For Quick Alerts
ALLOW NOTIFICATIONS  
For Daily Alerts

ಹೊಟ್ಟೆಯ ಕೊಬ್ಬು ಕರಗಿಸುವ ಅತ್ಯುತ್ತಮ 10 ಉಪಾಯಗಳು

By Poornima Hegde
|

ಹೊಟ್ಟೆ ದೊಡ್ಡದಿದ್ದರೆ ಅದನ್ನು ಕರಗಿಸಬೇಕೆಂಬುದೇ ಇಡಿ ದಿನದ ಯೋಚನೆಯ ಹೆಚ್ಚಿನ ಪಾಲಾಗಿರುತ್ತದೆ. ಅಂದ ಕಾಣುವುದಿಲ್ಲ ಪ್ಯಾಂಟ್ ಗಳು ಫಿಟ್ ಆಗುವುದಿಲ್ಲ ಹೀಗೆ ಬಹಳಷ್ಟು ಯೋಚನೆಗಳು. ಹೊಟ್ಟೆ ಕರಗಿಸುವುದು ಒಂದು ಬಹಳ ದೊಡ್ಡ ಸಮಸ್ಯೆಯೇ ಸರಿ.

ಆದರೆ ನಿಜವಾದ ಸಮಸ್ಯೆ ಇರುವುದು ಅದನ್ನು ತಪ್ಪಾಗಿ ಮಾಡುವುದರಲ್ಲಿ. ನೀವು ಹೊಟ್ಟೆ ಕರಗಿಸಲೇ ಬೇಕೆಂಬ ದೃಢ ನಿರ್ಧಾರವನ್ನು ಹೊಂದಿರುವಿರಾ? ಹಾಗಿದ್ದರೆ ಈ ಹತ್ತು ಹಂತಗಳನ್ನು ಪಾಲಿಸಿ.

ಬೊಜ್ಜು ರಹಿತ ಹೊಟ್ಟೆ ಪಡೆಯುವುದು ಹೇಗೆ?

ಆಹಾರ ಸರಿಯಾಗಿರಲಿ:

ಆಹಾರ ಸರಿಯಾಗಿರಲಿ:

ಸರಿಯಾದ ಆಹಾರ ಕ್ರಮ ನಿಮ್ಮ ದೊಡ್ಡ ಹೊಟ್ಟೆಯ ಸಮಸ್ಯೆಯನ್ನು ಎಂಬತ್ತು ಶೇಕಡಾ ಕಡಿಮೆ ಮಾಡುತ್ತದೆ. ಸರಿಯಾದ ಪೋಷಕಾಂಶಗಳಿರುವ ಹಾಗೂ ನಿಮ್ಮ ದೇಹಕ್ಕೆ ಅಗತ್ಯ ಇರುವ ಆಹಾರವನ್ನು ಮಿತ ಪ್ರಮಾಣದಲ್ಲಿ ಸೇವಿಸಿದರೆ ಸಾಕು. ಮನೆಯಲ್ಲೇ ತಯಾರಿಸಿದ ಆಹಾರಕ್ಕೆ ಆದ್ಯತೆ ಕೊಡಿ.

ಹೆಚ್ಚು ನೀರು ಕುಡಿಯಿರಿ:

ಹೆಚ್ಚು ನೀರು ಕುಡಿಯಿರಿ:

ಬಹಳಷ್ಟು ಮಂದಿಗೆ ಹಸಿವು, ಬಾಯಾರಿಕೆ ಮತ್ತು ದಣಿವಿನ ನಡುವೆ ಇರುವ ವ್ಯತ್ಯಾಸದ ಗೊಂದಲದಿಂದಾಗಿ ಏನಾದರೂ ತಿಂಡಿ ತಿನ್ನುತ್ತಾರೆ. ಆದರೆ ಹಾಗಾಗಬಾರದು. ನಿಮ್ಮ ಜೊತೆ ಯಾವಾಗಲೂ ನೀರಿನ ಬಾಟಲಿ ಇದ್ದರೆ ಒಳಿತು. ಸಾಮಾನ್ಯ ಮನುಷ್ಯನೊಬ್ಬನಿಗೆ ದಿನಕ್ಕೆ ಆರರಿಂದ ಎಂಟು ಗ್ಲಾಸ್ ಗಳಷ್ಟು ನೀರು ಬೇಕು. ಇದು ನಮ್ಮ ದೇಹ ತೂಕ ಮತ್ತು ಜೀವನ ಶೈಲಿಯ ಮೇಲೆ ಅವಲಂಬಿತವಾಗಿದೆ. ಹೀಗಾಗಿ ನಿಮ್ಮ ದೇಹಕ್ಕೆ ತಕ್ಕಂತೆ ನೀರು ಕುಡಿಯಿರಿ.

ಸಣ್ಣ ಅವಧಿಯ ತೀವ್ರ ವ್ಯಾಯಾಮಗಳು:

ಸಣ್ಣ ಅವಧಿಯ ತೀವ್ರ ವ್ಯಾಯಾಮಗಳು:

ಇತ್ತೀಚಿನ ಅಧ್ಯಯನದ ಪ್ರಕಾರ ಹೆಚ್ಚು ಹೊತ್ತು ವ್ಯಾಯಾಮ ಮಾಡುವಾಗ ನಡುವಲ್ಲಿ ತೀವ್ರವಾದ ವ್ಯಾಯಾಮಗಳು ಬಹಳ ಸಹಾಕಾರಿ. ಅಂದರೆ ನೀವು ವಾಕಿಂಗ್ ಟ್ರಾಕ್ ನಲ್ಲಿ ನಡೆಯುತ್ತೀರಿ ಎಂದಾದರೆ ಸಾಮಾನ್ಯ ವೇಗದಲ್ಲೇ ನಡೆಯುತ್ತಿರಿ ಆದರೆ ನಡುವಲ್ಲಿ ಆಗೊಮ್ಮೆ ಈಗೊಮ್ಮೆ ವೇಗವನ್ನು ಹೆಚ್ಚಿಸಿಕೊಳ್ಳಿ ಹಾಗೂ ನಡೆಯಿರಿ ಇದರಿಂದಾಗಿ ಬಹಳ ಪರಿಣಾಮ ಆಗುತ್ತದೆ.

ಸಕ್ಕರೆ ಕಡಿತ:

ಸಕ್ಕರೆ ಕಡಿತ:

ಸಕ್ಕರೆಯನ್ನು ನೀವು ಆದಷ್ಟು ಕಡಿಮೆ ಸೇವಿಸಬೇಕು. ಸಕ್ಕರೆಯ ಬದಲಿಗೆ ಜೇನುತುಪ್ಪ, ಲಿಕೋರೈಸ್ ನಂತಹ ಕೆಲವು ಬದಲಿ ವ್ಯವಸ್ಥೆಗಳನ್ನು ಮಾಡಿಕೊಳ್ಳಿ.

ಸೋಡಿಯಂ ಸೇವನೆ ಕಡಿಮೆ ಮಾಡಿ:

ಸೋಡಿಯಂ ಸೇವನೆ ಕಡಿಮೆ ಮಾಡಿ:

ಉಪ್ಪಿಗಿಂತ ರುಚಿ ಬೇರೆ ಇಲ್ಲ ಎನ್ನುವುದು ಒಪ್ಪುವ ಮಾತೇ ಆಗಿದೆ. ಸೋಡಿಯಂ ಉಪ್ಪಿನ ಬದಲಾಗಿ ಪೊಟ್ಯಾಷಿಯಂ, ಲಿಂಬೆ ಹಣ್ಣು, ಹಾಗೂ ಕಡಲ ಉಪ್ಪಿನ ಆಯ್ಕೆ ಇದೆ. ಇವನ್ನು ಪರಿಗಣಿಸಿ. ಇದರ ಜೊತೆಗೆ ಕಾಣುಮೆಣಸಿನ ಹುಡಿಯ ಬಳಕೆ ಮುಂತಾದ ತಂತ್ರಗಳನ್ನು ಪಾಲಿಸಿ.

ವಿಟಮಿನ್ ಸಿ:

ವಿಟಮಿನ್ ಸಿ:

ಕಾರ್ನಿಟೈನ್ ನ ಕರಗುವಿಕೆಗೆ ವಿಟಮಿನ್ ಸಿ ಬಹಳ ಮುಖ್ಯ. ಇದು ನಮ್ಮ ದೇಹದಲ್ಲಿ ಶಕ್ತಿಯಾಗಿ ಮಾರ್ಪಡುತ್ತದೆ. ಇದು ಕಾರಿಸ್ಟ್ರಾಲ್ ಅನ್ನು ನಿಯಂತ್ರಿಸಲೂ ಸಹಕಾರಿ. ಕಾರಿಸ್ಟ್ರಾಲ್ ಮಟ್ಟ ಕೊಬ್ಬು ಹೆಚ್ಚಾಗಲು ಕಾರಣವಾಗುತ್ತದೆ.

ಕೊಬ್ಬನ್ನು ಕರಗಿಸುವ ಆಹಾರಗಳು:

ಕೊಬ್ಬನ್ನು ಕರಗಿಸುವ ಆಹಾರಗಳು:

ಬೆಳ್ಳುಳ್ಳಿ, ಈರುಳ್ಳಿ, ಶುಂಠಿ, ಮೆಣಸಿನ ಪುಡಿ, ಎಲೆಕೋಸು, ಟೊಮೆಟೊ ಮತ್ತು ದಾಲ್ಚಿನಿ ಮತ್ತು ಸಾಸಿವೆಯಂತಹ ಸಂಬಾರ ಪದಾರ್ಥಗಳು ಕೊಬ್ಬನ್ನು ಕರಗಿಸಲು ಬಹಳ ಉಪಯುಕ್ತ. ಇವುಗಳಲ್ಲಿ ನಿಮ್ಮ ಇಷ್ಟದ ವಸ್ತುಗಳ ನಿಯಮಿತ ಬಳಕೆ ಬಹಳ ಪ್ರಭಾವಶಾಲಿ. ಬಿಸಿ ನೀರಿನ ಜೊತೆಗೆ ಲಿಂಬೆ ಮತ್ತು ಜೇನು ತುಪ್ಪವನ್ನು ಹಾಕಿ ಸೇವಿಸುವುದು ಕೂಡ ಬಹಳ ಪ್ರಭಾವಶಾಲಿ ಅಂಶವಾಗಿದೆ.

ಆರೋಗ್ಯಕರ ಕೊಬ್ಬನ್ನು ಸೇವಿಸಿ:

ಆರೋಗ್ಯಕರ ಕೊಬ್ಬನ್ನು ಸೇವಿಸಿ:

ಕೆಟ್ಟ ಕೊಲೆಸ್ಟ್ರರಾಲ್ ಅನ್ನು ಕಡಿಮೆ ಮಾಡುವ ಕೆಲಸದಲ್ಲಿ ಒಳ್ಳೆಯ ಕೊಲೆಸ್ಟರಾಲ್ ಬಹಳ ಉಪಯೋಗಕಾರಿ. ಅವಕಾಡೊ, ಆಲೀವ್, ತೆಂಗಿನ ಕಾಯಿ ಮತ್ತು ಬೀಜಗಳು ಒಳ್ಳೆಯ ಕೊಲೆಸ್ಟರಾಲ್ ನ ಕೆಲವು ಮೂಲಗಳು

ಬೆಳಗ್ಗಿನ ತಿಂಡಿಯನ್ನು ಬಿಡಬೇಡಿ:

ಬೆಳಗ್ಗಿನ ತಿಂಡಿಯನ್ನು ಬಿಡಬೇಡಿ:

ಹಲವರು ಅಂದುಕೊಂಡಂತೆ ಬೆಳಗ್ಗಿನ ತಿಂಡಿಯನ್ನು ಬಿಟ್ಟರೆ ತೂಕ ಕಡಿಮೆ ಮಾಡಲು ಸಹಾಯ ಆಗುತ್ತದೆ ಆದರೆ ಇದು ವಿರುದ್ಧವಾಗಿ ಪರಿಣಾಮ ಬೀರುತ್ತದೆ. ಇದು ನಿಮ್ಮಲ್ಲಿ ಹಸಿವನ್ನು ಹೆಚ್ಚಿಸಿ ಹೆಚ್ಚಿನ ಆಹಾರ ಸೇವನೆಯಾಗುವಂತೆ ಮಾಡುತ್ತದೆ. ಇತ್ತೀಚಿನ ಅಧ್ಯಯನಗಳು ಕಡಿಮೆ ಮತ್ತು ಸಣ್ಣ ಅವಧಿಗಳಲ್ಲಿ ಆಹಾರ ಸೇವನೆ ಮಾಡುವುದು ನಮ್ಮ ಆರೋಗ್ಯ ಮತ್ತು ಜೀರ್ಣಕ್ರಿಯೆಗೆ ಒಳ್ಳೆಯದು ಎಂದು ಸಾಧಿಸಿ ತೋರಿಸಿವೆ. ಒಣ ಹಣ್ಣುಗಳು, ಹಸಿ ತರಕಾರಿಗಳನ್ನೂ ಸೇವಿಸಬಹುದು.

ನಿದ್ದೆ:

ನಿದ್ದೆ:

ನಿದ್ದೆಯ ಬಗ್ಗೆ ಇಲ್ಲಿ ಯಾಕೆ ಉಲ್ಲೇಖ ಬಂದಿತು ಎಂದು ಆಶ್ಚರ್ಯ ಪಡಬೇಡಿ. ಸರಿಯಾದ ನಿದ್ದೆಯೂ ನಮ್ಮ ಆರೋಗ್ಯಕ್ಕೆ ಹಾಗೂ ಕೊಬ್ಬನ್ನು ಇಳಿಸಲು ಅಗತ್ಯ. ಆರರಿಂದ ಎಂಟು ಗಂಟೆಗಳ ರಾತ್ರಿಯ ನಿದ್ದೆ ಅಗತ್ಯ. ಅತೀ ಹೆಚ್ಚು ನಿದ್ದೆ ಮತ್ತು ಅತೀ ಕಡಿಮೆ ನಿದ್ದೆ ಎರಡೂ ನಮ್ಮ ದೇಹ ತೂಕವನ್ನು ಹೆಚ್ಚಿಸುತ್ತವೆ. ಈ ಎಲ್ಲಾ ಅಂಶಗಳನ್ನು ಪಾಲಿಸಿದಾಗ ಕೇವಲ ನಿಮ್ಮ ಹೊಟ್ಟೆಯ ಕೊಬ್ಬಷ್ಟೇ ಅಲ್ಲದೇ ದೇಹದ ಒಟ್ಟಾರೆ ಕೊಬ್ಬು ಕರಗುತ್ತದೆ.

English summary

Top 10 Ways To Reduce Abdominal Fat

Reducing abdominal fat is a challenging feat for many. However, the real problem is doing it wrong. Determined to reduce abdominal fat? Let’s take a look at the top 10 ways to reduce abdominal fat.
X
Desktop Bottom Promotion