For Quick Alerts
ALLOW NOTIFICATIONS  
For Daily Alerts

ಕೋಲನ್ ಶುದ್ಧೀಕರಿಸಲು 10 ಸೂಕ್ತ ಮನೆ ಮದ್ದುಗಳು

By Super
|

ಕೋಲನ್ ಎಂಬುದು ನಮ್ಮ ದೊಡ್ಡ ಕರುಳಿನಲ್ಲಿರುವ ಒಂದು ಭಾಗವಾಗಿದೆ. ಇದು ಮುಖ್ಯವಾಗಿ ಸಣ್ಣ ಕರುಳಿನಿಂದ ಜೀರ್ಣವಾಗದೆ ಬರುವ ಆಹಾರದಲ್ಲಿನ ನೀರು , ಉಪ್ಪು, ವಿಟಮಿನ್‍ಗಳನ್ನು ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳುವ ಜವಾಬ್ದಾರಿಯನ್ನು ಹೊಂದಿದೆ. ಇದರ ಜೊತೆಗೆ ಇದು ನಮ್ಮ ದೇಹದಿಂದ ಘನ ತ್ಯಾಜ್ಯವನ್ನು ವಿಸರ್ಜಿಸುವ ಕೆಲಸವನ್ನು ಸಹ ಮಾಡುತ್ತದೆ.

ಆದರೂ, ಇದು ಸಮರ್ಪಕವಾಗಿ ಕೆಲಸ ಮಾಡದಿದ್ದಾಗ, ಇದು ದೇಹದಲ್ಲಿರುವ ಟಾಕ್ಸಿನ್‍ಗಳನ್ನು ಹೊರ ಹಾಕುವ ಬದಲಿಗೆ ಅದನ್ನು ಹೀರಿಕೊಳ್ಳುವಂತಹ ಕೆಲಸವನ್ನು ಮಾಡುತ್ತದೆ. ಇದರಿಂದಾಗಿ ತಲೆನೋವು, ಉಬ್ಬುವುದು, ಮಲಬದ್ಧತೆ, ಗ್ಯಾಸ್, ತೂಕ ಹೆಚ್ಚಾಗುವುದು, ಶಕ್ತಿ ಕುಂದುವುದು, ತಲೆ ಸುತ್ತು ಮತ್ತು ಗಂಭೀರವಾದ ಕಾಯಿಲೆಗಳಿಗೆ ಗುರಿಯಾಗಬೇಕಾಗಬಹುದು.

ಈ ಎಲ್ಲಾ ಸಮಸ್ಯೆಗಳು ಜೀರ್ಣವಾಗದ ಆಹಾರದಿಂದ ಕಂಡು ಬರುತ್ತವೆ (ನಾವು ಇಂದು ಸೇವಿಸುವ ಬಹುತೇಕ ಆಹಾರ ಪದಾರ್ಥಗಳಲ್ಲಿ ಆಡಿಟಿವ್‍ಗಳು, ಪ್ರಿಸರ್ವೇಟಿವ್‌ಗಳು ಮತ್ತು ರಾಸಾಯನಿಕಗಳು ಇರುತ್ತವೆ) ಇವುಗಳು ನಮ್ಮ ದೇಹವನ್ನು ವಿಷಮಯ ಮಾಡುವ ಟಾಕ್ಸಿನ್‍ಗಳನ್ನು ಉತ್ಪಾದಿಸುತ್ತವೆ. ನೈಸರ್ಗಿಕ ರಕ್ತ ಶುದ್ಧೀಕರಿಸುವ ಆಹಾರಗಳು

ಆದರೂ ಕೋಲನ್ ಶುಚಿಗೊಳಿಸುವ ಮೂಲಕ ನೀವು ನಿಮ್ಮ ದೇಹದಲ್ಲಿರುವ ಅಪಾಯಕಾರಿ ಟಾಕ್ಸಿನ್‍ಗಳನ್ನು ಹೊರ ಹಾಕಬಹುದು ಮತ್ತು ಆರೋಗ್ಯಕಾರಿಯಾದ ಕರುಳಿನ ಬ್ಯಾಕ್ಟೀರಿಯಾಗಳನು ಅಭಿವೃದ್ಧಿಪಡಿಸಬಹುದು. ಇದು ನಿಮ್ಮ ದೇಹದಲ್ಲಿ ಚೈತನ್ಯವನ್ನು ಹೆಚ್ಚಿಸುವುದರ ಜೊತೆಗೆ ದೇಹವು ವಿಟಮಿನ್ ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಅದಕ್ಕಾಗಿ ಕೋಲನ್ ಶುಚಿಗೊಳಿಸಲು ಹಲವಾರು ಚಿಕಿತ್ಸೆಗಳು ಲಭ್ಯವಿವೆ. ಆದರೆ ಬಹುತೇಕ ಮಂದಿಗೆ ಸರಳವಾದ, ಸ್ವಾಭಾವಿಕವಾದ ಮನೆಮದ್ದುಗಳೇ ತಮ್ಮ ಅತ್ಯುತ್ತಮ ಆಯ್ಕೆಯಾಗಿರುತ್ತವೆ.

ಇಲ್ಲಿ ಕೋಲನ್ ಶುಚಿಗೊಳಿಸಲು ಅತ್ಯುತ್ತಮವಾದ 10 ಮನೆ ಮದ್ದುಗಳ ಕುರಿತು ನಾವು ವಿವರಿಸುತ್ತಿದ್ದೇವೆ. ಈ ಕೋಲನ್ ಶುಚಿ ಮಾಡುವ ಪರಿಹಾರಗಳನ್ನು ಪ್ರಯತ್ನಿಸುವ ಮೊದಲು ವೈಧ್ಯರನ್ನು ಸಂಪರ್ಕಿಸುವುದು ಒಳಿತು. ಅದರಲ್ಲೂ ನೀವು ಯಾವುದಾದರು ಕಾಯಿಲೆಯಿಂದ ನರಳುತ್ತಿದ್ದು, ಅದಕ್ಕೆ ಔಷಧೋಪಚಾರ ತೆಗೆದುಕೊಳ್ಳುತ್ತಿದ್ದಲ್ಲಿ ತಪ್ಪದೆ ವೈಧ್ಯರನ್ನು ಸಂಪರ್ಕಿಸಿ ಸೂಕ್ತ ಮಾರ್ಗದರ್ಶನವನ್ನು ತೆಗೆದುಕೊಳ್ಳಿ.
ಹಾಗಾದರೆ ಬನ್ನಿ ಕೋಲನ್ ಶುಚಿ ಮಾಡಲು ಇರುವ ಮನೆಮದ್ದುಗಳ ಕುರಿತಾಗಿ ಒಂದು ಇಣುಕು ನೋಟವನ್ನು ಹರಿಸೋಣ:

ನೀರು

ನೀರು

ಕೋಲನ್ ಶುಚಿಗೊಳಿಸಲು ನೀರು ಅತ್ಯುತ್ತಮವಾದ ಮದ್ದಾಗಿರುತ್ತದೆ. ಆದ್ದರಿಂದ ಪ್ರತಿದಿನ 10 ರಿಂದ 12 ಲೋಟ ನೀರನ್ನು ಕುಡಿಯಬೇಕಾದುದು ಅತ್ಯಗತ್ಯ. ನಿಯಮಿತವಾಗಿ ನೀರನ್ನು ಕುಡಿಯುತ್ತಿದ್ದರೆ, ದೇಹದಲ್ಲಿರುವ ಟಾಕ್ಸಿನ್‍ಗಳನ್ನು ಸ್ವಾಭಾವಿಕವಾಗಿ ಹೊರ ಹಾಕಲು ಸಾಧ್ಯವಾಗುತ್ತದೆ.

ಸೇಬಿನ ರಸ

ಸೇಬಿನ ರಸ

ಕೋಲನ್ ಶುಚಿ ಮಾಡಲು ಸೇಬಿನ ರಸವು ಅತ್ಯುತ್ತಮವಾದ ಔಷಧಿಯಾಗಿರುತ್ತದೆ. ಸೇಬಿನ ಹಣ್ಣಿನ ರಸವನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯೂಹದ ಕಾರ್ಯ ಚಟುವಟಿಕೆಯು ಸುಗಮವಾಗುತ್ತದೆ ಮತ್ತು ಟಾಕ್ಸಿನ್‍ಗಳು ಕಡಿಮೆಯಾಗುತ್ತವೆ. ಇದು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.

1. ದಿನ ಬೆಳಗ್ಗೆ ಒಂದು ಲೋಟ ಶೋಧಿಸದ ಸೇಬಿನ ಹಣ್ಣಿನ ರಸವನ್ನು ಸೇವಿಸುವ ಮೂಲಕ ದಿನವನ್ನು ಆರಂಭಿಸಿ.

2. 30 ನಿಮಿಷಗಳ ನಂತರ, ಒಂದು ಲೋಟ ನೀರನ್ನು ಸೇವಿಸಿ.

3. ಈ ವಿಧಾನವನ್ನು ದಿನ ಪೂರ್ತಿ ಹಲವಾರು ಬಾರಿ ಪುನರಾವರ್ತಿಸಿ ಹಾಗು ಮೂರು ದಿನಗಳವರೆಗೆ ಮುಂದುವರಿಸಿ. ಇದರ ನಡುವೆ, ಒಂದು ಲೋಟ ಪ್ರೂನ್ ರಸವನ್ನು ಸೇವಿಸಿ. ಈ ಪರಿಹಾರೋಪಾಯವನ್ನು ಪಾಲಿಸುವಾಗ ಘನ ಆಹಾರ ಪದಾರ್ಥಗಳನ್ನು ಸೇವಿಸದೆ ಇರುವುದು ಒಳ್ಳೆಯದು.

ನಿಂಬೆ ರಸ

ನಿಂಬೆ ರಸ

ನಿಂಬೆ ರಸವು ಅತ್ಯುತ್ತಮವಾದ ಆಂಟಿ ಆಕ್ಸಿಡೆಂಟ್‍ಗಳನ್ನು ತನ್ನಲ್ಲಿ ಒಳಗೊಂಡಿದೆ ಹಾಗು ಇದರಲ್ಲಿರುವ ಅತ್ಯಧಿಕವಾದ ವಿಟಮಿನ್ ಸಿ ಅಂಶವು ಜೀರ್ಣ ಶಕ್ತಿಗೆ ಅತ್ಯಂತ ಪ್ರಯೋಜನಕಾರಿ ಹಾಗಾಗಿ ನಿಂಬೆರಸವನ್ನು ಕೋಲನ್ ಶುಚಿ ಮಾಡಲು ಬಳಸಲಾಗುತ್ತದೆ.

ಒಂದು ನಿಂಬೆ ಹಣ್ಣಿನ ರಸ, ಒಂದು ಚಿಟಿಕೆ ಸಮುದ್ರದ ಉಪ್ಪು ಮತ್ತು ಸ್ವಲ್ಪ ಜೇನು ತುಪ್ಪವನ್ನು ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಬೆರೆಸಿ. ಈ ಮಿಶ್ರಣವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದು ನಿಮಗೆ ಮತ್ತಷ್ಟು ಶಕ್ತಿಯನ್ನು, ಒಳ್ಳೆಯ ಜೀರ್ಣಕ್ರಿಯೆಯನ್ನು ಮತ್ತು ಉತ್ತಮವಾದ ತ್ವಚೆಯ ಬಣ್ಣವನ್ನು ನೀಡುತ್ತದೆ.

ಕಚ್ಛಾ ತರಕಾರಿ ರಸ

ಕಚ್ಛಾ ತರಕಾರಿ ರಸ

ಕೋಲನ್ ಸ್ವಚ್ಛತೆಗಾಗಿ, ನೀವು ಆದಷ್ಟು ಬೇಯಿಸಿದ ಮತ್ತು ಸಂಸ್ಕರಿಸಿದ ಆಹಾರದಿಂದ ಒಂದೆರಡು ದಿನ ದೂರವಿದ್ದಷ್ಟು ಒಳ್ಳೆಯದು. ಈ ದಿನಗಳಲ್ಲಿ ತಾಜಾ ತರಕಾರಿ ರಸಗಳನ್ನು ದಿನಕ್ಕೆ ಹಲವಾರು ಬಾರಿ ಸೇವಿಸಿ. ಹಸಿರು ತರಕಾರಿಗಳಲ್ಲಿ ಕ್ಲೋರೊಫಿಲ್ಲ್ ಇರುತ್ತವೆ, ಇವು ನಮ್ಮ ದೇಹದಿಂದ ಟಾಕ್ಸಿನ್‍ಗಳನ್ನು ಹೊರ ಹಾಕಲು ಸಹಾಯ ಮಾಡುತ್ತವೆ. ಜೊತೆಗೆ ಇವುಗಳಲ್ಲಿರುವ ಮಿನರಲ್‍ಗಳು, ಅಮೈನೋ ಆಮ್ಲಗಳು ಮತ್ತು ಕಿಣ್ವಗಳು ನಿಮ್ಮ ದೇಹವನ್ನು ಆರೋಗ್ಯಕರವಾಗಿ ಮತ್ತು ಶಕ್ತಿಶಾಲಿಯಾಗಿ ಇಡುತ್ತವೆ. ನಿಮಗೆ ಬೇಕಾದಲ್ಲಿ ನೀವು ಹರ್ಬಲ್ ಟೀ ಸಹ ಕುಡಿಯಬಹುದು.

ನಮ್ಮ ಸಲಹೆ ಏನಪ್ಪ ಎಂದರೆ ತರಕಾರಿ ರಸ ಸೇವಿಸಬೇಕು ಎಂದುಕೊಂಡು, ರೆಡಿಮೇಡ್ ತರಕಾರಿ ರಸವನ್ನು ಸೇವಿಸಬೇಡಿ. ಏಕೆಂದರೆ ಅವುಗಳಲ್ಲಿ ನಿಮ್ಮ ದೇಹದಲ್ಲಿರುವ ಕಲ್ಮಶಗಳನ್ನು ವಿಭಜಿಸುವ ಮತ್ತು ಅವುಗಳನ್ನು ದೇಹದಿಂದ ಹೊರಹಾಕುವ ಕಿಣ್ವಗಳು ಇರುವುದಿಲ್ಲ. ಕ್ಯಾರಟ್, ಬೀಟ್‍ರೂಟ್, ಕಾರ್ನ್, ಸ್ಕ್ವಾಷ್, ಸ್ಪೈನಚ್, ಕೇಲ್ ಇತ್ಯಾದಿಗಳಿಂದ ನೀವು ಮನೆಯಲ್ಲಿಯೇ ಸುಲಭವಾಗಿ ಜ್ಯೂಸರ್ ಮತ್ತು ಬ್ಲೆಂಡರ್‌ನಿಂದ ಜ್ಯೂಸ್ ತಯಾರಿಸಿಕೊಳ್ಳಬಹುದು.

ಅಧಿಕ ಫೈಬರ್ ಇರುವ ಆಹಾರಗಳು

ಅಧಿಕ ಫೈಬರ್ ಇರುವ ಆಹಾರಗಳು

ಫೈಬರ್ ಅಂದರೆ ನಾರಿನಂಶ ಹೆಚ್ಚಾಗಿ ಇರುವ ಆಹಾರಗಳು ನಿಮ್ಮ ದೇಹದಲ್ಲಿರುವ ಕೋಲನ್ ಅನ್ನು ಅಪಾಯಕಾರಿ ಟಾಕ್ಸಿನ್‍ಗಳಿಂದ ಮುಕ್ತಗೊಳಿಸುತ್ತವೆ. ನಾರಿನಂಶವು ಜೀರ್ಣಾಂಗದ ಸುಗಮ ಕಾರ್ಯ ವೈಖರಿಗೆ ಸಹಕರಿಸುತ್ತದೆ. ಜೊತೆಗೆ ಇವು ದೇಹದಲ್ಲಿನ ಕಲ್ಮಶಗಳನ್ನು ವಿಸರ್ಜಿಸಲು ಸಹ ಸಹಕರಿಸುತ್ತವೆ. ಇದರ ಜೊತೆಗೆ ಈ ಅಧಿಕ ನಾರಿನಂಶ ಇರುವ ಆಹಾರಗಳು ಕರುಳಿಗೆ ಸಂಬಂಧಿಸಿದ ಯಾವುದೇ ತರನಾದ ಸಮಸ್ಯೆಯಿಂದ ಮುಕ್ತರಾಗಲು ಸಹಕರಿಸುತ್ತದೆ.

ನಿಮ್ಮ ಆಹಾರದಲ್ಲಿ ಬೆರ್ರಿ, ಪೀಯರ್ಸ್ ಮತ್ತು ಸೇಬುಗಳಂತಹ ಹಣ್ಣುಗಳನ್ನು ಸೇವಿಸುವುದರಿಂದ ನಾರಿನಂಶವನ್ನು ನಿಮ್ಮದಾಗಿಸಿಕೊಳ್ಳಬಹುದು. ಇದರ ಜೊತೆಗೆ ಪಲ್ಲೆ ಹೂವು, ಅಲಸಂದೆ, ಬ್ರೊಕ್ಕೊಲಿ, ಧಾನ್ಯಗಳು, ವೋಲ್ ಗ್ರೇನ್, ಒಣ ಹಣ್ಣುಗಳು ಮತ್ತು ಬೀಜಗಳಲ್ಲಿ ಒಳ್ಳೆಯ ಪ್ರಮಾಣದ ನಾರಿನಂಶವು ಇರುತ್ತದೆ.

ಯೋಗರ್ಟ್

ಯೋಗರ್ಟ್

ತಾಜಾ ಯೋಗರ್ಟ್ ಪ್ರತಿದಿನ ಸೇವಿಸುವ ಮೂಲಕ ನಿಮ್ಮ ಕೋಲನ್ ಆರೋಗ್ಯಕಾರಿಯಾಗಿ ಇಟ್ಟುಕೊಳ್ಳಬಹುದು. ಪ್ರೋಬಯೋಟಿಕ್ ಆಹಾರವಾಗಿರುವ ಯೋಗರ್ಟ್ ಎಲ್ಲಾ ಸಂಸ್ಕೃತಿಗಳಲ್ಲಿ ಜೀವಂತವಾಗಿವೆ. ಇದು ನಿಮ್ಮ ದೇಹಕ್ಕೆ " ಒಳ್ಳೆಯ" ಬ್ಯಾಕ್ಟೀರಿಯಾಗಳನ್ನು ಪರಿಚಯಿಸುತ್ತದೆ. ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ಇದು ಕರುಳಿನಲ್ಲಿ ಕಂಡು ಬರುವ ಉರಿಯೂತಗಳ ಮೇಲೆ ಹೋರಾಡುತ್ತದೆ.

ಅಲ್ಲದೆ ಈ ಯೋಗರ್ಟ್‍ನಲ್ಲಿ ಕ್ಯಾಲ್ಸಿಯಂ ಅಧಿಕ ಪ್ರಮಾಣದಲ್ಲಿರುತ್ತದೆ. ಇವುಗಳು ಕೋಲನ್‍ನಲ್ಲಿ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಹೀಗೆ ಕರುಳಿನ ಸ್ನೇಹಿಯಾಗಿರುವ ಯೋಗರ್ಟ್ ಜಠರದಲ್ಲಿ ಕಂಡು ಬರುವ ಅಜೀರ್ಣ, ವಾಯು, ಜೀರ್ಣಾಂಗದ ಲೋಪ ದೋಷಗಳು ಮತ್ತು ಇತ್ಯಾದಿ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತದೆ. ನೀವು ಯೋಗರ್ಟ್ ಅನ್ನು ಹಾಗೆಯೇ ಅಥವಾ ಒಂದಷ್ಟು ಸೇಬು, ನಿಂಬೆ, ಬಾಳೆ ಹಣ್ಣು ಮತ್ತು ಬೆರ್ರಿಗಳಂತಹ ತಾಜಾ ಹಣ್ಣುಗಳ ಜೊತೆಗೆ ಸೇವಿಸಬಹುದು.

ಅಗಸೆ ಬೀಜ

ಅಗಸೆ ಬೀಜ

ಅಗಸೆ ಬೀಜಗಳಲ್ಲಿ ಅಂದರೆ ಫ್ಲಾಕ್ಸ್ ಸೀಡ್‍ಗಳಲ್ಲಿ ಒಮೆಗಾ-3 ಕೊಬ್ಬಿನ ಆಮ್ಲಗಳು, ಆಂಟಿ ಆಕ್ಸಿಡೆಂಟ್‍ಗಳು ಮತ್ತು ಸ್ವಾಭಾವಿಕ ನಾರಿನಂಶಗಳು ಎಲ್ಲವೂ ಸೇರಿ ಕೋಲನ್ ಸ್ವಚ್ಛಗೊಳಿಸುವ ಅತ್ಯುತ್ತಮ ಆಹಾರ ಪದಾರ್ಥವನ್ನಾಗಿ ಮಾಡಿವೆ.ಅಗಸೆ ಬೀಜಗಳು ನೀರನ್ನು ಹೀರಿಕೊಳ್ಳುತ್ತವೆ ಮತ್ತು ಕೋಲನ್ ಅನ್ನು ಹಿಗ್ಗಿಸುತ್ತವೆ. ಇದರ ಜೊತೆಗೆ ಇವು ಟಾಕ್ಸಿನ್ ಮತ್ತು ಸಿಂಬಳವನ್ನು ಹೀರಿಕೊಂಡು ಕರುಳಿನ ಮೂಲಕ ಕಲ್ಮಶಗಳು ಸಾಗಿ ಹೋಗಲು ದಾರಿ ಮಾಡಿಕೊಡುತ್ತದೆ. ಇದರ ಜೊತೆಗೆ ಅಗಸೆ ಬೀಜವು ಕ್ಯಾನ್ಸರ್, ಹೃದ್ರೋಗ ಮತ್ತು ಮಧುಮೇಹ ಬರದಂತೆ ತಡೆಯುತ್ತದೆ.

ನಿಮಗೆ ಅಗತ್ಯವಿದ್ದಲ್ಲಿ ಅಗಸೆ ಬೀಜಗಳನ್ನು ನೀವು ಧಾನ್ಯಗಳು, ಯೋಗರ್ಟ್, ಹಣ್ಣುಗಳು ಮತ್ತು ಇತರ ಆರೋಗ್ಯಕರ ಆಹಾರ ಪದಾರ್ಥಗಳ ಜೊತೆಗೆ ಸೇವಿಸಬಹುದು. ಶೀಘ್ರ ಫಲಿತಾಂಶಕ್ಕಾಗಿ ಅಗಸೆ ಬೀಜಗಳನ್ನು ಒಂದು ಲೋಟ ನೀರಿಗೆ ಹಾಕಿಡಿ. ಇದನ್ನು ಬೆಳಗಿನ ಉಪಾಹಾರ ಸೇವಿಸುವ ಮೊದಲು ಮತ್ತು ರಾತ್ರಿ ಮಲಗುವ 30 ನಿಮಿಷ ಮೊದಲು ಸೇವಿಸಿ.

ಸಮುದ್ರದ ಉಪ್ಪು

ಸಮುದ್ರದ ಉಪ್ಪು

1. ಕುಡಿಯುವ ನೀರಿನಲ್ಲಿ ಒಂದು ಟೇಬಲ್ ಸ್ಪೂನಿನಷ್ಟು ಸಮುದ್ರದ ಉಪ್ಪನ್ನು ಬೆರೆಸಿ ಮತ್ತು ಕುದಿಸಿ.

2. ಈ ಮಿಶ್ರಣವನ್ನು ಬೆಚ್ಚಗೆ ಅಥವಾ ತಣ್ಣಗೆ ಮಾಡಿಕೊಂಡು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.

3. ಕೆಲವು ನಿಮಿಷಗಳಷ್ಟು ತಡೆದು, ನಂತರ ನಿಮ್ಮ ಹೊಟ್ಟೆಯನ್ನು ಮೇಲ್ಮುಖವಾಗಿ ಮಾಡಿಕೊಂಡು ಮಲಗಿ, ಜಠರದಿಂದ ಕೋಲನ್ ಭಾಗದವರೆಗೆ ಮೃದುವಾಗಿ ಮಸಾಜ್ ಮಾಡಿಕೊಳ್ಳಿ. ಇದು ನಿಮ್ಮ ಜೀರ್ಣಾಂಗವನ್ನು ಉದ್ಧೀಪಿಸುತ್ತದೆ ಮತ್ತು ಅಪಾಯಕಾರಿ ಟಾಕ್ಸಿನ್‍ಗಳನ್ನು ದೇಹದಿಂದ ಹೊರಹಾಕುತ್ತದೆ. ಇದರ ಜೊತೆಗೆ ದೇಹದಲ್ಲಿನ ಕಲ್ಮಶಗಳು, ಪ್ರತಿನಿತ್ಯದ ಮಲ, ಪ್ಯಾರಸೈಟ್‍ಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಕರುಳಿನಿಂದ ಖಾಲಿ ಮಾಡುತ್ತದೆ.

4. ಇದನ್ನು ಪ್ರತಿ ತಿಂಗಳಿಗೆ ಐದು ಬಾರಿಯವರೆಗೆ ಮಾಡಿ.

ಈ ಮಿಶ್ರಣವು ಡಯೇರ್ರಿಯಾವನ್ನುಂಟು ಮಾಡಬಹುದು. ಅದಕ್ಕಾಗಿ ಸಾಧ್ಯವಾದಷ್ಟು ನೀರನ್ನು ಕುಡಿಯಿರಿ ಮತ್ತು ದಿನ ಪೂರ್ತಿ ತಾಜಾ ಹಣ್ಣಿನ ರಸಗಳನ್ನು ಸೇವಿಸಿ. ಒಂದು ವೇಳೆ ನಿಮಗೆ ಅಧಿಕ ರಕ್ತದೊತ್ತಡ ಅಥವಾ ಹೃದ್ರೋಗ ಸಮಸ್ಯೆಯಿದ್ದಲ್ಲಿ ಈ ಪರಿಹಾರವನ್ನು ಪ್ರಯತ್ನಿಸಲು ಹೋಗಬೇಡಿ.

ಅಲೋವಿರಾ

ಅಲೋವಿರಾ

ಅಲೋವಿರಾ ಅಥವಾ ಲೋಳೆಯು ಲಕ್ಸೇಟಿವ್ ಆಗಿ ವರ್ತಿಸುತ್ತದೆ. ಹೀಗಾಗಿ ಇದು ದೇಹವನ್ನು ಟಾಕ್ಸಿನ್ ಮುಕ್ತಗೊಳಿಸುವ ಕಾರ್ಯವನ್ನು ಸುಲಭವಾಗಿ ಮಾಡುತ್ತದೆ. ಇದರಿಂದಾಗಿ ಕೋಲನ್ ಸ್ವಚ್ಛಗೊಳಿಸಲು ಇದು ಪರಿಣಾಮಕಾರಿಯಾದ ಪದಾರ್ಥವಾಗಿದೆ. ಅಲೋವಿರಾ ಜೆಲ್‍ನಲ್ಲಿರುವ ಔಷಧೀಯ ಗುಣಗಳು ನಿಮ್ಮ ಕೋಲನ್‍ನ ಆರೋಗ್ಯವನ್ನು ಸುಧಾರಿಸುವುದರ ಜೊತೆಗೆ, ಇದು ತಲೆ ನೋವು, ತ್ವಚೆಯ ಇನ್‍ಫೆಕ್ಷನ್‍ಗಳು, ಡಯೇರ್ರಿಯಾ, ಗ್ಯಾಸ್ಟ್ರಿಕ್ಟ್ ನೋವು ಮತ್ತು ಮಲಬದ್ಧತೆಯನ್ನು ನಿವಾರಿಸಲು ಸಹಕರಿಸುತ್ತದೆ.

1. ತಾಜಾ ಅಲೋವಿರಾ ಜೆಲ್‍ಗೆ ಒಂದು ನಿಂಬೆ ಹಣ್ಣಿನ ರಸವನ್ನು ಸೇರಿಸಿ ಮತ್ತು ಇದನ್ನು ಮಿಕ್ಸರಿನಲ್ಲಿ ಹಾಕಿಕೊಂಡು ಜ್ಯೂಸ್ ಮಾಡಿಕೊಳ್ಳಿ.

2. ಈ ಜ್ಯೂಸನ್ನು ರೆಫ್ರಿಜಿರೇಟರಿನಲ್ಲಿ ಹಾಕಿ ಎರಡು ಮೂರು ಗಂಟೆಗಳ ಕಾಲ ಬಿಡಿ.

3. ಇದನ್ನು ಸ್ವಲ್ಪ ದಿನಗಳವರೆಗೆ ದಿನದಲ್ಲಿ ಆಗಾಗ ಸೇವಿಸುತ್ತ ಇರಿ.

ಶುಂಠಿ

ಶುಂಠಿ

ಶುಂಠಿಯು ಹೊಟ್ಟೆ ಉಬ್ಬುವುದನ್ನು ಮತ್ತು ಕೋಲನ್ ಕಾರ್ಯಾಚರಣೆಯನ್ನು ಉದ್ಧೀಪಿಸಲು ಮತ್ತು ದೇಹವನ್ನು ಕಲ್ಮಶಗಳು ಹಾಗು ಹಾನಿಕಾರಕ ಟಾಕ್ಸಿನ್‍ಗಳಿಂದ ಮುಕ್ತವಾಗಿರಿಸಲು ಸಹಕರಿಸುತ್ತದೆ. ಇದು ಅವಿತುಕೊಂಡ ಜೀರ್ಣಕಾರಿ ರಸಗಳನ್ನು ಉದ್ದೀಪಿಸಿ ಜೀರ್ಣ ಕ್ರಿಯೆಯನ್ನು ಸುಗಮಗೊಳಿಸುತ್ತದೆ.

* ಕೋಲನ್ ಶುಚಿಗೊಳಿಸುವ ಸಲುವಾಗಿ ನೀವು ಶುಂಠಿಯನ್ನು ಯಾವ ರೂಪದಲ್ಲಿ ಬೇಕಾದರು ಸೇವಿಸಬಹುದು. ಅದು ಜಜ್ಜಿಯಾದರು ಸರಿ, ಕತ್ತರಿಸಿ ತುಂಡು ಮಾಡಿ ಇಲ್ಲವೇ ರಸ ಮಾಡಿಕೊಂಡಾದರು ಸರಿ.

* ಶುಂಠಿಯನ್ನು ಸೇವಿಸಲು ಒಂದು ಒಳ್ಳೆಯ ಆಯ್ಕೆಯೆಂದರೆ, ಶುಂಠಿರಸವನ್ನು, ಅದರ ಕಾಲುಭಾಗದಷ್ಟು ನಿಂಬೆರಸವನ್ನು ಎರಡು ಕಪ್ ಬಿಸಿ ನೀರಿಗೆ ಬೆರೆಸಿ. ಇದಕ್ಕೆ ನಿಮ್ಮ ರುಚಿಗಾಗಿ ಸ್ವಲ್ಪ ಜೇನು ತುಪ್ಪವನ್ನು ಬೆರೆಸಿ. ಈ ಮಿಶ್ರಣವನ್ನು ಎರಡು ಅಥವಾ ಮೂರು ಭಾಗವಾಗಿ ಮಾಡಿಕೊಂಡು ದಿನ ಪೂರ್ತಿ ಸೇವಿಸಿ.

ವಿಶೇಷ ಸೂಚನೆ: ಗರ್ಭಿಣಿಯರಾದವರು ಶುಂಠಿಯನ್ನು ಸೇವಿಸುವುದು ಒಳ್ಳೆಯದಲ್ಲ.ಈ ಸಲಹೆಯು ಅವರಿಗೆ ಅನ್ವಯಿಸುವುದಿಲ್ಲ.

English summary

Top 10 Home Remedies for Colon Cleansing

The colon, a part of the digestive system, is responsible for extracting water, salt, vitamins and nutrients from indigestible food matter, processing food that was not digested in the small intestine, and eliminating solid waste from the body.
Story first published: Wednesday, October 29, 2014, 16:20 [IST]
X
Desktop Bottom Promotion