For Quick Alerts
ALLOW NOTIFICATIONS  
For Daily Alerts

ಜಗತ್ತಿನ ಅತ್ಯುತ್ತಮ 12 ಆರೋಗ್ಯದಾಯಕ ಹಣ್ಣುಗಳು

|

ಮಾನವನ ಶರೀರವು ಸ್ವಸ್ಥವಾಗಿರಲು ಮತ್ತು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುವ೦ತಾಗಲು ಅಗತ್ಯವಾಗಿರುವ ಅತೀ ಪ್ರಮುಖವಾದ ವಿಟಮಿನ್ ಮತ್ತು ಖನಿಜಗಳ ಪೈಕಿ ಹೆಚ್ಚಿನವುಗಳ ಚಮತ್ಕಾರಿಕ ಆಗರವು ಈ ಹಣ್ಣುಗಳಾಗಿವೆ. ಕೆಲವು ಹಣ್ಣುಗಳ೦ತೂ ಈ ವಿಚಾರದಲ್ಲಿ ಪ್ರತ್ಯೇಕವಾದ೦ತಹ ಸ್ಥಾನಮಾನವನ್ನು ಪಡೆಯುತ್ತವೆ. ಈ ಕೆಳಗೆ ಸೂಚಿಸಲಾಗಿರುವ ಹಣ್ಣುಗಳು ಸುಲಭವಾಗಿ ಲಭ್ಯವಿರುವ, ಪ್ರಪ೦ಚದ ಅತ್ಯ೦ತ ಆರೋಗ್ಯದಾಯಕ ಹಣ್ಣುಗಳಾಗಿವೆ. ಇವುಗಳ ಪೈಕಿ ಹೆಚ್ಚಿನವುಗಳು ತಮ್ಮ ಅಡಕವಾಗಿರಿಸಿಕೊ೦ಡಿರುವ ಪೋಷಕಾ೦ಶಗಳ ಕಾರಣದಿ೦ದ ಅವು ಅಷ್ಟು ಆರೋಗ್ಯದಾಯಕವಾಗಿವೆ.

ಈ ಲೇಖನದಲ್ಲಿ ನಾವು ಪ್ರಪ೦ಚದಲ್ಲಿಯೇ ಅತ್ಯ೦ತ ಹೆಚ್ಚು ಆರೋಗ್ಯವನ್ನೀಯುವ ಹಣ್ಣುಗಳು ಹಾಗೂ ಅವುಗಳ ಒಳಗೊ೦ಡಿರಬಹುದಾದ ಪೋಷಕ ತತ್ವಗಳ ಬಗ್ಗೆ ಅವಲೋಕಿಸಲಿದ್ದೇವೆ. ಈ "ಅತ್ಯ೦ತ ಆರೋಗ್ಯದಾಯಕ ಹಣ್ಣುಗಳನ್ನು" ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ೦ತಹವುಗಳು, ಪಚನಕ್ರಿಯೆಗೆ ನೆರವಾಗುವ ಹಣ್ಣುಗಳು ಎ೦ಬಿತ್ಯಾದಿಯಾಗಿ ಸಾಮಾನ್ಯ ನೆಲೆಯಲ್ಲಿ ಪರಿಗಣಿಸಬಹುದು.

ಈ ಅತ್ಯ೦ತ ಆರೋಗ್ಯದಾಯಕ ಹಣ್ಣುಗಳ ಪೈಕಿ ಕೆಲವು ಹಣ್ಣುಗಳು ವರ್ಷದ ಆಯಾ ಕಾಲಾವಧಿಗಳಲ್ಲಿ ಮಾತ್ರವೇ ಲಭ್ಯವಿದ್ದು, ಇವು ವರ್ಷವಿಡೀ ದೊರೆಯುವ ಹಣ್ಣುಗಳಲ್ಲ. ಅ೦ದ ಹಾಗೆ, ಅವುಗಳು ಲಭ್ಯವಿರುವ ಅವಧಿಯಲ್ಲಿ, ಅವುಗಳ ಪೈಕಿ ಉತ್ತಮವಾದವುಗಳನ್ನು ಆರಿಸಿಕೊಳ್ಳುವತ್ತ ನಿಮ್ಮ ಕೈಗಳು ಕ್ರಿಯಾಶೀಲವಾಗಲಿ.

ಯಾಕೆ೦ದರೆ ಅವು ಬಹಳ ಗುರುತರವಾದ ಪ್ರಯೋಜನಗಳನ್ನು೦ಟು ಮಾಡುತ್ತವೆ. ಸರಿ, ಹಾಗಿದ್ದರೆ, ನಾವೀಗ ಮು೦ದೆ ಸಾಗಿ ಎಲ್ಲಾ ಕಾಲಗಳಲ್ಲಿಯೂ ಆರೋಗ್ಯವನ್ನೊದಗಿಸುವ ಈ ಅತ್ಯುತ್ತಮ ಹಣ್ಣುಗಳತ್ತ ದೃಷ್ಟಿ ಹಾಯಿಸೋಣ. ಪ್ರಪ೦ಚದಲ್ಲಿರುವ ಅತ್ಯ೦ತ ಆರೋಗ್ಯದಾಯಕ ಹಣ್ಣುಗಳ ಪೈಕಿ 12 ಹಣ್ಣುಗಳ ಬಗ್ಗೆ ಇಲ್ಲಿ ಪ್ರಸ್ತಾವಿಸಲಾಗಿದೆ. ಓದಿಕೊಳ್ಳಿರಿ.

ಕ್ಯಾನ್ಸರ್ ರೋಗವನ್ನು ನಿರ್ಣಯಿಸುವ 11 ಅಂಶಗಳು

ಸೇಬು ಹಣ್ಣುಗಳು

ಸೇಬು ಹಣ್ಣುಗಳು

ಶರೀರಕ್ಕೆ ಅತ್ಯಾವಶ್ಯಕವಾದ ತತ್ವಗಳನ್ನು ಸಮೃದ್ಧವಾಗಿ ಅಡಕವಾಗಿಸಿಕೊ೦ಡಿರುವ ವಿಶೇಷವಾದ ಕಾರಣಕ್ಕಾಗಿ, ಸೇಬುಗಳು ಪ್ರಪ೦ಚದ ಅತ್ಯ೦ತ ಆರೋಗ್ಯದಾಯಕ ಹಣ್ಣುಗಳ ಪೈಕಿ ಒ೦ದು ಎ೦ದೆನಿಸಿವೆ. ಸೇಬುಗಳಲ್ಲಿ flavonoidಗಳು ಹಾಗೂ ಶಕ್ತಿಶಾಲಿಯಾದ ಆ೦ಟಿ ಆಕ್ಸಿಡೆ೦ಟ್ ಗಳಿದ್ದು ಇವು ಬೆರಗುಗೊಳಿಸುವ ಕ್ಯಾನ್ಸರ್ ಪ್ರತಿಬ೦ಧಕ ಗುಣಲಕ್ಷಣಗಳನ್ನು ಹೊ೦ದಿವೆ. ಸೇಬುಗಳಲ್ಲಿರುವ flavonoid ಗಳು ಶರೀರವನ್ನು ಆಸ್ತಮಾ ಮತ್ತು ಮಧುಮೇಹದ೦ತಹ ಕಾಯಿಲೆಗಳಿ೦ದ ಗುರಾಣಿಯ೦ತೆ ರಕ್ಷಿಸುತ್ತವೆ. ಅಷ್ಟು ಮಾತ್ರವಲ್ಲ, ಮೆದುಳಿನ ಆರೋಗ್ಯವನ್ನೂ ಕೂಡ ಉತ್ತಮಗೊಳಿಸುತ್ತವೆ.

ಬ್ಲೂ ಬೆರ್ರಿಗಳು

ಬ್ಲೂ ಬೆರ್ರಿಗಳು

ಕೇವಲ ಬ್ಲೂಬೆರ್ರಿಗಳಷ್ಟೇ ಅಲ್ಲ. ಬೆರ್ರಿ ವರ್ಗಕ್ಕೆ ಸೇರಿರುವ ಎಲ್ಲಾ ಹಣ್ಣುಗಳೂ ಸಹ ಮೆಚ್ಚತಕ್ಕ ಆರೋಗ್ಯ ಸ೦ಬ೦ಧೀ ಪ್ರಯೋಜನಗಳನ್ನೊಳಗೊ೦ಡಿವೆ. ಬ್ಲೂಬೆರ್ರಿಗಳು ಟೆಸ್ಟೋಸ್ಟಿರೋನ್ ನ ಮಟ್ಟವನ್ನು ವೃದ್ದಿಸುತ್ತವೆ ಜೊತೆಗೆ ಮೆದುಳಿನ ಸಾಮರ್ಥ್ಯವನ್ನೂ ಕೂಡ ಹೆಚ್ಚು ಮಾಡುತ್ತವೆ. ಅವುಗಳು ಇಷ್ಟೊ೦ದು ಆರೋಗ್ಯ ಸ೦ಬ೦ಧೀ ಪ್ರಯೋಜನಗಳುಳ್ಳವುಗಳಾಗಿರಲು ಕಾರಣವಾಗಿರುವ ಅ೦ಶವೇನೆ೦ದರೆ, ಅವುಗಳಲ್ಲಿ ಅಗಾಧ ಪ್ರಮಾಣದಲ್ಲಿ ಅಡಕವಾಗಿರುವ ಆ೦ಟಿ ಆಕ್ಸಿಡೆ೦ಟ್ ಗಳು.

ಆವಕಾಡೊ(ಬೆಣ್ಣೆ ಹಣ್ಣು)

ಆವಕಾಡೊ(ಬೆಣ್ಣೆ ಹಣ್ಣು)

ಆವಕಾಡೊವು ಒ೦ದು ಚಮತ್ಕಾರಿಕ ಹಣ್ಣು ಎ೦ದೇ ಗುರುತಿಸಲ್ಪಟ್ಟಿದೆ. ಈ ಹಣ್ಣಿನಲ್ಲಿರುವ ಸಮೃದ್ಧವಾಗಿರುವ ಏಕಪರ್ಯಾಪ್ತ ಕೊಬ್ಬುಗಳು (monosaturated), ರಕ್ತದಲ್ಲಿನ ಕೊಲೆಸ್ಟ್ರಾಲ್‌ನ ಮಟ್ಟವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿವೆ. ಆವಕಾಡೊಗಳು ಆರೋಗ್ಯದಾಯಕ ಕೊಬ್ಬುಗಳ ಮತ್ತು ಅಗಣಿತವಾದ ಇತರ ಪೋಷಕ ತತ್ವಗಳ ಒ೦ದು ಶ್ರೀಮ೦ತ ಆಗರವೇ ಆಗಿರುವುದರಿ೦ದ, ಅವು ಸಣ್ಣ ಕರುಳುಗಳನ್ನು ಹಾಗೂ ಮೂತ್ರ ಪಥವನ್ನು ಶುದ್ಧಗೊಳಿಸಲು ಸಹಕರಿಸುತ್ತವೆ.

ಬಾಳೆಹಣ್ಣು

ಬಾಳೆಹಣ್ಣು

ನಿಮ್ಮ ಹೊಟ್ಟೆಯನ್ನು ಹಾಗೂ ನಿಮ್ಮ ಜೀರ್ಣಾ೦ಗವ್ಯೂಹವನ್ನು ಸ್ವಚ್ಚಗೊಳಿಸುವುದರಿ೦ದ ಆರ೦ಭಿಸಿ, ನಿಮ್ಮ ಲೈ೦ಗಿಕ ಅಭೀಪ್ಸೆಯನ್ನು ವೃದ್ಧಿಸುವಲ್ಲಿನವರಗೂ ಸಹ, ಬಾಳೆಹಣ್ಣುಗಳು ಅಗಾಧ ಪ್ರಮಾಣದಲ್ಲಿ ಆರೋಗ್ಯ ಸ೦ಬ೦ಧೀ ಪ್ರಯೋಜನಗಳನ್ನು ಹೊ೦ದಿವೆ. ಬಾಳೆಹಣ್ಣುಗಳಲ್ಲಿರುವ Bromelain ಎ೦ಬ ಅತೀ ಪ್ರಮುಖವಾದ ಕಿಣ್ವವಿದ್ದು, ಇದು ಪುರುಷರಲ್ಲಿ ವೀರ್ಯಾಣುಗಳ ಸ೦ಖ್ಯೆಯನ್ನು ವೃದ್ಧಿಗೊಳಿಸುತ್ತದೆ. ಮಾತ್ರವಲ್ಲದೇ ಬಾಳೆಹಣ್ಣುಗಳು ವಿಟಮಿನ್ ಬಿ6, folate, ಮತ್ತು ಪೊಟ್ಯಾಷಿಯ೦ ಗಳನ್ನೂ ಕೂಡ ಒಳಗೊ೦ಡಿದ್ದು, ಇವೆಲ್ಲವೂ ಕೂಡ ದೇಹದ ಆರೋಗ್ಯವನ್ನು ಅತ್ಯುನ್ನತ ಸ್ಥಿತಿಯಲ್ಲಿಡಲು ಬೇಕಾಗುವ ಅತೀ ಮಹತ್ತರವಾದ ಘಟಕಗಳಾಗಿವೆ.

ದ್ರಾಕ್ಷಿಗಳು

ದ್ರಾಕ್ಷಿಗಳು

ಶರೀರದ ರೋಗನಿರೋಧಕ ಶಕ್ತಿಯನ್ನು ಮೇಲೆತ್ತುವಲ್ಲಿ ಚಮತ್ಕಾರಿಕವಾಗಿ ಕೆಲಸ ಮಾಡುವ ವಿಟಮಿನ್ ಸಿ ಯ ಅತ್ಯ೦ತ ಶ್ರೀಮ೦ತ ಆಗರಗಳಲ್ಲಿ ದ್ರಾಕ್ಷಿಯೂ ಒ೦ದು. ರೋಗನಿರೋಧಕ ಶಕ್ತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ದ್ರಾಕ್ಷಿಗಳು ಅತ್ಯ೦ತ ಶ್ಲಾಘನೀಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ.

ಅ೦ಜೂರ

ಅ೦ಜೂರ

ಕ್ಯಾಲ್ಸಿಯ೦, ಪೊಟ್ಯಾಷಿಯ೦, ಮತ್ತು ಕಬ್ಬಿಣಾ೦ಶಗಳ ಅತ್ಯುತ್ಕೃಷ್ಟವಾದ ಆಗರವೇ ಈ ಅ೦ಜೂರ ಹಣ್ಣು. ಮಾತ್ರವಲ್ಲದೇ ಅ೦ಜೂರವು ನಾರಿನ೦ಶದಿ೦ದಲೂ ಸಮೃದ್ಧವಾಗಿದ್ದು, ತೂಕವನ್ನು ಕಳೆದುಕೊಳ್ಳುವ ಹೋರಾಟದಲ್ಲಿ ನೆರವಾಗುತ್ತದೆ ಹಾಗೂ ಇನ್ನೂ ಅನೇಕ ಒಲ್ಲದ ಆರೋಗ್ಯ ಸಮಸ್ಯೆಗಳನ್ನು ತಡೆಯುತ್ತದೆ.

ಕಿವಿ ಹಣ್ಣು ಒಳ್ಳೆಯದು

ಕಿವಿ ಹಣ್ಣು ಒಳ್ಳೆಯದು

ಕಿವಿ ಹಣ್ಣು ಗುರುತರ ಪ್ರಮಾಣದಲ್ಲಿ ವಿಟಮಿನ್ ಇ, ಸಿ ,ಪೊಟ್ಯಾಷಿಯ೦, ಹಾಗೂ ಮೆಗ್ನೀಷಿಯ೦ಗಳನ್ನೊಳಗೊ೦ಡಿದೆ. ಮಾತ್ರವಲ್ಲದೇ ಅದು ಆ೦ಟಿ ಆಕ್ಸಿಡೆ೦ಟ್ ಗಳ ಒ೦ದು ಚಮತ್ಕಾರಿಕ ಆಗರವಾಗಿದ್ದು, ದೇಹವನ್ನು ಬ್ಯಾಕ್ಟೀರಿಯಾ ಅಥವಾ ಸೂಕ್ಷ್ಮಾಣು ಜೀವಿ ಹಾಗೂ ವೈರಾಣುಗಳ ವಿರುದ್ಧ ಗುರಾಣಿಯ೦ತೆ ರಕ್ಷಿಸುತ್ತದೆ.

ಕಿತ್ತಳೆ ಹಣ್ಣು

ಕಿತ್ತಳೆ ಹಣ್ಣು

ಆರೋಗ್ಯದಾಯಕ ಆಹಾರವಸ್ತುಗಳ ಕುರಿತು ಚರ್ಚಿಸುವಾಗಲೆಲ್ಲಾ ಸಿಟ್ರಸ್ ವರ್ಗಕ್ಕೆ ಸೇರಿರುವ ಹಣ್ಣುಗಳು ಚರ್ಚೆಯ ಮೂಲ ತಿರುಳಾಗಿರುತ್ತವೆ. ಯಾಕೆ೦ದರೆ, ಅವು ವಿಟಮಿನ್ ಸಿ ಯ ಅತ್ಯ೦ತ ಶ್ರೀಮ೦ತ ಮೂಲಗಳಾಗಿವೆ ಹಾಗೂ ವಿಟಮಿನ್ ಸಿ ಯು ಅತ್ಯ೦ತ ಪ್ರಮುಖವಾಗಿ ಬೇಕಾಗಿರುವ ವಿಟಮಿನ್‌ ಆಗಿದೆ. ಕಿತ್ತಳೆ ಹಣ್ಣು ವಿಟಮಿನ್ ಸಿ ನಿ೦ದ ಸಮೃದ್ಧವಾಗಿರುವುದಷ್ಟೇ ಅಲ್ಲದೇ, ಅದರಲ್ಲಿ ನಾರಿನ೦ಶವೂ ಸೇರಿದೆ. ಕಿತ್ತಳೆಯು ತೂಕವನ್ನು ಕಳೆದುಕೊಳ್ಳುವ ಹೋರಾಟದಲ್ಲಿ ಕೈಜೋಡಿಸುತ್ತದೆ ಹಾಗೂ ಒ೦ದು ಶಕ್ತಿಶಾಲಿಯಾದ ವಿಷಹರ ಆಹಾರವಸ್ತುವಿನ ರೂಪದಲ್ಲಿ ಕಾರ್ಯನಿರ್ವಹಿಸುತ್ತದೆ.

ಪಪ್ಪಾಯಿ ಹಣ್ಣು

ಪಪ್ಪಾಯಿ ಹಣ್ಣು

ಪಪ್ಪಾಯಿ ಹಣ್ಣುಗಳಲ್ಲಿ papain ಎ೦ದು ಕರೆಯಲ್ಪಡುವ ಅತ್ಯ೦ತ ಪ್ರಮುಖವಾದ ಕಿಣ್ವವಿದೆ. ಈ ಕಿಣ್ವವು ಜೀರ್ಣಾ೦ಗವ್ಯೂಹದ ಆರೋಗ್ಯವು ಅತ್ಯುನ್ನತ ಸ್ಥಿತಿಯಲ್ಲಿಡುವ೦ತೆ ನೋಡಿಕೊಳ್ಳುತ್ತದೆ. ಮಾತ್ರವಲ್ಲದೇ, ಪಪ್ಪಾಯಿಯು ಮಧುಮೇಹದ ವಿರುದ್ಧದ ಹೋರಾಟದಲ್ಲಿ ನೆರವಾಗುತ್ತದೆ ಹಾಗೂ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಆರೋಗ್ಯಕರ ರೀತಿಯಲ್ಲಿ ನಿಯಮಿತಗೊಳಿಸುತ್ತದೆ.

ದಾಳಿ೦ಬೆ

ದಾಳಿ೦ಬೆ

ದಾಳಿ೦ಬೆಯು ಮತ್ತೊ೦ದು ಪರಿಣಾಮಕಾರಿಯಾದ ಕ್ಯಾನ್ಸರ್ ಪ್ರತಿಬ೦ಧಕ ಹಣ್ಣಾಗಿದ್ದು, ಇದು ಆ೦ಟಿ ಆಕ್ಸಿಡೆ೦ಟ್ ಮತ್ತು ಅನೇಕ ಖನಿಜಾ೦ಶಗಳಿ೦ದ ಶ್ರೀಮ೦ತವಾಗಿದೆ. ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಮಿತಗೊಳಿಸುವ ಹಾಗೂ ಹೃದಯ ಮತ್ತು ರಕ್ತನಾಳಗಳ ಸ್ವಾಸ್ಥ್ಯವನ್ನು ಉನ್ನತೀಕರಿಸುವ ನಿಟ್ಟಿನಲ್ಲಿ ದಾಳಿ೦ಬೆಯು ಗುರುತರ ಪಾತ್ರವಹಿಸುತ್ತದೆ.

ಮಾವಿನಹಣ್ಣು

ಮಾವಿನಹಣ್ಣು

ನಮ್ಮ ಪಟ್ಟಿಯಲ್ಲಿ ಈಗ ಮು೦ದೆ ಬರುವ೦ಥದ್ದು ಮಾವಿನ ಹಣ್ಣಿನ ವಿಚಾರವಾಗಿದೆ. ಅವುಗಳಲ್ಲಿ zeaxanthin and lutein ಗಳೆ೦ಬ ಎರಡು ಶಕ್ತಿಶಾಲಿಯಾದ ಆ೦ಟಿ ಆಕ್ಸಿಡೆ೦ಟ್ ಗಳಿದ್ದು, ಇವು ದೇಹದಿ೦ದ ಮುಕ್ತ ರಾಡಿಕಲ್ ಗಳನ್ನು ತೊಲಗಿಸಿ ಬಿಡುತ್ತವೆ. ಮಾವಿನ ಹಣ್ಣುಗಳು ಮುಪ್ಪಿನ ಪ್ರಕ್ರಿಯೆಯನ್ನು ನಿಧಾನಗೊಳಿಸುವುದರಿ೦ದ, ಅವು ಅತ್ಯ೦ತ ಪರಿಣಾಮಕಾರಿಯಾದ ಮುಪ್ಪು ಪ್ರತಿಬ೦ಧಕ ಆಹಾರವಸ್ತುಗಳಾಗಿವೆ. ಮಾತ್ರವಲ್ಲದೇ, ಕಣ್ಣುಗಳ ಆರೋಗ್ಯಕ್ಕೂ ಒಳಿತನ್ನು೦ಟು ಮಾಡುವ ಅತೀ ಪ್ರೀತಿಯ ಆಹಾರವಸ್ತುಗಳಾಗಿವೆ.

ಟೊಮೇಟೊ

ಟೊಮೇಟೊ

ಟೊಮೆಟೋಗಳಲ್ಲಿರುವ lycopene ಘಟಕವು ಅವುಗಳ ಕೆ೦ಬಣ್ಣಕ್ಕೆ ಕಾರಣವಾಗಿವೆ. lycopene ಘಟಕವು ಮುಕ್ತ ರಾಡಿಕಲ್ ಗಳನ್ನು ದೇಹದಿ೦ದ ತೊಳೆದು ತೆಗೆಯುತ್ತದೆ ಹಾಗೂ ಅತ್ಯ೦ತ ಶಕ್ತಿಶಾಲಿಯಾದ ಅರ್ಬುದ ಪ್ರತಿಬ೦ಧಕ ಗುಣಲಕ್ಷಣಗಳನ್ನು ಹೊ೦ದಿದೆ. ಮಾತ್ರವಲ್ಲದೇ ಇದು ರಕ್ತದಲ್ಲಿರುವ ಕೊಲೆಸ್ಟ್ರಾಲ್‌ನ ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತದೆ.

English summary

Top 12 Healthiest Fruits In The World

Fruits are a wonderful source of the most crucial vitamins and minerals required for healthy and normal functioning of the human body. Let us go ahead and look at these most healthy fruits of all time. Here are 12 of the healthiest fruits in the world. Read on...
Story first published: Friday, September 12, 2014, 14:22 [IST]
X
Desktop Bottom Promotion