For Quick Alerts
ALLOW NOTIFICATIONS  
For Daily Alerts

ದೇಹದ ಕೊಬ್ಬು ಕರಗಿಸಲು ಅತ್ಯುತ್ತಮ ವ್ಯಾಯಾಮಗಳು

By Viswanath S
|

ತೂಕ ಕಡಿಮೆ ಮಾಡುವ ಸಲಹೆಗಳು, ತೂಕ ಇಳಿಸುವ ಆಹಾರಗಳು ಮತ್ತು ತೂಕ ಕಡಿಮೆ ಮಾಡುವ ಪದ್ಧತಿಗಳು ಇವೆಲ್ಲವೂ ಈಗ ಅಂತರ್ಜಾಲ (ಇಂಟರ್ನೆಟ್) ದಲ್ಲಿ ಬೇಕಾದಷ್ಟು ಕಾಣುತ್ತವೆ. ಅನೇಕ ಜನರು ಈ ತೂಕ ಇಳಿಸುವ ಕಠಿಣ ಪ್ರಶ್ನೆಗೆ ಆಶ್ಚರ್ಯಕರವಲ್ಲದ ಅತ್ಯುತ್ತಮ ಸಲಹೆಗಳನ್ನು ಆಯ್ಕೆಮಾಡಿದರೂ, ಸರಿಯಾದ ವಿಧಾನವನ್ನು ಅನುಸರಿಸಿದರೆ ಮಾತ್ರ ಸರಿಯಾದ ಫಲಿತಾಂಶಗಳು ದೊರಕುತ್ತವೆ. ಆದಾಗ್ಯೂ ನಿರ್ಣಾಯಕ ಅಂಶಗಳ ಮೇಲೆ ಗಮನವಿಲ್ಲದಿದ್ದಲ್ಲಿ ಫಲಿತಾಂಶಗಳನ್ನು ಹೆಚ್ಚಾಗಿ ಕಾಣದೇ ಇರಬಹುದು.

ಈ ಸಮಗ್ರ ಶಕ್ತಿಯುತವಾದ ತೂಕವಿಳಿಸುವ ವ್ಯಾಯಾಮಗಳ ಫಲಿತಾಂಶಗಳು ಮೊದಲವಾರದಲ್ಲಿಯೇ ತಕ್ಷಣ ಕಾಣಿಸಿಕೊಳ್ಳುತ್ತವೆ. ಹೀಗೆ ನೀವು ಮಾಡಬೇಕೆಂದಿದ್ದರೆ ಅನೇಕ ಕೊಬ್ಬು ಕರಗಿಸುವ ವ್ಯಾಯಾಮಗಳಿವೆ. ಆದರೆ ಅವುಗಳಲ್ಲಿ ಇಲ್ಲಿ ಕೊಟ್ಟಿರುವ ಆಯ್ದ ವ್ಯಾಯಾಮಗಳು ಅತ್ಯಂತ ಮುಖ್ಯವಾದುವು:

ಹೊಟ್ಟೆ ಬೊಜ್ಜು ಕರಗಿಸಲು ಇರುವ ಅತ್ಯದ್ಭುತ ಯೋಗಾಸನಗಳು

ಈ ಕೊಬ್ಬು ಪರಿಣಾಮಕಾರಿಯಾಗಿ ಕರಗಿಸುವ ವ್ಯಾಯಾಮಗಳನ್ನು ಅವಲೋಕಿಸೋಣ. ಕೆಲವೊಂದು ಆಕರ್ಷಕವಾದ ಕೊಬ್ಬು ಕರಗಿಸುವ ವ್ಯಾಯಾಮಗಳನ್ನು ನೀವು ಮನೆಯಲ್ಲೇ ಅಭ್ಯಾಸಮಾಡಬಹುದು. ಹೀಗಾಗಿ ಕೊಬ್ಬು ಕರಗಿಸುವ ವ್ಯಾಯಾಮಗಳೆಂದು ಹೇಳುವುದರ ಜೊತೆಗೆ ಇವುಗಳನ್ನು "ಮನೆಯಲ್ಲಿ ಮಾಡಬಹುದಾದ ಕೊಬ್ಬು ಇಳಿಸುವ ವ್ಯಾಯಾಮಗಳು" ಎಂದು ವರ್ಗೀಕರಿಸಬಹುದು. ಪುರುಷರಿಗೆ ಮತ್ತು ಮಹಿಳೆಯರಿಗೆ ಕೊಬ್ಬು ಕರಗಿಸುವ ವ್ಯಾಯಾಮಗಳು ಯಾವುದೆಂದು ನೋಡೋಣ ಬನ್ನಿ.

ಮೊಣಕಾಲನ್ನು ಮೇಲೆತ್ತಿ ಒಂದೇ ಸ್ಥಳದಲ್ಲಿ ಓಡುವ ವ್ಯಾಯಾಮ

ಮೊಣಕಾಲನ್ನು ಮೇಲೆತ್ತಿ ಒಂದೇ ಸ್ಥಳದಲ್ಲಿ ಓಡುವ ವ್ಯಾಯಾಮ

ಮನೆಯಲ್ಲೇ ಮೊಣಕಾಲನ್ನು ಮೇಲೆತ್ತಿ ಒಂದೇ ಸ್ಥಳದಲ್ಲಿ ಓಡುವುದು ನಿಜಕ್ಕೂ ಒಂದು ವಿಸ್ಮಯಕಾರಿ ಕೊಬ್ಬು ಕರಗಿಸುವ ಪರಿಣಾಮಕೊಡುವ ವ್ಯಾಯಾಮ. ಈ ವ್ಯಾಯಾಮವನ್ನು ಮೂರರಿಂದ ನಾಲ್ಕು ನಿಮಿಷಗಳ ಕಾಲ ಮಾಡುವುದು ಮತ್ತು ಮತ್ತೆ ಎರಡು ಅಥವಾ ಮೂರು ಬಾರಿ ಮಾಡಿದರೆ ನಿಮ್ಮ ತೂಕವಿಳಿಸುವ ಕಾರ್ಯದಲ್ಲಿ ಪರಿಣಾಮಕಾರಿ ಪ್ರಯೋಜನಗಳನ್ನು ಹೊಂದಬಹುದು.

ಕಿಬ್ಬೊಟ್ಟೆಯ ತಾಲೀಮು (ಅಬ್ಸ್ ವ್ಯಾಯಾಮ)

ಕಿಬ್ಬೊಟ್ಟೆಯ ತಾಲೀಮು (ಅಬ್ಸ್ ವ್ಯಾಯಾಮ)

ಒಂದೇ ಸ್ಥಳದಲ್ಲಿ ಓಡಿಮಾಡುವ ವ್ಯಾಯಾಮವಾದ ತಕ್ಷಣ ಕಿಬ್ಬೊಟ್ಟೆಯ ತಾಲೀಮು ವ್ಯಾಯಾಮ ಮಾಡಿದರೆ ಪ್ರಚಂಡ ಫಲಿತಾಂಶಗಳನ್ನು ಪಡೆಯಬಹುದು. ಒಂದೇ ಸ್ಥಳದಲ್ಲಿ ಸುಮಾರು ಮೂರು ನಿಮಿಷ ಓಡಿದ ಮೇಲೆ ಸುಮಾರು 35 ರಿಂದ 40 ಬಾರಿ ಕಿಬ್ಬೊಟ್ಟೆಯ ತಾಲೀಮು ವ್ಯಾಯಾಮ ಮಾಡುವುದನ್ನು ಖಾತ್ರಿಮಾಡಿಕೊಳ್ಳಿ.

ತೋಳುಗಳನ್ನು ಬಳಸಿ ದೇಹವನ್ನು ತಗ್ಗಿಸುವ ವ್ಯಾಯಾಮ (ಪುಶ್-ಅಪ್ಸ್)

ತೋಳುಗಳನ್ನು ಬಳಸಿ ದೇಹವನ್ನು ತಗ್ಗಿಸುವ ವ್ಯಾಯಾಮ (ಪುಶ್-ಅಪ್ಸ್)

ನೀವು ವಿಶೇಷವಾಗಿ ಮೇಲಿನ ಹೊಟ್ಟೆ ಮತ್ತು ಎದೆಯ ಪ್ರದೇಶಗಳಲ್ಲಿ ತೂಕವಿಳಿಸಬೇಕೆಂದಿದ್ದರೆ ತೋಳುಗಳನ್ನು ಬಳಸಿ ದೇಹವನ್ನು ತಗ್ಗಿಸುವುದು ಮತ್ತೆ ಏಳುವುದು (ಪುಶ್-ಅಪ್ಸ್) ವ್ಯಾಯಾಮ ಮಾಡಿದಲ್ಲಿ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ. ಈ ವ್ಯಾಯಾಮದಲ್ಲಿ ದೇಹದ ನಿರ್ದಿಷ್ಟ ಭಾಗಗಳಿಗೆ ಪರಿಣಾಮಬೀರಲು ಹಲವಾರು ರೀತಿಗಳಿವೆ.

ಬಸ್ಕಿ ಹೊಡೆಯುವುದು

ಬಸ್ಕಿ ಹೊಡೆಯುವುದು

ಒಂದೇ ಸ್ಥಳದಲ್ಲಿ ಓಡಿ ಮಾಡುವ ವ್ಯಾಯಾಮದಂತೆ ತೂಕವಿಳಿಸಲು ಮತ್ತೊಂದು ಜನಪ್ರಿಯ ವ್ಯಾಯಾಮವೆಂದರೆ ಬಸ್ಕಿ ಹೊಡೆಯುವುದು. ಬಸ್ಕಿ ಹೊಡೆಯುವುದರಿಂದ ಕೊಬ್ಬು ಬೇಗನೇ ಕರಗಿಹೋಗುವುದಲ್ಲದೆ ಹೃದಯಭಾಗದ ಸ್ನಾಯುಗಳನ್ನು ಬಲಪಡಿಸಲೂಬಹುದು. ಬಸ್ಕಿ ಹೊಡೆಯುವುದನ್ನು ಕೆಲವು ಪುನರಾವರ್ತನೆಯ ಸೆಟ್ ಮಾಡಿಕೊಂಡರೆ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.

ಓಟ

ಓಟ

ಓಟಕ್ಕೆ ಇನ್ನೊಂದು ಹೆಸರು ಹಿಟ್ಸ್. ಆದರೆ ಓಟ ಜಾಗಿಂಗ್ (jogging) ಮಾಡುವುದಕ್ಕಿಂತಾ ಕೊಬ್ಬು ಕರಗುವುದಕ್ಕೆ ಸ್ಪ್ರಿಂಟ್ಸ್ ಇನ್ನೂ ಉತ್ತಮ. ಸ್ಪ್ರಿಂಟ್ಸ್ ಅಂದರೆ ಸ್ವಲ್ಪದೂರ ಪೂರ್ಣವೇಗದಲ್ಲಿ ಓಡುವುದು. ನೀವು ಕೊಬ್ಬನ್ನು ತ್ವರಿತವಾಗಿ ಕಡಿಮೆಮಾಡಬೇಕೆಂದಿದ್ದರೆ 60 ರಿಂದ 70 ಮೀಟರ್ ಹತ್ತು ಬಾರಿ ಓಡುವುದನ್ನು ಅಭ್ಯಾಸಮಾಡಿ.

ಸ್ಕಿಪ್ಪಿಂಗ್ (ಎರಡು ಕೈಯಲ್ಲಿ ಹಗ್ಗ ಹಿಡಿದು ಜಿಗ್ಗುವುದು)

ಸ್ಕಿಪ್ಪಿಂಗ್ (ಎರಡು ಕೈಯಲ್ಲಿ ಹಗ್ಗ ಹಿಡಿದು ಜಿಗ್ಗುವುದು)

ಸ್ಕಿಪ್ಪಿಂಗ್ ಮಾಡುವುದು ಅತ್ಯಂತ ಪ್ರಭಾವಶಾಲಿ ವ್ಯಾಯಾಮವಾಗಿದ್ದು ವಿಶೇಷವಾಗಿ ಎದೆಯಭಾಗ ಮತ್ತು ಭುಜ ಹಾಗೂ ಬೆನ್ನಿನಲ್ಲಿರುವ ಮಾಂಸಖಂಡಗಳಿಗೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಹೊಟ್ಟೆಯ ಕೊಬ್ಬು ಸಹ ಸ್ಕಿಪ್ಪಿಂಗ್ ಮಾಡುವುದರಿಂದ ಕಡಿಮೆಯಾಗುತ್ತದೆ.

ಈಜುವುದು

ಈಜುವುದು

ವೈದ್ಯಕೀಯ ತಗ್ನರು ಮಾನ್ಯತೆ ಕೊಡುವ ಈಜುವುದು ಒಂದು ಅತ್ಯಂತ ಪ್ರಭಾವಶಾಲಿ ವ್ಯಾಯಾಮ. ಆದರೆ ನೀವು ಮಾಡಬೇಕೆಂದಿದ್ದಲ್ಲಿ ಒಂದು ಮುಖ್ಯ ಸಲಹೆಯನ್ನು ಗಮನದಲ್ಲಿಡಿ. ಈಜಿದನಂತರ ತಕ್ಷಣ ಅತಿಯಾಗಿ ಆಹಾರ ಸೇವನೆ ಮಾಡಬಾರದು. ಹಾಗೆ ಸೇವಿಸಿದಲ್ಲಿ ಈಜು ವ್ಯಾಯಾಮದ ಉದ್ದೇಶ ಭಗ್ನವಾಗುತ್ತದೆ.

ರೋಯಿಂಗ್ (ದೋಣಿಯಲ್ಲಿ ಕುಳಿತು ಅಂಬಿಗನಂತೆ ಹುಟ್ಟುಹಾಕುವುದು)

ರೋಯಿಂಗ್ (ದೋಣಿಯಲ್ಲಿ ಕುಳಿತು ಅಂಬಿಗನಂತೆ ಹುಟ್ಟುಹಾಕುವುದು)

ರೋಯಿಂಗ್ ವ್ಯಾಯಾಮದಿಂದ ಎದೆ, ಬೆನ್ನು, ತೋಳುಗಳು ಮತ್ತು ಹೊಟ್ಟೆಯ ಸ್ನಾಯುಗಳನ್ನು ಬಲಪಡಿಸುತ್ತದೆ. ಇದೊಂದು ಸ್ವಾಭಾವಿಕ ಕೊಬ್ಬು ಕರಗಿಸುವ ವ್ಯಾಯಾಮ ಮತ್ತು ಶರೀರದಲ್ಲಿರುವ ಹೆಚ್ಚಿನ ಕ್ಯಾಲೊರಿಯನ್ನು ಕರಗಿಸುತ್ತದೆ.

ಕ್ರಾಸ್ ಟ್ರೈನರ್ (ಅಡ್ಡ ತರಬೇತುಕೊಡುವ ಸಾಧನ)

ಕ್ರಾಸ್ ಟ್ರೈನರ್ (ಅಡ್ಡ ತರಬೇತುಕೊಡುವ ಸಾಧನ)

ಅಡ್ಡತರಬೇತು ಕೊಡುವ ಸಾಧನದಲ್ಲಿ ಮಾಡುವ ವ್ಯಾಯಾಮ ಒಂದು ರೀತಿಯ ತ್ವರಿತ ಫಲಿತಾಂಶಕೊಡುವ ಮಾರ್ಗ. ಇದರಲ್ಲಿ ನಿಮಗೆ ತ್ವರಿತವಾಗಿ ಫಲಿತಾಂಶ ಬೇಕಾಗಿದ್ದಲ್ಲಿ ಕನಿಷ್ಟ ಪಕ್ಷ 20 ನಿಮಿಷಗಳ ಕಾಲ ವ್ಯಾಯಾಮಮಾಡಿ.

ಸ್ಟ್ರೆಚಿಂಗ್ (ಪೂರ್ಣದೇಹವನ್ನು ಎಳೆದು ಮಾಡುವ ವ್ಯಾಯಾಮ)

ಸ್ಟ್ರೆಚಿಂಗ್ (ಪೂರ್ಣದೇಹವನ್ನು ಎಳೆದು ಮಾಡುವ ವ್ಯಾಯಾಮ)

ಸ್ಟ್ರೆಚಿಂಗ್ ಮಾಡುವುದು ಒಂದು ರೀತಿಯ ಅತ್ಯುತ್ತಮ ಕೊಬ್ಬು ಕರಗಿಸುವ ವ್ಯಾಯಾಮ. ಸ್ಟ್ರೆಚಿಂಗ್ ವಿಶೇಷವಾಗಿ ಅಡ್ಡ ಬೆಳೆದಿರುವ ಕೊಬ್ಬು ಮತ್ತು ಹೊಟ್ಟೆಯ ಕೊಬ್ಬು ಕರಗಿಸುವ ಅದ್ಭುತ ವ್ಯಾಯಾಮ.

ಆಹಾರ ಕ್ರಮ

ಆಹಾರ ಕ್ರಮ

ಸುಲಭವಾಗಿ ಕೊಬ್ಬು ಕರಗಿಸಲು ಕೆಲವು ಆಹಾರ ಕ್ರಮವೂ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಸರಿಯಾದ ಆಹಾರ ಕ್ರಮ ನಿಮ್ಮ ಸಮಸ್ಯೆಯನ್ನು ಎಂಬತ್ತು ಶೇಕಡಾ ಕಡಿಮೆ ಮಾಡುತ್ತದೆ. ಸರಿಯಾದ ಪೋಷಕಾಂಶಗಳಿರುವ ಹಾಗೂ ನಿಮ್ಮ ದೇಹಕ್ಕೆ ಅಗತ್ಯ ಇರುವ ಆಹಾರವನ್ನು ಮಿತ ಪ್ರಮಾಣದಲ್ಲಿ ಸೇವಿಸಿದರೆ ಸಾಕು. ಮನೆಯಲ್ಲೇ ತಯಾರಿಸಿದ ಆಹಾರಕ್ಕೆ ಆದ್ಯತೆ ಕೊಡಿ.

ಹೆಚ್ಚು ನೀರು ಕುಡಿಯಿರಿ

ಹೆಚ್ಚು ನೀರು ಕುಡಿಯಿರಿ

ಬಹಳಷ್ಟು ಮಂದಿಗೆ ಹಸಿವು, ಬಾಯಾರಿಕೆ ಮತ್ತು ದಣಿವಿನ ನಡುವೆ ಇರುವ ವ್ಯತ್ಯಾಸದ ಗೊಂದಲದಿಂದಾಗಿ ಏನಾದರೂ ತಿಂಡಿ ತಿನ್ನುತ್ತಾರೆ. ಆದರೆ ಹಾಗಾಗಬಾರದು. ನಿಮ್ಮ ಜೊತೆ ಯಾವಾಗಲೂ ನೀರಿನ ಬಾಟಲಿ ಇದ್ದರೆ ಒಳಿತು. ಸಾಮಾನ್ಯ ಮನುಷ್ಯನೊಬ್ಬನಿಗೆ ದಿನಕ್ಕೆ ಆರರಿಂದ ಎಂಟು ಗ್ಲಾಸ್ ಗಳಷ್ಟು ನೀರು ಬೇಕು. ಇದು ನಮ್ಮ ದೇಹ ತೂಕ ಮತ್ತು ಜೀವನ ಶೈಲಿಯ ಮೇಲೆ ಅವಲಂಬಿತವಾಗಿದೆ. ಹೀಗಾಗಿ ನಿಮ್ಮ ದೇಹಕ್ಕೆ ತಕ್ಕಂತೆ ನೀರು ಕುಡಿಯಿರಿ.

ಸಣ್ಣ ಅವಧಿಯ ತೀವ್ರ ವ್ಯಾಯಾಮಗಳು

ಸಣ್ಣ ಅವಧಿಯ ತೀವ್ರ ವ್ಯಾಯಾಮಗಳು

ಇತ್ತೀಚಿನ ಅಧ್ಯಯನದ ಪ್ರಕಾರ ಹೆಚ್ಚು ಹೊತ್ತು ವ್ಯಾಯಾಮ ಮಾಡುವಾಗ ನಡುವಲ್ಲಿ ತೀವ್ರವಾದ ವ್ಯಾಯಾಮಗಳು ಬಹಳ ಸಹಾಕಾರಿ. ಅಂದರೆ ನೀವು ವಾಕಿಂಗ್ ಟ್ರಾಕ್ ನಲ್ಲಿ ನಡೆಯುತ್ತೀರಿ ಎಂದಾದರೆ ಸಾಮಾನ್ಯ ವೇಗದಲ್ಲೇ ನಡೆಯುತ್ತಿರಿ ಆದರೆ ನಡುವಲ್ಲಿ ಆಗೊಮ್ಮೆ ಈಗೊಮ್ಮೆ ವೇಗವನ್ನು ಹೆಚ್ಚಿಸಿಕೊಳ್ಳಿ ಹಾಗೂ ನಡೆಯಿರಿ ಇದರಿಂದಾಗಿ ಬಹಳ ಪರಿಣಾಮ ಆಗುತ್ತದೆ.

 ಸಕ್ಕರೆ ಕಡಿತ

ಸಕ್ಕರೆ ಕಡಿತ

ಸಕ್ಕರೆಯನ್ನು ನೀವು ಆದಷ್ಟು ಕಡಿಮೆ ಸೇವಿಸಬೇಕು. ಸಕ್ಕರೆಯ ಬದಲಿಗೆ ಜೇನುತುಪ್ಪ, ಲಿಕೋರೈಸ್ ನಂತಹ ಕೆಲವು ಬದಲಿ ವ್ಯವಸ್ಥೆಗಳನ್ನು ಮಾಡಿಕೊಳ್ಳಿ.

ಸೋಡಿಯಂ ಸೇವನೆ ಕಡಿಮೆ ಮಾಡಿ

ಸೋಡಿಯಂ ಸೇವನೆ ಕಡಿಮೆ ಮಾಡಿ

ಉಪ್ಪಿಗಿಂತ ರುಚಿ ಬೇರೆ ಇಲ್ಲ ಎನ್ನುವುದು ಒಪ್ಪುವ ಮಾತೇ ಆಗಿದೆ. ಸೋಡಿಯಂ ಉಪ್ಪಿನ ಬದಲಾಗಿ ಪೊಟ್ಯಾಷಿಯಂ, ಲಿಂಬೆ ಹಣ್ಣು, ಹಾಗೂ ಕಡಲ ಉಪ್ಪಿನ ಆಯ್ಕೆ ಇದೆ. ಇವನ್ನು ಪರಿಗಣಿಸಿ. ಇದರ ಜೊತೆಗೆ ಕಾಣುಮೆಣಸಿನ ಹುಡಿಯ ಬಳಕೆ ಮುಂತಾದ ತಂತ್ರಗಳನ್ನು ಪಾಲಿಸಿ.

ವಿಟಮಿನ್ ಸಿ

ವಿಟಮಿನ್ ಸಿ

ಕಾರ್ನಿಟೈನ್ ನ ಕರಗುವಿಕೆಗೆ ವಿಟಮಿನ್ ಸಿ ಬಹಳ ಮುಖ್ಯ. ಇದು ನಮ್ಮ ದೇಹದಲ್ಲಿ ಶಕ್ತಿಯಾಗಿ ಮಾರ್ಪಡುತ್ತದೆ. ಇದು ಕಾರಿಸ್ಟ್ರಾಲ್ ಅನ್ನು ನಿಯಂತ್ರಿಸಲೂ ಸಹಕಾರಿ. ಕಾರಿಸ್ಟ್ರಾಲ್ ಮಟ್ಟ ಕೊಬ್ಬು ಹೆಚ್ಚಾಗಲು ಕಾರಣವಾಗುತ್ತದೆ.

ಕೊಬ್ಬನ್ನು ಕರಗಿಸುವ ಆಹಾರಗಳು

ಕೊಬ್ಬನ್ನು ಕರಗಿಸುವ ಆಹಾರಗಳು

ಬೆಳ್ಳುಳ್ಳಿ, ಈರುಳ್ಳಿ, ಶುಂಠಿ, ಮೆಣಸಿನ ಪುಡಿ, ಎಲೆಕೋಸು, ಟೊಮೆಟೊ ಮತ್ತು ದಾಲ್ಚಿನಿ ಮತ್ತು ಸಾಸಿವೆಯಂತಹ ಸಂಬಾರ ಪದಾರ್ಥಗಳು ಕೊಬ್ಬನ್ನು ಕರಗಿಸಲು ಬಹಳ ಉಪಯುಕ್ತ. ಇವುಗಳಲ್ಲಿ ನಿಮ್ಮ ಇಷ್ಟದ ವಸ್ತುಗಳ ನಿಯಮಿತ ಬಳಕೆ ಬಹಳ ಪ್ರಭಾವಶಾಲಿ. ಬಿಸಿ ನೀರಿನ ಜೊತೆಗೆ ಲಿಂಬೆ ಮತ್ತು ಜೇನು ತುಪ್ಪವನ್ನು ಹಾಕಿ ಸೇವಿಸುವುದು ಕೂಡ ಬಹಳ ಪ್ರಭಾವಶಾಲಿ ಅಂಶವಾಗಿದೆ.

ಆರೋಗ್ಯಕರ ಕೊಬ್ಬನ್ನು ಸೇವಿಸಿ

ಆರೋಗ್ಯಕರ ಕೊಬ್ಬನ್ನು ಸೇವಿಸಿ

ಕೆಟ್ಟ ಕೊಲೆಸ್ಟ್ರರಾಲ್ ಅನ್ನು ಕಡಿಮೆ ಮಾಡುವ ಕೆಲಸದಲ್ಲಿ ಒಳ್ಳೆಯ ಕೊಲೆಸ್ಟರಾಲ್ ಬಹಳ ಉಪಯೋಗಕಾರಿ. ಅವಕಾಡೊ, ಆಲೀವ್, ತೆಂಗಿನ ಕಾಯಿ ಮತ್ತು ಬೀಜಗಳು ಒಳ್ಳೆಯ ಕೊಲೆಸ್ಟರಾಲ್ ನ ಕೆಲವು ಮೂಲಗಳು

ಬೆಳಗ್ಗಿನ ತಿಂಡಿಯನ್ನು ಬಿಡಬೇಡಿ

ಬೆಳಗ್ಗಿನ ತಿಂಡಿಯನ್ನು ಬಿಡಬೇಡಿ

ಹಲವರು ಅಂದುಕೊಂಡಂತೆ ಬೆಳಗ್ಗಿನ ತಿಂಡಿಯನ್ನು ಬಿಟ್ಟರೆ ತೂಕ ಕಡಿಮೆ ಮಾಡಲು ಸಹಾಯ ಆಗುತ್ತದೆ ಆದರೆ ಇದು ವಿರುದ್ಧವಾಗಿ ಪರಿಣಾಮ ಬೀರುತ್ತದೆ. ಇದು ನಿಮ್ಮಲ್ಲಿ ಹಸಿವನ್ನು ಹೆಚ್ಚಿಸಿ ಹೆಚ್ಚಿನ ಆಹಾರ ಸೇವನೆಯಾಗುವಂತೆ ಮಾಡುತ್ತದೆ. ಇತ್ತೀಚಿನ ಅಧ್ಯಯನಗಳು ಕಡಿಮೆ ಮತ್ತು ಸಣ್ಣ ಅವಧಿಗಳಲ್ಲಿ ಆಹಾರ ಸೇವನೆ ಮಾಡುವುದು ನಮ್ಮ ಆರೋಗ್ಯ ಮತ್ತು ಜೀರ್ಣಕ್ರಿಯೆಗೆ ಒಳ್ಳೆಯದು ಎಂದು ಸಾಧಿಸಿ ತೋರಿಸಿವೆ. ಒಣ ಹಣ್ಣುಗಳು, ಹಸಿ ತರಕಾರಿಗಳನ್ನೂ ಸೇವಿಸಬಹುದು.

ನಿದ್ದೆ

ನಿದ್ದೆ

ನಿದ್ದೆಯ ಬಗ್ಗೆ ಇಲ್ಲಿ ಯಾಕೆ ಉಲ್ಲೇಖ ಬಂದಿತು ಎಂದು ಆಶ್ಚರ್ಯ ಪಡಬೇಡಿ. ಸರಿಯಾದ ನಿದ್ದೆಯೂ ನಮ್ಮ ಆರೋಗ್ಯಕ್ಕೆ ಹಾಗೂ ಕೊಬ್ಬನ್ನು ಇಳಿಸಲು ಅಗತ್ಯ. ಆರರಿಂದ ಎಂಟು ಗಂಟೆಗಳ ರಾತ್ರಿಯ ನಿದ್ದೆ ಅಗತ್ಯ. ಅತೀ ಹೆಚ್ಚು ನಿದ್ದೆ ಮತ್ತು ಅತೀ ಕಡಿಮೆ ನಿದ್ದೆ ಎರಡೂ ನಮ್ಮ ದೇಹ ತೂಕವನ್ನು ಹೆಚ್ಚಿಸುತ್ತವೆ. ಈ ಎಲ್ಲಾ ಅಂಶಗಳನ್ನು ಪಾಲಿಸಿದಾಗ ಕೇವಲ ನಿಮ್ಮ ಹೊಟ್ಟೆಯ ಕೊಬ್ಬಷ್ಟೇ ಅಲ್ಲದೇ ದೇಹದ ಒಟ್ಟಾರೆ ಕೊಬ್ಬು ಕರಗುತ್ತದೆ.

English summary

The Best Fat Burning Exercises

Weight loss tips, foods for weight loss and exercise regimes for weight loss are all over the INTERNET. These powerful exercises for weight loss will give immediate results with tangible results manifesting within the first week itself. However, among them are these select exercises that stand out.
X
Desktop Bottom Promotion