For Quick Alerts
ALLOW NOTIFICATIONS  
For Daily Alerts

ಶರೀರದ ತೂಕ ಇಳಿಸಲು ಭಾರತೀಯ ಶೈಲಿಯ ವಿದ್ಯೆಗಳು!

By Super
|

ಬಹಳಷ್ಟು ಭಾರತೀಯರು ತಮ್ಮ ಶರೀರದ ತೂಕವನ್ನು ಇಳಿಸಿಕೊಳ್ಳಲು ಡಯಟ್ ಮಾಡಲು ಬಯಸುತ್ತಾರೆ. ತೂಕ ಕಡಿಮೆ ಮಾಡುವ ಅವೈಜ್ಞಾನಿಕ ವಸ್ತುಗಳು ಸೇರಿ ಮಾರುಕಟ್ಟೆಯಲ್ಲಿ ಬಹಳಷ್ಟು ವಸ್ತುಗಳು ನಿಮ್ಮ ತೂಕ ಕಡಿಮೆಮಾಡಿಕೊಳ್ಳುವುದಕ್ಕೆ ಸಹಾಯವಾಗಲು ದೊರಕುತ್ತವೆ. ಆದರೆ, ತ್ವರಿತವಾಗಿ ನಾವು ಸೇವಿಸುವ ಕ್ಯಾಲೋರಿಗಳನ್ನು ಕಡಿಮೆಮಾಡಿಕೊಳ್ಳಲು ಕಟ್ಟುನಿಟ್ಟದ ಆಹಾರ ಪದ್ಧತಿಯನ್ನು ಅನುಸರಿಸುವುದು ಉತ್ತಮವಾದುದು.

ಜನರು ಸಾಮಾನ್ಯವಾಗಿ ಮಸಾಲೆಗಳು ಮತ್ತು ತೈಲ ಸಮೃದ್ಧವಾದ ಭಾರತೀಯ ಆಹಾರಗಳು ಒಳ್ಳೆಯದೆಂದು ತಪ್ಪು ತಿಳುವಳಿಕೆಯಿಂದಿದ್ದಾರೆ. ಆದರೆ ಸತ್ಯಾಂಶವೇನೆಂದರೆ ಭಾರತೀಯ ಆಹಾರಗಳು ಅನಾರೋಗ್ಯಕರವೆಂದು ಕಂಡರೂ ಅವುಗಳಲ್ಲಿ ತೂಕ ಕಡಿಮೆ ಮಾಡುವ ಅಂಶಗಳನ್ನು ಹೊಂದಿರುತ್ತವೆ.

ಉದಾಹರಣೆಗೆ ಆಹಾರಗಳಲ್ಲಿ ಮೀನು, ಧಾನ್ಯಗಳು ಮತ್ತು ಬೇಳೆಗಳು ನಮ್ಮ ಭಾರತೀಯರ ದಿನ ನಿತ್ಯದ ಊಟದ ಭಾಗವಾಗಿ ನೀವು ಈ ಆಹಾರಗಳನ್ನು ಪ್ರತಿದಿನವೂ ಸೇವಿಸಿದರೆ ಅಂದಾಜು 500 ಕ್ಯಾಲೋರಿ ನಿಮ್ಮ ದೇಹದಲ್ಲಿ ಸೇರುತ್ತದೆ. ಇಷ್ಟು ಸೇವಿಸಿದರೆ ನಿಮ್ಮ ದಿನಪೂರ್ತಿ ಮಾಡುವ ಕೆಲಸಗಳಿಗೆ ಸಾಕು. ತೂಕ ಕಡಿಮೆಮಾಡಿಕೊಳ್ಳುವ ಕಾರ್ಯಕ್ರಮದಲ್ಲಿದ್ದಾಗ ನೀವು ಪ್ರತಿದಿನ ಸುಮಾರು 1200 ಕ್ಯಾಲೋರಿ ಆಹಾರವನ್ನು ಸೇವಿಸಿ, ಜಿಮ್ಮಿನಲ್ಲಿ (ಅಥವ ದೈಹಿಕ ವ್ಯಾಯಾಮ ಮಾಡಿ) 1000 ಕ್ಯಾಲೋರಿ ಬರ್ನ್ ಮಾಡಬೇಕು. ಕೇವಲ ಒಂದೇ ವಾರದಲ್ಲಿ ತೂಕ ಇಳಿಸಿಕೊಳ್ಳುವುದು ಹೇಗೆ?

ತೂಕ ಇಳಿಸಿಕೊಳ್ಳಲು ಈ ಭಾರತೀಯ ಆಹಾರ ಪದ್ಧತಿಯನ್ನು ಅನುಸರಿಸಿದರೆ ಮುಂದಿನ ಕೆಲವೇ ತಿಂಗಳುಗಳಲ್ಲಿ ಸಾಕಷ್ಟು ಬದಲಾವಣೆಗಳು ಕಾಣುತ್ತೀರಿ. ನಿಮ್ಮ ಪ್ರತಿದಿನದ ಭಾರತೀಯ ಊಟದಲ್ಲಿ ನಿಮ್ಮ ತೂಕ ಹೆಚ್ಚಾಗದಂತೆ ದೂರವಿರಲು ಈ ಕೆಳಕಂಡ ಆಹಾರಗಳನ್ನು ಸೇರಿಸಿರಿ. ಈ ಆರೋಗ್ಯಕರ ಆಹಾರಗಳೇನು ಎಂಬುದನ್ನು ನೋಡೋಣ ಬನ್ನಿ:

ಕೆಂಪು ಅಕ್ಕಿ

ಕೆಂಪು ಅಕ್ಕಿ

ಅಕ್ಕಿಯನ್ನು ಸಂಪೂರ್ಣವಾಗಿ ತ್ಯಜಿಸಿವುದು ತಕ್ಕ ಮಾರ್ಗವಲ್ಲ. ನೀವು ಪ್ರತಿದಿನ ಕನಿಷ್ಟಪಕ್ಷ ಒಂದು ಕಪ್ ಕೆಂಪು ಅಕ್ಕಿಯನ್ನು ಸೇವಿಸಬೇಕು. ಕೆಂಪು ಅಕ್ಕಿಯಲ್ಲಿ ಪೌಷ್ಟಿಕಾಂಶವು ಅಧಿಕವಾಗಿದೆ. ಬಿಳಿ ಅಕ್ಕಿಯನ್ನು ಹೋಲಿಸಿದರೆ ಕೆಂಪು ಅಕ್ಕಿಯು ಕಡಿಮೆ ಗ್ಲೈಸೆಮಿಕ್ ಸೂಚ್ಯಾಂಕವನ್ನು ಹೊಂದಿದೆ.

ತರಕಾರಿಗಳು

ತರಕಾರಿಗಳು

ತೂಕ ಕಡಿಮೆಮಾಡಿಕೊಳ್ಳಲು ಅತ್ಯುತ್ತಮ ಭಾರತೀಯ ಆಹಾರವೆಂದರೆ ನಿಮ್ಮ ತಟ್ಟೆಯನ್ನು ತರಕಾರಿಗಳಿಂದ ತುಂಬಬೇಕು. ಆದರೆ ಆಲೂಗಡ್ಡೆ ಮತ್ತು ಬದನೆಕಾಯಿಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲೋರಿ ಇರುವುದರಿಂದ ದೂರವಿರಿ.

ಬೇಳೆಗಳು

ಬೇಳೆಗಳು

ಬೇಳೆಗಳಲ್ಲಿ ಕರಗುವ ನಾರಿನಾಂಶವಿರುವುದರಿಂದ ನಿಮ್ಮಲ್ಲಿರಬಹುದಾದ ಟ್ರಿಗ್ಲಿಸರೈಡ್ (ಒಂದು ರೀತಿಯ ಕೊಬ್ಬು) ಮತ್ತು ಕೊಲೆಸ್ಟ್ರಾಲ್ ಮಟ್ಟಗಳನ್ನು ಕಡಿಮೆ ಮಾಡುತ್ತವೆ. ಬೇಳೆಗಳಲ್ಲಿ ಪ್ರೋಟೀನ್ಸ್ ಅಧಿಕವಾಗಿರುವುದರಿಂದ ನಿಮ್ಮ ತೂಕ ಇಳಿಕೆಗೆ ಒಳ್ಳೆಯದು.

ಧಾನ್ಯಗಳು

ಧಾನ್ಯಗಳು

ಧಾನ್ಯಗಳಲ್ಲಿ ಅಧಿಕವಾಗಿ ನಾರಿನಾಂಶವಿದ್ದು ಕಡಿಮೆ ಕೊಬ್ಬು ಇರುತ್ತದೆ. ಆದ್ದರಿಂದ ನಿಮ್ಮ ಕೊಬ್ಬನ್ನು ತೊಡೆದುಹಾಕಲು ಬಯಸಿದರೆ ನಿಮ್ಮ ದೈನಂದಿನ ಆಹಾರದಲ್ಲಿ ಧಾನ್ಯಗಳನ್ನು ಸೇರಿಸುವುದನ್ನು ಅಭ್ಯಾಸಮಾಡಿಕೊಳ್ಳಿ. ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಬೇಕಾಗಿರುವ ಪ್ರೋಟೀನ್, ಖನಿಜಗಳು, ಜೀವಸತ್ವಗಳು (ವಿಟಮಿನ್), ಉತ್ಕರ್ಷಣ (ಆಂಟಿ ಆಕ್ಸಿಡೆಂಟ್) ಮತ್ತು ಸಸ್ಯ ರಸಾಯನಿಕಗಳು ಧಾನ್ಯದಲ್ಲಿ ಇರುತ್ತವೆ.

ತಂಪಾದ ಆಹಾರಗಳು

ತಂಪಾದ ಆಹಾರಗಳು

ಭಾರತೀಯ ಆಹಾರಗಳಲ್ಲಿ ತೂಕವಿಳಿಸಿಕೊಳ್ಳಲು ಸೌತೆಕಾಯಿಯು ಅತ್ಯುತ್ತಮ ಆಹಾರ. ಅದರಲ್ಲಿ ನೀರಿನಾಂಶ ಹೆಚ್ಚಾಗಿರುವುದರಿಂದ ನಿಮ್ಮ ಹೊಟ್ಟೆಯ ಪದರವನ್ನು ತಂಪಾಗಿಡುವುದಲ್ಲದೆ ಹೊಟ್ಟೆ ತುಂಬುತ್ತದೆ. ಇದು ತೂಕವಿಳಿಸಿಕೊಳ್ಳಲು ಒಂದು ಅತ್ಯುತ್ತಮ ತರಕಾರಿ.

ಮಸಾಲೆ ಆಹಾರಗಳು

ಮಸಾಲೆ ಆಹಾರಗಳು

ಮಸಾಲೆ ಪಧಾರ್ಥಗಳು ಭಾರತೀಯ ಆಹಾರಗಳಲ್ಲಿ ಅತ್ಯಗತ್ಯವಾಗಿರುತ್ತದೆ. ನೀವು ಬಲು ಬೇಗ ತೂಕವನ್ನು ಇಳಿಸಿಕೊಳ್ಳಲು ಬಯಸಿದರೆ ಚೆಕ್ಕೆ, ಲವಂಗ, ಜೀರಿಗೆ, ಶುಂಠಿ, ಸಾಸಿವೆ, ಅರಿಶಿನ ಮತ್ತು ಕರಿ ಮೆಣಸು ಇವುಗಳನ್ನು ತೂಕವಿಳಿಸುವ ವಿವಿಧ ಆಹಾರ ತಯಾರುಮಾಡುವಾಗ ಸೇರಿಸಬೇಕು.

ಮೀನು

ಮೀನು

ಭಾರತೀಯ ಆಹಾರದಲ್ಲಿ ತೂಕವಿಳಿಸಿಕೊಳ್ಳಲು ನಿಮ್ಮ ಊಟದಲ್ಲಿ ಮೀನು ಸೇರಿಸಬೇಕು. ಮೀನಿನಲ್ಲಿ ಅಧಿಕ ಪ್ರೊಟೀನ್ ಮತ್ತು ಒಮೇಗಾ -3 ಫಾಟ್ಟಿ ಆಸಿಡ್ ಇರುವುದರಿಂದ ನಿಮ್ಮ ತೂಕವನ್ನು ಕಡಿಮೆಮಾಡಿಕೊಳ್ಳಲು ಸಹಾಯಮಾಡುತ್ತದೆ.

ಬೀಜವಿರುವ ಕಾಯಿ (ನಟ್ಸ್) ಮತ್ತು ಬೀಜಗಳು

ಬೀಜವಿರುವ ಕಾಯಿ (ನಟ್ಸ್) ಮತ್ತು ಬೀಜಗಳು

ಆರೋಗ್ಯಕರ ಆಹಾರಗಳಲ್ಲಿ ತೂಕ ಕಡಿಮೆಮಾಡಲು ಅತ್ಯುತ್ತಮವಾದದ್ದು ಒಂದು ವಿಧವಾದ ನಟ್ಸ್ ಮತ್ತು ಬೀಜಗಳು. ಕೊಬ್ಬನ್ನು ಇಳಿಸಲು ಒಂದು ಹಿಡಿ ಪೀನಟ್ಸ್ ಮತ್ತು ಬಾದಾಮಿಯನ್ನು ಸೇವಿಸಿ. ಬೀಜಗಳಲ್ಲಿ ಕುಂಬಳಕಾಯಿ ಬೀಜ ಮತ್ತು ಪ್ಲಾಕ್ಸ್ ಬೀಜ ಇವುಗಳು ಕೆಟ್ಟ ಕೊಲೆಸ್ಟ್ರಾಲ್ ಇಳಿಸಿ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತವೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯು ನಮ್ಮಲ್ಲಿರುವ ಕೊಲೆಸ್ಟರಾಲನ್ನು ಕಡಿಮೆಮಾಡುವುದಕ್ಕೆ ಸಹಾಯಮಾಡುತ್ತದೆ. ಅದು ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ನಿರ್ವಹಿಸಲು ಸಹಾಯಮಾಡುತ್ತದೆ. ನೀವು ಬೇಗ ತೂಕವನ್ನು ಕಡಿಮೆಮಾಡಲಿ ಇಚ್ಚಿಸಿದರೆ ಬೆಳ್ಳುಳ್ಳಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿರಿ.

ಓಟ್ಸ್

ಓಟ್ಸ್

ಅನೇಕ ಜನರು ಓಟ್ಸ್ ಅಮೇರಿಕನ್ ಆಹಾರವೆಂದು ಭಾವಿಸಿದ್ದರೂ ವಾಸ್ತವವಾಗಿ ಅದು ಭಾರತೀಯ ಆಹಾರ. ಈ ಆರೋಗ್ಯಕರ ಆಹಾರದಲ್ಲಿ ನಾರಿನಾಂಶ ಎಷ್ಟು ಸಮೃದ್ಧವಾಗಿದೆಯೆಂದರೆ ನಿಮ್ಮ ಹೊಟ್ಟೆ ಬೇಗ ತುಂಬಲು ಸಹಾಯಮಾಡುತ್ತದೆ. ಅದು ನಿಮಗೆ ಶಕ್ತಿಯನ್ನೂ ನೀಡಿ ನೀವು ಜಿಮ್ಮಿಗೆ ಹೋದಾಗ ಹೆಚ್ಚು ಕ್ಯಾಲೊರಿಯನ್ನು ಬರ್ನ್ ಮಾಡಲು ಸಹಾಯಮಾಡುತ್ತದೆ.

ರಾಗಿ ಮಾಲ್ಟ್

ರಾಗಿ ಮಾಲ್ಟ್

ರಾಗಿ ಮಲ್ಟ್ ದಕ್ಷಿಣ ಭಾರತೀಯರು ಬಹಳಷ್ಟು ಸೇವಿಸುವ ಶಕ್ತಿ ಕೊಡುವ ಒಂದು ಸಾಮಾನ್ಯ ಪಾನೀಯ. ನೀವು ನಿಮ್ಮ ತೂಕವನ್ನು ಬೇಗ ಕಡಿಮೆಮಾಡಿಕೊಳ್ಳಲು ಪ್ರತಿದಿನ ಬೆಳಗ್ಗೆ ಒಂದು ಗ್ಲಾಸ್ ರಾಗಿ ಮಾಲ್ಟನ್ನು ಮುಂದಿನ 2 ವಾರ ಸೇವಿಸಿ.

ಜ್ಯೂಸ್

ಜ್ಯೂಸ್

ಸುಮಾರು 3 ವಾರಗಳು ಸ್ವಾಭಾವಿಕವಾಗಿ ಮತ್ತು ಆರೋಗ್ಯಕರವಾಗಿ ತೂಕ ಕಡಿಮೆಮಾಡಿಕೊಳ್ಳಲು ಜ್ಯೂಸ್ ಆಹಾರದ ಸೇವನೆಯಲ್ಲಿರಿ. ತೂಕ ಕಡಿಮೆ ಮಾಡಿಕೊಳ್ಳಲು ಅತ್ಯುತ್ತಮ ಭಾರತೀಯ ಜ್ಯೂಸ್ ಅಂದರೆ ಪಾಲಕ್, ಉಪ್ಪು ಮತ್ತು ಒಂದು ಕಪ್ ಮೊಸರು ಸೇರಿರುವ ಹಸಿರು ಬಣ್ಣದ ಜ್ಯೂಸ್ ಸೇವಿಸುವುದು.

English summary

The 'Indian' Diet To Lose Weight

Most Indians want to follow a diet to lose weight. From crazy fad diets to weight loss supplements, there are a lot of things available in the market to help you drop the pounds. But, the best thing that can cut the calories quickly is following a strict diet.
X
Desktop Bottom Promotion