For Quick Alerts
ALLOW NOTIFICATIONS  
For Daily Alerts

ಧೂಮಪಾನದಿಂದ ಮುಕ್ತಿ ಹೊಂದಲು ಇಲ್ಲಿದೆ ಸುಲಭ ಸಲಹೆಗಳು

|

ಸಿಗರೇಟು ಸೇದುವ ಎಲ್ಲರೂ ಹೇಳುವ ಸಾಮಾನ್ಯ ಮಾತುಗಳೆಂದರೆ ಸಿಗರೇಟು ಬಿಡಬೇಕು, ನಾಳೆಯಿಂದ ಕಡಿಮೆ ಮಾಡಬೇಕು, ಒಂದೊಂದಾಗಿ ಕಡಿಮೆ ಮಾಡಿ ಬಿಟ್ಟೇ ಬಿಡುತ್ತೇನೆ ಎಂದು. ಆದರೆ ಇದು ಸಾಧ್ಯವಾಗುವುದು ಲಕ್ಷಕ್ಕೆ ಒಬ್ಬರಿಗೆ ಮಾತ್ರ. ಉಳಿದವರು ಪ್ರತಿದಿನ ಹೇಳುತ್ತಲೇ ಇರುತ್ತಾರೆ. ಕೇಳುವವರು ಕೇಳುತ್ತಲೇ ಇರುತ್ತಾರೆ. ಬೇರೆ ವ್ಯಸನಗಳಿಗೆ ಹೋಲಿಸಿದರೆ ಇದು ಬಿಡಲು ಬಹಳ ಕಷ್ಟಕರವಾದ ವ್ಯಸನವಾಗಿದೆ.

ಏನಾದರೂ ಮಾಡಬೇಕು ಎಂದಿರುವವರಿಗೆ ದಾರಿಗಳು ಹತ್ತು ಹಲವು. ಹೀಗೆಯೇ ಸಿಗರೇಟು ಬಿಡುವ ವಿಚಾರದಲ್ಲೂ. ಸಿಗರೇಟಿನ ವ್ಯಸನವನ್ನು ಗೊತ್ತಿದ್ದು ಬಿಡಲು, ನಮಗೆ ಗೊತ್ತಿಲ್ಲದಂತೆ ಬಿಡಿಸಲು ಅನೇಕ ದಾರಿಗಳಿವೆ. ಇವುಗಳಲ್ಲಿ ಬಹಳ ಮುಖ್ಯವಾದ ವಿಧಾನ ನಿಕೋಟಿನ್ ಪ್ಯಾಚಸ್, ಹಿಪ್ನೋಸಿಸ್ ಮತ್ತು ಔಷಧಿಗಳು ಇತ್ಯಾದಿ.

Tips for quitting smoking for men

ಆಧುನಿಕ ಯುಗದಲ್ಲಿ ಬೀಡಿ ಸಿಗರೇಟು ಸೇವನೆ ಒಂದು ಫ್ಯಾಶನ್ ಆಗಿಬಿಟ್ಟಿದೆ. ಬ್ಯುಸಿನೆಸ್ ವಲಯದಲ್ಲಿ ಇದಿಲ್ಲದೆ ಮಾತೇ ನಡೆಯುವುದಿಲ್ಲ ಎಂಬಂತಹ ಪರಿಸ್ಥಿತಿ ಉಂಟಾಗಿಬಿಟ್ಟಿದೆ. ಆರೋಗ್ಯಕ್ಕೆ ಇದು ಹಾನಿಕಾರಕ ಎಂಬ ಅರಿವಿದ್ದರೂ ಅದನ್ನು ಎಳೆಯುವ ಉಮೇದು ಇನ್ನೂ ಹೆಚ್ಚಾಗಿದೆ.

ನೀವು ಧೂಮಪಾನವನ್ನು ಹೆಚ್ಚು ಹೆಚ್ಚು ಅಂಟಿಕೊಂಡಷ್ಟು ಅದು ನಿಮ್ಮನ್ನು ಆವರಿಸುವುದು ಜಾಸ್ತಿಯಾಗುತ್ತದೆ. ಈ ವ್ಯಸನವನ್ನು ತ್ಯಜಿಸಲೇಬೇಕೆಂಬ ನಿರ್ಧಾರ ನಿಮ್ಮಲ್ಲಿರಬೇಕು ಹಾಗೂ ಅದಕ್ಕೆ ಪೂರಕವಾಗಿ ನಡೆದುಕೊಳ್ಳಬೇಕು ಧೂಮಪಾನವನ್ನು ತ್ಯಜಿಸಿದರೆ ಉಂಟಾಗುವ ಪ್ರಯೋಜನಗಳನ್ನು ನಾವಿಂದು ನಿಮಗೆ ತಿಳಿಸುತ್ತಿದ್ದೇವೆ. ಈ ಪರಿಣಾಮದಿಂದ ನಿಮ್ಮ ಧೂಮಪಾನ ವ್ಯಸನ ನಿಮ್ಮಿಂದ ದೂರಾಗಲಿ.

ಯೋಜನೆ ಹಾಕಿಕೊಳ್ಳಿ:
ಸಿಗರೇಟು ಬಿಡುವ ಕಾರ್ಯ ಯೋಜನೆ ಹಾಕಿಕೊಳ್ಳುವ ಮುನ್ನ ನಿಮ್ಮ ಧೂಮಪಾನ ಅಭ್ಯಾಸ ಬೆಳೆದ ಬಗೆಯನ್ನು ಗಮನಿಸಬೇಕಾಗಿದೆ. ಕೆಲಸದ ಒತ್ತಡದಿಂದಾಗಿ ಧೂಮಪಾನ ಆರಂಭಿಸಿದಿರಾ? ಅಥವಾ ಇನ್ನಾವುದಾದರೂ ಯೋಚನೆಯಿಂದ ದೂರವಿರಲು ಸಿಗರೇಟು ಆರಂಭವಾಯಿತೇ? ಎಂದು ಗಮನಿಸಿ. ದಿನದ ಅಥವಾ ಬದುಕಿನ ಯಾವ ಸನ್ನಿವೇಶದಲ್ಲಿ ನಿಮಗೆ ಸಿಗರೇಟು ಬೇಕಾಗುತ್ತದೆ ಎನ್ನುವ ಬಗ್ಗೆ ತಿಳಿಯಿರಿ. ಇದನ್ನು ತಿಳಿದರೆ ಹೇಗೆ ಬಿಡಬೇಕು ಎನ್ನುವುದನ್ನು ನಿರ್ಧರಿಸಲು ಸುಲಭ.

ಎಲೆಕ್ಟ್ರಾನಿಕ್ಸ್ ಸಿಗರೇಟ್ ಎಳೆದರೆ ಅಪಾಯವಿಲ್ಲವೇ?

ವ್ಯಾಯಾಮ ಮತ್ತು ಜಿಮ್:
ವ್ಯಾಯಾಮ ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರಿಗೂ ಗೊತ್ತು ಇದು ಸಿಗರೇಟು ಬಿಡುವ ಸಾಧನವೂ ಹೌದು. ದೈಹಿಕ ಚಟುವಟಿಕೆ ಮತ್ತು ವ್ಯಾಯಾಮ ಹೆಚ್ಚಾದಂತೆ ಸಿಗರೇಟು ಮತ್ತು ನಿಕೋಟಿನ್ ಅನ್ನು ಅಷ್ಟಾಗಿ ದೇಹ ಬೇಡುವುದಿಲ್ಲ. ಸಿಗರೇಟು ಬೇಕು ಎಂದಾಕ್ಷಣ ಅಂಗಡಿಗೆ ಹೋಗಿ ಸಿಗರೇಟು ಸೇದುವ ಬದಲಾಗಿ ಏನಾದರೂ ದೈಹಿಕ ವ್ಯಾಯಾಮ ಮಾಡಿ. ಹೀಗೆ ಮಾಡಿದಾದ ಸ್ವಲ್ಪ ಕ್ಯಾಲರಿಗಳೂ ಕಡಿಮೆ ಆಗುತ್ತವೆ ಸಿಗರೇಟಿನ ಆಸೆಯೂ ತಗ್ಗುತ್ತದೆ.

ಗೆಳೆಯರಲ್ಲಿ ಚಾಲೆಂಜ್ ಮಾಡಿ:
ಏನಾದರೂ ದೊಡ್ಡ ಮಾತನಾಡಿ ಅದನ್ನು ಗೆಳೆಯರ ಮುಂದೆ ಸಾಧಿಸಲಾಗದೇ ಇದ್ದರೆ ಗೆಳೆಯರು ಯಾವ ರೀತಿ ನಮ್ಮನ್ನು ತಮಾಷೆ ಮಾಡುತ್ತಾರೆ ಎಂದು ನಮಗೆ ಗೊತ್ತಿರುವ ವಿಷಯವೇ ಆಗಿದೆ. ಇದನ್ನೇ ಒಂದು ಸಾಧನವನ್ನಾಗಿಸಿ ಗೆಳೆಯರ ಮುಂದೆ ಸಿಗರೇಟು ಬಿಡುತ್ತೇನೆ ಎಂದು ಹೇಳಿ ಆ ಮಾತನ್ನು ಉಳಿಸಿಕೊಳ್ಳುವುದಕ್ಕಾದರೂ ಸಿಗರೇಟು ಬಿಡಿ.

ಮದ್ಯಪಾನ ಮತ್ತು ತಂಪು ಪಾನೀಯಗಳನ್ನು ದೂರವಿಡಿ:
ಮದ್ಯಪಾನ ಮತ್ತು ಧೂಮಪಾನ ಒಂದೇ ನಾಣ್ಯದ ಎರಡು ಮುಖ ಎಂದರೆ ತಪ್ಪಾಗಲಾರದು!. ಮದ್ಯಪಾನ ಧೂಮಪಾನವನ್ನು ಹೆಚ್ಚಿಸಲು ಒಂದು ಕಾರಣ. ಹೀಗಾಗಿ ಧೂಮಪಾನ ಬಿಡುವ ನಿರ್ಧಾರ ಮಾಡಿದ ದಿನದಿಂದ ಮದ್ಯಪಾನಕ್ಕೆ ಸ್ಬಲ್ಪ ಕಡಿವಾಣ ಹಾಕಿ. ತಂಪು ಪಾನೀಯಗಳು, ಚಹಾ ಮತ್ತು ಕಾಫಿ ಇವೆಲ್ಲವೂ ಸಿಗರೇಟಿನ ನಶೆಯನ್ನು ಹೆಚ್ಚಿಸಲು ಮತ್ತು ಸಿಗರೇಟನ್ನು ಮತ್ತಷ್ಟು ರುಚಿಕರ ಮಾಡಲು ನೆರವಾಗುತ್ತವೆ ಹಾಗಾಗಿ ಇವನ್ನೂ ಬಿಟ್ಟು ಬಿಡಿ. ಕೆಲವರು ತಮ್ಮ ಪಾನೀಯ ಸೇವನೆಯ ವಿಧಾನವನ್ನು ಬದಲಾಯಿಸಿದ ಕೂಡಲೆ ಧೂಮಪಾನ ಬಿಡಲು ಸಾಧ್ಯವಾಯಿತು ಎಂದಿದ್ದಾರೆ.

ಒತ್ತಡವನ್ನು ನಿಭಾಯಿಸಿ:
ಸಿಗರೇಟು ಆರಂಭವಾಗಲು ಕ್ರೇಜ಼್ ಕಾರಣವಾಗುವುದು ಹೆಚ್ಚು ಅದೇ ಅದೊಂದು ವ್ಯಸನವಾಗಲು ಒತ್ತಡ ಕಾರಣವಾಗುವುದು ಹೆಚ್ಚು. ಸಿಗರೇಟು ಸೇದಿದ ಕೂಡಲೆ ಸ್ವಲ್ಪ ಟೆನ್ಶನ್ ಕಡಿಮೆ ಆಯಿತಪ್ಪ ಎನ್ನುವ ಅದೆಷ್ಟೋ ಜನರಿದ್ದಾರೆ. ಆದರೆ ಸಿಗರೇಟು ಬಿಟ್ಟ ಮೇಲೆ ಈ ಒತ್ತಡವನ್ನು ನಿಭಾಯಿಸಲು ಬೇರೇನಾದರೂ ದಾರಿ ನಾವೇ ಹುಡುಕಬೇಕಾಗುತ್ತದೆ. ನಿಯಮಿತವಾಗಿ ಮಸಾಜ್ ಮಾಡಿಸಿಕೊಳ್ಳಿ, ಸಂಗೀತವನ್ನು ಆಲಿಸಿ, ಯೋಗವನ್ನು ಕಲಿಯಿರಿ ಸಾಧ್ಯವಾದಷ್ಟು ಒತ್ತಡ ತರಿಸುವ ಸನ್ನಿವೇಶಗಳನ್ನು ದೂರವಿರಿಸಿ.

ಬೇಕಿಂಗ್ ಸೋಡಾ, ಕಾಕ್ ಟೈಲ್:
ಬೇಕಿಂಗ್ ಸೋಡಾ ಮೂತ್ರದಲ್ಲಿ ಪಿ.ಎಚ್ ಮೌಲ್ಯವನ್ನು ಹೆಚ್ಚಿಸುತ್ತದೆ. ಇದು ನಮ್ಮ ದೇಹದಲ್ಲಿರುವ ನಿಕೋಟಿನ್ ಅಂಶವನ್ನು ಬೇಗನೆ ಖಾಲಿಯಾಗಲು ಬಿಡುವುದಿಲ್ಲ. ಹೀಗಾಗಿ ನಾವು ಸಿಗರೇಟಿಗಾಗಿ ಹೆಚ್ಚು ಹೆಚ್ಚು ಆಸೆ ಪಡುವುದನ್ನು ತಪ್ಪಿಸಬಹುದು. ಎರಡನೆಯ ವಿಧಾನವೆಂದರೆ ಎರಡು ಚಮಚ ಬೇಕಿಂಗ್ ಸೋಡಾವನ್ನು ನೀರಿನಲ್ಲಿ ಬೆರೆಸಿ ಪ್ರತಿ ಬಾರಿ ಊಟವಾದ ಮೇಲೆ ಸೇವಿಸಬಹುದು.

ಹಣ್ಣುಗಳು ಮತ್ತು ತರಕಾರಿಗಳು:
ಹಣ್ಣುಗಳು ಮತ್ತು ತರಕಾರಿಗಳು ಎಲ್ಲದಕ್ಕೂ ಒಳ್ಳೆಯದೂ ಅದೇ ರೀತಿ ಸಿಗರೇಟು ವ್ಯಸನಕ್ಕೂ ಒಳ್ಳೆಯದೂ. ಹಾಲು, ಕ್ಯಾರೆಟ್, ಹಣ್ಣುಗಳು ಮತ್ತು ತರಕಾರಿಗಳು ಸಿಗರೇಟು ಸೇದುವ ಮುನ್ನ ಸೇವಿಸಿದ್ದರೆ ಸಿಗರೇಟನ್ನು ಕಹಿಯನ್ನಾಗಿಸುತ್ತದೆ. ಸಿಗರೇಟು ಬೇಡ ಅನ್ನಿಸುವ ಹಾಗೆ ಮಾಡಿದರೆ ಅದೇ ಒಳ್ಳೆಯದು ಅಲ್ಲವೇ?

ಗೆಳೆಯರ ಜೊತೆಗೆ ಸಿಗರೇಟು ಬಿಡುವ ನಿರ್ಧಾರ ಮಾಡಿ:
ಫ್ರೆಂಡ್ ಇನ್ ನೀಡ್ ಈಸ್ ಅ ಫ್ರೆಂಡ್ ಇನ್ ಡೀಡ್ ಎನ್ನುವ ಮಾತು ನೆನಪಿಡಿ ಹಾಗೂ ನಿಮ್ಮ ಹಾಗೆಯೇ ಸಿಗರೇಟು ಬಿಡಬೇಕು ಎನ್ನುವ ಆಲೋಚನಯೆಲ್ಲಿರುವ ಗೆಳೆಯನನ್ನು ಆರಿಸಿಕೊಳ್ಳಿ. ಇಬ್ಬರೂ ಸೇರಿ ಸಿಗರೇಟನ್ನು ಬಿಡುವ ಪ್ರಯತ್ನ ಮಾಡಿ ಹಾಗೂ ಒಬ್ಬರು ಇನ್ನೊಬ್ಬರಿಗೆ ಸಹಾಯ ಮಾಡಿ.

ವಿಟಮಿನ್ ಸಿ ಇರುವ ಆಹಾರ ಸೇವಿಸಿ:
ಉದಾಹರಣೆಗೆ ಕಿತ್ತಳೆ, ಲಿಂಬೆಹಣ್ಣು, ಆಮ್ಲಾ, ಸೀಬೆಹಣ್ಣು ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಯನ್ನು ಹೊಂದಿರುತ್ತದೆ ಹಾಗೂ ಇದು ಧೂಮಪಾನದ ಆಸೆಯನ್ನು ಹತ್ತಿಕ್ಕುತ್ತದೆ. ಇದಕ್ಕೆ ಮುಖ್ಯ ಕಾರಣ ಸಿಗರೇಟು ನಿಮಗೆ ವಿಟಮಿನ್ ಸಿ ಯ ಕೊರೆತಯನ್ನು ಹುಟ್ಟಿಸುತ್ತದೆ ಹಾಗೂ ಇದರ ಜಾಗವನ್ನು ಸಿಗರೇಟು ಆಕ್ರಮಿಸುತ್ತದೆ.

ಧೂಮಪಾನದಿಂದ ಉಂಟಾಗುವ ದುಷ್ಟರಿಣಾಮಗಳೇನು?

ನಿಮಗೆ ನೀವೆ ಏನಾದರೂ ಉಡುಗೊರೆಗಳನ್ನು ನೀಡಿ:
ಆರೋಗ್ಯದ ಜೊತೆಗೆ ಸಿಗರೇಟನ್ನು ಬಿಡುವಾಗ ನೀವು ನಿಮ್ಮ ಪಾಕೆಟ್ಟಿಗೂ ಬಹಳ ಸಹಾಯ ಮಾಡಿದಂತಾಗುತ್ತದೆ! ನೀವು ಸಿಗರೇಟನ್ನು ಬಿಟ್ಟಾಗ ಅದರ ಅರ್ಧ ಹಣದಲ್ಲಿ ನಿಮಗೇ ನೀವೇ ಏನನ್ನಾದರೂ ಉಡುಗೊರೆಯ ರೂಪದಲ್ಲಿ ನೀಡುವ ಮೂಲಕ ಸಿಗರೇಟು ಬಿಡುವ ಆಸೆಯನ್ನು ಕಾರ್ಯರೂಪಕ್ಕೆ ತನ್ನಿ.

ನಿಮಗೆ ನೀವೇ ದಂಡ ವಿಧಿಸಿ!
ದಂಡ ಎಂದ ಕೂಡಲೇ ನಾವು ಬೇರೆಯವರಿಗೆ ಅಥವಾ ಬೇರಯವರಿಗೆ ನಾವು ವಿಧಿಸುವ ಶುಲ್ಕ ಎಂಬ ಕಲ್ಪನೆ ಬರುತ್ತದೆ. ಆದರೆ ಸಿಗರೇಟು ಸೇದಿದ ಕೂಡಲೇ ನಿಮಗೆ ನೀವೇ ದಂಡ ವಿಧಿಸಿದರೆ ಹೇಗಿರುತ್ತದೆ? ಇದನ್ನು ಪ್ರಯತ್ನಿಸಿ.

ಉಪ್ಪು ಪದಾರ್ಥಗಳು
ಚಿಪ್ಸ್, ಉಪ್ಪಿನಕಾಯಿಯಂತಹ ಉಪ್ಪುಪ್ಪಾದ ತಿಂಡಿಗಳು ಮತ್ತು ಆಹಾರ ಪದಾರ್ಥಗಳು ಸಿಗರೇಟು ಬೇಕು ಎಂದಾಗ ಸೇವಿಸಿನೋಡಿ. ಇದು ನಿಮಗೆ ಸಹಾಯಕವಲ್ಲ ಎನ್ನಿಸಿದರೆ ಸಿಗರೇಟು ಬೇಕು ಎಂದ ಕೂಡಲೆ ಸ್ವಲ್ಪ ಉಪ್ಪನ್ನು ನಾಲಗೆಗೆ ಹಚ್ಚಿ ನೋಡಿ.

ಹಲ್ಲುಗಳನ್ನು ಸ್ವಚ್ಛವಾಗಿಡಿ.
ನಿಮ್ಮ ಹಲ್ಲುಗಳನ್ನು ಸ್ಚಚ್ಛವಾಗಿಡಿ ಹಾಗೂ ಪ್ರತಿ ದಿನವೂ ಅವನ್ನು ಹಾಗೆಯೇ ಕಾಣಲು ಇಷ್ಟಪಡಿ. ಸಿಗರೇಟು ಸೇದಿದರೆ ನಿಮ್ಮ ಹಲ್ಲುಗಳು ಹೇಗೆ ತಮ್ಮ ಹೊಳಪನ್ನು ಹಾಗೂ ಬಿಳುಪನ್ನು ಕಳೆದುಕೊಳ್ಳುತ್ತವೆ ಎಂದು ನೆನಪಿಸಿಕೊಳ್ಳಿ.

ನಿಮ್ಮನ್ನು ನೀವೇ ಧೂಪಪಾನ ಬಿಟ್ಟ ಹಾಗೆ ಕಲ್ಪಿಸಿಕೊಳ್ಳಿ:
ನಾನು ಹಾಗಾಗೆಬೇಕು ಹೀಗಾಗಬೇಕು, ಸೂಪರ್ ಮ್ಯಾನ್ ಆಗಬೇಕು ಎಂಬ ಕನಸು ಎಲ್ಲರೂ ಒಂದಲ್ಲ ಒಂದು ದಿನ ಕಂಡವರೇ ಆಗಿದ್ದೇವೆ. ಆದರೆ ಇದಲ್ಲಾ ಸಾಧ್ಯವಾಗದ ಮಾತು. ಆದರೆ ಸಿಗರೇಟು ಬಿಡಬೇಕು ಎಂದು ಕನಸು ಕಾಣಲೂ ಸಾಧ್ಯ ನಿಜವಾಗಿ ಸಾಧಿಸಲೂ ಸಾಧ್ಯ. ಹೀಗಾಗಿ ಮೊದಲು ಕನಸು ಕಾಣಿ. ನಂತರ ಅದನ್ನಿ ನಿಜವನ್ನಾಗಿ ಪರಿವರ್ತಿಸಿ.

ಆತ್ಮವಿಶ್ವಾಸ ಇರಲಿ
ಸಿಗರೇಟು ಬಿಡಬೇಕು ಎಂದು ನಿರ್ಧರಿಸಿದ ದಿನದಿಂದ ನಿಮ್ಮಲ್ಲಿ ನೀವೆ ನಂಬಿಕೆ ಇಟ್ಟುಕೊಳ್ಳಿ. ನೀವು ನಿಮ್ಮ ಬದುಕಿನಲ್ಲಿ ಮಾಡಿದ ಕಷ್ಟವಾದ ಕೆಲಸಗಳನ್ನು ನೆನಪಿಸುತ್ತಾ ಇದು ಅದಕ್ಕಿಂತ ಕಷ್ಟವಾದ ಕೆಲಸವಲ್ಲ ಎಂದು ನಿಮಗೆ ನೀವೇ ಹೇಳಿಕೊಳ್ಳಿ. ಧೈರ್ಯವಿರಲಿ. ದಾರಿಗಳು ಹಲವಿವೆ. ನಿಮಗೆ ಯಾವುದು ಸೂಕ್ತವೋ ಅದನ್ನೇ ಆರಿಸಿ. ಅದೇ ದಾರಿಯಲ್ಲಿ ಮುನ್ನಡೆಯಿರಿ.

Story first published: Wednesday, July 2, 2014, 16:54 [IST]
X
Desktop Bottom Promotion