For Quick Alerts
ALLOW NOTIFICATIONS  
For Daily Alerts

ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಟಿಪ್ಸ್

|

ಹೊಟ್ಟೆ ಬೊಜ್ಜು ಬಂದರೆ ಅದನ್ನು ಹೋಗಲಾಡಿಸಲು ಕಷ್ಟ ಪಡುವುದಕ್ಕಿಂತ, ಅದನ್ನು ಬರದಂತೆ ತಡೆಯುವ ಮುನ್ನೆಚ್ಚರಿಕೆ ಕ್ರಮಗಳು ಪಾಲಿಸುವುದು ಸೂಕ್ತ ಅಲ್ಲವೇ? ಹೊಟ್ಟೆ ಮತ್ತು ಸೊಂಟದ ಗಾತ್ರವನ್ನು ಸರಿಯಾದ ರೀತಿಯಲ್ಲಿ ಇಡುವುದು ಸುಲಭದ ಕೆಲಸವಲ್ಲ, ಅದಕ್ಕಾಗಿ ಉತ್ತಮವಾದ ಆಹಾರಕ್ರಮ ಪಾಲಿಸಬೇಕು, ದೈಹಿಕ ಶ್ರಮ ಪಡಬೇಕು. ಇದರತ್ತ ಏಕಾಗ್ರತೆ ಇರಬೇಕಾಗುತ್ತದೆ.

ಈ ಲೇಖನದಲ್ಲಿ ನಾವು ಈ ದಿನ ಸುಂದರ ಕೊಬ್ಬಿಲ್ಲದ ಹೊಟ್ಟೆಯನ್ನು ಪಡೆಯುವ ಸರಳ ಸಲಹೆಗಳನ್ನು ನೀಡುತ್ತಿದ್ದೇವೆ. ನೀವು ಇದಕ್ಕೆ ಮಾಡಬೇಕಾದ್ದು ಇಷ್ಟೇ ನಾವಿಲ್ಲಿ ನೀಡಿರುವ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸಿ ವ್ಯಾಯಾಮವನ್ನು ಮಾಡುತ್ತಾ ಸುಂದರ ಆಕಾರದ ಹೊಟ್ಟೆಯನ್ನು ಪಡೆಯಿರಿ. ನೀವು ಒಮ್ಮೆ ಸಾಧಿಸಿದರೆಂದರೆ ಖಂಡಿತ ನಿಮಗೆ ಜಯ ಸಿಗುತ್ತದೆ. ಬೊಜ್ಜು ಕರಗಿಸುವುದರ ಬಗ್ಗೆ ನಮ್ಮಲ್ಲಿರುವ ಕಲ್ಪನೆಗಳಿವು!

ನೀರು ಮತ್ತು ಲಿಂಬೆ:

ನೀರು ಮತ್ತು ಲಿಂಬೆ:

ಬೆಚ್ಚಗಿನ ನೀರಿಗೆ ಲಿಂಬೆ ರಸವನ್ನು ಹಿಂಡಿಕೊಂಡು ಪ್ರಾತಃ ಕಾಲದಲ್ಲಿ ನಿತ್ಯವೂ ಸೇವಿಸಿದರೆ ನಿಮ್ಮ ಕೊಬ್ಬು ಕರಗಿ ಸುಂದರ ಆಕಾರ ನಿಮ್ಮದಾಗುತ್ತದೆ. ಹೊಟ್ಟೆಯ ಕೊಬ್ಬು ವಾರದೊಳಗೆ ಖಂಡಿತ ಕರಗುತ್ತದೆ. ಆದರೆ ಲಿಂಬೆ ಬೆರೆಸಿದ ಬೆಚ್ಚಗಿನ ನೀರಿನ ಸೇವನೆಯನ್ನು ನಿತ್ಯವೂ ನೀವು ಮಾಡಬೇಕು ಆದರೆ ಮಾತ್ರ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ.

ಪ್ರೋಟಿನ್ ಹೆಚ್ಚಿಸಿ:

ಪ್ರೋಟಿನ್ ಹೆಚ್ಚಿಸಿ:

ನೀವು ಪ್ರೋಟಿನ್ ಅಂಶಗಳನ್ನು ಹೆಚ್ಚು ತೆಗೆದುಕೊಳ್ಳುತ್ತಿದ್ದಂತೆ, ಕೊಬ್ಬು ಸಂಗ್ರಹಣೆ ಕಡಿಮೆಯಾಗುತ್ತಾ ಹೋಗುತ್ತದೆ. ಆದ್ದರಿಂದ ದಿನನಿತ್ಯದ ಆಹಾರದಲ್ಲಿ ಪ್ರೋಟೀನ್ ಸೇವನೆ ಹೆಚ್ಚಾಗಿರಲಿ. ನಿಮ್ಮ ವೈದ್ಯರ ಸಲಹೆಯನ್ನು ಪಡೆದುಕೊಂಡು ಪ್ರೋಟೀನ್ ಆಹಾರಗಳನ್ನು ಸೇವಿಸಿ. ನಿಮ್ಮ ತೂಕ ಇಳಿಸುವ ಗಮನದೊಂದಿಗೆ ನಿಮ್ಮ ಆರೋಗ್ಯದ ಕಡೆಗೂ ಗಮನವಿರಲಿ.

ಸಕ್ಕರೆ ಅಂಶವನ್ನು ಇಳಿಸಿ:

ಸಕ್ಕರೆ ಅಂಶವನ್ನು ಇಳಿಸಿ:

ಹೊಟ್ಟೆಯ ಕೊಬ್ಬು ಹೆಚ್ಚಾಗಲು ಕಾರಣ ನೀವು ಸೇವಿಸುವ ಸಿಹಿ ಪದಾರ್ಥವಾಗಿದೆ. ಕೊಬ್ಬಿಲ್ಲದ ಹೊಟ್ಟೆ ನಿಮ್ಮದಾಗಬೇಕಿದ್ದರೆ ಸಕ್ಕರೆ ಸೇವನೆಯನ್ನು ನೀವು ಕಡಿಮೆ ಮಾಡಲೇಬೇಕು. ಸಕ್ಕರೆ ಮಿಶ್ರಿತ ಪದಾರ್ಥಗಳೆಂದರೆ ಐಸ್‌ಕ್ರೀಂ, ಬೇಕರಿ ತಿನಿಸುಗಳು ಮತ್ತು ಸಿಹಿತಿಂಡಿಗಳ ಸೇವನೆ ಪ್ರಮಾಣವನ್ನು ನೀವು ಮಿತಗೊಳಿಸಲೇಬೇಕು. ಇಂತಹ ಆಹಾರಗಳು ನಿಮ್ಮ ಹೊಟ್ಟೆಯಲ್ಲಿ ಕೊಬ್ಬು ಸಂಗ್ರಹವಾಗುವಂತೆ ಮಾಡುತ್ತದೆ.

ತಿನ್ನುವುದರ ಕಡೆ ಎಚ್ಚರವಿರಲಿ:

ತಿನ್ನುವುದರ ಕಡೆ ಎಚ್ಚರವಿರಲಿ:

ನೀವು ಏನನ್ನು ತಿನ್ನುತ್ತೀರಿ ಎಂಬುದರ ಬಗ್ಗೆ ಗಮನವಿರಲಿ, ನೀವು ಹೊಟ್ಟೆ ಕರಗಿಸಬೇಕು ಎಂದು ಬಯಸಿದಲ್ಲಿ ಸರಿಯಾದ ಆಹಾರ ಪದ್ಧತಿ ಮುಖ್ಯವಾಗುತ್ತದೆ. ಕೇವಲ ಪ್ರತಿ ದಿನ ಜಿಮ್‌ಗೆ ಹೋಗುವುದರಿಂದ ಪ್ರಯೋಜನವಿಲ್ಲ. ಪೋಷಣಾ ತಜ್ಞರು ಹೇಳುವ ಪ್ರಕಾರ ಆಹಾರದಲ್ಲಿ ಪೌಷ್ಟಿಕಾಂಶ, ಕಡಿಮೆ ಕೊಬ್ಬಿನ ಹಾಲು,ತಾಜಾ ತರಕಾರಿ, ಹಣ್ಣುಗಳು ಇವುಗಳನ್ನು ಸೇವಿಸುವುದು ಕೂಡ ಆರೋಗ್ಯಕ್ಕೆ ಉತ್ತಮವಾದುದು.

ತೂಕ ಕೂಡ ಪ್ರಭಾವ ಬೀರುತ್ತದೆ:

ತೂಕ ಕೂಡ ಪ್ರಭಾವ ಬೀರುತ್ತದೆ:

ತೂಕ ಕೂಡ ನಿಮ್ಮ ಹೊಟ್ಟೆ ಬರುವಿಕೆಗೆ ಕಾರಣ, ಪ್ರತಿದಿನ ವರ್ಕ್ ಔಟ್ ಮಾಡುವುದರಿಂದ ತೂಕದ ಜೊತೆಗೆ ಹೊಟ್ಟೆ ಕರಗಿಸಿಕೊಳ್ಳಬಹುದು.

ಯೋಗ:

ಯೋಗ:

ಜಿಮ್ ಮಾಡಿ ಬೇಸತ್ತಿದ್ದೀರಾ? ಹಾಗಿದ್ದರೆ ಯೋಗ ಮಾಡಿ ನೋಡಿ. ಯೋಗದ ಸಾಕಷ್ಟು ಆಸನಗಳು ದೇಹವನ್ನು ಬಲಯುತವಾಗಿಸುತ್ತದೆ. ಯೋಗ ಕೇವಲ ನಿಮ್ಮ ದೇಹವನ್ನು ಮಾತ್ರವಲ್ಲ ಮನಸ್ಸನ್ನು ಕೂಡ ಸುಧಾರಿಸುತ್ತದೆ. ಜೊತೆಗೆ ಒತ್ತಡವನ್ನು ಕಡಿಮೆ ಮಾಡಿ ಸ್ಥಿರವಾಗಿ ಇರುವಂತೆ ಮಾಡುತ್ತದೆ.

ವಿಶ್ರಾಂತಿ:

ವಿಶ್ರಾಂತಿ:

ದೇಹ ಬಲಯುತವಾಗಲು ವಿಶ್ರಾಂತಿ ಕೂಡ ಅಷ್ಟೇ ಅಗತ್ಯ. ವರ್ಕ್ ಔಟ್ ಮಾಡಿದ ನಂತರ ವಿಶ್ರಾಂತಿ ಕೂಡ ಪಡೆಯಿರಿ ಇದರಿಂದ ನಿಮ್ಮ ಸ್ನಾಯುಗಳು ಬಲಯುತವಾಗುತ್ತವೆ.

ಸಮತೋಲನ ಮಾಡಿ:

ಸಮತೋಲನ ಮಾಡಿ:

ಸರಿಯಾದ ಸಮತೋಲನವನ್ನು ನೀವು ಕಾಪಾಡಿಕೊಳ್ಳಬೇಕು. ಒಂದು ಕಾಲು ಕೆಳಗೆ ಇರಿಸಿ ಇನ್ನೊಂದನ್ನು ಎತ್ತುವುದು, ಒಂದು ಕೈಯನ್ನು ಸಂಪೂರ್ಣವಾಗಿ ಎತ್ತುವುದು ಮತ್ತೊಂದನ್ನು ನಿಮ್ಮ ಕಾಲಿಗೆ ಮುಟ್ಟಿಸುವುದು ಅಥವಾ ವಕ್ರಾಸನ ಎಂದರೆ ಮರದ ಆಕಾರದಲ್ಲಿ ಕಾಲುಗಳೆರಡು ಎತ್ತುವುದು ಇವುಗಳು ಸಹಾಯವಾಗುತ್ತವೆ.

ಆಲ್ ರೌಂಡರ್ ಆಗಿರಿ:

ಆಲ್ ರೌಂಡರ್ ಆಗಿರಿ:

ನೀವು ನಿಮ್ಮ ಹೊಟ್ಟೆ ಸಪಾಟಾಗಿ ಇರಬೇಕು ಎಂಬುದನ್ನು ಬಯಸುತ್ತೀರಾದರೆ ಎಲ್ಲಾ ರೀತಿಯ ವ್ಯಾಯಾಮ ಮಾಡಲು ತಯಾರಿರಬೇಕು.ಕೇವಲ ಏಕಾಗ್ರತೆಯಿಂದ ಒಂದು ವ್ಯಾಯಾಮ ಮಾಡಿದರೆ ಸಾಲದು.ಸಾಕಷ್ಟು ವ್ಯಾಯಾಮ ಜೊತೆಗೆ ಯೋಗದ ಕೆಲವು ಆಸನವಾದ ವಕ್ರಾಸನ ಇವುಗಳನ್ನು ಮಾಡುವುದರಿಂದ ನಿಮ್ಮ ದೇಹ ಸುಲಭವಾಗಿ ಬಾಗುತ್ತದೆ.ಹೊಟ್ಟೆ ಕರಗುತ್ತದೆ.

ಹಿಂಜರಿಬೇಡಿ:

ಹಿಂಜರಿಬೇಡಿ:

ನೀವು ಪುಶ್ ಅಪ್ ವ್ಯಾಯಾಮ ಮಾಡುವಾಗ ನಿಮ್ಮ ಸ್ನಾಯುಗಳು ಮಾತ್ರ ಮುಖ್ಯ ಪಾತ್ರ ವಹಿಸುತ್ತವೆ ಎಂದರೆ ತಪ್ಪು ನಿಮ್ಮ ಮನಸ್ಸು ಕೂಡ ಮುಖ್ಯವಾಗಿರುತ್ತದೆ.ಆದ್ದರಿಂದ ವ್ಯಾಯಾಮ ಮಾಡುವಾಗ ಟಿವಿ ನೋಡುವುದನ್ನು ತಪ್ಪಿಸಿ,ಏಕಾಗ್ರತೆಯಿಂದ ವ್ಯಾಯಾಮ ಮಾಡಿ.ಈ ರೀತಿ ಮಾಡುವುದರಿಂದ ಪಲಿತಾಂಶವನ್ನು ಬದಲಾಯಿಸಬಹುದು.

ದೀರ್ಘವಾಗಿ ಉಸಿರಾಡಿ:

ದೀರ್ಘವಾಗಿ ಉಸಿರಾಡಿ:

ಆಮ್ಲಜನಕ ನಿಮ್ಮ ಸ್ನಾಯುಗಳಿಗೆ ಮುಖ್ಯವಾಗುತ್ತದೆ.ಆದ್ದರಿಂದ ನಿಮ್ಮ ಉಸಿರನ್ನು ಬಿಗಿ ಹಿಡಿದು ವ್ಯಾಯಾಮ ಮಾಡಬೇಡಿ. ನೀವು ವ್ಯಾಯಾಮ ಮಾಡುವಾಗ ಉಚ್ವಾಸ ಮತ್ತು ನಿಶ್ವಾಸಗಳು ಸರಿಯಾಗಿ ಆಗುತ್ತಿರಲಿ. ಉದಾಹರಣೆ - ನೀವು ಕುಳಿತು ಏಳುವಾಗ ಕುಳಿತುಕೊಳ್ಳುವಾಗ ಉಸಿರು ಒಳಗೆ ಎಳೆದುಕೊಳ್ಳಿ, ಏಳುವಾಗ ಉಸಿರು ಬಿಡಿ.

ವಾರ್ಮ್ ಅಪ್ ಆಗಿ:

ವಾರ್ಮ್ ಅಪ್ ಆಗಿ:

ಕೆಲವು ಜನರು ವರ್ಕ್ ಔಟ್ ಮಾಡುವ ಮೊದಲು ವಾರ್ಮ್ ಅಪ್ ಆಗಬೇಕು ಎಂಬುದನ್ನು ತಿಳಿದಿರುವುದಿಲ್ಲ.ಇದರಿಂದ ಸಮಯ ವ್ಯರ್ಥ ಎಂದು ತಪ್ಪು ತಿಳಿದಿರುತ್ತಾರೆ.ಆದರೆ ವ್ಯಾಯಾಮ ಪ್ರಾರಂಭಿಸುವ ಮೊದಲು ಸ್ವಲ್ಪ ವಾರ್ಮ್ ಅಪ್ ಆಗುವುದರಿಂದ ದೇಹಕ್ಕಾಗುವ ಗಾಯವನ್ನು ತಪ್ಪಿಸಬಹುದು. ಸ್ವಲ್ಪ ನಡೆಯುವುದು,ಮಾರ್ಚ್ ಫಾಸ್ಟ್ ಆಡುವುದು, ಕೈ ನೆರವಾಗಿಟ್ಟುಕೊಂಡು ಪಾದಕ್ಕೆ ಬಗ್ಗಿ ತಾಗಿಸುವುದು ಇವುಗಳನ್ನು ಮಾಡುವುದರಿಂದ ದೇಹವನ್ನು ವರ್ಕ್ ಔಟ್ ಗೆ ತಯಾರು ಮಾಡಿಕೊಳ್ಳಿ.

ನಿಧಾನವಾಗಿ ಆರಂಭಿಸಿ:

ನಿಧಾನವಾಗಿ ಆರಂಭಿಸಿ:

ಒಂದೇ ಬಾರಿ ಹೊಟ್ಟೆ ಕರಗಿಸುವುದು ಸಾಧ್ಯವಾಗದ ಮಾತು.ಆದ್ದರಿಂದ ಒಂದೇ ಬಾರಿ ಕರಗಿಸಬೇಕು ಎಂದು ವ್ಯಾಯಮದಲ್ಲಿ ಅಧಿಕ ಒತ್ತಡ ನೀಡಬೇಡಿ .ನಿಧಾನವಾಗಿ ಪ್ರಾರಂಭಿಸಿ.

ಕೊಬ್ಬಿನಂಶವಿಲ್ಲದ ಮೊಸರು:

ಕೊಬ್ಬಿನಂಶವಿಲ್ಲದ ಮೊಸರು:

ಮೊಸರು ಜೀರ್ಣಕ್ರಿಯೆ ಸರಿಯಾಗಿ ನಡೆಯಲು ಸಹಾಯ ಮಾಡುತ್ತದೆ. ಇದನ್ನು ಕುಡಿದರೆ ಗ್ಯಾಸ್ ಸಮಸ್ಯೆ, ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸಿ ಹೊಟ್ಟೆ ದಪ್ಪ ಕಾಣದಂತೆ ಮಾಡುತ್ತದೆ.

 ದವಸ ಧ್ಯಾನ್ಯಗಳು:

ದವಸ ಧ್ಯಾನ್ಯಗಳು:

ತುಂಬಾ ಪಾಲಿಷ್ ಮಾಡಿದ ಅಕ್ಕಿಯಿಂದ ತಯಾರಿಸಿದ ಆಹಾರಕ್ಕಿಂತ ಕೆಂಪಕ್ಕಿಯಿಂದ ತಯಾರಿಸಿದ ಆಹಾರಗಳನ್ನು ಸೇವಿಸಿ. ದವಸ ಧಾನ್ಯಗಳಿರುವ ಆಹಾರ ಹೆಚ್ಚಾಗಿ ಸೇವಿಸುವುದರಿಂದ ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ. ಈ ದವಸ ಧಾನ್ಯಗಳು ಹೊಟ್ಟೆಯಲ್ಲಿ ಬೊಜ್ಜು ಕರಗಿಸಲು ಅವಕಾಶ ಕೊಡುವುದಿಲ್ಲ.

 ಹಸಿರು ಸೊಪ್ಪುಗಳು:

ಹಸಿರು ಸೊಪ್ಪುಗಳು:

ಬ್ರೊಕೋಲಿ, ಬೀನ್ಸ್ ಹೀಗೆ ವಿಟಮಿನ್ ಎ, ಸಿ, ಕೆ ಇರುವ ಆಹಾರಗಳನ್ನು ಹೆಚ್ಚಾಗಿ ತಿಂದರೆ ತಿನ್ನಿ. ಈ ಆಹಾರಗಳು ತಿಂದರೆ ಸುಲಭದಲ್ಲಿ ಜೀರ್ಣವಾಗುವುದರಿಂದ ಹೊಟ್ಟೆ ಬೊಜ್ಜು ಬರುವುದಿಲ್ಲ. ಆಲೀವ್ ಎಣ್ಣೆಯನ್ನು ಅಡುಗೆಗೆ ಬಳಸಿದರೆ ಹೊಟ್ಟೆಯ ಬೊಜ್ಜುನ ಕರಗಿಸಲು ಸಹಕಾರಿಯಾಗಿದೆ.

ವಿನಿಗರ್:

ವಿನಿಗರ್:

ಒಂದು ಅಥವಾ 2 ಚಮಚ ಆಪಲ್ ಸೈಡರ್ ವಿನಿಗರ್ ಅನ್ನು 12-15 ದಿನಗವರೆಗೆ ಸೇವಿಸಿದರೆ ದೇಹದ ತೂಕ ಕಡಿಮೆಯಾಗುವುದು. ಇದರಲ್ಲಿ acetic ಆಸಿಡ್ ಇದ್ದು ದೇಹದಲ್ಲಿರುವ ಕೊಬ್ಬನ್ನು ಕರಗಿಸಿ ತೆಳ್ಳಗೆ ಮಾಡಲು ಸಹಕಾರಿಯಾಗಿದೆ.

ಸರಿಯಾಗಿ ಊಟ ಮಾಡಿ:

ಸರಿಯಾಗಿ ಊಟ ಮಾಡಿ:

ನೀವು ಆಗಾಗ ತಿನ್ನುತ್ತ ಇರುವುದರಿಂದ ಹೊಟ್ಟೆಯ ಕೊಬ್ಬು ಕರಗಿಸಬಹುದು.ನೀವು ಹೊಟ್ಟೆ ಕರಗಿಸಲು ಬೇರೆ ರೀತಿಯ ಆಹಾರ ಪದ್ಧತಿ ಪ್ರಾರಂಭಿಸಿರದಿದ್ದಲ್ಲಿ ಇದನ್ನು ಮಾಡಿನೋಡಿ. ಬಹುಶಃ ನೀವು ಮೊದಲಿನಿಂದಲೂ ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ಮತ್ತು ರಾತ್ರಿ ಊಟ ಮಾಡಿಕೊಂಡು ಬಂದಿರಬಹುದು.

ಆದರೆ ಅಧ್ಯಯನ ಕಂಡು ಹಿಡಿದ ಪ್ರಕಾರ ದಿನದಲ್ಲಿ ಮೂರು ದೊಡ್ಡ ಊಟ ಮಾಡುವ ಬದಲು ಐದರಿಂದ ಆರು ಬಾರಿ ಸಣ್ಣ ಪ್ರಮಾಣದಲ್ಲಿ ತಿನ್ನುವವರು ತಮ್ಮ ಹೊಟ್ಟೆಯ ಸುತ್ತಳತೆಯನ್ನು ಕಡಿಮೆ ಮಾಡಿಕೊಳ್ಳಬಹುದು ಎನ್ನಲಾಗುತ್ತದೆ.

ಹೊಟ್ಟೆಯ ಕೊಬ್ಬು ಕರಗುವಿಕೆ ಇಂಚಿನಲ್ಲಿರಬೇಕು,ಪೌಂಡ್‌ನಲ್ಲಲ್ಲ:

ಹೊಟ್ಟೆಯ ಕೊಬ್ಬು ಕರಗುವಿಕೆ ಇಂಚಿನಲ್ಲಿರಬೇಕು,ಪೌಂಡ್‌ನಲ್ಲಲ್ಲ:

ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಕೇಳಿ ನೋಡಿ, ಅಳತೆ ಸ್ಕೇಲ್ ಅವರ ದೊಡ್ಡ ಶತ್ರು ಎಂಬಂತೆ ನೋಡುತ್ತಾರೆ. ಪ್ರತಿದಿನ ಅಳತೆ ನೋಡಿ ತೂಕ ಕಡಿಮೆ ಆಗದಿರುವುದು ಕಂಡು ಅವರ ಮೂಡ್ ಕೆಟ್ಟಿರುತ್ತದೆ.ಆದರೆ ಹೊಟ್ಟೆ ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವವರು ತೂಕ ಕೆಜಿ ಅಥವಾ ಪೌಂಡ್ ಗಳಲ್ಲಿ ನೋಡುವ ಬದಲು ಹೊಟ್ಟೆಯ ಸುತ್ತಳತೆಯನ್ನು ಇಂಚು ಎಷ್ಟು ಕಡಿಮೆ ಆಗಿದೆ ಎಂದು ನೋಡಬೇಕು.

ಟೇಪ್ ತೆಗೆದುಕೊಂಡು ಹೊಟ್ಟೆಯ ಸುತ್ತ ಹಿಡಿದು ಅಳತೆ ಬರೆದಿಟ್ಟುಕೊಳ್ಳಿ ಮತ್ತು ಪ್ರತಿದಿನ ಅದನ್ನು ಕಡಿಮೆ ಮಾಡಲು ಪ್ರಯತ್ನಿಸಿ.ದಿನಗಳು,ತಿಂಗಳುಗಳು ಕಳೆದ ನಂತರ ಅಳತೆಯನ್ನು ನೋಡಿ ಮತ್ತು ಕಡಿಮೆ ಆಗಿರುವುದನ್ನು ಗಮನಿಸಬಹುದು.

ಆಪಲ್ ಸೈಡರ್ ವಿನೆಗರ್ ಸೇವಿಸಿ:

ಆಪಲ್ ಸೈಡರ್ ವಿನೆಗರ್ ಸೇವಿಸಿ:

ಕೆಲವು ಆಹಾರಗಳು ಹೊಟ್ಟೆಯಲ್ಲಿ ಕೊಬ್ಬು ಶೇಖರಗೊಳ್ಳುವುದನ್ನು ತಡೆಯುವ ಗುಣವನ್ನು ಹೊಂದಿರುತ್ತದೆ. ಉದಾರಹಣೆಗೆ: ಆಪಲ್ ಸೈಡರ್ ವಿನೆಗರ್:- ಒಂದು ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ ಒಂದು ಅಥವಾ ಎರಡು ಟೀ ಚಮಚದಷ್ಟು ಆಪಲ್ ಸೈಡರ್ ವಿನೆಗರ್ ಅನ್ನು ಪ್ರತಿದಿನ ಸೇವಿಸಲು ಹೇಳಲಾಗಿತ್ತು.

ಆಹಾರ ಕಡಿಮೆ ಮಾಡಿದರೆ ಹೊಟ್ಟೆ ಕೊಬ್ಬು ಕರಗುವುದಿಲ್ಲ:

ಆಹಾರ ಕಡಿಮೆ ಮಾಡಿದರೆ ಹೊಟ್ಟೆ ಕೊಬ್ಬು ಕರಗುವುದಿಲ್ಲ:

ಜನರು ತಮ್ಮ ತೂಕವನ್ನು ಕಳೆದುಕೊಳ್ಳಲೇಬೇಕು ಎಂದು ಹಠ ತೊಟ್ಟು ಕ್ಯಾಲೋರಿ ಅಹಾರಗಳನ್ನೆಲ್ಲ ಒಂದು ಪಟ್ಟಿ ಮಾಡಿಬಿಡುತ್ತಾರೆ. ಆದರೆ ನಿಜ ಏನೆಂದರೆ ಆಹಾರದಲ್ಲಿ ಆರೋಗ್ಯಕರ ಕೊಬ್ಬು ಮತ್ತು ಅನಾರೋಗ್ಯಕರ ಕೊಬ್ಬು ಎಂಬ ಎರಡು ವಿಧಗಳಿರುತ್ತವೆ ಮತ್ತು ಆರೋಗ್ಯಕರ ಕೊಬ್ಬು ನಿಮ್ಮ ದೇಹವನ್ನು ಅರೋಗ್ಯಯುತವಾಗಿ ಕಾಪಾಡಲು ಅತಿ ಅವಶ್ಯಕ.

ಕ್ಯಾಲೋರಿ ಎಣಿಸುವಿಕೆ ಪರಿಣಾಮಕಾರಿ ವಿಧಾನವಲ್ಲ:

ಕ್ಯಾಲೋರಿ ಎಣಿಸುವಿಕೆ ಪರಿಣಾಮಕಾರಿ ವಿಧಾನವಲ್ಲ:

ಸಾಕಷ್ಟು ಡಯೆಟ್ ವಿಧಾನಗಳು ಕ್ಯಾಲೋರಿ ನೋಡಿ ಆಹಾರ ತೆಗೆದುಕೊಳ್ಳುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು ಎನ್ನುತ್ತದೆ ಆದರೆ ಇದು ಅಸಾಧ್ಯ. ಪ್ರತಿದಿನ ನೀವು ಸೇವಿಸುವ ಆಹಾರದ ಪ್ರಮಾಣ ಕಡಿಮೆ ಮಾಡುವುದರಿಂದ ಕೊಬ್ಬು ಕರಗುವುದಿಲ್ಲ. ನೀವು ಎಷ್ಟು ತಿನ್ನುತ್ತೀರಿ ಎಂಬುದಕ್ಕಿಂತ ಯಾವ ರೀತಿಯ ಆಹಾರ ತಿನ್ನುತ್ತೀರಿ ಎಂಬುದು ಬಹಳ ಮುಖ್ಯ.

ಜಾಹೀರಾತುಗಳಿಗೆ ಮರಳಾಗಬೇಡಿ:

ಜಾಹೀರಾತುಗಳಿಗೆ ಮರಳಾಗಬೇಡಿ:

ಸಿಟ್ ಅಪ್ ಅಥವಾ ಇನ್ನಿತರ ಬೆಲ್ಲಿ ವ್ಯಾಯಾಮಗಳನ್ನು ಮಾಡುವುದರಿಂದ ನಿಮಗೆ ಮೊದಲಿನ ರೀತಿಯ ಹೊಟ್ಟೆಯನ್ನು ತರಿಸುತ್ತೀವಿ ಎಂಬ ಸಾಕಷ್ಟು ಜಾಹೀರಾತುಗಳಿಗೆ ನೀವು ಮರುಳಾಗಿರಬಹುದು. ಆದರೆ ಅನದೃಷ್ಟವಶಾತ್ ಹೀಗೆ ಆಸೆ ಹೊತ್ತು ಸಾಕಷ್ಟು ಹಣ ಖರ್ಚು ಮಾಡುವವರ ಕನಸು ಕೇವಲ ಕನಸಾಗಿಯೇ ಇರುತ್ತದೆ. ತಕ್ಷಣ ಹೊಟ್ಟೆ ಕೊಬ್ಬು ಕರಗಿಸುವುದು ಅಸಾಧ್ಯ, ಜೊತೆಗೆ ಹೊಟ್ಟೆ ಕೊಬ್ಬು ಕರಗಿಸಲು ಇರುವ ವ್ಯಾಯಮಗಳು ದೇಹದ ಇತರ ಸ್ನಾಯುಗಳಿಗೆ ಹೆಚ್ಚಿನ ಹೊಡೆತ ನೀಡುತ್ತದೆ. ಸಿಟ್ ಅಪ್ ಮತ್ತು ಕ್ರಂಚ್‌ಗಳು ಹೊಟ್ಟೆಯ ಸ್ನಾಯುಗಳನ್ನು ಬಲಯುತವಾಗಿ ಮಾಡುತ್ತದೆ ಆದರೆ ಅದು ಹೊಟ್ಟೆಯ ಕೊಬ್ಬನ್ನು ಕರಗಿಸಲು

ಸಹಕರಿಸುವುದಿಲ್ಲ.ಹೊಟ್ಟೆಯ ಕೊಬ್ಬು ಮತ್ತು ದೇಹದ ಅಧಿಕ ಕೊಬ್ಬನ್ನು ಕರಗಿಸುವಲ್ಲಿ ಸಹಕರಿಸುವ ಒಂದೇ ಒಂದು ವ್ಯಾಯಾಮ ಎಂದರೆ ಕಾರ್ಡಿಯೋ ವ್ಯಾಯಾಮಗಳು.

ಒತ್ತಡ ಹೊಟ್ಟೆ ಕೊಬ್ಬನ್ನು ಇನ್ನಷ್ಟು ಹೆಚ್ಚಿಸುತ್ತದೆ:

ಒತ್ತಡ ಹೊಟ್ಟೆ ಕೊಬ್ಬನ್ನು ಇನ್ನಷ್ಟು ಹೆಚ್ಚಿಸುತ್ತದೆ:

ಪ್ರತಿಯೊಬ್ಬರ ಜೀವನದಲ್ಲೂ ಒತ್ತಡ ಇದ್ದೇ ಇರುತ್ತದೆ. ಆದರೆ ಅದರಿಂದ ಹೇಗೆ ಹೊರಬರುತ್ತೀರಿ ಎಂಬುದೇ ಮುಖ್ಯ.ದೇಹ ಭಾವನಾತ್ಮಕ ಒತ್ತಡಕ್ಕೆ ಒಳಗಾದಾಗ ಕೋರ್ಟಿಸೋಲ್ ಎಂಬ ಹಾರ್ಮೊನೊಂದನ್ನು ಉತ್ಪತ್ತಿ ಮಾಡುತ್ತದೆ ಇದು ಹಸಿವು ಹೆಚ್ಚುವಂತೆ ಮಾಡಿ ಹೆಚ್ಚು ತಿನ್ನುವಂತೆ ಮಾಡುತ್ತದೆ.

ಜನರು ಈ ರೀತಿ ಹೆಚ್ಚು ಹಸಿವಾದಾಗ ಹೆಚ್ಚು ಕ್ಯಾಲೋರಿ ಇರುವ ಆಹಾರವನ್ನು ಹೊಟ್ಟೆ ತುಂಬಿಸಿಕೊಳ್ಳಲು ಹೆಚ್ಚು ಹೆಚ್ಚು ತಿನ್ನುತ್ತಾರೆ. ಇನ್ನು ಮುಂದೆ ನಿಮಗೆ ಹೆಚ್ಚು ಒತ್ತಡವಾದಾಗ ಕಣ್ಣು ಮುಚ್ಚಿಕೊಂಡು ನಿಮ್ಮ ಉಸಿರಾಟವನ್ನು ಆಲಿಸಿ. ಜೀವನದಲ್ಲಿ ಸ್ವಲ್ಪ ಹಾಸ್ಯವಿರಲಿ. ಒಳ್ಳೆಯ ರೀತಿಯಲ್ಲಿ ನಗುವುದರಿಂದ ರಕ್ತ ಸಂಚಲನ ಸರಿಯಾಗಿ ಆಗುತ್ತದೆ ಮತ್ತು ದೇಹ ವಿಶ್ರಾಂತಿ ಪಡೆದು ಒತ್ತಡವನ್ನು ಕಡಿಮೆ ಮಾಡುತ್ತದೆ ಇದರಿಂದ ಹೆಚ್ಚು ಹಸಿವಾಗುವುದು ಕೂಡ ನಿಲ್ಲುತ್ತದೆ.

ಟಿವಿ ನೋಡುತ್ತಾ ಸಮಯ ಕಳೆಯಬೇಡಿ:

ಟಿವಿ ನೋಡುತ್ತಾ ಸಮಯ ಕಳೆಯಬೇಡಿ:

ಜಡತ್ವ ಹೊಂದಿರುವುದೇ ಅಮೇರಿಕಾದಲ್ಲಿ ಸಾಕಷ್ಟು ಜನರು ಹೊಟ್ಟೆಯ ಕೊಬ್ಬನ್ನು ಕರಗಿಸಿಕೊಳ್ಳಲು ಈಗ ಕಷ್ಟಪಡುತ್ತಿರುವುದಕ್ಕೆ ಮುಖ್ಯ ಕಾರಣ. ಅಮೆರಿಕಾದಲ್ಲಿ ಸಾಕಷ್ಟು ಜನರು ಕೇವಲ ಟಿವಿ ನೋಡುತ್ತಾ ಕುಳಿತುಕೊಳ್ಳುತ್ತಾರೆ ಅಥವಾ ಟಿವಿ ನೋಡಿ ಮುಗಿದ ನಂತರ ಕುಳಿತು ಸ್ನಾಕ್ ತಿನ್ನುವುದು ಕೂಡ ತೂಕ ಹೆಚ್ಚಳಕ್ಕೆ ಮುಖ್ಯ ಕಾರಣ.

ಒಂದು ದಿನದಲ್ಲಿ ಅರ್ಧದಷ್ಟು ಟಿವಿ ನೋಡುವುದನ್ನು ಕಡಿಮೆ ಮಾಡಿ 100 ಕ್ಯಾಲೋರಿಯಷ್ಟು ಆಹಾರ ಸೇವನೆ ಕಡಿಮೆ ಮಾಡಿದರೆ 35 ದಿನಗಳಲ್ಲಿ ಒಂದು ಪೌಂಡ್ ನಷ್ಟು ತೂಕ ಕಡಿಮೆ ಮಾಡಿಕೊಳ್ಳಬಹುದು. ಮನೆಯಿಂದ ಹೊರಹೊರಟು ಪ್ರತಿದಿನ ವಾಕಿಂಗ್ ಮಾಡುವುದರಿಂದ ಹೊಟ್ಟೆಯ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ವಾರದಲ್ಲಿ 3 ಗಂಟೆ ಬ್ರಿಸ್ಕ್ ವಾಕ್ ಮಾಡುವುದರಿಂದ ಹೊಟ್ಟೆ ತೂಕ ಕಡಿಮೆ ಮಾಡಿಕೊಳ್ಳಬಹುದು.

ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ ಹೆಚ್ಚು ಕೊಬ್ಬು ಶೇಖರಣೆ ಆಗಿರುತ್ತದೆ:

ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ ಹೆಚ್ಚು ಕೊಬ್ಬು ಶೇಖರಣೆ ಆಗಿರುತ್ತದೆ:

ಮಾನವ ದೇಹದಲ್ಲಿ ಶೇಖರವಾಗಿರುವ ಕೊಬ್ಬು ಯಾವ ರೀತಿ ಶೇಖರಗೊಂಡಿದೆ ಎಂಬುದಕ್ಕಿಂತ ಯಾವ ಭಾಗದಲ್ಲಿ ಕೊಬ್ಬು ಶೇಖರಗೊಂಡಿದೆ ಎಂಬುದು ಹೆಚ್ಚು ಅಪಾಯಕಾರಿ ಎನ್ನಬಹುದು. ಹೊಟ್ಟೆಯಲ್ಲಿ ಶೇಖರಗೊಂಡಿರುವ ಕೊಬ್ಬು ಹೆಚ್ಚು ಅಪಾಯಕಾರಿ ಏಕೆಂದರೆ ಅದು ಇತರ ಪ್ರಮುಖ ಅಂಗಗಳ ಮೇಲೆ ಕೂಡ ಕೆಟ್ಟ ಪರಿಣಾಮ ಬೀರುತ್ತದೆ.ಹೊಟ್ಟೆಯ ಸುತ್ತಲಿರುವ ಇತರ ಅಂಗಗಳ ಮೇಲೆ ಹೊಟ್ಟೆಯಲ್ಲಿ ಶೇಖರಗೊಳ್ಳುವ ಅಧಿಕ ಕೊಬ್ಬು ಕೆಟ್ಟ ಪರಿಣಾಮ ಬೀರಬಹುದು.

ನಿದ್ದೆ:

ನಿದ್ದೆ:

ನಿದ್ದೆಯ ಬಗ್ಗೆ ಇಲ್ಲಿ ಯಾಕೆ ಉಲ್ಲೇಖ ಬಂದಿತು ಎಂದು ಆಶ್ಚರ್ಯ ಪಡಬೇಡಿ. ಸರಿಯಾದ ನಿದ್ದೆಯೂ ನಮ್ಮ ಆರೋಗ್ಯಕ್ಕೆ ಹಾಗೂ ಕೊಬ್ಬನ್ನು ಇಳಿಸಲು ಅಗತ್ಯ. ಆರರಿಂದ ಎಂಟು ಗಂಟೆಗಳ ರಾತ್ರಿಯ ನಿದ್ದೆ ಅಗತ್ಯ.

ಅತೀ ಹೆಚ್ಚು ನಿದ್ದೆ ಮತ್ತು ಅತೀ ಕಡಿಮೆ ನಿದ್ದೆ ಎರಡೂ ನಮ್ಮ ದೇಹ ತೂಕವನ್ನು ಹೆಚ್ಚಿಸುತ್ತವೆ. ಈ ಎಲ್ಲಾ ಅಂಶಗಳನ್ನು ಪಾಲಿಸಿದಾಗ ಕೇವಲ ನಿಮ್ಮ ಹೊಟ್ಟೆಯ ಕೊಬ್ಬಷ್ಟೇ ಅಲ್ಲದೇ ದೇಹದ ಒಟ್ಟಾರೆ ಕೊಬ್ಬು ಕರಗುತ್ತದೆ.

ಬೆಳಗ್ಗಿನ ತಿಂಡಿಯನ್ನು ಬಿಡಬೇಡಿ:

ಬೆಳಗ್ಗಿನ ತಿಂಡಿಯನ್ನು ಬಿಡಬೇಡಿ:

ಹಲವರು ಅಂದುಕೊಂಡಂತೆ ಬೆಳಗ್ಗಿನ ತಿಂಡಿಯನ್ನು ಬಿಟ್ಟರೆ ತೂಕ ಕಡಿಮೆ ಮಾಡಲು ಸಹಾಯ ಆಗುತ್ತದೆ ಆದರೆ ಇದು ವಿರುದ್ಧವಾಗಿ ಪರಿಣಾಮ ಬೀರುತ್ತದೆ. ಇದು ನಿಮ್ಮಲ್ಲಿ ಹಸಿವನ್ನು ಹೆಚ್ಚಿಸಿ ಹೆಚ್ಚಿನ ಆಹಾರ ಸೇವನೆಯಾಗುವಂತೆ ಮಾಡುತ್ತದೆ.

ಇತ್ತೀಚಿನ ಅಧ್ಯಯನಗಳು ಕಡಿಮೆ ಮತ್ತು ಸಣ್ಣ ಅವಧಿಗಳಲ್ಲಿ ಆಹಾರ ಸೇವನೆ ಮಾಡುವುದು ನಮ್ಮ ಆರೋಗ್ಯ ಮತ್ತು ಜೀರ್ಣಕ್ರಿಯೆಗೆ ಒಳ್ಳೆಯದು ಎಂದು ಸಾಧಿಸಿ ತೋರಿಸಿವೆ. ಒಣ ಹಣ್ಣುಗಳು, ಹಸಿ ತರಕಾರಿಗಳನ್ನೂ ಸೇವಿಸಬಹುದು.

ಆರೋಗ್ಯಕರ ಕೊಬ್ಬನ್ನು ಸೇವಿಸಿ:

ಆರೋಗ್ಯಕರ ಕೊಬ್ಬನ್ನು ಸೇವಿಸಿ:

ಕೆಟ್ಟ ಕೊಲೆಸ್ಟ್ರರಾಲ್ ಅನ್ನು ಕಡಿಮೆ ಮಾಡುವ ಕೆಲಸದಲ್ಲಿ ಒಳ್ಳೆಯ ಕೊಲೆಸ್ಟರಾಲ್ ಬಹಳ ಉಪಯೋಗಕಾರಿ. ಅವಕಾಡೊ, ಆಲೀವ್, ತೆಂಗಿನ ಕಾಯಿ ಮತ್ತು ಬೀಜಗಳು ಒಳ್ಳೆಯ ಕೊಲೆಸ್ಟರಾಲ್ ನ ಕೆಲವು ಮೂಲಗಳು

ಕೊಬ್ಬನ್ನು ಕರಗಿಸುವ ಆಹಾರಗಳು:

ಕೊಬ್ಬನ್ನು ಕರಗಿಸುವ ಆಹಾರಗಳು:

ಬೆಳ್ಳುಳ್ಳಿ, ಈರುಳ್ಳಿ, ಶುಂಠಿ, ಮೆಣಸಿನ ಪುಡಿ, ಎಲೆಕೋಸು, ಟೊಮೆಟೊ ಮತ್ತು ದಾಲ್ಚಿನಿ ಮತ್ತು ಸಾಸಿವೆಯಂತಹ ಸಂಬಾರ ಪದಾರ್ಥಗಳು ಕೊಬ್ಬನ್ನು ಕರಗಿಸಲು ಬಹಳ ಉಪಯುಕ್ತ. ಇವುಗಳಲ್ಲಿ ನಿಮ್ಮ ಇಷ್ಟದ ವಸ್ತುಗಳ ನಿಯಮಿತ ಬಳಕೆ ಬಹಳ ಪ್ರಭಾವಶಾಲಿ. ಬಿಸಿ ನೀರಿನ ಜೊತೆಗೆ ಲಿಂಬೆ ಮತ್ತು ಜೇನು ತುಪ್ಪವನ್ನು ಹಾಕಿ ಸೇವಿಸುವುದು ಕೂಡ ಬಹಳ ಪ್ರಭಾವಶಾಲಿ ಅಂಶವಾಗಿದೆ.

ವಿಟಮಿನ್ ಸಿ:

ವಿಟಮಿನ್ ಸಿ:

ಕಾರ್ನಿಟೈನ್ ನ ಕರಗುವಿಕೆಗೆ ವಿಟಮಿನ್ ಸಿ ಬಹಳ ಮುಖ್ಯ. ಇದು ನಮ್ಮ ದೇಹದಲ್ಲಿ ಶಕ್ತಿಯಾಗಿ ಮಾರ್ಪಡುತ್ತದೆ. ಇದು ಕಾರಿಸ್ಟ್ರಾಲ್ ಅನ್ನು ನಿಯಂತ್ರಿಸಲೂ ಸಹಕಾರಿ. ಕಾರಿಸ್ಟ್ರಾಲ್ ಮಟ್ಟ ಕೊಬ್ಬು ಹೆಚ್ಚಾಗಲು ಕಾರಣವಾಗುತ್ತದೆ.

ಸೋಡಿಯಂ ಸೇವನೆ ಕಡಿಮೆ ಮಾಡಿ:

ಸೋಡಿಯಂ ಸೇವನೆ ಕಡಿಮೆ ಮಾಡಿ:

ಉಪ್ಪಿಗಿಂತ ರುಚಿ ಬೇರೆ ಇಲ್ಲ ಎನ್ನುವುದು ಒಪ್ಪುವ ಮಾತೇ ಆಗಿದೆ. ಸೋಡಿಯಂ ಉಪ್ಪಿನ ಬದಲಾಗಿ ಪೊಟ್ಯಾಷಿಯಂ, ಲಿಂಬೆ ಹಣ್ಣು, ಹಾಗೂ ಕಡಲ ಉಪ್ಪಿನ ಆಯ್ಕೆ ಇದೆ. ಇವನ್ನು ಪರಿಗಣಿಸಿ. ಇದರ ಜೊತೆಗೆ ಕಾಣುಮೆಣಸಿನ ಹುಡಿಯ ಬಳಕೆ ಮುಂತಾದ ತಂತ್ರಗಳನ್ನು ಪಾಲಿಸಿ.

ಸಕ್ಕರೆ ಕಡಿತ:

ಸಕ್ಕರೆ ಕಡಿತ:

ಸಕ್ಕರೆಯನ್ನು ನೀವು ಆದಷ್ಟು ಕಡಿಮೆ ಸೇವಿಸಬೇಕು. ಸಕ್ಕರೆಯ ಬದಲಿಗೆ ಜೇನುತುಪ್ಪ, ಲಿಕೋರೈಸ್ ನಂತಹ ಕೆಲವು ಬದಲಿ ವ್ಯವಸ್ಥೆಗಳನ್ನು ಮಾಡಿಕೊಳ್ಳಿ.

ಸಣ್ಣ ಅವಧಿಯ ತೀವ್ರ ವ್ಯಾಯಾಮಗಳು:

ಸಣ್ಣ ಅವಧಿಯ ತೀವ್ರ ವ್ಯಾಯಾಮಗಳು:

ಇತ್ತೀಚಿನ ಅಧ್ಯಯನದ ಪ್ರಕಾರ ಹೆಚ್ಚು ಹೊತ್ತು ವ್ಯಾಯಾಮ ಮಾಡುವಾಗ ನಡುವಲ್ಲಿ ತೀವ್ರವಾದ ವ್ಯಾಯಾಮಗಳು ಬಹಳ ಸಹಾಕಾರಿ. ಅಂದರೆ ನೀವು ವಾಕಿಂಗ್ ಟ್ರಾಕ್ ನಲ್ಲಿ ನಡೆಯುತ್ತೀರಿ ಎಂದಾದರೆ ಸಾಮಾನ್ಯ ವೇಗದಲ್ಲೇ ನಡೆಯುತ್ತಿರಿ ಆದರೆ ನಡುವಲ್ಲಿ ಆಗೊಮ್ಮೆ ಈಗೊಮ್ಮೆ ವೇಗವನ್ನು ಹೆಚ್ಚಿಸಿಕೊಳ್ಳಿ ಹಾಗೂ ನಡೆಯಿರಿ ಇದರಿಂದಾಗಿ ಬಹಳ ಪರಿಣಾಮ ಆಗುತ್ತದೆ.

ಹೆಚ್ಚು ನೀರು ಕುಡಿಯಿರಿ:

ಹೆಚ್ಚು ನೀರು ಕುಡಿಯಿರಿ:

ಬಹಳಷ್ಟು ಮಂದಿಗೆ ಹಸಿವು, ಬಾಯಾರಿಕೆ ಮತ್ತು ದಣಿವಿನ ನಡುವೆ ಇರುವ ವ್ಯತ್ಯಾಸದ ಗೊಂದಲದಿಂದಾಗಿ ಏನಾದರೂ ತಿಂಡಿ ತಿನ್ನುತ್ತಾರೆ. ಆದರೆ ಹಾಗಾಗಬಾರದು. ನಿಮ್ಮ ಜೊತೆ ಯಾವಾಗಲೂ ನೀರಿನ ಬಾಟಲಿ ಇದ್ದರೆ ಒಳಿತು. ಸಾಮಾನ್ಯ ಮನುಷ್ಯನೊಬ್ಬನಿಗೆ ದಿನಕ್ಕೆ ಆರರಿಂದ ಎಂಟು ಗ್ಲಾಸ್ ಗಳಷ್ಟು ನೀರು ಬೇಕು. ಇದು ನಮ್ಮ ದೇಹ ತೂಕ ಮತ್ತು ಜೀವನ ಶೈಲಿಯ ಮೇಲೆ ಅವಲಂಬಿತವಾಗಿದೆ. ಹೀಗಾಗಿ ನಿಮ್ಮ ದೇಹಕ್ಕೆ ತಕ್ಕಂತೆ ನೀರು ಕುಡಿಯಿರಿ.

ಆಹಾರ ಸರಿಯಾಗಿರಲಿ:

ಆಹಾರ ಸರಿಯಾಗಿರಲಿ:

ಸರಿಯಾದ ಆಹಾರ ಕ್ರಮ ನಿಮ್ಮ ದೊಡ್ಡ ಹೊಟ್ಟೆಯ ಸಮಸ್ಯೆಯನ್ನು ಎಂಬತ್ತು ಶೇಕಡಾ ಕಡಿಮೆ ಮಾಡುತ್ತದೆ. ಸರಿಯಾದ ಪೋಷಕಾಂಶಗಳಿರುವ ಹಾಗೂ ನಿಮ್ಮ ದೇಹಕ್ಕೆ ಅಗತ್ಯ ಇರುವ ಆಹಾರವನ್ನು ಮಿತ ಪ್ರಮಾಣದಲ್ಲಿ ಸೇವಿಸಿದರೆ ಸಾಕು. ಮನೆಯಲ್ಲೇ ತಯಾರಿಸಿದ ಆಹಾರಕ್ಕೆ ಆದ್ಯತೆ ಕೊಡಿ.

ತರಕಾರಿ ಮತ್ತು ಹಣ್ಣುಗಳು:

ತರಕಾರಿ ಮತ್ತು ಹಣ್ಣುಗಳು:

ಸೊಪ್ಪಿನ ತರಕಾರಿ ಟೊಮೇಟೊ ಹಾಗು ಕ್ಯಾರಟ್ ಗಳನ್ನು ದಿನವೂ ತೆಗೆದುಕೊಳ್ಳಿ. ಟೊಮೇಟೊ ಬೆಳಗ್ಗಿನ ತಿಂಡಿಗೆ ತೆಗೆದುಕೊಂಡರೆ ತೂಕ ತಗ್ಗಿಸಲು ಪರಿಣಾಮಕಾರಿಯಾಗಿರುತ್ತದೆ. ತರಕಾರಿ ಹಾಗು ಹಣ್ಣುಗಳನ್ನು ತಿನ್ನುವುದನ್ನು ಹೆಚ್ಚಿಸಿ ಹಾಗು ಕಡಿಮೆ ಕ್ಯಾಲರಿ ಉಳ್ಳ ಆಹಾರವನ್ನು ಹಸಿವು ಹೊಟ್ಟೆ ತುಂಬುವಂತಹ ಆಹಾರವನ್ನು ತೆಗೆದುಕೊಳ್ಳಿ.

ಕರಿಬೇವಿನ ಎಲೆಗಳು:

ಕರಿಬೇವಿನ ಎಲೆಗಳು:

ಹತ್ತು ಹನ್ನೆರಡು ದೊಡ್ಡ ಕರಿ ಬೇವಿನ ಎಲೆಗಳನ್ನು ಮುಂಜಾನೆ ಬರಿಹೊಟ್ಟೆಯಲ್ಲಿ ಚೆನ್ನಾಗಿ ಅಗೆದು ಅದರ ರಸವನ್ನು ಕುಡಿಯಬೇಕು. ಹೀಗೆ ಎರಡು ಮೂರು ತಿಂಗಳು ಮಾಡಿದಲ್ಲಿ ದೇಹದತೂಕ ಕಡಿಮೆಯಾಗಿರುವುದು ನೀವು ಕಾಣಬಹುದು.

ಚಹಾದಲ್ಲಿ ಮಸಾಲೆ ಬೆರಸುವುದು:

ಚಹಾದಲ್ಲಿ ಮಸಾಲೆ ಬೆರಸುವುದು:

ಮಸಾಲೆಗಳು ದೇಹದತೂಕವನ್ನು ನೈಸರ್ಗಿಕವಾಗಿ ಹಾಗು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಬಹು ಉತ್ತಮ. ತ್ವರಿತ ಹಾಗು ಉತ್ತಮವಾಗಿ ತೂಕ ತಗ್ಗಿಸಲು ಎರಡು ಮೂರು ಶುಂಠಿ ಚೂರು, ಕರಿಮೆಣಸು, ಏಲಕ್ಕಿ, ಲವಂಗ ಮತ್ತು ಚಕ್ಕೆಗಳನ್ನೂ ನಿಮ್ಮ ಹಸಿರು ಚಹಾಗೆ ಬೆರಸಿ ಸೇವಿಸಿ. ಈ ಮಸಾಲೆ ಚಹಾವನ್ನು ದಿನಕ್ಕೆ ಎರಡು ಮೂರು ಬಾರಿ ಪ್ರತಿನಿತ್ಯ ಸೇವಿಸಿದರೆ ಒಂದೇ ತಿಂಗಳಲ್ಲಿ ಪರಿಣಾಮ ಕಾಣಬಹುದು.

ಮನೆಯಲ್ಲಿ ತಯಾರಿಸಿದ ಆಹಾರವನ್ನು ಮಾತ್ರ ಸೇವಿಸಿ:

ಮನೆಯಲ್ಲಿ ತಯಾರಿಸಿದ ಆಹಾರವನ್ನು ಮಾತ್ರ ಸೇವಿಸಿ:

ಹೋಟೆಲ್ ರೆಸ್ಟೋರೆಂಟ್ ಹಾಗು ರಸ್ತೆ ಬದಿಯ ಅಂಗಡಿಗಳಲ್ಲಿ ಪದೆ ಪದೆ ತಿನ್ನುವುದರಿಂದ ನಿಮ್ಮದ ದೇಹದ ತೂಕವು ಸುಲಭವಾಗಿ ಹೆಚ್ಚುವುದು ಎಂದು ಎಲ್ಲರಿಗೂ ತಿಳಿದ ಸಂಗತಿಯೇ. ಮನೆಯಲ್ಲಿ ಕಡಿಮೆ ಎಣ್ಣೆಯ ಮತ್ತು ಕೊಬ್ಬಿನಿಂದ ತಯಾರಿಸಿದ ಆಹಾರವನ್ನು ಮಾತ್ರ ಸೇವಿಸಿ. ಸೊಪ್ಪು ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚು ಸೇವಿಸುವುದರಿಂದ ಒಬೆಸಿಟಿಯನ್ನು ತಡೆಗಟ್ಟಬಹುದು.

ದೊಡ್ಡ ಜೀರಿಗೆ (ಸೋಂಪು):

ದೊಡ್ಡ ಜೀರಿಗೆ (ಸೋಂಪು):

ದೊಡ್ಡ ಜೀರಿಗೆ ಹಸಿವನ್ನು ಕಡಿಮೆಯಾಗಿಸಲು ಬಹು ಪ್ರಸಿದ್ಧ ಪುರಾತನ ಗೃಹ ಪರಿಹಾರ. 6 ರಿಂದ 8 ದೊಡ್ಡ ಜೀರಿಗೆ ಬೀಜಗಳನ್ನು ನೀರಿನಲ್ಲಿ ಕೆಲ ನಿಮಿಷಗಳ ಕಾಲ ಕುದಿಸಿ. ನಂತರ ಬೇಜಗಳನ್ನು ತೆಗೆದು ನೀರನ್ನು ಮಾತ್ರ ಪ್ರತಿದಿನ ಬೆಳಗ್ಗೆ ಬರಿಹೊಟ್ಟೆಯಲ್ಲಿ ಸೇವಿಸಿ. ಇದರಿಂದ ಹಸಿವು ಕಡಿಮೆಯಾಗುವುದು.

ಪುದಿನ ಎಲೆಗಳು:

ಪುದಿನ ಎಲೆಗಳು:

ಪುದಿನ ಜೀರ್ಣ ಗುಣಗಳನ್ನು ಹೊಂದಿದೆ ಆದ್ದರಿಂದ ಆರೋಗ್ಯಕರವಾಗಿ ಆಹಾರದ ಜೀರ್ಣಕ್ಕೆ ಸಹಾಯ ಮಾಡುತ್ತದೆ. ಪುದಿನ ಎಳೆಯ ರಸದ ಕೆಲವು ತೊಟ್ಟುಗಳನ್ನು ಬೆಚ್ಚಗಿನ ನೀರಿನಲ್ಲಿ ಸೇರಿಸಿ ಊಟದ ಅರ್ಧಘಂಟೆ ಸಮಯದನಂತರ ಕುಡಿದರೆ ಸುಲಭ ಜೀರ್ಣಕ್ಕಾಗಿ ಮೆಟಬಾಲಿಸಂ ವೃದ್ಧಿಸಲು ಸಹಾಯವಾಗಿರುತ್ತದೆ. ದೇರ್ಘಾವದಿಯಲ್ಲಿ ದೇಹದ ತೂಕ ತಗ್ಗಿಸಲು ಪರಿನಾಮಕಾರಿಯಾಗಿರುತ್ತದೆ.

ಜೇನುತುಪ್ಪ ಸೇವಿಸಿ:

ಜೇನುತುಪ್ಪ ಸೇವಿಸಿ:

ಜೇನುತುಪ್ಪದಿಂದ ನಿಮ್ಮ ದಿನವನ್ನು ಪ್ರಾರಂಭಿಸಿ ಒಂದು ಚಹಾಚಮಚದಷ್ಟು ಜೇನನ್ನು ಬಿಸಿನೀರಿನಲ್ಲಿ ಮಿಶ್ರಣಮಾಡಿ ಇದಕ್ಕೆ ಒಂದು ಚಹಾ ಚಮಚದಷ್ಟು ನಿಂಬೆ ರಸವನ್ನು ಸೇರಿಸಿ. ಇದನ್ನು ಬೆಳಗ್ಗೆ ಇದ್ದಿದ ತಕ್ಷಣ ಬರಿಹೊಟ್ಟೆಯಲ್ಲಿ ಸೇವಿಸಿ. ಪರಿಣಾಮಕಾರಿಯಾಗಿ ತೂಕ ತಗ್ಗಿಸಲು ಪ್ರತಿದಿನ ಎರಡು ಮೂರು ತಿಂಗಳವರೆಗೂ ಸೇವಿಸಿ.

ಹಸಿರು ಚಹಾ:

ಹಸಿರು ಚಹಾ:

ಹಸಿರು ಚಹಾ ತೂಕ ತಗ್ಗಿಸಲು ಬಹಳ ಪರಿಣಾಮಕಾರಿ ಎಂದು ತಿಳಿದುಕೊಳ್ಳಲಾಗಿದೆ ಹಾಗು ಇದು ಯಾವುದೇ ರೀತಿಯ ಡಯಟಿಂಗ್ ಅಥವಾ ತೂಕ ತಗ್ಗಿಸುವ ಮಾತ್ರೆಗಳ ಸಹಾಯವಿಲ್ಲದೆ ದೇಹದ ತೂಕ ತಗ್ಗಿಸಲು ಸಹಾಯವಾಗಿರುತ್ತದೆ. ಉತ್ತಮ ಗುಣಮಟ್ಟದ ಹಸಿರು ಚಹಾ ಎಲೆಗಳನ್ನು ಕುದಿಯುವ ನೀರಿನಲ್ಲಿ ಹಾಕಿ ಒಂದೆರಡು ನಿಮಿಷ ಕುದಿಸಬೇಕು. ನಂತರ ಈ ಹಸಿರು ಚಹಾವನ್ನು ಸೇವಿಸುವುದು. ಹೀಗೆ ಪ್ರತಿ ದಿನ ಎರಡು ಮೂರು ಸಲ ಮಾಡಿದಲ್ಲಿ ಕೆಲವೇ ದಿನಗಳಲ್ಲಿ ಪರಿಣಾಮವನ್ನು ಕಾಣಬಹುದು.

ಮೀನು:

ಮೀನು:

ಗ್ರಿಲ್ ಮಾಡಿದ ಮೀನು, ಮೀನಿನ ಸಾರು ಇವುಗಳು ಮೈ ತೂಕ ಹೆಚ್ಚಿಸುವುದಿಲ್ಲ, ಆದರೆ ನಮ್ಮನ್ನು ಆರೋಗ್ಯವಂತರನ್ನಾಗಿ ಮಾಡುತ್ತದೆ.

ಡ್ರೈ ಫ್ರೂಟ್ಸ್:

ಡ್ರೈ ಫ್ರೂಟ್ಸ್:

ನಿಮ್ಮ ಮೈ ತೂಕವನ್ನು ಕಡಿಮೆ ಮಾಡಬೇಕೆಂದರೆ ಒಳ್ಳೆಯ ಕೊಬ್ಬಿನಂಶವಿರುವ ಆಹಾರ ತಿನ್ನಬೇಕು. ಬಾದಾಮಿ, ವಾಲ್ ನಟ್ಸ್ ಇವೆಲ್ಲಾ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.

ಶುಂಠಿ:

ಶುಂಠಿ:

ಶುಂಠಿ ಟೀ ಕುಡಿಯಿರಿ ಒಳ್ಳೆಯದು. ಅಡುಗೆಗೆ ಶುಂಠಿ ಹಾಕಿ, ಶುಂಠಿ ಹೊಟ್ಟೆಯಲ್ಲಿರುವ ಕೊಬ್ಬನ್ನು ಕರಗಿಸುವ ಸಾಮರ್ಥ್ಯ ಹೊಂದಿದೆ.


English summary

Tips to reduce belly fat stomach

Belly fat stomach not only spoil your look, but also spoil your health. So it''s better to reduce stomach fat for healthy body. Here is some effective tips to reduce belly fat.
X
Desktop Bottom Promotion