್ತುವಿಗೆ ಪ್ರತಿರೋಧಿಯನ್ನು ಸೃಷ್ಟಿಸಿಕೊಳ್ಳಬೇಕು. ದಾಳಿಂಬೆಯಲ್ಲಿರುವ polyphenol ಎಂಬ ಕಿಣ್ವ ಈ ಪ್ರತಿರೋಧಿಯನ್ನು ಸೃಷ್ಟಿಸಲು ನೆರವಾಗುತ್ತದೆ. ಪರಿಣಾಮವಾಗಿ ದೇಹ ಅಲರ್ಜಿಯಿಂದ ಶೀಘ್ರ ಹೊರಬರುತ್ತದೆ.

ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸುತ್ತದೆ

ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸುತ್ತದೆ

ದಾಳಿಂಬೆಯಲ್ಲಿರುವ polyphenols, anthocyanins ಮತ್ತು tannins ಎಂಬ ಕಿಣ್ವಗಳು ಮೂತ್ರಪಿಂಡಗಳ ಕೆಲಸಕ್ಕೆ ನೆರವಾಗುತ್ತವೆ. ಪರಿಣಾಮವಾಗಿ ರಕ್ತ ಪರಿಶುದ್ಧಗೊಂಡು ದೇಹದ ವಿಷಕಾರಕ ವಸ್ತುಗಳು ಮೂತ್ರದ ಮೂಲಕ ಹೊರಹಾಕಲ್ಪಡುತ್ತವೆ.

ಕ್ಯಾನ್ಸರ್ ತಡೆಗಟ್ಟುವುದು

ಕ್ಯಾನ್ಸರ್ ತಡೆಗಟ್ಟುವುದು

ದಾಳಿಂಬೆಯಲ್ಲಿ ಹಲವು ಆಂಟಿ ಆಕ್ಸಿಡೆಂಟುಗಳು ಹೇರಳವಾಗಿರುವುದರಿಂದ ದೇಹ ಕ್ಯಾನ್ಸರ್ ರೋಗವನ್ನು ಎದುರಿಸಲು ಹೆಚ್ಚು ಶಕ್ತಿ ಪಡೆಯುತ್ತದೆ. ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಕ್ಯಾನ್ಸರ್ ಇದ್ದರೆ ಅಥವಾ ಕ್ಯಾನ್ಸರ್ ಲಕ್ಷಣಗಳು ಗೋಚರಿಸುತ್ತಿದ್ದರೆ ದಾಳಿಂಬೆಯ ನಿಯಮಿತ ಸೇವನೆ ಕ್ಯಾನ್ಸರ್ ನ ಆಗಮನವನ್ನು ದೂರವಿಡುತ್ತದೆ.

ಪಿತ್ತಜನಕಾಂಗದ ಬೆಳವಣಿಗೆಗೆ ಸಹಾಯ

ಪಿತ್ತಜನಕಾಂಗದ ಬೆಳವಣಿಗೆಗೆ ಸಹಾಯ

ನಮ್ಮ ದೇಹದಲ್ಲಿನ ಅಂಗಗಳಲ್ಲಿ ಒಂದು ಭಾಗ ದಾನ ಮಾಡಿದ ಬಳಿಕ ಮತ್ತೆ ಬೆಳೆಯುವ ಅಂಗವೆಂದರೆ ಪಿತ್ತಜನಕಾಂಗ ಮಾತ್ರ. ಈ ಬೆಳವಣಿಗೆಗೆ glutathione ಎಂಬ ಕಿಣ್ವ ಅಗತ್ಯ. ದಾಳಿಂಬೆಯಲ್ಲಿರುವ ellagic acid ಎಂಬ ಅಂಶ glutathione ಕಿಣ್ವವನ್ನು ಹೆಚ್ಚು ಹೆಚ್ಚಾಗಿ ದೇಹ ಉತ್ಪಾದಿಸಿಕೊಳ್ಳಲು ನೆರವಾಗುತ್ತದೆ. ಪರಿಣಾಮವಾಗಿ ಪಿತ್ತಜನಕಾಂಗ ಶೀಘ್ರವೇ ತನ್ನ ಮೂಲಸ್ವರೂಪ ಪಡೆಯುತ್ತದೆ. ಹೆಚ್ಚಾಗಿ ಮದ್ಯಪಾನಿಗಳಲ್ಲಿ ಪಿತ್ತಜನಕಾಂಗ ಬಾಧೆಗೊಳಗಾಗಿದ್ದು ದಾಳಿಂಬೆಯ ಸೇವನೆ ಪರಿಣಾಮಕಾರಿಯಾಗಿದೆ.

ವೃದ್ಧಾಪ್ಯವನ್ನು ದೂರವಿಡುತ್ತದೆ

ವೃದ್ಧಾಪ್ಯವನ್ನು ದೂರವಿಡುತ್ತದೆ

ದಾಳಿಂಬೆಯಲ್ಲಿರುವ ಹಲವು ಆಂಟಿ ಆಕ್ಸಿಡೆಂಟುಗಳು ಶಾರೀರಿಕ ಆರೋಗ್ಯದ ಜೊತೆಗೆ ಚರ್ಮದ ಕಾಂತಿಯನ್ನೂ ಹೆಚ್ಚಿಸುವ ಕಾರಣ ವೃದ್ಧಾಪ್ಯದ ಚಿಹ್ನೆಗಳು ಬೇಗನೇ ಆವರಿಸದು. ನಮ್ಮ ಚರ್ಮ ಕೊಲಾಜೆನ್ ಮತ್ತು ಎಲಾಸ್ಟಿಕ್ ನಾರುಗಳಿಂದ ಮಾಡಲ್ಪಟ್ಟಿದೆ (collagen and elastic fibres). ಈ ಕೊಲಾಜೆನ್ ಸುಸ್ಥಿತಿಯಲ್ಲಿಡಲು ವಿಟಮಿನ್ ಸಿ ಅಗತ್ಯ. ದಾಳಿಂಬೆಯಲ್ಲಿ ಸಮಪ್ರಮಾಣದಲ್ಲಿರುವ ವಿಟಮಿನ್ ಸಿ ಚರ್ಮದ ಆರೈಕೆ ಮತ್ತು ರಕ್ಷಣೆಗೆ ಕಾರಣವಾಗಿದೆ.

ಸುಲಭಗೊಳ್ಳುವ ವಿಸರ್ಜನೆ

ಸುಲಭಗೊಳ್ಳುವ ವಿಸರ್ಜನೆ

ದಾಳಿಂಬೆ ಹಣ್ಣಿನಲ್ಲಿ ಸುಲಭವಾಗಿ ಕರಗದ ನಾರಿನಂಶವಿರುವ ಕಾರಣ ಕರುಳಿನಲ್ಲಿ ಪಚನಕ್ರಿಯೆಯ ನಂತರ ತ್ಯಾಜ್ಯಗಳೊಂದಿಗೆ ಸುಲಭವಾಗಿ ಮಿಳಿತಗೊಂಡು ಸುಖವಿಸರ್ಜನೆಗೆ ಸಹಾಯ ಮಾಡುತ್ತದೆ. ಈ ನಾರು ದಾಳಿಂಬೆ ಕಾಳಿನ ಒಳಗಿನ ಬೀಜದಲ್ಲಿ ಶೇಖರವಾಗಿದ್ದು ಪ್ರತಿದಿನದ ಬಹಿರ್ದೆಶೆಗೆ ನೆರವಾಗುತ್ತದೆ.

ದಾಳಿಂಬೆಯಲ್ಲಿದೆ ಕಬ್ಬಿಣದ ಖಜಾನೆ

ದಾಳಿಂಬೆಯಲ್ಲಿದೆ ಕಬ್ಬಿಣದ ಖಜಾನೆ

ದೇಹದಲ್ಲಿ ಹೆಚ್ಚಿನ ಶಕ್ತಿ ತುಂಬಲು ರಕ್ತದಲ್ಲಿ ಕಬ್ಬಿಣದ ಅಂಶ ಇರುವುದು ಅಗತ್ಯ. ಹಾಗಾಗಿ ದೇಹದಲ್ಲಿ ಕಬ್ಬಿಣದ ಅಂಶ ಕಡಿಮೆಯಾದರೆ ಬಸಲೆ ಅಥವಾ ಪಾಲಕ್ ಸೊಪ್ಪಿನ ಅಡುಗೆಗಳನ್ನು ತಿನ್ನಲು ವೈದ್ಯರು ಸಲಹೆ ಮಾಡುತ್ತಾರೆ. ಆದರೆ ಇದರಲ್ಲಿರುವ ಕಬ್ಬಿಣದ ಅಂಶ ತುಂಬಾ ಹೆಚ್ಚಿರುವುದರಿಂದ (2.7 ಮಿ.ಗ್ರಾಂ/100ಗ್ರಾಂ) ವೈದ್ಯರು ಸೂಕ್ತ ಪ್ರಮಾಣದಲ್ಲಿರುವ (0.3 ಮಿ.ಗ್ರಾಂ/ಗ್ರಾಂ) ದಾಳಿಂಬೆ ಹಣ್ಣನ್ನು ಸೇವಿಸಲು ಶಿಫಾರಸ್ಸು ಮಾಡುತ್ತಾರೆ. ಸೊಪ್ಪನ್ನು ನೇರವಾಗಿ ಸೇವಿಸಲು ಸಾಧ್ಯವಿಲ್ಲ. ಬೇಯಿಸಿದ ಬಳಿಕ ಹಲವು ಪೌಷ್ಟಿಕಾಂಶಗಳು ನಷ್ಟವಾಗುವ ಕಾರಣ ನೇರವಾಗಿ ತಿನ್ನಬಹುದಾದ ದಾಳಿಂಬೆ ಆರೋಗ್ಯದ ದೃಷ್ಟಿಯಿಂದ ಅತ್ಯುತ್ತಮ ಆಯ್ಕೆಯಾಗಿದೆ.

ಮರೆವಿನ ರೋಗಕ್ಕೆ ಒಳ್ಳೆ ಮದ್ದು

ಮರೆವಿನ ರೋಗಕ್ಕೆ ಒಳ್ಳೆ ಮದ್ದು

ನಿಮಗೆ ನೆನಪಿನ ಶಕ್ತಿ ಕಡಿಮೆಯಾಗಿದ್ದರೆ ದಾಳಿಂಬೆ ರಸ ಹೆಚ್ಚು ಉಪಯುಕ್ತ. ಮರೆವಿನ ರೋಗಕ್ಕೆ ದಾಳಿಂವೆ ರಾಮಬಾಣ.

ಪುರುಷರಿಗೆ ಬೆಸ್ಟ್!

ಪುರುಷರಿಗೆ ಬೆಸ್ಟ್!

ನೀವು ಹೇಳಿಕೊಳ್ಳಲಾಗದ ಕೆಲವು ಶಾರೀರಿಕ ನ್ಯೂನತೆಗಳನ್ನು ನಿವಾರಿಸುವಲ್ಲಿ ಸಹಾಯಕವಾಗಿದೆ.ಇದೇನು ವಂಡರ್ ಡ್ರಗ್ ಏನಲ್ಲಾ; ದಾಳಿಂಬೆಯ ರಸ ಗಂಡಸುತನದ ತೊಂದರೆ ಇರುವ ಪುರುಷರಿಗೆ ಉಪಯುಕ್ತವಾಗಿದೆ.ಅನೇಕ ಸಂಶೋಧನೆಗಳ ಮೂಲಕ ದಾಳಿಂಬೆಯಲ್ಲಿ ಈ ಔಷಧಿಯ ಅಂಶಗಳಿವೆ ಎನ್ನುವುದು ಸಾಬೀತಾಗಿದೆ.

ಆಮ್ಲಜನಕ ಪೂರೈಕೆಗೆ ಸಹಕಾರಿಯಾಗಿದೆ

ಆಮ್ಲಜನಕ ಪೂರೈಕೆಗೆ ಸಹಕಾರಿಯಾಗಿದೆ

ದಾಳಿಂಗೆಯಯು ನಿಮ್ಮ ಶರೀರದಲ್ಲಿ ಆಮ್ಲಜನಕವಾಗಿ ಕಾರ್ಯ ನಿರ್ವಹಿಸುತ್ತದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ದಾಳಿಂಬೆ ರಸ ರಕ್ತಶುದ್ಧೀಕರಿಸುವ ಲಿವರ್ (ಪಿತ್ತಜನಕಾಂಗ)ಗೆ ಆಮ್ಲಜನಕ ಸರಬರಾಜು ಮಾಡುತ್ತದೆ. ರೋಗನಿರೋಧಕವಾಗಿ ಕಾರ್ಯ ಮಾಡುತ್ತಾ ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟುತ್ತದೆ.ಇದರಿಂದಾಗಿ ರಕ್ತ ನಾಳಗಳಲ್ಲಿ ರಕ್ತವು ಸಲೀಸಾಗಿ ಹರಿಯಲು ಸಹಾಯವಾಗುತ್ತದೆ.ಅಲ್ಲದೆ ರಕ್ತದಲ್ಲಿರುವ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುತ್ತದೆ.

English summary

Top Health Benefits of Pomegranate

Known as a “superfood” or “nature’s power fruit”, pomegranate is the original native of Persia. However, besides being privileged, pomegranate is known to cure various health related concerns. Read the article below to know that for what this ruby-red fruit is good for.
X
Desktop Bottom Promotion