For Quick Alerts
ALLOW NOTIFICATIONS  
For Daily Alerts

ಬೆನ್ನು ನೋವನ್ನು ಶಮನಗೊಳಿಸಲು ಸೂಕ್ತ ಸಲಹೆಗಳು

|

ಬೆನ್ನು ನೋವು ಇತ್ತೀಚೆಗೆ ಎಲ್ಲರಲ್ಲೂ ಕಂಡು ಬರುತ್ತಿರುವ ಒಂದು ಸಾಮಾನ್ಯ ಕಾಯಿಲೆಯಾಗಿದೆ. ಕಚೇರಿಯಲ್ಲಿ ಕುಳಿತು ಕೆಲಸ ಮಾಡುವ ನೌಕರನಿಂದ ಹಿಡಿದು ಗೃಹಿಣಿಯವರೆಗೆ ಎಲ್ಲಾ ವರ್ಗದ ಜನರು ಬೆನ್ನು ನೋವಿನಿಂದ ನರಳುತ್ತಿರುವುದು ಕಂಡು ಬರುತ್ತದೆ.

ಕೆಲವರಿಗೆ ದಿನಾಪೂರ್ತಿ ಓಡಾಡಿ ಕೆಲಸ ಮಾಡಿದಾಗ ಬೆನ್ನುನೋವು ಕಾಣಿಸಿಕೊಂಡರೆ ಮತ್ತೆ ಕೆಲವರಿಗೆ ಕುಳಿತಲ್ಲಿಯೇ ಕೆಲಸ ಮಾಡಿದಾಗ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಅಧಿಕ ಭಾರವಾದ ವಸ್ತುಗಳನ್ನು ಎತ್ತಿದಾಗ ಬೆನ್ನುನೋವು ಕಾಣಿಸಿಕೊಳ್ಳುತ್ತದೆ. ಇನ್ನು ಕೆಲವರಿಗೆ ವಯಸ್ಸಾಗುತ್ತಾ ಬಂದ ಹಾಗೆ ಮೂಳೆ ಸವೆತದಿಂದ ಬೆನ್ನುನೋವು ಉಂಟಾಗುವುದು.

Tips to prevent back pain relief

ಬೆನ್ನು ನೋವನ್ನು ಗುಣಪಡಿಸಲು ತುಂಬಾ ಕಾಳಜಿ ಬೇಕಾಗುತ್ತದೆ. ಬೆನ್ನು ನೋವನ್ನು ಸಾಂಪ್ರದಾಯಿಕವಾಗಿ ಗುಣಪಡಿಸಬಹುದು ಎಂದು ತಜ್ಞರು ಹೇಳುತ್ತಾರೆ. ಇದು ಒಳ್ಳೆಯ ಸುದ್ದಿಯಲ್ಲವೇ? ವಯಸ್ಸಾಗುತ್ತಿರುವಂತೆ ಅಂಗಾಂಶಗಳು ಹರಿಯುವುದರಿಂದ ಬೆನ್ನು ನೋವು ಪ್ರಾರಂಭವಾಗಹುದು. ಬೆನ್ನು ನೋವನ್ನು ತುಂಬಾ ಸರಳ ಮತ್ತು ಹೆಚ್ಚು ಪರಿಶ್ರಮವಿಲ್ಲದೆ ನಿವಾರಿಸಬಹುದು. ಈ ಸರಳ ತಂತ್ರಗಳನ್ನು ಅಳವಡಿಸಲು ಸಮಯ ತೆಗೆದುಕೊಳ್ಳಿ ಮತ್ತು ಬೆನ್ನು ನೋವಿನಿಂದ ಉಪಶಮನ ಪಡೆಯಿರಿ.

ಜೀವನ ಬಿಡುವಿಲ್ಲದಂತಾಗಿ ನಮ್ಮ ದೈನಂದಿನ ಕೆಲಸಗಳಿಗೆ ಸಮಯ ಸಿಗದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವೈದ್ಯರನ್ನು ಭೇಟಿಯಾಗುವುದು ಮತ್ತು ವೈದ್ಯರ ಕ್ಲಿನಿಕ್ ನಲ್ಲಿ ಗಂಟೆಗಟ್ಟಲೆ ಕಳೆಯುವುದು ಅಷ್ಟು ಸುಲಭವಲ್ಲ. ಬೆನ್ನು ನೋವಿನ ವಿಶೇಷವೆಂದರೆ ವೈದ್ಯರನ್ನು ಭೇಟಿಯಾಗದಿದ್ದರೂ ಅದು ಸರಿಯಾಗುತ್ತದೆ. ಬೆನ್ನು ನೋವಿನ ಉಪಶಮನಕ್ಕಾಗಿ ಪ್ರಯತ್ನಿಸಬಹುದಾದ ಕೆಲವೊಂದು ಅಂಶಗಳನ್ನು ಪ್ರಯತ್ನಿಸಬಹುದು ಮತ್ತು ಭವಿಷ್ಯದಲ್ಲಿ ಈ ಸಮಸ್ಯೆನ್ನು ಕಡೆಗಣಿಸಬಹುದು.

ಕತ್ತು ನೋವಿಗೆ ಯೋಗಾಭ್ಯಾಸ ಪರಿಹಾರಕೊಡುತ್ತದೆ

ಫಿಟ್ ನೆಸ್ ತುಂಬಾ ಮುಖ್ಯ
ಬೆನ್ನು ನೋವು ನಿವಾರಿಸಲು ಫಿಟ್ ಆಗಿರುವುದು ತುಂಬಾ ಮುಖ್ಯ. ದುರ್ಬಲ ಹೊಟ್ಟೆ ಮತ್ತು ಹಿಂಬದಿಯ ಸ್ನಾಯುಗಳು ನೋವನ್ನು ಉಂಟುಮಾಡುತ್ತದೆ. ಫಿಟ್ ಆಗಿರಲು ಪ್ರತೀ ದಿನ ವ್ಯಾಯಾಮ ಮಾಡಿ ಮತ್ತು ಯೋಗ ಅಭ್ಯಾಸ ಮಾಡಿ. ವ್ಯಾಯಾಮದಿಂದ ಸ್ನಾಯುಗಳು ಹೆಚ್ಚಿನ ಪ್ರಮಾಣದಲ್ಲಿ ಹಿಗ್ಗಿಸಲು ಮತ್ತು ಸಡಿಲಗೊಳಿಸಲು ಸಹಾಯಮಾಡುತ್ತದೆ. ಉದ್ಯಾನವನದಲ್ಲಿ ಕೆಲವು ನಿಮಿಷಗಳ ಕಾಲ ನಡೆದಾಡಿ ಅಥವಾ ಏರೋಬಿಕ್ಸ್ ಮಾಡಿದರೆ ಬೆನ್ನು ನೋವು ನಿವಾರಿಸಬಹುದು. ಇದು ನಿಮ್ಮ ಮನಸ್ಸಿಗೂ ಆರಾಮ ನೀಡುತ್ತದೆ.

ಧೂಮಪಾನ ಬಿಟ್ಟುಬಿಡಿ
ಧೂಮಪಾನ ಆರೋಗ್ಯಕ್ಕೆ ಹಾನಿಕರ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿದೆ. ಬೆನ್ನು ನೋವಿನ ಉಪಶಮನಕ್ಕೆ ಧೂಮಪಾನ ಬಿಟ್ಟುಬಿಡಿ. ಧೂಮಪಾನದಿಂದ ಇತರ ರೋಗಗಳಾದ ಶ್ವಾಸಕೋಶದ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ, ಅಧಿಕ ರಕ್ತದೊತ್ತಡ ಇತ್ಯಾದಿಗಳು ಬರಬಹುದು. ಧೂಮಪಾನ ಮಾಡದವರಿಗಿಂತ ಧೂಮಪಾನ ಮಾಡುವವರು ಹೆಚ್ಚಾಗಿ ಬೆನ್ನುನೋವಿನ ಸಮಸ್ಯೆಗೆ ಒಳಗಾಗುತ್ತಾರೆ ಎಂದು ಅಧ್ಯಯನಗಳು ಹೇಳಿವೆ. ಸಿಗರೇಟ್ ನಲ್ಲಿರುವ ನಿಕೋಟಿನ್ ಬೆನ್ನುನೋವಿಗೆ ಪ್ರಮಖು ಕಾರಣವೆಂದು ಪತ್ತೆಯಾಗಿದೆ. ಬೆನ್ನುನೋವಿನ ಉಪಶಮನಕ್ಕೆ ಧೂಮಪಾನದ ಅಭ್ಯಾಸವನ್ನು ಬಿಟ್ಟುಬಿಡಿ.

ಬೆನ್ನಿಗೆ ಮಸಾಜ್
ಬೆನ್ನಿಗೆ ಸರಿಯಾದ ಮಸಾಜ್ ಮಾಡುವುದರಿಂದ ನಿಮ್ಮ ಬೆನ್ನುನೋವು ಶಮನವಾಗಿ ಆರಾಮವನ್ನುಂಟುಮಾಡಬಹುದು. ಇದಕ್ಕಾಗಿ ಸ್ವಲ್ಪ ಹಣ ಖರ್ಚು ಮಾಡಬೇಕಾಗುತ್ತದೆ. ಮೊದಲು ನಿಮ್ಮ ಪಾಕೆಟ್ ನಲ್ಲಿ ಹಣ ತುಂಬಿಸಿ. ಮಸಾಜ್ ಮಾಡಿಸಿಕೊಳ್ಳುವಷ್ಟು ಹಣವಿಲ್ಲದಿದ್ದರೆ ಟೆನಿಸ್ ಬಾಲ್ ನಿಂದ ಬೆನ್ನಿನ ನೋವಿಗೆ ವಿರುದ್ಧವಾಗಿ ಮಸಾಜ್ ಮಾಡಿ. ಆಗ ನಿಮಗೆ ಬೆನ್ನು ನೋವು ಉಪಶಮನವಾಗುವುದು ತಿಳಿಯುತ್ತದೆ. ಮೇಲಿನ ಟಿಪ್ಸ್ ಗಳನ್ನು ಪಾಲಿಸಿ ಮತ್ತು ಬೆನ್ನು ನೋವಿನಿಂದ ಮುಕ್ತರಾಗಿ.

ವಿಟಮಿನ್ ಇರುವ ಆಹಾರ ಸೇವಿಸಿ
ಬೆನ್ನುನೋವನ್ನು ಗುಣಪಡಿಸಲು ನೀವು ತೆಗೆದುಕೊಳ್ಳಬೇಕಾದ ಮುಂದಿನ ಹೆಜ್ಜೆಯೆಂದರೆ ಸರಿಯಾಗಿ ವಿಟಮಿನ್ ತೆಗೆದುಕೊಳ್ಳಿ. ಬೆನ್ನು ನೋವು ನಿವಾರಿಸಲು ವಿಟಮಿನ್ ಬಿ' ಅನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ವಿಟಮಿನ್ ಬಿ' ಕೇಂದ್ರ ನರಮಂಡಲವನ್ನು ಬೆಂಬಲಿಸುತ್ತದೆ ಮತ್ತು ದೇಹದ ಪ್ರತಿರಕ್ಷಣೆಯನ್ನು ಸುಧಾರಿಸುತ್ತದೆ. ಬೆನ್ನು ನೋವಿರುವವರು ತಮ್ಮ ಆಹಾರ ಕ್ರಮದಲ್ಲಿ ಒಮೆಗಾ-3 ನ್ನು ಬಳಸಲು ಪ್ರಯತ್ನಿಸಿ.

ಸರಿಯಾಗಿ ನಿದ್ದೆ ಮಾಡಿ
ರಾತ್ರಿಯ ಸರಿಯಾದ ನಿದ್ರೆ ಬೆನ್ನು ನೋವಿಗೆ ಉಪಶಮನವಾಗಬಲ್ಲದು. ಸರಿಯಾದ ನಿದ್ರೆಯಿಲ್ಲದೆ ಬೆನ್ನು ನೋವು ಬರಬಹುದು. ಸರಿಯಾದ ನಿದ್ರೆ ಬಿದ್ದರೆ ಎಲ್ಲಾ ಹಾನಿಗೊಳಗಾದ ಸ್ನಾಯುಗಳ ದುರಸ್ತಿ ಮತ್ತು ಊತ ಕೀಲುಗಳು ಗುಣಪಡಿಸುತ್ತದೆ. ಒಳ್ಳೆಯ ಹಾಸಿಗೆಯಲ್ಲಿ ಮಲಗಿ. ಹಾಸಿಗೆ ತುಂಬಾ ಗಡುಸಾಗಿದ್ದರೆ ಅದು ನಿಮ್ಮ ದೇಹದಲ್ಲಿ ನೋವು ಉಂಟುಮಾಡಬಹುದು. ಒಳ್ಳೆಯ ಹಾಸಿಗೆ ಆಯ್ಕೆ ಮಾಡಿ ಮತ್ತು ವಿವಿಧ ಭಂಗಿಯಲ್ಲಿ ಮಲಗಲು ಪ್ರಯತ್ನಿಸಿ. ನಿಮಗೆ ಆರಾಮದಾಯಕವಾಗುವ ಭಂಗಿ ಆಯ್ಕೆ ಮಾಡಿ. ಬೆನ್ನುಮೂಳೆಯನ್ನು ಬಗ್ಗಿಸಿ ಮಲಗಲು ಪ್ರಯತ್ನಿಸಬೇಡಿ.

ಸರಿಯಾಗಿ ನೀರು ಕುಡಿಯಿರಿ
ಬೆನ್ನು ನೋವು ಕಾಣಿಸಿಕೊಂಡ ತಕ್ಷಣ ದೊಡ್ಡ ಗ್ಲಾಸ್ ನಲ್ಲಿ 2 ಗ್ಲಾಸ್ ಶುದ್ಧವಾದ ನೀರು ಕುಡಿಯಬೇಕು. ದಿನವೂ 8-10 ಗ್ಲಾಸ್ ನೀರು ಕುಡಿಯುವುದನ್ನು ಮಾತ್ರ ಮರೆಯಬೇಡಿ

ಕ್ಯಾಲ್ಸಿಯಂ ಇರುವ ಆಹಾರ ಸೇವಿಸಿ
ಬೆನ್ನು ನೋವು ನಿವಾರಣೆಗೆ ಅಧಿಕ ಕ್ಯಾಲ್ಸಿಯಂ ಇರುವ ಆಹಾರ ಸೇವಿಸಿ. ವೈದ್ಯರ ಸಲಹೆ ಮೇರೆಗೆ ಕ್ಯಾಲ್ಸಿಯಂ ಇರುವ ಮಾತ್ರೆಗಳನ್ನು ಸೇವಿಸಬಹುದು. ಅಲ್ಲದೆ ಪ್ರತಿನಿತ್ಯ 1-2 ಲೋಟ ಹಾಲು ಕುಡಿಯಬೇಕು.

English summary

Tips to prevent back pain relief

The good thing about back pain is that you can feel alright, even if you don’t visit a doctor. Here are a few things you can try to cure back pain and prevent further problems in future.
X
Desktop Bottom Promotion