For Quick Alerts
ALLOW NOTIFICATIONS  
For Daily Alerts

ದೇಹದ ತೂಕವನ್ನು ಕಳೆದುಕೊಂಡು ಸಣ್ಣಗಾಗಿ ಕಾಣಲು ಬಯಸುವಿರಾ?

|

ದೇಹದ ತೂಕವನ್ನು ಕಳೆದುಕೊಂಡು ಸಣ್ಣಗಾಗಿ ಕಾಣಲು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಮಾದಕವಾದ ಮೈಮಾಟವನ್ನು ಪಡೆಯುವುದೆ೦ದರೆ, ರಾತ್ರಿ ಬೆಳಗಾಗುವುದರೊಳಗಾಗಿ ನಿಮ್ಮ ಜೀವನ ಶೈಲಿಯಲ್ಲಿ ನಾಟಕೀಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕೆ೦ದೇನೂ ಅಲ್ಲ.

ವಾಸ್ತವವಾಗಿ, ಕೆಲವೊ೦ದು ಸಣ್ಣಪುಟ್ಟ, ಅನೇಕ ಬಾರಿ ಕೆಲವೊ೦ದು ತೋರಿಕೆಯ ಬದಲಾವಣೆಗಳೂ ಸಹ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳುವ ಸಾಹಸಕ್ಕೆ ಮಹತ್ತರ ಕೊಡುಗೆಯನ್ನು ನೀಡಬಲ್ಲವು. ದೀರ್ಘಕಾಲದ ಯಶಸ್ಸಿಗೆ ಕಾರಣವಾಗುವ ತೂಕ ಕಳೆದುಕೊಳ್ಳಲು ಮಾಡಬಹುದಾದ ಕ್ರಮಗಳ ಬಗ್ಗೆ ಒಂದಿಷ್ಟು ಸಲಹೆಗಳು ನಿಮಗಾಗಿ:

Top and easy tricks that'll change your shape

*ಕ್ರಿಯಾಶೀಲರಾಗುವತ್ತ ಹೆಚ್ಚು ಗಮನ ನೀಡಿ:
ನೀವು ನಿಜವಾಗಿಯೂ ದುಬಾರಿಯಾದ ಜಿಮ್ ಒ೦ದರ ಸದಸ್ಯತ್ವವನ್ನೋ ಅಥವಾ ನಿಮಗಾಗಿ ವೈಯುಕ್ತಿಕ ತರಬೇತುದಾರರನ್ನೋ ನೇಮಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಪ್ರತಿ ದಿನವೂ ಹ೦ತಹ೦ತವಾಗಿ ಕ್ರಿಯಾಶೀಲರಾಗುವತ್ತ ಒ೦ದೊ೦ದೇ ಹೆಜ್ಜೆಯಷ್ಟು ಮು೦ದುವರೆಯಿರಿ ಮತ್ತು ಕ್ರಮೇಣ ಪ್ರತೀದಿನ ಹಾಗೂ ಪ್ರತೀವಾರ ನಿಮ್ಮ ಚಟಿವಟಿಕೆಯ ಜೀವನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯತ್ನಿಸಿರಿ. ಉದಾಹರಣೆಗೆ ಯಾವುದಾದರೂ ಒಂದು ವಿಧಾನದ ಬದಲು ಯೋಗ, ಧ್ಯಾನ ಹೀಗೆ ಎರಡು ಮೂರು ವಿಧಾನಗಳನ್ನು ಅನುಸರಿಸಲು ಆರಂಭಿಸಬಹುದು. ಇದು ದೈಹಿಕ ತೂಕ ಕಡಿಮೆ ಮಾಡಲು ಅತ್ಯುತ್ತಮ ವಿಧಾನವಾಗಿದೆ.

ತೂಕ ಕಡಿಮೆ ಮಾಡಿಕೊಳ್ಳುವ ಕುರಿತು ಇರುವ 15 ಮೂಢನಂಬಿಕೆಗಳು

*ನಡಿಗೆಗೆ ಹೆಚ್ಚು ಒತ್ತು ನೀಡಿ:
ನಿಮ್ಮ ಮಕ್ಕಳನ್ನು ಹತ್ತಿರದಲ್ಲಿಯೇ ಇರುವ ಶಾಲೆಗೆ ಕರೆದುಕೊ೦ಡು ಹೋಗಿ ಬಿಟ್ಟುಬರುವುದು, ನಿಮ್ಮ ಕಛೇರಿಯಿ೦ದ ಸ್ವಲ್ಪ ದೂರದಲ್ಲಿಯೇ ಲಭ್ಯವಿರುವ ಸುರಕ್ಷಿತ ಸ್ಥಳದಲ್ಲಿ ನಿಮ್ಮ ವಾಹನವನ್ನು ನಿಲುಗಡೆಗೊಳಿಸಿ ಕಛೇರಿಗೆ ತೆರಳುವುದು, ಮರಳಿ ಬರುವಾಗ ವಾಹನ ನಿಲುಗಡೆಯ ಸ್ಥಳದವರೆಗೆ ಕಾಲ್ನಡಿಗೆಯಲ್ಲಿಯೇ ಸಾಗುವುದು, ಹೀಗೆ ಹತ್ತಿರದ ದೂರವನ್ನು ಕ್ರಮಿಸಲು ವಾಹನಗಳನ್ನು ಅವಲಂಬಿಸುವ ಬದಲು ನಡೆದುಕೊಂಡೆ ಹೋಗಿ. ಇದು ನಿಮ್ಮ ಫಿಟ್ನೆಸ್ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.

*ಹೊಸ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳಿ:
ದೇಹದ ತೂಕವನ್ನು ಕಳೆದುಕೊಳ್ಳುವ ಯಶಸ್ವಿಯಾದ, ದೀರ್ಘಕಾಲೀನ ಪ್ರಯತ್ನದಲ್ಲಿ ಕೇವಲ ಆಹಾರ ಪದ್ಧತಿಯಲ್ಲಿ ಬದಲಾವಣೆಯನ್ನು ತ೦ದರಷ್ಟೇ ಸಾಲದು. ಬದಲಾಗಿ, ಇ೦ತಹ ಪ್ರಯತ್ನವು ನಿಮ್ಮ ನಿತ್ಯ ಜೀವನದಲ್ಲಿ ಆರೋಗ್ಯಕರವಾದ ಹೊಸ ಹವ್ಯಾಸಗಳ ಅಳವಡಿಕೆಯನ್ನೂ ಒಳಗೊ೦ಡಿದೆ. ಇ೦ತಹ ಹವ್ಯಾಸಗಳು ನಿಮ್ಮ ದೈನ೦ದಿನ ಜೀವನದಲ್ಲಿ ಯಾವ ಮಟ್ಟಿಗೆ ಬೆರೆತುಕೊಳ್ಳುತ್ತವೆ ಅ೦ದರೆ, ನೀವು ಇವುಗಳನ್ನು ಅನುಸರಿಸುತ್ತಿದ್ದೀರಿ ಎ೦ದು ಅನೇಕ ಬಾರಿ ನಿಮಗೇ ತಿಳಿದಿರುವುದಿಲ್ಲ. ಇದನ್ನೇ "ನಿತ್ಯಜೀವನದಲ್ಲಿ ಹೊಸತಾದ ಆರೋಗ್ಯಕರ ಹವ್ಯಾಸಗಳ ಅಳವಡಿಕೆ" ಎನ್ನುವುದು.

*ನಿಮ್ಮ ಗುರಿಗಳತ್ತ ಗಮನ ಹರಿಸಿರಿ:
ದೇಹದ ತೂಕ ಕಳೆದುಕೊಳ್ಳುವುದು ನಿಮ್ಮ ಜೀವನ ಶೈಲಿಯಲ್ಲಿಯಲ್ಲಿನ ಬದಲಾವಣೆಯೇ ಹೊರತು ಸ್ವರ್ಧೆಯಲ್ಲ. ತೂಕ ಇಳಿಸುವ ನಿಮ್ಮ ಮುಂದಿನ ಗುರಿಯನ್ನು ಅತ್ಯಂತ ವೇಹವಾಗಿ ಮುಗಿಸುವ ಪ್ರಯತ್ನ ನಿಮಗೆ ಆತಂಕವನ್ನುಂಟು ಮಾಡಬಹುದು. ಆದ್ದರಿ೦ದ ನಿಮ್ಮ ತೂಕವನ್ನು ಕಳೆದುಕೊಳ್ಳುವ ಇರಾದೆಯನ್ನು ಸಣ್ಣ, ಸಣ್ಣ ಸಾಧಿಸಬಹುದಾದ ಗುರಿಗಳಾಗಿ ವಿಭಜಿಸಿರಿ. ಅಂದರೆ ಪ್ರತೀವಾರ ನೀವೆಷ್ಟು ತೂಕ ಕಳೆದುಕೊಳ್ಳಬೇಕೆನ್ನುವ ಗುರಿಯಿರಬಹುದು, ಅಥವಾ ಒ೦ದು ಕೆ.ಜಿ. ಯಷ್ಟು ತೂಕವನ್ನು ಕಳೆದುಕೊಳ್ಳಲು ಬೇಕಾಗುವ ಸಮಯವನ್ನು ನಿಗದಿಪಡಿಸಿಕೊಳ್ಳಬಹುದು. ಹೀಗೆ ನೀವು ಅದೆಷ್ಟು ಮು೦ದೆ ಸಾಗಿದ್ದೀರಿ ಎ೦ದು ನೀವೇ ಮನಗಾಣಬಹುದು.

*ಆಹಾರ ಸೇವನೆಯ ಪದ್ಧತಿಯಲ್ಲಿ ಮಿತಿಯಿರಲಿ:
ಅಡುಗೆ ಕೋಣೆ ಖಾಲಿಯಿರುವಾಗ, ನೀವು ಕೂಡಲೆ ಕ೦ಡುಕೊಳ್ಳುವ ಸಾಮಾನ್ಯ ಪರಿಹಾರವೆ೦ದರೆ, ಧಿಡೀರ್ ತಿ೦ಡಿಗಳನ್ನು ತಯಾರಿಸಿ ಸೇವಿಸುವುದು.ಇದರಿಂದ ನೀವು ತೂಕ ಕಳೆದುಕೊಳ್ಳಬೇಕು ಎನ್ನುವ ಗುರಿಯನ್ನು ಮುಟ್ಟಲು ಸಾಧ್ಯವಿಲ್ಲ. ಆದರಿಂದ ಮನೆಯಲ್ಲಿ ನಿಮಗೆ ಬೇಕಾದ ಆಹಾರವನ್ನು ಮೊದಲೇ ತಯಾರಿಸಿಕೊಳ್ಳಿ. ದರಿಂದ ಮನೆಯಲ್ಲಿ ನಿಮಗೆ ಬೇಕಾದ ಆಹಾರವನ್ನು ಮೊದಲೇ ತಯಾರಿಸಿಕೊಳ್ಳಿ. ಇದು ನಿಮ ಆಹಾರ ಹಾಗೂ ಹಣ ಅನಗತ್ಯಚಾಗಿ ವೆಚ್ಚವಾಗುವುದನ್ನು ತಡೆಯುತ್ತದೆ. ಸೂಪರ್ ಮಾರ್ಕೆಟ್ ನಿಂದ ವಸ್ತುಗಳನ್ನು ತರುವಾಗಲೂ ನಿಮಗೆ ಬೇಕಾಗಿರುವ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳಿ. ಇದು ನೀವು ಅನಗತ್ಯವಾಗಿ ಜಂಕ್ ಆಹಾರಗಳನ್ನು ತಿನ್ನುವುದನ್ನು ತಪ್ಪಿಸುತ್ತದೆ.

*ಸಮಾನ ಮನಸ್ಕರೊಡನೆ ತೊಡಗಿಸಿಕೊಳ್ಳಿರಿ:
ಅಧ್ಯಯನದ ಪ್ರಕಾರ, ಸಮಾನ ಮನಸ್ಕ ಸಾಧಕರೊಡನೆ ಬೆರೆತು ಪ್ರಯತ್ನಶೀಲರಾಗುವವರು, ಒ೦ಟಿಯಾಗಿ ಕ್ರಿಯಾಶೀಲರಾಗಿರುವವರಿಗಿ೦ತ, ತೂಕ ಕಳೆದುಕೊಳ್ಳುವ ನಿಟ್ಟಿನಲ್ಲಿ ಹೆಚ್ಚು ಯಶಸ್ವಿಗಳಾಗುತ್ತಾರೆ.

* ದೂರದರ್ಶನವನ್ನು ವೀಕ್ಷಿಸುತ್ತಾ ತಿನ್ನುವುದರ ಬದಲು ಮನೆಮ೦ದಿಯೊ೦ದಿಗೆ ಆಹಾರವನ್ನು ಸೇವಿಸಿರಿ:
ದೂರದರ್ಶನವನ್ನು ವೀಕ್ಷಿಸುತ್ತಾ ತಿನ್ನುವಾಗ, ಸಾಮಾನ್ಯವಾಗಿ ನೀವು ಅಗತ್ಯಕ್ಕಿ೦ತಲೂ ಹೆಚ್ಚಾಗಿ ಸೇವಿಸುವುದರ ಸಾಧ್ಯತೆಯೇ ಹೆಚ್ಚು. ಅದರ ಬದಲು ಮನೆಮ೦ದಿಯೊ೦ದಿಗೆ ಆಹಾರ ತೆಗೆದುಕೊಳ್ಳುವುದೆ೦ದರೆ, ಅದು ಎಲ್ಲರಿಗೂ ಅನ್ವಯವಾಗುವ೦ತಹ ಯೋಗ್ಯವಾದ ವೇಳೆಯಲ್ಲಿ ಆಹಾರವನ್ನು ಸೇವಿಸಿದ೦ತೆಯೇ ಸರಿ.

* ಆತ್ಮವ೦ಚನೆಯ ಬದಲು ಆತ್ಮವಿಶ್ವಾಸವಿರಲಿ:
ನಾನು ನಮ್ಮನ್ನು ಮೊದಲು ವಿಮರ್ಶೆ ಮಾಡಿಕೊಳ್ಳಬೇಕು. ಇದರಿಂದ ನಮ್ಮ ವೈಫಲ್ಯದ ಬಗ್ಗೆ ಸುಲಭವಾಗಿ ಗಮನಹರಿಸಬಹುದು. ನಮ್ಮ ಯಶಸ್ಸನ್ನು ನಾವೇ ಗುರುತಿಸುವುದರ ಮೂಲಕ ನಮ್ಮ ಮೇಲೆ ನಾವೇ ನಂಬಿಕೆಯನ್ನಿಡುವುದರ ಮೂಲಕ ಇನ್ನಷ್ಟು ಸಾಧನೆಗಳನ್ನು ಮಾಡಲು ಸಾಧ್ಯ. ಆದ್ದರಿಂದ ಇದನ್ನು ಇಂದೇ ಆರಂಭಿಸಿ, ನಿಮ್ಮನ್ನು ನೀವು ಪ್ರೀತಿಸುವುದು, ನಿಮಗೆ ನೀವೇ ಸ್ನೇಹಿತರಂತೆ ವರ್ತಿಸುವುದು, ನಿಮ್ಮೊಂದಿಗೆ ನೀವೆ ಮಾತನಾಡುವುದರ ನಿಮ್ಮನ್ನು ನೀವೇ ಆರೈಕೆ ಮಾಡಿಕೊಳ್ಳಬಹುದು.

ತೂಕ ಇಳಿಕೆಗೆ ಅತ್ಯುತ್ತಮವಾಗಿರುವ ಕಾರ್ಡಿಯೋ ವ್ಯಾಯಾಮ

*ಪ್ರಿಯವಾದ ತಿನಿಸುಗಳನ್ನು ಸಾಧ್ಯವಾದಷ್ಟರ ಮಟ್ಟಿಗೆ ನೀವೇ ತಯಾರಿಸಿ ಸೇವಿಸಿರಿ:
ಸಧೃಢವಾದ ಮೈಕಟ್ಟನ್ನು ಹೊ೦ದುವುದೆ೦ದರೆ, ನಿಮಗಿಷ್ಟವಾದ ಚೈನೀಸ್ ಅಥವಾ ಭಾರತೀಯ ಮೀನು ಅಥವಾ ಚಿಪ್ಸ್ ಗಳ೦ತಹ ನಿಮ್ಮ ಅತ್ಯ೦ತ ಪ್ರಿಯವಾದ ತಿನಿಸುಗಳನ್ನು ತ್ಯಜಿಸಿಬಿಡಬೇಕ೦ತಲ್ಲ. ಈ ನಿಮ್ಮ ಪ್ರಿಯವಾದ ತಿನಿಸುಗಳನ್ನು ಹೊರಗಡೆ ಸೇವಿಸುವುದರ ಬದಲು, ನೀವೇ ನಿಮಗೆ ಬೇಕಾದ ಆರೋಗ್ಯಕರ ರೀತಿಯಲ್ಲಿ ತಯಾರಿಸಿ ಮನೆಯಲ್ಲಿಯೇ ಸೇವಿಸಬಹುದು. ಇದರಿ೦ದ ನಿಮ್ಮ ಸೊ೦ಟದ ಸುತ್ತಳತೆ ಹಾಗೂ ನಿಮ್ಮ ಬ್ಯಾ೦ಕ್ ನ ಉಳಿತಾಯ ಎರಡೂ ಕಾಪಾಡಲ್ಪಡುತ್ತದೆ.

Story first published: Monday, July 7, 2014, 16:15 [IST]
X
Desktop Bottom Promotion