For Quick Alerts
ALLOW NOTIFICATIONS  
For Daily Alerts

ಪುರುಷರ ಆರೋಗ್ಯ ವೃದ್ಧಿಸುವ ಕ್ಯಾರೆಟ್‌ನ ವಿಶೇಷತೆ ಏನು?

By Super
|

ದಿನಕ್ಕೊಂದು ಸೇಬು ವೈದ್ಯರನ್ನು ದೂರವಿಡುವುದು ಎಂಬ ಮಾತೇನೋ ನಿಜ. ಆದರೆ ಪುರುಷರ ಮತ್ತು ಮಹಿಳೆಯರ ದೇಹ ರಚನೆಯನ್ನು ಗಮನಿಸಿದರೆ ಸೇಬಿನ ಒಳ್ಳೆಯ ಗುಣಗಳು ಮಹಿಳೆಯರಿಗೆ ಹೆಚ್ಚು ಅನ್ವಯಿಸುತ್ತದೆ. ಅದೇ ಪುರುಷರಿಗೆ ಸೇಬಿಗಿಂತಲೂ ದಿನಕ್ಕೊಂದು ಕ್ಯಾರೆಟ್ ಸೇವಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಇತ್ತೀಚಿನ ಸಂಶೋಧನೆಗಳಿಂದ ಬೆಳಕಿಗೆ ಬಂದಿದೆ. ಸೇಬಿನಲ್ಲಿ ಇಲ್ಲದಿರುವುದು ಕ್ಯಾರೆಟ್ಟಿನಲ್ಲೇನಿದೆ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.

ಇದಕ್ಕೆ ಉತ್ತರ ಬೀಟಾ ಕ್ಯಾರೋಟೀನ್ ಎಂಬ ಪೋಷಕಾಂಶ. ಇದು ಸೇಬಿಗಿಂತಲೂ ಕ್ಯಾರೆಟ್ಟಿನಲ್ಲಿ ಹೆಚ್ಚಾಗಿದೆ ಹಾಗೂ ಪುರುಷರ ದೇಹಕ್ಕೆ ವಿಶಿಷ್ಟವಾದ ಹಾರ್ಮೋನುಗಳು ಹಾಗೂ ರಾಸಾಯನಿಕಗಳ ಉತ್ಪಾದನೆಯಲ್ಲಿ ಸಹಕರಿಸಿ ಆರೋಗ್ಯವನ್ನು ವೃದ್ಧಿಸುತ್ತದೆ.

ಆಹಾರ ತಜ್ಞರ ಪ್ರಕಾರ ಪ್ರಕಾರ ಕ್ಯಾರೆಟ್ಟಿನ ನಿಜವಾದ ಪ್ರಯೋಜನ ಪಡೆಯಬೇಕೆಂದರೆ ಕನಿಷ್ಟ ವಾರಕ್ಕೆರಡು ದಿನವಾದರೂ ಒಂದೊಂದು ಕ್ಯಾರೆಟ್ಟನ್ನು ಹಸಿಯಾಗಿ ತಿನ್ನಬೇಕು. ಎಲ್ಲಕ್ಕಿಂತಲೂ ಒಳ್ಳೆಯದು ಪ್ರತಿದಿನ ಒಂದು ಕ್ಯಾರೆಟ್ ಸೇವಿಸುವುದು. ಇದರಿಂದ ಹಲವು ವ್ಯಾಧಿಗಳಿಂದ ದೇಹ ಮುಕ್ತವಾಗುತ್ತದೆ ಹಾಗೂ ಹಲವಾರು ಕಾಯಿಲೆಗಳು ಬರುವುದರಿಂದ ದೇಹವನ್ನು ರಕ್ಷಿಸುತ್ತದೆ. ಆರೋಗ್ಯ ವರ್ಧಿಸುವ ಸೀಬೆಹಣ್ಣು ಎಲೆಗಳ ಅದ್ಭುತ ಚಿಕಿತ್ಸಾ ಗುಣಗಳು

ಅತಿಯಾದರೆ ಅಮೃತವೂ ವಿಷವಂತೆ. ಅಂತೆಯೇ ಅತಿ ಹೆಚ್ಚು ಕ್ಯಾರೆಟ್ಟುಗಳನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯಕ್ಕಿಂತಲೂ ಹೆಚ್ಚು ಪ್ರಮಾಣದ ಬೀಟಾ ಕ್ಯಾರೋಟಿನ್ ಲಭ್ಯವಾಗಿ ಹೆಚ್ಚಿನ ಪ್ರಮಾಣದ ಕಾರಣ carotenemia ಎಂಬ ವ್ಯಾಧಿಗೆ ಕಾರಣವಾಗಬಹುದು. ಇದು ಚರ್ಮ ಹಳದಿ ಬಣ್ಣಕ್ಕೆ ತಿರುಗುವ ಮೂಲಕ ಪ್ರಕಟವಾಗುತ್ತದೆ. ಆದ್ದರಿಂದ ದಿನಕ್ಕೆ ಆರು ಕ್ಯಾರೆಟ್ಟುಗಳಿಗಿಂತ ಹೆಚ್ಚು ತಿನ್ನದಿರಲು ಆಹಾರ ತಜ್ಞರು ಶಿಫಾರಸ್ಸು ಮಾಡುತ್ತಾರೆ.

ಈ ಕೇಸರಿ ಬಣ್ಣದ ತರಕಾರಿ ನಿಮ್ಮ ದೇಹವನ್ನು ಹೇಗೆ ರಕ್ಷಿಸುತ್ತದೆ ಎಂಬ ವಿಷಯದಲ್ಲಿ ಹಲವು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ಅದರಲ್ಲೂ ಮೂವತ್ತು ವರ್ಷ ದಾಟಿದ ಪುರುಷರು ವಿಶೇಷವಾಗಿ ಚಳಿಗಾಲದಲ್ಲಿ ಕ್ಯಾರೆಟ್ ಪ್ರತಿದಿನ ತಿನ್ನಲೇಬೇಕು. ಏಕೆ ತಿನ್ನಲೇಬೇಕು ಎಂಬ ಪದವನ್ನು ಬಳಸಲಾಗಿದೆ ಎಂಬುದನ್ನು ವಿವರವಾಗಿ ತಿಳಿಯಲು ಮುಂದೆ ಓದಿ. ಲಿಂಬೆಯುಕ್ತ ನೀರಿನ ಅದ್ಭುತ ಆರೋಗ್ಯಕಾರಿ ಪ್ರಯೋಜನಗಳು

ರಕ್ತವನ್ನು ಶುದ್ಧೀಕರಿಸುತ್ತದೆ

ರಕ್ತವನ್ನು ಶುದ್ಧೀಕರಿಸುತ್ತದೆ

ಸಾಮಾನ್ಯವಾಗಿ ದಿನವಿಡೀ ಹೊರಗಡೆ ತಿರುಗಾಡುವ ಪುರುಷರು ಗಾಳಿಯೊಂದಿಗೆ ಹಲವಾರು ಸೂಕ್ಷ್ಮ ಕಣಗಳನ್ನೂ ಸೇವಿಸಿರುತ್ತಾರೆ. ಈ ಕಣಗಳು ಶ್ವಾಸಕೋಶದ ಮೂಲಕ ರಕ್ತವನ್ನು ಸೇರುತ್ತದೆ. ನಮ್ಮ ರಕ್ತವನ್ನು ಸೋಸಿ ಈ ಕಲ್ಮಶಗಳನ್ನು ಹೊರಹಾಕಲು ನಮ್ಮ ದೇಹದಲ್ಲಿ ವ್ಯವಸ್ಥೆಯಿದೆ. ಈ ವ್ಯವಸ್ಥೆಯನ್ನು ಬಲಪಡಿಸಲು ಕ್ಯಾರೆಟ್ ನೆರವಾಗುತ್ತದೆ. ದಿನಕ್ಕೊಂದು ಕ್ಯಾರೆಟ್ ಹಸಿಯಾಗಿ ತಿನ್ನುವುದು ಒಳ್ಳೆಯದು. ಆದರೆ ಇದು ಸಾಧ್ಯವಾಗದಿದ್ದಲ್ಲಿ ನಾಲ್ಕಾರು ಕ್ಯಾರೆಟ್ಟುಗಳನ್ನು ತುರಿದು ಹಿಂಡಿ ತೆಗೆದ ರಸವನ್ನು ವಾರಕ್ಕೊಮ್ಮೆಯಾದರೂ ಕುಡಿಯಲೇಬೇಕು.

ವೀರ್ಯವನ್ನು ವೃದ್ಧಿಸುತ್ತದೆ

ವೀರ್ಯವನ್ನು ವೃದ್ಧಿಸುತ್ತದೆ

ಸಾಮಾನ್ಯವಾಗಿ ಮೂವತ್ತು ವರ್ಷಗಳ ಆಜುಬಾಜಿನಲ್ಲಿ ವೈವಾಹಿಕ ಜೀವನಕ್ಕೆ ಅಡಿಯಿಡುವ ಪುರುಷರಿಗೆ ಶೀಘ್ರವಾಗಿ ಸಂತಾನವನ್ನು ಮುಂದುವರೆಸುವ ಬಯಕೆಯಿರುತ್ತದೆ. ಇತ್ತೀಚಿನ ದಿನಗಳಲ್ಲಿ ಕೆಲವು ಅಗೋಚರ ಕಾರಣಗಳಿಂದ ಫಲವತ್ತತೆ ಕಾಣಲು ಅಗತ್ಯವಿರುವಷ್ಟು ವೀರ್‍ಯಾಣುಗಳು ಉತ್ಪತ್ತಿಯಾಗಿರುವುದು ವೈದ್ಯಕೀಯ ಪರೀಕ್ಷೆಗಳಲ್ಲಿ ಗಮನಕ್ಕೆ ಬರುತ್ತಿದೆ. ಬಸಿರಾಗದಿರಲು ಹೆಣ್ಣನ್ನು ಮಾತ್ರ ದೂರುವ ಮುನ್ನ ಇಬ್ಬರೂ ಪರೀಕ್ಷಿಸಿಕೊಂಡು ಒಂದು ವೇಳೆ ಪುರುಷನ ವೀರ್ಯಾಣುಗಳ ಸಂಖ್ಯೆ ೧೫ ಮಿಲಿಯನ್ /ಮಿ.ಲೀ ಗಿಂತಲೂ ಕಡಿಮೆ ಇದ್ದಲ್ಲಿ ಅದನ್ನು ಹೆಚ್ಚಿಸಲು ವೈದ್ಯರು ಸಲಹೆ ನೀಡುತ್ತಾರೆ. ಈ ಪುಟ್ಟ ಕ್ಯಾರೆಟ್ ಈಗ ನೆರವಿಗೆ ಬರುತ್ತದೆ. ಪ್ರತಿದಿನದ ಸೇವನೆ ವೀರ್‍ಯಾಣುಗಳ ಸಂಖ್ಯೆಯಲ್ಲಿ ಹೆಚ್ಚಳ ನೀಡುತ್ತದೆ. ಫಲಭರಿತ ದಿನಗಳಲ್ಲಿ ಮಿಲನವಾದ ಬಳಿಕ ಉತ್ತಮ ಫಲ ನೀಡುತ್ತದೆ.

ಜೀರ್ಣಶಕ್ತಿಗೆ ನೆರವಾಗುತ್ತದೆ.

ಜೀರ್ಣಶಕ್ತಿಗೆ ನೆರವಾಗುತ್ತದೆ.

ಸಾಮಾನ್ಯವಾಗಿ ಪುರುಷರು ಹೊರಗೆ ಸೇವಿಸುವ ಆಹಾರದಲ್ಲಿ ಏನೇನನ್ನು ಸೇವಿಸುತ್ತಾರೋ, ಪರಿಣಾಮವಾಗಿ ಶೇಖಡಾ ಎಪ್ಪತ್ತೈದರಷ್ಟು ಪುರುಷರು ಅಜೀರ್ಣ ಅಥವಾ ಮಲಬದ್ದತೆಯನ್ನು ಅನುಭವಿಸುತ್ತಾರೆ. ಪ್ರತಿದಿನ ಎರಡು ಕ್ಯಾರೆಟ್ ಸೇವಿಸುವುದರಿಂದ ಅಜೀರ್ಣತೆಯನ್ನೂ, ಮಲಬದ್ದತೆಯನ್ನೂ ನಿವಾರಿಸಿಕೊಳ್ಳಬಹುದು.

ಹೊಟ್ಟೆಯ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಹೊಟ್ಟೆಯ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಕೆಲವು ಆಹಾರಗಳು ಪೂರ್ಣವಾಗಿ ಜೀರ್ಣವಾಗದೇ, ಕೆಲವೊಮ್ಮೆ ಹೊಟ್ಟೆಯಲ್ಲಿ ಯಾವುದೋ ಅನಿಲವನ್ನು ಉತ್ಪಾದಿಸಿ ಗ್ಯಾಸ್ಟ್ರಿಕ್ ತೊಂದರೆಯನ್ನು ಉಂಟುಮಾಡುತ್ತದೆ. ಹೊಟ್ಟೆಯಲ್ಲಿ ಉರಿ, ಹುಳಿತೇಗು ಮೊದಲಾದ ಲಕ್ಷಣಗಳು ಕಂಡುಬರುತ್ತವೆ. ಊಟದ ಬಳಿಕ ತಿಂದ ಕ್ಯಾರೆಟ್ ಈ ಅನಿಲಗಳನ್ನು ತಣಿಸಿ ಉರಿಯನ್ನು ಉಪಶಮನಗೊಳಿಸುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ.

ಸಾಮಾನ್ಯವಾಗಿ ವಿವಿಧ ಊರುಗಳಲ್ಲಿ ಊಟ ಮಾಡಿರುವವರ ರಕ್ತಪರೀಕ್ಷೆಯಲ್ಲಿ ಕೆಟ್ಟ ಕೊಲೆಸ್ಟರಾಲ್ ಹೆಚ್ಚಿರುವುದು ಕಂಡುಬಂದಿದೆ. ಏಕೆಂದರೆ ಕಡಿಮೆ ಬೆಲೆಯ ಕಾರಣದಿಂದ ಆ ಹೋಟೆಲುಗಳಲ್ಲಿ ಉಪಯೋಗಿಸಲಾಗಿದ್ದ ಎಣ್ಣೆಗಳ ಮೂಲಕ ಕೆಟ್ಟ ಕೊಲೆಸ್ಟ್ರಾಲ್ ದೇಹದಲ್ಲಿ ಶೇಖರಗೊಳ್ಳುತ್ತದೆ. ಈ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿವಾರಿಸಲು ಪ್ರತಿದಿನ ರಾತ್ರಿ ಊಟದ ಬಳಿಕ ಒಂದು ಲೋಟ ಕ್ಯಾರೆಟ್ ರಸವನ್ನು ಸೇವಿಸುವುದರಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತದೆ.

 ಕಣ್ಣುಗಳಿಗೂ ಒಳ್ಳೆಯದು

ಕಣ್ಣುಗಳಿಗೂ ಒಳ್ಳೆಯದು

ಸಾಮಾನ್ಯವಾಗಿ ವಯಸ್ಸಿನೊಂದಿಗೇ ಕಣ್ಣುಗಳ ಆರೋಗ್ಯ ಕ್ಷೀಣಿಸುತ್ತಾ ಹೋಗುತ್ತದೆ. ಕ್ಯಾಟರಾಕ್ಟ್, ಸಮೀಪದೃಷ್ಟಿ, ದೂರದೃಷ್ಟಿ ಮೊದಲಾದವು ನಿಧಾನವಾಗಿ ಆವರಿಸಿಕೊಳ್ಳುತ್ತವೆ. ಪ್ರತಿದಿನ ಕ್ಯಾರೆಟ್ಟೊಂದನ್ನು ಹಸಿಯಾಗಿ ಸೇವಿಸುವುದರಿಂದ ಕಣ್ಣುಗಳ ಈ ತೊಂದರೆಗಳ ಆಗಮನವನ್ನು ಆದಷ್ಟು ದೂರ ಮಾಡಬಹುದು. ಕ್ಯಾರೆಟ್ಟಿನಲ್ಲಿರುವ ಬೀಟಾ ಕಾರೋಟೀನ್ ಪಚನಗೊಂಡು ವಿಟಮಿನ್ ಎ ಉತ್ಪಾದನೆಯಾಗುತ್ತದೆ. ಕಣ್ಣುಗಳ ಆರೋಗ್ಯಕ್ಕೆ ವಿಟಮಿನ್ ಎ ಅಗತ್ಯವಾಗಿದೆ. ಕ್ಯಾರೆಟ್ಟಿನೊಂದಿಗೆ ಹಾಲು, ಚೀಸ್ ಮತ್ತು ಮೊಸರನ್ನು ಸೇವಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ.

 ಹೃದಯಕ್ಕೂ ಒಳ್ಳೆಯದು

ಹೃದಯಕ್ಕೂ ಒಳ್ಳೆಯದು

ಜೀವಮಾನವಿಡೀ ಪ್ರತಿಕ್ಷಣವೂ ಹೊಡೆದುಕೊಳ್ಳುವ ಹೃದಯಕ್ಕೂ ಕೆಲವು ಪೋಷಕಾಂಶಗಳ ಅಗತ್ಯವಿದೆ. ಕ್ಯಾರೆಟ್ಟುಗಳ ನಿಯಮಿತ ಸೇವನೆ ಈ ಪೋಷಕಾಂಶಗಳನ್ನು ವೃದ್ಧಿಸಿ ಹೃದಯದ ಆರೋಗ್ಯ ವೃದ್ಧಿಸಲು ನೆರವಾಗುತ್ತದೆ.

ಬಾಯಿಯ ಒಳಗಣ ಭಾಗವನ್ನು ರಕ್ಷಿಸುತ್ತದೆ

ಬಾಯಿಯ ಒಳಗಣ ಭಾಗವನ್ನು ರಕ್ಷಿಸುತ್ತದೆ

ಒಸಡುಗಳ ಸಂದು, ಬಾಯಿಯೊಳಗಣ ಮೇಲ್ಭಾಗ, ಗಂಟಲಿನ ಮೇಲ್ಭಾಗ, ಕಿರುನಾಲಿಗೆಯ ಅಕ್ಕಪಕ್ಕದ ಸ್ಥಳಗಳಲ್ಲಿ ಕೆಲವೊಮ್ಮೆ ಸ್ವಚ್ಛತೆಯ ಕೊರತೆಯ ಕಾರಣ ಬ್ಯಾಕ್ಟೀರಿಯಾಗಳು ಬೀಡುಬಿಟ್ಟು ಸೋಂಕು ಹರಡುತ್ತವೆ, ಒಸಡುಗಳಲ್ಲಿ ರಕ್ತ, ಬಾಯಿಯ ದುರ್ವಾಸನೆ, ನಾಲಿಗೆಯಲ್ಲಿ ದಪ್ಪನಾದ ಅಂಟುಪ್ರದಾರ್ಥ ಕಾಣಿಸಿಕೊಳ್ಳುವುದು ಮೊದಲಾದವು ಪ್ರಾರಂಭವಾಗುತ್ತವೆ. ದಿನಕ್ಕೊಂದು ಕ್ಯಾರೆಟ್ ಸೇವಿಸುವುದರ ಮೂಲಕ ರಕ್ತ ಈ ಬ್ಯಾಕ್ಟೀರಿಯಾಗಳ ಆಕ್ರಮಣವನ್ನು ತಡೆಯಲು ಶಕ್ತಶಾಲಿಯಾಗುತ್ತದೆ. ಪರಿಣಾಮವಾಗಿ ಬಾಯಿಯ ಒಳಗಣ ಭಾಗವನ್ನು ಸೋಂಕಿನಿಂದ ರಕ್ಷಿಸುತ್ತದೆ.

ಸಂಧಿವಾತ (Arthritis) ದಿಂದ ರಕ್ಷಿಸುತ್ತದೆ

ಸಂಧಿವಾತ (Arthritis) ದಿಂದ ರಕ್ಷಿಸುತ್ತದೆ

ವಯಸ್ಸಾದಂತೆ ಮೂಳೆಗಳ ಸಂದುಗಳಲ್ಲಿ ಸವೆತ ಹೆಚ್ಚಾಗಿ ಸಂಧಿವಾತವಾಗುವ ಪ್ರಮೇಯ ಹೆಚ್ಚುತ್ತಾ ಹೋಗುತ್ತದೆ. ಇದು ಪುರುಷರನ್ನೂ ಮಹಿಳೆಯರನ್ನೂ ಸಮಾನವಾಗಿ ಕಾಡುತ್ತದೆ. ಪ್ರತಿದಿನ ಕ್ಯಾರೆಟ್ಟೊಂದನ್ನು ತಿನ್ನುವ ಮೂಲಕ ಈ ಸಂಭವತೆಯನ್ನು ಮುಂದೂಡಬಹುದು. ಕ್ಯಾರೆಟ್ಟಿನಲ್ಲಿರುವ ವಿಟಮಿನ್ ಸಿ. ಮೂಳೆಗಳ ದೃಢತೆಯನ್ನು ಹೆಚ್ಚಿಸಿ ಸಂಧಿವಾತವಾಗುವ ಸಂಭವತೆಯನ್ನು ಕಡಿಮೆಗೊಳಿಸುತ್ತದೆ.

ಕ್ಯಾನ್ಸರ್ ಬರುವುದನ್ನು ತಡೆಗಟ್ಟುತ್ತದೆ

ಕ್ಯಾನ್ಸರ್ ಬರುವುದನ್ನು ತಡೆಗಟ್ಟುತ್ತದೆ

ಇತ್ತೀಚೆಗೆ ಸಮಾಜದಲ್ಲಿ ವಿವಿಧ ರೂಪದ ಕ್ಯಾನ್ಸರ್ ಆವರಿಸಿರುವುದು ಕಂಡುಬರುತ್ತಿದೆ. ದಿನಕ್ಕೊಂದು ಕ್ಯಾರೆಟ್ ತಿನ್ನುವುದರಿಂದ ಹಲವು ಕ್ಯಾನ್ಸರ್ ಗಳು ಬರದಂತೆ ತಡೆಯಬಹುದಾಗಿದೆ.

ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಸಾಮಾನ್ಯವಾಗಿ ಚಳಿಗಾಲ ಬಂದಕೂಡಲೇ ಶೀತವಾಗುವುದು, ಯಾವುದಾದರೂ ತಿನಿಸು ತಿಂದ ಕೂಡಲೇ ಹೊಟ್ಟೆಯಲ್ಲಿ ತಳಮಳವಾಗುವುದು ಮೊದಲಾದವು ದೇಹದಲ್ಲಿ ರೋಗನಿರೋಧಕ ಶಕ್ತಿ ಕ್ಷೀಣಿಸಿರುವುದನ್ನು ಪ್ರಕಟಿಸುತ್ತವೆ. ದಿನಕ್ಕೊಂದು ಕ್ಯಾರೆಟ್ ತಿನ್ನುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಆರೋಗ್ಯ ವೃದ್ಧಿಸುತ್ತದೆ.

ಮಧುಮೇಹವನ್ನು ನಿಯಂತ್ರಿಸುತ್ತದೆ

ಮಧುಮೇಹವನ್ನು ನಿಯಂತ್ರಿಸುತ್ತದೆ

ಮಧುಮೇಹಿಗಳಿಗೆ ಸಕ್ಕರೆ ತಿನ್ನಬಾರದು ಎಂದು ವೈದ್ಯರ ಕಟ್ಟಪ್ಪಣೆಯಾಗಿರುತ್ತದೆ. ಆದರೆ ಕ್ಯಾರೆಟ್ಟಿನಲ್ಲಿ ಸಕ್ಕರೆಯ ಅಂಶಕ್ಕಿಂತಲೂ ಹೆಚ್ಚಿರುವ ಪೋಷಕಾಂಶಗಳ ಕಾರಣ ಮಧುಮೇಹಿಗಳು ಸಾಮಾನ್ಯ ಪ್ರಮಾಣದಲ್ಲಿ ಅಂದರೆ ಸುಮಾರು ಅರ್ಧ ಕ್ಯಾರೆಟ್ ಪ್ರತಿ ದಿನಕ್ಕೆ ಹಸಿಯಾಗಿ ಸೇವಿಸುವುದರಿಂದ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.

ಮಲಬದ್ದತೆಯನ್ನು ನಿವಾರಿಸುತ್ತದೆ

ಮಲಬದ್ದತೆಯನ್ನು ನಿವಾರಿಸುತ್ತದೆ

ಕ್ಯಾರೆಟ್ ನಲ್ಲಿ ಉತ್ತಮ ಪ್ರಮಾಣದ ಕರಗುವ ನಾರು ಇದೆ. ಇದು ಮಲಬದ್ದತೆಯುಂಟುಮಾಡಿದ ಆಹಾರದೊಡನೆ ಮಿಳಿತಗೊಂಡು ಸುಲಭವಾಗಿ ವಿಸರ್ಜಿಸಲು ಸಹಕರಿಸುತ್ತದೆ.

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ಕ್ಯಾರೆಟ್ಟಿನಲ್ಲಿ ಉತ್ತಮ ಪ್ರಮಾಣದ ಪೊಟ್ಯಾಶಿಯಂ ಇದೆ. ಇದು ರಕ್ತದಲ್ಲಿರುವ ಹೆಚ್ಚಿನ ಪ್ರಮಾನದ ಸೋಡಿಯಂ ಅನ್ನು ನಿಯಂತ್ರಿಸಿ ಅಧಿಕ ರಕ್ತದೊತ್ತಡವಾಗುವುದರಿಂದ ತಡೆಯುತ್ತದೆ.

English summary

Top Health Benefits Of Carrots For Men

Health Benefits Of Carrots For Men, Benefits of Carrots , benefits of eating carrots everyday, advantages of eating carrots
X
Desktop Bottom Promotion