For Quick Alerts
ALLOW NOTIFICATIONS  
For Daily Alerts

ಮಧುಮೇಹಿಗಳಿಗೆ 10 ಅತ್ಯುತ್ತಮ ಆಹಾರಗಳು

|

ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತಿನಂತೆ ನಾವು ತೆಗೆದುಕೊಳ್ಳಬೇಕಾದ ಆಹಾರದ ಬಗೆಗೆ ನಮಗೆ ಕಾಳಜಿ ಇರಬೇಕು. ಹೊಟ್ಟೆ ತುಂಬಿಸಲು ಏನಾದರೊಂದನ್ನು ಸೇವಿಸಿದರಾಯಿತು ಎಂಬ ನಿರ್ಲಕ್ಷ್ಯವೇ ರೋಗಕ್ಕೆ ಆಹ್ವಾನವನ್ನು ನೀಡುತ್ತದೆ.

ಇಂದು ಇಲ್ಲಿ ನಾವು ನೀಡುತ್ತಿರುವ ಆಹಾರದ ಮೆನು ಕಾರ್ಡ್ ಕೇವಲ ಮಧುಮೇಹಿಗಳಿಗಾಗಿ. ಸಕ್ಕರೆ ಕಾಯಿಲೆ ಇರುವವರು ಸಿಕ್ಕಿ ಸಿಕ್ಕಿದ್ದನ್ನು ತಿನ್ನುವಂತಿಲ್ಲ ಹಾಗೆಂದು ಅವರು ಬರೀ ಪಥ್ಯ ಸೇವನೆಯನ್ನು ಮಾಡಬೇಕೆಂದಿಲ್ಲ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಏಲಕ್ಕಿಯ 20 ಆರೋಗ್ಯಕರ ಪ್ರಯೋಜನಗಳು

ಕೆಲವೊಂದು ತರಕಾರಿಗಳು ಅವರ ಬಾಯಿ ರುಚಿಗೂ ಒಳ್ಳೆಯದು ಮತ್ತು ಆರೋಗ್ಯಕಾರಿ. ಕೆಲವೊಂದು ತರಕಾರಿ ಹಣ್ಣುಗಳು ಮಧುಮೇಹಿಗಳಿಗೆ ಆವಶ್ಯಕ ಪ್ರೋಟೀನ್ ವಿಟಮಿನ್‌ಗಳನ್ನು ನೀಡಿ ದೈಹಿಕವಾಗಿ ಮಾನಸಿಕವಾಗಿ ಸುದೃಢಗೊಳಿಸುತ್ತದೆ. ಇಲ್ಲಿ ನಾವು ನೀಡಿರುವ ಕೆಲವೊಂದು ತರಕಾರಿ ಹಣ್ಣುಗಳು ಮಧುಮೇಹಿಗಳಿಗೆ ಶಕ್ತಿಯನ್ನು ನೀಡಿ ರೋಗನಿರೋಧಕ ಅಂಶವನ್ನು ವೃದ್ಧಿಸುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆಯಿಲ್ ಪುಲ್ಲಿಂಗ್ ಆರೋಗ್ಯಕರ ಪ್ರಯೋಜನಗಳು

1.ಬೀನ್ಸ್

1.ಬೀನ್ಸ್

ಕ್ಯಾಲೋರಿ ಅಧಿಕವಾಗಿರುವ ತರಕಾರಿಯಾಗಿದ್ದು ಕಿಡ್ನಿ, ಪಿಂಟೊ, ನೇವಿ, ಕಪ್ಪು ಮತ್ತು ಇತರ ವಿಧಗಳ ಬೀನ್ಸ್‌ಗಳು ನ್ಯೂಟ್ರಿಯಂಟ್ಸ್ ಭರಿತವಾಗಿದ್ದು ಫೈಬರ್ ಅಧಿಕವಾಗಿದೆ. ಇವುಗಳು ನಿಮಗೆ ದೀರ್ಘಕಾಲ ಆರೋಗ್ಯವನ್ನು ನೀಡುತ್ತವೆ ಎಂಬ ಮಾತು ಸುಳ್ಳಲ್ಲ.

2.ಗಾಢ, ಎಲೆಗಳುಳ್ಳ ಹಸಿರು ತರಕಾರಿಗಳು

2.ಗಾಢ, ಎಲೆಗಳುಳ್ಳ ಹಸಿರು ತರಕಾರಿಗಳು

ಪುದೀನ, ಕೊಲಾರ್ಡ್ ಗ್ರೀನ್ಸ್, ಮಸ್ಟ ರ್ಡ್ ಗ್ರೀನ್ಸ್, ಕಾಲೆ ಮತ್ತು ಇತರ ಗಾಢ ವರ್ಣದ, ಎಲೆಗಳುಳ್ಳ ಹಸಿರು ತರಕಾರಿಗಳು ನ್ಯೂಟ್ರಿಯೆಂಟ್‌ನಿಂದ ಕೂಡಿದ್ದು ಕಾರ್ಬೊಹೈಡ್ರೇಟ್ ಕಡಿಮೆ ಇದೆ. ಕ್ಯಾಲೋರಿಗಳು ಕಡಿಮೆ ಇದ್ದು ಎಷ್ಟು ಬೇಕಾದರೂ ಇದನ್ನು ನೀವು ಸೇವಿಸಬಹುದು.

3.ಸಿಟ್ರಸ್ ಹಣ್ಣುಗಳು

3.ಸಿಟ್ರಸ್ ಹಣ್ಣುಗಳು

ಕಿತ್ತಳೆ, ಗ್ರೇಪ್‌ಫ್ರುಟ್ ಮತ್ತು ಇತರ ಸಿಟ್ರಸ್ ಅಂಶವುಳ್ಳ ಹಣ್ಣುಗಳು ವಿಟಮಿನ್ ಸಿ ಯಿಂದ ಕೂಡಿದ್ದು, ಹೃದಯದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಜ್ಯೂಸ್‌ನ ಬದಲಾಗಿ ಪೂರ್ತಿ ಹಣ್ಣನ್ನು ಸೇವಿಸಿ. ಹಣ್ಣುಗಳಲ್ಲಿರುವ ಸಕ್ಕರೆಯು ನಿಮ್ಮ ರಕ್ತದ ಸಕ್ಕರೆಯ ಅಂಶವನ್ನು ಕಡಿಮೆ ಮಾಡುತ್ತದೆ.

4.ಸಿಹಿ ಆಲೂಗಡ್ಡೆ

4.ಸಿಹಿ ಆಲೂಗಡ್ಡೆ

ವಿಟಮಿನ್ ಎ ಮತ್ತು ಫೈಬರ್ ಅಧಿಕವಾಗಿದ್ದು ಗ್ಲಿಸಿಮಿಕ್ ಇಂಡೆಕ್ಸ್ ಕಡಿಮೆ ಇದೆ, ಆಲೂಗಡ್ಡೆಯಂತೆ ಸಿಹಿ ಆಲೂಗಡ್ಡೆ ನಿಮ್ಮ ರಕ್ತದ ಸಕ್ಕರೆ ಪ್ರಮಾಣವನ್ನು ಏರಿಸುವುದಿಲ್ಲ.

5.ಬೆರ್ರಿಹಣ್ಣು

5.ಬೆರ್ರಿಹಣ್ಣು

ಸಿಹಿ ಇರದ ಬ್ಲುಬೆರ್ರಿಗಳು, ಸ್ಟ್ರಾಬೆರ್ರಿಗಳು ಮತ್ತು ಇತರ ಬೆರ್ರಿಗಳು ಉತ್ಕರ್ಷಣ ನಿರೋಧಿ ಅಂಶದಿಂದ ಕೂಡಿದ್ದು, ವಿಟಮಿನ್ ಫೈಬರ್ ಹೇರಳವಾಗಿರುವ ಹಣ್ಣುಗಳಾಗಿವೆ.

6.ಟೊಮೇಟೊ

6.ಟೊಮೇಟೊ

ಕಡಿಮೆ ಕ್ಯಾಲೋರಿ ಇರುವ ಈ ಆಹಾರವನ್ನು ಬೇಯಿಸಿ ಅಥವಾ ಹಸಿಯಾಗಿ ತಿನ್ನಬಹುದು. ಸಲಾಡ್, ಸೂಪ್‌ಗಳಲ್ಲಿ ಟೊಮೇಟೊವನ್ನು ಧಾರಾಳವಾಗಿ ಬಳಸಬಹುದು.

7.ಮೀನು

7.ಮೀನು

ಒಮೆಗಾ 3 ಏಸಿಡ್ ಮೀನಿನಲ್ಲಿ ಕಡಿಮೆ ಇದ್ದು, ಹೃದಯದ ಆರೋಗ್ಯ ಮತ್ತು ಮಧುಮೇಹಕ್ಕೆ ಉತ್ತಮವಾದ ಆಹಾರವಾಗಿದೆ.

8.ಇಡಿಯಾದ ಧಾನ್ಯಗಳು

8.ಇಡಿಯಾದ ಧಾನ್ಯಗಳು

ಓಟ್‌‌ಮೀಲ್, ಬ್ರೆಡ್ ಮತ್ತು ಇತರ ಇಡಿಯಾದ ಧಾನ್ಯಗಳು ಫೈಬರ್ ಶ್ರೀಮಂತವಾಗಿದ್ದು, ಮೆಗ್ನೇಶಿಯಂ, ಕ್ರೋಮಿಯಂ, ಫೋಲೇಟ್ ಮತ್ತು ಒಮೆಗಾ 3 ಏಸಿಡ್ ಭರಿತವಾಗಿದೆ.

9.ನಟ್ಸ್

9.ನಟ್ಸ್

ಇದೊಂದು ಉತ್ತಮ ಆಹಾರವಾಗಿದ್ದು ಹೃದಯಕ್ಕೆ ಸ್ವಾಸ್ಥ್ಯವನ್ನು ಒದಗಿಸುತ್ತದೆ. ಬಾದಾಮಿ ಪಿಸ್ತಾ ಮೊದಲಾದ ನಟ್ಸ್‌ಗಳು ಕ್ಯಾಲೋರಿ ಅಧಿಕವಾಗಿರುವ ಬೀಜಗಳಾಗಿದ್ದು ಇದನ್ನು ನೀವು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವಂತಿಲ್ಲ.

10.ಕೊಬ್ಬು ರಹಿತ ಹಾಲು ಮತ್ತು ಮೊಸರು

10.ಕೊಬ್ಬು ರಹಿತ ಹಾಲು ಮತ್ತು ಮೊಸರು

ಕ್ಯಾಲ್ಶಿಯಂ ಮತ್ತು ವಿಟಮಿನ್ ಡಿ ಯನ್ನು ಈ ಆಹಾರಗಳು ನಿಮಗೆ ನೀಡುತ್ತವೆ.

English summary

Top 10 diabetes super foods:

Diabetes is on the rise, yet most cases are preventable with healthy lifestyle changes. Some can even be reversed. Taking steps to prevent and control diabetes doesn’t mean living in deprivation.
X
Desktop Bottom Promotion