For Quick Alerts
ALLOW NOTIFICATIONS  
For Daily Alerts

ಸಂಜೆಯ ವರ್ಕ್ ಔಟ್‌ಗೆ ಟಿಪ್ಸ್‌ಗಳು

By Hemanth P
|

ಇಂದಿನ ದಿನಗಳಲ್ಲಿ ಪ್ರತಿಯೊಬ್ಬರು ವ್ಯಾಯಾಮ ಮಾಡುವುದರ ಮಹತ್ವ ಅರಿತುಕೊಂಡಿದ್ದಾರೆ. ಪ್ರತಿಯೊಬ್ಬರಿಗೆ ದೈನಂದಿನ ವ್ಯಾಯಾಮ ಅತ್ಯಗತ್ಯ. ಒತ್ತಡದ ಜೀವನಶೈಲಿ ಹಾಗೂ ಕೆಲಸದಿಂದಾಗಿ ದೈಹಿಕ ಮತ್ತು ಮಾನಸಿಕವಾಗಿ ಒತ್ತಡ, ದಣಿವು ಹೆಚ್ಚುತ್ತಿದೆ.

ಕಾರ್ಪೋರೇಟ್ ಮತ್ತು ವಿದ್ಯಾರ್ಥಿಗಳು ಆರೋಗ್ಯದ ಕಾಳಜಿ ವಹಿಸಲು ಸಂಜೆಯ ಸಮಯವನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಇಡೀ ದಿನದ ಒತ್ತಡ ಮತ್ತು ದಣಿವಿನ ಬಳಿಕ ದೇಹಕ್ಕೆ ವಿಶ್ರಾಂತಿ ನೀಡಲು ಇದು ಸರಿಯಾದ ಸಮಯ. ಇದರಿಂದ ದೇಹವು ಶಕ್ತಿ ಪಡೆದು ಉಲ್ಲಾಸಿತವಾಗುತ್ತದೆ.

ಈ ಆರೋಗ್ಯ ಮತ್ತು ಫಿಟ್ ನೆಸ್ ನ ಲೇಖನದಲ್ಲಿ ಯಾವುದೇ ರೀತಿಯ ವ್ಯಾಯಾಮ ಮಾಡುವಾಗ ಪಾಲಿಸಬಹುದಾದ ಕೆಲವೊಂದು ಮಹತ್ವದ ಟಿಪ್ಸ್ ಗಳನ್ನು ಇಲ್ಲಿ ನೀಡಲಾಗಿದೆ. ಸಂಜೆ ವೇಳೆ ಮಾಡುವ ವ್ಯಾಯಾಮಕ್ಕೆ ಮೊದಲು ಮತ್ತು ಬಳಿಕ ಹೆಚ್ಚಿನ ಆರೈಕೆ ಬೇಕಾಗುತ್ತದೆ. ಇಂತಹ ಕೆಲವೊಂದು ಟಿಪ್ಸ್‌ಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

ಕೇವಲ 10 ನಿಮಿಷದಲ್ಲಿ ಸೂಪರ್ ಆರೋಗ್ಯ ನಿಮ್ಮದಾಗಲಿ!

Tips to workout in the evening

ವ್ಯಾಯಾಮಕ್ಕೆ ಮೊದಲು:
ಸಂಜೆ ವೇಳೆ ವ್ಯಾಯಾಮ ಮತ್ತು ವರ್ಕ್ ಔಟ್ ಗೆ ಮೊದಲು ಇದಕ್ಕೆ ನಿಮ್ಮ ದೇಹವನ್ನು ಸಜ್ಜುಗೊಳಿಸಬೇಕು. ವ್ಯಾಯಾಮ ಆರಂಭಿಸುವ ಒಂದು ಗಂಟೆ ಮೊದಲು ಏನೂ ತಿನ್ನಬಾರದು ಎಂದು ನೆನಪಿರಲಿ. ಇದು ಸಂಜೆಯ ವರ್ಕ್ ಔಟ್ ಗೆ ಅತೀ ಮುಖ್ಯ ವ್ಯಾಯಾಮದ ಟಿಪ್ಸ್. ತುಂಬಿದ ಹೊಟ್ಟೆಯಲ್ಲಿ ನಿಮ್ಮ ದೇಹದ ಮೇಲೆ ಒತ್ತಡ ಹಾಕಿದರೆ ಆಗ ನಿಮಗೆ ವಾಕರಿಕೆ ಬರುವಂತಹ ಭಾವನೆಯಾಗಬಹುದು ಮತ್ತು ಅನಾರೋಗ್ಯಕ್ಕೆ ಒಳಗಾಗಬಹುದು. ವ್ಯಾಯಾಮಕ್ಕೆ ಮೊದಲು ಸರಿಯಾಗಿ ಕಾಳಜಿ ವಹಿಸದಿದ್ದರೆ ಹೊಟ್ಟೆ ನೋವು, ಸ್ನಾಯುವಿನ ಒತ್ತಡ, ದಣಿವಿನಂತಹ ಅಡ್ಡಪರಿಣಾಮಗಳಾಗಬಹುದು.

ಸಮಯ:
ನಿಮ್ಮ ವರ್ಕ್ ಔಟ್ ವೇಳಾಪಟ್ಟಿಯು ನಿಮಗೆ ದೈಹಿಕ ಹಾಗೂ ಮಾನಸಿಕವಾಗಿ ಸಹಕಾರಿಯಾಗುವಂತಹ ಸಮಯದಲ್ಲಿರಲಿ. ವ್ಯಾಯಾಮಕ್ಕೆ ಮೊದಲು ನಿಮ್ಮ ದೇಹವು ಸ್ವಲ್ಪ ವಿಶ್ರಾಂತಿ ಪಡೆಯಲಿ. ಹೆಚ್ಚಿನ ಒತ್ತಡದ ಪರಿಣಾಮ ದಣಿವು, ನಿಶ್ಯಕ್ತಿ ಕಾಣಿಸಬಹುದು. ನಿಮ್ಮ ಕೆಲಸ ಮುಗಿಸಿದ ಒಂದು ಗಂಟೆ ಬಳಿಕ ವ್ಯಾಯಾಮ ಮಾಡುವುದು ತುಂಬಾ ಲಾಭಕಾರಿ. ಸಂಜೆಯ ವ್ಯಾಯಾಮಕ್ಕೆ ಈ ಪ್ರಮುಖ ಟಿಪ್ಸ್ ನ್ನು ಪಾಲಿಸಬೇಕು. ನಿಯಮಿತವಾಗಿ ಸಮಯ ಪಾಲಿಸುವುದರಿಂದ ನಿಮ್ಮ ದೇಹವು ಅದಕ್ಕೆ ಹೊಂದಿಕೊಳ್ಳುತ್ತದೆ.

ಕೆಫಿನ್ ಸೇವಿಸಿ:
ಹೆಚ್ಚಿನ ಶಕ್ತಿ ಮತ್ತು ದಣಿವಾರಿಕೆಗೆ ನೀವು ಸ್ವಲ್ಪ ಕೆಫಿನ್ ಸೇವನೆ ಮಾಡಬೇಕು. ವ್ಯಾಯಾಮಕ್ಕೆ ಮೊದಲು ನೀವು ಒಂದು ಕಪ್ ಕಾಫಿ ಸೇವನೆ ಮಾಡಿದರೆ ಆಗ ನಿಮ್ಮ ಶಕ್ತಿ ಬೆಳವಣಿಗೆಯಾಗಿ ವಿವಿಧ ರೀತಿಯ ವ್ಯಾಯಾಮ ಮಾಡಲು ನೆರವಾಗುತ್ತದೆ. ಕಾಫಿ ಸೇವಿಸಿದರೆ ನಿಮ್ಮ ಮನಸ್ಸು ಹಗುರ ಹಾಗೂ ಪುನರ್ಚೇತನಗೊಳ್ಳುತ್ತದೆ. ಕಾಫಿ ನಿಮ್ಮ ಆಯ್ಕೆಯಲ್ಲದಿದ್ದರೆ ನೀವು ಗ್ರೀನ್ ಟೀ ಪ್ರಯತ್ನಿಸಬಹುದು. ಗ್ರೀನ್ ಟೀಯಲ್ಲಿ ನಿಮ್ಮ ತ್ರಾಣ ಮತ್ತು ಶಕ್ತಿ ಹೆಚ್ಚಿಸುವ ಪೌಷ್ಠಿಕಾಂಶಗಳಿವೆ. ನೀವು ವ್ಯಾಯಾಮಕ್ಕೆ ಮೊದಲು ಅಥವಾ ಬಳಿಕ ಒಂದು ಕಪ್ ಕಾಫಿ ಅಥವಾ ಟೀ ಕುಡಿಯಬೇಕು.

ನೀರು:
ಸಂಜೆಯ ವ್ಯಾಯಾಮ ಮತ್ತು ವರ್ಕ್ ಔಟ್ ಗೆ ಅತ್ಯಂತ ಪ್ರಾಮುಖ್ಯ ಟಿಪ್ಸ್ ಎಂದರೆ ಅದು ನೀರು. ಇಡೀ ದಿನದ ಕೆಲಸ ಮತ್ತು ಸಂಜೆಯ ವ್ಯಾಯಾಮದ ಬಳಿಕ ನಿಮ್ಮ ದೇಹವು ನಿರ್ಜಲೀಕರಣವಾಗಬಹುದು. ನಿಮ್ಮ ದೇಹವನ್ನು ಪುನರ್ಜಲೀಕರಿಸಬೇಕು. ವ್ಯಾಯಾಮ ಮಾಡುವಾಗ ಕೂಡ ಕೆಲವು ನಿಮಿಷಗಳ ಅಂತರದಲ್ಲಿ ಸ್ವಲ್ಪ ನೀರು ಸೇವಿಸಿ. ನೀರು ದೇಹದಲ್ಲಿ ಶಕ್ತಿಯನ್ನು ಕಾಪಾಡುತ್ತದೆ ಮತ್ತು ನಿಮಗೆ ದಣಿವಿನ ಭಾವನೆಯಾಗದಂತೆ ತಡೆಯುತ್ತದೆ.

ರಾತ್ರಿಯ ಊಟ:
ಸಂಜೆಯ ವ್ಯಾಯಾಮ ಮಾಡಿದ ಬಳಿಕ ರಾತ್ರಿ ಹೊಟ್ಟೆ ತುಂಬಾ ಊಟ ಮಾಡುವುದನ್ನು ಕಡೆಗಣಿಸಿ. ಕೊಬ್ಬಿರುವ ಆಹಾರದ ಬದಲಿಗೆ ಸಲಾಡ್ ಮತ್ತು ಸೂಪ್ ನಂತಹ ಆರೋಗ್ಯಕಾರಿ ತಿಂಡಿಗಳನ್ನು ಸೇವಿಸಿ. ಸಂಜೆಯ ವರ್ಕ್ ಔಟ್ ಗೆ ನೀಡಲಾಗುವುದು ಒಳ್ಳೆಯ ಟಿಪ್ಸ್ ಇದು.

English summary

Tips to workout in the evening

Everybody now realizes the importance of exercising and working out. A daily exercise regime is quite necessary for everybody. There is an increase in stress and strain both physically and mentally because of work schedule and a hectic lifestyle.
Story first published: Monday, May 12, 2014, 13:16 [IST]
X
Desktop Bottom Promotion