For Quick Alerts
ALLOW NOTIFICATIONS  
For Daily Alerts

ಕೊಲೆಸ್ಟ್ರಾಲ್ ನಿಯಂತ್ರಿಸಲು ಕೆಲವೊಂದು ಸಲಹೆಗಳು

|

ದಿನಾ ಒತ್ತಡದ ಜೀವನ ಶೈಲಿಯಲ್ಲಿ ಪ್ರತಿಯೊಬ್ಬರು ಯಾವುದಾದರೂ ಒಂದು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದರ ಪರಿಣಾಮವಾಗಿ ಡಯಾಬಿಟಿಸ್, ಬೊಜ್ಜು ಮತ್ತು ರಕ್ತದೊತ್ತಡದಂತಹ ಸಮಸ್ಯೆಗಳು ತುಂಬಾ ಸಣ್ಣ ವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತಿದೆ. ಕಚೇರಿಯಲ್ಲಿ ದೀರ್ಘಕಾಲ ಮಾಡದಂತಹ ಕೆಲಸ ಇದಕ್ಕೆ ಕಾರಣವಾಗಿದೆ.

ಮಕ್ಕಳು ಮತ್ತು ವಯಸ್ಕರು ಸ್ವಲ್ಪ ಸಮಯ ತೆಗೆದುಕೊಂಡು ಹೊರಗಡೆ ಆಟವಾಡಬೇಕು ಅಥವಾ ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಕೈಯಲ್ಲಿ ಬಟಾಟೆ ಚಿಪ್ಸ್ ಹಿಡಿದುಕೊಂಡು ಗಂಟೆಗಟ್ಟಲೆ ಟಿವಿ ನೋಡುವುದು, ಕಂಪ್ಯೂಟರ್ ನಲ್ಲಿ ಗೇಮ್ಸ್ ಆಡುವುದು ಅಥವಾ ಸಾಮಾಜಿಕ ಜಾಲತಾಣಗಳಿಗೆ ಅಂಟಿಕೊಂಡಿರುವುದು ಸರಿಯಲ್ಲ. ಹಾಗಿದ್ದರೆ ಕೊಲೆಸ್ಟ್ರಾಲ್‌ನ್ನು ನಿಯಂತ್ರಿಸುವುದು ಹೇಗೆ ಮತ್ತು ಇದನ್ನು ನಿಯಂತ್ರಿಸುವುದು ಹೇಗೆ?

ಕೆಳಗೆ ಪಟ್ಟಿ ಮಾಡಲಾಗಿರುವ ಕೆಲವೊಂದು ಮಹತ್ವದ ಟಿಪ್ಸ್‌ಗಳು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಹಾಗೂ ಹೃದಯ ರೋಗದ ಸಾಧ್ಯತೆಯನ್ನು ಕೂಡ ಕಡಿಮೆ ಮಾಡಬಹುದು.

Tips to balance cholesterol

ಕಣ್ತುಂಬ ನಿದ್ದೆಗಾಗಿ ಇಲ್ಲಿದೆ 10 ಸೂಕ್ತ ಸಲಹೆಗಳು!

ತೂಕ ಇಳಿಸಲು ಪ್ರಯತ್ನಿಸಿ.

ಇದು ನೈಸರ್ಗಿಕವಾಗಿ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸಲು ಅತ್ಯುತ್ತಮ ವಿಧಾನ. ಆರೋಗ್ಯಕರ ತಿನ್ನುವ ವಾಡಿಕೆ ಅಳವಡಿಸಿ. ಚಾ, ಕಾಫಿ ಮತ್ತು ಫಾಸ್ಟ್ ಫುಡ್ ನಂತಹ ಆಹಾರ ಸೇವನೆ ಕಡಿಮೆ ಮಾಡಿ ಮತ್ತು ನೈಸರ್ಗಿಕ ಮತ್ತು ಆ್ಯಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಆರೋಗ್ಯಕರ ಆಹಾರಗಳನ್ನು ತಿನ್ನಿ. ತಾಜಾ ಹಣ್ಣುಗಳು, ಬೀನ್ಸ್ ಮತ್ತು ಹಸಿರೆಲೆ ತರಕಾರಿಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿ. ಇದನ್ನು ಪಾಲಿಸಿದರೆ ಮುಂದಿನ ಕೆಲವೇ ದಿನಗಳಲ್ಲಿ ನಿಮ್ಮ ತೂಕ ಮತ್ತು ಕೊಲೆಸ್ಟ್ರಾಲ್ ಮಟ್ಟದಲ್ಲಿ ವ್ಯತ್ಯಾಸ ಕಾಣಬಹುದು.

ವ್ಯಾಯಮ ಮಾಡಿ:

ಕೊಲೆಸ್ಟ್ರಾಲ್ ಮಟ್ಟವನ್ನು ನೈಸರ್ಗಿಕವಾಗಿ ಕಡಿಮೆಗೊಳಿಸಲು ಮತ್ತೊಂದು ಅಗ್ಗ ಮತ್ತು ಸುಲಭದ ವಿಧಾನವೆಂದರೆ ಅದು ವ್ಯಾಯಾಮ. ದಿನಾಲೂ ಕನಿಷ್ಠ 30 ನಿಮಿಷ ನಡೆಯುವುದರಿಂದ ನೀವು ಕೊಲೆಸ್ಟ್ರಾಲ್ ಮಟ್ಟ ತಗ್ಗಿಸಬಹುದು. ದಿನಾ ಆಫೀಸ್‌ಗೆ ಹೋಗುವಾಗ ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗುವುದನ್ನು ಅಭ್ಯಾಸ ಮಾಡಿಕೊಳ್ಳಿ. ಯಾವುದಾದರೂ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ.

ಮೆಗಾ 3 ಮತ್ತು ಒಮೆಗಾ 6 ನಂತಹ ಕೊಬ್ಬಿನಂಶಗಳನ್ನು ಬಳಸಿ:

ಕೆಟ್ಟ ಕೊಲೆಸ್ಟ್ರಾಲ್ ಅನ್ನು ಅತ್ಯುತ್ತಮ ರೀತಿಯಲ್ಲಿ ನಿಯಂತ್ರಿಸಲು ಒಮೆಗಾ-3 ಕೊಬ್ಬಿನಾಂಶಗಳು ಅಧಿಕವಿರುವ ಆಹಾರಗಳನ್ನು ಬಳಸಿ. ಕೊಬ್ಬಿನಾಂಶಗಳು ಹೆಚ್ಚಾಗಿರುವ ಮೀನನ್ನು ಸೇವಿಸಲು ಮರೆಯದರಿ. ಇದು ಆರೋಗ್ಯಕ್ಕೆ ಒಳ್ಳೆಯದು. ಬಾದಾಮಿ, ಹಾಲು ಮತ್ತು ಆಕ್ರೋಟಾದಲ್ಲೂ ಈ ಅಂಶವು ಸಮೃದ್ಧವಾಗಿದೆ.

ಓಟ್ ಮೀಲ್ ನಿಜವಾಗಿಯೂ ತೂಕ ಇಳಿಸುತ್ತದೆಯಾ?

ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಬಳಸಿ:

ಈರುಳ್ಳಿ ಹಾಗೂ ಬೆಳ್ಳುಳ್ಳಿ ನಿಮ್ಮ ಹೃದಯಕ್ಕೆ ತುಂಬಾ ಒಳ್ಳೆಯದು. ಇದನ್ನು ನಿಮ್ಮ ಆಹಾರ ಅಥವಾ ಸಲಾಡ್‌ಗಳಲ್ಲಿ ಬಳಸಿ. ಸಾಧ್ಯವಾದಷ್ಟು ಮಟ್ಟಿಗೆ ಬೆಳ್ಳುಳ್ಳಿ ಬಳಸಿ, ಇದು ಕೊಲೆಸ್ಟ್ರಾಲ್ ಮಟ್ಟವನ್ನು ನೈಸರ್ಗಿಕವಾಗಿ ನಿಯಂತ್ರಿಸುತ್ತದೆ.

ಆಲೀವ್ ಎಣ್ಣೆ ಬಳಸಿ:

ತರಕಾರಿ ಎಣ್ಣೆ, ಗಿಣ್ಣು, ಬೆಣ್ಣೆಯನ್ನು ಬದಲಾಯಿಸಿ ಮತ್ತು ಇದರ ಬದಲಿಗೆ ಆಲೀವ್ ಎಣ್ಣೆ ಮತ್ತು ಕ್ಯಾನೊಲಾ ಎಣ್ಣೆ ಬಳಸಿ. ಈ ಪದಾರ್ಥಗಳನ್ನು ನಿಮ್ಮ ಆಹಾರದ ತಯಾರಿ ಮತ್ತು ಸಲಾಡ್‌ಗಳ ಅಲಂಕಾರಕ್ಕೆ ಬಳಸಿ. ಇದರಿಂದ ನಿಮ್ಮ ಹೃದಯಕ್ಕೆ ಅತ್ಯಾದ್ಭುತ ಲಾಭವಿದೆ.

ಧೂಮಪಾನ ತ್ಯಜಿಸಿ.
ಇದು ನಿಮ್ಮ ಹೃದಯ ಮತ್ತು ಶ್ವಾಸಕೋಶಕ್ಕೆ ತುಂಬಾ ಕೆಟ್ಟದ್ದು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಉಂಟುಮಾಡುತ್ತದೆ.

English summary

Tips to balance cholesterol

The stressful lifestyle that we are exposed to on a daily basis, have started taking its toll on this generations health for bad. As a result most of us suffer from diabetes, obesity and blood pressure issues at a very young age now.
Story first published: Saturday, April 26, 2014, 13:12 [IST]
X
Desktop Bottom Promotion