For Quick Alerts
ALLOW NOTIFICATIONS  
For Daily Alerts

ಕ್ಯಾನ್ಸರ್‌ನ ಹುಟ್ಟಡಗಿಸುವ ಅತ್ಯುತ್ತಮ ಆಹಾರಗಳಿವು!

|

ಕ್ಯಾನ್ಸರ್ ಎಂಬುದು ನಿಜಕ್ಕು ಪ್ರಾಣಾಂತಕವಾದ ರೋಗವಾಗಿದ್ದು, ವಿಶ್ವದಲ್ಲಿಯೇ ಅತಿ ಹೆಚ್ಚಿನ ಬಲಿಗಳನ್ನು ಪಡೆಯುವ ಅತ್ಯಂತ ಅಪಾಯಕಾರಿ ಕಾಯಿಲೆಯಾಗಿ ಗುರುತಿಸಲ್ಪಟ್ಟಿದೆ. ಸತ್ಯಾಂಶವೆಂದರೆ, ಬದಲಾದ ಜೀವನ ಶೈಲಿಗಳು ಮತ್ತು ಜನಸಂಖ್ಯೆಯ ಹೆಚ್ಚಳದಿಂದಾಗಿ, ಕ್ಯಾನ್ಸರ್ ರೋಗಿಗಳ ಪ್ರಮಾಣ ದಿನೇ ದಿನೇ ಹೆಚ್ಚುತ್ತಲೆ ಇದೆಯೇ ಹೊರತು ಕಡಿಮೆಯಾಗುತ್ತಿಲ್ಲ.

ಇದಕ್ಕಾಗಿಯೇ ನಾವು ಕ್ಯಾನ್ಸರ್ ನಿಯಂತ್ರಿಸುವ ತರಕಾರಿಗಳ ಕುರಿತಾಗಿ ಆಲೋಚಿಸಬೇಕಾಗುತ್ತದೆ. ಈ ಅಂಕಣದಲ್ಲಿ ಈ ನಿಟ್ಟಿನಲ್ಲಿ ಕೆಲವೊಂದು ಉಪಯುಕ್ತ ಮಾಹಿತಿಗಳನ್ನು ನಾವು ನಿಮಗಾಗಿ ಹಂಚಿಕೊಳ್ಳುತ್ತಿದ್ದೇವೆ, ಅದರಲ್ಲೂ ಮುಖ್ಯವಾಗಿ ಕ್ಯಾನ್ಸರನ್ನು ತಡೆಯುವ ತರಕಾರಿಗಳ ಬಗ್ಗೆ ನಾವು ಮಾಹಿತಿಯನ್ನು ನೀಡುತ್ತಿದ್ದೇವೆ. ಎಚ್ಚರ; ಈ 5 ಕಾರಣಗಳಿಂದಲೂ ಕ್ಯಾನ್ಸರ್ ಬರಬಹುದು!

ಬೀಟ್‍ರೂಟ್‍


ಬೀಟ್‍ರೂಟ್‍ಗಳು ರಕ್ತ ಪರಿಚಲನೆಯನ್ನು ಮತ್ತು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಸುಸ್ಥಿತಿಯಲ್ಲಿಡಲು ನೆರವಾಗುತ್ತವೆ. ಇವುಗಳು ರಕ್ತದೊತ್ತಡವನ್ನು ನಿವಾರಿಸುವ ಅಂಶಗಳನ್ನು ಸಹ ಹೊಂದಿರುತ್ತವೆ. ವಿಶೇಷವಾಗಿ ಸಕ್ಕರೆಯ ಪ್ರಮಾಣವನ್ನು ಹದ್ದು ಬಸ್ತಿನಲ್ಲಿಡಲು ಇದು ಖ್ಯಾತಿಯನ್ನು ಪಡೆದಿದೆ. ಜೊತೆಗೆ ಕ್ಯಾನ್ಸರನ್ನು ಸಹ ನಿಯಂತ್ರಿಸುತ್ತದೆ.

ಪಾಲಕ್ ಸೊಪ್ಪು


ಪಾಲಕ್ ಸೊಪ್ಪು ಸಹ ಪ್ರಪಂಚದಲ್ಲಿರುವ ಅತ್ಯಂತ ಆರೋಗ್ಯಕಾರಿ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ. ಅದರಲ್ಲೂ ಇದು ಕ್ಯಾನ್ಸರನ್ನು ನಿಯಂತ್ರಿಸುವ ಆಹಾರ ಪದಾರ್ಥವಾಗಿರುವುದು ಸಹ ಇದರ ಹೆಚ್ಚುಗಾರಿಕೆ. ಪಾಲಕ್ ಸೊಪ್ಪಿನಲ್ಲಿ ಪೊಟಾಶಿಯಂ, ಸತು, ವಿಟಮಿನ್ ಕೆ, ಇ, ಮತ್ತು ಎ ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವುಗಳು ಕ್ಯಾನ್ಸರನ್ನು ನಿಯಂತ್ರಿಸಲು ಸ್ವಾಭಾವಿಕವಾಗಿ ನೆರವಾಗುತ್ತವೆ.

ಬೀನ್ಸ್


ಬೀನ್ಸ್‌ಗಳಲ್ಲಿ ವಿಟಮಿನ್ ಬಿ ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇದು ಕ್ಯಾನ್ಸರ್ ನಿಯಂತ್ರಿಸಲು ಗಣನೀಯವಾದ ಕೊಡುಗೆಯನ್ನು ನೀಡುತ್ತದೆ. ಇವುಗಳು ಕಾರ್ಸಿನೊಜೆನ್‍ಗಳನ್ನು ನಿವಾರಿಸುವ ಲುಲುಟೇನ್ ಮತ್ತು ವೈಯೊಲಕ್ಸಂಥಿನ್ ಮತ್ತು ಬೀಟಾ-ಕೆರೊಟಿನ್‍ಗಳು ಅಧಿಕ ಪ್ರಮಾಣದಲ್ಲಿರುತ್ತವೆ.

ಹಸಿರು ಬಟಾಣಿ


ಹಸಿರು ಬಟಾಣಿಗಳು ಕ್ಯಾನ್ಸರನ್ನು ನಿಯಂತ್ರಿಸಲು ಇರುವ ಅತ್ಯಂತ ಶಕ್ತಿಶಾಲಿ ತರಕಾರಿಗಳಾಗಿವೆ. ಅದರಲ್ಲೂ ಮುಖ್ಯವಾಗಿ ಜಠರದ ಕ್ಯಾನ್ಸರ್ ನಿವಾರಿಸಲು ಇವು ಸಹಾಯ ಮಾಡುತ್ತವೆ. ಇದರಲ್ಲಿ ಪೊಟಾಶಿಯಂ, ಕಬ್ಬಿಣಾಂಶ ಮತ್ತು ವಿಟಮಿನ್‍ಗಳು ಯಥೇಚ್ಛವಾಗಿದ್ದು, ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧಗೊಳಿಸಲು ಇವು ನೆರವು ನೀಡುತ್ತವೆ. ಶ್ವಾಸಕೋಶದ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು

ಈರುಳ್ಳಿಗಳು


ಈರುಳ್ಳಿಗಳು ಕ್ಯಾನ್ಸರನ್ನು ನಿಯಂತ್ರಿಸುವ ಅಧ್ಬುತವಾದ ತರಕಾರಿಗಳಾಗಿವೆ. ಇವುಗಳಲ್ಲಿ ಆಂಟಿ ಆಕ್ಸಿಡೆಂಟ್‍ಗಳು ಅತ್ಯಧಿಕ ಪ್ರಮಾಣದಲ್ಲಿರುತ್ತವೆ. ಇವುಗಳು ನಮ್ಮ ದೇಹದಲ್ಲಿರುವ ಫ್ರೀ ರ‍್ಯಾಡಿಕಲ್‌ಗಳನ್ನು ನಿವಾರಿಸುತ್ತವೆ. ಇವುಗಳಲ್ಲಿ ಫೈಟೊಕೆಮಿಕಲ್‍ಗಳು ಕ್ಯಾನ್ಸರನ್ನು ನಿವಾರಿಸುವ ಅಂಶಗಳು ಗಣನೀಯವಾಗಿ ಹೆಚ್ಚಿರುತ್ತವೆ. ಗಂಡಸರ ಜನನಾಂಗದಲ್ಲಿ ಕಾಣಿಸಿಕೊಳ್ಳುವ ಪ್ರೊಸ್ಟೇಟ್ ಕ್ಯಾನ್ಸರ್ ಮತ್ತು ಶ್ವಾಸಕೋಶದ ಕ್ಯಾನ್ಸರ್ ಬರದಂತೆ ತಡೆಯಲು ಈರುಳ್ಳಿಗಳು ಸಹಾಯ ಮಾಡುತ್ತವೆ.
English summary

Top Foods that prevent cancer

Vegetables are natural foods that shield the body against several diseases. While looking at these best vegetables to fight cancer, we elucidate the healthiest vegetables in the world that have a splendid composition of vitamins and minerals.
X
Desktop Bottom Promotion