For Quick Alerts
ALLOW NOTIFICATIONS  
For Daily Alerts

ಆರೋಗ್ಯ ವರ್ಧನೆಗೆ ಕೊತ್ತಂಬರಿ ಸೊಪ್ಪು ಹೇಗೆ ಸಹಕಾರಿ?

By Super
|

ಸಾಮಾನ್ಯವಾಗಿ ಸಿಹಿತಿಂಡಿಗಳನ್ನು ಬಿಟ್ಟು ಬಹುತೇಕ ಎಲ್ಲಾ ಪದಾರ್ಥಗಳ ಕೊನೆಯಲ್ಲಿ ಸೇರಿಸುವುದು ಕೊತ್ತಂಬರಿ ಸೊಪ್ಪನ್ನು. ಇದು ಕೇವಲ ರುಚಿಯನ್ನು ಹೆಚ್ಚಿಸುತ್ತದೆ ಎಂದು ಭಾವಿಸಿದರೆ ಅದು ದೊಡ್ಡ ತಪ್ಪಾಗುತ್ತದೆ. ಏಕೆಂದರೆ ಕೊತ್ತಂಬರಿ ಸೊಪ್ಪಿನಲ್ಲಿ ಹೇರಳವಾದ ಪೋಷಕಾಂಶಗಳಿದ್ದು ಆರೋಗ್ಯಕ್ಕೆ ಪೂರಕವಾಗಿವೆ. ಪಟ್ಟಿಮಾಡಲು ಹೊರಟರೆ ಇದರ ಉತ್ತಮ ಗುಣಗಳ ಪಟ್ಟಿ ಸಾಕಾಗದೇ ಗ್ರಂಥವೊಂದನ್ನೇ ರಚಿಸಬಹುದು.

ಮುಖ್ಯವಾಗಿ ಚರ್ಮದ ತುರಿಕೆ, ರಕ್ತದಲ್ಲಿ ಹೆಚ್ಚಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು, ಅತಿಸಾರ, ಬಾಯಿಯ ಹುಣ್ಣು, ರಕ್ತಹೀನತೆ, ಅಜೀರ್ಣ, ಋತುಚಕ್ರದಲ್ಲಿ ಏರುಪೇರು, ರಕ್ತದಲ್ಲಿ ಸಕ್ಕರೆಯ ಪ್ರಮಾಣದಲ್ಲಿ ಏರುಪೇರು ಹಾಗೂ ಕಣ್ಣಿನ ಆರೋಗ್ಯ ಕಾಪಾಡುವಲ್ಲಿ ಕೊತ್ತಂಬರಿ ಉಪಯುಕ್ತವಾಗಿದೆ.

ಕೊತ್ತಂಬರಿಯ ಪೋಷಕಾಂಶಗಳ ಪಟ್ಟಿಯನ್ನು ನೋಡಿದರೆ ಇಷ್ಟೊಂದು ಗುಣಗಳು ಈ ಪುಟ್ಟ ಸೊಪ್ಪಿನಲ್ಲಿದೆಯೇ ಎಂಬ ಅನುಮಾನ ಮೂಡುವುದು ಸಹಜ. ಇದುವರೆಗೆ ಸಾಲಾಡ್ ಅಥವಾ ಸಾರಿನಲ್ಲಿದ್ದ ಕೊತ್ತಂಬರಿ ಸೊಪ್ಪನ್ನು ಬದಿಗೆಸೆಯುತ್ತಿದ್ದವರು ಈ ವಿವರಗಳನ್ನು ನೋಡಿದ ಬಳಿಕ ಈ ಅಭ್ಯಾಸವನ್ನು ಕೈಬಿಡುವುದು ಒಳಿತು. ಇದರಲ್ಲಿ ಹನ್ನೊಂದು ವಿಧದ ಉಪಯುಕ್ತ ತೈಲಗಳು, ವಿಟಮಿನ್ ಸಿ ಎಂದು ಕರೆಯಲಾಗುವ ಆಸ್ಕಾರ್ಬಿಕ್ ಆಮ್ಲಸ ಸಹಿತ ಆರು ತರಹದ ಆಮ್ಲಗಳು, ವಿವಿಧ ವಿಟಮಿನ್‌ಗಳು ಮತ್ತು ಖನಿಜಗಳು ಇದರಲ್ಲಿ ಅಡಕವಾಗಿವೆ. ಕಿತ್ತಳೆ ಹಣ್ಣುಗಳಲ್ಲಿ ಇಷ್ಟೆಲ್ಲಾ ಆರೋಗ್ಯಕಾರಿ ಪ್ರಯೋಜನಗಳಿವೆಯೇ?

ಚರ್ಮ ರೋಗಕ್ಕೆ ರಾಮಬಾಣ

ಚರ್ಮ ರೋಗಕ್ಕೆ ರಾಮಬಾಣ

ಕೊತ್ತಂಬರಿಯಲ್ಲಿರುವ ಹಲವು ಪೋಷಕಾಂಶಗಳು ಚರ್ಮದಲ್ಲಿ ಸೋಂಕು ಉಂಟುಮಾಡುವುದನ್ನು ತಡೆಯುತ್ತದೆ. ಉತ್ತಮ ನಂಜುನಿವಾರಕವಾಗಿರುವ ಇದು ತುರಿಕೆ ತರಿಸುವ ಇಸಬು, ಒಣಚರ್ಮ, ಬೂಸಿನಿಂದಾಗುವ ಸೋಂಕು (fungal infection) ಮೊದಲಾದ ತೊಂದರೆಗಳನ್ನು ತಡೆಯುತ್ತದೆ.

ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು

ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು

ಕೊತ್ತಂಬರಿಯಲ್ಲಿರುವ ಆರು ಪ್ರಮುಖ ಆಮ್ಲಗಳಲ್ಲಿ ಲಿನೋಲಿಕ್ ಆಸಿಡ್ ಎಂಬ ಆಮ್ಲವೂ ಇದೆ. ಇದು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ (LDL - Low density Lipoprotiens) ಗಳನ್ನು ಕಡಿಮೆ ಮಾಡಲು ಪ್ರಮುಖವಾಗಿದೆ. ಇದರೊಂದಿಗೆ ಓಲಿಕ್ ಆಮ್ಲ, ಪಾಮಿಟಿಕ್ ಆಮ್ಲ, ಸ್ಟಿಯಾರಿಕ್ ಅಮ್ಲ ಮತ್ತು ವಿಟಮಿನ್ ಸಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕೆಡಿಮೆಗೊಳಿಸಲು ನೆರವಾಗುತ್ತವೆ.

ಅಧಿಕ ರಕ್ತದೊತ್ತಡ ಕಡಿಮೆಗೊಳಿಸಲು

ಅಧಿಕ ರಕ್ತದೊತ್ತಡ ಕಡಿಮೆಗೊಳಿಸಲು

ಸಾಮಾನ್ಯವಾಗಿ ವಯಸ್ಸಿನೊಂದಿಗೆ ರಕ್ತದೊತ್ತಡವೂ ಏರುತ್ತಾ ಹೋಗುತ್ತದೆ. ಇದಕ್ಕಾಗಿ ಊಟದೊಂದಿಗೆ ಒಂದು ಚಮಚ ಕೊತ್ತಂಬರಿ ಪುಡಿಯನ್ನು ಸೇರಿಸಿ ಸೇವಿಸುವ ಮೂಲಕ ಮೂರು ದಿನಗಳಲ್ಲಿಯೇ ಅಧಿಕ ರಕ್ತದೊತ್ತಡ ಹತೋಟಿಗೆ ಬರುತ್ತದೆ.

ರಕ್ತಹೀನತೆಯನ್ನು ಹೋಗಲಾಡಿಸಲು

ರಕ್ತಹೀನತೆಯನ್ನು ಹೋಗಲಾಡಿಸಲು

ಸಾಮಾನ್ಯವಾಗಿ ರಕ್ತದಲ್ಲಿ ಕಬ್ಬಿಣದ ಅಂಶ ಕಡಿಮೆಯಾದರೆ ರಕ್ತಹೀನತೆ ಉಂಟಾಗುತ್ತದೆ. ಇದರಿಂದಾಗಿ ಉಸಿರು ಕಟ್ಟುವ, ಹೃದಯಸ್ಥಂಬನ, ಅತಿಯಾದ ಸುಸ್ತು ಮತ್ತು ತಲೆತಿರುಗುವುದು ಕಣ್ಣು ಮಂಜಾಗುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ. ಕೊತ್ತಂಬರಿಯಲ್ಲಿರುವ ಉತ್ತಮ ಪ್ರಮಾಣದ ಕಬ್ಬಿಣದ ಅಂಶ ರಕ್ತದಲ್ಲಿ ಶೀಘ್ರವಾಗಿ ಬೆರೆತು ಈ ಕೊರತೆಯನ್ನು ತುಂಬಿಸುತ್ತದೆ. ಜೊತೆಯಲ್ಲಿ ಇತರ ಅಂಗಗಳಿಗೂ ಪೋಷಣೆಯನ್ನು ನೀಡಿ ಆರೋಗ್ಯವನ್ನು ವೃದ್ಧಿಸುತ್ತದೆ.

ಮೂಳೆಗಳ ದೃಢತೆಯನ್ನು ಹೆಚ್ಚಿಸಲು

ಮೂಳೆಗಳ ದೃಢತೆಯನ್ನು ಹೆಚ್ಚಿಸಲು

ಇದರಲ್ಲಿರುವ ವಿವಿಧ ಖನಿಜಗಳಲ್ಲಿ ಕ್ಯಾಲ್ಸಿಯಂ ಸಹಾ ಒಂದು. ಕ್ಯಾಲ್ಸಿಯಂ ಮೂಳೆಗಳಿಗೆ ಅತ್ಯಂತ ಅಗತ್ಯವಾಗಿದೆ. ಇದರೊಂದಿಗಿರುವ ಇತರ ಖನಿಜಗಳು ಸವೆದ ಮೂಳೆಗಳು ಪುನಃಶ್ಚೇತನ ಪಡೆಯಲು ಮತ್ತು ಹೆಚ್ಚು ದೃಢಗೊಳ್ಳಲು ಸಹಕಾರಿಯಾಗಿವೆ. ವಯಸ್ಸಾದಂತೆ ಮೂಳೆಗಳು ಟೊಳ್ಳಾಗುವ ಸಾಧ್ಯತೆಯನ್ನೂ ಕೊತ್ತಂಬರಿಯ ಪೋಷಕಾಂಶಗಳು ಕಡಿಮೆಗೊಳಿಸುತ್ತದೆ.

ಋತುಚಕ್ರದ ಏರುಪೇರು ಸರಿಗೊಳಿಸಲು

ಋತುಚಕ್ರದ ಏರುಪೇರು ಸರಿಗೊಳಿಸಲು

ಮಹಿಳೆಯರ ಮಾಸಿಕ ಚಕ್ರದ ದಿನಗಳು ಏರುಪೇರಾಗಲು ಹಲವು ಕಾರಣಗಳಿವೆ. ಅದರಲ್ಲಿ ಪ್ರಮುಖವಾದುದು ಹಾರ್ಮೋನುಗಳ ಸ್ರವಿಕೆ. ಕೊತ್ತಂಬರಿಯಲ್ಲಿರುವ ಪೋಷಕಾಂಶಗಳು ಮಹಿಳೆಯರ ಎಂಡೋಕ್ರೈನ್ ಎಂಬ ಗ್ರಂಥಿಯಿಂದ ಸ್ರವಿಸುವ ಹಾರ್ಮೋನುಗಳನ್ನು ಸೂಕ್ತ ಪ್ರಮಾಣದಲ್ಲಿ ಸ್ರವಿಸುವಂತೆ ಮಾಡುತ್ತವೆ. ಇದರಿಂದಾಗಿ ಋತುಚಕ್ರ ಕ್ರಮಬದ್ದವಾಗಿಯೂ ಆಗಿ ನೋವನ್ನು ಕಡಿಮೆಗೊಳಿಸುತ್ತದೆ.

ಕಣ್ಣಿನ ಆರೋಗ್ಯಕ್ಕಾಗಿ

ಕಣ್ಣಿನ ಆರೋಗ್ಯಕ್ಕಾಗಿ

ಕಣ್ಣಿನ ಆರೋಗ್ಯಕ್ಕೆ ಕ್ಯಾರೆಟ್ ಒಳ್ಳೆಯದು ಎಂಬ ಅಭಿಪ್ರಾಯವಿದೆ. ಆದರೆ ಕಣ್ಣಿಗೆ ಕೊತ್ತಂಬರಿ ಇನ್ನೂ ಒಳ್ಳೆಯದಾಗಿದೆ. ಏಕೆಂದರೆ ಇದರಲ್ಲಿರುವ ವಿಟಮಿನ್ ಎ, ಸಿ ಮತ್ತು ಖನಿಜಗಳಾದ ಗಂಧಕ, ಹಲವು ಆರೋಗ್ಯಕರ ಎಣ್ಣೆಗಳು (essential oils) ಉತ್ತಮ ದೃಷ್ಟಿಗೆ ಪೂರಕವಾಗಿವೆ. ಇದರಿಂದ ಕಣ್ಣುಗಳ ಮೇಲೆ ಬೀಳುವ ಒತ್ತಡ ಕಡಿಮೆಯಾಗಿ ಕಣ್ಣಿನ ಆರೋಗ್ಯ ಉತ್ತಮಗೊಳ್ಳುತ್ತದೆ. ವಿಶೇಷವಾಗಿ ಕೊತ್ತಂಬರಿ ಸೊಪ್ಪಿನಲ್ಲಿರುವ ಬೀಟಾ ಕ್ಯಾರೋಟೀನ್ ಎಂಬ ಪೋಷಕಾಂಶ ಕಣ್ಣಿನ ಇನ್ನೂ ಹಲವು ಕಾಯಿಲೆಗಳನ್ನು ತಡೆಯಲು ಸಮರ್ಥವಾಗಿದೆ. ಕೊತ್ತಂಬರಿಯ ನಿರಂತರ ಸೇವನೆಯಿಂದ ಹಿಂದೆ ಕಳೆದುಕೊಂಡಿದ್ದ ದೃಷ್ಟಿಯನ್ನೂ ಮರಳಿ ಪಡೆಯಬಹುದಾಗಿದೆ

ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕಲು

ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕಲು

ಕೆಲವೊಮ್ಮೆ ನೀರಿನೊಂದಿಗೆ ಹಾಗೂ ಸೇವಿಸುವ ಆಹಾರಗಳಲ್ಲಿ ಮಿಶ್ರಿತವಾದ ಕಲ್ಮಶಗಳಿಂದ ದೇಹದಲ್ಲಿ ಅನುಪಯುಕ್ತ ಖನಿಜಗಳು ಶೇಖರವಾಗುತ್ತವೆ. ಈ ಖನಿಜಗಳನ್ನು ಹೊರಹಾಕುವುದು ಅಷ್ಟು ಸುಲಭವಲ್ಲ. ಒಂದು ವೇಳೆ ಈ ಖನಿಜಗಳ ಪ್ರಮಾಣ ಒಂದು ಹಂತ ಮೀರಿದರೆ ದೇಹ ಹಲವು ತೊಂದರೆಗಳಿಗೆ ಎದುರಾಗಬಹುದು. ನೆನಪಿನ ಶಕ್ತಿಯು ಕುಂಠಿತವಾಗುವುದು, ಆಲ್ಜೀಮರ್ ರೋಗ ಮೊದಲಾದವು ಎದುರಾಗಬಹುದು. ಕೊತ್ತಂಬರಿಯಲ್ಲಿರುವ ಉತ್ತಮ ಪೋಷಕಾಂಶಗಳು ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ಈ ವಿಷಕಾರಿ ವಸ್ತುಗಳನ್ನು ದೇಹದಿಂದ ಹೊರಹಾಕಲು ನೆರವಾಗುವುದರಿಂದ ಈ ತೊಂದರೆಗಳಿಂದ ಪಾರಾಗಬಹುದು.

ಮಧುಮೇಹಿಗಳಿಗೆ

ಮಧುಮೇಹಿಗಳಿಗೆ

ಒಂದನೇ ಪ್ರಕಾರದ ಮಧುಮೇಹಿಗಳ ಶರೀರದಲ್ಲಿ ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಉತ್ಪತ್ತಿಯಾಗುವುದಿಲ್ಲ. ಕೊತ್ತಂಬರಿಯಲ್ಲಿರುವ ಪೋಷಕಾಂಶಗಳು ಇನ್ಸುಲಿನ್ ಉತ್ತತ್ತಿಯನ್ನು ಉತ್ತೇಜಿಸಿ ಮಧುಮೇಹವನ್ನು ಕಡಿಮೆಗೊಳಿಸುತ್ತವೆ. ನಮ್ಮ ಯಕೃತ್ (liver) ಗೂ ಈ ಪೋಷಕಾಂಶಗಳು ಸಹಕಾರಿಯಾಗಿವೆ.

ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ

ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ

ತಾಜಾ ಕೊತ್ತಂಬರಿ ಸೊಪ್ಪಿನಲ್ಲಿ ಅಗತ್ಯವಾದ ಎಣ್ಣೆ ಅಂಶ ಮತ್ತು ಸಮೃದ್ಧ ಸುವಾಸನೆ ಇದೆ. ಇವುಗಳು ಅಪ್ಪೆಟೈಜರ್ ನಂತೆ ವರ್ತಿಸಿ, ಜಠರದಲ್ಲಿರುವ ಕಿಣ್ವಗಳನ್ನು ಮತ್ತು ಜೀರ್ಣಕಾರಿ ರಸಗಳನ್ನು ಉದ್ದೀಪನಗೊಳಿಸಿ, ಪಚನ ಕ್ರಿಯೆಯನ್ನು ಸುಗಮಗೊಳಿಸುತ್ತದೆ. ಇದರಿಂದ ಜೀರ್ಣ ಕ್ರಿಯೆಯು ಸರಾಗವಾಗಿ ನೆರವೇರುವಂತೆ ಮಾಡುತ್ತವೆ. ಇದರ ಜೊತೆಗೆ ಕೊತ್ತಂಬರಿ ಸೊಪ್ಪು ಅನೊರೆಕ್ಸಿಯವನ್ನು (ಊಟ ಮಾಡಲು ಇರುವ ವಿನಾಕಾರಣ ಭೀತಿ) ನಿವಾರಿಸಲು ನೆರವಾಗುತ್ತದೆ.

ಬಾಯಿ ಹುಣ್ಣು

ಬಾಯಿ ಹುಣ್ಣು

ತಾಜಾ ಕೊತ್ತಂಬರಿ ಸೊಪ್ಪಿನ ಎಣ್ಣೆಯಲ್ಲಿ ಸಿಟ್ರೊನೆಲೊಲ್ ಎಂಬ ಅಗತ್ಯ ಅಂಶ ಅಡಗಿದೆ. ಈ ಅಂಶವು ಒಂದು ಪರಿಣಾಮಕಾರಿಯಾದ ನಂಜುನಿರೋಧಕವಾಗಿದೆ. ಇದರ ಜೊತೆಗೆ ಇದು ಅಂಟಿ ಮೈಕ್ರೊಬಿಯಲ್ ಮತ್ತು ಬಾಯಿಯ ಹುಣ್ಣಿನಿಂದಾಗುವ ನೋವನ್ನು ನಿವಾರಿಸುವ ಅಂಶವನ್ನು ಹೊಂದಿದೆ. ಜೊತೆಗೆ ಹುಣ್ಣನ್ನು ಸಹ ಮಾಗುವಂತೆ ಮಾಡುತ್ತದೆ. ಇದರ ಜೊತೆಗೆ ಇವು ಬಾಯಿಯ ದುರ್ವಾಸನೆಯನ್ನು ತೊಲಗಿಸಿ, ಬಾಯಿ ಹುಣ್ಣನ್ನು ವಾಸಿಯಾಗುವಂತೆ ಮಾಡುತ್ತವೆ.

ಗರ್ಭಿಣಿರಲ್ಲಿ ಕಂಡು ವಾಂತಿಗೆ ಮನೆ ಮದ್ದು

ಗರ್ಭಿಣಿರಲ್ಲಿ ಕಂಡು ವಾಂತಿಗೆ ಮನೆ ಮದ್ದು

ಗರ್ಭಿಣಿಯಾದ ಹೊಸತರಲ್ಲಿ ಹಲವಾರು ಹೆಂಗಸರಿಗೆ ವಾಂತಿ ಮತ್ತು ನಾಸಿಯಾದ ಸಮಸ್ಯೆ ಅಧಿಕವಾಗಿ ಕಾಡುತ್ತದೆ. ಅದಕ್ಕಾಗಿ ಒಂದು ಕಪ್ ಕೊತ್ತಂಬರಿ ಸೊಪ್ಪು, ಒಂದು ಕಪ್ ಸಕ್ಕರೆ ಹಾಗು ನೀರನ್ನು ಸೇರಿಸಿ ಚೆನ್ನಾಗಿ ಕುದಿಸಿ. ಇದು ಆರಿದ ನಂತರ ಅದನ್ನು ಸೇವಿಸಿ ವಾಂತಿಯಿಂದ ಉಪಶಮನ ಪಡೆಯಿರಿ.

 ಚರ್ಮ ವ್ಯಾಧಿಗಳು

ಚರ್ಮ ವ್ಯಾಧಿಗಳು

ತಾಜಾ ಕೊತ್ತಂಬರಿ ಸೊಪ್ಪಿನಲ್ಲಿ ಬೂಷ್ಟು ನಿರೋದಕ, ನಂಜು ನಿರೋಧಕ, ನಂಜು ನಿವಾರಕ ಮತ್ತು ಕೊಳೆ ನಿರೋಧಕ ಗುಣಗಳು ಇರುವುದರಿಂದ ಇದು ಹಲವಾರು ಚರ್ಮ ವ್ಯಾಧಿಗಳನ್ನು ಗುಣಪಡಿಸುತ್ತದೆ. ಇದಕ್ಕಾಗಿ ನೀವು ಕೊತ್ತಂಬರಿ ರಸವನ್ನು ಸೇವಿಸಿ ಅಥವಾ ಅದರ ಪೇಸ್ಟನ್ನು ಚರ್ಮಕ್ಕೆ ಲೇಪಿಸಿ. ತುರಿಕೆ ಮತ್ತು ಕಜ್ಜಿ ಅಥವಾ ಹುಳುಕಾಟಕ್ಕೆ ತಾಜ ಕೊತ್ತಂಬರಿ ಸೊಪ್ಪಿನ ರಸವನ್ನು ಮತ್ತು ಜೇನು ತುಪ್ಪವನ್ನು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಅದನ್ನು ಸಮಸ್ಯೆ ಇರುವ ಭಾಗಕ್ಕೆ ಲೇಪಿಸಿ. 15 ನಿಮಿಷ ಬಿಟ್ಟು , ಈ ಭಾಗವನ್ನು ತಣ್ಣೀರಿನಿಂದ ಚೆನ್ನಾಗಿ ತೊಳೆಯಿರಿ.

ಮೂಗಿನಲ್ಲಿ ರಕ್ತಸ್ರಾವ

ಮೂಗಿನಲ್ಲಿ ರಕ್ತಸ್ರಾವ

20 ಗ್ರಾಂನಷ್ಟು ತಾಜ ಕೊತ್ತಂಬರಿ ಸೊಪ್ಪನ್ನು ತೆಗೆದುಕೊಳ್ಳಿ. ಸ್ವಲ್ಪ ಪ್ರಮಾಣದ ಕರ್ಪೂರದ ಜೊತೆಗೆ ಇದನ್ನು ಬೆರೆಸಿ ಚೆನ್ನಾಗಿ ಜಜ್ಜಿ. ನಂತರ ಇವೆರಡ ಮಿಶ್ರಣವನ್ನು ತೆಗೆದುಕೊಂಡು, ಅದರ ರಸವನ್ನು ಮೂಗಿನ ಹೊಳ್ಳೆಗಳಿಗೆ ಹಿಂಡಿ. ಮೂಗಿನ ರಕ್ತ ಸ್ರಾವವು ತತ್‍ಕ್ಷಣಕ್ಕೆ ನಿಲ್ಲುತ್ತದೆ. ಇಲ್ಲದಿದ್ದರೆ ಈ ಮಿಶ್ರಣವನ್ನು ನಿಮ್ಮ ಹಣೆಗೆ ಹಚ್ಚಿ. ಆಗಲೂ ಸಹ ಮೂಗಿನಲ್ಲಿ ರಕ್ತಸ್ರಾವ ನಿಲ್ಲುತ್ತದೆ. ಇದರ ಜೊತೆಗೆ ತಾಜಾ ಕೊತ್ತಂಬರಿ ಸೊಪ್ಪಿನ ವಾಸನೆಯನ್ನು ಸೇವಿಸುವುದು ಸಹ ಈ ಸಮಸ್ಯೆಗೆ ಪ್ರಯೋಜನಕಾರಿಯಾಗಿರುತ್ತದೆ.

ಕಣ್ಣಿನ ಬೇನೆ

ಕಣ್ಣಿನ ಬೇನೆ

ತಾಜಾ ಕೊತ್ತಂಬರಿ ಸೊಪ್ಪಿನಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಆಂಟಿ ಆಕ್ಸಿಡೆಂಟ್‍ಗಳು ಮತ್ತು ರಂಜಕದಂತಹ ಖನಿಜಗಳು ಯಥೇಚ್ಛವಾಗಿರುತ್ತವೆ. ಇವು ಮಕುಲರ್ ಡಿಜೆನರೇಷನ್, ಕಂಜಂಕ್ಟಿವಿಟಿಸ್, ಕಣ್ಣುಗಳಿಗೆ ಉಂಟಾಗುವ ವಯೋ ಸಹಜ ಬೇನೆಗಳು ಮತ್ತು ಒತ್ತಡದಿಂದ ಕಣ್ಣುಗಳಿಗೆ ಆದ ಆಯಾಸವನ್ನು ಪರಿಹರಿಸಲು ನೆರವಾಗುತ್ತವೆ. ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಜಜ್ಜಿ, ಅದನ್ನು ನೀರಿನಲ್ಲಿ ಬೇಯಿಸಿ. ನಂತರ ಆ ರಸವನ್ನು ಸ್ವಚ್ಛವಾಗಿರುವ ಬಟ್ಟೆಯ ಮೇಲೆ ಸುರಿದುಕೊಳ್ಳಿ. ಹೀಗೆ ಸುರಿದುಕೊಂಡ ಬಟ್ಟೆಯಿಂದ ನಿಮ್ಮ ಕಣ್ಣಿಗೆ ಕೆಲವು ಹನಿಗಳನ್ನು ಬಿಡಿ. ಹೀಗೆ ಮಾಡುವುದರಿಂದ ನಿಮ್ಮ ಕಣ್ಣಿನ ನೋವು ಮತ್ತು ತುರಿಕೆಗಳು ಹಾಗು ಕಣ್ಣೀರು ಬರುವ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಇತರ ಪ್ರಯೋಜನಗಳು

ಇತರ ಪ್ರಯೋಜನಗಳು

ಕೊತ್ತಂಬರಿಯ ನಿರಂತರ ಸೇವನೆಯಿಂದ ಹೊಟ್ಟೆಯ ಹುಣ್ಣು (ಅಲ್ಸರ್), ಹೊಟ್ಟೆಯ ಉರಿಯೂತ, ದಮ್ಮು, ಕಫಗಳನ್ನು ಕಡಿಮೆಗೊಳಿಸುತ್ತದೆ ಹಾಗೂ ನಮ್ಮ ಯಕೃತ್ತನ್ನು ಕಾಪಾಡುತ್ತದೆ. ಇದರ anticarcinogenic, anticonvulsant, antihistaminic ಮತ್ತು hypnotic ಗುಣಗಳಿಂದಾಗಿ ಸೇವಿಸುವವರ ಆರೋಗ್ಯವನ್ನು ಉತ್ತಮವಾಗಿರಿಸಲು ನೆರವಾಗುತ್ತವೆ. ಒಂದು ವೇಳೆ ಬೇರೆ ಗಿಡಮೂಲಿಕೆಗಳೊಂದಿಗೆ ಬೆರೆಸಿ ಉಪಯೋಗಿಸಿದಾಗ ಇವುಗಳ ಮಿಶ್ರಣ ಇನ್ನೂ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ.

English summary

Top Health Benefits of Coriander

The health benefits of coriander include its use in the treatment of skin inflammation , high cholesterol levels, diarrhea, mouth ulcers, anemia, indigestion, menstrual disorders, smallpox, conjunctivitis, skin disorders, and blood sugar disorders, while also benefiting eye care.
X
Desktop Bottom Promotion